ಅಭಿಪ್ರಾಯ / ಸಲಹೆಗಳು

Crime report in Mangalore East Traffic PS

ಪಿರ್ಯಾದಿದಾರರಾದ ಲತೀಶ್ ಎಂಬುವರು ದಿನಾಂಕ: 23/06/2023 ರಂದು ತಮ್ಮ ಸ್ಕೂಟರ್ ಚಲಾಯಿಸಿಕೊಂಡು ಪದವು ಶರ್ಬತ್ ಕಟ್ಟೆಯ ಮೂಲಕ ಯುಯ್ಯಾಡಿ ಕಡೆಗೆ ಹೋಗುತ್ತಿರುವಾಗ ಬೆಳಿಗ್ಗೆ ಸುಮಾರು 8-40 ಗಂಟೆಗೆ ಶರ್ಬತ್ ಕಟ್ಟೆಯ ಬಳಿ ಇರುವ ಪ್ರಣವ್ ಸೌಹಾರ್ಧ ಕೋ ಆಪರೇಟಿವ್ ಸೊಸೈಟಿ ಎದುರು ತಲುಪುತ್ತಿದ್ದಂತೆ ತಮ್ಮ ಸ್ಕೂಟರ್ ಮುಂಭಾಗದಲ್ಲಿ ಯ್ಯಯ್ಯಾಡಿ ಕಡೆಗೆ ಹೋಗುತ್ತಿದ್ದ ಸ್ಕೂಟರ್ ನೊಂದಣಿ ಸಂಖ್ಯೆ: KA-19-HM-3038 ನೇಯದನ್ನು ಅದರ ಸವಾರ ನರಸಿಂಹ ಗಟ್ಟಿ, (67 ವರ್ಷ) ಎಂಬುವರು ಡಿವೈಡರ್ ಕಡೆಯಿಂದ ಓಡಿಕೊಂಡು ರಸ್ತೆ ದಾಟುತ್ತಿದ್ದ ನಾಯಿಯೊಂದನ್ನು ಗಮನಿಸದೇ ಅಜಾಗರೂಕತೆಯಿಂದ ಚಲಾಯಿಸಿ ನಾಯಿಗೆ ಢಿಕ್ಕಿ ಪಡಿಸಿದ ಪರಿಣಾಮ ನರಸಿಂಹ ಗಟ್ಟಿಯವರು ಸ್ಕೂಟರಿನೊಂದಿಗೆ ರಸ್ತೆಗೆ ಬಿದ್ದು ತಲೆಗೆ ಗಾಯವಾಗಿ ಚಿಕಿತ್ಸೆಗಾಗಿ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ನರಸಿಂಹ ಗಟ್ಟಿಯವರು ಆಸ್ಪತ್ರೆಗೆ ಕರೆತರುವಾಗ ದಾರಿಮದ್ಯದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಆದುದರಿಂದ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ, ಎಂಬಿತ್ಯಾದಿಯಾಗಿರುತ್ತದೆ.

    

Mangalore East Traffic PS                               

ಪಿರ್ಯಾದಿದಾರರಾದ ಅಬ್ದುಲ್ ಸಮದ್ ರವರು ದಿನಾಂಕ 23-06-2023 ರಂದು ಬೆಳಿಗ್ಗೆ ತನ್ನ ಬಾಬ್ತು KA-19-EU-9173  ನಂಬ್ರದ ಸ್ಕೂಟರಿನಲ್ಲಿ ಸವಾರನಾಗಿ ಕ್ಲಾಕ್ ಟವರ್ ಕಡೆಯಿಂದ ಬಾವುಟಗುಡ್ಡೆ ಕಡೆಗೆ  ಹಾದು ಹೋಗಿರುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 11.45 ಗಂಟೆಗೆ ಹಂಪನಕಟ್ಟೆ ಜಂಕ್ಷನ್ ತಲುಪುತ್ತಿದ್ದಂತೆ ಪಿರ್ಯಾದಿದಾರರ ಬಲ ಭಾಗದಿಂದ ಚಲಿಸುತ್ತಿದ್ದ KA-19-C-5002 ನೊಂದಣಿ ನಂಬ್ರದ ರೂಟ್ ನಂಬ್ರ 31 ನೇ ಖಾಸಗಿ ಸಿಟಿ ಬಸ್ಸನ್ನು ಅದರ ಚಾಲಕ ಜಿತೇಶ್ ಕುಮಾರ್ ಎಂಬಾತನು ಕೆ.ಎಸ್.ರಾವ್ ಕಡೆಗೆ ಹೋಗಲು ಯಾವುದೇ ಸೂಚನೆಯನ್ನು ನೀಡದೆ ಒಮ್ಮೆಲೆ ನಿರ್ಲಕ್ಷ್ಯತನದಿಂದ ಎಡಕ್ಕೆ ತಿರುಗಿಸಿ ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಸ್ಕೂಟರಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ರಭಸಕ್ಕೆ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು, ಸ್ಕೂಟರ್ ಬಸ್ಸಿನ ಎಡಬದಿ ಮುಂಭಾಗಕ್ಕೆ ಸಿಲುಕಿಕೊಂಡು ಸ್ವಲ್ಪ ದೂರ ತಳ್ಳಿಕೊಂಡು ಹೋಗಿ ನಿಂತಿರುತ್ತದೆ. ಅಪಘಾತದಲ್ಲಿ ಪಿರ್ಯಾದಿದಾರರ ಕೈಕಾಲುಗಳಿಗೆ ತರಚಿದ ಗಾಯ, ಸೊಂಟದ ಎಡಭಾಗಕ್ಕೆ ಗುದ್ದಿದ ಗಾಯವಾಗಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಅಪಘಾತಕ್ಕೆ ಕಾರಣನಾದ KA-19-C-5002  ಬಸ್ ಚಾಲಕನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

CEN Crime PS

ದಿನಾಂಕ 18-062023 ರಂದು ಪಿರ್ಯಾದಿದಾರರಿಗೆ ಯಾರೋ ಅಪರಿಚಿತ ವ್ಯಕ್ತಿಯು+7449793062,+8695236637 ನಂಬ್ರದಿಂದ ಆಲ್ ಇಂಡಿಯಾ ಎಂಟರ್ಟೈನ್ಮೆಂಟ್ ಸರ್ವಿಸ್ ಕಂಪನಿ ಕಡೆಯಿಂದ ಕರೆಮಾಡುವುದಾಗಿ ತಿಳಿಸಿ ಆಲ್ ಇಂಡಿಯಾ ಎಂಟರ್ಟೈನ್ಮೆಂಟ್ ಸರ್ವಿಸ್ ಲೈಸನ್ಸ್ ನೀಡುವುದಾಗಿ ಹೇಳಿ ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 75,040/- ರೂ.ಗಳನ್ನು ತಮ್ಮ IDBI ಬ್ಯಾಂಕ್ ಖಾತೆ ಸಂಖ್ಯೆ.0702104000184335 IFSC Code:IBKL00088015 ನೇದಕ್ಕೆ ವರ್ಗಾಯಿಸಿಕೊಂಡು. ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರಿಗೆ ಮೋಸ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Mangalore North PS                

 ಪಿರ್ಯಾದಿದಾರರಾದ  ಮೊಹಮ್ಮದ್ ಹುಸೈನಾರ್ (27 ವರ್ಷ)  ಎಂಬವರು   ಮಂಗಳೂರು ನಗರದ   ಫಳ್ನೀರ್  ನಲ್ಲಿ ALMISBAH CAR HUB ಎಂಬ ಸಂಸ್ಥೆಯನ್ನು ನಡೆಸಿಕೊಂಡಿದ್ದು ದಿನಾಂಕ 18.05.2023ರಂದು  ಪಿರ್ಯಾದಿದಾರರ ಸಂಸ್ಥೆಗೆ ಬಂಟ್ವಾಳ ಮೂಲದ ಯಕ್ಷಿತ್ ಎಂಬಾತನು ಪಿರ್ಯಾದಿದಾರರ ಸಂಸ್ಥೆಯಿಂದ  KA -19-ML-9169  ನೇ ನಂಬ್ರದ ಇನ್ನೋವ ಕ್ರಿಸ್ಟಾ  ಕಾರನ್ನು  ಆನ್ ಲೈನ್ ಮೂಲಕ ಕಾಯ್ದಿರಿಸಿ 25,000/- ರೂ ನ್ನು ಆನ್ ಲೈನ್ ಮೂಲಕ ಪಾವತಿಸಿ ನಂತರ ಬಾಕಿ ಇರುವ ರೂ  50,000/- ಹಣವನ್ನು  ನಗದಾಗಿ ನೀಡಿದ್ದಲ್ಲದೇ,  ಅದರೊಂದಿಗೆ ಆಧಾರ್ ಕಾರ್ಡ್ ,ಚಾಲನಾ ಪರವಾನಿಗೆ ಮತ್ತು ಮೂರು ಬ್ಯಾಂಕ್ ಚೆಕ್ ನ್ನು ನೀಡಿ, ಸದ್ರಿ ಕಾರನ್ನು 15 ದಿನಗಳಿಗೆ  ಬಾಡಿಗೆಗೆ ತೆಗೆದುಕೊಂಡು ಹೋಗಿದ್ದವನು ನಂತರ ಬುಕ್ಕಿಂಗ್ ಅವಧಿ ಮುಗಿದಿದ್ದರೂ  ಕೂಡ ಕಾರನ್ನು ವಾಪಸ್ಸು ಕೊಡದೇ ಇದ್ದು, ಪಿರ್ಯಾದಿದಾರರು ಕರೆ ಮಾಡಿದಾಗ ಪಿರ್ಯಾದಿದಾರರ ಕರೆಗೆ ಸ್ಪಂದಿಸದೆ  ಇದ್ದ ಕಾರಣ  ಸದ್ರಿ ಕಾರಿನ ಜಿ ಪಿ ಎಸ್ ಪರಿಶೀಲಿಸಿದಾಗ ಪಿರ್ಯಾದಿದಾರರ ಕಾರು ವಿಜಯಪುರದಲ್ಲಿ ಇರುವುದನ್ನು ಗಮನಿಸಿ ವಿಚಾರಿಸಿಕೊಂಡಾಗ ಸದ್ರಿ ಕಾರನ್ನು ಯಕ್ಷಿತ್ ಮತ್ತು ಹರೀಶ್ ಎಂಬುವವರು ಪಿರ್ಯಾದಿದಾರರ ಆಧಾರ್ ಕಾರ್ಡ್ ನ್ನು ನಕಲು ಮಾಡಿ ಪಿರ್ಯಾದಿದಾರರಿಗೆ ತಿಳಿಯದೆ ವಿಜಯಪುರದ ವ್ಯಕ್ತಿಯೊಂದಿಗೆ ಮಾರಾಟ ಒಪ್ಪಂದವನ್ನು  ಮಾಡಿ 7 ಲಕ್ಷ ರೂಗಳನ್ನು ಪಡೆದುಕೊಂಡು. ಪಿರ್ಯಾದಿದಾರರಿಗೆ   ಆರೋಪಿಗಳಾದ ಯಕ್ಷಿತ್ ಮತ್ತು ಹರೀಶ್ ಎಂಬವರು  ನಂಬಿಕೆ ದ್ರೋಹ ಹಾಗೂ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ .

 

 

Traffic South Police Station

 ದಿನಾಂಕ:22-06-2023 ರಂದು ಪಿರ್ಯಾದಿದಾರರಾದ ಅವಿನಾಶ್ (30 ವರ್ಷ) ರವರು ರಾತ್ರಿ ತಲಪಾಡಿ ಟೋಲ್ ಗೇಟ್ ಹತ್ತಿರದ NHAI ಕ್ಯಾಂಟೀನ್ ನಲ್ಲಿ ರಾತ್ರಿ ಕೆಲಸದಲ್ಲಿ ಇರುವಾಗ ಮಂಗಳೂರು ಕಡೆಯಿಂದ ಕೇರಳ ಕಡೆಗೆ ಹೋಗುತ್ತಿದ್ದ ಎರಡು ಕಂಟೈನರ್ ಲಾರಿಗಳನ್ನು ಅದರ ಚಾಲಕರು ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಕೆಲಸ ಮಾಡುವ ಕ್ಯಾಂಟೀನ್ ಎದುರು ಕಾಂಕ್ರೀಟ್ ರಸ್ತೆ ಮೇಲೆ ರಸ್ತೆ ಬದಿಯಲ್ಲಿ ಒಂದರ ಹಿಂದೆ ಒಂದು ನಿಲ್ಲಿಸಿ  ಲಾರಿ ಚಾಲಕರು ಹಾಗೂ ಕ್ಲೀನರ್ ಸೇರಿ ಮೂರು ಜನರು ಹೋಗಿ ಕ್ಯಾಂಟೀನ್ ನಲ್ಲಿ ಟೀ ಕುಡಿದು  ಅವರ ಕಂಟೈನರ್ ಬಳಿ ಹೋಗಿದ್ದು ನಂತರ ಕಂಟೈನರ್ ಲಾರಿ ನಂಬ್ರ NL-01-AC-2452 ನೇದರ ಚಾಲಕ ಸಮೀಮ್ ಅಹಮ್ಮದ್ (28ವರ್ಷ) ಎಂಬಾತನು ಅವರ ಲಾರಿಯ ಗ್ಲಾಸನ್ನು ಕ್ಲೀನ್ ಮಾಡುತ್ತಾ ಇರುವಾಗ ದಿನಾಂಕ:23-06-2023 ರಂದು ಸಮಯ ಸುಮಾರು ರಾತ್ರಿ 12:00 ಗಂಟೆಗೆ  ಸಮೀಮ್ ಅಹಮ್ಮದ್ ರವರ ಲಾರಿಯ ಮುಂದೆ ನಿಲ್ಲಿಸಿದ್ದ ಕಂಟೈನರ್ ಲಾರಿ ನಂಬ್ರ DL-01-GC-6394 ನೇದನ್ನು ಅದರ ಚಾಲಕ ವಾಸಿಮ್ ಅಕ್ರಮ್ ಎಂಬಾತನು ಒಮ್ಮೆಲೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಹಿಂದಕ್ಕೆ ಚಲಿಸಿ ಹಿಂದೆ ನಿಂತಿದ್ದ ಕಂಟೈನರ್ ಲಾರಿ ನಂಬ್ರ NL-01-AC-2452 ನೇದಕ್ಕೆ ಡಿಕ್ಕಿ ಪಡಿಸಿರುತ್ತಾರೆ ಆ ಸಮಯ ಲಾರಿ ಗ್ಲಾಸನ್ನು ಕ್ಲೀನ್ ಮಾಡುತ್ತಿದ್ದ ಲಾರಿ ಚಾಲಕ ಸಮೀಮ್ ಅಹಮ್ಮದ್ ಎರಡು ಲಾರಿ ನಡುವೆ ಸಿಲುಕಿ  ಕಾಂಕ್ರೀಟ್ ರಸ್ತೆಯಲ್ಲಿ ಬಿದ್ದಿದ್ದು ಕೂಡಲೇ ಇದನ್ನು ನೋಡಿದ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಸಮೀಮ್ ಅಹಮ್ಮದ್  ರವರಿಗೆ ಹೊಟ್ಟೆಗೆ ಗುದ್ದಿದ ಗಂಭೀರ ಸ್ವರೂಪದ ಗಾಯವಾಗಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ನಂತರ ಪಿರ್ಯಾದಿದಾರರು ಹಾಗೂ ಸಾರ್ವಜನಿಕರು ಗಾಯಾಳು ಸಮೀಮ್ ಅಹಮ್ಮದ್ ನನ್ನು ಅಪಘಾತಗೊಳಿಸಿದ ಲಾರಿ ಚಾಲಕ ವಾಸಿಮ್ ಅಕ್ರಮ್ ಜೊತೆ ಕಾರೊಂದರಲ್ಲಿ ಚಿಕಿತ್ಸೆ ಬಗ್ಗೆ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ಕಳುಹಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಸಮೀಮ್ ಅಹಮ್ಮದ್ ರವರು ಸಮಯ 01:24 ಗಂಟೆಗೆ ಮೃತಪಟ್ಟಿರುವುದಾಗಿದೆ, ಎಂಬಿತ್ಯಾದಿ.

Traffic North Police Station                                             

 ಪಿರ್ಯಾದಿದಾರರಾದ ರಾಜಪ್ಪ (30 ವರ್ಷ) ರವರ ಸ್ನೇಹಿತ ನಿಂಗಪ್ಪ (48ವರ್ಷ) ರವರು ದಿನಾಂಕ 22-06-2023 ರಂದು ಕಾವೂರಿನಲ್ಲಿ ರಾತ್ರಿ ಊಟ ಮುಗಿಸಿ ನಡೆದುಕೊಂಡು ಕಾವೂರು ಕೋರ್ದಬ್ಬು ದೈವಸ್ಥಾನದ ಎದುರುಗಡೆ ಇರುವ ತೆರೆದ ಡಿವೈಡರ್ ಬಳಿ ಕಾಂಕ್ರೀಟ್ ರಸ್ತೆ ದಾಟುತ್ತಿದ್ದ ಸಮಯ ಸುಮಾರು ರಾತ್ರಿ 8:00 ಗಂಟೆಗೆ ಕಾವೂರು ಕಡೆಯಿಂದ ಬಜಪೆ ಕಡೆಗೆ KA-19-HC-7011 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಅನ್ವೀತ್ ಎಂಬಾತನು ವೇಗವಾಗಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನಿಂಗಪ್ಪ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ನಿಂಗಪ್ಪ ರವರು ರಸ್ತೆಗೆ ಬಿದ್ದು ಅವರ ಬಲಕಾಲಿನ ಮೊಣಗಂಟಿನ ಕೆಳಗೆ ಕೋಲು ಕಾಲಿಗೆ ಮೂಳೆ ಮುರಿತದ ರಕ್ತ ಗಾಯ, ಬಲಕೈಯ ಮೊಣಕೈಗೆ ತರಚಿದ ರೀತಿಯ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ ಸಾರಾಂಶ.

Mangalore South PS                          

ದಿನಾಂಕ 08-05-2023 ರಂದು 20-30 ಗಂಟೆಯಿಂದ ದಿನಾಂಕ 09-05-2023 ರಂದು ಬೆಳಿಗ್ಗೆ 10-00 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಅತ್ತಾವರ, ಬಿ. ವಿ. ರೋಡ್ ಪಿ. ಸಿ. ಪ್ಯಾಲೇಸ್ ಅಪಾರ್ಟ್ ಮೆಂಟ್ ನ ದ್ಚಿಚಕ್ರ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಇಟ್ಟಿದ್ದ ಪಿರ್ಯಾದಿ URBAN JOSEPH FURTADO ದಾರರು ಉಪಯೋಗಿಸುತ್ತಿದ್ದ ಪಿರ್ಯಾದಿದಾರರ ಬಾವ ಪೆನ್ವಿನ್ ಲೆನ್ವೀನ್ ಡೇಸಾ ರವರ  ಆರ್. ಸಿ. ಮಾಲಕತ್ವದ KA 19 ET 2539, ನೊಂದಣಿ ಸಂಖ್ಯೆಯ ME1SE77H8G0019945 ಚೆಸಿಸ್ ನಂಬ್ರದ, E3N8E0367031 ಇಂಜೀನ್ ನಂಬ್ರದ 08/2016 ನೇ ಮೋಡಲ್ ನ ಬಿಳಿ-ಹಸಿರು ಬಣ್ಣದ ಅಂದಾಜು ರೂಪಾಯಿ 37,000/- ಬೆಲೆ ಬಾಳುವ YAMAHA RAY ZR BSIII ದ್ಚಿಚಕ್ರ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರು ಕಳವಾದ ದ್ಚಿಚಕ್ರ ವಾಹನವನ್ನು ಮಂಗಳೂರು ನಗರ ಹಾಗೂ ಆಸುಪಾಸಿನಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ. ಎಂಬಿತ್ಯಾದಿಯಾಗಿರುತ್ತದೆ.

Moodabidre PS

ಪಿರ್ಯಾದಿ Sandeep Shetty ದಾರರು ಕಂಟ್ರ್ಯಾಕ್ಟರ್ ಕೆಲಸ ಮಾಡಿಕೊಂಡಿದ್ದು, ಬೆಳುವಾಯಿ ಗ್ರಾಮದ ಮುಡಾಯಿಕಾಡು ತಿರ್ಗಾಸ್ ಕ್ರಾಸ್ ಎಂಬಲ್ಲಿಯ ನಿವಾಸಿ ಕೃಷ್ಣ ಮೂರ್ತಿ ಎಂಬವರ ಮನೆ ಕಟ್ಟುವ ಕೆಲಸವನ್ನು ವಹಿಸಿಕೊಂಡಿದ್ದು, ಮನೆಯ ಸ್ಲ್ಯಾಬ್ ನಿರ್ಮಾಣ ಮಾಡಲು ದಿನಾಂಕ 19-06-2023 ರಂದು ಸಂಜೆ 3.00 ಗಂಟೆಗೆ ಪಿಕಪ್ ವಾಹನದ ಮೂಲಕ 125 ಕಬ್ಬಿಣದ ಸೀಟ್ ಮತ್ತು 130 ಕಬ್ಬಿಣದ ಸೆಂಟ್ರಿಂಗ್ ಜಾಕ್ ಗಳನ್ನು ಸ್ಥಳಕ್ಕೆ ತಂದು ಹಾಕಿ ಸಂಜೆ ಕೆಲಸ ಮುಗಿಸಿ ಹೊರಟಿದ್ದು, ದಿನಾಂಕ 20-06-2023 ರಂದು ಬೆಳಿಗ್ಗೆ 9.00 ಗಂಟೆಗೆ ಕೆಲಸಕ್ಕೆ ಹೋಗಿದ್ದ, ಕೆಲಸಗಾರರ ಪೈಕಿ ಬಾಸ್ಕರ್ ಎಂಬವರು ಪಿರ್ಯಾದಿದಾರರಿಗೆ ಪೋನ್ ಮಾಡಿ ನಿನ್ನೆ ತಂದು ಹಾಕಿದ್ದ ಕಬ್ಬಿಣದ ಸೀಟ್ ಹಾಗೂ ಕಬ್ಬಿಣದ ಸೇಟ್ರಿಂಗ್ ಜಾಕ್ ಗಳು ಕಾಣಿಸುತ್ತಿಲ್ಲವಾಗಿ ತಿಳಿಸಿದ್ದು, ಪಿರ್ಯಾದಿದಾರರು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ತಂದು ಹಾಕಿದ್ದ ಕಬ್ಬಿಣದ ಸೀಟ್ ಹಾಗೂ  ಕಬ್ಬಿಣದ ಸೇಟ್ರಿಂಗ್ ಜಾಕ್ ಗಳು ಅಲ್ಲಿ ಇಲ್ಲದೇ ಇದ್ದು, ಸದ್ರಿ ಸ್ವತ್ತುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳುವಾದ ಸ್ವತ್ತಿನ ಮೌಲ್ಯ 5,25,000/- ರೂ ಆಗಬವುದು ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 21-08-2023 01:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080