ಅಭಿಪ್ರಾಯ / ಸಲಹೆಗಳು

Crime Reported in : Mangalore Rural PS

ದಿನಾಂಕ 19-08-2022 ರಂದು ಫಿರ್ಯಾಧಿದಾರರ Valachil Yousuf Mohammed  ಮಗ ರಮ್ಲಾನ್ ಮಿಫ್ತಾ ಎಂಬವನು ರಾತ್ರಿ 8.30 ಗಂಟೆ ವೇಳೆಗೆ ಮೊಟ್ಟೆ ತರಲೆಂದು ವಳಚ್ಚಿಲ್ ಬದ್ರಿಯಾ ಮದರಸದ ಬಳಿ ಹೋದಾಗ ಅಲ್ಲಿದ್ದ ಮಹಮದ್ ಮುಸ್ತಾಕ್ ಯಾನೆ ಮಹಮದ್ ಮಿಸ್ತಾ ಯಾನೆ ಬಾಬಿ ಎಂಬವನು ಆಶಿಕ್ ಎಂಬಾತನೊಂದಿಗೆ ಸೇರಿಕೊಂಡು ಫಿರ್ಯಾಧಿದಾರರ ಮಗ ರಮ್ಲಾನ್ ಮಿಫ್ತಾ ಎಂಬವನ ವಿವೋ-ವೈ20 ಮೊಬೈಲ್ ಪೋನ್ ನ್ನು ಬಲವಂತದಿಂದ ಸುಲಿಗೆ ಮಾಡಿ ಪರಾರಿಯಾಗಿರುತ್ತಾರೆ. ಸುಲಿಗೆ ಮಾಡಿದ ಮೊಬೈಲ್ ಫೋನಿನ ಅಂದಾಜು ಮೌಲ್ಯ 15000/- ಆಗಬಹುದು.

 Crime Reported in : Traffic North Police Station                                                         

ದಿನಾಂಕ; 21-08-2022 ರಂದು ಪಿರ್ಯಾದಿದಾರರ Sharanabasu  ಚಿಕ್ಕಪ್ಪ ಶಿವಾನಂದ (39) ರವರು ಅವರ ಬಾಬ್ತು KA-19-EM-7006 ನಂಬರಿನ ಮೋಟಾರ್ ಸೈಕಲನ್ನು ಸವಾರಿ ಮಾಡಿಕೊಂಡು ರಾ.ಹೆ 66ರಲ್ಲಿ ಹಳೆಯಂಗಡಿ ಕಡೆಯಿಂದ ಮುಲ್ಕಿ ಕಡೆಗೆ ಹೋಗುತ್ತಾ ಸಮಯ ಸುಮಾರು 17:30 ಗಂಟೆಗೆ ಪಡುಪಣಂಬೂರು ಪೆಟ್ರೋಲ್ ಪಂಪ್ ನ ಎದುರು ತೆರೆದ ಡಿವೈಡರ್ ಬಳಿ ತಲುಪುತ್ತಿದ್ದಂತೆ ಹಿಂದುಗಡೆಯಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-19-AD-4595 ನಂಬರಿನ ಖಾಸಗಿ ಬಸ್ ನ್ನು ಅದರ ಚಾಲಕ ಉಮೇಶ್ ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಚಿಕ್ಕಪ್ಪ ಚಲಾಯಿಸುತ್ತಿದ್ದ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಎಸೆಯಲ್ಪಟ್ಟಿದ್ದು ಇದರ ಪರಿಣಾಮ ತಲೆಯ ಹಿಂಬದಿಗೆ ಚರ್ಮ ಹರಿದ ರಿತಿಯ ರಕ್ತ ಗಾಯ, ಹಣೆಯ ಬಲಬದಿಗೆ ರಕ್ತ ಗಾಯ, ಬಲ ಕಣ್ಣಿನ ಕೆಳ ಬಾಗದಲ್ಲಿ ತರಚಿದ ಗಾಯ, ಬಲ ಪಕ್ಕೆಲುಬಿನ ಬಳಿ ಗುದ್ದಿದ ನೋವು ಆಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರಿನ ಎಜೆ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 Crime Reported in : Mulki PS

 “ಪಿರ್ಯಾದಿದಾರರಿಗೆ ಅವರ ಸಂಬಂಧಿಯಾದ ಆರೋಪಿ ಮನೋಜ್ ಎಂಬಾತನು 2014 ನೇ ಇಸವಿಯ ಜನವರಿ ತಿಂಗಳಿನಲ್ಲಿ ಭೇಟಿಯಾಗಿ ತನ್ನ ಮನೆ ರಿಪೇರಿಯ ಬಗ್ಗೆ ಭಾರತ್ ಬ್ಯಾಂಕ್ ಮುಲ್ಕಿ ಶಾಖೆಯಿಂದ 10 ಲಕ್ಷ ರೂಪಾಯಿಯನ್ನು ಸಾಲ ಪಡೆದುಕೊಳ್ಳುವುದಾಗಿ  ಸದ್ರಿ ಸಾಲದ ಕಂತನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡುವುದಾಗಿ ಪಿರ್ಯಾದಿದಾರರನ್ನು ನಂಬಿಸಿ ಸದ್ರಿ ಸಾಲಕ್ಕೆ ಪಿರ್ಯಾದಿದಾರರನ್ನು ಜಾಮೀನುದಾರನಾಗಿ ನಿಲ್ಲುವಂತೆ ತಿಳಿಸಿ, ಪಿರ್ಯಾದಿದಾರರ ಸ್ವಂತ ಹಕ್ಕಿನ ಕೃಷಿಯೇತರ ಜಮೀನನ್ನು ಸಾಲಕ್ಕೆ ಭದ್ರತೆಯಾಗಿ ಅಡವಿರಿಸಿ, ಸದ್ರಿ ಜಮೀನಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಪಿರ್ಯಾದಿದಾರರನ್ನು ನಂಬಿಸಿ ಆರೋಪಿಯು ಭಾರತ್ ಬ್ಯಾಂಕ್ ಮುಲ್ಕಿ ಶಾಖೆಯಿಂದ ಸಾಲಪಡೆದುಕೊಂಡು ಸಾಲದ ಕಂತನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿ ಮಾಡದೇ ಇದ್ದೂದರಿಂದ ಪಿರ್ಯಾದಿದಾರರ ಜಮೀನನ್ನು ಬ್ಯಾಂಕಿನವರು ಹರಾಜು ಮಾಡುವ ಉದ್ದೇಶಕ್ಕೋಸ್ಕರ ಪಿರ್ಯಾದಿದಾರರಿಗೆ ನೋಟೀಸು ನೀಡಿದ್ದು ಈ ವೇಳೆ ಆರೋಪಿಯು ಪಿರ್ಯಾದಿದಾರರ ಜಮೀನು ಹರಾಜು ಆದಲ್ಲಿ ತನ್ನ ತಾಯಿಯ ಹೆಸರಿನಲ್ಲಿರುವ ಜಮೀನಿನಲ್ಲಿ ಆರೋಪಿತನ ಹಿಸ್ಸೆಯ ಜಮೀನನ್ನು ಪಿರ್ಯಾದಿದಾರರಿಗೆ ನೀಡುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 23-08-2022 05:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080