ಅಭಿಪ್ರಾಯ / ಸಲಹೆಗಳು

Crime Report in Urva PS

ಪಿರ್ಯಾಧಿದಾರರಾದ ಹೆಚ್ ಸಿ ರಾಮಚಂದ್ರ ರವರು ದಿನಾಂಕ:22-08-2023 ರಂದು ರಾತ್ರಿ ಪಿಟಿಷನ್ ವಿಚಾರಣೆಯ ಬಗ್ಗೆ ರಾತ್ರಿ  11-30 ಗಂಟೆಗೆ ಕರೆತಂದ  ಏಳು ಮಂದಿ ಕೇರಳ ಮೂಲದ ಯುವಕರನ್ನು ವಿಚಾರಣೆಯ ಮಾಡುವ ಸಮಯ ಇವರುಗಳು ಆಮಾಲಿನಲ್ಲಿ ತೊದಲುತ್ತ ಮಾತನಾಡುತ್ತಿದ್ದು ಇವರುಗಳು ಗಾಂಜಾ ವ್ಯಸನಿಯಾಗಿದ್ದರೇ ಎಂಬ ಅನುಮಾನದ ಮೇರೆಗೆ ಇವರನ್ನು ವೈದ್ಯಕೀಯ ತಪಾಸಣೆ ನಡೆಸಲು ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಯ ವೈಧ್ಯಾಧಿಕಾರಿಯವರ ಬಳಿ ಕಳುಹಿಸಿಕೊಟ್ಟಲ್ಲಿ ಈ ಏಳು ಮಂದಿ ಯುವಕರನ್ನು ಪರೀಕ್ಷಿಸಿದ ವೈಧ್ಯರು ಇವರುಗಳ ಪೈಕಿ ಜೀಶ್ಣು ಪ್ರಾಯ:25 ವರ್ಷ ವಾಸ: ಚಾತೋತ್ತೂ ಹೌಸ್ ನೇರಿಕೊಟ್ಟುಗರಿ ಕಣ್ಣೂರು ಕೇರಳ, ಈತನು ನಿಷೇದಿತ ಮಾದಕ ದ್ರವ್ಯ ಗಾಂಜವನ್ನು ಸೇವನೆ ಮಾಡಿರುವುದಾಗಿ ದೃಢಪತ್ರವನ್ನು ನೀಡಿದ್ದು. ಆದರಿಂದ  ಜೀಶ್ಣು ಎಂಬಾತನ ಮೇಲೆ ಕಲಂ:  ಎನ್ ಡಿ ಪಿಎಸ್ ಕಾಯ್ದೆ ಆಡಿ ದಾಖಲಿಸಿದ ಪ್ರಕರಣವಾಗಿರುತ್ತದೆ ಎಂಬಿತ್ಯಾದಿ.

Ullal PS

ಪಿರ್ಯಾದಿದಾರನಾದ sheetha alagur PSI ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಇರುವ ವೇಳೆಯಲ್ಲಿ ದಿನಾಂಕ: 23.08.2023 ರಂದು ಬೆಳಗ್ಗಿನ ಜಾವ 02-30 ಗಂಟೆಯ ಸಮಯಕ್ಕೆ ರಾಷ್ಟ್ರೀಯ ಹೆದ್ದಾರಿ 66 ತಲಪಾಡಿ ಗ್ರಾಮದ ತಲಪಾಡಿ ಗ್ರಾಮದ ತಲಪಾಡಿ ಗ್ರಾಮಸೌಧ ಕಟ್ಟಡದ ಬಾಗಿಲಿನ ಬಳಿ ಇದ್ದ  ಒಬ್ಬ ಅಪರಿಚಿತ ವ್ಯಕ್ತಿ ಇದ್ದು, ಇವನು ಕೈಯಿಂದ ಮುಖವನ್ನು ಮರೆಮಾಚಿಕೊಳ್ಳಲು ಪ್ರಯತ್ನಿಸುತ್ತಾ ಇರುವುದನ್ನು ಕಂಡು ವಿಚಾರಿಸಿದಾಗ ಆತನ ಹೆಸರನ್ನು ಕಬೀರ್ @ ಅಹಮ್ಮದ್ ಕಬೀರ್, ಪ್ರಾಯ: 33 ವರ್ಷ,  ವಾಸ: ತಾಹಿರರವರ ಬಾಡಿಗೆ ಮನೆ, ಕಡಪ್ಪರ, ಮುಕ್ಕಚ್ಚೇರಿ, ಉಳ್ಳಾಲ, ಉಳ್ಳಾಲ ತಾಲೂಕು ಎಂಬುದಾಗಿ ತಿಳಿಸಿದ್ದು, ಸದ್ರಿ ಸ್ಥಳದಲ್ಲಿ ಇರುವಿಕೆಯ ಯಾವುದೋ ಬೇವಾರಂಟು ತಕ್ಷೀರು ನಡೆಸುವ ಬಲವಾದ ಇರಾದೆಯನ್ನು ಹೊಂದಿರಬಹುದಾಗಿ ಕಂಡು ಬಂದಿದ್ದು ಆತನನ್ನು ವಶಕ್ಕೆ   ಪಡೆದು ಠಾಣೆಗೆ ಬಂದು ಆರೋಪಿಯ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆ ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

Barke PS

 ರೆಹಮತುಲ್ಲಾ ಪ್ರಾಯ 45 ವರ್ಷ ಎಂಬವರು ಮಂಗಳೂರು ಲಾಲ್ ಭಾಗ್ ಸಾಯಿಬೀನ್ ಕಾಂಪ್ಲೇಕ್ಸ್ ನ ನೆಲ ಅಂತಸ್ತಿನಲ್ಲಿರುವ ಫೆಂಟಾಸ್ಟಿಕ್ ವರ್ಲ್ಡ್” ಎಂಬ ಶಾಪ್ ನಲ್ಲಿ 85% ಪ್ರತಿಶತ ಅದರ ಸೇವನೆಯಿಂದ ಆಗುವ ದುಷ್ಪರಿಣಾಮದ ಚಿತ್ರವನ್ನು ಪ್ರದರ್ಶಿಸದೇ ಇರುವ ವಿದೇಶಿ ಹಾಗೂ ಸ್ವದೇಶಿ ಸಿಗರೇಟ್ ಗಳನ್ನು ಮಾರಾಟ ಮಾಡಲು ಯಾವುದೇ ಪರವಾಣಿಗೆ ಹೊಂದದೇ ತಮ್ಮ ಅಂಗಡಿಯಲ್ಲಿ ಆಕ್ರಮ ಲಾಭಗಳಿಸುವ ಉದ್ದೇಶದಿಂದ ಶೇಖರಿಸಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾತನನ್ನು ಪಿರ್ಯಾದಿದಾರರಾದ ಶೋಭಾ ಪಿ.ಎಸ್.ಐ ಬರ್ಕೆ ಪೊಲೀಸ್ ಠಾಣೆ ರವರು ಸಿಬ್ಬಂದಿಗಳ ಜೊತೆಯಲ್ಲಿ ದಿನಾಂಕ: 21-08-2023 ರಂದು ದಾಳಿ ನಡೆಸಿ ಒಟ್ಟು 131 ವಿವಿಧ ಕಂಪೆನಿಯ ಸಿಗರೇಟ್ ವಿದೇಶಿ/ಸ್ವದೇಶಿ ಸಿಗರೇಟ್ ಗಳನ್ನು ಮಹಜರು ಮುಖಾಂತರ ಸ್ವಾಧೀನಪಡಿಸಿಕೊಂಡು ಕೊಟ್ಪಾ ಕಾಯಿದೆ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

Mulki PS  

 ದಿನಾಂಕ:20-08-2023 ರಂದು 16-15 ಗಂಟೆಯಿಂದ ದಿನಾಂಕ: 22-08-2023 ರಂದು 13-30 ಗಂಟೆಯ ಮದ್ಯಾಧಿವದಿಯಲ್ಲಿ ಯಾರೋ ಕಳ್ಳರು ಕೊಯಿಕುಡೆ ಗ್ರಾಮದ ಮದರ್ ತೆರೆಸಾ ಲೇಔಟ್ ನಲ್ಲಿರುವ ಡೋರ್ ನಂಬ್ರ:  ನೇ ಪಿರ್ಯಾದಿದಾರರ ಮನೆಯ ಪೂರ್ವ ದಿಕ್ಕಿನಲ್ಲಿರುವ ಪ್ಯಾಸೇಜಿನ ಕೋಣೆಯ ಗೋಡೆಗೆ ಅಳವಡಿಸಿದ ಕಬ್ಬಿಣದ ಗ್ರಿಲ್ಸ್ ನ್ನು ಬೆಂಡ್ ಮಾಡಿ ಮತ್ತು ತುಂಡು ಮಾಡಿ ತೆಗೆದು ಪ್ಯಾಸೇಜಿನ ಒಳಗಡೆ ಪ್ರವೇಶಿಸಿ ಹಿಂಭಾಗಿಲಿನ ಬಾಗಿಲಿನ ಚಿಲಕವನ್ನು ಯಾವುದೋ ಸಾಧನದಿಂದ ಮೀಟಿ ತೆಗೆದು ಮನೆಯ ಒಳಗೆ ಪ್ರವೇಶಿಸಿ ಮನೆಯ  ಎರಡು ಬೆಡ್ ರೂಮ್ ಗಳಲ್ಲಿದ್ದ ಗಾಡ್ರೇಜ್ ಗಳ ಲಾಕನ್ನು ತೆಗೆದು ಅದರಲ್ಲಿದ್ದ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು ಆ ಬೆಡ್ ರೂಮ್ ಗಳಲ್ಲಿ ಪಿರ್ಯಾದಿದಾರರು ಮಲಗುವ ಬೆಡ್ ರೂಮಿನಲ್ಲಿದ್ದ ಮರದ ಕಾಪಾಟಿನ ಲಾಕನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ತೆಗೆದು ಕಾಪಾಟಿನೊಳಗಿನ 75 ಗ್ರಾಂ ಚಿನ್ನಾಭರಣ ಅಂದಾಜು ಮೌಲ್ಯ: 3,75,000/-   ನಗದು ರೂ 5,000/-ರೂ. ಕಳವು ಮಾಡಿಕೊಂಡು ಹೋಗಿರುವುದು ಎಂಬಿತ್ಯಾದಿಯಾಗಿದೆ.

ಇತ್ತೀಚಿನ ನವೀಕರಣ​ : 23-08-2023 04:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080