ಅಭಿಪ್ರಾಯ / ಸಲಹೆಗಳು

Crime Report in  CEN Crime PS

ಪಿರ್ಯಾದಿದಾರರಾದ ಮೊಬೈಲ್ ಗೆ ದಿನಾಂಕ 09-09-2023 ರಂದು ಯಾರೋ ಅಪರಿಚಿತ ವ್ಯಕ್ತಿ ದೂರವಾಣಿ ಸಂಖ್ಯೆ +916366196179 ನೇದರಿಂದ ಕೆವೈಸಿ ಅಪ್ ಡೇಟ್ ಮಾಡುವ ಸಂದೇಶ ಬಂದಿರುತ್ತದೆ. ನಂತರ ಪಿರ್ಯಾದಿದಾರರ ಮೊಬೈಲ್ ಗೆ ದೂರವಾಣಿ ಸಂಖ್ಯೆ +917498400311 ನೇದರಿಂದ ಯಾರೋ ಅಪರಿಚಿತ ವ್ಯಕ್ತಿ ಕರೆ ಮಾಡಿ ಕೆವೈಸಿ ಅಪ್ ಡೇಟ್ ಮಾಡುವಂತೆ ಇಲ್ಲವಾದರೆ ನಿಮ್ಮ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಬ್ಲಾಕ್ ಆಗುವುದಾಗಿಯೂ ತಿಳಿಸಿರುತ್ತಾರೆ. ಇದನ್ನು ನಂಬಿದ ಪಿರ್ಯಾದಿದಾರರು ಕೆವೈಸಿ ಅಪ್ ಡೇಟ್ ಮಾಡುವ ಸಂದೇಶದಲ್ಲಿ ಬಂದಿರುವ  https://sbikyceditcardserv.wixsite.com/my-site ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿರುತ್ತಾರೆ.  ನಂತರ ತಮ್ಮ ಬಾಬ್ತು ಎಸ್ ಬಿ ಐ ಕ್ರೆಡಿಟ್ ಕಾರ್ಡ್ ನಂಬ್ರ  ನೇದನ್ನು ನಮೂದಿಸಿ ನಂತರ ಓಟಿಪಿ ಯನ್ನು ನಮೂದಿಸಿದ ಕೂಡಲೇ ಹಂತ ಹಂತವಾಗಿ ಒಟ್ಟು 1,93,210/- ರೂಗಳು ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ. ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರಿಗೆ ಕೆವೈಸಿ ಅಪ್ ಡೇಟ್ ಮಾಡುವ ಮೋಸದ ಲಿಂಕ್ ಕಳುಹಿಸಿ ಆನ್ ಲೈನ್ ಮುಖಾಂತರ ಒಟ್ಟು 1,93,210/- ರೂ ಗಳನ್ನು ಮೋಸದಿಂದ ವರ್ಗಾಯಿಸಿಕೊಂಡಿರುವುದಾಗಿ ಎಂಬಿತ್ಯಾದಿ ದೂರಿನ ಸಾರಾಂಶ.

Bajpe PS

ಪಿರ್ಯಾದಿ Babu Naik ದಾರರು ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ದಿನಾಂಕ 23-09-2023 ರಂದು ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ರೌಂಡ್ಸ್ ನಲ್ಲಿದ್ದ ಸಮಯ ಬೆಳಿಗ್ಗೆ ಸುಮಾರು 04-00 ಗಂಟೆಗೆ ಅಡ್ಡೂರು ಗ್ರಾಮದ ನಂದ್ಯಾ ಎಂಬಲ್ಲಿಗೆ ಹೋದಾಗ 2 ಟಿಪ್ಪರ್ ಲಾರಿಗಳು ಬರುತ್ತಿರುವುದನ್ನು ಕಂಡು ಟಪ್ಪರ್ ಲಾರಿಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಅವುಗಳ ಚಾಲಕರು ಟಪ್ಪರ್ ಲಾರಿಗಳನ್ನು ಬಿಟ್ಟು ತಪ್ಪಿಸಿಕೊಂಡಿದ್ದು ಟಿಪ್ಪರ್ ಲಾರಿಗಳ ಬಳಿ ಹೋಗಿ ನೋಡಿದಾಗ KA 19 AC 7843 ನೇ ನಂಬ್ರದ ಟಿಪ್ಪರ್ ಲಾರಿಯಲ್ಲಿ ಪೂರ್ತಿ ಮರಳು ತುಂಬಿಸಿದ್ದು, KA 19 AC 1486 ನೇ ನಂಬ್ರದ ಲಾರಿಯಲ್ಲಿ ಅರ್ದದಷ್ಟು ಮರಳು ತುಂಬಿಸಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರು ಅಲ್ಲಿಂದ ಗುರುಪುರ (ಫಾಲ್ಗುಣಿ) ನದಿಯ ದಡದ ಬಳಿ ಹೋಗಿ ನೋಡಿದಾಗ ನದಿಯಲ್ಲಿ ಸುಮಾರು 15 ದೋಣಿಗಳಲ್ಲಿ ನದಿಯಿಂದ ಮರಳನ್ನು ಗಣಿಗಾರಿಕೆ ನಡೆಸಿ ಕಳವು ಮಾಡಿ ತುಂಬಿಸುತ್ತಿರುವುದು ಕಂಡು ಬಂದಿರುತ್ತದೆ. ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳನ್ನು ನೋಡಿ ದೋಣಿಗಳಲ್ಲಿ ಅಕ್ರಮವಾಗಿ ಮರಳನ್ನು ತೆಗೆಸುತ್ತಿದ್ದ ವ್ಯಕ್ತಿಗಳಾದ ನೌಷದ ಮತ್ತು ನೌಫಲ್ ರವರು ನದಿಗೆ ಹಾರಿ ಪಕ್ಕದ ದಡಗಳಲ್ಲಿ ಹತ್ತಿ ಓಡಿ ತಪ್ಪಿಸಿಕೊಂಡಿರುತ್ತಾರೆ. ನಂತರ ಸಿಬ್ಬಂದಿಗಳ ಸಹಾಯದಿಂದ ದೋಣಿಗಳನ್ನು ನದಿಯ ಉತ್ತರದ ದಡಕ್ಕೆ ತಂದು ಪರಿಶೀಲಿಸಿದಾಗ ಒಟ್ಟು 15 ದೋಣಿಗಳಿದ್ದು ಅವುಗಳ ಪೈಕಿ 1 ದೋಣಿಯಲ್ಲಿ ಪೂರ್ತಿ ಮತ್ತು 8 ದೋಣಿಗಳಲ್ಲಿ ಭಾಗಶಃ ಮರಳು ತುಂಬಿದ್ದು 6 ದೋಣಿಗಳು ಖಾಲಿ ಇರುವುದು ಕಂಡು ಬಂದಿರುತ್ತದೆ. ಭಾತ್ಮೀದಾರರಲ್ಲಿ ವಿಚಾರಿಸಿದಾಗ ಸದ್ರಿ ಮರಳುಗಣಿಗಾರಿಕೆ ನಡೆಸುತ್ತಿದ್ದ ದಕ್ಕೆಯು ರಿಯಾಜ್ ಎಂಬವರಿಗೆ ಸೇರಿದ್ದು ಸದ್ರಿಯವರು ನೌಷದ್ ಮತ್ತು ನೌಫಲ್ ರವರ ಜೊತೆ ಸೇರಿ ನದಿಯಿಂದ ಗಣಿಗಾರಿಕೆ ನಡೆಸಿ ಮರಳನ್ನು ಕಳವು ಮಾಡಿರುವುದು ತಿಳಿದು ಬಂತು. ಆದುದರಿಂದ ಅಕ್ರಮ ಮರಳುಗಾರಿಕೆ ನಡೆಸಿ ನದಿಯಿಂದ ಸರ್ಕಾರಿ ಸೊತ್ತಾಗಿರುವ ಮರಳನ್ನು ಕಳವು ಮಾಡಿರುವ ವ್ಯಕ್ತಿಗಳಾದ 1.ರಿಯಾಜ್, 2.ನೌಷದ್, 3.ನೌಫಲ್, ಟಿಪ್ಪರ್ ಲಾರಿಗಳ ಮಾಲಿಕರು, ಚಾಲಕರು ಮತ್ತು ದೋಣಿಗಳ ಮಾಲಿಕರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿಯಾಗಿರುತ್ತದೆ.

Mangalore North PS                                  

ಪಿರ್ಯಾದಿ SANGAMESH M MATA ದಾರರು ಒಂದು ವರ್ಷದಿಂದ ಶ್ರೀ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಪುರುಷ ವಿದ್ಯಾರ್ಥಿ ನಿಲಯ ಬಂದರು ಮಂಗಳೂರು ಎಂಬಲ್ಲಿ ನಿಲಯ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವುದಾಗಿದೆ. ಎಂದಿನಂತೆ ದಿನಾಂಕ 21-09-2023 ರಂದು ಕರ್ತವ್ಯಕ್ಕೆ ಹಾಜರಾಗಿದ್ದು ಸುಮಾರು 08.00 ಗಂಟೆಗೆ ವಿದ್ಯಾರ್ಥಿ ನಿಲಯದಲ್ಲಿದ್ದ ವಿದ್ಯಾರ್ಥಿಗಳ ಪೈಕಿ ಒಟ್ಟು 04 ವಿದ್ಯಾರ್ಥಿಗಳ ಮೊಬೈಲ್ ಪೋನ್ ಗಳು ಕಾಣೆಯಾದ ಬಗ್ಗೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ತಿಳಿಸಿದ್ದು ವಿದ್ಯಾರ್ಥಿ ನಿಲಯದ ಒಳಗಡೆ ಸಂಪೂರ್ಣ ಹುಡುಕಾಡಿದ್ದು ಈ ವರೆಗೆ ಪತ್ತೆಯಾಗದೇ ಇದ್ದುದರಿಂದ ಸದ್ರಿ ನಾಲ್ಕು ಮೊಬೈಲ್ ಗಳನ್ನು ಯಾರೋ ಆಪರಿಚಿತ ಕಳ್ಳರು ದಿನಾಂಕ 21-09-2023 ರಂದು ಮುಂಜಾನೆ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿದ್ದು ಕಳವು ಆದ ಮೊಬೈಲ್ ಮತ್ತು ಆರೋಪಿಯನ್ನು ಪತ್ತೆ ಮಾಡುವರೇ ವಿನಂತಿ,ನಾಲ್ಕು ಮೊಬೈಲ್ ಪೋನ್ ಗಳ ಒಟ್ಟು ಮೌಲ್ಯ 30,000 ರೂ ಎಂಬಿತ್ಯಾದಿ

Ullal PS   

ನಗರ ಅಪರಾಧ ವಿಭಾಗ (ಸಿಸಿಬಿ)ದ ಪಿಎಸ್ಐ ಶ್ರೀ ನರೇಂದ್ರ ರವರಿಗೆ ದಿನಾಂಕ. 22-9-2023 ರಂದು ಉಳ್ಳಾಲ ಗ್ರಾಮದ ಉಳ್ಳಾಲ ಬೈಲ್ ಎಂಬಲ್ಲಿ ಇಬ್ಬರು ವ್ಯಕ್ತಿಗಳು ನಿಷೇದಿತ ಮಾದಕ ವಸ್ತು ಎಂಡಿಎಂಎ ನ್ನು ಮಾರಾಟ ಮಾಡಲು ಬಂದಿರುವ ಬಗ್ಗೆ ಮಾಹಿತಿಯ ಮೇರೆಗೆ  ಸಂಜೆ 3-15 ಗಂಟೆಯ ಸಮಯಕ್ಕೆ ಉಳ್ಳಾಲ ಗ್ರಾಮದ ಉಳ್ಳಾಲ ಬೈಲ್ ಎಂಬಲ್ಲಿಗೆ ತಲುಪಿದಾಗ ಸದ್ರಿ ಸ್ಥಳದಲ್ಲಿ ಕೆಎ-19-ಹೆಚ್ಎನ್-1260 ನೇ ಕಪ್ಪು ಬಣ್ಣದ ಆ್ಯಕ್ಟಿವ ಸ್ಕೂಟರ್ ನಿಲ್ಲಿಸಿ ಒಬ್ಬನು ಕುಳಿತುಕೊಂಡು, ಇನ್ನೊಬ್ಬನು ನಿಂತುಕೊಂಡು ಯಾರನ್ನೋ ಕಾಯುತ್ತಿರುವಂತೆ ಕಂಡು ಬಂದ ಕಾರಣ ಫಿರ್ಯಾದಿದಾರರಿಗೆ ದೊರೆತ ಮಾಹಿತಿಯನ್ನು ಖಚಿತಪಡಿಸಿಕೊಂಡು ಸದ್ರಿ ಸ್ಥಳಕ್ಕೆ ಸಂಜೆ 3-20 ಗಂಟೆಗೆ ಧಾಳಿ ನಡೆಸಿದಾಗ ಸದ್ರಿ ವ್ಯಕ್ತಿಗಳು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅವರನ್ನು ಸುತ್ತುವರಿದು ಹಿಡಿದು ವಿಚಾರಿಸಿದಾಗ ಒಬ್ಬನು ಜಾಕೀರ್ ಎಂದು ಇನ್ನೊಬ್ಬನು ಕಾರ್ತಿಕ್ ಸುವರ್ಣ ಎಂದು ತಿಳಿಸಿದ್ದು, ಇವರುಗಳು ಜಲ್ಲಿಗುಡ್ಡೆಯ ನಿವಾಸಿಯಾದ ಮೊಹಮ್ಮದ್ ಸಿನಾನ್ ಎಂಬವರು ಸೇರಿಕೊಂಡು ಉಪ್ಪಿನಂಗಡಿಯ ಅಬ್ದುಲ್ ಅಜೀಜ್ ಮೂಲಕ ಉಪ್ಪಿನಂಗಡಿಯ ಸಮೀರ್ ಎಂಬಾತನಿಂದ ಎಂಬಾತನಿಂದ ಖರೀದಿ ಮಾಡಿರುವ ನಿಷೇದಿತ ಮಾದಕ ವಸ್ತು ಎಂ.ಡಿ.ಎಂ.ಎ ಹರಳನ್ನು ತಮ್ಮ ವಶದಲ್ಲಿ ಇರಿಸಿಕೊಂಡು ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದಂತೆ ಸದ್ರಿ ವ್ಯಕ್ತಿಗಳ ಅಂಗಶೋಧನೆ ಮಾಡಿದಾಗ ಜಾಕೀರ್ ನ ಪ್ಯಾಂಟಿನ ಕಿಸೆಯಲ್ಲಿ ದೊರೆತಿರುವ 1)ಕಪ್ಪು ಮತ್ತು ಕೆಂಪು ಬಣ್ಣದ ನೋಕಿಯಾ ಕಂಪೆನಿಯ TA1212 ಮಾದರಿಯ ಕೀ ಪ್ಯಾಡ್ ಮೊಬೈಲ್ ಪೋನ್-1  ಮೌಲ್ಯ ರೂ.1,000/- 2)ಸುಮಾರು 10 ಗ್ರಾಂ ತೂಕದ ಬಿಳಿ ಬಣ್ಣದ ಹರಳಿನಂತಿರುವ MDMA ಮಾದಕ ವಸ್ತು ಇರುವ ಜಿಪ್ ಪ್ಲಾಸ್ಟಿಕ್ ಪ್ಯಾಕೇಟ್-1 ಮೌಲ್ಯ ರೂ.50,000/- 3)ನಗದು ಹಣ ರೂ.1,700/- ಮತ್ತು ಮಾದಕ ವಸ್ತು ಎಂಡಿಎಂಎ ನ್ನು ಮಾರಾಟ ಮಾಡಲು ಬಂದಿರುವ ಸ್ಕೂಟರ್‍ ನ ಢಿಕ್ಕಿಯಲ್ಲಿ ಇರಿಸಿದ್ದ 4)ಸಣ್ಣ ಸಣ್ಣ ಖಾಲಿ ಪ್ಲಾಸ್ಟಿಕ್ ಲಕೋಟೆಗಳು-30  5)ಸಿಲ್ವರ್ ಬಣ್ಣದ ಡಿಜಿಟಲ್ ತೂಕ ಮಾಪನ-1 ಮೌಲ್ಯ ರೂ.500/-  6)ಕೆಎ-19-ಹೆಚ್.ಎನ್-1260 ನೇ ಕಪ್ಪು ಬಣ್ಣದ ಆ್ಯಕ್ಟಿವ ಸ್ಕೂಟರ್-1 ಇದರ ಅಂದಾಜು ಮೌಲ್ಯ ರೂ.1,00,000/- ಮತ್ತು ಕಾರ್ತಿಕ್ ಸುವರ್ಣನ ಪ್ಯಾಂಟಿನ ಕಿಸೆಯಲ್ಲಿಟ್ಟಿದ್ದ 7)ಕಪ್ಪು ಬಣ್ಣದ OPPO ಕಂಪೆನಿಯ F21s5G ಮಾದರಿಯ ಸ್ಮಾರ್ಟ್ ಮೊಬೈಲ್ ಪೋನ್-1 ಮೌಲ್ಯ ರೂ.10,000/- 8)ಸುಮಾರು 10 ಗ್ರಾಂ ತೂಕದ ಬಿಳಿ ಬಣ್ಣದ ಹರಳಿನಂತಿರುವ MDMA ಮಾದಕ ವಸ್ತು ಇರುವ ಜಿಪ್ ಪ್ಲಾಸ್ಟಿಕ್ ಪ್ಯಾಕೇಟ್-1 ಮೌಲ್ಯ ರೂ.50,000/- 9)ನಗದು ಹಣ ರೂ.1,600/- ನ್ನು ಸ್ವಾಧೀನಪಡಿಸಿಕೊಂಡ ಸೊತ್ತುಗಳನ್ನೆಲ್ಲ ದಾಖಲಾತಿಯೊಂದಿಗೆ ಹಾಗೂ ವಶಕ್ಕೆ ತೆಗೆದುಕೊಂಡ ಆರೋಪಿಗಳೊಂದಿಗೆ ಠಾಣೆಗೆ ತಂದು ಹಾಜರುಪಡಿಸಿ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

ಇತ್ತೀಚಿನ ನವೀಕರಣ​ : 23-09-2023 02:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080