ಅಭಿಪ್ರಾಯ / ಸಲಹೆಗಳು

Crime Report in  Mangalore East Traffic PS                               

ಪಿರ್ಯಾದಿದಾರರಾದ  ದಿನೇಶ ಶರ್ಮಾರವರು ತನ್ನ ಶ್ರೀಮತಿಯಾದ ಮೋಹಿನಿ ಶರ್ಮಾ ರವರು ಮತ್ತು ಅವರ ಮಗು ವಿನಾಯಕ್  ಶರ್ಮಾನನ್ನು  ಜೊತೆಯಲ್ಲಿ  ಕರೆದುಕೊಂಡು KA-21-R-0866  ನೊಂದಣಿ ನಂಬ್ರದ ದ್ವಿಚಕ್ರ ವಾಹನವನ್ನು  ಸವಾರಿ ಮಾಡುತ್ತಾ ಶಕ್ತಿನಗರದಿಂದ  ಕುದ್ರೋಳಿ ದೇವಸ್ಥಾನಕ್ಕೆಂದು ಹೊರಟು  ಕೆಪಿಟಿ  ಮಾರ್ಗವಾಗಿ ಬರುತ್ತಾ ಸಮಯ ಸುಮಾರು 19:40 ಗಂಟೆ ಸುಮಾರಿಗೆ ಬಟ್ಟಗುಡ್ಡ  ಜಂಕ್ಷನ್ ಬಳಿಯ ರಸ್ತೆ ಉಬ್ಬು ಬಳಿ ಬಂದು ತಲಪುತಿದ್ದಂತೆ ಕೆಪಿಟಿ   ಕಡೆಯಿಂದ  ಬಟ್ಟಗುಡ್ಡ ಕಡೆಗೆ  KA-19AD-8125 ನೇದರ (ರೂಟ್ ನಂಬ್ರ-17) ಬಸ್ಸನ್ನು  ಅದರ ಚಾಲಕ ಅಜಾಗರೂಕತೆಯಿಂದ  ಮತ್ತು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸ್ಕೂಟರ್  ಹಿಂದುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ  ಸ್ಕೂಟರ್ ಸವಾರರೆಲ್ಲರೂ ವಾಹನ ಸಮೇತ ರಸ್ತೆ ಮೇಲೆ ಬಿದ್ದಿದ್ದು ಅಪಘಾತದಲ್ಲಿ   ಪಿರ್ಯಾದಿದಾರರ ಕಾಲುಗಳಿಗೆ ಅಲ್ಪ ಸ್ವಲ್ಪದ  ಗಾಯ ,ಮಗು ವಿನಾಯಕ ಶರ್ಮಾನಿಗೆ ಗುದ್ದಿದ ನಮೂನೆ ಗಾಯ ಮತ್ತು ಶ್ರೀಮತಿ ಮೋಹಿನಿ ಶರ್ಮಾರವರಿಗೆ  ಸೊಂಟದ ಭಾಗಕ್ಕೆ ಬಲವಾದ ಪೆಟ್ಟಾಗಿದ್ದು ಗಾಯಾಳುಗಳನ್ನು ಯಾರೋ ಸಾರ್ವಜನಿಕರು ತಮ್ಮ ಕಾರೋಂದರಲ್ಲಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಿರುತ್ತಾರೆ.ಗಾಯಾಳು ಮೋಹಿನಿ ಶರ್ಮಾರವರನ್ನು ಪರೀಕ್ಷಿಸಿದ ವೈದ್ಯರು ಸದ್ರಿರವರ ಪೆಲ್ವಿಕ್ ಮೂಳೆ ಮುರಿತದ ಗಾಯವಾಗಿರುತ್ತದೆ ಎಂಬುದಾಗಿ ತಿಳಿಸಿ ಒಳರೋಗಿ ಚಿಕಿತ್ಸೆ ನೀಡಿರುತ್ತಾರೆ ಎಂಬಿತ್ಯಾದಿ.

Mangalore East Traffic PS        

ದಿನಾಂಕ 21-10-2023 ರಂದು ಪಿರ್ಯಾದಿದಾರರಾದ ಶ್ರೀಮತಿ ಉಷಾ ರವರು ತನ್ನ ಮಗ ಧ್ರುವ ಮತ್ತು ಮನೋಜನನ್ನು ಕರೆದುಕೊಂಡು ತಾನು ಹಾಲಿ ವಾಸ ಮಾಡಿಕೊಂಡಿರುವ ಅತ್ತಾವರದಲ್ಲಿರುವ ನಿರ್ಮಾಣ ಹಂತದ ಮೋತಿಶ್ಯಾಮ್ ಗಾರ್ಡಿಯನ್ ಕಸ್ಟ್ರಕ್ಷನ್ ಕಟ್ಟಡದ ಹತ್ತಿರವಿರುವ ಕಿರಾಣಿ ಅಂಗಡಿಗೆ ತೆರಳಿ ವಾಪಾಸ್ ಬರುವರೆ ಅತ್ತಾವರ ಆದಾಯ ತೆರಿಗೆ ಕಛೇರಿಯ ಎದುರುಗಡೆ ರಸ್ತೆಯನ್ನು ದಾಟುತ್ತಿದ್ದಾಗ ಮಧ್ಯಾಹ್ನ ಸಮಯ ಸುಮಾರು 1.20 ಗಂಟೆಗೆ ಕೆ.ಎಂ.ಸಿ ಅತ್ತಾವರ ಕಡೆಯಿಂದ KA-19-AB-6290 ನೊಂದಣಿ ನಂಬ್ರದ ಆಟೋರಿಕ್ಷಾವನ್ನು ಅದರ ಚಾಲಕ ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಧ್ರುವನಿಗೆ ಢಿಕ್ಕಿಹೊಡೆದ ಪರಿಣಾಮ ಅವನು ರಸ್ತೆಗೆ ಬಿದ್ದಿದ್ದು, ಎಡಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಉಂಟಾದವನನ್ನು ಸಾರ್ವಜನಿಕರ ಸಹಾಯದಿಂದ ಅಪಘಾತಪಡಿಸಿದ ಆಟೋರಿಕ್ಷಾದಲ್ಲಿಯೇ ಹತ್ತಿರದ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡು ಶಸ್ತ್ರಚಿಕಿತ್ಸೆ ನಡೆಸಿರುತ್ತಾರೆ. ಅಪಘಾತಪಡಿಸಿದ ಆಟೋರಿಕ್ಷಾ ಚಾಲಕ ವೆನ್ಲಾಕ್ ಆಸ್ಪತ್ರೆಯಲ್ಲಿ ಗಾಯಾಳುವನ್ನು ಬಿಟ್ಟು ಅಲ್ಲಿಂದ ಹೋಗಿದ್ದು, ಆತನ ಹೆಸರು ತಿಳಿದುಬಂದಿರುವುದಿಲ್ಲ ಎಂಬಿತ್ಯಾದಿ.

Mangalore East PS

ಮಂಗಳೂರು ಪೂರ್ವ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಉಮೇಶ್ ಕುಮಾರ ಎಮ್ ,ಎನ್ ದಿನಾಂಕ 21-10-2023 ರಂದು 23;00 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಸುಮಾರು  ರಾತ್ರಿ 01:00 ಗಂಟೆಗೆ ಮಂಗಳೂರು ನಗರದ ಯೆಯ್ಯಾಡಿ ಬಳಿಯಲ್ಲಿ ಓರ್ವ ವ್ಯಕ್ತಿ ರಸ್ತೆಯಲ್ಲಿ ತೂರಾಡುತ್ತಿದ್ದು, ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದಿದ್ದು. ಆತನನ್ನು ವಶಕ್ಕೆ ಪಡೆದುಕೊಂಡಿದ್ದು,ಆತನ ಹೆಸರು ವಿಳಾಸ ಕೇಳಲಾಗಿ ತನ್ನ ಹೆಸರು ಪ್ರಶಾಂತ ಕುಮಾರ ಪ್ರಾಯ 41 ವರ್ಷ ವಾಸ: ಶಿವ ಪ್ರಭ ನಿವಾಸ ನಂದನಪುರ ಕಾವೂರು ಆಕಾಶ ಭವನ ರೋಡ್ ಮಂಗಳೂರು.ಎಂಬುದಾಗಿ ತಿಳಿಸಿದ್ದು ಆತನನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟ ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ TETRAHYDARCANNABINOID(MARIJUANA) 50ng per ml POSITIVE ಸೇವನೆ ಮಾಡಿರುವುದಾಗಿ ವರದಿ ನೀಡಿರುತ್ತಾರೆ.ಅದುದರಿಂದ ಈತನ ವಿರುದ್ದ NARCOTIC DRUGS AND PSYCHOTROPIC SUBSTANCES ACT 1985 ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Surathkal PS    

ದಿನಾಂಕ 20-10-2023 ರಂದು ಪಿರ್ಯಾದಿದಾರರಾದ ಪ್ರಸಾದ್ (29) ಎಂಬವರ ಅಣ್ಣನಾದ ಸುರೇಂದ್ರ (31) ರವರು ಬೆಳಿಗ್ಗೆ 07.45 ಗಂಟೆಗೆ ಕೆಲಸಕ್ಕೆಂದು ಹೋದವರು ಎಂದಿನಂತೆ ರಾತ್ರಿ 8:30 ಗಂಟೆಯಾದರು ಮನೆಗೆ ವಾಪಸು ಬಾರದೇ ಇದ್ದು ನಂತರ ಅವರ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ ಮರು ದಿನ ಈ ಬಗ್ಗೆ ಪಿರ್ಯಾದಿದಾರರು ತನ್ನ ಸಂಬಂಧಿಕರಲ್ಲಿ ಮತ್ತು ಕಾಣೆಯಾದ ಸುರೇಂದ್ರನ ಸ್ನೇಹಿತರಲ್ಲಿ ಹಾಗೂ ಎಲ್ಲಾ ಕಡೆ ವಿಚಾರಿಸಿದ್ದಲ್ಲಿ ಸುರೇಂದ್ರ ರವರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿರುವುದಿಲ್ಲ ಕಾಣೆಯಾದ  ಸುರೇಂದ್ರ ರವರನ್ನು ಪತ್ತೆಹಚ್ಚಿ ಕೊಡಬೇಕಾಗಿ ಕೋರಿಕೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 23-10-2023 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080