ಅಭಿಪ್ರಾಯ / ಸಲಹೆಗಳು

Crime Report in  :  Traffic South Police Station

ದಿನಾಂಕ: 22-11-2023 ರಂದು ರಾತ್ರಿ ಪಿರ್ಯಾದಿ SHOBHA ದಾರರು ಹಾಲು ತರಲೆಂದು ಮನೆಯಿಂದ ಗೊರಿಗುಡ್ಡ ಬಸ್ಸ ನಿಲ್ದಾಣದ ಬಳಿ ಇರುವ ಅಂಗಡಿಗೆ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 09.00 ಗಂಟೆಗೆ ಪಂಪ್ ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹೋಗುವ ರಾ.ಹೆ-66 ರ ಡಾಮಾರು ರಸ್ತೆಯನ್ನು ಪಿರ್ಯಾದಿದಾರರು ದಾಟುತ್ತಿದ್ದಾಗ ಅದೇ ರಸ್ತೆಯಲ್ಲಿ ಅಂದರೆ ಪಂಪ್ ವೆಲ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹೋಗುತ್ತಿದ್ದ ಸ್ಕೂಟರ್ ನಂಬ್ರ KA-19-X-8855 ನೇದರ ಸವಾರ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಓಮ್ಮೆಲೇ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ್ದು, ಇದರ ಪರಿಣಾಮ ಪಿರ್ಯಾದಿದಾರರು ಹಾಗೂ ಸ್ಕೂಟರ್ ಸವಾರ ಮತ್ತು ಸಹ ಸವಾರ ಸ್ಕೂಟರ್ ಸಮೇತಾ ಡಾಮಾರು ರಸ್ತೆಗೆ ಬಿದ್ದಿದ್ದವರನ್ನು ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ಪಿರ್ಯಾದಿದಾರರನ್ನ ಹಾಗೂ ಸ್ಕೂಟರ್ ಸವಾರನನ್ನ ವಾಹನವೊಂದರಲ್ಲಿ ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಅಲ್ಲಿ ಪಿರ್ಯಾದಿದಾರರನ್ನ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿ ಪಾಧರ್ ಮುಲ್ಲರ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ.ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಮುಖದ ಎಡಭಾಗ, ತಲೆಯ ಎಡಭಾಗಕ್ಕೆ ತೀವ್ರತರಹದ ಗಂಬೀರ ಸ್ವರೂಪದ ರಕ್ತ ಗಾಯ, ಭುಜ ಹಾಗೂ ಮೊಣಕಾಲು ಎಡಭಾಗಕ್ಕೆ ಗುದ್ದಿದ ಗಾಯ ಆಗಿರುತ್ತದೆ. ಹಾಗೂ ಅಪಘಾತಪಡಿಸಿದ ಸ್ಕೂಟರ್ ಸವರನಾದ ಎಂ ಗಗನ್ ರವರಿಗೆ ಮುಖಕ್ಕೆ ಹಾಗೂ ಕೈ ಕಾಲುಗಳಿಗೆ ತರಚಿದ ರಕ್ತ ಗಾಯವಾಗಿರುತ್ತದೆ. ಈ ಅಪಘಾತಕ್ಕೆ ಸ್ಕೂಟರ್ ನಂಬ್ರ KA-19-X-8855 ನೇದರ ಸವಾರನಾದ ಎಂ ಗಗನ್ ರವರ ದುಡುಕುತನ ಹಾಗೂ ನಿರ್ಲಕ್ಷತನದ ಚಾಲನೆಯಿಂದ ಆಗಿರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.   

Bajpe PS

ಪಿರ್ಯಾದಿ Pradeep Kumar ದಾರರು ದಿನಾಂಕ 22.11.2023 ರಂದು ಕೆಲಸವನ್ನು ಮುಗಿಸಿಕೊಂಡು ತನ್ನ ಕಾರು ನಂ KA20 N 2711 ನೇ ದರಲ್ಲಿ ಮನೆಗೆ ಹೋಗುವ ಸಮಯ ರಾತ್ರಿ 9.10 ಗಂಟೆಗೆ ಮಂಗಳೂರು ತಾಲೂಕು ಬಡಗುಳಿಪಾಡಿ ಗ್ರಾಮದ ಗಂಜಿಮಠ ಗಣಪತಿ ದೇವಸ್ಥಾನದ ಎದುರು ಇಂಡಸ್ಟ್ರೀಯಲ್ ಏರಿಯಕ್ಕೆ ಹೋಗುವ ರಸ್ತೆಯ ಎದುರು ತಲುಪುತಿದ್ದ ಹಾಗೆ ರಾಷ್ಡ್ರೀಯ ರಸ್ತೆಯಲ್ಲಿ ಪಿರ್ಯಾದಿದಾರರ ಎದುರು ಅಂದರೆ ಕೈಕಂಬ ಕಡೆಯಿಂದ ಮೂಡಬಿದ್ರೆ ಕಡೆಗೆ ಹೋಗುತಿದ್ದ ಮಾಸ್ಟರ್ ಬಸ್ಸು KA19 AC 0789 ನೇದರ ಚಾಲಕನಾದ ತನ್ವೀರ್ ಎಂಬಾತನು ತನ್ನ ಬಸ್ಸನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಇನ್ನೊಂದು ಬಸ್ಸನ್ನು ಓವರ್ ಟೇಕ್ ಮಾಡುವಾಗ ಮೂಡಬಿದ್ರೆಕಡೆಯಿಂದ ಬರುತಿದ್ದ KA19 HP 8217 ನೇ  ಆಕ್ಟೀವಾ ಸ್ಕೂಟರ್ ಗೆ ಡಿಕ್ಕಿ ಹೊಡೆದಿರುತ್ತದೆ ನಂತರ ಪಿರ್ಯಾದಿದಾರರು ಕೂಡಲೇ ಸ್ಥಳಕ್ಕೆ ಹೋಗಿ ನೋಡಲಾಗಿ ಸ್ಕೂಟರ್ ಚಾಲಕನು ಪಿರ್ಯಾದಿದಾರರಿಗೆ ಪರಿಚಯದ ಪಡುಕೊಣಾಜೆ ಹೌಧಲ್ ನಿವಾಸಿ ಗೋಪಾಲ್ ನಾರಯಣ್ ಪೂಜಾರಿ(54)  ಎಂಬುದಾಗಿ ತಿಳಿದಿದ್ದು ಕೂಡಲೇ ಪಿರ್ಯಾದಿದಾರರು ಗಾಯಾಳುವನ್ನು ಅಂಬುಲೆನ್ಸ್ ಮೂಲಕ ಮಂಗಳೂರು ತೇಜಸ್ವೀ ಆಸ್ಪತ್ರೆಗೆ ದಾಖಲಿಸಿದ್ದು ಅವರಿಗೆ ಚಿಕಿತ್ಸೆಯನ್ನು ನೀಡಿ ಸ್ವಲ್ಪ ಸಮಯದ ನಂತರ ವೈಧ್ಯಧಿಕಾರಿಯವರು ಗೋಪಾಲ ನಾರಯಣ ಪೂಜಾರಿಯವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ     

Konaje PS

ದಿನಾಂಕ 22/10/2023 ರಂದು ರಾತ್ರಿ 11.00 ಗಂಟೆಗೆ ಪಿರ್ಯಾದಿದಾರರ ಮಗ ಪಕ್ವಾನ್ ಎಂಬುವವರು ಕೆಎ 19 ಇವಿ 2761 ಗ್ರೇ ಕಲರಿನ ಡಿಯೋ ಸ್ಕೂಟರ್ ನ್ನು ಅವರ ಮನೆ Amblamogaru ಯ ಅಂಗಳದಲ್ಲಿ ಪಾರ್ಕ ಮಾಡಿ ನಿಲ್ಲಿಸಿದ್ದು ಮರು ದಿನ ತಾರೀಕು 23/10/2023 ರಂದು ಬೆಳ್ಳಿಗ್ಗೆ ಸುಮಾರು 05 ಗಂಟೆಗೆ ನೋಡಿದಾಗ ಸದ್ರಿ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಅದರ ಅಂದಾಜು ಮೌಲ್ಯ. ರೂಪಾಯಿ 23,000/- ಆಗಬಹುದಾಗಿದ್ದು ಅಂದಿನಿಂದ ಈ ತನಕ ಅನೇಕ ಕಡೆಗಳಲ್ಲಿ ಹುಡುಕಾಡಿ ವಿಚಾರಿಸಿದ್ದು ಡಿಯೋ ಸ್ಕೂಟರ್ ಪತ್ತೇಯಾಗದೇ ಇದ್ದುದರಿಂದ ಈ ದಿನ ತಾರೀಕು 22/11/2023 ರಂದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Bajpe PS

ಪಿರ್ಯಾದಿ Harish Shetty ದಾರರು ಮಂಗಳೂರು ತಾಲೂಕು ಪೆರ್ಮುದೆ ಗ್ರಾಮದ ಸುಪ್ರಿತ್ ಕಂಪೌಂಡ್ ಎಂಬಲ್ಲಿ ವಾಸವಾಗಿದ್ದು ಸುಮಾರು 10 ವರ್ಷಗಳಿಂದ ಮಂಗಳೂರಿನಲ್ಲಿ ವಾಸವಾಗಿದ್ದು ಪೆರ್ಮುದೆಯಲ್ಲಿರುವ ಮನೆಗೆ ಬೀಗ ಹಾಕಿದ್ದು ಆಗಾಗ್ಗೆ ಮನೆಗೆ ಬಂದು ನೋಡಿಕೊಂಡು ಹೋಗುತಿದ್ದು ದಿನಾಂಕ 22.11.2023 ರಂದು ನೆರೆಕರೆಯವರಾದ ಶಾಂತಪ್ಪ ಎಂಬುವರು ಪಿರ್ಯಾದಿದಾರರಿಗೆ ಕರೆ ಮಾಡಿ ನಿಮ್ಮ  ಮನೆಯ ಹಿಂಬಾಗದ ಬಾಗಿಲನ್ನು ನಿನ್ನೆ ರಾತ್ರಿ ಯಾರೋ ಕಳ್ಳರು ಜಖಂಗೊಳಿಸಿ ಮನೆಯ ಕಳ್ಳತನ ಮಾಡಿರುವ ವಿಷಯವನ್ನು ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲನ್ನು ಮುರಿದು ಮೆನಯೊಳಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾ ಪಿಲ್ಲಿಯಾಗಿಸಿ ಮನೆಯಲ್ಲಿದ್ದ ಸೋನಿ ಕಂಪನಿಯ 2 ಟಿವಿಗಳು ಹಾಗೂ ಅಡುಗೆ ಮನೆ ಮತ್ತು ಐದು ಬಾತ್ ರೂಮಿನಲ್ಲಿ ಅಳವಡಿಸಿದ್ದ ಜಗ್ವಾರ್ ಕಂಪನಿಯ ಟ್ಯಾಪ್ ಸೆಟ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತುಗಳ ಅಂದಾಜು ಮೌಲ್ಯ ರೂ 75.000/- ರೂ ಆಗಬಹುದು ಈ ಘಟನೆಯು ದಿನಾಂಕ 21.11.2023 ರ ಬೆಳಗ್ಗೆ 11.00 ಗಂಟೆಯಿಂದ ದಿನಾಂಕ 22.11.2023ರ ಬೆಳಗ್ಗೆ 06.00 ಗಂಟೆಯ ಸಮಯದಲ್ಲಿ ಆಗಿರಬಹುದು ಎಂಬಿತ್ಯಾದಿ

Surathkal PS

ಪಿರ್ಯಾದಿದಾರರಾದ  ಹಸನಬ್ಬ ರವರ ತಮ್ಮ ಉಸ್ಮಾನ್ ಅಹಮ್ಮದ್ (44) ಎಂಬವರು ಕಾನಾ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು ಡೋರ್ ನಂ 1-116/7, ಬೈತುಲ್ ಝಿಸಾನಾ ಮಂಜಿಲ್ MSEZ ಕಾಲೋನಿ, ಕುಳಾಯಿ, ಕೃಷ್ಣನಗರದಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸ ಮಾಡಿಕೊಂಡಿರುತ್ತಾರೆ ದಿನಾಂಕ: 08-11-2023 ರಂದು ನನ್ನ ಹಾಗೂ ಹೆಂಡತಿಯ ಮಧ್ಯೆ ಸಾಲದ ವಿಚಾರವಾಗಿ ಜಗಳವಾಗಿದ್ದು ನನ್ನ ಹೆಂಡತಿ ನನ್ನ ಮಕ್ಕಳನ್ನು ನನ್ನ ಮನೆಯಲ್ಲಿಯೇ ಬಿಟ್ಟು ಮುಕ್ಕದಲ್ಲಿರುವ ತನ್ನ ತಾಯಿಯ ಮನೆಗೆ ಹೋಗಿದ್ದು ಎರಡು ದಿನಗಳ ಬಳಿಕ ನಾನು ಮಕ್ಕಳನ್ನು ಮುಕ್ಕದಲ್ಲಿರುವ ನನ್ನ ಹೆಂಡತಿಯ ಮನೆಯಲ್ಲಿ ಬಿಟ್ಟು ಬಂದಿರುವುದಾಗಿ ಪಿರ್ಯಾದಿದಾರರಿಗೆ ತಿಳಿಸಿರುತ್ತಾರೆ  ದಿನಾಂಕ: 15-11-2023 ರಂದು ಬೆಳಿಗ್ಗೆ 11-00 ಗಂಟೆಗೆ ಪಿರ್ಯಾದಿದಾರರು ತನ್ನ ತಮ್ಮ ಉಸ್ಮಾನ್ ಅಹಮ್ಮದ್ ರವರಿಗೆ ಪೋನ್ ಕರೆ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿದ್ದು ನಂತರ ಪಿರ್ಯಾದಿದಾರರು ಉಸ್ಮಾನ್ ಅಹಮ್ಮದ್ ರವರ ಮನೆ ತೆರಳಿ ಹುಡುಕಾಡಿದಾಗ ಮನೆಯಲ್ಲಿ ಇರಲಿಲ್ಲ ನಂತರ ತನ್ನ ಸಂಬಂಧಿಕರ ಮನೆಯಲ್ಲಿ ಹಾಗೂ ಸ್ನೇಹಿತರ ಮನೆಯಲ್ಲಿ ವಿಚಾರಿಸಿದಾಗ ಎಲ್ಲಿಯೂ ಕಾಣದೇ ಇದ್ದು ಸುಮಾರು ಒಂದು ವಾರದಿಂದ ಹುಡುಕಾಡಿದರೂ ಪತ್ತೆಯಾಗದೇ ಇದ್ದು ಉಸ್ಮಾನ್ ಅಹಮ್ಮದ್ ರವರು ಈತನಕ ಮನೆಗೆ ವಾಪಾಸು ಬಾರದೇ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 23-11-2023 07:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080