ಅಭಿಪ್ರಾಯ / ಸಲಹೆಗಳು

Crime Report in : Panambur PS                

ಪಿರ್ಯಾದಿ Zameer ದಾರರು ತನ್ನ ಬಾಬ್ತು ಕೆಎ-19 HP 1401 ಡಿಯೋ ದ್ವೀ ಚಕ್ರ ವಾಹನವನ್ನು ದಿನಾಂಕ-21-12-2023 ರಂದು ತನ್ನ ದ್ವೀ ಚಕ್ರ ವಾಹನವನ್ನು ಕಸಬಾ ಬೇಂಗ್ರೆಯ ಎಮ್.ಎಸ್ ಸ್ಟೋರ್ ನ ಹಿಂಭಾಗದ ತನ್ನ ಮಾವ ರಮ್ಲನ್ ರವರ ಮನೆಯ ಕಂಪೌಂಡ್ ಒಳಗೆ ರಾತ್ರಿ 11.30ಕ್ಕೆ ಇಟ್ಟು, ಪಿರ್ಯಾದಿದಾರರು ಮತ್ತು ಅವರ ಮಾವನ ಮಗ ಹುಸೈನ್ ಮನೆಯ ಎದುರಿನ ಹಾಲ್ ನಲ್ಲಿ ಮಲಗಿಕೊಂಡು  ಮಾತಾನಾಡುತ್ತಿದ್ದಾಗ  ರಾತ್ರಿ 02.15 ಗಂಟೆ ಸುಮಾರಿಗೆ   ಪಿರ್ಯಾದಿದಾರರು ಸ್ಕೂಟರ್ ನಿಲ್ಲಿಸಿದ್ದ ಕಡೆಯಿಂದ ಡಬ್ಬ್ ಎಂದು   ಶಬ್ದ ಕೇಳಿತು.ಕೂಡಲೇ ಪಿರ್ಯಾದಿದಾರರು ಮತ್ತು ಹುಸೈನ್ ಕಿಟಿಕಿಯಲ್ಲಿ ನೋಡಿದಾಗ. ಡಿಯೋ ವಾಹನದ ಸುತ್ತ ಬೆಂಕಿ ಇತ್ತು.. ಪಿರ್ಯಾದಿದಾರರು ಬೊಬ್ಬೆ ಹಾಕುತ್ತಾ ಮನೆಯಿಂದ ಹೊರಗೆ ಬಂದಾಗ ಪರಿಚಯದ ಬೇಂಗ್ರೆಯ ಸಫ್ವಾನ್, ತಂದೆ-ಮೂಸ ಎಂಬವನು ಬಾಟಲ್ ಒಂದನ್ನು ಬಿಸಾಡಿ ಕಂಪೌಂಡ್ ಒಳಗಿಂದ  ಹೊರಗಡೆ ಓಡಿ ಹೋಗಿ ದೂರದಲ್ಲಿ ನಿಲ್ಲಿಸಿದ್ದ ಎಕ್ಸಿಸ್ ಗಾಡಿಯಲ್ಲಿ ಓಡಿ ಹೋದ. ಪಿರ್ಯಾದಿದಾರರು ಮತ್ತೆ ಹುಸೈನ್ ಡಿಯೋ ವಾಹನದ  ಹತ್ತಿರ ಹೋಗಿ ನೋಡಿದಾಗ ಪೆಟ್ರೋಲ್ ತುಂಬಿದ ಖಾಲಿ ಬಾಟಲಿ ಬಿದ್ದು ಕೊಂಡಿದ್ದು ಸ್ಕೂಟರ್ ಮುಂಭಾಗ ಮತ್ತು ಹಿಂಭಾಗ , ಸೀಟಿನ ಭಾಗ ಬೆಂಕಿಯಿಂದ ಆವರಿಸಿತ್ತು. ಕೂಡಲೇ ಸ್ಥಳದಲ್ಲಿದ್ದ ಹೊಯಿಗೆಯನ್ನು ಮತ್ತು ನೀರನ್ನು ಬೆಂಕಿ ಮೇಲೆ ಹಾಕಿ ಆರಿಸಿದ್ದು. ಸ್ಕೂಟರ್ ನ ಸೀಟಿನ ಮುಂಭಾಗ, ಹಿಂಭಾಗ,  ಹ್ಯಾಂಡಲ್ , ಮೀಟರ್, ಬ್ರೇಕ್  , ಸ್ಕೂಟರ್ ನ ಎರಡು ಬದಿಗಳು , ಸೀಟಿನ ಕೆಳಭಾಗದ ಬಾಕ್ಸ್ ಮುಂತಾದ ಕಡೆಯಲ್ಲಿ ಬೆಂಕಿಯಿಂದ ಹೊತ್ತಿ ಉರಿದು ಸುಟ್ಟು ಹೋಗಿದ್ದು ಇದರಿಂದ ಸುಮಾರು 75,000 ರೂಪಾಯಿಗಳಷ್ಟು ನಷ್ಟ ಆಗಿರುತ್ತದೆ. ದಿನಾಂಕ 21-12-2023 ರಂದು ಪಿರ್ಯಾದಿದಾರರ ಹೆಂಡತಿ ಸೌಧ ಎಂಬುವರು ಪಣಂಬೂರು ಠಾಣೆಯಲ್ಲಿ ಸಫ್ವಾನ್ ಮತ್ತು ಅವನ ಅಣ್ಣ ಮುನೀಬ್ ನ ಮೇಲೆ ಕೇಸ್ ಕೊಟ್ಟಿರುವುದಕ್ಕೆ, ಅದೇ ಕೋಪದಿಂದ ಉದ್ದೇಶ ಪೂರ್ವಕವಾಗಿ ಸಫ್ವಾನ್ ನನ್ನ ಡಿಯೋ ಸ್ಕೂಟರ್ ಗೆ ಪೆಟ್ರೋಲ್ ತಂದು ಬೆಂಕಿ ಹಾಕಿ ಸುಟ್ಟಿರುತ್ತಾನೆ ಎಂಬಿತ್ಯಾದಿ.

Kavoor PS

ಪಿರ್ಯಾದಿದಾರರಾದ ರಾಜು (32) ರವರ ಬಾವ ಶಿವ ಪ್ರಕಾಶ್ ರವರ ಹೆಸರಿನಲ್ಲಿ  KA-19-ED-7011 ಸ್ಪೇಂಡರ್ ಪ್ರೋ ನೇದನ್ನು ಹೊಂದಿರುತ್ತಾರೆ  ಸದರಿ ಬೈಕ್ ನ್ನು ಪಿರ್ಯಾದಿದಾರರು ಉಪಯೋಗ ಮಾಡುವುದಾಗಿದೆ ದಿನಾಂಕ 9-11-2023 ರಂದು  ಬೇಳಿಗ್ಗೆ 11-00 ಗಂಟೆಗೆ ಕೆಲಸದ ಬಗ್ಗೆ ಹೋಗಲು ಸದರಿ ಬೈಕ್ ನ್ನು ಗಾಂಧೀನಗರ ಮಲ್ಲಿ ಲೇಜೌಟ್ ನಲ್ಲಿ ಬಳಿ ಪಾರ್ಕ್ ಮಾಡಿ  ಮಂಗಳೂರು ಕಡೆಗೆ ಹೋಗಿರುತ್ತಾರೆ  ನಂತರ ಕೆಲಸ ಮುಗಿಸಿ ಸಜೆ 5 ಗಂಟೆಗೆ ಬಂದು ನೋಡಿದಾಗ  ಬೈಕ್ ಇಲ್ಲದೇ ಇದ್ದು ಯರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ,ನಂತರ ದಿನದಿಂದ ಈ ದಿನದವರಗೆ ಕಳವು ಆದ ಬೈಕ್ ನ್ನು ಮಂಗಳೂರು ನಗರ ಗಳಲ್ಲಿ ಹುಡುಕಾಡಿದಲ್ಲಿ ಎಲ್ಲಿಯೂ ಪತ್ತೆಯಾಗದೇ ಇದ್ದು ಈ ದಿನ ಬೈಕ್ ಕಳ್ಳತನವಾದ ಬಗ್ಗೆ ದೂರು ನೀಡುವುದಾಗಿದೆ ಕಳ್ಳತನವಾದ ಬೈಕ್  2011 ನೇದರ ಮಾಡೆಲ್ ಆಗಿದ್ದು ಇದರ  ಅಂದಾಜು ಮೌಲ್ಯ ರೂ 20000/- ಆಗಬಹದು

Mangalore East PS

ಫಿರ್ಯಾದಿ MARY T M ದಾರರಾದ ಗಂಡನಾದ ಸುವಿ ಪಿ ಎಮ್ ಪ್ರಾಯ 49 ವರ್ಷ ಕರಂಗಲ್ಪಾಡಿ ಮಂಗಳೂರು ಎಂಬ ವಿಳಾಸದಲ್ಲಿ ವಾಸವಿದ್ದು, ಸುಮಾರು 8 ವರ್ಷಗಳಿಂದ ಖಾಸಗೀ ಮಾಲ್ ನಲ್ಲಿ  ಸ್ಟೋರ್ ಮ್ಯಾನೇಜರ ಆಗಿ ಕಾರ್ಯನಿರ್ವಹಿಸುತ್ತಿದ್ದು ಸದ್ರಿ ಯವರು ಕಂಪನಿ ಕೆಲಸದ ನಿಮಿತ್ತಾ ದಿನಾಂಕ 13-12-2023 ರಂದು ರಾತ್ರಿ ಸುಮಾರು 22:00 ಗಂಟೆಗೆ ಮೇಲಿನ ವಿಳಾಸದಲ್ಲಿರುವ ಮನೆಯಿಂದ ಬೆಂಗಳೂರಿಗೆ ತೆರಳಿರುತ್ತಾರೆ. ನಂತರ ದಿನಾಂಕ 14-12-2023 ರಂದು ಬೆಳ್ಳಗ್ಗೆ ಸುಮಾರು 07:35 ಕ್ಕೆ 9591661806 ಮೊಬೈಲ್ ನಂಬರ್ ನಿಂದ ಕರೆಮಾಡಿ ನಾನು ಬೆಂಗಳೂರಿನಲ್ಲಿ ಇದ್ದೇನೆಂದು ತಿಳಿಸಿರುತ್ತಾರೆ ತದ ನಂತರ ಅದೇ ದಿನ ದಿನಾಂಕ 14-12-2023 ರಂದು ಬೆಳ್ಳಗ್ಗೆ ಸುಮಾರು 10:30 ಕ್ಕೆ ಖಾಸಗೀ ಮಾಲ್ ಕಡೆಯಿಂದ  ಕರೆ ಮಾಡಿ ಸುವಿ ಪಿ ಎಮ್ ರವರು ಕಂಪನಿಯ ಕೆಲಸಕ್ಕೆ ಬಾರದೇ ಗೈರು ಹಾಜರಾಗಿರುವುದಾಗಿ ಕಂಪನಿಯವರು ತಿಳಿಸಿರುತ್ತಾರೆ. ತದ ನಂತರ ಹಲವು ಬಾರಿ ನನ್ನ ಪತಿಯ ಎರಡು ನಂಬರಿಗೂ  ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಬರುತ್ತಿದ್ದು ಅಂದಿನಿಂದ ದಿನಾಂಕ 22-12-2023 ರವರೆಗೂ ಮೊಬೈಲ್ ಸ್ವಿಚ್ ಆಫ್ ಬರುತ್ತಿದೆ. ದಿನ ದಿನಾಂಕ 22-12-2023 ರವರೆಗೆ ಎಲ್ಲಾ ಕಡೆ ಹುಡುಕಾಡಿ ಸಂಬಂಧಿಕರಲ್ಲಿ ಮತ್ತು ಸ್ನೇಹಿತರಲ್ಲಿ, ಇತರೆ ಕಡೆಗಳಲ್ಲಿ ವಿಚಾರಿಸಿದ ನಂತರ  ಠಾಣೆಗೆ ಬಂದು ದೂರು ನೀಡಿರುವುದಾಗಿದೆ. ಆದ್ದರಿಂದ ಕಾಣೆಯಾದ ಸುವಿ ಪಿ ಎಮ್ ರವರನ್ನು ಪತ್ತೆ ಮಾಡಿ ಕೊಡಬೇಕಾಗಿ ಎಂಬಿತ್ಯಾದಿ.

Bajpe PS

ಪಿರ್ಯಾದಿದಾರರಾದ ಡಾII ಮಹದೇಶ್ವರ್ ಹೆಚ್ ಎಸ್ ಭೂವಿಜ್ಞಾನಿ ರವರಿಗೆ ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಮಂಜೊಟ್ಟಿ ಎಂಬಲ್ಲಿ ಖಾಲಿ ನಿವೇಶನ ಸ. ನಂ 33 ರಲ್ಲಿ ಅನಧಿಕೃತವಾಗಿ ಸಾಧಾರಣ ಮರಳನ್ನು ದಾಸ್ತಾನು ಇರಿಸಿರುವ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಗಳು ಜಂಟಿಯಾಗಿ ದಿನಾಂಕ 22.12.2023 ಸಮಯ ಸುಮಾರು 10.30 ಗಂಟೆಗೆ ಸದ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಸ.ನಂ 33/4 ಖಾಲಿ ನಿವೇಶನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ರಾತ್ರಿ ವೇಳೆ ಫಲ್ಗುಣಿ ನದಿಯಿಂದ ಕಳ್ಳತನದಿಂದ ತಂದು ಅನಧಿಕೃತವಾಗಿ 20 ಮೆ.ಟನ್ ಪ್ರಮಾಣದಷ್ಟು ಸಾಧಾರಣ ಮರಳು ದಾಸ್ತಾನಿರುವುದು ಕಂಡು ಬಂದಿರುತ್ತದೆ. ಸದ್ರಿ ಸ್ಥಳದ ಪಹಣಿಯು ಆರೋಪಿ ಎ.ಕೆ ಮಯ್ಯದ್ದಿ ಮಂಜೊಟ್ಟಿ, ಅಡ್ಡೂರು ಗ್ರಾಮ ಎಂಬವರಿಗೆ ಸಂಬಂದಿಸಿದ್ದು, ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳುಬೇಕಾಗಿ ಎಂಬಿತ್ಯಾದಿ.

Bajpe PS

ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಕೆಳಗಿನ ಕೆರೆ ಎಂಬಲ್ಲಿರುವ ಅಂಗನವಾಡಿ ಕೇಂದ್ರದ ಬಳಿ ಅನಧಿಕೃತವಾಗಿ ಮರಳುಗಾರಿಕೆ ನಡೆಯುತ್ತಿರುವುದಾಗಿ, ಪಿರ್ಯಾದಿದಾರರಾದ ಡಾII ಮಹದೇಶ್ವರ್ ಹೆಚ್ ಎಸ್ ಭೂವಿಜ್ಞಾನಿ ರವರ ಕಛೇರಿಗೆ ಸ್ವೀಕೃತವಾದ ದೂರುಗಳ ಸಂಬಂಧ ಉಪ ನಿರ್ದೇಶಕರು ಮತ್ತು ತಾಂತ್ರಿಕ ಸಿಬ್ಬಂದಿಗಳು ಸದ್ರಿ ಸ್ಥಳಕ್ಕೆ ಬಂದು ಫಲ್ಗುಣಿ ನದಿಯಿಂದ ಅನಧಿಕೃತವಾಗಿ ಕಳ್ಳತನದಿಂದ ಸಾಮಾನ್ಯ ಮರಳನ್ನು ತೆಗೆಯುತ್ತಿದ್ದ ದೋಣಿಗಳ ಮೇಲೆ ದಾಳಿ ನಡೆಸಿ ಹಿಡಿಯಲು ಯತ್ನಿಸಿದಾಗ ದೋಣಿಗಳನ್ನು ಬಿಟ್ಟು ಅದರಲ್ಲಿದ್ದ ಕೆಲಸಗಾರರು ನದಿಗೆ ಹಾರಿ ಪರಾರಿಯಾಗಿರುತ್ತಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ತಾಂತ್ರಿಕ ಸಿಬ್ಬಂದಿಗಳು ಮತ್ತು ಸ್ಥಳಿಯರ ಸಹಾಯದಿಂದ 5 ಕಬ್ಬಿಣದ ದೋಣಿಗಳನ್ನು ದಡಕ್ಕೆ ಎಳೆದು ಕೆಳಗಿನ ಕೆರೆಯ ಅಂಗನವಾಡಿ ಎದುರು ಇರುವ ನದಿಯ ತಟದಲ್ಲಿ ಇರಿಸಲಾಗಿದ್ದು, 5 ದೋಣಿಗಳಿಗಳಿಗೆ ಕ್ರಮವಾಗಿ DMG-1, DMG-2, DMG-3, DMG-4 ಹಾಗೂ DMG-5 ಎಂದು ಪ್ರತ್ಯೇಕವಾಗಿ ಸಂಖ್ಯೆಗಳನ್ನು ನೀಡಿದ್ದು, 5 ದೋಣಿಗಳು ಕಬ್ಬಿಣ ದೋಣಿಗಳಾಗಿರುತ್ತವೆ. DMG-2 ಎಂದು ಗುರುತಿಸಿದ ದೋಣಿ ನೀಲಿ ಬಣ್ಣದಿಂದ ಕೂಡಿದ್ದು, ಉಳಿದ ನಾಲ್ಕು ದೋಣಿಗಳಿಗೆ ಬಣ್ಣ ಬಳಿದಿರುವುದಿಲ್ಲ. ಆದುದರಿಂದ ಯಾವುದೇ ಅನುಮತಿ/ಪರವಾನಿಗೆ ಇಲ್ಲದೇ ನದಿಯಿಂದ ಅನಧಿಕೃತವಾಗಿ ಮರಳನ್ನು ಕಳ್ಳತನ ಮಾಡುತ್ತಿದ್ದ ದೋಣಿ ಮಾಲಕರನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುಬೇಕಾಗಿ ಎಂಬಿತ್ಯಾದಿ.

Bajpe PS

ಪಿರ್ಯಾದಿ Mahammad Haris ದಾರರ ಅಣ್ಣನಾದ ಮೊಹಮ್ಮದ್ ಶರೀಫ್ ಇಬ್ರಾಹಿಂರವರು KA19 EC6435ನೇ ನಂಬ್ರದ ಸ್ಕೂಟರ್ ನಲ್ಲಿ ಪಿರ್ಯಾದಿದಾರರ ಮಗನಾದ ಮೊಹಮ್ಮದ್ ಅಯಾನ್ (6 ವರ್ಷ) ಎಂಬಾತನನ್ನು ಬಜಪೆಯಲ್ಲಿರುವ ಬೆತನಿ ಸ್ಕೂಲ್ ಗೆ ಬಿಡಲು ಸಹ ಸವಾರನಾಗಿ ಕೂರಿಸಿಕೊಂಡು ಸುಂಕದಕಟ್ಟೆಯಿಂದ ಹೋಗುತ್ತಿರುವಾಗ, ದಿನಾಂಕ 20.12.2023 ರಂದು ಬೆಳಿಗ್ಗೆ ಸಮಯ ಸುಮಾರು 09.10 ಗಂಟೆಗೆ ಬಜಪೆ ಪೊಲೀಸ್ ಠಾಣೆ ತಲುಪುತ್ತಿದ್ದಂತೆ, ಸ್ಕೂಟರ್ ಸವಾರ ಮೊಹಮ್ಮದ್ ಶರೀಫ್ ಇಬ್ರಾಹಿಂರವರ ದುಡುಕುತನ ಮತ್ತು ನಿರ್ಲಕ್ಷತನದಿಂದ ಸ್ಕೂಟರ್ ಸ್ಕಿಡ್ ಆಗಿದ್ದು, ಇದರಿಂದ ಮೊಹಮ್ಮದ್ ಅಯಾನ್ ರವರು ರಸ್ತೆಗೆ ಬಿದ್ದು, ಅವರ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ.

ಇತ್ತೀಚಿನ ನವೀಕರಣ​ : 23-12-2023 02:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080