ಅಭಿಪ್ರಾಯ / ಸಲಹೆಗಳು

Crime Report in :   Kavoor PS

ಪಿರ್ಯಾದಿ SMT RENUKA RAVI DESOOR ದಾರರು DVIDYANAGAR, Mangaluru City, ವಿಳಾಸದಲ್ಲಿ ಮನೆಯವರೊಂದಿಗೆ ವಾಸವಾಗಿದ್ದು ಪಿರ್ಯಾದಿದಾರರಿಗೆ ರವಿ ಪಕ್ಕಿರಪ್ಪ ದೇಸೂರ (48) ರವರೊಂದಿಗೆ ಮದುವೆಯಾಗಿ  23 ವರ್ಷ  ಆಗಿರುತ್ತದೆ  ಅವರಿಗೆ  ಎರಡು ಜನ ಹೆಣ್ಣುಮಕ್ಕಳು ಇರುತ್ತಾರೆ ಪಿರ್ಯಾದಿದಾರರ  ಗಂಡ ಮಂಗಳೂರು ನಲ್ಲಿ ಗಾರೆ ಕೆಲಸ ಮಾಡುತ್ತಿದ್ದರು ಸುಮಾರು 2021 ನೇ ಇಸವಿಯ ನವಂಬರ್ ತಿಂಗಳಲ್ಲಿ  ಊರಿಗೆ ಹೋಗುವುದಾಗಿ ತಿಳಿಸಿ ಹೋದವರು ಊರಿಗೂ ಹೋಗದೇ ಈ ದಿನದವರೆಗೆ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ . ಇವರು ಕಾಣೆಯಾದ ಬಗ್ಗೆ ಪಿರ್ಯಾದಿದಾರರು ಅವರ ಸಂಬಂಧಿಕರು ಗಂಡನ ಸಂಬಂಧಿಕರಲ್ಲಿ ತಿಳಿಸಿ ಹುಡುಕಾಡಿದಲ್ಲಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲಾ , ಗಂಡನು ವಾಪಸ್ಸು ಮನೆಗೆ ಬರಬಹುದು ಎಂದು  ಕಾದು ಇದ್ದವರು ಈವರೆಗೆ ಮನೆಗೆ ಬರದೇ ಎಲ್ಲಿದಾರೆಂದು ಪತ್ತೆಯಾಗದೇ ಇರುತ್ತಾರೆ ಪಿರ್ಯಾದಿದಾರರಿಗೆ ಕಾನೂನು ಪರಿಜ್ಞಾನವಿಲ್ಲದೇ ಇರುವುದರಿಂದ  ಎರಡು ವರ್ಷಗಳ ನಂತರ  ತಡವಾಗಿ  ಈ ದಿನ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

Moodabidre PS

ಪಿರ್ಯಾದಿದಾರರಾದ ಶ್ರೀ ಗಣೇಶ್ ಭಂಡಾರಿಯವರು ಮೂಡಬಿದ್ರೆಯ ಸ್ವರಾಜ್ ಮೈದಾನದಲ್ಲಿ “Talwar Saloon” ಎಂಬ ಹೆಸರಿನ ಸೆಲೂನ್ ಅಂಗಡಿಯನ್ನು ಇಟ್ಟುಕೊಂಡಿದ್ದು, ದಿನಾಂಕ: 08-01-2023 ರಂದು ರಾತ್ರಿ 10.15 ಗಂಟೆಯಿಂದ ದಿನಾಂಕ: 10-01-2023 ರಂದು ಬೆಳಿಗ್ಗೆ 07.15 ಗಂಟೆಯ ಮಧ್ಯಾವದಿಯಲ್ಲಿ ಯಾರೋ ಕಳ್ಳರು ಸದ್ರಿ ಅಂಗಡಿಯ ಹಿಂದಿನ ಗೋಡೆಯನ್ನು ಯಾವುದೋ ಸಾಧನವನ್ನು ಉಪಯೋಗಿಸಿಕೊಂಡು ಕಿಂಡಿಯ ರೀತಿಯಲ್ಲಿ ಹೊಡೆದು ಅಂಗಡಿಯ ಒಳಗೆ ಪ್ರವೇಶಿಸಿ ಅಂಗಡಿಯಲ್ಲಿದ್ದ Sony ಕಂಪನೀಯ ಸುಮಾರು 40 ಇಂಚು ಅಗಲದ LED-T.V ಹಾಗೂ 1000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳವಾದ T.V ಯ ಅಂದಾಜು ಬೆಲೆ 50,000/- ರೂ ಆಗಬಹುದು ಎಂಬಿತ್ಯಾದಿ

Mangalore East PS

ಫಿರ್ಯಾದಿದಾರರಾದ ಪ್ರಶಾಂತ್ ಆರ್ ನೊರೊನ್ಹಾ ರವರು ಸುಮಾರ 7 ವರ್ಷದಿಂದ ವಿದೇಶವಾದ  ಅಬುದಾಬಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಫಿರ್ಯಾದಿದಾರರು ವಿದೇಶದಿಂದ ವರ್ಷದಲ್ಲಿ ಒಂದು ಬಾರಿ 30 ದಿನಗಳ ರಜೆಯಲ್ಲಿ ಊರಿಗೆ ಬಂದು ಹೋಗುತ್ತಿದ್ದು, ಫಿರ್ಯಾದಿದಾರರು 2019 ರಲ್ಲಿ ಕೊರೋನಾ ಸಮಯದಲ್ಲಿ ಊರಿಗೆ ರಜೆಯಲ್ಲಿ ಬಂದಿದ್ದಾಗ ಫಿರ್ಯಾದಿದಾರರಿಗೆ  ಅಡ್ಯಾರ್ ಪದವು ನಿವಾಸಿ ಅರುಣ್ ರೊನಾಲ್ಡ್ ಡಿಸೋಜಾ ಎಂಬವರು ಪರಿಚಯವಾಗಿದ್ದು, ಅರುಣ್ ರವರು ನನ್ನ ಹೆಂಡತಿಯಲ್ಲಿ ಅಡ್ಯಾರ್ ನಲ್ಲಿ 30 ಸೆಂಟ್ಸ್ ನಷ್ಟು ಕೃಷಿ ಮಾಡುವ ಜಾಗವಿದೆ ಅದು ಈಗ ಕಡಿಮೆ ಹಣಕ್ಕೆ ಬರುತ್ತದೆ. ಹೇಗಾದರೂ ಆ ಜಾಗವನ್ನು ನಿಮ್ಮ ಗಂಡನಲ್ಲಿ ಹೇಳಿ ತೆಗೆದುಕೊಳ್ಳಿ ಎಂದು ಹೇಳಿದ್ದನ್ನು ನನ್ನ ಹೆಂಡತಿ ನನಗೆ ಫೋನ್ ಮಾಡಿ ತಿಳಿಸಿರುತ್ತಾರೆ. ನಂತರ ಅರುಣ್ ರವರು ಕೂಡ ದಿನಾಂಕ: 30-06-2022 ರಂದು ನನಗೆ ವಿದೇಶಕ್ಕೆ ಫೋನ್ ಮಾಡಿ ಜಾಗದ ಬಗ್ಗೆ ಮಾತನಾಡಿ ಸದ್ರಿ ಜಾಗವನ್ನು ತೆಗದುಕೊಳ್ಳಿ ಕಡಿಮೆಗೆ ತೆಗೆಸಿ ಕೊಡುತ್ತೇನೆ ಎಂದು ಒತ್ತಾಯ ಮಾಡುವಂತೆ ಮಾತನಾಡಿರುತ್ತಾರೆ. ಅದಕ್ಕೆ ನಾನು ಈ ಬಗ್ಗೆ ನನ್ನಲ್ಲಿ 6,00,000/- ರೂ ಹಣ ಮಾತ್ರ ಇರುವುದಾಗಿ ಹೇಳಿದಾಗ ಅರುಣ್ ನಿಮ್ಮ ಹೆಂಡತಿಯ ಚಿನ್ನದ ಒಡವೆಗಳನ್ನು ಎಲ್ಲಿಯಾದರೂ ಬ್ಯಾಂಕ್ ನಲ್ಲಿ ಅಡವಿಟ್ಟು ಹಣ ತೆಗೆಯಿರಿ ಎಂದು ಹೇಳಿದ್ದು ಅದರಂತೆ ನಾನು 6,00,000/- ರೂ ನಗದು ಹಣ ಹಾಗೂ ನನ್ನ ಹೆಂಡತಿಯ ವಿವಿದ ರೀತಿಯ ಚಿನ್ನದ ಒಡವೆಗಳ 148.5 ಗ್ರಾಂ ನ್ನು ಅಡವಿಟ್ಟು ಒಟ್ಟು ರೂ 6,56,500/- ಹಣವನ್ನು ನಗದಿನ ರೂಪದಲ್ಲಿ ತೆಗೆದು ಅರುಣ್ ರವರಿಗೆ ನೀಡಿರುತ್ತಾರೆ. ಆದುದರಿಂದ ನನ್ನಲ್ಲಿ ಮತ್ತು ನನ್ನ ಹೆಂಡತಿಯಲ್ಲಿ ಜಾಗಕ್ಕೆ 12,56,500/- ಹಣವನ್ನು ಪಡೆದುಕೊಂಡು ಹಣವನ್ನು ವಾಪಾಸ್ ಕೊಡದೇ ಜಾಗವನ್ನು ನಮ್ಮ ಹೆಸರಿಗೆ ಮಾಡಿ ಕೊಡದೇ ಮೋಸ ಮಾಡಿದ ಬಗ್ಗೆ ಅರುಣ್ ರವರ ವಿರುದ್ದ ಸೂಕ್ತ  ಕಾನೂನು ಕ್ರಮ ಕೈಗೊಳ್ಳು ವರೆ ಕೋರಿಕೆ

Konaje PS

ದಿನಾಂಕ:23-01-2024 ರಂದು ಸಮಯ 12.30 ಗಂಟೆಗೆ ಉಳ್ಳಾಲ ತಾಲೂಕು ಅಂಬ್ಲಮೊಗರು ಗ್ರಾಮದ ಮದಕ ಎಂಬಲ್ಲಿ ಅಮಲು ಪದಾರ್ಥ ಸೇವನೆ ಮಾಡಿ ನಶೆಯಲ್ಲಿದ್ದಂತೆ ಕಂಡು ಬಂದ  ಮೊಹಮ್ಮದ್ ಶರೀಫ್ ಪ್ರಾಯ:29 ವಾಸ: ಮದಕ, ಅಂಬ್ಲಮೊಗರು ಗ್ರಾಮ, ಉಳ್ಳಾಲ  ತಾಲೂಕು ಹಾಗೂ ಮೊಹಮ್ಮದ್ ಸಹಾರುದ್ದಿನ್ ಎಸ್.ಕೆ ಪ್ರಾಯ:26 ವರ್ಷ, ವಾಸ:  ಅಂಬ್ಲಮೊಗರು ಗ್ರಾಮ, ಉಳ್ಳಾಲ ತಾಲೂಕು ಎಂಬಾತರನ್ನು  ವಶಕ್ಕೆ ಪಡೆದುಕೊಂಡು ಮಂಗಳೂರು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿ  ಮೊಹಮ್ಮದ್ ಶರೀಫ್ TETRAHYDROCANNABINOL(THC) ಎಂಬ ಗಾಂಜಾ ಹಾಗೂ AMPHETAMINES ಎಂಬ ಮಾದಕ ದ್ರವ್ಯ ಮತ್ತು ಮೊಹಮ್ಮದ್ ಸಹಾರುದ್ದಿನ್ ಎಸ್.ಕೆ  ಎಂಬಾತನು TETRAHYDROCANNABINOL(THC) ಎಂಬ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.

Mangalore East PS

ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗ ವತಿಯಿಂದ ರಚಿಸಲಾಗಿರುವ Anti Drug Team ತಂಡದ ಅಧಿಕಾರಿ ಸಿಬ್ಬಂದಿಗಳು ದಿನಾಂಕ: 23-01-2024 ರಂದು  ಸಂಜೆ 17:00 ಗಂಟೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ 18:00 ಗಂಟೆಗೆ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ  ಕರಾವಳಿ ಸರ್ಕಲ್  ಬಳಿ ತಲುಪಿದಾಗ ಒಬ್ಬ ವ್ಯಕ್ತಿ ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು, ಅವನನ್ನು ಕಂಡು ಅವರುಗಳು ವಿಚಾರಿಸಲಾಗಿ ಬಾಯಿಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದು, ಅವನನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ಕೇಳಲಾಗಿ ಹೆಸರು ಮೊಹಮ್ಮದ್ ಅರ್ಪಾನ್ ಪ್ರಾಯ:24 ವರ್ಷ ವಾಸ: ಅಂತಸ್ತು ತೈಲೇರಿ ರೋಡ್ ಗ್ರೀನ್ ಕೌಂಟಿ  ಮುಳಿಹಿತ್ಲು ಬೋಳಾರ್ ಮಂಗಳೂರು ಎಂಬುದಾಗಿ ತಿಳಿಸಿದ್ದು, ಅವನನ್ನು ಕೂಲಂಕುಷವಾಗಿ ವಿಚಾರಿಸಲಾಗಿ ಅವನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾರೆ, ಇವನನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಇವನನ್ನು ಕುಂಟಿಕಾನ ಎ ಜೆ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ  ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ TETRAHYDARCANNABINOID(MARIJUANA) 50ng per ml POSITIVE ಸೇವನೆ ಮಾಡಿರುವುದಾಗಿ ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ NARCOTIC DRUGS AND PSYCHOTROPIC SUBSTANCES ACT 1985 ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

 

ಇತ್ತೀಚಿನ ನವೀಕರಣ​ : 24-01-2024 04:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080