ಅಭಿಪ್ರಾಯ / ಸಲಹೆಗಳು

Barke PS

ಪಿರ್ಯಾದಿ Nirmala D S ದಿನಾಂಕ: 09-02-2023 ರಂದು ಬೆಳಿಗ್ಗೆ 06-00 ಗಂಟೆಗೆ ಅಸೌಖ್ಯದ ನಿಮಿತ್ತ ಗಾಂಧಿನಗರದಲ್ಲಿರುವ ಭಟ್ಸ್ ನರ್ಸಿಂಗ್ ಹೋಮ್ ಗೆ ಹೋಗಿ ವಾಪಸ್ಸು ಮನೆಗೆ ಕಾಲ್ನಡಿಗೆಯಲ್ಲಿ ಒಬ್ಬಳೆ ಬರುವ ಸಮಯ ಸುಮಾರು 11-40 ಗಂಟೆಗೆ ಮಠದಕಣಿ ಮುಖ್ಯರಸ್ತೆಯಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಕಪ್ಪು ಬಣ್ಣದ ಬೈಕ್ ನಲ್ಲಿ ಹಿಂದಿನಿಂದ ಬಂದು ಬೈಕ್ ನ್ನು ತಿರುಗಿಸಿ ಪುನ: ಪಿರ್ಯಾದಿದಾರರ ಎದುರಿನಿಂದ ಬಂದು ಪಿರ್ಯಾದಿದಾರರ ಕತ್ತಿನಲ್ಲಿದ್ದ ಸುಮಾರು 40 ಗ್ರಾಂ ತೂಕದ ಚಿನ್ನದ ರೋಪ್ ಚೈನ್ ನಲ್ಲಿ ಹಾಕಿದ ಮಾಂಗಲ್ಯ ಸರವನ್ನು ಬಲತ್ಕಾರವಾಗಿ ಸುಲಿಗೆ ಮಾಡಿಕೊಂಡು ನಗರದ ಉರ್ವ ಮಾರ್ಕೆಟ್ ಕಡೆಗೆ ಪರಾರಿಯಾಗಿರುತ್ತಾನೆ.  ದಿನಾಂಕ: 09-02-2023 ರಂದು ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಮಾರು 25 ಇಂಚು ಉದ್ದ  ಇದ್ದು, ಸುಮಾರು 40 ಗ್ರಾಂ ತೂಕದ ಅಂದಾಜು ಮೌಲ್ಯ ಸುಮಾರು 1,60,000/- ಆಗಿರುವುದಾಗಿ ಲಿಖಿತ ಪಿರ್ಯಾದಿಯನ್ನು ನೀಡಿ ಪಿರ್ಯಾದಿದಾರರು ತನ್ನ ಚಿನ್ನದ ಸರವನ್ನು ಸುಲಿಗೆ ಮಾಡಿದ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿಯಾಗಿ ನೀಡಿದ ದೂರಿನ ಸಾರಾಂಶವಾಗಿರುತ್ತದೆ.

Mangalore East PS

ದಿನಾಂಕ: 23-02-2023 ರಂದು ಪಿರ್ಯಾದಿ ಶರತ್ ಕುಮಾರ್ ಮಂಗಳೂರು ನಗರ ಪೂರ್ವ ಪೊಲೀಸ್ ಠಾಣಾ ಸರಹದ್ದಿನಲ್ಲಿ ಇವನಿಂಗ್ ರೌಂಡ್ಸ್ ಕರ್ತವ್ಯಕ್ಕೆ ನೇಮಕ ಮಾಡಿದ್ದು, ಅಂತೆಯೇ ಸಂಜೆ 16-00 ಗಂಟೆಗೆ ಪಿಸಿ 3078 ಆನಂದ ಗೋನಾಳ ರವರನ್ನು ಕರೆದುಕೊಂಡು ಪಿರ್ಯಾದಿದಾರರು ಬಾಬ್ತು ಮೊಟಾರ್ ಸೈಕಲ್ ನಲ್ಲಿ ಠಾಣೆಯಿಂದ ಕರ್ತವ್ಯದ ಮೇಲೆ ಹೊರಟಿದ್ದು, ಠಾಣಾ ಸರಹದ್ದಿನ ಕೆ.ಪಿ.ಟಿ, ನಂತೂರು ನಿಂದಾಗಿ ಸಂಚರಿಸುತ್ತಾ ಸಮಯ ಸುಮಾರು 16-30 ಗಂಟೆಗೆ ಕದ್ರಿ ಕೆ.ಎಫ್.ಸಿ ಎದುರುಗಡೆ ಇರುವ ರಿಕ್ಷಾ ಪಾರ್ಕ್ ನ ಬಳಿಗೆ ತಲುಪಿದಾಗ ಕದ್ರಿ ಮಲ್ಲಿಕಟ್ಟೆಯಿಂದ ನಂತೂರು ಕಡೆಗೆ ಹೋಗುವ ನಗರದ ಕಾಂಕ್ರೇಟ್ ರಸ್ತೆಯಲ್ಲಿ ರಿಕ್ಷಾ ಪಾರ್ಕ್ ನ ಬಳಿ ರಸ್ತೆಯಲ್ಲಿ ಒಟ್ಟು 7-8 ಜನ ಯುವಕರು ಮತ್ತು ಗಂಡಸರು ಒಬ್ಬರನ್ನೊಬ್ಬರು ಬೈದಾಡಿಕೊಂಡು ಪರಸ್ಪರ ದೂಡಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಗುಂಪು ಸೇರಿಕೊಂಡು ಎರಡು ತಂಡಗಳಾಗಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಹಾಗೂ ಜನರ ಸಂಚಾರಕ್ಕೆ ತೊಂದರೆವುಂಟಾಗುವ ರೀತಿ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡು ಪರಸ್ಪರ ಕೈಕೈ ಮಿಲಾಯಿಸಿ ಸ್ಥಳದಲ್ಲಿ ಗುಂಪು ಸೇರಿ ಒಬ್ಬರಿಗೊಬ್ಬರು ದೂಡಾಡಿಕೊಂಡು ಕಲಹ ಮಾಡುತ್ತಿದ್ದು, ಇವರುಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Traffic North Police Station   

ಪಿರ್ಯಾದಿ Pradeep Kotian ಅತ್ತಿಗೆ ಶ್ರೀಮತಿ ಪಾವನ ಮತ್ತು ಅಣ್ಣನಾದ ಪ್ರಸಾದ್ ಕೊಟ್ಯಾನ್ ರವರೊಂದಿಗೆ ಈ ದಿನ ದಿನಾಂಕ: 23-02-2023 ರಂದು KA-19-Q-2026 ನಂಬ್ರದ ಸ್ಕೂಟರಿನಲ್ಲಿ ಸಹ ಸವಾರೆಯಾಗಿ ಕುಳ್ಳಿರಿಸಿಕೊಂಡು ಐಕಳದಿಂದ ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲಿ ದಾಮಸ್ ಕಟ್ಟೆ ಪಂಚಾಯತ್ ಕಛೇರಿ ಕಡೆಗೆ ಹೋಗುತ್ತಾ ಬೆಳಿಗ್ಗೆ ಸಮಯ ಸುಮಾರು 10:15 ಘಂಟೆಗೆ ಜಲ್ಲಿಗುಡ್ಡೆ  ಬಳಿ ತಲುಪುತ್ತಿದ್ದಂತೆ ಜಲ್ಲಿಗುಡ್ಡೆ ಕ್ರಾಸ್ ಕಡೆಯಿಂದ KA-19-C-5979 ನಂಬ್ರದ ಟಿಪ್ಪರ್ ವಾಹನವನ್ನು ಅದರ ಚಾಲಕ JAYAPRAKASH MISHI ಎಂಬಾತನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೇ ಮುಖ್ಯ ರಸ್ತೆಗೆ ಮುನ್ನುಗ್ಗಿಸಿ ಪಿರ್ಯಾದಿದಾರರ ಅಣ್ಣ ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಅಣ್ಣ ಸ್ಕೂಟರ್ ಸಮೇತ ಬಿದ್ದು ಪಿರ್ಯಾದಿದಾರರ ಅಣ್ಣ ಪ್ರಸಾದ್ ಕೊಟ್ಯಾನ್ ರವರಿಗೆ ಎಡ ಕಿವಿಯಲ್ಲಿ ರಕ್ತ ಹೊರಬರುತ್ತಿದ್ದು, ತಲೆಯ ಒಳಭಾಗದಲ್ಲಿ ಗುದ್ದಿದ ಸ್ವರೂಪದ ಒಳಗಾಯ ಆಗಿರುತ್ತದೆ ಮತ್ತು ಸಹ ಸವಾರೆ ಶ್ರೀಮತಿ ಪಾವನ ರವರಿಗೆ ಬಲಕೈ ಮೊಣಗಂಟಿನ ಹಿಂಭಾಗ ಗುದ್ದಿದ ರೀತಿಯ ಗಾಯ ಹಾಗೂ ಬಲಕಾಲಿನ ತೊಡೆಯ ಬಾಗಕ್ಕೆ ತರಚಿದ ರೀತಿಯ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಿನ್ನಿಗೋಳಿ ಕಾನ್ಸೆಟ್ಟಾ ಆಸ್ಪತ್ರೆಗೆ ದಾಖಲಾಗಿದ್ದು ಸ್ಕೂಟರ್ ಸವಾರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

Traffic South Police Station

ದಿನಾಂಕ  23-02-2023 ರಂದು  ಪಿರ್ಯಾದಿ ಶ್ರೀಮತಿ  ಶಾರದ  ಎಂಬವರು  ಅವರ ಮನೆಯಾದ  ಕೋಟೆಕಾರಿಂದ  ಆಟೋರಿಕ್ಷಾವೊಂದರಲ್ಲಿ  ಕುಂಪಲ ಬೈಪಾಸ್ ಗೆ ಬಂದು  ಇಳಿದು ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ  ಹಾದು ಹೋಗಿರುವ ರಾ.ಹೆ  66 ರ ಡಾಮಾರು ರಸ್ತೆಯನ್ನು  ದಾಟುತ್ತಿರುವ ಸಮಯ  ಸುಮಾರು  ಬೆಳಿಗ್ಗೆ 10:30 ಗಂಟೆಗೆ ಅದೇ ರಸ್ತೆಯಲ್ಲಿ  ತಲಪಾಡಿ ಕಡೆಯಿಂದ   ಮಂಗಳೂರು  ಕಡೆಗೆ  ಕಾರು ನಂಬರ್  KA-19-ML-6711 ನೇ ಕಾರನ್ನು ಅದರ ಚಾಲಕಿ ಅನುಷಾ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ  ಡಿಕ್ಕಿ ಪಡಿಸಿದರು. ಈ ಅಪಘಾತದಿಂದ  ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದು ಅವರ ಮುಂಬದಿಯ ಹಣೆಗೆ ಗುದ್ದಿದಗಾಯ ಬಲ ಕಿವಿಯಲ್ಲಿ ರಕ್ತಗಾಯ, ಹಾಗೂ ಗಲ್ಲಕ್ಕೆ ರಕ್ತಗಾಯ ಸೊಂಟಕ್ಕೆ ಗುದ್ದಿದ ಗಾಯವಾಗಿದ್ದು ಅವರನ್ನು  ಚಿಕಿತ್ಸೆ ಬಗ್ಗೆ ಅಲ್ಲಿ ಸೇರಿದ ಜನರು ಹಾಗೂ  ಅಪಘಾತ ಪಡಿಸಿದ  ಕಾರಿನ ಚಾಲಕಿ ಅಂಬ್ಯುಲೆನ್ಸ್ ವೊಂದರಲ್ಲಿ  ಕೆ ಎಸ್  ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.

Traffic South Police Station  

ದಿನಾಂಕ:23-02-2023 ರಂದು ಪಿರ್ಯಾದಿ SWARNASREE ಗಂಡನಾದ ಸುಬ್ರಾಯ ಹೊಳ್ಳ ಎಂ.ಜಿ (39 ವರ್ಷ) ರವರು ಅವರ ಬಾಬ್ತು ಬೈಕ್ ನಂಬ್ರ KA-41-W-3931 ನೇದನ್ನು ಸವಾರಿ ಮಾಡಿಕೊಂಡು ಮಂಗಳೂರಿನಿಂದ ಮನೆ ಕಡೆಗೆ ಹೋಗುತ್ತಿದ್ದಾಗ ಸಮಯ ಸುಮಾರು ಸಂಜೆ 5:00 ಗಂಟೆಗೆ ರಾ.ಹೆ-66 ಉಳ್ಳಾಲ ತಾಲ್ಲೂಕಿನ ಪೆರ್ಮನೂರು ಗ್ರಾಮದ ತೊಕ್ಕೊಟ್ಟುನಿಂದ ಸ್ವಲ್ಪ ಮುಂದೆ ಅಂದರೆ ಉಳ್ಳಾಲ ಕ್ರಾಸ್ ರಸ್ತೆಯ ಎದುರು ತಲುಪುತ್ತಿದ್ದಂತೆ ಸುಬ್ರಾಯ ಹೊಳ್ಳ ಎಂ.ಜಿ ರವರು ಬೈಕನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ಸವಾರಿಯ ನಿಯಂತ್ರಣ ತಪ್ಪಿ ಸ್ಕಿಡ್ಡಾಗಿ ರಸ್ತೆಗೆ ಬಿದ್ದು ಸುಬ್ರಾಯ ಹೊಳ್ಳ ಎಂ.ಜಿ ರವರ ತಲೆಯ ಬಲ ಬದಿಗೆ ತೀವ್ರ ತರದ ರಕ್ತಬರುವ ಗಾಯ, ಎಡ ಬದಿಯ ಕಿವಿಗೆ ರಕ್ತ ಬರುವ ಗಾಯ, ಬಲ ಬದಿಯ ಭುಜಕ್ಕೆ ರಕ್ತ ಬರುವ ಗಾಯವಾಗಿದ್ದು ಅಲ್ಲಿ ಸೇರಿದ್ದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಬೇರೊಂದು ವಾಹನದಲ್ಲಿ ಕುಳ್ಳಿರಿಸಿ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು ಅಲ್ಲಿ ಸುಬ್ರಾಯ ಹೊಳ್ಳ ಎಂ.ಜಿ ರವರನ್ನು ಪರೀಕ್ಷಿಸಿದ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ ಎಂಬಿತ್ಯಾದಿ.

Mangalore South PS            

ಪಿರ್ಯಾದಿ ಶ್ರೀ, ಪ್ರಕಾಶ್ ರಾಮ್ ಹರಿಕಾಂತ್ [32] ರವರು ಶ್ರೀ ಶೇಖರ್ ಶೆಟ್ಟಿ ರವರ ಮಾಲಿಕತ್ವದ (ಫಲ್ಗುಣಿ ಎಂಬ ಹೆಸರಿನ) ಮೀನುಗಾರಿಕೆ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ತಮ್ಮ ಜೊತೆಯಲ್ಲಿ ಉರಿನ ಪರಿಚಯದವನಾದ ಬಾಬು ರಾಮ್ ಹರಿಕಾಂತ್ [38] ಎಂಬುವನನ್ನು ಮಂಗಳೂರಿನ ದಕ್ಷಿಣ ದಕ್ಕೆಯಲ್ಲಿ ಮೀನುಗಾರಿಕೆ ಕೆಲಸ ಮಾಡಲು ಉರಿನಿಂದ ಕರೆದುಕೊಂಡು ಬಂದಿದ್ದು, ಅವನು ದಿನಾಂಕ: 10.02.2023 ರಂದು ಸಮಯ ಸುಮಾರು ಸಾಯಂಕಾಲ 05:30 ಗಂಟೆಗೆ ನಾನು ಮಂಗಳೂರಿನ ಸಿಟಿ ಸೆಂಟರ್ ಮಾಲ್ ಹತ್ತಿರ ಇರುವ ರಾಮಕಾಂತಿ ಟಾಕೀಸ್ ನಲ್ಲಿ ಗೆಳೆಯ ಸಂತೋಷನ ಜೊತೆಯಲ್ಲಿ ಸಿನಿಮಾ ನೋಡಿ ಬರುತ್ತೇನೆಂದು ಪಿರ್ಯಾದಿದಾರರಲ್ಲಿ ಹೇಳಿ ಹೋದವನು ರಾತ್ರಿ 10.30 ಗಂಟೆ ಸುಮಾರಿಗೆ ವಾಪಾಸು ದಕ್ಕೆಗೆ ಬಂದಿದ್ದು ಸ್ವಲ್ಪ ಹೊತ್ತಿನ ನಂತರ ತಂಬಾಕು ತರುತ್ತೇನೆಂದು ಗೆಳೆಯ ಸಂತೋಷನ ಬಾಬ್ತು ಮೊಬೈಲ್ ಪೋನ್ ತೆಗೆದುಕೊಂಡು ಹೋದವನು ಮರಳಿ ಬಂದಿರುವುದಿಲ್ಲ, ಕೂಡಲೇ ಅವನಲ್ಲಿರುವ ಮೊಬೈಲ್ ನಂಬ್ರಕ್ಕೆ ಕರೆ ಮಾಡಲಾಗಿ ಸ್ವೀಚ್ ಅಪ್ ಆಗಿರುತ್ತದೆ. ಪಿರ್ಯಾದಿಯು ದಕ್ಕೆ ಸುತ್ತಮುತ್ತ ನಗರದ ಕೆಲವೊಂದು ಕಡೆಗಳಲ್ಲಿ ಹುಡುಕಾಡಿದರೂ ಲಭ್ಯವಾಗಿರುವುದಿಲ್ಲ, ಅಲ್ಲದೆ ಪರಿಚಯದವರಲ್ಲಿ ಮತ್ತು ಸಂಭಂದಿಕರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆತಿರುವುದಿಲ್ಲ, ಆದುದರಿಂದ ಕಾಣೆಯಾದ ಬಾಬು ರಾಮ್ ಹರಿಕಾಂತ್ [38] ರವನ್ನು ಪತ್ತೆಮಾಡಿಕೊಡುವಂತೆ ವಿನಂತಿ ಎಂಬಿತ್ಯಾದಿಯಾಗಿರುತ್ತದೆ.

Ullal PS       

ಪಿರ್ಯಾದಿ Vishnu Prasad R K ತನ್ನ ಅಣ್ಣ ಕೃಷ್ಣ ಪ್ರಸಾದ್ ಆರ್ ಕೆ ರವರ ಹೆಸರಿನಲ್ಲಿ ನೊಂದಣಿಯಾದ ಕೆಎಲ್-14- ಆರ್ -2382 ನೇ ಮೋಟಾರ್ ಬೈಕನ್ನು ಉಪಯೋಗ ಮಾಡಿಕೊಂಡಿದ್ದು ದಿನಾಂಕ 07-02-2023 ರಂದು ತನ್ನ ಮೋಟಾರ್ ಬೈಕನ್ನು ಉಳ್ಳಾಲ ಬೈಲಿನಲ್ಲಿರುವ ದ್ವಿ ಚಕ್ರ ವಾಹನದ ಗ್ಯಾರೇಜಿನಲ್ಲಿ ಸರ್ವೀಸ್ ಗೆಂದು ಇರಿಸಿದ್ದು ದಿನಾಂಕ 09-02-2023 ರಂದು ರಾತ್ರಿ 10-45 ಗಂಟೆಗೆ ಗ್ಯಾರೇಜಿನ ಭರತ್ ರಾಜ್ ಎಂಬವರು ಪಿರ್ಯಾದಿದಾರರಲ್ಲಿ ದಿನಾಂಕ 09-02-2023 ರಂದು ರಾತ್ರಿ  7-30 ಗಂಟೆಗೆ ಮೋಟಾರ್ ಬೈಕನ್ನು ಗ್ಯಾರೇಜ್ ಬಳಿಯಲ್ಲಿ ನಿಲ್ಲಿಸಿ ತೊಕ್ಕೊಟ್ಟು ಕಡೆಗೆ ತೆರಳಿ ರಾತ್ರಿ 10-30 ಗಂಟೆಗೆ ಬಂದಾಗ ಗ್ಯಾರೇಜ್ ಬಳಿ ನಿಲ್ಲಿಸಿದ್ದ ಮೊಟಾರ್ ಬೈಕ್ ನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 24-02-2023 07:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080