ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore East Traffic PS                 

ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ MALA MADHUKARA  NAIK ಇವರು ಶ್ರೀಮತಿ. ಮಾಲಾ ಮಧುಕರ್ ನಾಯ್ಕ್ ರವರು ನಿನ್ನೆ ದಿನಾಂಕ: 23-02-2024 ರಂದು AJ ಆಸ್ಪತ್ರೆ ಕಟ್ಟಡದ ಎದುರಿನಲ್ಲಿರುವ ರಸ್ತೆಯ ಮಧ್ಯದ ಡಿವೈಡರ್ ದಾಟಿ ರಸ್ತೆಯ ಇನ್ನೊಂದು ಬದಿಗೆ ಅಂದರೆ KSRTC ಘಟಕದ ಬಳಿ ಸಮೀಪಿಸಿದಂತೆ ರಾತ್ರಿ ಸುಮಾರು 7:20 ಗಂಟೆಗೆ KA-19-AE-3439 ನಂಬ್ರದ ಪ್ಯಾಸೆಂಜರ್ ಆಟೋರಿಕ್ಷಾವನ್ನು ಅದರ ಚಾಲಕನಾದ ಹೈದರ್ ಶೇಖಬ್ಬ ಎಂಬಾತನು KPT ಕಡೆಯಿಂದ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಾ ರಸ್ತೆಯ ಇನ್ನೊಂದು ಅಂಚಿಗೆ ತಲುಪುತ್ತಿದ್ದ ಪಿರ್ಯಾದಿದಾರರಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು NH ರಸ್ತೆಗೆ ಬಿದ್ದು ತಲೆಯ ಎಡ ಮತ್ತು ಬಲಬದಿಗೆ, ಎಡ ಕಣ್ಣಿನ ಹುಬ್ಬಿಗೆ, ಎರಡೂ ಕೈಗಳಿಗೆ ಮತ್ತು ಕಾಲುಗಳಿಗೆ ಅಲ್ಲಲ್ಲಿ ಗುದ್ದಿದ ಹಾಗೂ ತರಚಿದ ರೀತಿಯ ಗಾಯವಾಗಿ ಚಿಕಿತ್ಸೆಯ ಬಗ್ಗೆ AJ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

Traffic South Police Station                        

ಫಿರ್ಯಾದಿ Anush ಇವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 24-02-2024 ರಂದು ಫಿರ್ಯಾದಿದಾರರು ತನ್ನ ಅಣ್ಣ ಆಕಾಶ್ ರವರ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-19-HG-8997 ನೇದನ್ನು ಸವಾರಿ ಮಾಡಿಕೊಂಡು ಮನೆಯಿಂದ ಕೆ.ಪಿ.ಟಿ ಕಡೆಗೆ  ಹೊರಟು ಸಮಯ ಬೆಳಿಗ್ಗೆ ಸುಮಾರು 10.00 ಗಂಟೆಗೆ ಮೇರಿಹಿಲ್ ಗುರುನಗರ ಎಂಬಲ್ಲಿ ರಸ್ತೆಯ ಎಡಭಾಗದ ಗುರುನಗರ ಕೊರಗಜ್ಜ ಕಟ್ಟೆಯ ಒಳರಸ್ತೆಯಿಂದ KA-19-AD-9774 ನೇ ನಂಬ್ರ ಗೋಡ್ಸ್ ಟೆಂಪೋ ಒಂದನ್ನು ಅದರ ಚಾಲಕ ನವೀನಕುಮಾರ್  ಎಂಬಾತನು ದುಡುಕತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ್ದು ಡಿಕ್ಕಿಯ ಪರಿಣಾಮ ಫಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಎಸೆಯಲ್ಪಟ್ಟಿದ್ದರಿಂದ ಫಿರ್ಯಾದಿದಾರರರಿಗೆ ಗಾಯವಾಗಿದ್ದು ಅಲ್ಲಿ ಸೇರಿದ ಜನರು ಫಿರ್ಯಾದಿದಾರರನ್ನು ಮಂಗಳೂರು ಎ.ಜೆ.ಆಸ್ಪತ್ರೆಗೆ ವಾಹನವೊಂದರಲ್ಲಿ ದಾಖಲಿಸಿದ್ದು ಪರೀಕ್ಷಿಸಿದ ವೈಧ್ಯರು ಫಿರ್ಯಾದಿದಾರರರಿಗೆ ಎಡ ಕೈಗೆ ಮೂಳೆ ಮುರಿತದ ಗಾಯ  ಎಡ ಎಡ ಹಣೆ, ಎಡ ಮೂಗಿಗೆ ರಕ್ತ ಗಾಯ, ವೃಷಣ (ಬಲ) ಸಣ್ಣ ರಕ್ತಗಾಯ ಹಾಗೂ ಎರಡೂ ಕಾಲುಗಳಿಗೆ ತರಚಿದ ಮತ್ತು ಗುದ್ದಿದ ಗಾಯಗಳಾಗಿದ್ದು ಚಿಕಿತ್ಸೆ ನೀಡಿ ಎರಡು ದಿನಗಳ ಬಳಿಕ ಶಸ್ತ್ರಚಿಕಿತ್ಸೆಯ ಬಗ್ಗೆ ದಾಖಲಾಗಲು ಸಲಹೆ ನೀಡಿ ಕಳುಹಿಸಿದ್ದು ಸಂಜೆ ವೇಳೆಗೆ ಫಿರ್ಯಾದಿದಾರರಿಗೆ ನೋವು ಉಲ್ಬಣಗೊಂಡಿದ್ದರಿಂದ ಮತ್ತೆ ಎ.ಜೆ ಆಸ್ಪತ್ರೆಗೆ ಬಂದಿದ್ದು ಪರೀಕ್ಷಿಸಿದ ವೈಧ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ಎಂಬಿತ್ಯಾದಿ

 

 

 

Panambur PS

ಈ  ಪ್ರಕರಣದ  ಸಾರಾಂಶವೇನೆಂದರೆ  ಪಿರ್ಯಾದಿ DHARMAPPA ಇವರು ಪಣಂಬೂರು ಬಂದರಿನ ಒಳಗಡೆ ಕೂಲಿ ಕೆಲಸ  ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ಮಗ ತುಕರಾಮ ಪ್ರಾಯ 13 ವರ್ಷ  7ನೇ ತರಗತಿ ಪ್ರಥಮಿಕ ಸರಕಾರಿ ಶಾಲೆ ಮೀನಕಳಿಯಾ ಪಣಂಬೂರು ಎಂಬವನು ದಿನಾಂಕ: 24-02-2024 ರಂದು ಮಧ್ಯಾಹ್ನ ಶಾಲೆಯಿಂದ ಬಂದವನು ಅವನ ಸ್ನೇಹಿತ ಮಾರುತಿ ಎಂಬವನ ಜೊತೆ ಪಣಂಬೂರು ಬೀಚಿಗೆ ಬಂದು ನೀರಿನಲ್ಲಿ ಆಟವಾಡುತ್ತಾ, ಸ್ನಾನ ಮಾಡುತ್ತಾ ಸಮುದ್ರದ ನೀರಿನ ಆಳಕ್ಕೆ ಹೋಗಿ ಸಮುದ್ರದ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿ ಕಾಣೆಯಾಗಿರುತ್ತಾನೆ. ಎಂಬಿತ್ಯಾದಿ    

ಕಾಣೆಯಾಗಿರುವವರ ವಿವರ: 

ಹೆಸರು: ತುಕರಾಮ ಪ್ರಾಯ:13 ವರ್ಷ, ಎತ್ತರ: ಸುಮಾರು 4-00 ಅಡಿ

ಎಲ್ಲ ಕಡೆ ಹುಡುಕಾಡಿ ಬಂದ ಕಾರಣ ದೂರು ನೀಡಲು ತಡವಾಗಿರುತ್ತದೆ

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ 15-02-2024 ರಂದು ಪಿರ್ಯಾದಿದಾರರಾದ ಉದಯ ಶಂಕರ ಭಟ್ ರವರ ಮಗನಾದ ರಕ್ಷಿತ್ ಎಂಬುವರು ಕಾರ್ಕಳದಲ್ಲಿ ಕೆಲಸ ಮುಗಿಸಿ ಅವರ ಬಾಬ್ತು KA-19-HQ-3107 ನಂಬ್ರದ ಮೋಟಾರು ಸೈಕಲಿನಲ್ಲಿ ಹೊರಟು ಕಾರ್ಕಳದಿಂದ ಮಂಗಳೂರು ಕಡೆಗೆ ಬರುತ್ತಾ ಸಂಜೆ ಸಮಯ 6:40 ಗಂಟೆಗೆ ತೋಡಾರು ಬಳಿ ಇರುವ ಯಾನೆಪೋಯಾ ಕಾಲೇಜಿಗೆ ಹೋಗುವ ಕ್ರಾಸ್ ರಸ್ತೆಯ ಬಳಿ ತಲುಪುತಿದ್ದಂತೆ ತೋಡಾರು ವಿಷ್ಣು ಮೂರ್ತಿ ದೇವಸ್ಥಾನದ ರಸ್ತೆಯಿಂದ MP-04-HE-2160 ನಂಬ್ರದ ಟ್ಯಾಂಕರ್ ಲಾರಿಯ ಚಾಲಕ ಹೇಮ್ ಚಂದ್ ನು ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಕ್ಷೀತ್ ಇದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ರಕ್ಷಿತ್ ರಸ್ತೆಗೆ ಎಸೆಯಲ್ಪಟ್ಟು ಎಡ ಕಾಲಿಗೆ ಗಾಯಗೊಂಡಿದ್ದು, ಆಳ್ವಾಸ್ ಆಸ್ಪತ್ರೆಯಲ್ಲಿಪ್ರಥಮ ಚಿಕಿತ್ಸೆಯನ್ನು ಪಡೆದು, ನಂತರ ಹೆಚ್ಚಿನ ಚಿಕಿತ್ಸಯೆ ಬಗ್ಗೆ ಮಂಗಳೂರಿನ ಮಂಗಳೂರು ನರ್ಸಿಂಗ್ ಹೋಮ್ ಇಲ್ಲಿಗೆ ದಾಖಲಿಸಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ರಕ್ಷಿತ್ ನ ಕಾಲಿಗೆ ಪ್ಲಾಸ್ಟಿಕ್ ಸರ್ಜರಿ ನಡೆಸಬೇಕೆಂದು ತಿಳಿಸಿರುವುದಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 01-03-2024 08:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080