Kavoor PS
ಪಿರ್ಯಾದಿ RAMESHA B HULUMANI ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದು ಪರಿಶಿಷ್ಟ ಜಾತಿ ಮಾದರ್ ಸಮುದಾಯಕ್ಕೆ ಸೇರಿರುವುದಾಗಿದ್ದು, ದಿನಾಂಕ 23-03-2023 ರಂದು ಪಿರ್ಯಾದುದಾರರು ಹುಷಾರಿಲ್ಲದ ಕಾರಣ ಕೆಲಸಕ್ಕೆ ಹೋಗದೇ ಮನೆಯಲ್ಲಿ ಇದ್ದವರು ,ರಾತ್ರಿ ಸುಮಾರು 08.00 ಗಂಟೆಗೆ ಮನೆಯಲ್ಲಿ ಕುಳಿತಿರುವ ಸಮಯ ಪಕ್ಕದ ಮನೆಯ ಪ್ರಶಾಂತ್ ಭಂಡಾರಿ ಎಂಬುವವರು ಮನೆಯ ಗೇಟ್ ಹತ್ತಿರ ಬಂದು ಪಿರ್ಯಾದುದಾರರನ್ನು ಕೂಗಿ ಕರೆದಿದ್ದು ಪಿರ್ಯಾದುದಾರರು ಮನೆಯ ಹೊರಗೆ ರಸ್ತೆಗೆ ಬಂದಿದ್ದಾಗ ಪ್ರಶಾಂತ್ ಭಂಡಾರಿಯವರು ತಡೆದು ನಿಲ್ಲಿಸಿ ನಿನ್ನ ಮನೆ ಹಾಗೂ ಬಾವಿ ನಮ್ಮ ಜಾಗದಲ್ಲಿ ಇದೆ ಅದನ್ನು ಒಡೆದು ಹಾಕುತ್ತೇನೆ ಎಂದು ಹೇಳಿದ್ದು,ಅದಕ್ಕೆ ಪಿರ್ಯಾದಿದಾರರು ದಾಖಲೆಗಳ ಪ್ರಕಾರ ನೋಡೋಣಾ ಎಂದು ಹೇಳುತ್ತಿರುವ ಸಮಯ ಪ್ರೀಯಾಸ್ ಭಂಡಾರಿ ಎಂಬುವವನು ಮನೆಯಿಂದ ಹೋರಗೆ ಬಂದು ಪಿರ್ಯಾದುದಾರರನ್ನು ಉದ್ದೇಶಿಸಿ “ಹೊಲೆಯರ್ ಜಾತಿಯವ ನೀನು ಬ್ಯಾವರ್ಸಿ ನೀನು ಎಲ್ಲಿಂದಲೋ ಬಂದು ಇಲ್ಲಿ ಹಾರಾಡುತ್ತಿಯಾ “ಎಂದು ಬೈಯುತ್ತಾ ಪಿರ್ಯಾದುದಾರರಿಗೆ ಕೈಯಿಂದ ಮುಖಕ್ಕೆ ,ಬಲ ಭುಜಕ್ಕೆ ,ಎದೆಗೆ ಹೊಡೆದು ನೆಲಕ್ಕೆ ಬೀಳಿಸಿ ಕಾಲಿನಿಂದ ಸೊಂಟಕ್ಕೆ ಒದ್ದಿರುತ್ತಾನೆ.ಆ ಸಮಯ ಬಿಡಿಸಲು ಬಂದ ಪಿರ್ಯಾದುದಾರರ ಮಗಳ ಸಂಧ್ಯಾ ಎಂಬುವವಳಿಗೆ ಅವ್ಯಾಚ್ಯ ಶಬ್ಧಗಳಿಂದ ಬೈದು ಕೈ ಹಿಡಿದು ಎಳೆದು ಹಾಕಿರುತ್ತಾನೆ.ಹಾಗೂ ಬಿಡಿಸಲು ಬಂದ ಪಿರ್ಯಾದುದಾರರ ತಮ್ಮ ರವಿಯನನ್ನು ಸಹ ಅವ್ಯಾಚ್ಯ ಶಬ್ದಗಳಿಂದ ಬೈದು ದೂಡಿ ಹಾಕಿರುತ್ತಾನೆ.ಹಾಗೂ ಪಿರ್ಯಾದುದಾರರಿಗೆ “ಎಸ್ .ಸಿ ಜಾತಿಗೆ ಹುಟ್ಟಿದವನು ನೀನು ಎಂದು ಜಾತಿ ನಿಂದನೆ ಮಾಡಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ “ಎಂದು ಜೀವ ಬೆದರಿಕೆ ಹಾಕಿರುವುದಾಗಿ ಎಂಬಿತ್ಯಾದಿ.
Traffic North Police Station
ಪಿರ್ಯಾದಿ ಶ್ರೀಮತಿ ರವಿಕಲಾ (46 ವರ್ಷ) ರವರು ದಿನಾಂಕ: 24-03-2023 ರಂದು ಕೆಲಸದ ನಿಮಿತ್ತ ಪಣಂಬೂರು ದೀಪಕ್ ಪೆಟ್ರೋಲ್ ಪಂಪ್ ಬಳಿಯಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕಡೆ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 08:30 ಘಂಟೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಐಸ್ ಪ್ಲಾಂಟ್ ಬಳಿ ತಲುಪುತ್ತಿದ್ದಂತೆ KA-26-ED-6132 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಮೋಹನ ಎಂಬಾತನು ಕೈಗಾರಿಕಾ ಪ್ರದೇಶದ ಕಡೆಯಿಂದ NH 66ನೇ ಮುಖ್ಯ ರಸ್ತೆ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ್ದು ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರಾದ ಶ್ರೀಮತಿ ರವಿಕಲಾ ರವರಿಗೆ ಎಡಕಾಲಿನ ಮಂಡಿಯ ಮೇಲಿನ ತೊಡೆಯಲ್ಲಿ ಮೂಳೆ ಮುರಿತದ ಗಾಯ, ಎಡತೊಡೆಯ ಬಳಿ ರಕ್ತಗಾಯ, ಎಡ ಹಣೆಯ ಬಳಿ ಗುದ್ದಿದ ರೀತಿಯ ಗಾಯ ಮತ್ತು ಮೇಲ್ಭಾಗದ ಅರ್ಧ ಹಲ್ಲು ತುಂಡಾದ ರೀತಿಯ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ
Mangalore North PS
ಪಿರ್ಯಾದಿ AHMED SHAUHAN ಬಂದರ್ ನಲ್ಲಿ ಮಾಸ್ ಅಸೋಸಿಯೇಟ್ ನಲ್ಲಿ ಅಕೌಂಟೆಂಟ್ ಕೆಲಸವನ್ನು 7 ವರ್ಷಗಳಿಂದ ಮಾಡಿಕೊಂಡಿದ್ದು, ಪಿರ್ಯಾದಿದಾರರು ತನ್ನ ಕೆಲಸಕ್ಕೆ ಹೋಗಿ ಬರಲು ಹೋಂಡಾ ಆಕ್ಟಿವಾ ಸ್ಕೂಟರ್ ನಂಬ್ರ KA-19-ER-4064 ನೇದ್ದನ್ನು ಉಪಯೋಗಿಸಿಕೊಂಡಿದ್ದು, ಎಂದಿನಂತೆ ದಿನಾಂಕ: 07-03-2023 ರಂದು ತನ್ನ ಕೆಲಸದ ನಿಮಿತ್ತ ಆಪೀಸಿಗೆ ಬಂದವರು ತನ್ನ ಬಾಬ್ತು ಸ್ಕೂಟರನ್ನು ಮಂಗಳೂರಿನ ಕಸಬ ಫೆರಿಯಲ್ಲಿ ರಾತ್ರಿ 7.40 ಗಂಟೆಗೆ ಪಾರ್ಕ್ ಮಾಡಿ ಮನೆಗೆ ಹೋದವರು ದಿನಾಂಕ 08-03-2023 ರಂದು ಬೆಳಿಗ್ಗೆ 09.00 ಗಂಟೆಗೆ ಸ್ಕೂಟರ್ ಪಾರ್ಕ್ ಮಾಡಿದ ಸ್ಥಳಕ್ಕೆ ಬಂದಾಗ ಸದ್ರಿ ಸ್ಥಳದಲ್ಲಿ ಸ್ಕೂಟರ್ ಅಲ್ಲಿರದೇ ಇದ್ದು ನಂತರ ಪಿರ್ಯಾದಿದಾರರು ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು ಪಿರ್ಯಾದಿದಾರರು ತನ್ನ ಸ್ನೇಹಿತರಿಗೆ ತಿಳಿಸಿ ಪಿರ್ಯಾದಿದಾರರು ಇಷ್ಟರವರೆಗೆ ಹುಡುಕಾಡಿದರೂ ಸ್ಕೂಟರ್ ಸಿಗದೇ ಇದ್ದುದರಿಂದ ತನ್ನ ಬಾಬ್ತು K-A-19-ER-4064 ನೇ ನೊಂದಣಿ ನಂಬ್ರದ ಹೋಂಡಾ ಆಕ್ಟಿವಾ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರಬಹುದು ಎಂಬಿತ್ಯಾದಿ ದೂರಿನ ಸಾರಾಂಶ.
CEN Crime PS Mangaluru City
ದಿನಾಂಕ: 21/03/2023 ರಂದು ಪಿರ್ಯಾದಿದಾರರ ವಾಟ್ಸ್ ಆಪ್ ನಂಬ್ರ: ನೇಯದಕ್ಕೆ +13654712696 ನೇ ನಂಬ್ರದಿಂದ E-Carier builder ಎಂಬ ಟೆಲಿಗ್ರಾಮ್ ಚಾನೆಲ್ ಗೆ ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ಸೇರುವಂತೆ ಸಂದೇಶ ಬಂದಿದ್ದು ಅದರಂತೆ ಅವರು ಸದ್ರಿ ಗ್ರೂಪ್ ಗೆ ಸೇರಿದ್ದು ಸದ್ರಿ ಗ್ರೂಪ್ ನಲ್ಲಿ Molly (Teligram id @happy20345) ಎಂಬವರು ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ವಿವರಗಳನ್ನು ತಿಳಿಸಿ ಸದ್ರಿ ಗ್ರೂಪ್ ನಲ್ಲಿ ಅವರು ಕಳುಹಿಸುವ ಯೂಟ್ಯೂಬ್ ಚಾನೆಲ್ ಲಿಂಕ್ ಗಳನ್ನು ಲೈಕ್ ಮತ್ತು ಸಬ್ ಸ್ಕ್ರೈಬ್ ಮಾಡಲು ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ಯೂಟ್ಯೂಬ್ ಚಾನೆಲ್ ಗಳನ್ನು ಲೈಕ್ ಮತ್ತು ಸಬ್ ಸ್ಕ್ರೈಬ್ ಮಾಡಿದ್ದು ಈ ಬಗ್ಗೆ ಮೊದಲ ಹಂತದಲ್ಲಿ ಸುಮಾರು ರೂ 7900/- ಗಳು ಪಿರ್ಯಾದಿದಾರರ ಖಾತೆಗೆ ಜಮಾ ಆಗಿರುತ್ತದೆ. ನಂತರ ಆರೋಪಿತರು ಯೂಟ್ಯೂಬ್ ಚಾನೆಲ್ ಹೊರತಾಗಿ ಪ್ರೀಪೇಯ್ಡ್ ಟಾಸ್ಕ್ ಗಳನ್ನು ಪರಿಚಯಿಸಿ ಹಣ ಹಾಕುಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ದಿನಾಂಕ: 22/03/2023 ರಂದು ಟೆಲಿಗ್ರಾಮ್ ಚಾನಲ್ ಮೂಲಕ ಸ್ವೀಕೃತವಾದ ಖಾತೆ ಸಂಖ್ಯೆ: 039963400007652 IFSC: YESB0000399 ನೇಯದಕ್ಕೆ ತನ್ನ ಪತ್ನಿಯ ಖಾತೆ ರಿಂದ ರೂ 1,50,000/- ಮತ್ತು ಪಿರ್ಯಾದಿ PAYTM Payments Bank A/c ನೇಯದರಿಂದ ರೂ 25000/- ಒಟ್ಟು ರೂ 1,75,000/- ರೂ ಗಳನ್ನು ಕಳುಹಿಸಿರುತ್ತಾರೆ ನಂತರ ಪಿರ್ಯಾದಿದಾರರು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಲ್ಲಿ ಪಾರ್ಟ್ ಟೈಮ್ ಜಾಬ್ ಬಗ್ಗೆ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ತಿಳಿಸಿರುತ್ತಾರೆ. ಆದುದರಿಂದ ಟೆಲಿಗ್ರಾಮ್ ಚಾನೆಲ್ ನಲ್ಲಿ ಪಾರ್ಟ್ ಟೈಮ್ ಜಾಬ್ ಬಗ್ಗೆ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿದ ಅಪರಿಚಿತ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ.
Mangalore West Traffic PS
ಪಿರ್ಯಾದಿದಾರರು RAJU HONNAKANTHI ದಿನಾಂಕ 23-03-2023 ರಂದು ಠಾಣಾ ವ್ಯಾಪ್ತಿಯ ರಾವ್ ಆಂಡ್ ರಾವ್ ವೃತ್ತದಿಂದ ಲೇಡಿಗೋಷನ್ ತನಕ ಇಲಾಖಾ ಸಮವಸ್ತ್ರ ದಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿರುವ ಸಮಯ ಸುಮಾರು 11-00 ಗಂಟೆಗೆ ಪುಟ್ ಪಾತ್ ನಲ್ಲಿ ಪಾದಾಚಾರಿಗಳ ಓಡಾಟಕ್ಕೆ ಮಾತ್ರ ಇರುವುದು ಎಂಬುವುದಾಗಿ ತಿಳಿದಿದ್ದರೂ ಆಪಾದಿತನಾದ ಮೊಹಮ್ಮದ್ ರಿಯಾಜ್ ರವರು ಲೇಡಿಗೋಷನ್ ಆಸ್ಪತ್ರೆಯ ಬಳಿಯಲ್ಲಿನ ಸಿಟಿ ಇಲೆಕ್ಟ್ರಾನಿಕ್ಸ್ ಅಂಗಡಿಯ ಸಮೀಪ ಪುಟ್ ಪಾತ್ ನಲ್ಲಿ ತಳ್ಳುವ ಗಾಡಿಯಲ್ಲಿ ವಿವಿಧ ಬಗೆಯ ಹಣ್ಣು ಹಂಪಲುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿರುವುದಾಗಿದೆ.
Mangalore East PS
ಪಿರ್ಯಾದಿ B M ABDUL REHAMAN ಮಾಲಿಕತ್ವದ ಬಲ್ಮಠದಲ್ಲಿರುವ ಅಜ್ವ ಎಂಬ ಹೋಟೆಲ್ ನಲ್ಲಿ ಕೆಲಸಮಾಡಿಕೊಂಡಿದ್ದ ಯಾಸೀರ್ ಹರ್ಪತ್ ಎಂಬವರು ಪಿರ್ಯಾದಿದಾರರಿಗೆ ದಿನಾಂಕ 23-03-2023 ರ ಸಂಜೆ 05;00 ಗಂಟೆಗೆ ಸುಮಾರಿಗೆ ಹೋಟೆಲ್ ನಲ್ಲಿ ಇರುವಾಗ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದದಿಂದ ಬೈದು ಬೇವರ್ಸಿ ನಿನ್ನ ಅಪ್ಪನ ಹೋಟೆಲ್ ಎಂದು ಹೇಳಿ ಕೈಯಿಂದ ಮುಖಕ್ಕೆ ಹೊಡೆದು ಹೋಟೆಲ್ ನಿಂದ ಹೊರಗೆ ಹೋಗದಂತೆ ತಡೆದು ಅಡ್ಡಗಟ್ಟಿ ಹಲ್ಲೆ ಮಾಡಿರುವುದಾಗಿದೆ ಎಂಬುದಾಗಿ.
Kavoor PS
ಪಿರ್ಯಾದಿ RAJESH KUMAR SHETTY ದಾರರು ಇಂಟೀರಿಯರ್ ಡಿಸೈನ್ ಕಂಟ್ರ್ಯಾಕ್ಟ್ ಕೆಲಸ ಮಾಡಿಕೊಂಡಿದ್ದು,ಕೋಟಿ ಪ್ರಸಾದ್ ರೈ ಹಾಗೂ ಗೀತಾ ಪೂಂಜಾರವರು ಪೀರ್ಯಾದಿದಾರರಿಗೆ ದೂರದ ಸಂಬಂದಿಗಳಾಗಿದ್ದು,ಗೀತಾ ಪೂಂಜಾರವರು ತಿಮ್ಮಪ್ಪ ಪೂಂಜಾ ರವರನ್ನು ವಿವಾಹವಾಗಿದ್ದು, ಇವರಿಗೆ ಮಕ್ಕಳಾಗಿರದ ಕಾರಣ ಪಿರ್ಯಾದಿದಾರರನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು.ಗೀತಾ ಪೂಂಜಾರವರು ದಿನಾಂಕ 03-02-2022 ರಂದು ಇಳಿ ವಯಸ್ಸಿನಲ್ಲಿ ಮೃತಪಟ್ಟಿದ್ದು, ತಿಮ್ಮಪ್ಪ ಪೂಂಜಾ ರವರ ಎಲ್ಲಾ ಕೆಲಸ ಕಾರ್ಯಗಳನ್ನು ಪಿರ್ಯಾದಿದಾರರೇ ನೋಡಿಕೊಳ್ಳುತ್ತಿದ್ದು, ತಿಮ್ಮಪ್ಪ ಪೂಂಜಾ ರವರು ತಮ್ಮ ಜೀವಿತಾವಧಿಯಲ್ಲಿ ದಿನಾಂಕ 16-05-2022 ರಂದು ತಿಮ್ಮಪ್ಪ ಪೂಂಜಾ ರವರ ಹೆಸರಿನಲ್ಲಿ ಮರಣ ಕಾಲಕ್ಕೆ ಎಲ್ಲಾ ಸ್ಥಿರಾಸ್ತಿಗಳಿಗೆ ಪಿರ್ಯಾದಿದಾರರೇ ವಾರಸುದಾರ ಎಂಬುದಾಗಿ ವೀಲುನಾಮೆಯನ್ನು ಮಾಡಿಸಿರುತ್ತಾರೆ. ತಿಮ್ಮಪ್ಪ ಪೂಂಜಾ ರವರು 05-11-2022 ರಂದು ಮರಣ ಹೊಂದಿದ ನಂತರ ಗೀತಾ ಪೂಂಜಾರವರು ದಿನಾಂಕ 26-04-2021ರ ನಕಲಿ ವೀಲುನಾಮೆಯನ್ನು ಮುಂದಿಟ್ಟುಕೊಂಡು ಆರೋಪಿತರುಗಳು ನಕಲಿ ಅಫಿದಾವಿತ್ ಮಾಡಿ ದಾಖಲೆಗಳನ್ನು RTS22 ರಂತೆ ತಮ್ಮ ಮಕ್ಕಳ ಹೆಸರಿಗೆ ಆರ್.ಟಿ.ಸಿ ಆದೇಶ ಮಾಡಿಸಿಕೊಂಡು ಪೊರ್ಜರಿ ನಡೆಸಿರುವುದಾಗಿದೆ. ಪಿರ್ಯಾದಿದಾರರಿಗೆ ತಿಮ್ಮಪ್ಪ ಪೂಂಜಾ ರವರ ಆಸ್ತಿ ಪಾಸ್ತಿ ಸೇರುತ್ತವೆ ಎಂದು ಮನಗಂಡು ಅಸೂಯೆಯಿಂದ ಅಕ್ರಮವಾಗಿ ಲಾಭ ಪಡೆಯುವ ಉದ್ದೇಶದಿಂದ ಪಿರ್ಯಾದಿದಾರರಿಗೆ ಅನ್ಯಾಯ ಮಾಡಲೆಂದೇ ಹೊಸದಾಗಿ 04/09/2022 ರಂದು ಕೊನೆಯ ವೀಲುನಾಮೆಯೆಂದು ಹೇಳಿ ತಿಮ್ಮಪ್ಪ ಪೂಂಜಾ ರವರ ಮರಣಾನಂತರ ಸುಳ್ಳು ದಾಖಲೆ ಸೃಷ್ಟೀಸಿ ನಕಲಿ ಸಹಿಗಳನ್ನು ಮಾಡಿ ಪಿರ್ಯಾದಿದಾರರಿಗೆ ಅನ್ಯಾಯವೆಸಗಿ ಅಕ್ರಮವಾಗಿ ಹಣ ಗಳಿಸುವ ದುರಾಸೆಯಿಂದ ಕಾನೂನಿನ ಕಣ್ಣಿಗೆ ಮರೆಮಾಚಿ ಸದ್ರಿ ನಕಲಿ ವೀಲು ನಾಮೆಯನ್ನು ದುರ್ಬಳಕೆ ಮಾಡಿ ಕೆಲವೊಂದು ಆಸ್ತಿಗಳ ದಾಖಲೆಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದು, ಸದ್ರಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.
Traffic South Police Station
ದಿನಾಂಕ:23-03-2023 ರಂದು ಪಿರ್ಯಾದಿ ಅಮೃತ್ ಪರಮೇಶ್ವರ್ (23ವರ್ಷ) ರವರು ಮೋಟಾರ್ ಸೈಕಲ್ ನಂಬ್ರ KA-19-HG-0065 ನೇದರಲ್ಲಿ ಸವಾರರಾಗಿ ಅವರ ತಾಯಿ ಗೀತಾಲಕ್ಷ್ಮಿರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಅವರ ಮನೆಯಾದ ಪುದುವಿನ ಕಡೆಯಿಂದ ಮಂಗಳೂರು ಕಡೆಗೆ ಕೆಲಸದ ನಿಮಿತ್ತ ರಾ.ಹೆ-73 ರಲ್ಲಿ ಸವಾರಿಮಾಡಿಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 10:15 ಗಂಟೆಗೆ ಅಡ್ಯಾರು ಸಹ್ಯಾದ್ರಿ ಕಾಲೇಜು ಎದುರು ರಸ್ತೆಯಲ್ಲಿ ತಲುಪುತ್ತಿದ್ದಂತೆ ಮಂಗಳೂರು ಕಡೆಯಿಂದ ಬರುತ್ತಿದ್ದ ಆಟೋರಿಕ್ಷಾ ನಂಬ್ರ KA-19-AE-0750 ನೇದನ್ನು ಅದರ ಚಾಲಕ ಹರೀಶ್ ರವರು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ತೆರೆದ ಡಿವೈಡರ್ ನಲ್ಲಿ ಒಮ್ಮೆಲೆ ಯೂಟರ್ನ್ ಮಾಡಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ತಾಯಿ ಗೀತಾಲಕ್ಷ್ಮಿರವರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎರಡೂ ಕಾಲಿನ ಮೊಣಗಂಟಿಗೆ, ಎಡಕಾಲಿನ ಪಾದಕ್ಕೆ ಮತ್ತು ಬಲಕೈಗೆ ತರಚಿದ ರೀತಿಯ ರಕ್ತಗಾಯವಾಗಿರುತ್ತದೆ, ಮತ್ತು ಗೀತಾಲಕ್ಷ್ಮಿರವರಿಗೆ ಎಡ ಕಾಲಿಗೆ ತೀವ್ರ ತರವಾದ ರಕ್ತಗಾಯ, ಮುಖಕ್ಕೆ ಮತ್ತು ಎರಡು ಕೈಗೆ ಅಲ್ಲಲ್ಲಿ ತರಚಿದ ರಕ್ತಗಾಯವಾಗಿರುತ್ತದೆ, ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಅವರನ್ನು ಉಪಚರಿಸಿ ಅಪಘಾತಪಡಿಸಿದ ಆಟೋರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರನ್ನು ಹೊರರೋಗಿಯಾಗಿ ಚಿಕಿತ್ಸೆ ನೀಡಿದ್ದು, ಅವರ ತಾಯಿ ಗೀತಾಲಕ್ಷ್ಮಿರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ, ಎಂಬಿತ್ಯಾದಿ.
Konaje PS
ವಾರಂಟು ಅಸಾಮಿ ಅಬ್ದುಲ್ ಅಜೀಜ್ @ ಅಜೀಜ್, ಪ್ರಾಯ 30 ವರ್ಷ, ತಂದೆ: ಇದಿನಬ್ಬ, ವಾಸ: ತಲಪಾಡಿ ಮನೆ, ಗಣೇಶ್ ಕಟ್ಟೆ, ಬಂಟ್ವಾಳ, ಹಾಲಿ : ಬಾವಾಕ ಕಂಪೌಂಡು, ಹೊಳೆ ಬದಿಗೆ ಹೋಗುವ ರಸ್ತೆ, ತುಂಬೆ, ಬಂಟ್ವಾಳ ತಾಲೂಕು, ಎಂಬಾತನು ಮಾನ್ಯ ಜೆಎಂಎಫ್‌ಸಿ 3ನೇ ನ್ಯಾಯಾಲಯ ಮಂಗಳೂರು ಇಲ್ಲಿನ ಸಿಸಿನಂಬ್ರ. 3010/09 ಕೊಣಾಜೆ ಪೊಲೀಸ್ ಠಾಣಾ ಪ್ರಕರಣದ ವಿಚಾರಣೆಯಲ್ಲಿದ್ದು, ಬಳಿಕ ಆತನ ಪ್ರಕರಣವು ಮಾನ್ಯ ಜೆ.ಎಂ.ಎಫ್. ಸಿ 7 ನೇ ನ್ಯಾಯಾಲಯದ ಸ್ಲಿಟ್ ಆಫ್ ಸಿಸಿ ನಂಬ್ರ 2194/2018 ರಲ್ಲಿ ವಿಚಾರಣೆಯಲ್ಲಿತ್ತದೆ, ಸದ್ರಿ ವಾರಂಟು ಆಸಾಮಿಯು 2019 ನೇ ಇಸವಿಯಿಂದ ಮಾನ್ಯ ಜೆ.ಎಂ.ಎಫ್. ಸಿ 7 ನೇ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವುದರಿಂದ ಆತನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಿರುವಂತೆ ವರದಿ ಎಂಬಿತ್ಯಾದಿ
Surathkal PS
ಸುರತ್ಕಲ್ ಪೊಲೀಸ್ ಠಾಣಾ ಪ್ರಕರಣದಲ್ಲಿ ಮಾನ್ಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೇಷನ್ಸ್ ನ್ಯಾಯಾಲಯದ ಎಸ್ ಸಿ ನಂ 101/2019 ರಲ್ಲಿ ಆರೋಪಿತನಾದ ಅಜರುದ್ದಿನ್ @ ಅಜರ್ @ ನಾತೂ ತಂದೆ: ಇಬ್ರಾಹಿಂ, ವಾಸ: ಜೀನತ್ ಮಂಜಿಲ್, ಕೃಷ್ಣಾಪುರ, ಕಾಟಿಪಳ್ಳ ಗ್ರಾಮ, ಮಂಗಳೂರು ತಾಲೂಕು ದ.ಕ ಜಿಲ್ಲೆ ಎಂಬಾತನು ಮಾನ್ಯ ನ್ಯಾಯಾಲಯದಲ್ಲಿ ಜಾಮೀನು ಪಡೆದ ನಂತರ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 02 ವರ್ಷ ಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಿನಾಂಕ 22-03-2023 ರಂದು ಆರೋಪಿತನ ಹೆಂಡತಿಯ ಮನೆ ಪಕ್ಕದಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ವಾರೆಂಟ್ ನಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಸದ್ರಿ ಆಸಾಮಿಗೆ ನ್ಯಾಯಾಂಗ ಬಂಧನದಲ್ಲಿಟ್ಟಿದ್ದು ಸದ್ರಿ ವಾರೆಂಟ್ ಆಸಾಮಿಗೆ ಈ ಹಿಂದೆ ಜಾಮೀನೂ ಮಂಜೂರು ಮಾಡುವ ಸಮಯದಲ್ಲಿ ನೀಡಿದ ಷರತ್ತ್ ಅನ್ನು ಪಾಲಿಸದೇ ಸುಮಾರು 02 ವರ್ಷದಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಆರೋಪಿತನ ಮೇಲೆ 229ಎ ಐಪಿಸಿ ಪ್ರಕಾರ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.
Mangalore South PS
ಪಿರ್ಯಾದಿ Sahul Hameed ಮಂಗಳೂರು ನಗರದ ದಕ್ಷಿಣ ಧಕ್ಕೆಯಲ್ಲಿ ಮೀನುಗಳನ್ನು ಅನ್ ಲೋಡ್ ಮಾಡುವ ಕೆಲಸ ಮಾಡಿಕೊಂಡಿದ್ದು, ದಿನಾಂಕ 19-03-2023 ರಂದು ಮದ್ಯಾಹ್ನ 12-30 ಗಂಟೆ ಸುಮಾರಿಗೆ ಪಿರ್ಯಾದಿದಾರರು ಹಾಗೂ ಅವರ ಜೊತೆ ಕೆಲಸ ಮಾಡುವ ಪ್ರವೀಣ, ಮಂಜಪ್ಪ, ಮಾರುತಿ ಹಾಗೂ ವಿಠ್ಠಲ ಎಂಬುವರು ಕೆಲಸ ಮುಗಿಸಿಕೊಂಡು ದಕ್ಷಿಣ ಧಕ್ಕೆಯ ಕರ್ನಾಟಕ ಮರೈನ್ ಶಾಫ್ ನ ಬಳಿ ಇದ್ದಾಗ, ಅದೇ ಸಮಯಕ್ಕೆ ಆರೋಪಿ ನಿಜಾಮ್ ಎಂಬುವರು ಸ್ಥಳಕ್ಕೆ ಬಂದಿದ್ದು, ಪಿರ್ಯಾದಿದಾರರು ಆರೋಪಿ ನಿಜಾಂ ರವರನ್ನು ಸಾಮಾನ್ಯವಾಗಿ ನೋಡಿರುತ್ತಾರೆ. ಆ ಸಮಯ ಆರೋಪಿಯು ಪಿರ್ಯಾದಿದಾರರನ್ನುದ್ದೇಶಿಸಿ, “ ಏ ಬೇವರ್ಷಿ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತೀಯಾ? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪಿರ್ಯಾದಿದಾರರ ಬಳಿ ಹೋಗಿ ಪಿರ್ಯಾದಿದಾರರನ್ನು ಕೈಯಿಂದ ದೂಡಿ, ಅಲ್ಲಿಯೇ ಪಕ್ಕದಲ್ಲಿದ್ದ ಬೋಟ್ ಕಟ್ಟುವ ಕಬ್ಬಿಣದ “ಸಿ” ಯನ್ನು ತೆಗೆದುಕೊಂಡು, ಪಿರ್ಯಾದಿದಾರರ ತಲೆಯ ಹಿಂಬದಿ, ಎಡ ಕಿವಿಗೆ ಹಾಗೂ ಎಡ ಕೈ ಶೋಲ್ಡರ್ ಬಳಿ ಹಲ್ಲೆ ನಡೆಸಿದ ಅಪರಾಧ ಎಸಗಿರುತ್ತಾರೆ, ಎಂಬಿತ್ಯಾದಿಯಾಗಿರುತ್ತದೆ.