ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police Station                                             

ದಿನಾಂಕ 24-03-2024 ರಂದು ಯಶೋದರ ಎಂಬವರು ಅವರ ಬಾಬ್ತು KA-19-HP-2524 ನಂಬ್ರದ ಮೋಟಾರು ಸೈಕಲಿನಲ್ಲಿ ಕಿಶೋರ್ ಎಂಬವರುನ್ನು ಸಹಸವಾರಾಗಿ ಕುಳ್ಳರಿಸಿಕೊಂಡು ಕೋಡಿಕೆರೆ ಎಂಬಲ್ಲಿಂದ ಲೈಟಿಂಗ್ಸ್ ಕೆಲಸ ಮುಗಿಸಿ ವಾಪಾಸು ಕಾನಾದ ರೂಮಿನ ಕಡೆಗೆ ಬರುತ್ತಾ ರಾತ್ರಿ 02:00 ಗಂಟೆಗೆ ಕಾನಾದ ಸೀತಾ ಕಂಪೌಂಡ್ ಮಿಲ್ಕ್ ಪಾರ್ಲರ್ ಬಳಿ ಡಿವೈಡರ್ ನಲ್ಲಿ  ಬಲಕ್ಕೆ ತಿರುಗಿ ಸುರತ್ಕಲ್ ಕಾನಾ ರಸ್ತೆಯ ಎಡ ಬದಿಗೆ ತಲುಪಿದಾಗ ಸುರತ್ಕಲ್ ಕಡೆಯಿಂದ KL-37-A-905 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಅಮನ್ ಎಂಬಾತನು ಹಿಂಬದಿಯಲ್ಲಿ ತಪಾದ್ ಮತ್ತು ಆದಿಲ್ ಎಂಬವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ದುಡುಕುತನದಿಂದ ಸವಾರಿ ಮಾಡಿಕೊಂಡು ಬಂದು ಯಶೋದರ ರವರ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಎರಡೂ ಮೋಟಾರು ಸೈಕಲ್ ಗಳು ಸವಾರರ ಸಮೇತ ರಸ್ತೆಗೆ ಬಿದ್ದು ಯಶೋದರರವರಿಗೆ ಹಣೆಗೆ ತೀವ್ರ ತರದ  ರಕ್ತಗಾಯವಾಗಿದ್ದು ಅಲ್ಲದೇ ಎದೆಗೆ ಗುದ್ದಿದ ಗಾಯವಾಗಿದ್ದು, ಅಲ್ಲದೇ ಕಿಶೋರನಿಗೆ ಹಣೆಗೆ ರಕ್ತ ಗಾಯ ತುಟಿಗೆ ಗಂಭೀರ  ಸ್ವರೂಪದ ರಕ್ತಗಾಯವಾಗಿತ್ತು. ಅಲ್ಲದೇ ಅಪಘಾತ ಪಡಿಸಿದ ಬೈಕ್ ಸವಾರ ಅಮನ್ ಎಂಬಾತನಿಗೆ ಹಣೆಗೆ ರಕ್ತಗಾಯ, ನಾಲಿಗೆಗೆ ರಕ್ತಗಾಯ, ಮತ್ತು ಬಲ ಕೈ ಮತ್ತು ಬಲಕಾಲಿನಲ್ಲಿ ತರಚಿದ ಗಾಯಗಳಾಗಿದ್ದು, ಅಲ್ಲದೇ ಸಹಸವಾರಾದ ತಪಾದ್ ಎಡ ಭುಜಕ್ಕೆ ಗುದ್ದಿದ ಗಾಯ ಮತ್ತು ಅಧಿಲ್ ರವರಿಗೆ ಬಲ ಕಾಲಿನ ಮೊಣಗಂಟಿಗೆ ಗುದ್ದಿದ ಗಾಯ ಮತ್ತು ಹಣೆಗೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆಗೆ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಯಶೋದರ ರವರು  ಚಿಕಿತ್ಸೆ ಪಲಕಾರಿಯಾಗದೇ ಬೆಳಿಗ್ಗೆ ಮೃತಪಟ್ಟಿರುವುದಾಗಿದೆ ಎಂಬಿತ್ಯಾದಿ.

 

Traffic South Police Station                                 

ಈ ಪ್ರಕರಣ ಸಾರಂಶವೇನೆಂದರೆ, ದಿನಾಂಕ 24/03/2024 ರಂದು ರಾತ್ರಿ ಸುಮಾರು 8-15 ಗಂಟೆಗೆ ಪಿರ್ಯಾದಿದಾರರಿಗೆ ನೆರೆಕರೆ ವಾಸಿಯಾದ ಯತೀಶ್ ದೇವಾಡಿಗರವರಿಗೆ ಅಪಘಾತವಾಗಿ ದೇರಳಕಟ್ಟೆ ಕಣಚೂರು ಆಸ್ಪತ್ರೆಯಲ್ಲಿ ದಾಖಲಾದ ಬಗ್ಗೆ ಮಾಹಿತಿ ಬಂದಂತೆ ಪಿರ್ಯಾದಿ NAVANEETH  ಇವರು ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ತೆರಳಿ ಅಲ್ಲಿದ್ದವರಲ್ಲಿ ವಿಚಾರಿಸಲಾಗಿ, ಯತೀಶ್ ದೇವಾಡಿಗ ತನ್ನ ಮೋಟಾರು ಸೈಕಲ್ KA 19 HN 4430  ನೇದರಲ್ಲಿ ಸವಾರನಾಗಿ, ನಿಧಿ ಎಂಬವರನ್ನು ಸಹ ಸವಾರೆಯನ್ನಾಗಿ ಕುಳ್ಳಿರಿಸಿಕೊಂಡು ಕೋಣಾಜೆ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿರುವಾಗ ರಾತ್ರಿ 7-35 ಗಂಟೆಗೆ ತಿರುವು ಇಳಿಜಾರು ರಸ್ತೆಯಲ್ಲಿ ತಿಪ್ಲೆ ಪದವು ಕೋಣಾಜೆ ಎಂಬಲ್ಲಿ ಮೋಟಾರು ಸೈಕಲ್ ಸವಾರ ಯತೀಶ್ ದೇವಾಡಿಗ ತನ್ನ ಮೋಟಾರು ಸೈಕಲ್ KA 19 HN 4430  ನೇದನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ರಸ್ತೆಯ ಮಧ್ಯೆದ ಡಿವೈಡರ್ ಗೆ ಡಿಕ್ಕಿಪಡಿಸಿದ್ದು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಬಿದ್ದುದರ  ಪರಿಣಾಮವಾಗಿ ಮೋಟಾರು ಸೈಕಲ್ ಸವಾರ ಯತೀಶ್ ದೇವಾಡಿಗನಿಗೆ, ಹಣೆಯ ಮೇಲ್ಗಾಗದಲ್ಲಿ ಗುದ್ದಿದ ಗಾಯ, ಕಿವಿ ಮೂಗು ಬಾಯಿಯಲ್ಲಿ ರಕ್ತ ಬರುತ್ತಿದ್ದು, ಎರಡೂ ಕೈ ಕಾಲುಗಳಿಗೆ ತರಚಿದ ಗಾಯವುಂಟಾಗಿ ಪ್ರಜ್ಞಾ ಹೀನಾ ಸ್ಥಿತಿಯಲ್ಲಿದ್ದು, ಮತ್ತು  ಗಾಯಾಳು  ಸಹ ಸವಾರೆ ನಿಧಿ ಎಂಬವರನ್ನು ಕಣಚೂರು ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ರಾತ್ರಿ 7-45 ಗಂಟೆಗೆ ಕರೆದುಕೊಂಡು ಬಂದಿದ್ದು, ರಾತ್ರಿ 8-20 ಗಂಟೆಗೆ ಮೃತಪಟ್ಟಿರುವ ಬಗ್ಗೆ  ಹಾಗೂ ಆಕೆಯ ಎರಡೂ ಕೋಲು ಕೈ ಮೂಳೆ ಮುರಿತ, ಎಡ ತೊಡೆಯ ಮೂಳೆ ಮುರಿತ ಮತ್ತು ಎದೆಗೆ ಗುದ್ದಿದ ಗಂಭೀರ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂಬಿತ್ಯಾದಿ

 

Mulki PS  

ಪಿರ್ಯಾದು Nithesh ಇವರು ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಬಸ್ ನಿಲ್ದಾಣ ಹಿಂದುಗಡೆಯಲ್ಲಿರುವ ಜೆ ಎಮ್ ಬಿಲ್ಡಿಂಗ್ ಪಕ್ಕದಲ್ಲಿ ಅರುಣ್ ಶೆಟ್ಟಿ ಎಂಬುವರ ಮಾಲಿಕತ್ವದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ದಿನಾಂಕ: 23-03-2024 ರಂದು ಸುಮಾರು 10:50 ಗಂಟೆಗೆ ಮಶ್ಚಿಮ ಬಂಗಾಳ ಮೂಲದ ರಾಣ ಬಿಸ್ವಾಸ್, ಜಯಲಾಲ್, ಅನಿಲ್, ಸುಮನ್, ಪ್ರವೀಣ್, ಅಮೂಲ್ ಮತ್ತು ಸುಜನ್ ರವರೊಂದಿಗೆ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದಾಗ ರಾಣಾ ಬಿಸ್ವಾಸ್ ಎಂಬುವರು 2 ನೇ ಮಹಡಿಯಲ್ಲಿ ಕಾಂಕ್ರೀಟ್ ಸ್ಲ್ಯಾಬ್ ತುದಿಯಲ್ಲಿ ನಿಂತುಕೊಂಡು 3ನೇ ,ಮಹಡಿಯ ಸ್ಲ್ಯಾಬ್ ಗೆ  ಬಾರ್ ಬೆಂಡಿಂಗ್ ಕಬ್ಬಿಣದ ರಾಡ್ ನ್ನು ನೀಡುತ್ತಿದ್ದಾಗ ಕಾಲು ಜಾರಿ ಕೆಳಗೆ ನೆಲಮಹಡಿಗೆ ಬಿದ್ದು ತಲೆಯ ಹಿಂಬಾಗಕ್ಕೆ ಗಂಬೀರ ಸ್ವರೂಪದ ರಕ್ತಗಾಯವಾಗಿರುತ್ತದೆ. ಗಾಯಾಳು    ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದು, ನಿರ್ಮಾಣ ಹಂತದ ಕಟ್ಟಡ ನಿರ್ಮಾಣ ಕಾರ್ಯ ಕೆಲಸ ನಡೆಯುತ್ತಿದ್ದ ವೇಳೆ ಕೆಲಸದವರಿಗೆ ಕೆಳಗೆ ಬೀಳದಂತೆ ಸೊಂಟಕ್ಕೆ ಬೆಲ್ಟ್ ಕಟ್ಟಿ ಹಗ್ಗದ ಸಹಾಯದಿಂದ ಸುರಕ್ಷತೆ ಕ್ರಮ ಜರುಗಿಸದೇ ಹಾಗೂ ತಲೆಗೆ ಹೆಲ್ಮೆಟ್ ಧರಿಸುವ ವ್ಯವಸ್ಥೆ ಮಾಡಿಸದೇ ಹಾಗೂ ಕೆಳಗೆ ಬಿದ್ದಲ್ಲಿ ಗಾಯವಾಗಬಾರದೆಂದು ಕಟ್ಟಡದ ಬದಿಯಲ್ಲಿ ನೆಟ್ (ಬಲೆ) ಅಳವಡಿಸುವ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಸೆಂಟ್ರಿಂಗ್ ಕೆಲಸದ ಗುತ್ತಿಗೆ ಪಡೆದ ನವೀನ್ ವಾಮಂಜೂರು ರವರು ಮತ್ತು ಕಟ್ಟಡದ ಮಾಲಕರಾದ ಅರುಣ್ ಶೆಟ್ಟಿರವರು ನಿರ್ಲಕ್ಷತೆ ತೋರಿ ಕೆಲಸಗಾರರಿಂದ ಕೆಲಸ ಮಾಡಿಸಿದ ಪರಿಣಾಮ ರಾಣಾ ಬಿಸ್ವಾಸ್ ನು ಕೆಲಸ ಮಾಡುತ್ತಿದ್ದ ವೇಳೆ 2 ನೇ ಮಹಡಿಯಿಂದ ಕೆಳಗೆ ಬಿದ್ದು  ತಲೆಗೆ ಗಂಭೀರ ಸ್ವರೂಪದ ಗಾಯಗೊಂಡಿರುವುದಾಗಿದೆ. ಎಂಬಿತ್ಯಾದಿ.

 

 

Kavoor PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ: 24/03/2024 ರಂದು ಮಲ್ಲಿಕಾರ್ಜುನ ಬಿರಾದಾರ ಪೊಲೀಸ್ ಉಪ ನಿರೀಕ್ಷಕರು ಕಾವೂರು ಪೊಲೀಸ್ ಠಾಣೆ ಕಾವೂರು, ಇವರು  ಸಿಬ್ಬಂದಿ ಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಂಗಳೂರು ನಗರದ ಪಂಜಿಮೊಗರು  ಗ್ರಾಮದ ಬಸ್ ನಿಲ್ದಾಣದ ಬಳಿ ಸಲ್ಮಾನ್ ಫಾರೂಕ್ (30-ವರ್ಷ) ತಂದೆ:ಅಬ್ದುಲ್ ಲತೀಪ್ , ವಾಸ: ಮನೆ ನಂಬ್ರ 1-3/7 ಉರುಂದಾಡಿಗುಡ್ಡೆಪಂಜಿಮೊಗರು ಎಂಬಾತನು ಯಾವುದೊ ಅಮಲು ಪದಾರ್ಥ ಸೇವನೆ ಮಾಡಿದ ದಂತೆ ಕಂಡು ಬಂದಿದ್ದು ಅತನ  ವೈದ್ಯಕೀಯ ತಪಾಸಣೆ ಬಗ್ಗೆ  ವೈದ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದು ತಜ್ಞ ವೈದ್ಯರು ಆರೋಪಿತನನ್ನು ಪರೀಕ್ಷಿಸಿ ಆರೋಪಿತನು ಗಾಂಜಾ ಸೇವನೆ ಮಾಡಿರುವುದಾಗಿ ದೃಡಪತ್ರ ನೀಡಿರುತ್ತಾರೆ, ಎಂಬಿತ್ಯಾದಿ

 

Konaje PS

ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದು Sachin Dsouza ಇವರ ತಂದೆ ಮೈಕಲ್ ಡಿಸೋಜಾ(60) ಎಂಬವರು ಆಟೋ ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 23-03-2024 ರಂದು ಬೆಳಗ್ಗೆ 7.15 ಗಂಟೆಗೆ  ಮನೆಯಿಂದ ಆಟೋ ಬಾಡಿಗೆ ಹೋದವರು ಬೆಳಗ್ಗೆ 08.30 ಗಂಟೆಗೆ ವಾಪಾಸು ಮನೆಗೆ ಬಂದು ಆಟೋವನ್ನು ಮನೆಯಲ್ಲಿಯೇ ಬಿಟ್ಟು 09.15 ಗಂಟೆಗೆ ಮನೆಯಿಂದ ಹೋಗಿರುತ್ತಾರೆ. ನಂತರ ಪಿರ್ಯಾದಿದಾರರು ಸಂಜೆ 7.00 ಗಂಟೆಗೆ  ಕೆಲಸ ಮುಗಿಸಿ ಮನೆಗೆ ಬಂದಾಗ ಮೈಕಲ್ ಡಿಸೋಜಾರವರು ಮನೆಗೆ ಬಾರದೇ ಇರುವುದರಿಂದ  ಫೋನ್ ಮಾಡಿದಾಗ ಫೋನ್ ಸ್ವೀಚ್ ಆಫ್ ಬಂದಿದ್ದು ಇವರ ಬಗ್ಗೆ ಸಂಬಂದಿಕರ ಮನೆಗಳಲ್ಲಿ, ಮತ್ತು ನೆರೆಕರೆಯವರಲ್ಲಿ ಹಾಗೂ ಎಲ್ಲಾ ಕಡೆ ಹುಡುಕಾಡಿ ಎಲ್ಲಯೂ ಸಿಗದೇ ಇರುವುದರಿಂದ  ಈ ದಿನ ದೂರು ನೀಡಿರುವುದಾಗಿದೆ ಎಂಬಿತ್ಯಾದಿ

 

Konaje PS

 ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 23-03-2024 ರಂದು ಪಿರ್ಯಾದು  Shivananda chidananda devangamata  ಇವರು  ಬೆಳಿಗ್ಗೆ 09.00 ಗಂಟೆಯಿಂದ ಲಕ್ಷಣ, ರವಿ (ಮೃತ) ಎಂಬವರೊಂದಿಗೆ ಉಳ್ಳಾಲ ತಾಲೂಕು ಕೈರಂಗಳ ಗ್ರಾಮದ ನಡುಪದವು ಎಂಬಲ್ಲಿ ಅಶ್ರಫ್ ಎಂಬವರ ಮಾಲಕತ್ವದ ನಿರ್ಮಾಣ ಹಂತದ ಕಟ್ಟಡದಲ್ಲಿ ಆರೋಪಿಗಳಾದ ಸುಹೇಲ್, ಮಹಮ್ಮದ್ ಶಾಹಿದ್ ಮತ್ತು ಮಹಮ್ಮದ್ ಅಮೀನ್ ರವರು ಕೆಂಪು ಕಲ್ಲನ್ನು ಮಹಡಿಗೆ ಸಾಗಿಸಲು ವಹಿಸಿಕೊಟ್ಟಂತೆ, ಪಿರ್ಯಾದುದಾರರು ಮತ್ತು ರವಿ ಮೂರನೇ ಮಹಡಿಯಲ್ಲಿದ್ದು, ಲಕ್ಷ್ಮಣ್  ರವರು ಕಲ್ಲು ಮತ್ತು ಇತರ ಸಾಮಗ್ರಿಗಳನ್ನು ಸಾಗಿಸುವ ಟೋಯಿಂಗ್ ಮಿಷಿನ್ ನ ಬಕೇಟ್ ನಲ್ಲಿ ಕೆಳಗಿನಿಂದ ಕೆಂಪು ಕಲ್ಲನ್ನು ತುಂಬಿಸಿ ಮೂರನೇ ಮಹಡಿಯ ಮೇಲ್ಛಾವಣಿಗೆ ಸಾಗಿಸುತ್ತಿದ್ದಾಗ ಸಂಜೆ ಸುಮಾರು 4.15 ಗಂಟೆಗೆ ಟೋಯಿಂಗ್ ಮಷಿನ್ ನ ಒಂದು ಭಾಗ ಬೇರ್ಪಟ್ಟ ಪರಿಣಾಮ, ಮಿಷಿನ್ ಸಮೇತ ರವಿಯು ಸುಮಾರು 30 ಅಡಿ ಎತ್ತರದಿಂದ   ಕೆಳಗೆ ಬಿದ್ದು ಗಾಯಗೊಂಡವರನ್ನು  ಪಿರ್ಯಾದುದಾರರು ಮತ್ತು ಇತರರು ಸೇರಿ ಉಪಚರಿಸಿ ದೇರಳಕಟ್ಟೆ ಕಣಚೂರು ಆಸ್ಪತ್ರಗೆ ಕರೆತಂದಾಗ ವೈದ್ಯರು  ಪರೀಕ್ಷಿಸಿ ಸಂಜೆ 6.10 ಗಂಟೆಗೆ ರವಿ (35) ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತರ ಸರಿಯಾದವಿಳಾಸ ತಿಳಿದು ಬಾರದೇ ಇದ್ದುದರಿಂದ ತೊಕ್ಕೊಟ್ಟು, ದೇರಳಕಟ್ಟೆ ಮತ್ತು ನೆಹರು ಮೈದಾನ ಮುಂತಾದ ಕಡೆಗಳಲ್ಲಿ ಮೃತರ ಬಗ್ಗೆ ವಿಚಾರಿಸಿ ತಡವಾಗಿ ಬಂದು ದೂರು ನೀಡಿದ್ದು, ಮೃತರ ಮರಣಕ್ಕೆ ಆರೋಪಿಗಳು ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಯಾವುದೇ  ಸುರಕ್ಷತಾ ಕ್ರಮವನ್ನು ಅನುಸರಿಸದೇ ನಿರ್ಲಕ್ಷ ವಹಿಸಿರುವುದೇ ಕಾರಣವಾಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ

ಇತ್ತೀಚಿನ ನವೀಕರಣ​ : 27-03-2024 09:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080