ಅಭಿಪ್ರಾಯ / ಸಲಹೆಗಳು

 

 

Traffic North Police Station                   

 ಪಿರ್ಯಾದಿ Nancy D Souza ಗಂಡ ಹ್ಯಾರಿ ಡಿಸೋಜಾ (61 ವರ್ಷ) ರವರು  ದಿನಾಂಕ: 23-04-2023 ರಂದು ಅವರ ಬಾಬ್ತು KA-19-H-4829 ನಂಬ್ರದ ಸ್ಕೂಟರಿನಲ್ಲಿ ಕಾವೂರಿಗೆ ಹೋದವರು ವಾಪಾಸು ಮನೆ ಕಡೆಗೆ ಬರುತ್ತಾ ಸಮಯ ಸುಮಾರು ರಾತ್ರಿ 9:00 ಗಂಟೆಗೆ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಗಂಡ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸ್ಕೂಟರಿನ ಹಿಂದಿನಿಂದ KA-19-V-6433 ನಂಬ್ರದ ಸ್ಕೂಟರನ್ನು ಅದರ ಸವಾರ ರಾಜೇಶ್ ಎಂಬುವರು ವೇಗವಾಗಿ ಚಲಾಯಿಸಿಕೊಂಡು ಬಂದು ಹ್ಯಾರಿ ಡಿಸೋಜಾ ರವರ ಸ್ಕೂಟರಿನ ಹಿಂಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಹ್ಯಾರಿ ಡಿ'ಸೋಜಾ ರವರು ರಸ್ತೆಗೆ ಬಿದ್ದು ಈ ಅಪಘಾತದಿಂದ ಹ್ಯಾರಿ ಡಿ'ಸೋಜಾ ರವರಿಗೆ ಎಡ ಕಣ್ಣಿನ ಮೇಲೆ ಗುದ್ದಿದ ಗಾಯ ಹಾಗೂ ತಲೆಯ ಬಲಬದಿ ರಕ್ತಗಾಯ ಮತ್ತು ಬಲಕಾಲಿಗೆ ಗಾಯವಾಗಿ ಮಾತನಾಡು ಸ್ಥಿತಿಯಲ್ಲಿ ಇರುವದಿಲ್ಲವಾಗಿದ್ದು ಎಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ ಸಾರಾಂಶ

 

CEN Crime PS Mangaluru City

ಪಿರ್ಯಾದಿದಾರರಿಗೆ ದಿನಾಂಕ 11-03-2023 ರಂದು ಬೆಳಿಗ್ಗೆ 11-00 ಗಂಟೆಗೆ ಯಾರೋ ಅಪರಿಚಿತರ ವ್ಯಕ್ತಿಯ 6262948264 ಮೊಬೈಲ್  ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರ ನೇದರ ವಾಟ್ಸಾಫ್ ಖಾತೆಗೆ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬರುತ್ತದೆ.  ನಂತರ ವಾಟ್ಸಾಪ್ ನಲ್ಲಿ online earning task ಎಂದು ತಿಳಿಸಿ telegram link: https://t.me/Vanya11188 ನೇದರ ಲಿಂಕ್ ಕಳುಹಿಸಿದ್ದರು. ನಂತರ ಪಿರ್ಯಾದಿದಾರರು ಸದ್ರಿ ಲಿಂಕ್ ನ್ನು ಬಳಸಿ ಟಾಸ್ಕ್ ನ UPI ಮೂಲಕ ತಾನು ಹೊಂದಿರುವ ಕೋಟಕ್ ಮಹಿಂದ್ರಾ ಬ್ಯಾಂಕ್ ಖಾತೆ ನಂಬ್ರ:  ನೇದರಿಂದ ದಿನಾಂಕ 12-03-2023 ರಂದು ರೂಪಾಯಿ 58,000/- ಹಣವನ್ನು ವರ್ಗಾಯಿಸಿರುತ್ತಾರೆ ನಂತರ HDFC BANK A/C NO. 50200078182672, 01331610152914   ನೇದಕ್ಕೆ ರೂಪಾಯಿ  39,000/- ವನ್ನು IMPS ಮೂಲಕ ವರ್ಗಾಯಿಸಿರುತ್ತಾರೆ.  ನಂತರ ಪಿರ್ಯಾದಿದಾರರ AXIS BANK A/S NO.  ನಿಂದ ಅಪರಿಚಿತ ವ್ಯಕ್ತಿಯ YES BANK A/C NO. 042263300006673 ನೇದಕ್ಕೆ IMPS ಮತ್ತು UPI  ಮೂಲಕ 39,505/-, 60,000/- 5000/-  ರಂತೆ ದಿನಾಂಕ 11-03-2023 ರಿಂದ 12-03-2023ರ ವರೆಗೆ ಹಂತ ಹಂತವಾಗಿ ಒಟ್ಟು 3,01,505/- ರೂಪಾಯಿಯನ್ನು ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿರುವುದಾಗಿದೆ.  ಎಂಬಿತ್ಯಾದಿ 

Traffic South Police Station

ದಿನಾಂಕ  23-04-2023 ರಂದು  ಪಿರ್ಯಾದಿ SURESH ಆಟೋರಿಕ್ಷಾ  ನಂಬರ್   KA-19-AC-9219  ನೇದರಲ್ಲಿ ಪ್ರಯಾಣಿಕರಾಗಿ  ಕುಳಿತುಕೊಂಡು  ವಾಮಂಜೂರಿನಿಂದ  ಅವರ  ಮನೆಯಾದ  ಉಳಾಯಿಬೆಟ್ಟು  ಕಡೆಗೆ  ಹೋಗುತ್ತಿರುವ  ಸಮಯ  ಸುಮಾರು   ರಾತ್ರಿ  08:45 ಗಂಟೆಗೆ   ವಾಮಂಜೂರು   ಕೆತ್ತಿಕಲ್ಲು  ಬಳಿ  ತಲುಪುತ್ತಿದ್ದಂತೆ  ಅವರು  ಪ್ರಯಾಣಿಸುತ್ತಿದ್ದ  ಆಟೋರಿಕ್ಷಾದ  ಎದುರಿನಿಂದ   ಅಂದರೆ  ಗುರುಪುರ ಕಡೆಯಿಂದ   ಮಂಗಳೂರು  ಕಡೆಗೆ  ನಂಬರ್  ತಿಳಿಯದ  ಬಿಳಿ ಬಣ್ಣದ  ಕಾರೊಂದನ್ನು  ಅದರ   ಚಾಲಕ  ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ರಸ್ತೆಯ  ತೀರಾ  ಬಲ ಬದಿಗೆ  ಹೋಗಿ  ಆಟೋರಿಕ್ಷಾದ   ಹಿಂದಿನ ಬಲಬದಿ  ಚಕ್ರದ  ಹತ್ತಿರ  ಡಿಕ್ಕಿ ಪಡಿಸಿ  ಅಪಘಾತ ಸ್ಥಳದಿಂದ  ವಾಹನ ಸಮೇತ  ಪರಾರಿಯಾದ  ಪರಿಣಾಮ  ಆಟೋರಿಕ್ಷ  ರಸ್ತೆಗೆ  ಮಗುಚಿ  ಬಿದ್ದಿರುತ್ತದೆ. ಈ  ಅಪಘಾತದ  ಪರಿಣಾಮ ಪಿರ್ಯಾದಿದಾರರ ತಲೆಗೆ ರಕ್ತಗಾಯ ಹಾಗೂ    ಎಡಬದಿ  ಸೊಂಟಕ್ಕೆ  ರಕ್ತ ಗಾಯ ಮತ್ತು   ಎರಡು   ಭುಜಕ್ಕೆ  ರಕ್ತಗಾಯವಾಗಿದ್ದು   ಅವರನ್ನು  ಅಲ್ಲಿ  ಸೇರಿದ   ಜನರು ಚಿಕಿತ್ಸೆ  ಬಗ್ಗೆ  ಕರೆದುಕೊಂಡು  ಹೋಗಿ   ಎಸ್  ಇ ಎಸ್  ಆಸ್ಪತ್ರೆಗೆ  ದಾಖಲು  ಮಾಡಿರುತ್ತಾರೆ . ಅಲ್ಲಿ  ಅವರು  ಪ್ರಥಮ  ಚಿಕಿತ್ಸೆ    ಪಡೆದು  ನಂತರ   ಹೆಚ್ಚಿನ ಚಿಕಿತ್ಸೆ  ಬಗ್ಗೆ  ದೇರಳಕಟ್ಟೆ  ಯೆನಪೋಯ   ಆಸ್ಪತ್ರೆಗೆ   ಹೋಗಿ  ದಾಖಲಾಗಿರುತ್ತಾರೆ  ಎಂಬಿತ್ಯಾದಿ.

Konaje PS

 ದಿನಾಂಕ 24-04-2023 ರಂದು ಪಿರ್ಯಾ ದಿ Raghavendra M Naik ಇಲಾಖಾ ವಾಹನದಲ್ಲಿ ರೌಂಡ್ಸ್  ಕರ್ತವ್ಯದಲ್ಲಿರುವಾಗ ಸಮಯ ಸುಮಾರು 11.15 ಗಂಟೆಗೆ ಉಳ್ಳಾಲ ತಾಲೂಕು ಹರೇಕಳ ಗ್ರಾಮದ ಹಳೆ ಗ್ರಾಮ ಪಂಚಾಯತ್ ಕಛೇರಿ ಬಳಿ ರಸ್ತೆಯ ಬದಿಯಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿಯನ್ನು ವಿಚಾರಿಸಿದಾಗ ಆರೋಪಿಯು ಗಾಂಜಾ ಎಂಬ ಮಾದಕ ವಸ್ತುವನ್ನು ಸೇವನೆ ಮಾಡುತ್ತಿದ್ದುದಾಗಿ ತಪ್ಪೊಪ್ಪಿಕೊಂಡ ಮೇರೆಗೆ ಸಿಬ್ಬಂದಿಯವರ ಸಹಾಯದಿಂದ ಆರೋಪಿ ಎಚ್. ಯು. ತೌಸಿಫ್ ಪ್ರಾಯ: 33 ವರ್ಷ, ವಾಸ: ಹರೇಕಳ ಉಂಬುದ ಮನೆ, ಹರೇಕಳ ಗ್ರಾಮ, ಉಳ್ಳಾಲ ತಾಲೂಕು, ಹಾಲಿ ವಾಸ : ಮೊಹಮ್ಮದ್ ಬಾಡಿಗೆ ಮನೆ, ಕಲ್ಲಾಪು ಪಟ್ಲ ಮಸೀದಿ ಹತ್ತಿರ, ಪೆರ್ಮನ್ನೂರು  ಗ್ರಾಮ, ಉಳ್ಳಾಲ ತಾಲುಕು ಎಂಬಾತನನ್ನು ಮುಂದಿನ ಕ್ರಮದ ಬಗ್ಗೆ ವಶಕ್ಕೆ ಪಡೆದು ಕೊಂಡು ವೈದ್ಯಕೀಯ ಪರೀಕ್ಷೆ ನಡೆಸಿ ಗಾಂಜಾ ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ದೃಢಪಟ್ಟ ಮೇರೆಗೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂಬಿತ್ಯಾದಿ.

 

Traffic South Police Station

 

 ದಿನಾಂಕ 23-04-2023 ರಂದು ಪಿರ್ಯಾದಿ ಜಯಂತಿ 70(ವರ್ಷ) ಅವರ ಅಕ್ಕನ ಮಗಳಾದ ಧನಂವತಿಯೊಂದಿಗೆ ಕುತ್ತಾರು ಮದನಿ ನಗರ ಮಸೀದಿ ಬಳಿ  ಮಂಗಳೂರು ಕಡೆಯಿಂದ ದೇರಳಕಟ್ಟೆಯಕಡೆಗೆ ಹಾದು ಹೊಗುವ ರಸ್ತೆಯ ಮಧ್ಯ ಡಿವೈಡರ್  ಕಡೆಯಿಂದ ದೇರಳಕಟ್ಟೆ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹಾದು ಹೋಗುವ ರಸ್ತೆಯನ್ನು  ದಾಟುತ್ತಿರುವಾಗ ಸಮಯ ಸುಮಾರು  ರಾತ್ರಿ 8: 30 ಗಂಟೆಗೆ ದೇರಳಕಟ್ಟೆ ಕಡಿಯಿಂದ ತೊಕೊಟ್ಟು ಕಡೆಗೆ ಸ್ಕೂಟರ್ ನಂಬ್ರ KA-19-HC-1888 ನೇದನ್ನು ಅದರ ಸವಾರೆ ಯಶೋಧ ಎಂಬುವರು ದುಡುಕುತನ ಹಾಗೂ  ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು  ಬಂದು ಪಿರ್ಯಾದಿದಾರರ ಜೊತೆ ರಸ್ತೆ ದಾಟುತ್ತಿದ್ದ   ಧನಂವತಿರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮರು ರಸ್ತೆಗೆ ಬಿದ್ದಿರುತ್ತಾರೆ .ಈ ಅಪಘಾತದಿಂದ  ಧನಂವತಿರವರ ತಲೆಯ ಎಡಬದಿಗೆ ಗಂಭೀರ ಸ್ವರೂಪದ ರಕ್ತಗಾಯವಾಗಿ ಎಡಕಣ್ಣು ಊದಿಕೊಂಡು ಕಪ್ಪಾಗಿರುತ್ತದೆ.  ಅವರನ್ನು ಚಿಕಿತ್ಸೆ  ಬಗ್ಗೆ ಪಿರ್ಯಾದಿದಾರರು ಮತ್ತು ಅಲ್ಲಿ ಸೇರಿದ ಜನರು ಹಾಗೂ ಅಪಘಾತಪಡಿಸಿದ ಸ್ಕೂಟರ್ ಸವಾರೆ ಆಟೋರಿಕ್ಷಾ ಒಂದರಲ್ಲಿ ಕರೆದುಕೊಂಡು ಹೋಗಿ  ಯೆನಪೋಯಾ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Moodabidre PS

 ದಿನಾಂಕ:23-04-2023 ರಂದು ಪಿರ್ಯಾದಿ Ganesh ಅವರ ತಾಯಿ ಇಂದಿರಾರವರೊಂದಿಗೆ ಕಾರು ನಂಬ್ರ  ಕೆಎ-19-ಎಂ.ಡಿ-8074 ನೇದನ್ನು ಚಲಾಯಿಸಿಕೊಂಡು ತನ್ನ ಮನೆಯಿಂದ ಮೂಡಬಿದ್ರೆ ಪೇಟೆಗೆಂದು ಬರುತ್ತಾ ಮೂಡಬಿದ್ರೆ ತಾಲೂಕು ಪುತ್ತಿಗೆ ಗ್ರಾಮದ ವಿದ್ಯಾಗಿರಿ ಬಳಿಯ ಗಾಂಧೀನಗರ ಎಂಬಲ್ಲಿಗೆ ತಲುಪುತ್ತಿದ್ದಂತೆ ತನ್ನ ಹಿಂದಿನಿಂದ ಬಸ್ ನಂಬ್ರ ಕೆಎ-19-ಎ.ಬಿ-9252 ನೇದನ್ನು ಅದರ ಚಾಲಕ ತಿಲಕ್ ಎಂಬವರು ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಪಿರ್ಯಾದುದಾರರ ಕಾರಿಗೆ ಡಿಕ್ಕಿಪಡಿಸಿದಲ್ಲದೇ ಬಳಿಕ ಮುಂದಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ಬರುತ್ತಿದ್ದ ಕೆಎ-70-0201 ನಂಬ್ರದ ಅಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ್ದು, ಇದರ ಪರಿಣಾಮ ಪಿರ್ಯಾದುದಾರರ ಕಾರಿನಲ್ಲಿದ್ದ ಅವರ ತಾಯಿಯವರು ಮುಗ್ಗರಿಸಿದ್ದರಿಂದ ಅವರಿಗೆ ಗುದ್ದಿನ ನಮೂನೆಯ ಗಾಯವಾಗಿದ್ದು, ಅಲ್ಲದೇ ಪಿರ್ಯಾದುದಾರರ ಕಾರು ಮತ್ತು ಅಟೋ ರಿಕ್ಷಾಕ್ಕೆ ಜಖಂ ಉಂಟಾಗಿರುತ್ತದೆ ಎಂಬಿತ್ಯಾದಿಯಾಗಿದೆ

 

Ullal PS

ಪಿರ್ಯಾದಿ ರವೀಂದ್ರ ಶಾ ಎಂಬುವರು ಬಿಹಾರ ರಾಜ್ಯದ ನಿವಾಸಿಯಾಗಿದ್ದು ತನ್ನ ಪತ್ನಿ ಪಿಂಕಿ ದೇವಿ (36 ವರ್ಷ) ಮಗ (7 ವರ್ಷ) ರವರೊಂದಿಗೆ ಮಂಗಳೂರಿಗೆ ಬಂದು ಉಳ್ಳಾಲ ಹೊಯಿಗೆ ಮರಿಯ ಕ್ಲಬ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿರುವುದಾಗಿದೆ. ಪಿರ್ಯಾದಿದಾರರು ದಿನಾಂಕ 11-04-2023 ರಂದು ಬೆಳಿಗ್ಗೆ 08-00 ಗಂಟೆಗೆ ಎಂದಿನಂತೆ .ಉಳ್ಳಾಲ ಕೋಟೆಪುರ ಎಂಬಲ್ಲಿಗೆ ಸಾರ್ಣೆ ಕೆಲಸಕ್ಕೆ  ಹೋಗಿದ್ದು ವಾಪಾಸ್ಸು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಪತ್ನಿ ಹಾಗೂ ಮಗ ಮನೆಯಲ್ಲಿ ಕಾಣಿಸದೇ ಇದ್ದು , ಪತ್ನಿಯ ಮೊಬೈಲ್ ಗೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿರುತ್ತದೆ. ಅಲ್ಲದೇ ಬಾಡಿಗೆ ಮನೆಯ ಪಕ್ಕದಲ್ಲಿ ವಾಸವಾಗಿರುವ ಬಿಹಾರ್ ರಾಜ್ಯದ ರಂಜನ್ ಕುಮಾರ್ ಎಂಬಾತನು ಕೂಡಾ ಕಾಣಿಸದೇ ಇದ್ದು ಅವನ ಮೊಬೈಲ್ ನಂಬ್ರ ಕೂಡಾ ಸ್ವಿಚ್ ಆಫ್ ಬಂದಿರುತ್ತದೆ. ಕಾಣೆಯಾಗಿರುವ ನನ್ನ ಪತ್ನಿ ಪಿಂಕಿದೇವಿ(36 ವರ್ಷ), ಮಗ (7 ವರ್ಷ)  ರವರ ಬಗ್ಗೆ ಊರಿನಲ್ಲಿರುವ ಸಂಬಂಧಿಕರಲ್ಲಿ, ನೆರೆಕರೆಯವರಲ್ಲಿ, ಇತರ ಕೆಲಸಗಾರರಲ್ಲಿ  ವಿಚಾರಿಸಿ ದೂರು ನೀಡಲು ತಡವಾಗಿರುತ್ತದೆ. ಕಾಣೆಯಾಗಿರುವ ಪಿರ್ಯಾದಿದಾರರ ಹೆಂಡತಿ ಹಾಗೂ  ಮಗನನ್ನು ಪತ್ತೆ ಮಾಡಿ ಕೊಡುವ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನ ಸಾರಾಂಶವಾಗಿದೆ.

 

 

CEN Crime PS Mangaluru City

ದಿನಾಂಕ: 28/03/2023 ರಂದು 8969209811 ನೇ  ನಂಬ್ರದಿಂದ  ಅಪರಿಚಿತ ವ್ಯಕ್ತಿಯು ಪಿರ್ಯಾದಿ ವಾಟ್ಸ್ ಆಪ್ ಗೆ ಪಾರ್ಟ್ ಟೈಮ್ ಜಾಭ್ ಆನ್ ಲೈನ್ ಅಮೆಜಾನ್ ಬಿಸ್ನೆಸ್ ಬಗ್ಗೆ ಸಂದೇಶ ಕಳುಹಿಸಿದ್ದು ಅದನ್ನು ನೋಡಿದ ಪಿರ್ಯಾದಿದಾರರು ಪಾರ್ಟ್ ಟೈಮ್ ಉದ್ಯೋಗದ ಕುರಿತು ಮಾಹಿತಿಯನ್ನು ಸದ್ರಿ ವ್ಯಕ್ತಿಯಲ್ಲಿ ವಿಚಾರಿಸಿದ್ದು ಅದರಂತೆ ಸದ್ರಿ ವ್ಯಕ್ತಿಯು @AmazonSanthosh ಟೆಲಿಗ್ರಾಂ ಚಾನೆಲ್ ನಲ್ಲಿ ಸದಸ್ಯನಾಗುವಂತೆಯು ಹಾಗೂ ಸದ್ರಿ ಚಾನೆಲ್ ಮುಖೇನ ಕಳುಹಿಸುವ ಟಾಸ್ಕ್ ಗಳಲ್ಲಿ ಭಾಗಿಯಾಗಿ ಹಣಗಳಿಸಬಹುದಾಗಿ ತಿಳಿಸಿರುತ್ತಾರೆ. ಅದರಂತೆ ಪಿರ್ಯಾದಿದಾರರು ದಿನಾಂಕ: 28/03/2023 ರಂದು @AmazonSanthosh ಟೆಲಿಗ್ರಾಂ ಚಾನೆಲ್ ನಲ್ಲಿ ಸದಸ್ಯನಾಗಿ ಸದ್ರಿ ಚಾನೆಲ್ ಮುಖೇನ ಟಾಸ್ಕ್ ಗಳಲ್ಲಿ ಬಾಗವಹಿಸುವ ಬಗ್ಗೆ  ಅವರು ಕಳುಹಿಸಿಕೊಟ್ಟ ಯುಪಿಐ ಐಡಿಗೆ ಪ್ರಥಮವಾಗಿ ರೂ 200/- ಗಳನ್ನು ತನ್ನ ಬ್ಯಾಂಕ್ ಖಾತೆಯಿಂದ ಪಾವತಿಸಿದ್ದು  ಸದ್ರಿ ಹಣಕ್ಕೆ ಕಮೀಷನ್ ಸೇರಿಸಿ ರೂ 395/- ಮರುಪಾವತಿ ಮಾಡಿರುತ್ತಾರೆ. ನಂತರ ಪಿರ್ಯಾದಿದಾರರು ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭ ದೊರೆಯಬಹುದೆಂದು ನಂಬಿ ಅಪರಿಚಿತ ವ್ಯಕ್ತಿಗಳು ತಿಳಿಸಿದಂತೆ ದಿನಾಂಕ: 28/03/2023 ರಿಂದ 04/04/2023 ರ ಮಧ್ಯಾವಧಿಯಲ್ಲಿ ಪಿರ್ಯಾದಿದಾರರು ತನ್ನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ: ರಿಂದ ರೂ 86,121.15/-, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆ ಸಂಖ್ಯೆ: ರಿಂದ ರೂ 56700/-, ಮತ್ತು  ಬ್ಯಾಂಕ್ ಆಫ್ ಬರೋಡಾ ಖಾತೆ ಸಂಖ್ಯೆ: ರಿಂದ ರೂ 190163/-  ಒಟ್ಟು ರೂ 3,30,000/- ರೂಗಳನ್ನು  ಹಂತ ಹಂತವಾಗಿ ಅಪರಿಚಿತ ವ್ಯಕ್ತಿಯು ಕಳುಹಿಸಿಕೊಟ್ಟ ವಿವಿಧ ಬ್ಯಾಂಕ್ ಖಾತೆಗಳಿಗೆ ಪಾರ್ಟ್ ಟೈಮ್ ಉದ್ಯೋಗದ ಬಗ್ಗೆ ಹಣವನ್ನು ಹೂಡಿಕೆ ಮಾಡಿದ್ದು ನಂತರ ತಾನು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಲ್ಲಿ ಹೆಚ್ಚಿನ ಹಣವನ್ನು ಪಾವತಿಸುವಂತೆ ತಿಳಿಸಿದ್ದು, ಆ ಸಮಯ ಪಿರ್ಯಾದಿದಾರರಿಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿರುವುದಾಗಿಯೂ ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ.

 

Mulki PS

ದಿನಾಂಕ: 23-04-2023 ರಂದು 18—05 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಬಪ್ಪನಾಡು ಗ್ರಾಮದ ಕೊಳಚೆ ಕಂಬಳ  ಅಂಗನವಾಡಿಯ ಬಳಿ ಎಂಬ ಸಾರ್ವಜನಿಕ ಸ್ಥಳದಲ್ಲಿ 5 ಮಂದಿ ಯುವಕರು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣವಾಗಿಟ್ಟು ನಸೀಬಿನ ಜೂಜಾಟ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಿರುವುದಾಗಿದೆ. ಎಂಬಿತ್ಯಾದಿ

 

Traffic North Police Station                                    

ಪಿರ್ಯಾದಿ ಅಬ್ದುಲ್ ರಹೀಂ (43 ವರ್ಷ) ರವರು ನಿನ್ನೆ ದಿನ ದಿನಾಂಕ: 22-04-2023 ರಂದು ಅವರ ಬಾಬ್ತು KA-19-HJ-0304 ನಂಬ್ರದ ಸ್ಕೂಟರಿನಲ್ಲಿ ಬೈಕಂಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸಮಯ ಸುಮಾರು ಸಂಜೆ 4:40 ಗಂಟೆಗೆ ಕುದುರೆಮುಖ ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಜೋಕಟ್ಟೆ ಕಡೆಯಿಂದ KA-51-ME-5701 ನಂಬ್ರದ ಕಾರನ್ನು ಅದರ ಚಾಲಕ ದತ್ತ ಪ್ರಕಾಶ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿನ ಎದುರಿಗೆ ಡಿಕ್ಕಿ ಪಡಿಸಿದ್ದು ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಈ ಅಪಘಾತದಿಂದ ಪಿರ್ಯಾದಿದಾರರಿಗೆ ಎಡಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಎಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಸುರತ್ಕಲಿನ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ ಸಾರಾಂಶ.

 

Moodabidre PS

 

ದಿನಾಂಕ 23-04-2023ರಂದು ಪಿರ್ಯಾದಿ ಶ್ರೀನಿವಾಸರವರ ಅಣ್ಣ ದಿನಕರವರು ತನ್ನ ಪತ್ನಿಯಾದ ಪೂರ್ಣಿಮಾರವರೊಂದಿಗೆ ಕೊಡ್ಯಡ್ಕ ದೇವಸ್ಥಾನಕ್ಕೆಂದು ಹೋಗಿದ್ದವರು ದೇವರ ದರ್ಶನ ಮುಗಿಸಿ ಮರಳಿ ಮನೆಯ ಕಡೆಗೆ ಬರಲು ಕೊಡ್ಯಡ್ಕ ದೇವಸ್ಥಾನದ ಮುಂಭಾಗದಲ್ಲಿರುವ ಬಸ್ಸು ನಿಲ್ದಾಣದ ಕಡೆಗೆ ಮಧ್ಯಾಹ್ನ 2:00 ಗಂಟೆಗೆ ರಸ್ತೆಯನ್ನು ದಾಟುತ್ತಿರುವಾಗ ಅಲಂಗಾರು ಕಡೆಯಿಂದ ಪಾಲಡ್ಕ ಕಡೆಗೆ KA-19-AA-6049 ನಂಬ್ರದ ಬಸ್ಸನ್ನು ಅದರ ಚಾಲಕ ಶಿವಾನಂದನು ಅತೀ ವೇಗ ಹಾಗು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ದಿನಕರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಹಾಗು ಮುಖಕ್ಕೆ ಗಂಭಿರ ರೀತಿಯ ಗಾಯವಾದವರನ್ನು ಚಿಕಿತ್ಸೆಯ ಬಗ್ಗೆ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಆಳ್ವಾಸ್ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಅವರನ್ನು ಹೆಚ್ಚಿನ ಚಿಕಿತ್ಸೆಯ ಮಂಗಳೂರು ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಎ.ಜೆ ಆಸ್ಪತ್ರೆಯಲ್ಲಿ ದಿನಕರರವರು  ಸಂಜೆ 05:01 ಗಂಟೆಗೆ ಮೃತ ಪಟ್ಟಿರುವುದಾಗಿ ಸಾರಾಂಶ.

 

Mangalore South PS  

 ದಿನಾಂಕ 23-04-2023 ರಂದು ಮದ್ಯಾಹ್ನ 12-40 ಗಂಟೆ ಸುಮಾರಿಗೆ ಪ್ರಕರಣದ ಪಿರ್ಯಾದಿ Ahammed Bashir  ತಮ್ಮ ವಾಸದ ಮನೆಯಾದ ಮಂಗಳೂರು ನಗರದ ಮಹಾಕಾಳಿ ಪಡ್ಪುವಿನ ಮಸೀದಿ ರಸ್ತೆಯ ಬಿಸ್ಮಿಲ್ಲಾ ಮಂಜಿಲ್ ನ ಒಳಗಡೆ ಇದ್ದಾಗ, ಆರೋಪಿ ಮೊಹಮ್ಮದ್ ಶಾಕೀರ್ ಎಂಬಾತನು ಪಿರ್ಯಾದಿದಾರರ ಮನೆಯ ಒಳಗಡೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರನ್ನು ಉದ್ದೇಶಿಸಿ ಬ್ಯಾರಿ ಭಾಷೆಯಲ್ಲಿ “ ಬೇವರ್ಷಿ ನಂಡೆ ಮೇಲ್ ಕಂಪ್ಲೇಂಟ್ ಕೊಡುಕರೇ” (ಬೇವರ್ಷಿ ನನ್ನ ಮೇಲೆ ಕಂಪ್ಲೇಂಟ್ ಕೊಡುತ್ತೀಯಾ) ಎಂಬುದಾಗಿ ಬೈದು,  ಕಬ್ಬಿಣದ ರಾಡ್ ನಿಂದ ಪಿರ್ಯಾದಿದಾರರ ಮೂಗಿನ ಮೇಲೆ ಹಲ್ಲೆ ಮಾಡಿ, ತನ್ನ ಕೈಯಿಂದ ಪಿರ್ಯಾದಿದಾರರ ಎಡ ಕಣ್ಣಿನ ಬಳಿಗೆ ಬಲವಾಗಿ ಗುದ್ದಿರುತ್ತಾನೆ. ಆ ಸಮಯ ಪಿರ್ಯಾದಿದಾರರ ಹೆಂಡತಿ ಶಕೀಲಾ ಬಾನು, ತಮ್ಮ ತೌಸಿಫ್ ಹಾಗೂ ಬಾಮೈದ ಅಬ್ದುಲ್ ಸಲಾಂ ರವರು ಜಗಳ ಬಿಡಿಸಲು ಹೋದಾಗ, ಆರೋಪಿಯು ಮೂವರನ್ನು ಕೈಯಿಂದ ದೂಡಿ ಕೆಳಗಡೆ ಬೀಳಿಸಿ, ಸ್ಥಳದಲ್ಲಿದ್ದ ಸ್ಕ್ರೂ ಡ್ರೈವರ್ ತೆಗೆದುಕೊಂಡು ಪುನಃ ಪಿರ್ಯಾದಿದಾರರಿಗೆ ಹಲ್ಲೆ ನಡೆಸಲು ಹೋದಾಗ, ಪಿರ್ಯಾದಿದಾರರು ತಮ್ಮ ಕೈಯಿಂದ ತಡೆದಿರುತ್ತಾರೆ. ಆ ಸಮಯ ಆರೋಪಿಯು ಕೈಯಿಂದ ಪಿರ್ಯಾದಿದಾರರ ಟೀಶರ್ಟ್ ಕಾಲರ್ ಹಿಡಿದು ಮನೆಯ ಹೊರಗೆ ಸಿಮೆಂಟ್ ಕಂಪೌಂಡ್ ಬಳಿ ದೂಡಿದ್ದು, ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದ್ದು, ನೆರೆ ಕೆರೆಯ ಸಾರ್ವಜನಿಕರು ಸ್ಥಳಕ್ಕೆ ಬಂದಿರುತ್ತಾರೆ. ಬಳಿಕ ಆರೋಪಿಯು ಪಿರ್ಯಾದಿದಾರರನ್ನು ಉದ್ದೇಶಿಸಿ “ನಿಂಡೆ ಕೊಲ್ಲಾಂತೆ ಬುಡುಲ್ಲೆ ರಂಡ್ರೆ ಮೋನು” ( ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ, ರಂಡೆ ಮಗಾ) ಎಂಬುದಾಗಿ ಬೈದು, ಜೀವ ಬೆದರಿಕೆ ಹಾಕಿ, “ಪೊಲೀಸ್ ಗು ಕೊರು, ಬಂತು ನೋಕುರೆ” (ಪೊಲೀಸ್ ಗೆ ಕೊಡು ಬಂದು ನೋಡಿಕೊಳ್ಳುತ್ತೇನೆ) ಎಂಬುದಾಗಿ ಹೇಳಿ ಸ್ಥಳದಿಂದ ಹೋಗಿರುತ್ತಾನೆ, ಎಂಬಿತ್ಯಾದಿಯಾಗಿರುತ್ತದೆ.

                                 

 

ಇತ್ತೀಚಿನ ನವೀಕರಣ​ : 21-08-2023 12:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080