Crime Reported in Mangalore South PS
ಪಿರ್ಯಾದುದಾರರಾದ ಚಂದ್ರಶೇಖರ ಮಾಡ ಎಂಬವರಿಗೆ ಆರೋಪಿತರಾದ (1) ಶ್ರೀಮತಿ. ಪ್ರಭಾ ಎಸ್ ಆಚಾರ್, ಮತ್ತು (2) ಪ್ರಸನ್ನ ಕುಮಾರ್ ಎಂಬವರು ಮಂಗಳೂರು ತಾಲೂಕು ಅತ್ತಾವರದಲ್ಲಿರುವ 4 ಸೆಂಟ್ಸ್ ಸ್ಥಿರಾಸ್ತಿ ಮತ್ತು ಅದರಲ್ಲಿರುವ ಮನೆ ನಂಬ್ರ 17-16-1286/1 ನೇಯದಕ್ಕೆ ಸಂಬಂಧಿಸಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಮೋಸ, ವಂಚನೆ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ ಎಂಬಿತ್ಯಾದಿಯಾಗಿದ್ದು,
Crime Reported in Ullal PS
ಪಿರ್ಯಾದಿ Lohith Rai ಮಾಡೂರು ಕೋಟೆಕಾರ್ ಎಂಬಲ್ಲಿ ಸಾಯಿ ಪರಿವಾರ್ ಬಾರ್ & ರೆಸ್ಟೋರೆಂಟ್ ನ್ನು ಸುಮಾರು 3 ತಿಂಗಳಿನಿಂದ ಪಾಲುಗಾರಿಕೆಯಲ್ಲಿ ನಡೆಸುತ್ತಿದ್ದು , ಸುಮಾರು ನಾಲ್ಕು ದಿನಗಳ ಹಿಂದೆ ಹರೀಶ್ ವಾಮಂಜೂರು ಎಂಬಾತನು ಬಾರಿನ ಕೌಂಟರ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು ದಿನಾಂಕ 21-05-2023 ರಂದು ಬೆಳಿಗ್ಗೆ 10-35 ಗಂಟೆಯ ಸಮಯಕ್ಕೆ ಕ್ಯಾಶ್ ಕೌಂಟರ್ ಡ್ರಾವರ್ ನಲ್ಲಿದ್ದ ರೂ 1,23,900/- ನಗದು ಹಣವನ್ನು ಕ್ಯಾಶರ್ ಆನಂದ ಎಂಬುವರು ವಾಶ್ ರೂಮಿಗೆ ಹೋಗಿದ್ದ ಸಮಯ ಹರೀಶ್ ವಾಂಮಂಜೂರು ಎಂಬುವರು ಕಳವು ಮಾಡಿಕೊಂಡು ಸ್ಕೂಟರಿನಲ್ಲಿ ಪರಾರಿಯಾಗಿರುತ್ತಾರೆ ಎಂಬಿತ್ಯಾದಿಯಾಗಿ ಪಿರ್ಯಾದಿಯು ನೀಡಿದ ದೂರಿನ ಸಾರಾಂಶ.
Barke PS
ಪಿರ್ಯಾದಿದಾರಾದ ಡೆಲ್ವಿನ್ ಮೆಲ್ರಾಯ್ ಲೋಬೋ ರವರ ಮಾಲಿಕರಾದ ಪ್ರವೀಣ್ ಎಂಬುವರ ಮಾಲಕತ್ವದ ವಾಹನ ಸಂಖ್ಯೆ KA 19 EN 3503 Honda-Dio ವಾಹನವನ್ನು ಕೆಲಸದ ನಿಮಿತ್ತ ಉಪಯೋಗಿಸಲು ಪಿರ್ಯಾದಿದಾರರಿಗೆ ಕೊಟ್ಟಿರುತ್ತಾರೆ, ದಿನಾಂಕ:25-04.2023 ರಂದು ಮಂಗಳವಾರ ಸಂಜೆ 5.50 ರ ಸಮಯಕ್ಕೆ ಪಿರ್ಯಾದಿದಾರರು ಕೆಲಸ ಮಾಡುವ ಅಂಗಡಿಯ ಬಿಲ್ಡಿಂಗ್ ಪಾರ್ಕಿಂಗ್ ಸ್ಥಳದಲ್ಲಿ ಎಂದಿನಂತೆ ದ್ವಿ ಚಕ್ರ ವಾಹನವನ್ನು ಪಾರ್ಕಿಂಗ್ ಮಾಡಿದ್ದು ಮರುದಿನ ದಿನಾಂಕ 26-04-2023 ಬೆಳಗ್ಗೆ ಸುಮಾರು 09.05 ರ ಸಮಯಕ್ಕೆ ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ಬಂದು ನೋಡಿದಾಗ ಪಿರ್ಯಾದಿದಾರರ ಬಾಬ್ತು ವಾಹನ ಸಂಖ್ಯೆ KA 19 EN 3503 Honda-Dio ದ್ವಿ ಚಕ್ರ ವಾಹನ ಸ್ಥಳದಲ್ಲಿ ಇಲ್ಲದೇ ಇದ್ದು, ಸದ್ರಿ ಸ್ಕೂಟರ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡಿ ಹೋಗಿರುತ್ತಾರೆ. ಪಿರ್ಯಾದಿದಾರರು ತನ್ನ ಕಾಣೆಯಾದ ದ್ವಿ-ಚಕ್ರ ವಾಹನವನ್ನು ಪಾರ್ಕ್ ಮಾಡಿದ ಸ್ಥಳದ ಸುತ್ತ ಮುತ್ತಲಿನ ಪರಿಸರದಲ್ಲಿ ಹಾಗೂ ಮಂಗಳೂರು ನಗರದಾದ್ಯಂತ ಎಲ್ಲಾ ಸ್ಥಳದಲ್ಲಿ ಹುಡುಕಾಡಿದರೂ ಈ ವರೆಗೆ ಪತ್ತೆಯಾಗಿರುವುದಿಲ್ಲ ಎಂದು ಇ-ಎಫ್ ಐ ಆರ್ ನಲ್ಲಿ ಈ ಮೂಲಕ ತಡವಾಗಿ ದೂರು ನೀಡಿರುವುದಾಗಿದೆ.
ಕಳುವಾದ ದ್ವಿಚಕ್ರ ವಾಹನದ ವಿವರ.
KA 19 EN 3503, Honda-Dio
ಬಣ್ಣ- ಹಳದಿ ಬಣ್ಣ
ಚಾಸೀಸ್ ನಂಬ್ರ: ME4JF39AF7271140
ಇಂಜನಿ ನಂಬ್ರ:JF39E70271145
Barke PS
ಪಿರ್ಯಾದಿ ಶ್ರೀಮತಿ ಅನಿತಾ ರವರು ತನ್ನ ಇಬ್ಬರೂ ಮಕ್ಕಳೊಂದಿಗೆ ಅರುಣ್ ಮೆಂಡನ್ @ ಲಲಿತ್ ಕುಮಾರ್ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಿದ್ದು, ದಿನಾಂಕ: 16-05-2023 ರಂದು ಪಿರ್ಯಾದಿದಾರರ ತಾಯಿಯವರಿಗೆ ಹುಷಾರಿಲ್ಲದೆ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯ ಐ.ಸಿ.ಯುವಲ್ಲಿ ದಾಖಲಿಸಿರುತ್ತಾರೆ ಎಂಬುದಾಗಿ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರು ತನ್ನ ಮಕ್ಕಳನ್ನು ಅಶೋಕನಗರದ ಕಾರ್ಯಕ್ರಮದಲ್ಲಿದ್ದ ಸ್ಥಳದಲ್ಲಿ ಬಿಟ್ಟು, ಬೆಳಿಗ್ಗೆ 11-00 ಗಂಟೆ ಸಮಯಕ್ಕೆ ಹೊರಡುವಾಗ ಬಾಗಿಲನ್ನು ಭದ್ರಪಡಿಸಿ ಬೀಗ ಹಾಕಿ ಹೋಗಿದ್ದು ಹೋಗುವಾಗ ಕಪಾಟಿನಲ್ಲಿ ಇಟ್ಟಿದ್ದ ಚಿನ್ನಾಭರಣಗಳನ್ನು ಸರಿಯಾಗಿ ನೋಡಿ ಹೋಗಿದ್ದು ನಂತರ ರಾತ್ರಿ 10-00 ಗಂಟೆ ಸಮಯಕ್ಕೆ ಮಕ್ಕಳೊಂದಿಗೆ ವಾಪಾಸು ಮನೆಗೆ ಬಂದಿರುತ್ತಾರೆ. ರಾತ್ರಿ ಮನೆಗೆ ಬಂದು ನೋಡುವಾಗ ಪಿರ್ಯಾದಿದಾರರು ತನ್ನ ಮನೆಯ ಬಾಗಿಲಿಗೆ ಹಾಕಿದ ಬೀಗ ಯಥಾಸ್ಥಿತಿಯಲ್ಲಿರುತ್ತದೆ. ದಿನಾಂಕ: 18-05-2023 ರಂದು ಸಂಜೆ ಸಮಯ ಸುಮಾರು 4-00 ಗಂಟೆಯ ವೇಳೆಗೆ ಪಿರ್ಯಾದಿದಾರರು ತನ್ನ ವಾಸದ ಮನೆಯ ಚಿನ್ನಾಭರಣ ಇಡುವ ಕಬ್ಬಿಣದ ಕಪಾಟಿನ ಬಾಗಿಲನ್ನು ತೆರೆದು ಅದರಲ್ಲಿ ಚಿನ್ನಾಭರಣ ಇಡುವ ಲಾಕರ್ ನಂತಹ ಇರುವ ಕಬ್ಬಿಣದ ಪೆಟ್ಟಿಗೆಯನ್ನು ನೋಡಿದಾಗ ಅದರಲ್ಲಿ ಇರಿಸಿದ್ದ ಸುಮಾರು 32 ಗ್ರಾಂ ತೂಕದ ಚಿನ್ನದ ನೆಕ್ಲೇಸ್-01 ಇದರ ಅಂದಾಜು ಮೌಲ್ಯ 1,80,000/-, ಮಗುವಿನ ಸಣ್ಣ ಚಿನ್ನದ ಉಂಗುರಗಳು-05 ತೂಕ ಅಂದಾಜು ಸುಮಾರು 05 ಗ್ರಾಂ ಇದರ ಅಂದಾಜು ಮೌಲ್ಯ 28,000/-, ಮಗುವಿನ ಚಿನ್ನದ ಸಣ್ಣ ಕಿವಿಯ ಟಿಕ್ಕಿ ಒಂದು ಜೊತೆ ತೂಕ ಅಂದಾಜು ಸುಮಾರು 01 ಗ್ರಾಂ ಇದರ ಅಂದಾಜು ಮೌಲ್ಯ 5,000/-, ಚಿನ್ನದ ಪೆಂಡೆಂಟ್-02 ತೂಕ ಸುಮಾರು 03 ಗ್ರಾಂ ಇದರ ಅಂದಾಜು ಮೌಲ್ಯ 16,000/-, ಕಳವು ಆಗಿರುವುದು ಕಂಡು ಬಂತು. ಕಳವಾದ ಚಿನ್ನಾಭರಣಗಳ ಒಟ್ಟು ಅಂದಾಜು ತೂಕ ಸುಮಾರು 41 ಗ್ರಾಂ ಆಗಿದ್ದು, ಇದರ ಅಂದಾಜು ಮೌಲ್ಯ ಸುಮಾರು ಒಟ್ಟು ರೂ. 2,29,000/- ಆಗಬಹುದು. ಈ ಬಗ್ಗೆ ಪಿರ್ಯಾದಿದಾರರು ತನ್ನ ಬಾಡಿಗೆ ಮನೆಯ ಕಬ್ಬಿಣದ ಕಪಾಟಿನಲ್ಲಿ ಇಟ್ಟಿದ್ದ ಸೊತ್ತುಗಳನ್ನು ಮನೆಯಲ್ಲಿ ಹಾಗೂ ಪಿರ್ಯಾದಿಯವರು ಸುತ್ತಾಡಿದ ಸ್ಥಳದಲ್ಲಿ ಇವರೆಗೂ ಹುಡುಕಾಡಿದರೂ ಸಿಗದೇ ಇದ್ದುದ್ದರಿಂದ ಈ ಬಗ್ಗೆ ಕಾನೂನು ಕ್ರಮ ಕೈಗೊಂಡು ಕಳವಾದ ಚಿನ್ನಾಭರಗಳನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿಸಾರಾಂಶ ಸಾರಾಂಶವಾಗಿರುತ್ತದೆ.
Mangalore East Traffic PS
ಪಿರ್ಯಾದಿ ಕಳಕಪ್ಪ ಮನ್ನೂರು, ಪ್ರಾಯ-40 ವರ್ಷ ಎಂಬವರು ದಿನಾಂಕ: 21-05-2023 ರಂದು ರಾತ್ರಿ ಸಮಯ ಸುಮಾರು 19:30 ಗಂಟೆಗೆ ಬಿರ್ಕನಕ್ಟಟೆಯಲ್ಲಿರುವ ಕೆನರಾ ಬ್ಯಾಂಕ್ ನ ಎಟಿಎಂ ಗೆ ಹೋಗಿ ವಾಪಾಸು ಮನೆಯ ಕಡೆಗೆ ಹೋಗುವರೇ ರಸ್ತೆ ದಾಟಿ ರಸ್ತೆಯ ಎಡಬದಿಯ ಅಂಚಿಗೆ ಬರುತ್ತಿರುವಾಗ ಬಿರ್ಕನಕಟ್ಟೆ ಕಡೆಯಿಂದ ನಂತೂರು ಕಡೆಗೆ KA-19-HH-3764 ನೇ ಸ್ಕೂಟರ್ ಸವಾರ ಕಾರ್ತಿಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ವೇಳೆ ಪಿರ್ಯಾದಿದಾರರಿಗೆ ಢಿಕ್ಕಿಪಡಿಸಿದ್ದು, ಢಿಕ್ಕಿಯ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು, ಬಲಕೈನ ಕೋಲು ಕೈಗೆ ,ಬಲ ಕಣ್ಣಿನ ಬಳಿ ,ಮುಖದ ಬಲಕ್ಕೆ,ಎದೆಯಲ್ಲಿ ಗುದ್ದಿದ ನಮೂನೆಯ ರಕ್ತ ಗಾಯವಾಗಿದ್ದು, ಸ್ಕೂಟರ್ ಸವಾರನು ಪಿರ್ಯಾದಿದಾರರನ್ನು ಆಟೊರಿಕ್ಷಾವೊಂದರಲ್ಲಿ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿಯ ವೈದ್ಯರು ಪಿರ್ಯಾದಿದಾರರನ್ನು ಪರೀಕ್ಷಿಸಿದ ವೈದ್ಯರು ಬಲಕೈಯ ಕೋಲು ಕೈಯಲ್ಲಿ ಮೂಳೆ ಮುರಿತದ ಗಾಯವಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆಯನ್ನು ನೀಡಿರುತ್ತಾರೆ.
Konaje PS
ದಿನಾಂಕ 23-05-2023 ರಂದು ಪಿರ್ಯಾದಿ Ganesh H Naik ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 10.00 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು,ಕೊಣಾಜೆ ಗ್ರಾಮದ, ಕೊಣಾಜೆ ಯುನಿವರ್ಸಿಟಿ ಬಸ್ ಸ್ಟ್ಯಾಂಡ್ ಬಳಿ ತಲುಪಿದಾಗ ರಸ್ತೆಯ ಬದಿಯಲ್ಲಿ ಧೂಮಪಾನ ಮಾಡುತ್ತಿದ್ದ ಆರೋಪಿತರಾದ ಜಮಾಲ್ ಅಬ್ದುಲ್ ಕಳಂಜ, ಪ್ರಾಯ:46 ವರ್ಷ, ವರ್ಷ, ತಂದೆ: ದಿ. ಅಬ್ದುಲ್ಲಾ ಕಂಬ್ಲಾಜೆ, ವಾಸ: ಡೋರ್ ನಂಬ್ರ 32, ಕಳಂಜ ಮನೆ, ಕಳಂಜ ಅಂಚೆ ಮತ್ತು ಗ್ರಾಮ, ಬೆಳ್ಳಾರೆ, ಸುಳ್ಯ ತಾಲೂಕು, ದ.ಕ ಮತ್ತೊಬ್ಬ ಆರೋಪಿ ಸಂಶುದ್ದಿನ್, ಪ್ರಾಯ: 34 ವರ್ಷ, ವಾಸ : ಅಯ್ಯನ ಕಟ್ಟೆ ಹೌಸ್, ಬಾಳಿಲ ಅಂಚೆ ಮತ್ತು ಗ್ರಾಮ, ಬೆಳ್ಳಾರೆ,ಸುಳ್ಯ ತಾಲೂಕು,ದ.ಕ ಎಂಬವರನ್ನು ಮುಂದಿನ ಕ್ರಮದ ಬಗ್ಗೆ ಬೆಳಿಗ್ಗೆ 10.45 ಗಂಟೆಗೆ ವಶಕ್ಕೆ ಪಡೆದುಕೊಂಡು ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈಧ್ಯಾದಿಕಾರಿಯವರ ಮುಂದೆ ಹಾಜರು ಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆರೋಪಿತರಾದ ಜಮಾಲ್ ಅಬ್ದುಲ್ ಕಳಂಜ Amphetamine ಹಾಗೂ ಆರೋಪಿ ಸಂಶುದ್ದಿನ್ Amphetamine And Tetrahydrocannabinol ಎಂಬ ಮಾದಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿ.
Bajpe PS
ಪಿರ್ಯಾದಿ Badruddin ಮಂಗಳೂರು ತಾಲೂಕು ತೆಂಕೆಎಡಪದವು ಗ್ರಾಮದ ಬೋರುಗುಡ್ಡೆ ಮನೆ ಎಂಬಲ್ಲಿ ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು ಇವರ ಹಿರಿಯ ಮಗನಾದ ಮಜ್ಮಿಲ್ (30) ಎಂಬುವನಿಗೆ ಸುಮಾರು 6-7 ವರ್ಷಗಳ ಹಿಂದೆ ಆರೋಗ್ಯದ ಸಮಸ್ಸೆ ಉಂಟಾಗಿ ಸ್ವಲ್ಟ ಬುದ್ದಿ ಮಾಂದ್ಯನಂತೆ ಇದ್ದು ಈ ಹಿಂದೆ ಮನೆಯಿಂದ ಎರೆಡು ಸಲ ಮನೆಬಿಟ್ಟು ಹೋಗಿ ಸಿಕ್ಕಿದ್ದು ದಿನಾಂಕ 21.05.2023 ರಂದು ಸಮಯ ಮಧ್ಯಾಹ್ನ 12.00 ಗಂಟೆಗೆ ಪಿರ್ಯಾದಿದಾರರ ಮಗನಾದ ಮಜ್ಮಿಲ್ ಎಂಬುವನು ಹಲ್ಲು ನೋವಿಗೆ ಮಾತ್ರೆಯನ್ನು ತರಲು ಮೆಡಿಕಲ್ ಗೆ ಹೋಗುವುದಾಗಿ ಹೇಳಿ ಹೋಗಿದ್ದು ಈ ವರೆಗೆ ವಾಪಸ್ಸು ಮನೆಗೆ ಬಂದಿರುವುದಿಲ್ಲ ಮತ್ತು ಪಿರ್ಯಾದಿದಾರರ ಮಗನ ಮೊಬೈಲ್ ಸ್ವೀಚ್ ಆಪ್ ಆಗಿರುತ್ತದೆ ಕಾಣೆಯಾದ ಪಿರ್ಯಾದಿದಾರರ ಮಗನನ್ನು ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಆದ್ದರಿಂದ ಈ ದಿನ ಠಾಣೆಗೆ ಬಂದು ದೂರು ನೀಡಿರುವುದಾಗಿದೆ ಎಂಬಿತ್ಯಾದಿ