ಅಭಿಪ್ರಾಯ / ಸಲಹೆಗಳು

Crime report in Mangalore East Traffic PS      

ದಿನಾಂಕ 24-06-2023 ರಂದು ಪಿರ್ಯಾದಿ ಪ್ರಾನ್ಸಿಸ್ ಮೆಂಡೊನ್ಸಾ ರವರು ತನ್ನ ಬಾಬ್ತು KA-19-MH-2233 ನೊಂದಣಿ ನಂಬ್ರದ ಇನೋವಾ ಕಾರನ್ನು ಕಂಕನಾಡಿ ಜಂಕ್ಷನ್ ಕಡೆಯಿಂದ ಪಂಪ್ ವೆಲ್ ಕಡೆಗೆ ಸಾಗಿರುವ ಹಳೆ ಕಂಕನಾಡಿ ರಸ್ತೆಯಲ್ಲಿ ಚಲಾಯಿಸಿಕೊಂಡು ಬರುತ್ತಾ ಬೆಳಿಗ್ಗೆ ಸಮಯ ಸುಮಾರು 7.00 ಗಂಟೆಗೆ ಕೊಚ್ಚಿನ್ ವಿಲೇಜ್ ಹೋಟೇಲ್ ಬಳಿ ಬಂದು ತಲುಪುತ್ತಿದ್ದಂತೆ ಪಂಪ್ ವೆಲ್ ಕಡೆಯಿಂದ ಕಂಕನಾಡಿ ಕಡೆಗೆ KA-19-AE-0458 ನೊಂದಣಿ ನಂಬ್ರದ ಟಾಟಾ ಇಂಟ್ರಾ ಗೂಡ್ಸ್ ಗಾಡಿಯನ್ನು ಅದರ ಚಾಲಕ ವಿನೋದ ರಾಮಚಂದ್ರ ನಾಯ್ಕ್ ರವರು ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ಅಪಾಯಕಾರಿಯಾಗಿ ಚಲಾಯಿಸಿಕೊಂಡು ಬಂದು ಒಮ್ಮೇಲೆ ಬಲಕ್ಕೆ ತಿರುಗಿಸಿದ ಪರಿಣಾಮ ಇನೋವಾ ಕಾರಿಗೆ ಢಿಕ್ಕಿಪಡಿಸಿದ್ದು, ಕಾರಿನ ಮುಂಬದಿ ಬಂಪರ್, ಹೆಡ್ ಲೈಟ್ ಸೆಟ್, ಮುಂಬದಿ ಗ್ರಿಲ್, ಬೊನೆಟ್ ಇತ್ಯಾದಿ ಜಖಂಗೊಂಡಿದ್ದು, ಢಿಕ್ಕಿಯ ರಭಸಕ್ಕೆ ಚಾಲಕರಾಗಿದ್ದ ಪ್ರಾನ್ಸಿಸ್ ಮೆಂಡಿನ್ಸಾ ರವರ ಎಡ ಕೈ ಕೋಲು ಕೈಗೆ ರಕ್ತಗಾಯ ಮತ್ತು ಕಾಲುಗಳಿಗೆ ಗುದ್ದಿದ ಪೆಟ್ಟಾಗಿದ್ದು, ಅಪಘಾತಪಡಿಸಿದ ಗೂಡ್ಸ್ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

CEN Crime PS

ದಿನಾಂಕ 20-06-2023ರಂದು ಮಧ್ಯಾಹ್ನ 16:24 ಗಂಟೆಗೆ ಯಾರೋ ಅಪರಿಚಿತ ವ್ಯಕ್ತಿ ವಾಟ್ಸ್ ಆಪ್ ನಂಬ್ರ+63 9387063050ನೇದರಿಂದ ಪಿರ್ಯಾದಿದಾರರ ದೂರವಾಣಿ ಸಂಖ್ಯೆ- ನೇದಕ್ಕೆ ವಾಟ್ಸ್ ಆಪ್ ಸಂದೇಶ ಕಳುಹಿಸಿ ಆನ್ ಲೈನ್ ಗೂಗಲ್ ರಿವ್ಯು ಟಾಸ್ಕ್ ಕೆಲಸ  ಮಾಡಿದರೆ ಕಮಿಷನ್ ನೀಡುವುದಾಗಿ ತಿಳಿಸಿ ಆನ್ ಲೈನ್ ಗೂಗಲ್ ರಿವ್ಯು ಟಾಸ್ಕ್ ಟೆಲೆಗ್ರಾಂ ಲಿಂಕ್ http://t.me/+2D_8lq9Gkjw3YTc1 ಕಳುಹಿಸಿರುತ್ತಾರೆ.ನಂತರ ಪಿರ್ಯಾದಿದಾರರು ಸದ್ರಿ ಲಿಂಕ್ ಮುಖಾಂತರ ಟೆಲೆಗ್ರಾಂ  ಗ್ರೂಪ್ ಜಾಯಿನ್  ಆಗಿರುತ್ತಾರೆ.ಸದ್ರಿ ಗ್ರೂಪ್ ನಲ್ಲಿ ಗೂಗಲ್ ರಿವ್ಯು ಟಾಸ್ಕ್ ಗಳನ್ನು ಕಳುಹಿಸಿರುತ್ತಾರೆ.ಪಿರ್ಯಾದಿದಾರರು ಸದ್ರಿ ಎರಡು ಟಾಸ್ಕ್ ಗಳನ್ನು ಪೂರ್ಣಗೊಳಿಸಿರುತ್ತಾರೆ,ಅಂತೆಯೇ ಒಂದು ಟಾಸ್ಕ್ ಗೆ 150 ರೂ ನಂತೆ ಒಟ್ಟು 300 ರೂ.ಗಳನ್ನು ಪಿರ್ಯಾದಿದಾರರ ಕೆನಾರ ಬ್ಯಾಂಕ್ ಖಾತೆಗೆ ಪಾವತಿಸಿರುತ್ತಾರೆ. ನಂತರ ಪಿರ್ಯಾದಿದಾರರಿಗೆ ಬೇರೆ ಬೇರೆ ರೀತಿಯ ಗೂಗಲ್ ರಿವ್ಯು ಟಾಸ್ಕ್ ಗಳನ್ನು ಕಳುಹಿಸಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಕಮಿಷನ್  ನೀಡುವುದಾಗಿ ತಿಳಿಸಿರುತ್ತಾರೆ.ಅದರಂತೆ ಪಿರ್ಯಾದಿದಾರರು ನಿಜವೆಂದು ನಂಬಿಕೊಂಡು ದಿನಾಂಕ 21-06-2023 ರಂದು ಪಿರ್ಯಾದಿದಾರರು ತಮ್ಮ ಕೆನಾರ ಬ್ಯಾಂಕ್, ವೇಲೆನ್ಸಿಯಾ  ಶಾಖೆಯ ಖಾತೆ ಸಂಖ್ಯೆ- ನೇದರಿಂದ ಮೊದಲಿಗೆ 1,000/- ರೂ ಗಳನ್ನು ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಪೇಟಿಎಂ 9712009269m@PNB ಐಡಿ ಗೆ ಪಾವತಿಸಿರುತ್ತಾರೆ. ದಿನಾಂಕ:21-06-2023 ರಿಂದ 23-06-2023ರರವರೆಗೆ ಪಿರ್ಯಾದಿದಾರರು ಹೆಚ್ಚಿನ ಲಾಭ ದೋರೆಯುತ್ತದೆ ಎಂದು ನಂಬಿ ತಮ್ಮ ಕೆನಾರ ಬ್ಯಾಂಕ್ ನಿಂದ ಹಂತ ಹಂತವಾಗಿ 2,07,300/-ರೂ.ಗಳನ್ನು UPI ಮೂಲಕ ಆರೋಪಿಗಳ ಖಾತೆಗೆ ಪಾವತಿಸಿರುತ್ತಾರೆ. ದಿನಾಂಕ 23-06-2023  ರಂದು ಇದೇ  ರೀತಿ ಪಿರ್ಯಾದಿದಾರರಿಂದ ಇನ್ನೂ ಹೆಚ್ಚಿನ ಹಣ ಪಾವತಿಸುವಂತೆ ಹೇಳಿದಾಗ ಪಿರ್ಯಾದಿದಾರರು ಹಣ ಪಾವತಿಸಲು ನಿರಾಕರಿಸಿರುತ್ತಾರೆ,ಈ ರೀತಿಯಾಗಿ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರಿಗೆ ಆನ್ ಲೈನ್ ಗೂಗಲ್ ರಿವ್ಯು ಟಾಸ್ಕ್ ನ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 2,07,300/- ರೂಗಳನ್ನು ಮೋಸದಿದಂದ ಪಾವತಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

Mangalore North PS                               

ಪಿರ್ಯಾದಿದಾರರಾದ ರಾಜೇಂದ್ರ ಬಿ ಪೊಲೀಸ್ ಉಪ ನಿರೀಕ್ಷಕರು ಸಿಸಿಬಿ ಘಟಕ ಮಂಗಳೂರು ರವರು ದಿನಾಂಕ: 23-06-2023 ರಂದು ಸಿಬ್ಬಂದಿಗಳೊಂದಿಗೆ ಮಂಗಳೂರು ನಗರದ ಕಮೀಶನರೇಟ್ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮದ್ಯಾಹ್ನ 2.45 ಹಂಟೆಗೆ ಮಂಗಳೂರು ಸಿಟಿ ಸೆಂಟರ್ ಬಳಿ ಎರಡು ಯುವಕರು ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಹೋದಾಗ ಪಿರ್ಯಾದಿದಾರರು ಮತ್ತು ಸಿಬ್ಬಂದಿಗಳನ್ನು ನೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರನ್ನು ಪಿರ್ಯಾದಿದಾರರು ಮತ್ತು ಸಿಬ್ಬಂದಿಗಳು ವಶಕ್ಕೆ ಪಡೆದು ಅವರ ಹೆಸರು ವಿಳಾಸ ಕೇಳಲು ವಿಚಾರಿಸಿದಾಗ 1) ಶಬೀಲ್ ಸುಲೈಮಾನ್(27) 2) ಅಬ್ದುಲ್ ಖಲೀಲ್ ಎಸ್ (28) ಎಂಬುದಾಗಿ ತಿಳಿಸಿದ್ದು. ಸದ್ರಿ ಪರಿಸರದಲ್ಲಿ ಇದ್ದ ಬಗ್ಗೆ ವಿಚಾರಣೆಗೆ ಒಳಪಡಿಸಿದಾಗ ಅವರ ಮಾತುಗಳು ತೊದಲುತ್ತಿದ್ದು ಅವರ ಬಾಯಿಯಿಂದ ಅಮಲು ಪದಾರ್ಥ ಸೇವನೆ ವಾಸನೆ ಬರುತ್ತಿದ್ದುದರಿಂದ ಅವರನ್ನು ಕೂಲಂಕೂಷವಾಗಿ ವಿಚಾರಿಸಿದಲ್ಲಿ ಅವರು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಮೇಲಿನ ಎರಡು ಜನರನ್ನು ವಶಕ್ಕೆ ಪಡೆದು ಅವರನ್ನು ವೈದ್ಯಕೀಯ ತಪಾಸಣೆಗೆ ನಗರದ ಕುಂಟಿಕಾನ ಎ.ಜೆ ಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಲ್ಲಿ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಮೇಲಿನ ಎರಡು ಜನರ ವಿರುದ್ಧ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ನೀಡಿರುವ ದೂರು ಎಂಬಿತ್ಯಾದಿ.

 

2) ಪಿರ್ಯಾದಿದಾರರಾದ ರಾಜೇಂದ್ರ ಬಿ ಪೊಲೀಸ್ ಉಪ ನಿರೀಕ್ಷಕರು ಸಿಸಿಬಿ ಘಟಕ ಮಂಗಳೂರು ರವರು ದಿನಾಂಕ: 23-06-2023 ರಂದು ಸಿಬ್ಬಂದಿಗಳೊಂದಿಗೆ ಮಂಗಳೂರು ನಗರದ ಕಮೀಶನರೇಟ್ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ರಾತ್ರಿ 8 ಗಂಟೆಗೆ ಮಂಗಳೂರು ಲೇಡಿಗೋಶನ್ ಬಳಿ ಮಾರ್ಕೆಟ್ ರಸ್ತೆಯಲ್ಲಿ ಯುವಕನೊಬ್ಬ ಯಾವುದೋ ಮಾದಕ ವಸ್ತುವನ್ನು ಸೇವನೆ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯನ್ನು ಆಧರಿಸಿ ಸ್ಥಳಕ್ಕೆ ಹೋಗಿ ಮಾದಕ ವಸ್ತು ಸೇವನೆ ಮಾಡಿ ಸ್ಥಳದಲ್ಲಿ ಕಂಡು ಬಂದಿರುವ  ಅಸ್ಪಕ್ ಐ (29) ನ್ನು ವಶಕ್ಕೆ ಪಡೆದು . ಸದ್ರಿ ಪರಿಸರದಲ್ಲಿ ಇದ್ದ ಬಗ್ಗೆ ವಿಚಾರಣೆಗೆ ಒಳಪಡಿಸಿದಾಗ ಅವನ ಮಾತುಗಳು ತೊದಲುತ್ತಿದ್ದು ಅವನ ಬಾಯಿಯಿಂದ ಅಮಲು ಪದಾರ್ಥ ಸೇವನೆ ವಾಸನೆ ಬರುತ್ತಿದ್ದುದರಿಂದ ಅವನನ್ನು ಕೂಲಂಕೂಷವಾಗಿ ವಿಚಾರಿಸಿದಲ್ಲಿ ಅವನು ಮಾದಕ ವಸ್ತುವನ್ನು ಸೇವನೆ ಮಾಡಿದ ಬಗ್ಗೆ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಮೇಲಿನ ಯುವಕನನ್ನು ವಶಕ್ಕೆ ಪಡೆದು ಅವರನ್ನು ವೈದ್ಯಕೀಯ ತಪಾಸಣೆಗೆ ನಗರದ ಕುಂಟಿಕಾನ ಎ.ಜೆ ಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಲ್ಲಿ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಮೇಲಿನ ಯುವಕನ ವಿರುದ್ಧ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ನೀಡಿರುವ ದೂರು ಎಂಬಿತ್ಯಾದಿ.

        

ಇತ್ತೀಚಿನ ನವೀಕರಣ​ : 21-08-2023 01:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080