ಅಭಿಪ್ರಾಯ / ಸಲಹೆಗಳು

 

 Crime Report in  Mulki PS

ದಿನಾಂಕ 24-07-2023 ರಂದು ರಾತ್ರಿ ಸುಮಾರು 01-25 ಗಂಟೆಗೆ ಮುಲ್ಕಿ ತಾಲೂಕು ಕಾರ್ನಾಡ್ ಗ್ರಾಮದ ಲಿಂಗಪ್ಪಯ್ಯಕಾಡು ಅಯ್ಯಪ್ಪ ಗುಡಿ ಬಳಿ ಹೆಂಚು ಚಾವಣೆಯ ಮನೆಯೊಂದರಲ್ಲಿ ಆರೋಪಿತರಾದ 1] ಸುಧಾಕರ, 2] ಅಶೋಕ, 3] ರಮೇಶ್ ಗೌಡ, 4] ಅಡಿವೆಪ್ಪ @ ಹರೀಶ್, 5] ಬುದ್ಧಿವಂತ, 6] ಅಣ್ಣರಾಯ, 7] ಸಿದ್ದಿಕ್, 8] ಮಹಮ್ಮದ್ ಇಮ್ರಾನ್, 9] ಕಲ್ಮೇಶ್ ಗುಡ್ಡಪ್ಪ ಪೂಜಾರ್, 10] ಗಿರೀಶ್ ಕೋಟ್ಯಾನ್, 11] ನಿಂಗಪ್ಪ @ ವೀರಪ್ಪ, 12] ಚಂದ್ರಶೇಖರ ನಾವಿ, 13] ಹನುಮಂತ  ಎಂಬವರುಗಳು ಇಸ್ಪೀಟು ಜೂಜಾಟ ಆಡುತ್ತಿದ್ದ ವೇಳೆ ಖಚಿತ ಮಾಹಿತಿಯಂತೆ  ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕನಾದ ಮಾರುತಿ ಪಿ, ಸುರತ್ಕಲ್ ಠಾಣೆಯ ಪಿಎಸ್ ಐ ಅರುಣ್ ಕುಮಾರ್ ಡಿ.  ಮುಲ್ಕಿ ಪೊಲೀಸ್ ಠಾಣೆಯ ಎಎಸ್ಐ. ಸುರೇಶ್ ಕುಂದರ್, ಎಎಸ್ಐ ಸಂಜೀವ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ  ಚಂದ್ರಶೇಖರ. ಪಿಸಿ.  ಶೇಖರ ಮತ್ತು ಸುರತ್ಕಲ್ ಠಾಣೆಯ ಹೆಚ್ ಸಿ  ರವಿ ಡಿ. ರವರೊಂದಿಗೆ ದಾಳಿ ನಡೆಸಿ ಆರೋಪಿತರುಗಳು ಇಸ್ಪೀಟು ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ 6,110/- ರೂಪಾಯಿ, ಇಸ್ಪೀಟು ಆಟಕ್ಕೆ ಬಳಸಿದ್ದ ಇಸ್ಪೀಟು ಎಲೆಗಳು 52,  ಬ್ರೌನ್ ಬಣ್ಣದ ಬೆಡ್ ಶೀಟ್ -1, ಮೊಬೈಲ್ ಫೋನ್ ಗಳು-10 ( ಅಂದಾಜು ಬೆಲೆ 23,700/-ರೂ) ಇವುಗಳನ್ನು ವಶಪಡಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದು ಎಂಬಿತ್ಯಾದಿ.

Mangalore East PS

ಪಿರ್ಯಾದಿ Dr RITHA KUMARI ದಾರರು ದಿನಾಂಕ 24-07-2023 ರಂದು  ಕಾರ್ಯ ನಿಮಿತ್ತ  ಮಂಗಳೂರಿಗೆ ಬಂದು ಅವರ  ಬಾಬ್ತು  ಕಾರು  ನಂಬರ್   KL-14-R -7795  ನೇದನ್ನು  ಪಿವಿಎಸ್  ಬಳಿಯ   ಲಕ್ಷ್ಮಿ  ನಾರಾಯಣ ದೇವಸ್ಥಾನದ ಗೇಟಿನ  ಮುಂಭಾಗದಲ್ಲಿ ಸಮಯ  ಸುಮಾರು  ಬೆಳಿಗ್ಗೆ  10:30 ಗಂಟೆಗೆ   ನಿಲ್ಲಿಸಿ  ಕಾರ್ ಸರ್ವಿಸ್ ಸೆಂಟರ್ ಗೆ   ಕಾಲ್  ಮಾಡಿ ಮಾತನಾಡುತ್ತಿರುವಾಗ  ಅಪರಿಚಿತ ವ್ಯಕ್ತಿಯೊಬ್ಬ  ಬಂದು 10 ರೂಪಾಯಿ  ನೋಟ್ ನ್ನು   ಕಾರಿನ ಎಡಭಾಗದಲ್ಲಿ  ಹಾಕಿ  ನಿಮ್ಮ   ಹಣ  ಬಿದ್ದಿದೆ  ಎಂದು  ಪಿರ್ಯಾದಿದಾರರ ಗಮನವನ್ನು  ಅತ್ತ ಸೆಳೆದು ಅದೇ  ಸಮಯ  ಬಲಭಾಗದಲ್ಲಿಯೂ ಕೂಡಾ  10 ರೂಪಾಯಿ ನೋಟನ್ನು  ಹಾಕಿ ಪಿರ್ಯಾದಿದಾರರು  ಅದನ್ನು  ಹೆಕ್ಕಿ  ಅವನಿಗೆ  ಕೊಡಲು ಹೋದಾಗ  ಇನ್ನೊಬ್ಬ ಎಡಬದಿಯಿಂದ  ಪಿರ್ಯಾದಿದಾರರ ಕಾರಿನ  ಡ್ರೈವರ್  ಸೀಟಿನ ಎಡಭಾಗದಲ್ಲಿ ಇಟ್ಟಿದ್ದ  ನಗದು  ರೂ  20,000 ,  ATM  ಕಾರ್ಡ್  ಕ್ರೇಡಿಟ್  ಕಾರ್ಡ್  , ಬೀಗದ  ಕೀ ಮತ್ತು ಇತರ ದಾಖಲಾತಿಗಳಿದ್ದ  ಬ್ಯಾಗನ್ನು  ಕಳವು ಮಾಡಿಕೊಂಡು  ಹೋಗಿರುತ್ತಾರೆ  ಎಂಬಿತ್ಯಾದಿ.

Traffic South Police Station     

ಪಿರ್ಯಾದಿದಾರರಾದ  ಮಂಗಳೂರಿನ ಸಂಚಾರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹೆಡ್ ಕಾನ್ ಸ್ಟೇಬಲ್  ದೇವಿಪ್ರಸಾದ್ ಅವರು ದಿನಾಂಕ: 23-07-2023ರಂದು ಕರ್ತವ್ಯ ಮುಗಿಸಿ ಮನೆಗೆ ಹೋದ ಸಮಯ ಅವರ ಪರಿಚಿತರೊಬ್ಬರು ಮೊಬೈಲ್ ಗೆ ಕರೆ ಮಾಡಿ ಸಿಟಿ ಬಸ್ಸಿನ ಚಾಲಕ ದುಡುಕುತನ ಹಾಗೂ ನಿರ್ಲಕ್ಷತನದಿಂದ ಮೊಬೈಲ್ ನೋಡಿಕೊಂಡು ಬಸ್ ಚಲಾಯಿಸುತ್ತಿರುವ ವೀಡಿಯೋ ಒಂದು ಬಸ್ಸಿನ ಚಾಲಕ ಮೊಬೈಲ್ ನೋಡ್ಕೊಂಡೇ ಸ್ಟೇರಿಂಗ್ ಕಂಟ್ರೊಲ್ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗುತ್ತಿರುವ ಬಗ್ಗೆ ವಾಟ್ಸಪ್ ಗೆ ಕಳುಹಿಸಿದ್ದು, ದಿನಾಂಕ: 24-07-2023 ರಂದು ಸದ್ರಿ ವೀಡಿಯೋದ ಬಗ್ಗೆ ಬಾತ್ಮಿದಾರರಲ್ಲಿ ವಿಚಾರಿಸಿದಾಗ  ದಿನಾಂಕ: 23-07-2023 ರಂದು ಮಧ್ಯಾಹ್ನ 2-00 ಗಂಟೆಯ ಸುಮಾರಿಗೆ KA-19-AD-6153 ನೇ ನಂಬ್ರದ ಸೈಂಟ್ ಅಂತೋನಿ ಮೋಟಾರ್ಸ್ ಎಂಬ ಹೆಸರಿನನ 42 ನೇ ರೂಟ್ ನಂಬ್ರದ ಸಿಟಿ ಬಸ್ಸಿನ ಚಾಲಕ  ಕಿಶೋರ್ ಮೇಲ್ವಿನ್ ಗೊನ್ಸಾಲಿಸ್ ಎಕ್ಕೂರಿನಿಂದ ಜಪ್ಪಿನಮೊಗರುವಿನ ನೇತ್ರಾವತಿ ಬ್ರಿಡ್ಜ್ ವರೆಗೆ ಪ್ರಯಾಣಿಕರು ಕೂತಿರುವ ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ  ಸಾರ್ವಜನಿಕ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಮೊಬೈಲ್ ನೋಡಿಕೊಂಡು ಬಸ್ಸನ್ನು  ಚಲಾಯಿಸಿರುವುದು ತಿಳಿದುಬಂದಿರುತ್ತದೆ ಎಂಬಿತ್ಯಾದಿ .

CEN Crime PS

ದಿನಾಂಕ 17-07-2023 ರಂದು ಸಂಜೆ 17-00 ಸಮಯಕ್ಕೆ  ಪಿರ್ಯಾದಿದಾರರ ಇನ್ಸ್ಟಾಗ್ರಾಮ್ ಖಾತೆಗೆ Winslet_keira ಎಂಬ ಇನ್ಸ್ಟಾಗ್ರಾಮ್ ಖಾತೆಯಿಂದ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಕಳುಹಿಸಿದ್ದು ಇದನ್ನು ಗಮನಿಸಿದ ಪಿರ್ಯಾದಿದಾರರು ಅಪರಿಚಿತ ವ್ಯಕ್ತಿಯೋಂದಿಗೆ ಚಾಂಟಿಗ್ ಮಡಿದಾಗ ಆರೋಪಿಯು ನಾನು ಕ್ರಿಪ್ಟೋ  ಅಕೌಂಟ್ ಮೇನೆಜರ್ ಎಂದು ಪರಿಚಯಿಸಿಕೊಂಡು ನಮ್ಮ ಕಂಪನಿಯಲ್ಲಿ ಇನ್ವೆಸ್ಟ್ ಮಾಡಿದರೆ ಹಣ ಡಬಲ್ ಮಾಡಿ ಕೋಡುವುದಾಗಿ ತಿಳಿಸಿ ಪಿರ್ಯಾದಿದಾರರಿಂದ ಆರೋಪಿತರು ತಮ್ಮ  ವಿವಿಧ UPI IDಗಳಾದ 7033959369,7033959789ನೇದಕ್ಕೆ ಗೂಗಲ್ ಪೇ ಮೂಲಕ  ಹಾಗೂ ಬ್ಯಾಂಕ್ ಖಾತೆಗಳಾದ.1) Canara Bank A/c:110129811838IFSC:CNRB0002142 2) Indusind Bank A/c:100200647736 IFSC:INDB000121 3) ICICI Bank A/c:328501501481 IFSC:ICIC0003285 4)DBS Bank A/c:8811010006066169.IFSC:DBSS0IN0811 5) Union Bank A/c:4513020101100838.IFSC:UBIN0545139 6)Kotak Mahindra Bank A/c:4948389555 IFSC:KKBK0001946.ನೇದಕ್ಕೆ ಪಿರ್ಯಾದಿದಾರರ ಬ್ಯಾಂಕ್ ಖಾತೆ ಸಂಖ್ಯೆ. ನೇದಿಂದ ಹಂತ ಹಂತವಾಗಿ ಒಟ್ಟು 3,41,000/-ರೂ.ಗಳನ್ನು ವರ್ಗಾಯಿಸಿಕೊಂಡು ಆನ್ ಲೈನ್ ಮೂಲಕ ಮೋಸದಿಂದ ಹಣ ವರ್ಗಾಯಿಸಿಕೊಂಡು ಪಿರ್ಯಾದಿದಾರರಿಗೆ ಆನ್ ಲೈನ್ ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 21-08-2023 02:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080