ಅಭಿಪ್ರಾಯ / ಸಲಹೆಗಳು

Crime Report in Mangalore West Traffic PS

ಪಿರ್ಯಾದಿ KRISHNA GHATGE ದಾರರು  ದಿನಾಂಕ 23-08--2023 ರಂದು ಠಾಣಾ ವ್ಯಾಪ್ತಿಯ ಮಂಗಳೂರು ನಗರದ ಪಿ.ವಿ.ಎಸ್ ಜಂಕ್ಷನ್ ನಲ್ಲಿ ಇಲಾಖಾ ಸಮವಸ್ತ್ರ ದಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿರುವ ಸಮಯ ಸುಮಾರು ಬೆಳಿಗ್ಗೆ 8-30 ಗಂಟೆಗೆ KA-03-NG-9705 ನೇ ನೊಂದಣಿ ನಂಬ್ರದ ಕಾರನ್ನು ಮಂಗಳೂರು ನಗರದ ಪಿ.ವಿ.ಎಸ್ ಜಂಕ್ಷನ್ ಅಂಚೆ ಕಚೇರಿಯ ಬಳಿ ಫೂಟ್ ಫಾತ್ ನಲ್ಲಿ ಕಾರನ್ನು ನಿಲ್ಲಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿರುವುದಾಗಿದೆ.

Mangalore West Traffic PS               

ದಿನಾಂಕ:22-08-2023 ರಂದು ಪಿರ್ಯಾದಿ SUGUNAದಾರರ ತಂದೆ ಗೋಪಾಲರವರು ಕೆಲಸ ಮುಗಿಸಿ ಮನೆಗೆ ಬರುವ ಸಮಯ ಸುಮಾರು ಸಂಜೆ 7.00 ಗಂಟೆಗೆ ರಾವ್ & ರಾವ್ 1ನೇ ಮೈದಾನ್ ಕ್ರಾಸ್ ರಸ್ತೆಯಲ್ಲಿ ಪಿರ್ಯಾದಿದಾರರ ತಂದೆಯವರು ತಲೆ ತಿರುಗಿ ರಸ್ತೆ ಬದಿಯಲ್ಲಿ ಬಿದ್ದಾಗ ಕೆಎ-70-ಎಂ-3300ನೇ ನೊಂದಣಿ ನಂಬ್ರದ ಹುಂಡೈ ಕಾರನ್ನು ಅದರ ಚಾಲಕನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಪಿರ್ಯಾದಿದಾರರ ತಂದೆಯವರ ಎಡಭಾಗದ ಎದೆ ಮತ್ತು ಕೈ ಮೇಲೆ ಚಲಾಯಿಸಿಕೊಂಡು ಹೋಗಿ ಕಾರನ್ನು ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಅಲ್ಲಿ ಸೇರಿದ ಸಾರ್ವಜನಿಕರು ಪಿರ್ಯಾದಿದಾರರ ತಂದೆಯವರನ್ನು ಉಪಚರಿಸಿದಾಗ ಪಿರ್ಯಾದಿದಾರರ ತಂದೆಯವರು ಪ್ರಜ್ಞಾಹೀನರಾಗಿ  ಗಂಬೀರ ಗಾಯಗೊಂಡಿದ್ದವರನ್ನು 108 ಅಂಬ್ಯೂಲೆನ್ಸ್ ನಲ್ಲಿ ಚಿಕಿತ್ಸೆಯ ಬಗ್ಗೆ  ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

Mangalore East Traffic PS                

ಪಿರ್ಯಾದಿದಾರರಾದ ವಿಶ್ವನಾಥ್ ರೈ ಎಂ ಸಹಾಯಕ ಪೊಲೀಸ್ ಉಪ-ನಿರೀಕ್ಷಕರು ಸಂಚಾರ ಪೂರ್ವ ಪೊಲೀಸ್ ಠಾಣೆ  ಮಂಗಳೂರು ರವರು  ಈ ದಿನ ದಿನಾಂಕ: 24-08-2023 ರಂದು ಠಾಣಾ ಸರಹದ್ದಿನ ಪಳ್ನೀರು, ಅತ್ತಾವರ ಕಡೆ ಸೆಕ್ಟರ್ 2 ನೇ ಕರ್ತವ್ಯದಲ್ಲಿದ್ದ ವೇಳೆಯಲ್ಲಿ ಬೆಳಿಗ್ಗೆ ಸಮಯ ಸುಮಾರು 09:50 ಗಂಟೆಗೆ ಆವೇರಿ ಜಂಕ್ಷನ್ ಕಡೆಯಿಂದ ಅತ್ತಾವರ ಕಡೆಗೆ ಹಾದು ಹೋಗುವ ಸ್ಟರಕ್ ರಸ್ತೆಯ ಉತ್ತರ ಬದಿಯಲ್ಲಿರುವ ಪಾದಚಾರಿ ರಸ್ತೆಯಲ್ಲಿ KA-19-MH-5915 ನೇ ನಂಬ್ರದ ಕಾರನ್ನು ಅದರ ಚಾಲಕ ಮೊಹಮ್ಮದ್ ಅಶ್ಫಾಕ್ ತಂದೆ: ಉಮರಬ್ಬ ಯು.ಎಂ, ವಾಸ: 16-5-349/24, ಪ್ಲಾಟ್ ನಂಬ್ರ-308, 1 ನೇ ಅಡ್ಡ ರಸ್ತೆ, ವಾಸ್ ಲೇನ್ ಅಲ್ ಕೋವ್ ಅಪಾರ್ಟ್ ಮೆಂಟ್, ಕಂಕನಾಡಿ ಮಂಗಳೂರು ಎಂಬುವರು ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗುವರ ರೀತಿಯಲ್ಲಿ ನಿಲ್ಲಿಸಿರುವುದಾಗಿದೆ ಎಂಬಿತ್ಯಾದಿ.

 

Mangalore East PS..                               

ಫಿರ್ಯಾದಿ ವಿನಾಯಕ ರಾವ್ ರವರು 2ನೇ ಫಿರ್ಯಾದಿ ಅಶೋಕ್ ರಾವ್ ಮತ್ತು 3 ನೇ ಫಿರ್ಯಾದಿ ಶ್ರೀಮತಿ ಪ್ರಸನ್ನ ಲಕ್ಷ್ಮಿ ರಾವ್ ರವರಿಂದ ಸ್ಪೆಷಲ್ ಪವರ್ ಆಫ್ ಅಟಾರ್ನಿ ಪಡೆದವರಾಗಿದ್ದು, 1 ನೇ ಆರೋಪಿತರಾದ ವಿಘ್ನೇಶ್ ಎಂ. ರಾವ್ ಮತ್ತು 2ನೇ ಆರೋಪಿತ ವಿಕ್ರಮ್ ಎಂ. ರಾವ್ ರವರು ಫಿರ್ಯಾದುದಾರರ ತಾಯಿ ದಿವಂಗತ ಶ್ರೀಮತಿ ಉಷಾ ರಾಮಚಂದ್ರ ರಾವ್ ರವರ ಅಣ್ಣ ಮೆಲ್ಕಾರ್ ವೆಂಕಟಗಿರಿ ರಾವ್ ರವರ ಮಕ್ಕಳಾಗಿದ್ದು, ಮೂರನೇ ಆರೋಪಿ ಶ್ರೀಮತಿ ಸುಧಾ ರಾವ್ ರವರು 1 ಮತ್ತು 2ನೇ ಆರೋಪಿಗಳ ತಾಯಿಯಾಗಿದ್ದು, 4 ನೇ ಆರೋಪಿ ಎಂ, ರಾಮರಾಜ ರಾವ್ ಹಾಗು 5 ನೇ ಆರೋಪಿ ಶ್ರೀಮತಿ ವೀಣಾ ಎಂ. ರಾವ್ ರವರು ಕ್ರಮವಾಗಿ ಫಿರ್ಯಾದುದಾರರ ತಾಯಿಯ ತಮ್ಮ ಮತ್ತು ತಂಗಿ ಆಗಿರುತ್ತಾರೆ. ಆರೋಪಿ 1 ರಿಂದ 5  ವರೆಗಿನವರು ಅರ್ಜಿದಾರರ ತಾಯಿಯ ಹಿರಿಯರಿಗೆ ಸೇರಿರುವ ಮತ್ತು ಅರ್ಜಿದಾರರ ತಾಯಿಗೆ ಪಾಲು ಬರಬೇಕಾಗಿದ್ದ ಮಂಗಳೂರು ನಗರದ ಕೊಡಿಯಾಲ್ ಬೈಲ್ ಜೈಲ್ ರಸ್ತೆಯಲ್ಲಿರುವ TN No. 1 / 1 ಜೊತೆಗೆ RS 15 / 1 ರ 10 ಸೆಂಟ್ಸ್ ಜಾಗವನ್ನು ಮತ್ತು ಮನೆಯನ್ನು ಹಾಗೂ  ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತರ ಸ್ಥಳಗಳಲ್ಲಿರುವ ಆಸ್ತಿಯ ಪಾಲನ್ನು ಕೊಡುತ್ತೇವೆ ಎಂದು ಹೇಳುತ್ತಾ ಬಂದು ನಂತರ ಆಸ್ತಿಯನ್ನು ವಿಭಾಗ ಮಾಡುವ ಸಮಯದಲ್ಲಿ ಅರ್ಜಿದಾರರ ತಾಯಿಯನ್ನು ಮರೆಮಾಚಿ ಆರೋಪಿಗಳು ಸ್ವತಃ ತಾವೇ ವಿಭಾಗ ಮಾಡಿಕೊಂಡು  ಆಸ್ತಿಯನ್ನು ಕೊಡದೆ ವಿಶ್ವಾಸದ್ರೋಹ ಮಾಡಿ ವಂಚಿಸಿರುವುದಾಗಿದೆ ಎಂಬಿತ್ಯಾದಿ.

CEN Crime PS

ದಿನಾಂಕ  15-04-2023 ರಂದು  ಫಿರ್ಯಾದುದಾರರು ಮನೆಯಲ್ಲಿರುವ ಸಮಯ ಸಂಜೆ 5.00 ಗಂಟೆಗೆ ಆಕೆಯ ಮೊಬೈಲ್ ನಂ.  ನೇದಕ್ಕೆ ಗೂಗಲ್ ಪ್ಲೇ ಸ್ಟೋರ್ ನಿಂದ quick money ಎಂಬ ಲೋನ್ ಆಪ್ ನ್ನು ನೋಡಿ ಅದನ್ನು ಡೌನ್ ಲೋಡ್ ಮಾಡಿದ್ದು ಸದ್ರಿ ಲೋನ್ ಆಪ್ ನಲ್ಲಿ ರೂ. 10000/- ಲೋನ್ ಗೆ ಅಪ್ಲೈ ಮಾಡಿದ್ದು ಕೂಡಲೇ 7500/- ನನ್ನ ಖಾತೆಗೆ ಕ್ರೆಡಿಟ್ ಆಗಿರುತ್ತದೆ. ನಂತರ ಫಿರ್ಯಾದುದಾರರು ಸ್ವಲ್ಪ ದಿನಗಳ ನಂತರ 10000/- ವನ್ನು ಮರು ಪಾವತಿ ಮಾಡಿದ್ದು ನಂತರದ ದಿನಗಳಲ್ಲಿ +8801917876737, +923175117514, +8801725434777, +8801794519568, +8801701800798, +8801631841539, +8801637686607 ಎಂಬ ವಾಟ್ಸಪ್ ನಂಬ್ರದಿಂದ ಫಿರ್ಯಾದುದಾರರಿಗೆ ಕಡ್ಡಾಯವಾಗಿ ಪುನಃ ಲೋನನ್ನು ಪಡೆಯಬೇಕೆಂದು ಒತ್ತಾಯಿಸಿ ನನ್ನ ಖಾತೆಗೆ 14000/- ನ್ನು ಕ್ರೆಡಿಟ್ ಮಾಡಿದ್ದು ಸದ್ರಿ ಹಣವನ್ನು ಮರು ಪಾವತಿ ಮಾಡಿರುತ್ತಾರೆ  ಎಲ್ಲಾ  ಹಣವನ್ನು ಪಾವತಿಸಿದ ಬಳಿಕವು ಸದ್ರಿ ವ್ಯಕ್ತಿಯು ಮೇಲ್ಕಂಡ ಮೊಬೈಲ್ ನಂಬ್ರಗಳಿಂದ ಫಿರ್ಯಾದುದಾರರಿಗೆ ಕರೆ ಮಾಡಿ ಹೆಚ್ಚಿನ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸಿ ಫಿರ್ಯಾದುದಾರರ ಎಸ್.ಬಿ.ಐ ಖಾತೆ ಸಂಖ್ಯೆ ನೇದರಿಂದ ರೂ.51000/- ನ್ನು ತನ್ನ ಖಾತೆಗೆ ವರ್ಗಾಯಿಸಿರುತ್ತಾರೆ. ನಂತರದ ದಿನಗಳಲ್ಲಿ ಫಿರ್ಯಾದುದಾರರಿಗೆ ಬೇರೆ ಬೇರೆ ನಂಬ್ರಗಳಿಂದ ಕರೆ ಮಾಡಿ ಹಣವನ್ನು ಹಿಂತಿರುಗಿಸುವಂತೆ ಬೆದರಿಕೆ ಹಾಕಿರುವುದಲ್ಲದೇ ಫಿರ್ಯಾದುದಾರರ ಫೋಟೋವನ್ನು ಹುಡುಗನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ, (fuck me and pay loan) ಫಿರ್ಯಾದುದಾರರಿಗೆ ಕಳುಹಿಸಿ ಇತರರಿಗೆ ಕಳುಹಿಸುವುದಾಗಿ  ಹಾಗೂ ಸಂಬಂಧಿಕರಿಗೆ ಕಳುಹಿಸುವುದಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುವುದಾಗಿಯೂ ಬೆದರಿಸಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 24-08-2023 07:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080