ಅಭಿಪ್ರಾಯ / ಸಲಹೆಗಳು

Crime Reported in : Mangalore West Traffic PS

ಪಿರ್ಯಾದಿ JEETHENDRA ದಾರರು ಭವಂತಿ ಸ್ಟ್ರೀಟ್ ನಲ್ಲಿರುವ ವೆಂಕಟರಮಣ ಆರ್ಕೆಡ್ ನಲ್ಲಿ ಗಣೇಶ್ ಗಾರ್ಮೆಂಟ್ಸ್ ಎಂಬ ಹೆಸರಿನ ಬಟ್ಟೆ ಅಂಗಡಿಯನ್ನಿಟ್ಟು ವ್ಯಾಪಾರವನ್ನು  ನಡೆಸುತ್ತಿದ್ದರು. ದಿನಾಂಕ:22-09-2022 ರಂದು ರಾತ್ರಿ ಬಟ್ಟೆ ಅಂಗಡಿಯನ್ನು ಮುಚ್ಚಿ ಪಿರ್ಯಾದಿದಾರರು ತನ್ನ ಬಾಬ್ತು KA-19-HC-4587 ನೇ ಮೋಟಾರು ಸೈಕಲ್ ನಲ್ಲಿ ಮನೆ ಕಡೆ ಹೋಗುತ್ತಿರುವ ಸಮಯ ಸುಮಾರು ರಾತ್ರಿ 10-30 ಗಂಟೆಗೆ ವೆರ್ ಹೌಸ್ ಸಾರ್ವಜನಿಕ ರಸ್ತೆಯಲ್ಲಿರುವ ಇನ್ಪೆಂಜರ್ ಟೆಕ್ಸೋಲೋಜೀನ್ ಪ್ರೈವೇಟ್ ಲಿಮಿಟೆಡ್ ಎಂಬ ಕಚೇರಿಯ ಬಳಿ ತಲುಪುವಾಗ ಪಿರ್ಯಾದಿದಾರರ ಎದುರಿನಿಂದ ಅಂದರೆ ಬಳ್ಳಾಲ್ ಭಾಗ್ ಕಡೆಯಿಂದ KA-19-EM-7961ನೇ ಮೋಟಾರು ಸೈಕಲ್ ನ್ನು ಅದರ ಚಾಲಕ ನಾರಾಯಣ ಶೆಣೈರವರು ತೀರಾ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಸಾರ್ವಜನಿಕರ ರಸ್ತೆಯ ಬಲ ಬದಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಎಡ ಕಾಲಿನ ಮೂಳೆ ಮುರಿತವಾಗಿ ಗಾಯಗೊಂಡವರನ್ನು ಪಿರ್ಯಾದಿದಾರರ ಸ್ನೇಹಿತ ಅಶೋಕರವರು ವಾಹನವೊಂದರಲ್ಲಿ ಕೊಡಿಯಾಲ್ ಬೈಲ್ ನ ಯೆನಪೋಯಾ ಆಸ್ಪತ್ರೆಯಲ್ಲಿ  ಚಿಕಿತ್ಸೆಯ ಬಗ್ಗೆ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ ಎಂಬಿತ್ಯಾದಿ

Crime Reported in Urva PS

ಪಿರ್ಯಾದಿ ದಾರರಾದ ರಾಜು ಕುಮಾರ್ ಮಾಥೂ ರವರು ಕೆಲಸದ ನಿಮಿತ್ತ ಪುತ್ತೂರು ಕಡೆಗೆ ಹೋಗಿದ್ದು ಸದ್ರಿಯವರ ಹೆಂಡತಿ ಶ್ರೀಮತಿ ಜ್ಯೋತಿ ರಾಜು ಮಾಥೂ, ಪ್ರಾಯ 32 ವರ್ಷ ರವರು ಬಿಯಾಂಕ ಆಪಾರ್ಟ್ ಮೆಂಟ್, ಬಿಜೈ ಮಂಗಳೂರಿನ ಮನೆಯಲಿಯೇ ಇದ್ದು ದಿನಾಂಕ 23-09-2022 ರಂದು ಸಂಜೆ 18:30 ಗಂಟೆಗೆ ಪಿರ್ಯಾದಿದಾರರಿಗೆ ಫೋನ್ ಕರೆ ಮಾಡಿ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುತ್ತೇನೆ ಎಂಬುದಾಗಿ ತಿಳಿಸಿ ಹೋದವರು ವಾಪಸು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂಬಿತ್ಯಾದಿ. (ಕಾಣೆಯಾದವರ ವಿವರ: ಹೆಸರು ಶ್ರೀಮತಿ ಜ್ಯೋತಿ ಮಾಥೂ, ಪ್ರಾಯ 32 ವರ್ಷ, 5.2 ಅಡಿ ಎತ್ತರ, ಗೋಧಿ ಮೈಬಣ್ಣ, ಕಪ್ಪು ಸೂಟ್ ಸಲ್ವರ್ ಧರಿಸಿರುತ್ತಾರೆ.)

Crime Reported in  Mulki PS

ಪಿರ್ಯಾದಿ Smt Sowmya S ದಾರರ ಪತಿ ಶ್ರೀಧರ ಶೆಟ್ಟಿ(ಪ್ರಾಯ 50 ವರ್ಷ) ಎಂಬುವರು  ದಿನಾಂಕ 23.09.2022 ರಂದು ಬೆಳಿಗ್ಗೆ 08.20 ಗಂಟೆಗೆ  ಬಪ್ಪನಾಡು ಗ್ರಾಮದ  ಅಗ್ರಜ ಅಥರ್ವ ಅಪಾರ್ಟ್ ಮೆಂಟ್ ನ, 2ನೇ ಮಹಡಿಯಲ್ಲಿರುವ ರೂಂ ನಂಬ್ರ -208 ನೇ ತನ್ನ ವಾಸದ ಮನೆಯಿಂದ ಮಂಗಳೂರಿನ ಯುಪಿಸಿಎಲ್ ಅದಾನಿಯ  NPTL ಘಟಕಕ್ಕೆ ಕೆಲಸಕ್ಕೆಂದು ತೆರಳಿದವರು ಕಂಪನಿಯ ಕೆಲಸಕ್ಕೂ ಹೋಗದೇ, ಈತನಕ ವಾಪಾಸು ಮನೆಗೂ ಬಾರದೇ  ಕಾಣೆಯಾಗಿರುತ್ತಾರೆ. ಅವರ ಸಂಬಂಧಿಕರ ಮನೆಯಲ್ಲಿ ಹಾಗೂ ಇತರ ಕಡೆಗಳಲ್ಲಿ ವಿಚಾರಿಸಿದ್ದು ಈ ತನಕ ಪತ್ತೆಯಾಗದ ಕಾರಣ ಸದ್ರಿಯವರನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ಪಿರ್ಯಾದಿ ಸಾರಾಂಶ.

ಕಾಣೆಯಾದವರ ಚಹರೆ:-

ಹೆಸರು: ಶ್ರೀಧರ ಶೆಟ್ಟಿ, ತಂದೆ- ದಿ.ಶೇಖರ

ಪ್ರಾಯ: ಪ್ರಾಯ  50   ವರ್ಷ

ಎತ್ತರ: 5.7 ಅಡಿ, ಗೋಧಿ ಮೈ ಬಣ್ಣ, ದುಂಡು ಮುಖ, ಸಾಧಾರಣ ಶರೀರ, ಬಿಳಿ ತಲೆಕೂದಲು, ಎಡಕೈ ಅಂಗವೈಕಲ್ಯವಿರುತ್ತದೆ.

ಧರಿಸಿದ ಬಟ್ಟೆ: ಅದಾನಿ ಕಂಪನಿಯ ಯುನಿಫಾರ್ಮ್, ಆಕಾಶನೀಲಿ ಬಣ್ಣದ ತುಂಬು ತೋಳಿನ ಶರ್ಟ್  ಮತ್ತು ನೇರಳೆ ಬಣ್ಣದ ಪ್ಯಾಂಟ್ ಧರಿಸುತ್ತಾರೆ.

ಗೊತ್ತಿರುವ ಭಾಷೆ: ಕನ್ನಡ,  ಇಂಗ್ಲೀಷ್, ಹಿಂದಿ.

 

Crime Reported in  Moodabidre PS

ಪಿರ್ಯಾದಿ Dombayya Naik ದಾರರು ದಿನಾಂಕ 24-09-2022 ರಂದು ತನ್ನ ಬಾಬ್ತು ಕೆಎ-19-ಎಸಿ-7935 ನಂಬ್ರದ ಪಿಕಪ್ ವಾಹನದಲ್ಲಿ ಬಾಡಿಗೆ ಇದ್ದುದರಿಂದ ಮಣಿಹಳ್ಳದಿಂದ ಹೊರಟು ಮೂಡಬಿದ್ರೆಯ ಸಂಪಿಗೆ ಎಂಬಲ್ಲಿಗೆ ಬಂದಿದ್ದು, ನಂತರ ಕೆಲಸ ಮುಗಿಸಿ ಸಂಪಿಗೆಯಿಂದ ವಾಪಸ್ ತನ್ನ ಮನೆಯಾದ ಮಣಿಹಳ್ಳದ ಕಡೆ ತನ್ನ ವಾಹನವನ್ನು ಚಲಾಯಿಕೊಂಡು ಹೋಗುತ್ತಿರುವಾಗ ಬಿರಾವು-ಗಾಜಿಗಾರಪಲ್ಕೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಸಮಯ ಸುಮಾರು ಮದ್ಯಾಹ್ನ 3.30 ಗಂಟೆಗೆ ಎದುರುಗಡೆಯಿಂದ ಬರುತ್ತಿದ್ದ ಕೆಎಲ್-14-ಹೆಚ್-0648 ನಂಬ್ರದ 407 ಮಿನಿಲಾರಿಯೊಂದನ್ನು ಅದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ನೇರವಾಗಿ ಚಲಾಯಿಸಿಕೊಂಡು ಬಂದು ಪಿಕಪ್ ವಾಹನಕ್ಕೆ ಡಿಕ್ಕಿಹೊಡೆದಿದ್ದು, ಇದರಿಂದ ಪಿಕಪ್ ವಾಹನದ ಎದುರು ಭಾಗ ಸಂಪೂರ್ಣ ನಜ್ಜುಗುಜ್ಜಾಗಿರುತ್ತದೆ. ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 24-09-2022 10:27 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080