ಅಭಿಪ್ರಾಯ / ಸಲಹೆಗಳು

Crime Report in  CEN Crime PS     

ಪಿರ್ಯಾದಿದಾರರು ಬಿಸನೆಸ್ ಕೆಲಸ ಮಾಡಿಕೊಂಡಿದ್ದು ದಿನಾಂಕ: 19-09-2023 ರಂದು ಮನೆಯಲ್ಲಿರುವಾಗ ಪಿರ್ಯಾದಿದಾರರು ಮೊಬೈಲ್ ಬ್ಯಾಂಕಿಂಗ್ ಮೂಲಕ ಬ್ಯಾಂಕ್ ಸ್ಟೇಟ್ ಮೆಂಟ್ ನ್ನು ಪರಿಸೀಲಿಸಿದ್ದು ಸದ್ರಿಯವರ ಇಂಡಿಯನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇದರಿಂದ ಹಂತ ಹಂತವಾಗಿ ಒಟ್ಟು 99,599 ರೂ ಗಳು ಕಡಿತವಾಗಿದ್ದು ಈ ಬಗ್ಗೆ ಬ್ಯಾಂಕ್ ಗೆ ಹೋಗಿ ವಿಚಾರಿಸಿ ನೋಡಲಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿನಾಂಕ: 02-09-2023 ರಿಂದ 12-09-2023 ರತನಕ ರೂ 49,599 ರೂ ಹಣವು ಕಡಿತವಾಗಿದ್ದು ಹಾಗೂ ಅದೇ ರೀತಿ ಇಂಡಿಯನ್ ಬ್ಯಾಂಕ್ ನೇದರಿಂದ ದಿನಾಂಕ: 15-09-2023 ರಿಂದ 19-09-2023 ರ ವೆಗೆ 50,000 ರೂಗಳು ಕಡಿತವಾಗಿದ್ದು ಒಟ್ಟು 99,599/ ರೂ ಗಳನ್ನು ಯಾರೋ ಅಪರಿಚತರು ಪಿರ್ಯಾದಿದಾರರ ಆಧಾರ್  ಮಾಹಿತಿ ಉಪಯೋಗಿಸಿ ಅನಧಿಕೃತವಾಗಿ ವರ್ಗಾಯಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

    

2) ಫಿರ್ಯಾದಿದಾರರು ದಿನಾಂಕ:18-09-2023 ರಂದು ಸಂಜೆ ಮನೆಯಲ್ಲಿರುವಾಗ ಕೆ ಬಿ ಎಲ್ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ತೆರೆದು ತಮ್ಮ  ಕರ್ನಾಟಕ ಬ್ಯಾಂಕ್  ಕದ್ರಿ  ಶಾಖೆಯ ಬ್ಯಾಂಕ್ ಸ್ಟೇಟ್ ಮೆಂಟ್  ಪರಿಶೀಲಿಸಿದಾಗ ಪಿರ್ಯಾದಿದಾರರ ಖಾತೆಯಿಂದ ದಿನಾಂಕ: 15-09-2023 ರಿಂದ 18-09-2023 ರವರೆಗೆ ಹಂತಹಂತವಾಗಿ ಒಟ್ಟು ರೂ 25,000/- ಗಳು ಅನಧಿಕೃತವಾಗಿ ವರ್ಗಾವಣೆ ಆಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರಿಗೆ ಯಾವುದೇ ಒಟಿಪಿ ಹಾಗೂ ಮೇಸೆಜ್ ಗಳು ಬಂದಿರುವುದಿಲ್ಲ. ಹಾಗೂ ದಿನಾಂಕ: 21-07-2023 ರಂದು ಪಿರ್ಯಾದಿ ಸಬ್ ರಿಜಿಸ್ಟರ್ ಆಫೀಸ್ ಮಂಗಳೂರು ಇಲ್ಲಿ ಹೆಬ್ಬೆರಳಿನ ಗುರುತು ನೀಡಿ ದಾಖಲಾತಿಯನ್ನು ಮಾಡಿಕೊಂಡ ಬಗ್ಗೆ ತಿಳಿಸಿದ್ದು ಇದೇ ಕಾರಣದಿಂದ ಆಧಾರ್ ಲಿಂಕ್ ನ್ನು ಉಪಯೋಗಿಸಿ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಕರ್ನಾಟಕ ಬ್ಯಾಂಕ್ ಖಾತೆ ನೇದರಿಂದ  ಒಟ್ಟು 25,000/-ರೂ ಗಳನ್ನು ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ ಎಂಬಿತ್ಯಾದಿ

 

3) ಫಿರ್ಯಾದಿದಾರರು ದಿನಾಂಕ:15-09-2023 ರಂದು ರಾತ್ರಿ ಮನೆಯಲ್ಲಿರುವಾಗ ತಮ್ಮ ಮೊಬೈಲ್ ನಂಬ್ರ  ನೇದಕ್ಕೆ ಎಸ್ ಎಮ್ ಎಸ್ ಬಂದಿದ್ದು ಆ ಸಂದೇಶವನ್ನು ಪರಿಶೀಲಿಸಿದಾಗ ತಾವು ಹೊಂದಿರುವ ಸ್ಟೇಟ್ ಬ್ಯಾಂಕ್ ಇಂಡಿಯಾ ಜಿ ಹೆಚ್ ಎಸ್ ರೋಡ್ ಶಾಖೆ ನೇದರಲ್ಲಿ ರೂ.10,000/- ಹಣವು ಕಡಿತಗೊಂಡ ಸಂದೇಶ ಬಂದಿರುತ್ತದೆ.ಈ ಬಗ್ಗೆ ಫಿರ್ಯಾದಿದಾರರು  ಅವರ ಖಾತೆ ಹೊಂದಿರುವ ಸ್ಟೇಟ್ ಬ್ಯಾಂಕ್ ಇಂಡಿಯಾ ಜಿ ಹೆಚ್ ಎಸ್ ರೋಡ್ ಬ್ರಾಂಚ್ ಗೆ ಭೇಟಿ ನೀಡಿ ಅವರ ಖಾತೆ ಸಂಖ್ಯೆ: ನೇದರ ಬ್ಯಾಂಕ್ ಸ್ಟೇಟ್ ಮೆಂಟ್ ತೆಗೆದು ಪರಿಶೀಲಿಸಿದಾಗ ಪಿರ್ಯಾದಿದಾರರ ಖಾತೆಯಿಂದ ದಿನಾಂಕ: 11-09-2023 ರಿಂದ 15-09-2023 ರವರೆಗೆ  ಹಂತ ಹಂತವಾಗಿ ಒಟ್ಟು ರೂ 42,000/- ಗಳು ಅನಧಿಕೃತವಾಗಿ ವರ್ಗಾವಣೆ ಆಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರಿಗೆ ಯಾವುದೇ ಒಟಿಪಿ ಹಾಗೂ ಮೇಸೆಜ್ ಗಳು ಬಂದಿರುವುದಿಲ್ಲ. ಹಾಗೂ ದಿನಾಂಕ: 08-09-2023 ರಂದು ಪಿರ್ಯಾದಿ ಸಬ್ ರಿಜಿಸ್ಟರ್ ಆಫೀಸ್ ಮಂಗಳೂರು ಇಲ್ಲಿ ಹೆಬ್ಬೆರಳಿನ ಗುರುತು ನೀಡಿ ದಾಖಲಾತಿಯನ್ನು ಮಾಡಿಕೊಂಡ ಬಗ್ಗೆ ತಿಳಿಸಿದ್ದು ಇದೇ ಕಾರಣದಿಂದ ಆಧಾರ್ ಲಿಂಕ್ ನ್ನು ಉಪಯೋಗಿಸಿ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಸ್ಟೇಟ್ ಬ್ಯಾಂಕ್ ಇಂಡಿಯಾ ಖಾತೆ ನೇದರಿಂದ ಹಂತ ಹಂತವಾಗಿ ಒಟ್ಟು 42,000/-ರೂ ಗಳನ್ನು ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ ಎಂಬಿತ್ಯಾದಿ

Ullal PS

ಫಿರ್ಯಾದಿ Vani C Adiga jದಾರರ ಮಗಳು ಗಾಯತ್ರಿ ಅಡಿಗ (22) ರವರು ದೇರಳಕಟ್ಟೆ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ರೇಡಿಯೋ ಥೆರಫಿಸ್ಟ್ ಆಗಿ ಕೆಲಸ ಮಾಡಿಕೊಂಡು ಅಲ್ಲಿನ ಲೇಡಿಸ್ ಹಾಸ್ಟೇಲಿನಲ್ಲಿ ಉಳಕೊಂಡು ವಾರಕ್ಕೊಮ್ಮೆ ತನ್ನ ಊರು ಮನೆಯಾದ ಉಡುಪಿಗೆ ಹೋಗಿ ಬರುತ್ತಿದ್ದುದಲ್ಲದೆ ಪ್ರತೀ ದಿನ ತಾಯಿಯವರ ಜೊತೆಯಲ್ಲಿ ಪೋನ್ ಸಂಪರ್ಕ ಇಟ್ಟುಕೊಂಡು ದಿನಾಂಕ. 14-10-2023 ರಂದು ಬೆಳಿಗ್ಗೆ 7-15 ಗಂಟೆ ಸಮಯಕ್ಕೆ ಗಾಯತ್ರಿ ಅಡಿಗ ರವರು ಮೊಬೈಲ್ ನಂ.  ರಿಂದ ಫಿರ್ಯಾದಿದಾರರ  ಕ್ಕೆ ಕರೆ ಮಾಡಿ ತಾನು ಕೆಲಸಕ್ಕೆ ಹೋಗುವುದಾಗಿ ತಿಳಿಸಿದ್ದು, ನಂತರ ಫಿರ್ಯಾದಿದಾರರು ವಾಡಿಕೆಯಂತೆ ಗಾಯತ್ರಿ ಅಡಿಗಳಿಗೆ ಸಂಜೆ 6-45 ಗಂಟೆಗೆ ಕರೆ ಮಾಡಿದಾಗ ಅದು ಸ್ವಿಚ್ಅಪ್ ಎಂದು ಬರುತ್ತಿದ್ದಾಗ ಆಕೆಯ ಸ್ನೇಹಿತೆ (ರೂಮ್ಮೆಟ್) ಗೆ  ಪೋನ್ ಮಾಡಿದಾಗ ಅಂದು ಬೆಳಿಗ್ಗೆ 9-30 ಗಂಟೆಗೆ ಗಾಯತ್ರಿ ಅಡಿಗ ರವರು ಹಾಸ್ಟೇಲಿನಲ್ಲಿ ರಜಾಪತ್ರ ಕೊಟ್ಟು ಕಾಸರಗೋಡಿನಲ್ಲಿರುವ ಅಜ್ಜಿ ಮನೆಗೆ  ಹೋಗುವುದಾಗಿ ಹೊರಟು ಹೋಗಿರುತ್ತಾಳೆ ಎಂಬ ವಿಷಯ ತಿಳಿದು ಫಿರ್ಯಾದಿದಾರರು ಕಾಸರಗೋಡಿಗೆ ಪೋನ್ ಮಾಡಿ ವಿಚಾರಿಸಿಕೊಂಡಾಗ ಅಲ್ಲಿಗೂ ಹೋಗದೇ ಇದ್ದುದಲ್ಲದೆ ಪೋನ್ ಸ್ವಿಚ್ಅಪ್ ಬರುತ್ತಿದ್ದ ಕಾರಣ ಗಾಯತ್ರಿ ಅಡಿಗಳ ಬಗ್ಗೆ ಸಂಬಂಧಿಕರ ಮನೆ, ಸ್ನೇಹಿತರ ಮನೆ, ಆಸುಪಾಸು ಹಾಗೂ ಹೆಚ್ಚಿನ ಕಡೆಗಳಲ್ಲಿ ಹುಡುಕಾಡಿ ಆಕೆ ಪತ್ತೆಯಾಗದೇ ಇದ್ದ ಕಾರಣ ಕಾಣೆಯಾದ ಗಾಯತ್ರಿ ಅಡಿಗ ಳನ್ನು ಪತ್ತೆ ಮಾಡಿಕೊಡಬೇಕಾಗಿ ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

 

 

ಇತ್ತೀಚಿನ ನವೀಕರಣ​ : 24-10-2023 08:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080