ಅಭಿಪ್ರಾಯ / ಸಲಹೆಗಳು

Crime Report in : North PS

ಪ್ರದೀಪ್ ಟಿ.ಆರ್ ಪೊಲೀಸ್ ಉಪ ನಿರೀಕ್ಷಕರು ಮಂಗಳೂರು ಉತ್ತರ ಪೊಲೀಸ್ ಠಾಣೆಯವರು ನೀಡಿದ ದೂರಿನ ಸಾರಾಂಶವೇನೆಂದರೆ, ಈ ದಿನ ದಿನಾಂಕ: 24.12.2023 ರಂದು  ಸಮಯ ಸಂಜೆ 17:00 ಗಂಟೆಗೆ ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿ.ಎಸ್.ಐ ಮಂಗಳೂರು ಉತ್ತರ ಪೊಲೀಸ್ ಠಾಣೆ ಆದ ನಾನು Anti Drug Team  ನ ಸಿಬ್ಬಂದಿಗಳಾದ ದಕ್ಷಿಣ ಪೊಲೀಸ್ ಠಾಣೆಯ  ಪಿ,ಸಿ 3197 ನೇ  ವೀರಭದ್ರಯ್ಯಾ ಮತ್ತು ಉತ್ತರ ಪೊಲೀಸ್ ಠಾಣೆಯ ಪಿ ಸಿ 3238 ನೇ ಸಂಪತ್ ರವರೊಂದಿಗೆ ರೌಂಡ್ಸ ಕರ್ತವ್ಯ ದಲ್ಲಿರುವ ಸಮಯ ಭಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಈ ದಿನ ಸಂಜೆ 17:30 ಗಂಟೆಗೆ ಮಂಗಳೂರು ನಗರದ  ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಬಾವುಟಗುಡ್ಡೆ ಬಳಿ ತಲುಪಿದಾಗ ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ಕಂಡು ನಾವು ವಿಚಾರಿಸಲಾಗಿ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದು, ನಾಲಿಗೆ ತೊದಲುತ್ತಾ ತನ್ನ ಹೆಸರು: ಪ್ರೀತಮ್ ಪ್ರಾಯ: 22 ವರ್ಷ, ತಂದೆ: ಸಂತನ್ ಬಿಸ್ವಾಲ್, ವಾಸ: ಆನಂದ ಭವನ, ಸೇಂಟ್ ಪೌಲ್ಸ ಸ್ಟ್ರೀಟ್, ಕುರಿಯಾಚಿರಾ ಎಸ್ ಒ, ತ್ರಿಶೂರು, ಕೇರಳ  ಎಂಬುದಾಗಿ ತಿಳಿಸಿದ್ದು. ಅನುಮಾನಗೊಂಡ ನಾವು ಆತನಲ್ಲಿ ಮುಂದುವರೆದು ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕೂಲಂಕುಷವಾಗಿ ವಿಚಾರಿಸಲಾಗಿ ತಾನು ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಸದ್ರಿ ಪ್ರೀತಮ್ ನನ್ನು ಠಾಣೆಗೆ ಕರೆ ತಂದು ಅವರ ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಸಿಬ್ಬಂದಿಗಳ ಭದ್ರಿಕೆಯಲ್ಲಿ ಕೋರಿಕೆ ಪತ್ರದೊಂದಿಗೆ ಹಾಜರುಪಡಿಸಿದ್ದು,  ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷಿಸಿದಲ್ಲಿ, ಪ್ರೀತಮ್ ಎಂಬಾತನು Tetrahydracannabinoid, (Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ, ಎಂಬಿತ್ಯಾದಿ

Traffic South Police Station              

ಫಿರ್ಯಾದಿದಾರರಾದ ಫಾತಿಮಾ ಎಂಬವರು ದಿನಾಂಕ 24/12/2023 ರಂದು ಬೆಳಿಗ್ಗೆ  ತನ್ನ ಗಂಡನೊಂದಿಗೆ ಅವರ ಬಾಬ್ತು KA-19-HH-2354 ನೇ ಸ್ಕೂಟರ್ ನಲ್ಲಿ ಸಹ ಸವಾರಳಾಗಿ ಕುಳಿತುಕೊಂಡು ಬಂಟ್ವಾಳದಿಂದ ಮಂಗಳೂರು ಬಜಾಲ್ ನಲ್ಲಿರುವ ತಾಯಿ ಮನೆಗೆ ಹೊರಟು ಬೆಳಿಗ್ಗೆ ಸುಮಾರು 06.30 ಗಂಟೆಯ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅರ್ಕುಳ ದ್ವಾರದಿಂದ ಸ್ವಲ್ಪ ಮುಂದೆ ಬರುತ್ತಿದ್ದಂತೆ ಫಿರ್ಯಾದಿದಾರರ ಹಿಂದುಗಡೆಯಿಂದ ಅಂದರೆ ಬಿ.ಸಿ. ರೋಡ್ ಕಡೆಯಿಂದ ಬೊಲೆರೋ ಪಿಕಪ್ ವಾಹನವನ್ನು ಅದರ ಚಾಲಕನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಗಂಡ ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟರ್ ನ ಬಲಬದಿಗೆ ಡಿಕ್ಕಿ ಪಡಿಸಿ ಹೋದಾಗ ಫಿರ್ಯಾದಿದಾರರು  ಸ್ಕೂಟರ್ ನಿಂದ ರಸ್ತೆಯ ಎಡಭಾಗಕ್ಕೆ ಬಿದ್ದು,  ಡಿಕ್ಕಿ ಪಡಿಸಿದ ರಭಸಕ್ಕೆ ಸ್ಕೂಟರ್  ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ಫಿರ್ಯಾದಿದಾರರ ಗಂಡನು ರಸ್ತೆಯ ಬಲಭಾಗಕ್ಕೆ ಬೀಳುತ್ತಿದ್ದಂತೆ, ಬಿ.ಸಿ. ರೋಡ್ ಕಡೆಯಿಂದ ಮಂಗಳೂರು ಕಡೆಗೆ ಏಕ ಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ  KA-51-C-6454 ನೇ ನಂಬ್ರದ ಟೂರಿಸ್ಟ್ ಬಸ್ಸಿನ ಚಾಲಕನಾದ ಮಲೈ ಸ್ವಾಮಿ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಾಮಾರು ರಸ್ತೆಯಲ್ಲಿ ಬಿದ್ದಿರುವ ಫಿರ್ಯಾದಿದಾರರ ಗಂಡನ ತಲೆಯ ಮೇಲೆ ಬಸ್ಸಿನ ಎಡಭಾಗದ ಹಿಂದಿನ ಚಕ್ರವನ್ನು ಹಾಯಿಸಿ ಬಸ್ಸನ್ನು ನಿಲ್ಲಿಸಿದ ಪರಿಣಾಮ  ಫಿರ್ಯಾದಿದಾರರ ಗಂಡನ ತಲೆಗೆ ಮುಖಕ್ಕೆ, ಗದ್ದಕ್ಕೆ  ಗಂಭೀರ ರಕ್ತ ಗಾಯವಾಗಿರುತ್ತದೆ, ಹಾಗೂ ಬಲ ಕೈ ಮಣಿ ಗಂಟಿನ ಕೆಳಗಡೆ ರಕ್ತ ಗಾಯ ಹಾಗೂ ಎಡ ಕೈ ಗಂಟಿಗೆ ಹಾಗೂ ತೋಳಿಗೆ ತರಚಿದ ಗಾಯವಾಗಿರುತ್ತದೆ, ಅಪಘಾತ ದಿಂದ ಫಿರ್ಯಾದಿದಾರರಿಗೂ ಎದೆಗೆ ಗುದ್ದಿದ ಗಾಯವಾಗಿರುತ್ತದೆ  ನಂತರ ಅಲ್ಲಿ ಸೇರಿದ ಜನರು ಗಂಭೀರ ಗಾಯಗೊಂಡ ಫಿರ್ಯಾದಿದಾರರನ್ನು ಗಂಡನನ್ನು ಅಂಬುಲೆನ್ಸ್ ವಾಹನವೊಂದರಲ್ಲಿ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಮುಂದೆ ಹಾಜರು ಪಡಿಸಿದಾಗ ವೈದ್ಯರು ಫಿರ್ಯಾದಿದಾರರ ಗಂಡನನ್ನು ಬೆಳಿಗ್ಗೆ 08.10 ಗಂಟೆಗೆ ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ

Surathkal PS

ಪಿರ್ಯಾದಿ Abraham Mathew ನಿರ್ಮಿತಿ ಎಂಟರ್ ಪ್ರೈಸಸ್ ಇದರಲ್ಲಿ ವ್ಯವಹಾರದ ಪಾಲುದಾರರಾಗಿದ್ದು ತನ್ನ ಬಾಬ್ತು ನಿರ್ಮಿತಿ ಎಂಟರ್ ಪ್ರೈಸಸ್ ನ ಕೆಲಸ ಕಾರ್ಯಗಳಿಗೆಂದು ಆರೋಪಿ ರಿಟ್ಟೋ ಮೇರಿ ಮ್ಯಾಥ್ಯು ಎಂಬಾತನನ್ನು MRPL ಕಾರ್ಯಕ್ಷೇತ್ರದ ಸುರಕ್ಷತಾ ಅಧಿಕಾರಿ ಮತ್ತು ಸೈಟ್ ಉಸ್ತುವಾರಿಯಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದು ಹಲವು ಸಮಯಗಳಿಂದ ಪಿರ್ಯಾದಿದಾರರ ಜೊತೆ ಕೆಲಸ ನಿರ್ವಹಿಸಿಕೊಂಡಿದ್ದ ರಿಟ್ಟೋ ಮೇರಿ ಮ್ಯಾಥ್ಯು ರವರು ದಿನಾಂಕ: 22/03/2022 ರಿಂದ ಕೆಲಸಕ್ಕೆ ಗೈರು ಹಾಜರಾಗಿದ್ದು ಬಳಿಕ ಪಿರ್ಯಾದಾರರು ತಮ್ಮ ಸಂಸ್ಥೆಯ ಸುರಕ್ಷತಾ ಮೇಲ್ವಿಚಾರಕರಾಗಿ ಶ್ರೀ ಕೃಷ್ಣಮೂರ್ತಿ ರಾಜನ್ ಎಂಬವರನ್ನು ನೇಮಿಸಿ ತಮ್ಮ ಸಂಸ್ಥೆಗೆ ಸಂಬಂಧಿಸಿದ ಸಲಕರಣೆಗಳನ್ನು ಪರಿಶೀಲಿಸಲಾಗಿ ಆರೋಪಿತ ರಿಟ್ಟೋ ರವರು ತಮ್ಮ ಕೆಲಸದ ಅವಧಿಯಲ್ಲಿ ಸುಮಾರು 500 ಪೈಪುಗಳು ಮತ್ತು 1100 ಜಿ.ಎಲ್ ಕ್ಲಾಂಪ್ ಗಳು, ಗ್ರಾಟಿಂಗ್ ಗಳು, ಲಾಡರ್ಸ್, ಏಣಿ, ಸ್ಕಾಪೋಲ್ಡಿಂಗ್ಸ್ ಅಲ್ಲದೇ ಸೈಟ್ ಇನ್ಚಾರ್ಜ್ ಹಾಗೂ ಕೆಲಸದವರ ಗೇಟ್ ಪಾಸ್, ಸಂಸ್ಥೆಯ ಸೀಲು ಮತ್ತಿತರ ದಾಖಲೆಗಳನ್ನು ಹಸ್ತಾಂತರಿಸದೇ ಇದ್ದು ಅದನ್ನು ಹಿಂಪಡೆಯಲು ಆರೋಪಿತನಿಗೆ ಹಲವು ಬಾರಿ ಅಂತಿಮ ದಿನಾಂಕಗಳನ್ನು ಗೊತ್ತುಪಡಿಸಿದರೂ ಈವರೆಗೂ ಹಿಂದಿರುಗಿಸದೇ ಮೋಸಮಾಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 25-12-2023 02:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080