ಅಭಿಪ್ರಾಯ / ಸಲಹೆಗಳು

Urva PS      

ದಿನಾಂಕ 25-03-2023 ರಂದು ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕನಗರದ ಶೇಡಿಗುರಿ ಬಸ್ಸು ನಿಲ್ದಾಣದ ಎದುರು KA19AA8488 (PTC) ರೂಟ್ ನಂಬ್ರ 31 A ಬಸ್ ನ ಚಾಲಕ  ಸಾಗರ್ ಮತ್ತು ನಿರ್ವಾಹಕ ಸುಧೀರ್ ಹಾಗೂ KA19C7170 (SEBASTIAN) ರೂಟ್ ನಂಬ್ರ 31 ಬಸ್ ನ ಚಾಲಕ ವಿಘ್ನೇಶ್ ಮತ್ತು ನಿರ್ವಾಹಕ ಶ್ರೀಧರ್ ರವರು ಬೆಳಿಗ್ಗೆ 06-50 ಗಂಟೆಗೆ ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಅಡ್ಡಾದಿಡ್ಡಿಯಾಗಿ ಬಸ್ಸುಗಳನ್ನು ನಿಲ್ಲಿಸಿ ಸಮಯದ ಪಾಲನೆ ವಿಚಾರದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ಬೈದಾಡಿಕೊಳ್ಳುತ್ತಾ, ಪರಸ್ಪರ ತಳ್ಳಾಡುತ್ತಾ ಸಾರ್ವಜನಿಕ ರಸ್ತೆಯಲ್ಲಿ ಕಲಹ ಉಂಟು ಮಾಡಿ, ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡಿದ್ದು, ಈ ಅರೋಪಿತರನ್ನು ಮತ್ತು ಬಸ್ಸನ್ನು ವಶಕ್ಕೆ ಪಡೆದು ಠಾಣೆಗೆ ತಂದು ಕಾನೂನು ಕ್ರಮ ಜರುಗಿಸಿರುವುದಾಗಿದೆ ಎಂಬಿತ್ಯಾದಿ.

Bajpe PS

ದಿನಾಂಕ 24.02.2023 ರಂದು ಸಮಯ 11.15 ಗಂಟೆಗೆ ಪಿರ್ಯಾದಿದಾರರು Prashnath Kumar ಮಂಗಳೂರು ತಾಲೂಕು ಮರುವೂರು ಗ್ರಾಮದ ಕರಂಬಾರು ಬಸ್ಸು ನಿಲ್ದಾಣದ ಬಳಿ ಇರುವ ಸಮಯ ಪಿರ್ಯಾದಿದಾರರ ನೆರೆಮನೆಯ ನಿವಾಸಿ ಶ್ರೀಮತಿ ಉಮಾವತಿ (59 ವರ್ಷ) ಎಂಬುವರು ಭಜನಾ ಮಂದಿರದ ಕಡೆಗೆ ಹೋಗಲು ರಸ್ತೆಯನ್ನು ದಾಟುತಿದ್ದ ಸಮಯ ಬಜಪೆ ಕಡೆಯಿಂದ ಮರವೂರು ಕಡೆಗೆ KA19 AC 4070 ನೇ ನಂಬ್ರದ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗಾರುಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ರಸ್ತೆಯನ್ನು ದಾಟುತಿದ್ದ ಉಮಾವತಿ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಉಮಾವತಿ ರವರಿಗೆ ಮುಖದ ಬಳಿ ರಕ್ತ ಗಾಯ ,ಭುಜ ಮತ್ತು ಸೊಂಟದ ಬಳಿ ಗುದ್ದಿದ ಗಾಯಗಳು ಉಂಟಾಗಿದ್ದು ನಂತರ ಅವರನ್ನು ಎಜೆ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ

Traffic South Police Station  

ದಿನಾಂಕ:23-02-2023 ರಂದು ಪಿರ್ಯಾದಿ MOHAMMED G M ಅವರ ಬಾಬ್ತು ಆಟೋ ರಿಕ್ಷಾ ನಂಬ್ರ KA-19-D-1902 ನೇದರಲ್ಲಿ ಚಾಲಕರಾಗಿ ಇಬ್ಬರು ಮಹಿಳಾ ಪ್ರಯಾಣಿಕರನ್ನು ಕುಳ್ಳರಿಸಿಕೊಂಡು ದೇರಳಕಟ್ಟೆಯಿಂದ ಸಾಯಿ ನಗರ ಕಡೆಗೆ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮದ್ಯಾಹ್ನ 3:00 ಗಂಟೆಗೆ ಪನೀರು ಬಳಿಯ ನಿಟ್ಟೆ ಪಾರ್ಮಸಿ ಕಾಲೇಜು ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎದುರಿನಿಂದ ಅಂದರೆ ಸಾಯಿನಗರ ಕಡೆಯಿಂದ ದೇರಳಕಟ್ಟೆ ಕಡೆಗೆ ಹೋಗುತ್ತಿದ್ದ ಬೈಕ್ ನಂಬ್ರ KA-19-W-7939 ನೇದನ್ನು ಅದರ ಸವಾರ ಮೊಹಮ್ಮದ್ ಹನೀಪ್ ನು ಇಬ್ಬರು ಸಹ ಸವಾರರನ್ನು ಕುಳ್ಳರಿಸಿಕೊಂಡು ಒಮ್ಮೆಲೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಆಟೋ ರಿಕ್ಷಾ ಬಲ ಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಆಟೋ ರಿಕ್ಷಾವು ಡಾಮಾರು ರಸ್ತೆಗೆ ಮಗಚಿ ಬಿದ್ದಿರುತ್ತದೆ ಹಾಗೂ ಮೋಟರ್ ಸೈಕಲ್ ಸವಾರ ಮತ್ತು ಸಹ ಸವಾರರು ಡಾಮಾರು ರಸ್ತೆಗೆ ಬಿದ್ದಿರುತ್ತಾರೆ, ಅಪಘಾತ ಸ್ಥಳದಲ್ಲಿದ್ದ ಸಾರ್ವಜನಿಕರು ಪಿರ್ಯಾದಿದಾರನ್ನು ಉಚಚರಿಸಿ ಚಿಕಿತ್ಸೆ ಬಗ್ಗೆ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ಬೇರೊಂದು ಆಟೋದಲ್ಲಿ ಕಳುಹಿಸಿಕೊಟ್ಟಿದ್ದು ಪ್ರಥಮ ಚಿಕಿತ್ಸೆ ಪಡೆದು ಹೋಗಿರುತ್ತಾರೆ ಅಲ್ಲಿ ಯಾವುದೇ MLC  ಮಾಡಿರುವುದಿಲ್ಲ ಆಟೋದಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯವಾಗಿದ್ದು  ಅವರು ಅಲ್ಲಿಂದಲೇ ಹೋಗಿರುತ್ತಾರೆ, ನಂತರ ಈ ದಿನ ದಿನಾಂಕ:24-02-2023 ರಂದು ಪಿರ್ಯಾದಿದಾರರು ಮನೆಯಲ್ಲಿದ್ದ ಸಮಯ ವಿಪರೀತ ಕೈ ನೋವು ಕಾಣಿಸಿಕೊಂಡಿದ್ದು ಅದರಂತೆ ಮತ್ತೆ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ಬಂದಿದ್ದು ಅಲ್ಲಿ ಪಿರ್ಯಾದಿದಾರರನ್ನು ಪರೀಕ್ಷಿಸಿ ಎಡ ಕೈ ಮನಿಗಂಟಿಗೆ ಮೂಳೆ ಮುರಿತದ ಗಾಯವಾಗಿದೆ ಎಂದು ತಿಳಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುವುದಾಗಿದೆ, ಎಂಬಿತ್ಯಾದಿ.

Traffic South Police Station

ದಿನಾಂಕ:24-02-2023 ರಂದು ಪಿರ್ಯಾದಿದಾರರು PRASHANTH NAIK  (38 ವರ್ಷ) ಮತ್ತು ಅವರ ತಮ್ಮ ಶಶಿಕಾಂತ (34 ವರ್ಷ) ರವರು ಒಟ್ಟಿಗೆ ಲಾರಿಯಲ್ಲಿ ಬಂಟ್ವಾಳ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಾ ಸಮಯ ಸುಮಾರು ಸಂಜೆ 7:30 ಗಂಟೆಗೆ ಕೊಡಕಲ್ ಬಳಿ ಲಾರಿಯಿಂದ ಇಳಿದುಕೊಂಡು ಊಟ ಮಾಡಲು ಹೋಗಿ ವಾಪಸ್ಸು ಮಂಗಳೂರು ಕಡೆಗೆ ಹೋಗುವ ರಸ್ತೆ ದಾಟುತ್ತಿರುವಾಗ ಬಿ.ಸಿ ರೋಡ್ ಕಡೆಯಿಂದ ಮಂಗಳೂರು ಕಡೆಗೆ  ಮೋಟರ್ ಸೈಕಲ್ ನಂಬ್ರ :KA-21-EC-6664 ನೇದನ್ನು ಅದರ ಸವಾರ  ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಶಶಿಕಾಂತರವರಿಗೆ ಡಿಕ್ಕಿ ಪಡಿಸಿದ  ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದು ಎಡಕಾಲಿಗೆ, ಎಡ ಹೊಟ್ಟೆಯ ಭಾಗಕ್ಕೆ, ತಲೆಯ ಎಡ ಭಾಗಕ್ಕೆ ಗಂಭೀರ ಸ್ವರೂಪದ ಗುದ್ದಿದ ಹಾಗೂ ರಕ್ತಗಾಯವಾಗಿರುತ್ತದೆ ಕೂಡಲೇ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಶಶಿಕಾಂತರವರನ್ನು ಆಟೋ ರಿಕ್ಷಾವೊಂದರಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಶಶಿಕಾಂತರವರನ್ನು ಒಳರೋಗಿಯಾಗಿ ದಾಖಲು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದು ಆಸ್ಪತ್ರೆಯ ಖರ್ಚು ಜಾಸ್ತಿಯಾಗಿತ್ತದೆ ಎಂದು ಹೇಳಿದಾಗ ಪಿರ್ಯಾದಿದಾರರು ಶಶಿಕಾಂತರವರನ್ನು ಹೆಚ್ಚಿನ ಚಕಿತ್ಸೆಗೆ ದೇರಳಕಟ್ಟೆ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 25-02-2023 03:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080