ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Mangalore West Traffic PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ PARASHURAMA  ಇವರ ಹಾಗೂ ಅವರ ತಮ್ಮ ಅರ್ಜುನ್ ಪೂಜಾರ್ ರವರು ಮಂಗಳೂರು ನಗರದಲ್ಲಿ ಜೊಮ್ಯಾಟೋ ಕಂಪೆನಿಯಲ್ಲಿ ಫುಡ್ ಡೆಲಿವರಿ ಕೆಲಸ ಮಾಡಿಕೊಂಡಿದ್ದು ದಿನಾಂಕ: 24-02-2024 ರಂದು ಪಿರ್ಯಾದುದಾರರ ತಮ್ಮ ಫುಡ್ ಡೆಲಿವರಿ ಮಾಡಲು KA-29-EG-7316 ನೇ ದ್ವಿಚಕ್ರ ವಾಹನದಲ್ಲಿ ಕೆ.ಎಸ್.ಆರ್.ಟಿ.ಸಿ ಕಡೆಯಿಂದ ಕುಂಟಿಕಾನದ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 08-30 ಗಂಟೆಗೆ ಜಯಲಕ್ಷೀ ಬಟ್ಟೆ ಶೋರೂಂ ಬಳಿ ತಲುಪುತ್ತಿದ್ದಂತೆ KL-78-B-8382 ನೇ ಕಾರೊಂದನ್ನು ಅದರ ಚಾಲಕ ಜೊಸೆಫ್ ಪಿಲಿಫ್ ಎಂಬುವವರು ಯಾವುದೇ ಸೂಚನೆ ನೀಡದೆ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನ ಹಾಗೂ ಅಜಾಗರೂಕತೆಯಿಂದ ಒಮ್ಮೆಲೆ ಎಡಬದಿಗೆ ಚಲಾಯಿಸಿ ದ್ವಿಚಕ್ರ ವಾಹನದ ಬಲಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದುದಾರರ ತಮ್ಮ ದ್ವಿಚಕ್ರ ಸಮೇತ ರಸ್ತೆಗೆ ಬಿದ್ದು  ತಲೆಯ ಹಿಂಬದಿಗೆ ಗುದ್ದಿದ ನಮೂನೆಯ ಗಂಭೀರ ಗಾಯವಾಗಿದ್ದು  ಗಾಯಾಳು ಅರ್ಜುನ್ ಪೂಜಾರ್ ರವರನ್ನು ಡಿಕ್ಕಿ ಪಡಿಸಿದ ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಎ.ಜೆ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ  ವೆನ್ಲಾಕ್ ಆಸ್ಪತ್ರೆಗೆ ತೆರಳಿ ಅಲ್ಲಿಂದ  ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ  ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Traffic South Police

ಫಿರ್ಯಾದಿ Shafeel ಇವರ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 24-02-2024 ರಂದು ರಾತ್ರಿ 23.15 ಗಂಟೆಗೆ ಅಡ್ಯಾರ್ ಹಳೆಯ ಚೆಕಪೋಸ್ಟ್ ನಯರ ಪೆಟ್ರೋಲ್ ಪಂಪ್ ಮುಂಭಾಗದಲ್ಲಿರುವ ತಮ್ಮ ಚಹಾ ಅಂಗಡಿಯನ್ನು ಕ್ಲೀನಿಂಗ್ ಮಾಡುತ್ತಿರುವಾಗ ಮುಂಭಾಗದ ಹೆದ್ದಾರಿಯ ಅಡ್ಯಾರ್ ಕಣ್ಣೂರು ಕಡೆಯಿಂದ ಲಾರಿ ನಂಬ್ರ KA-19-ae-3883 ನೆದರ ಚಾಲಕ ಮೊಹಮ್ಮದ್ ಶಮೀರ್ ನು ತನ್ನ ಲಾರಿಯನ್ನು ದುಡುಕುತನ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಪರಿಚಿತ ಪ್ರಾಯ ಸುಮಾರು 35-40 ವರ್ಷ ಗಂಡಸಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ಪರಿಣಾಮ ಸದ್ರಿ ವ್ಯಕ್ತಿ ರಸ್ತೆಗೆ ಎಸೆಯಲ್ಪಟ್ಟು ತಲೆಯ ಬಲಭಾಗ ಮುಖ ಮತ್ತು ಹಣೆಗೆ ತೀವ್ರತರದ ಗಾಯಗಳಾದವರನ್ನು ಫಿರ್ಯಾದಿದಾರರು ವಾಹನವೊಂದರಲ್ಲಿ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈಧ್ಯರು ಮೃತಪಟ್ಟಿರುವದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.

 

Traffic North Police Station                                                 

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ದಿನಾಂಕ 25-02-2024 ರಂದು ಸಂಜೆ ಸಮಯ ತಡಂಬೈಲ್ ಗರುಡಾ ಬಾರ್ & ರೆಸ್ಟೋರೆಂಟ್ ಎದುರು ಗಡೆ   ಮುಕ್ಕ ಕಡೆಯಿಂದ ಮಾರುತಿ ಸ್ವಿಫ್ಟ್ ಕಾರು ನಂಬ್ರ KL-79-0538 ನೇಯದನ್ನು ಅದರ ಚಾಲಕ ರಾಜೇಶ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿ Sharath Poojary ಇವರ ಮಾವ ವೆಂಕಟೇಶ ಪೂಜಾರಿ (40 ವರ್ಷ)  ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ವೆಂಕಟೇಶ ಪೂಜಾರಿರವರು ರಸ್ತೆಗೆ ಬಿದ್ದು ಅವರ ಎಡ ಹಣೆಯ ಬಳಿ, ಎಡ ಕೈ ತೋಳಿನಲ್ಲಿ ರಕ್ತಗಾಯ ಕೆಳ ತುಟಿಗೆ ಸೀಳಿದ ರೀತಿಯ ಗಾಯ ಹಾಗೂ ಬಲ ಕಾಲಿಗೆ ಮೂಳೆ ಮುರಿತದ ಗಾಯವಾಗಿದ್ದು ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Bajpe PS

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ನಿನ್ನೆ ದಿನಾಂಕ 24.02.2024 ರಂದು ಸಮಯ ಸುಮಾರು 18.40 ಗಂಟೆಗೆ ಪಿರ್ಯಾದಿ Nikhil  ಇವರು ತನ್ನ ಬೈಕ್ ನಲ್ಲಿ ಮನೆಗೆ ಹೋಗುತ್ತಿರುವಾಗ ಕಿನ್ನಿಕಂಬಳ ಮರದ ಮಿಲ್ ಬಳಿ ತಲುಪಿದಾಗ, ಪಿರ್ಯಾದಿದಾರರ ಮುಂದೆ ಹೋಗುತ್ತಿದ್ದ KA19 AE 2348 ನೇ ನಂಬ್ರದ ಆಟೋ ಚಾಲಕ ಅಶೋಕ ಪ್ರಭು ಎಂಬವರು ಅತೀ ವೇಗ ಮತ್ತು ನಿರ್ಲಕ್ಷತನದಿಂದ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು KA19 HF2996 ನೇ ನಂಬ್ರದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕಿನಲ್ಲಿದ್ದ ಸವಾರ ಶಿವಾನಂದಾ ಹಾಗೂ ಸಹಾ ಸವಾರರಾದ ಸುನೀತಾ ಎಂಬವರು ರಸ್ತೆಗೆ ಬಿದ್ದಿರುತ್ತಾರೆ. ಇದರಿಂದ ಶಿವಾನಂದಾರವರ ಎಡಕೈಗೆ ಮೂಳೆ ಮುರಿತದ ಗಾಯವಾಗಿದ್ದು, ಮುಖಕ್ಕೆ ತರಚಿದ ಗಾಯವಾಗಿರುತ್ತದೆ ಸುನೀತಾರವರಿಗೆ ಸೊಂಟಕ್ಕೆ ಗುದ್ದಿದ ಗಾಯ ಹಾಗೂ ಕೈಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಆದುದರಿಂದ ಆರೋಪಿಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿರುತ್ತಾರೆ ಎಂಬಿತ್ಯಾದಿ.

 

 

Surathkal PS            

ಈ ಪ್ರಕರಣದ ಸಾರಾಂಶವೇನೆಂದರೆ ಈ ದಿನ ದಿನಾಂಕ: 25-02-2024 ರಂದು ಮಧ್ಯಾಹ್ನ 13.45 ಗಂಟೆಗ ಸುಮಾರಿಗೆ ಸುರತ್ಕಲ್ ಗ್ರಾಮದ ಮುಕ್ಕ ಶರತ್ ಬಾರ್ ನಲ್ಲಿ ಪಿರ್ಯಾದಿ Harilal ಇವರು ಮದ್ಯ ಸೇವನೆ ಮಾಡಿ ಹೊರಬಂದ ಸಮಯ ಸದ್ರಿ ಬಾರ್ ಗೆ ಬಂದಿದ್ದ ನವೀನ್ ಕುಮಾರ್ ನು ಪಿರ್ಯಾದಿದಾರರನ್ನು ಉದ್ದೇಶಿಸಿ “ನೀನು ಈ ಹಿಂದೆ ನನಗೆ ಹೊಡೆದಿದ್ದಿ ನೀನು ಗಂಡಸಾದರೇ ಅರ್ಧ ಗಂಟೆ ಇಲ್ಲೇ ನಿಲ್ಲು” ಎಂದು ಹೇಳಿ ಹೋದನು  ಮಧ್ಯಾಹ್ನ ಸಮಯ ಸುಮಾರು 14.00 ಗಂಟೆಗೆ ಪಿರ್ಯಾದಿದಾರರು ಇದ್ದಲ್ಲಿಗೆ ಆರೋಪಿ ನವೀನ್ ಕುಮಾರ್ ನು ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಮರದ ಕೆಲಸಕ್ಕೆ ಉಪಯೋಗಿಸುವ ಹರಿತವಾದ ಆಯುಧ (ಉಳಿ) ವನ್ನು ಬೀಸುತ್ತಾ ಇವತ್ತೇ ಕೊಂದು ಹಾಕತ್ತೇನೆ ಎಂದು ಹೇಳುತ್ತಾ  ಪಿರ್ಯಾದಿದಾರರು ಬಲಕೈಯ ಬೆರಳುಗಳಿಗೆ ಆತನು ಇರಿದು ಗಾಯಗೊಳಿಸಿ ಬಲಕೈಯ ಮೊಣಗಂಟಿಗೆ ಇರಿದಿರುತ್ತಾನೆ ಆ ಸಮಯ ಪಿರ್ಯಾದಿದಾರರು ಬೊಬ್ಬೆ ಹಾಕಿದ್ದನ್ನು ಕೇಳಿ ಬಾರಿನಲ್ಲಿದ್ದ ಮಂಜುನಾಥ ಹಾಗೂ ಪ್ರಜ್ವಲ್ ಹೆಗ್ಡೆ  ಹೊರಗೆ ಬಂದಾಗ ಆರೋಪಿಯು “ಇವತ್ತು ನಿನ್ನನ್ನು ಬಿಟ್ಟಿದ್ದೇನೆ ಮುಂದೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಹೇಳಿ ಉಳಿ ಸಮೇತ ಅಲ್ಲಿಂದ ಹೋಗಿರುತ್ತಾನೆ ಸದ್ರಿ ಮಂಜುನಾಥ ಹಾಗೂ ಪ್ರಜ್ವಲ್ ಹೆಗ್ಡೆ ಎಂಬವರು ಗಾಯಾಳುವನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿದ್ದಾಗಿದೆ ಆರೋಪಿ ನವೀನ ಕುಮಾರ್ ನು ಹಳೆಯ ದ್ವೇಷದಿಂದ ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ ಸದ್ರಿ ಬಾರಿನಲ್ಲಿ ಮನೆಯಿಂದ ತಂದಿದ್ದ ಉಳಿಯಿಂದ ಪಿರ್ಯಾದಿದಾರರಿಗೆ ಇರಿದು ಕೊಲೆಗೆ ಯತ್ನಿಸಿದ್ದಾಗಿದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 01-03-2024 09:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080