ಅಭಿಪ್ರಾಯ / ಸಲಹೆಗಳು

Urva PS

ಪಿರ್ಯಾದಿದಾರರಾದ ವಿಜಯ್ ಕುಮಾರ್ ರವರು ಡೊಮಿನಿಕ್ ಚರ್ಚ್ ಹತ್ತಿರ,  ಕೋಡಿಕಲ್ ರಸ್ತೆ, ಅಶೋಕ ನಗರ, ಮಂಗಳೂರು ವಾಸಿಯಾಗಿದ್ದು,    ದಿನಾಂಕ:22-03-2023 ರ ಸಂಜೆ ಸುಮಾರು 04.00 ಗಂಟೆಗೆ ಪಿರ್ಯಾದಿದಾರರ ಎರಡನೇ ಮಗನಾದ ರೋಹನ್ ತೇಜ್ ಪಾಲ್ ಸಾಲಿನ್ಸ್(32 ವರ್ಷ) ಎಂಬುವವರು ಮನೆ ಬಿಟ್ಟು ಹೋಗುವುದಾಗಿ ಪಿರ್ಯಾದಿದಾರರಿಗೆ  ತಿಳಿಸಿ ಮನೆಯಿಂದ ಲಗೇಜ್ ಸಮೇತ ಹೋಗಿರುತ್ತಾರೆ.ಇವರು ಉಪಯೋಗಿಸುತ್ತಿರುವ ಮೊಬೈಲ್ ಗಳು ಸ್ವಿಚ್ ಆಫ್ ಆಗಿರುವುರಿಂದ ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಸಿಗದೇ ಇದ್ದು ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

(ಕಾಣೆಯಾದವರ ವಿವರ: ಹೆಸರು: ರೋಹನ್ ತೇಜ್ ಪಾಲ್ ಸಾಲಿನ್ಸ್, ಪ್ರಾಯ: 32 ವರ್ಷ,   5.5 ಅಡಿ ಎತ್ತರ, ಗೋಧಿ ಮೈ ಬಣ್ಣ, ಮನೆಯಿಂದ ಹೋಗುವಾಗ ಹಳದಿ ಬಣ್ಣದ ಟಿ-ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ,ಈತನು ಕನ್ನಡ ಮತ್ತು ತುಳು ಭಾಷೆಯಲ್ಲಿ ಮಾತನಾಡುತ್ತಾನೆ.ಇವನಿಗೆ ವಿಪರೀತ ಮಧ್ಯಪಾನ ಮಾಡುವ ಚಟವಿರುತ್ತದೆ)

Mangalore South PS                             

ಪಿರ್ಯಾದಿದಾರರಾದ ರವೀಂದ್ರ ಎಂಬವರು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಮಾನ್ಯ ದ.ಕ ಜಿಲ್ಲಾ ಜಿಲ್ಲಾಧಿಕಾರಿಯವರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅನಧಿಕೃತ ಬ್ಯಾನರ್ ಗಳನ್ನು ತೆರವುಗೊಳಿಸಲು ದಿನಾಂಕ 21-03-2023 ರಂದು ಆದೇಶಿಸಿದ್ದು,ಮೇಲಾಧಿಕಾರಿಗಳ ಆದೇಶದಂತೆ ಪಿರ್ಯಾದಿದಾರರು, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು, ಉಪ ಆಯುಕ್ತರು (ಕಂದಾಯ), ಪಾಲಿಕೆಯ ಕಂದಾಯ ನಿರೀಕ್ಷಕರುಗಳು ಹಾಗೂ ತೆರಿಗೆ ವಸುಲಿಗಾರರ ಸಮಕ್ಷಮದಲ್ಲಿ ದಿನಾಂಕ 24-03-2023 ರಂದು ರಾತ್ರಿ 9-30 ಗಂಟೆಗೆ ಮಂಗಳೂರು ನಗರದ ಅತ್ತಾವರ ಚಕ್ರಪಾಣಿ ದೇವಸ್ಥಾನದ ಹತ್ತಿರ ಇರುವ ಅನಧಿಕೃತ ಬ್ಯಾನರ್ ತೆರವುಗೊಳಿಸುತ್ತಿದ್ದ ಸಮಯ 3-4 ಜನ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

Mangalore East Traffic PS           

 ದಿನಾಂಕ 24-03-2023 ರಂದು ಮದ್ಯಾಹ್ನ 3.00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಸ್ವಾತಿ ಪ್ರಮೋದ್ ರವರು ತನ್ನ ಮಗನಾದ ಹಾರ್ಧಿಕ್ ಕುಮಾರ್ (11 ವರ್ಷ) ನನ್ನು ತನ್ನ ಬಾಬ್ತು KA-19-EB-0730  ನಂಬ್ರದ ಸ್ಕೂಟರ್ ನಲ್ಲಿ ಸಹ ಸವಾರನಾಗಿ ಕುಳ್ಳಿರಿಸಿಕೊಂಡು ತಾನು ಸವಾರಿ ಮಾಡುತ್ತಾ ತನ್ನ ತಾಯಿಯ ಮನೆಯಾದ ಕಪಿತಾನಿಯೋದಿಂದ ಹೊರಟು ಕರಾವಳಿ ಜಂಕ್ಷನ್ ಕಡೆಯಿಂದ ಬಲ್ಮಠ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಾ ಬೆಂದೂರ್ ವೆಲ್ ಜಂಕ್ಷನ್ ಬಳಿ ಇರುವ ಡಾನಿಶ್ ಹೋಟೇಲ್ ಮುಂಭಾಗ ನಿಂತಿದ್ದ ಬಸ್ಸೊಂದರ ಬಲ ಬದಿಯಿಂದ ಸ್ಕೂಟರನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಅದೇ ಸಮಯಕ್ಕೆ KA-19-AA-0914 ನಂಬ್ರದ ಶ್ರೀ ಶಾರದಾ ಎಂಬ ಹೆಸರಿನ ಖಾಸಗಿ ಸರ್ವೀಸ್ ಬಸ್ಸನ್ನು ಅದರ ಚಾಲಕ ಪ್ರಶಾಂತ್ ಮಾರ್ಲ ಎಂಬಾತನು ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ಅಪಾಯಕಾರಿಯಾದ ರೀತಿಯಲ್ಲಿ ಕರಾವಳಿ ಜಂಕ್ಷನ್ ಕಡೆಯಿಂದ ಬಲ್ಮಠ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿನ ಮುಂಭಾಗದ ಬಲ ಬದಿಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಮತ್ತು ಮಗ ಹಾರ್ಧಿಕ್ ಕುಮಾರ್ ಸ್ಕೂಟರ್ ಸಮೇತ ರಸ್ತೆಗೆ ಬಲ ಬದಿಗೆ ಮಗುಚಿ ಬಿದ್ದ ವೇಳೆ ಅಪಘಾತಪಡಿಸಿದ ಬಸ್ಸಿನ ಎಡ ಹಿಂಬದಿಯ ಚಕ್ರವು ಹಾರ್ಧಿಕ್ ಕುಮಾರ್ ರವರ ಕಾಲು ಮತ್ತು ತಲೆಯ ಮೇಲೆ ಹರಿದುಹೋಗಿದ್ದು, ಆತನ ಕಾಲಿಗೆ ಮತ್ತು ಪಕ್ಕೆಲುಬಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಆತನು ಧರಿಸಿದ್ದ ಹೆಲ್ಮೇಟ್ ಒಡೆದು ತಲೆಯ ಒಳಭಾಗಕ್ಕೆ ಗಂಭೀರ ಗಾಯವಾಗಿ ಕಿವಿಯಿಂದ ರಕ್ತ ಸೋರುತ್ತಿರುವುದಾಗಿದೆ. ಹಾಗೂ ಪಿರ್ಯಾದಿದಾರರಿಗೆ ಬಲ ಕಾಲಿನ ಪಾದದ ಗಂಟಿಗೆ ಮತ್ತು ಬಲ ಮೊಣಕೈಗೆ ಸಾಮಾನ್ಯ ಸ್ವರೂಪದ ಗಾಯಗಳಾಗಿರುತ್ತದೆ. ಅಪಘಾತದ ಬಳಿಕ ಸಾರ್ವಜನಿಕರು ಪಿರ್ಯಾದಿದಾರರನ್ನು ಮತ್ತು ಅವರ ಮಗನನ್ನು ಚಿಕಿತ್ಸೆಯ ಬಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ದು, ಪಿರ್ಯಾದಿದಾರರು ಹೊರ ರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ಅವರ ಮಗ ಗಾಯಾಳು ಹಾರ್ಧಿಕ್ ಕುಮಾರನು ಚಿಕಿತ್ಸೆ ಫಲಕಾರಿಯಾಗದೇ ಸಂಜೆ 3.49 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಅಪಘಾತದ ಬಗ್ಗೆ  KA-19-AA-0914 ನಂಬ್ರದ ಖಾಸಗಿ ಸರ್ವೀಸ್ ಬಸ್ಸಿನ ಚಾಲಕ ಪ್ರಶಾಂತ್ ಮಾರ್ಲ ಎಂಬಾತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

Panambur PS

ಪಿರ್ಯಾದಿ VEDAVATHI ದಾರರು ಮಂಗಳೂರು ನಗರದ ಬೈಕಂಪಾಡಿ ಗ್ರಾಮದ ಕುಡುಂಬೂರು ಎಂಬಲ್ಲಿ ತನ್ನ ಗಂಡ ಹಾಗೂ ಮಗಳೊಂದಿಗೆ ವಾಸವಾಗಿದ್ದು, ಮನೆವಾರ್ತೆ  ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 24-03-2023 ರಂದು ಬೆಳಿಗ್ಗೆ 9 ಗಂಟೆಗೆ ಪಿರ್ಯಾದಿ ಮತ್ತು ಪಿರ್ಯಾದಿಯ ಗಂಡ ಮನೆಯ ಹತ್ತಿರದಲ್ಲೇ ಇದ್ದ ದೇವಸ್ಥಾನಕ್ಕೆ ಹೋಗಿದ್ದು, ವಾಪಾಸು 10-15 ಗಂಟೆಗೆ ಬಂದಿದ್ದಾಗ ಮನೆಯ ಬಾಗಿಲಿಗೆ ಹಾಕಿದ ಬೀಗ ಹಾಕಿದ ಸ್ಥಿತಿಯಲ್ಲಿಲ್ಲದೆ ಚಿಲಕ ತೆರೆದ ಸ್ಥಿತಿಯಲ್ಲಿದ್ದು, ನಂತರ ಪಿರ್ಯಾದಿ ಮನೆಯ ಒಳಗೆ ಹೋಗಿ ನಡುವಿನ ಹಾಲ್ ನಲ್ಲಿ ಕಬ್ಬಿಣದ ಕಪಾಟು ಬಳಿ ನೋಡಿದಾಗ ಅದು ತೆರೆದ ಸ್ಥಿತಿಯಲ್ಲಿದ್ದು, ಅದರಲ್ಲಿದ್ದ ಸಾಮಾನುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಒಳಗಡೆ ಇಟ್ಟಿದ್ದ ಚಿನ್ನಾಭರಣಗಳು ಪತ್ತೆಯಾಗಿರುವುದಿಲ್ಲ. ಅಲ್ಲದೆ ಒಳಗಡೆ ರೂಮ್ ನಲ್ಲಿ ಇಟ್ಟಿದ್ದ ಕಬ್ಬಿಣದ ಕಪಾಟು ಬಳಿ ನೋಡಿದಾಗ ಅದು ತೆರೆದ ಸ್ಥಿತಿಯಲ್ಲಿದ್ದು, ಅದರಲ್ಲಿದ್ದ ಸಾಮಾನುಗಳೆಲ್ಲಾ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಒಳಗಡೆ ಇಟ್ಟಿದ್ದ ಚಿನ್ನಾಭರಣಗಳು ಪತ್ತೆಯಾಗಿರುವುದಿಲ್ಲ.    ಪಿರ್ಯಾದಿಯ ಮನೆಯ ಎರಡೂ ಗೋಡ್ರೇಜನ್ನು ಪರಿಶೀಲಿಸಿದಾಗ ಪಿರ್ಯಾದಿ, ಪಿರ್ಯಾದಿ ಗಂಡ ಹಾಗೂ ಪಿರ್ಯಾದಿಯ ಮಗಳಿಗೆ ಸಂಬಂಧಿಸಿದ ಒಟ್ಟು 192 ಗ್ರಾಂ. ಚಿನ್ನದ ಒಡವೆಗಳು ಅಂದಾಜು ಮೌಲ್ಯ ಸುಮಾರು ರೂ. 6,24,000/- ಕಳವಾಗಿರುವುದು ಕಂಡು ಬಂದಿರುತ್ತದೆ. ದಿನಾಂಕ 24-03-2023 ರಂದು ಬೆಳಿಗ್ಗೆ ಸುಮಾರು 9-00 ಗಂಟೆಯಿಂದ ಬೆಳಿಗ್ಗೆ 10-15 ಗಂಟೆ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮನೆಯ ಬಾಗಿಲಿಗೆ ಹಾಕಿದ ಬೀಗವನ್ನು ಒಡೆದು ಯಾರೋ ಕಳ್ಳರು ಚಿನ್ನದ ಆಭರಣಗಳನ್ನು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನದ ಆಭರಣಗಳನ್ನು ಮತ್ತು ಕಳ್ಳನನ್ನು ಪತ್ತೆ ಹಚ್ಚಿ ಕೊಡಬೇಕೆಂದು ಹಾಗೂ ಚಿನ್ನದ ಆಭರಣಗಳಿಗೆ ಸಂಬಂಧಿಸಿದ ರಶೀದಿಯನ್ನು ಮುಂದಕ್ಕೆ ನೀಡಲಾಗುವುದು ಎಂಬುದಾಗಿ ಪಿರ್ಯಾದಿಯ ಸಾರಾಂಶವಾಗಿರುತ್ತದೆ.

ಇತ್ತೀಚಿನ ನವೀಕರಣ​ : 21-08-2023 12:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080