ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Mangalore East Traffic PS                          

ದಿನಾಂಕ: 24-03-2024 ರಂದು KA-19-EZ-1349 ನಂಬ್ರದ ಸ್ಕೂಟರಿನ ನೊಂದಣಿ ಮಾಲಕಿಯಾದ ಆಯಿಷಾ ಹನೀನಾ (23 ವರ್ಷ) ಎಂಬವರು ಸುಮಾರು 15-16 ವರ್ಷದ ಬಾಲಕನಂತೆ ಕಾಣುವ ಹುಡುಗನಿಗೆ ತನ್ನ ಮಾಲಕತ್ವದ KA-19-EZ-1349 ನಂಬ್ರದ ಸ್ಕೂಟರನ್ನು ಆಪಲ್ ಮಾರ್ಟ್ ಸಂಸ್ಥೆಯ ಎದುರಿನಲ್ಲಿರುವ ಇಂಟರ್ ಲಾಕ್ ಅಳವಡಿಸಿದ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಜಾಗದಿಂದ  ಹಿಂದೆ ತೆಗೆದು ಸ್ಕೂಟರಿನಲ್ಲಿ ಶ್ರೀಮತಿ ಝೀನತ್ ರವರನ್ನು ಸಹಸವಾರೆಯಾಗಿ ಕುಳ್ಳಿರಿಸಿಕೊಂಡು ಕಾಪ್ರಿಗುಡ್ಡೆ ಕಡೆಗೆ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಹೋಗುತ್ತಾ ರಾತ್ರಿ ಸುಮಾರು 7:50 ಘಂಟೆಗೆ The Heritage ಎಂಬ ವಸತಿ ಸಮುಚ್ಚಯಕ್ಕೆ ಸಂಬಂಧಿಸಿದ ಮುಖ್ಯ ಗೇಟಿನ ಸಮೀಪ ಹೋಗುತ್ತಿದ್ದಂತೆ ಸ್ಕೂಟರಿನಲ್ಲಿ ಸಹಸವಾರೆಯಾಗಿ ಕುಳಿತಿದ್ದ ಶ್ರೀಮತಿ ಝೀನತ್ ರವರು ಸ್ಕೂಟರಿನಿಂದ ಹಿಮ್ಮುಖವಾಗಿ ಕಾಂಕ್ರೀಟ್ ರಸ್ತೆಗೆ ಬಿದ್ದು ತಲೆಯ ಹಿಂಭಾಗ ಗುದ್ದಿದ ಹಾಗೂ ಚರ್ಮ ಹರಿದ ಗಂಭೀರ ಸ್ವರೂಪದ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಚಿಕಿತ್ಸೆಯ ಬಗ್ಗೆ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ,

 

Mangalore East Traffic PS                          

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿದಾರರಾದ ಪೃಥ್ವಿಕ್ ಕೆ ಶೆಟ್ಟಿ, ( 30 ) ರವರು ಈ ದಿನ ದಿನಾಂಕ: 25/03/2024 ರಂದು ಬೆಳಿಗ್ಗೆ ತಮ್ಮ ತಾಯಿ ರೇವತಿ ರವರನ್ನು ಕರೆದುಕೊಂಡು ಪದುವಾ ಬಳಿ ಇರುವ ಕೊರಗಜ್ಜ ದೇವಸ್ಥಾನಕ್ಕೆ ಹೋಗಲೆಂದು ಸಮಯ 10-20 ಗಂಟೆಗೆ ತಮ್ಮ ಮನೆ ಬಳಿಯ ಶೆಡ್ಸ್ ಕಟ್ಟಡದ ಎದುರು ಬಂದಿದ್ದು ಅಲ್ಲಿಂದ ರಾ.ಹೆ 66 ನೇಯದನ್ನು ದಾಟಿ ರಸ್ತೆಯ ಇನ್ನೊಂದು ಬದಿಯಿಂದ ಆಟೋರಿಕ್ಷಾ ಮೂಲಕ ಹೋಗಲೆಂದು ಹೆದ್ದಾರಿಯನ್ನು ದಾಟುತ್ತಿರುವಾಗ ನಂತೂರು ಕಡೆಯಿಂದ ಪಂಪವೆಲ್ ಕಡೆಗೆ ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ: KA-19-EG-0729 ನೇಯದನ್ನು ಅದರ ಸವಾರ ದೇವಿಪ್ರಸಾದ್ ಗೋಖಲೆ ಎಂಬಾತನು ಪಂಪವೆಲ್ ಕಡೆಗೆ ಹೋಗುವ ಗಡಿಬಿಡಿಯಲ್ಲಿ ಅಡ್ಡಾದಿಡ್ಡಿಯಾಗಿ ಅಪಾಯಕಾರಿಯಾಗಿ ಚಲಾಯಿಸುತ್ತಾ ರಸ್ತೆದಾಟುತ್ತಿದ್ದವರ ಮುಂಭಾಗದಿಂದ ಹೋಗಲೆಂದು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಬೈಕು ಪಾದಾಚಾರಿ ರೇವತಿ ರವರಿಗೆ ಢಿಕ್ಕಿಯಾಗಿದ್ದು ಈ ಢಿಕ್ಕಿ ರಭಸಕ್ಕೆ ರೇವತಿ ರವರು ಹಾಗೂ ಬೈಕ್ ಸವಾರನು ರಸ್ತೆಗೆ ಬಿದ್ದು ಗಾಯಗೊಂಡಿದ್ದು ಇಂಡಿಯಾನ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ರೇವತಿ ರವರ ಬಲ ಕೋಲುಕಾಲಿಗೆ ಮೂಳೆ ಮೂರಿತವಾಗಿರುವುದಾಗಿ ತಿಳಿಸಿರುತ್ತಾರೆ, ಎಂಬಿತ್ಯಾದಿ

 

Mangalore East Traffic PS                 

ಈ ಪ್ರಕರಣದ ಸಾರಾಂಶವೇನೆಂದರೆ, ಈ ದಿನ ದಿನಾಂಕ 25-03-2024 ರಂದು  ಮಧ್ಯಾಹ್ನ 1:30 ಗಂಟೆಗೆ ಹಳೇ ಕಂಕನಾಡಿ ರಸ್ತೆಯ ಪಕ್ಕದಲ್ಲಿ ಸೆರಾವೊ ಭವನ ಬಿಲ್ಡಿಂಗ್ ಎದುರುಗಡೆ ಪಾರ್ಕ್ ಮಾಡಿ ನಿಲ್ಲಿಸಿದ್ದ ಪಿರ್ಯಾದಿದಾರರಾದ ಜಾಸ್ಮನ್ ಶರೊನ್ ಸೆರಾವೊ ರವರ ಬಾಬ್ತು KA-19-MF-1530 ನಂಬ್ರದ ಕಾರಿಗೆ KA-20-C-4358 ನಂಬ್ರದ 407 ಲಾರಿಯನ್ನು ಅದರ ಚಾಲಕ ಮಲ್ಲಪ್ಪ ಎಂಬಾತನು ನಿರ್ಲಕ್ಷ್ಯತನದಿಂದ ಚಲಾಯಿಸಿ ಪಿರ್ಯಾದಿದಾರರ ಕಾರಿನ ಹಿಂಬದಿಯಲ್ಲಿ ಇರಿಸಿದ್ದ ಕಬ್ಬಿಣದ ಬೋರ್ಡ್ ವೊಂದಕ್ಕೆ ಢಿಕ್ಕಿಪಡಿಸಿದ ಪರಿಣಾಮ ಕಬ್ಬಿಣದ ಬೋರ್ಡ್  ಢಿಕ್ಕಿಯ ರಭಸಕ್ಕೆ ಪಿರ್ಯಾದಿದಾರರ ಕಾರಿನ ಹಿಂಬದಿಗೆ ಬಡಿದು ಕಾರಿನ ಹಿಂಭಾಗದ ಬಂಪರ್ ಜಖಂಗೊಂಡಿರುತ್ತದೆ ಎಂಬಿತ್ಯಾದಿ

 

Traffic North Police Station                         

ಈ ದಿನ ದಿನಾಂಕ 25-03-2024 ರಂದು  ನೊಣಯ್ಯ ಬಂಗೇರ (72) ಎಂಬುವರು KA-19-EP-0505 ನಂಬ್ರದ ಸ್ಕೂಟರಿನಲ್ಲಿ ನಿಯಾಜ್ ಎಂಬುವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ರಾ.ಹೆ -66 ರ ಸೂರಜ್ ಹೋಟೆಲ್ ಜಂಕ್ಷನಿನಲ್ಲಿ ಹೋಟೆಲ್ ಕಡೆಯ ಮಧ್ಯದ ಡಿವೈಡರ್ ನಿಂದ ಸುರತ್ಕಲ್ ಕಡೆಯಿಂದ ಮುಕ್ಕ ಕಡೆಗೆ ಹಾದು ಹೋಗಿರುವ ರಾ.ಹೆ -66 ರಸ್ತೆಯನ್ನು ಸ್ಕೂಟರಿನಲ್ಲಿ ಸವಾರಿ ಮಾಡಿ ದಾಟುತ್ತಾ ಇನ್ನೊಂದು ಬದಿಗೆ ತಲುಪುತ್ತಿದ್ದಂತೆ ಮದ್ಯಾಹ್ನ ಸಮಯ ಸುಮಾರು 12:20 ಗಂಟೆಗೆ ಸುರತ್ಕಲ್ ಕಡೆಯಿಂಧ ಮುಕ್ಕ ಕಡೆಗೆ KA-20-Z-4383 ನಂಬ್ರದ ತಾರ್ ಜೀಪ್ ನ್ನು ಅದರ ಚಾಲಕ ಪ್ರತಾಪ ಎಂಬುವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ನೊಣಯ್ಯ ಬಂಗೇರ ರವರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ ಸವಾರ ಹಾಗೂ ಸಹ ಸವಾರ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದಿದ್ದು, ಸವಾರರನ್ನು ಅಪಘಾತ ಪಡಿಸಿದ ಜೀಪ್ ಸ್ವಲ್ಪ ದೂರದವರೆಗೆ ತಳ್ಳಿಕೊಂಡು ಹೋದ ಪರಿಣಾಮ ನೊಣಯ್ಯಬಂಗೇರ ರವರಿಗೆ ತಲೆಗೆ, ಹಣೆಗೆ, ಎಡಕಾಲಿಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಸಹ ಸವಾರ ನಿಯಾಜ್ ರವರಿಗೆ ಎಡಕೈಗೆ ಗಾಯ, ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ರಕ್ತಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಕ್ಕಾದ  ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಸವಾರ ನೊಣಯ್ಯ ರವರು ಚಿಕಿತ್ಸೆ ಪಲಕಾರಿಯಾಗದೇ ಮದ್ಯಾಹ್ನ 1:30 ಗಂಟೆಗೆ ಮೃತಪಟ್ಟಿರುತ್ತಾರೆ ಎಂಬಿತ್ಯಾದಿ

 

ಇತ್ತೀಚಿನ ನವೀಕರಣ​ : 28-03-2024 09:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080