Feedback / Suggestions

Crime Reports: CEN Crime PS Mangaluru City

ಪಿರ್ಯಾದಿ   ದಿನಾಂಕ 14-12-2022 ರಂದು ಬೆಳಿಗ್ಗೆ 10.15 ಗಂಟೆಗೆ ಸರಿಯಾಗಿ ವಾಟ್ಸಪ್ ನಂಬ್ರ 8298350900ನೇ ದರಿಂದ Hello, How are you? I’m Miss Sharm HR from GCP, our company is recruiting, are you looking for the job? ಎಂಬದಾಗಿ ಸಂದೇಶ ಕಳುಹಿಸಿದ್ದು ಈ ಬಗ್ಗ ಪಿರ್ಯಾದಿದಾರರು ಸದ್ರಿ ನಂಬರಿಗೆ ವಿಚಾರಿಸಿದಾಗ  ಆ ವ್ಯಕ್ತಿಯು ಪಿರ್ಯಾದಿದಾರರಿಗೆ ಪಾರ್ಟ್ ಟೈಂ ಜಾಬ್ ಒಂದನ್ನು ನೀಡುವುದಾಗಿ ನಂಬಿಸಿ  ನಂತರದ ದಿನಗಳಲ್ಲಿ ಟೆಲಿಗ್ರಾಂ ಮೂಲಕ VIP/regular employees group ಎಂಬ ಗ್ರೂಪ್ ನಲ್ಲಿ ಕೆಲಸದ ಬಗ್ಗೆ ಪಿರ್ಯಾದಿದಾರರಲ್ಲಿ ಚಾಟ್ ಮಾಡಿಕೊಂಡಿದ್ದು ಟಾಸ್ಕ್ ಬಗ್ಗೆ ಮೊದಲಿಗೆ ರೂ.1000/- ಹಾಕುವಂತೆ ತಿಳಸಿದ್ದು ಪಿರ್ಯಾದಿದಾರರು ರೂ.1000/- ನ್ನು ಹಾಕಿದಾಗ ರೂ.1300/- ಬಂದಿದ್ದು, 2ನೇ ಬಾರಿ ಪಿರ್ಯಾದಿದಾರರು 5000 ಹಾಕಿದ್ದು ಅವರಿಗೆ 5900/- ಹಣ ಬಂದಿರುತ್ತದೆ. ಹೀಗೆ ದಿನಾಂಕ 28-12-2022ರ ವರೆಗೆ ಟಾಸ್ಕ್ ಬಗ್ಗೆ ಸದ್ರಿ ವ್ಯಕ್ತಿಯು ಕಳುಹಿಸಿದ ವಿವಿಧ ಖಾತೆಗಳಿಗೆ ಪಿರ್ಯಾದಿದಾರರ ಕರ್ಣಾಟಕ ಬ್ಯಾಂಕ್ ಖಾತೆ ಸಂಖ್ಯೆ  , ಐ.ಡಿ.ಎಫ್.ಸಿ ಖಾತೆ ಸಂಖ್ಯೆ  ಹೆಚ್.ಡಿ.ಎಫ್.ಸಿ ಖಾತೆ ಸಂಖ್ಯೆ , ಪಿರ್ಯಾದಿದಾರರ ಮಗ ರವರ ಕರ್ಣಾಟಕ ಬ್ಯಾಂಕ್ ಖಾತೆ ಸಂಖ್ಯೆ  ಹಾಗೂ  ಐ.ಡಿ.ಎಫ್.ಸಿ ಖಾತೆ ಸಂಖ್ಯೆ , ಮಗಳ  ಕರ್ಣಾಟಕ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ತಾಯಿ  ರವರ ಕರ್ಣಾಟಕ ಬ್ಯಾಂಕ್ ಖಾತೆ ಸಂಖ್ಯೆ  ನೇ ದರಿಂದ ಹಂತ ಹಂತವಾಗಿ ಒಟ್ಟು ರೂ. 76,31,084/- ನೇ ದನ್ನು ವರ್ಗಾಯಿಸಿಕೊಂಡಿರುವುದಾಗಿದೆ. ಈ ರೀತಿ ತನಗೆ ಪಾರ್ಟ್ ಟೈಂ ಜಾಬ್ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಟಾಸ್ಕ್ ನ್ನು ನೀಡುವ ನೆಪದಲ್ಲಿ ಪಿರ್ಯಾದಾರರ ಹಾಗೂ ಅವರ ಮನಯವರ ಹಲವು ಖಾತೆಗಳಿಂದ ಅನಧಿಕೃತವಾಗಿ ಹಣವನ್ನು ವರ್ಗಾಯಿಸಿಕೊಂಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ.

CEN Crime PS Mangaluru City

 ಪಿರ್ಯಾದಿದಾರರಿಗೆ ದಿನಾಂಕ 10-02-2023 ರಂದು ಸಂಜೆ  17-30 ಗಂಟೆಗೆ ಯಾರೋ ಅಪರಿಚಿತರ ವ್ಯಕ್ತಿಯ 9509860923, 6033084404, 7217033976 ಮೊಬೈಲ್  ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರ  ನೇದರ ವಾಟ್ಸಾಫ್ ಖಾತೆಗೆ ಪಾರ್ಟ್ ಟೈಂ ಜಾಬ್ ಇರುವುದಾಗಿ  ಸಂದೇಶ ಕಳುಹಿಇಸಿ  ನಂತರ ವಾಟ್ಸಾಪ್ ನಲ್ಲಿ online earning task ಎಂದು ತಿಳಿಸಿ telegram trading link: coinneww.app ನೇದರ ಲಿಂಕ್ ಕಳುಹಿಸಿದ್ದರು. ನಂತರ ಪಿರ್ಯಾದಿದಾರರು ಸದ್ರಿ ಲಿಂಕ್ ನ್ನು ಬಳಸಿ ಟಾಸ್ಕ್ ನ ಬಗ್ಗೆ  ತಾನು ಹೊಂದಿರುವ ಪೇಟಿಯಂ ಬ್ಯಾಂಕ್ ಖಾತೆ ನಂಬ್ರ: ನೇದರಿಂದ ದಿನಾಂಕ 10-02-2023  ರಿಂದ ದಿನಾಂಕ 15-02-2023ರ ವರೆಗೆ  ಹಂತ ಹಂತವಾಗಿ ಒಟ್ಟು 14,67,194/- ರೂಪಾಯಿಯನ್ನು UPI, NEFT, RTGS ಮತ್ತು ಕ್ಯಾಷ್ ಡಿಪಾಸಿಟ್ (CDM Machine)  ಮೂಲಕ  ವರ್ಗಾಯಿಸಿರುವುದಾಗಿದೆ. ಈ ರೀತಿ ತನಗೆ ಪಾರ್ಟ್ ಟೈಂ ಜಾಬ್ ನ  ಆಮಿಷವೊಡ್ಡಿ ತನ್ನ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ 

CEN Crime PS Mangaluru City

ಪಿರ್ಯಾದಿ   ದಿನಾಂಕ 03-12-2022 ರಂದು ಬೆಳಿಗ್ಗೆ ಸಮಯ ಸುಮಾರು 11.00 ಗಂಟೆಗೆ ಸರಿಯಾಗಿ ಪಿರ್ಯಾದಿದಾರರಿಗೆ  ವಾಟ್ಸಪ್ ನಂಬ್ರ +919630886285 (Geetanjali Malik 1992)  ಹಾಗೂ +919741988949 (Elijah) ನೇ ದರಿಂದ  “IMPOSSIBLE MARKETING SINGAPORE  ಎಂಬ ಜಾಬ್ ಆಫರ್ ಹೊಂದಿದ ಸಂದೇಶವೊಂದು ಬಂದಿದ್ದು  ನಂತರ ಪಿರ್ಯಾದಿದಾರರು ಈ ಬಗ್ಗ ಸದ್ರಿ ನಂಬರಿಗೆ ವಿಚಾರಿಸಿದಾಗ  ಆ ವ್ಯಕ್ತಿಯು ಪಿರ್ಯಾದಿದಾರರಿಗೆ work from home full time job  ಒಂದನ್ನು ನೀಡುವುದಾಗಿ ನಂಬಿಸಿ  ಟೆಲಿಗ್ರಾಂ ಮೂಲಕ working task group ಎಂಬ ಗ್ರೂಪ್ ಮಾಡಿಕೊಂಡು ಸದ್ರಿ  ಕೆಲಸದ ಬಗ್ಗೆ ಪಿರ್ಯಾದಿದಾರರೊಂದಿಗೆ  ಚಾಟ್ ಮಾಡಿಕೊಂಡಿದ್ದು ನಂತರದ ದಿನಗಳಲ್ಲಿ Receptionist Riya and Tutor Akash ಎಂಬ ಟೆಲಿಗ್ರಾಂ ಪ್ರೊಫೈಲ್ ನಲ್ಲಿ ಚಾಟನ್ನು  ಮುಂದುವರಿಸಿಕೊಂಡು  global chat platform under ISO  ಜಾಬ್ ಟಾಸ್ಕ್ ಬಗ್ಗೆ ಮೊದಲಿಗೆ ರೂ.1000/- ಹಾಕುವಂತೆ ತಿಳಸಿದ್ದು ಪಿರ್ಯಾದಿದಾರರು ರೂ.1000/- ನ್ನು ಹಾಕಿದಾಗ ರೂ.1300/- ಬಂದಿದ್ದು  ಇದೇ ರೀತಿಯಾಗಿ ಟಾಸ್ಕ್ ಬಗ್ಗೆ  ದಿನಾಂಕ 11-12-2022 ರಿಂದ 02-01-2023 ರವರೆಗೆ  ಟಾಸ್ಕ್ ಬಗ್ಗೆ ಸದ್ರಿ ವ್ಯಕ್ತಿಯು ಕಳುಹಿಸಿದ ವಿವಿಧ ಖಾತೆಗಳಿಗೆ ಪಿರ್ಯಾದಿದಾರರ ಹೆಚ್.ಡಿ.ಎಫ್.ಸಿ ಖಾತೆ ಸಂಖ್ಯೆ, ಇಂಡಿಯನ್ ಓವರ್ ಸೀಸ್ ಬ್ಯಾಂಕ್  ಖಾತೆ ಸಂಖ್ಯೆ , ಬ್ಯಾಂಕ್ ಆಫ್ ಬರೋಡಾ ಖಾತೆ ಸಂಖ್ಯೆ, ಎಸ್.ಬಿ.ಐ ಖಾತೆ ಸಂಖ್ಯೆ  ಹಾಗೂ ಐ.ಸಿ.ಐ.ಸಿ.ಐ ಖಾತೆ ಸಂಖ್ಯೆ ನೇ ದರಿಂದ ಹಾಗೂ ಯಶ್ ರೋಡ್ ಲೈನ್ಸ್ ನ ಬ್ಯಾಂಕ್ ಆಫ್ ಮಹಾರಾಷ್ಟ್ರ ಖಾತೆ ಸಂಖ್ಯೆ  ಹಾಗೂ ಮನಿಶ್ ಟಿ.ಎಂ ರವರ ಹೆಚ್.ಡಿ.ಎಫ್.ಸಿ ಬ್ಯಾಂಕ್ ಖಾತೆ ಸಂಖ್ಯೆ  ನೇದರಿಂದ ಹಾಗೂ ಎ.ಟಿ.ಎಂ ಕ್ಯಾಸ್ ಡಿಪೊಸಿಟ್ ಮೂಲಕ  ಹಂತ ಹಂತವಾಗಿ ಒಟ್ಟು ರೂ. 28,21,100/- ನೇ ದನ್ನು ವರ್ಗಾಯಿಸಿಕೊಂಡಿರುವುದಾಗಿದೆ. ಈ ರೀತಿ ತನಗೆ ವರ್ಕ್ ಫ್ರಂ ಹೋಂ ಫುಲ್ ಟೈಂ ಜಾಬ್ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಟಾಸ್ಕ್ ನ್ನು ನೀಡುವ ನೆಪದಲ್ಲಿ ಪಿರ್ಯಾದಾರರ ಹಲವು ಖಾತೆಗಳಿಂದ  ಅನಧಿಕೃತವಾಗಿ ಹಣವನ್ನು ವರ್ಗಾಯಿಸಿಕೊಂಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ.

 

Mangalore East Traffic PS  

ದಿನಾಂಕ 24-04-2023 ರಂದು ಪಿರ್ಯಾದಿ ಚೇತನ್ ನಾಯ್ಕ್ ರವರು ತನ್ನ ಗೆಳೆಯರೊಂದಿಗೆ ಕಾವೂರು ಬಳಿ ಪಾಸ್ಟ್ ಫುಡ್ ಆಹಾರ ಸೇವಿಸಿ ಅಲ್ಲಿಂದ ಪಿರ್ಯಾದಿದಾರರ ತಾಯಿಯ ಬಾಬ್ತು KA-19-EZ-2246 ಸ್ಕೂಟರನ್ನು ಸೋಮಲಿಂಗ(17ವರ್ಷ) ರವರಿಗೆ ಸವಾರಿ ಮಾಡಲು ಕೊಟ್ಟು ಪಿರ್ಯಾದಿದಾರರು ಹಿಂಬದಿ ಸವಾರರಾಗಿ ಕುಳಿತುಕೊಂಡು ಉಳಿದ ಇಬ್ಬರು ಗೆಳೆಯರಾದ ನಿಖಿಲ್ ಮತ್ತು ಆಕಾಶ್ ಇನ್ನೊಂದು ಸ್ಕೂಟರಿನಲ್ಲಿ ಕಾವೂರಿನಿಂದ ಯೆಯ್ಯಾಡಿ ಕಡೆಗೆ ಹೊರಟು ಅಲ್ಲಿಂದ ಆಕಾಶ್ ನನ್ನು ಬಾರೆಬೈಲ್ ಬಳಿ ಇರುವ ಆತನ ಮನೆಗೆ ಬಿಟ್ಟು ನಂತರ ಅಲ್ಲಿಂದ ವಾಪಾಸ್ಸಾಗುತ್ತಾ ಸೋಮಲಿಂಗನು KA-19-EZ-2246 ಸ್ಕೂಟರನ್ನು ಸವಾರಿ ಮಾಡುತ್ತಾ ಪಿರ್ಯಾದಿದಾರರು ಹಿಂಬದಿ ಸವಾರರಾಗಿ ಕುಳಿತುಕೊಂಡು ಬಾರೆಬೈಲಿನಿಂದ ಯೆಯ್ಯಾಡಿ ಜಂಕ್ಷನ್ ಕಡೆಗೆ ಬಂದು ಸದ್ರಿ ಜಂಕ್ಷನ್ ನಲ್ಲಿ ಸ್ಕೂಟರನ್ನು ನಿಧಾನಿಸಿ ನಿಲ್ಲಿಸಿ ರಸ್ತೆಯ ಎಡ ಮತ್ತು ಬಲ ಬದಿ ನೋಡಿಕೊಂಡು ಕಾವೂರು ಕಡೆಗೆ ಹೋಗಲು ಹೊರಡುತ್ತಿದ್ದಂತೆ ಸಮಯ ಸುಮಾರು ಮಧ್ಯ ರಾತ್ರಿ 12.00 ಗಂಟೆಗೆ ಕೆಪಿಟಿ ಕಡೆಯಿಂದ ಮೇರಿಹಿಲ್ ಕಡೆಗೆ KA-19-MB-4516 ನೊಂದಣಿ ನಂಬ್ರದ ಓಮಿನಿ ಕಾರನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ಮತ್ತು ಅಜಾಗರೂಕತೆಯಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ವೇಗವಾಗಿ ಚಲಾಯಿಸಿಕೊಂಡು ಸ್ಕೂಟರಿಗೆ ಢಿಕ್ಕಿ ಪಡಿಸಿದ ಪರಿಣಾಮ ಸ್ಕೂಟರ್ ಸವಾರಿ ಮಾಡುತ್ತಿದ್ದ ಸೋಮಲಿಂಗನು ಓಮಿನಿ ಕಾರಿನ ಗಾಜಿನ ಮೇಲೆ ಎಸೆಯಲ್ಪಟ್ಟು ಡಿವೈಡರ್ ಮೇಲೆ ಬಿದ್ದಿದ್ದು, ಪಿರ್ಯಾದಿದಾರರು ಕೂಡ ರಸ್ತೆಯ ಮೇಲೆ ಎಸೆಯಲ್ಪಟ್ಟಿದ್ದು, ಅಪಘಾತದಲ್ಲಿ ಪಿರ್ಯಾದಿದಾರರಿಗೆ ತಲೆಯ ಹಿಂಬದಿಗೆ, ಬೆನ್ನಿಗೆ, ಎಡಕಾಲು ಕೋಲು ಕಾಲಿಗೆ, ಎಡ ಕೈ ಮಣಿಗಂಟಿಗೆ ಗುದ್ದಿದ ಗಾಯ, ಬೆನ್ನಿನ ಎಡಭಾಗದಲ್ಲಿ ರಕ್ತಕಂದಿದ ಗಾಯ ಉಂಟಾಗಿದ್ದು, ಸೋಮಲಿಂಗರವರಿಗೆ ತಲೆಯ ಹಿಂಭಾಗಕ್ಕೆ, ಬಲ ಭುಜದ ಮೇಲೆ, ಹೊಟ್ಟೆಯ ಬಲ ಭಾಗದಲ್ಲಿ ಬಲವಾದ ಗುದ್ದಿದ ಗಾಯವಾಗಿದ್ದು, ಅದೇ ವೇಳೆಗೆ ಆ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಅಧಿಕಾರಿಗಳು ಸರಕಾರಿ ವಾಹನದಲ್ಲಿದ್ದು, ಗಾಯಾಳುಗಳನ್ನು ಎ.ಜೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಪಿರ್ಯಾದಿದಾರರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿದ್ದು, ಅಪಘಾತದಲ್ಲಿ ತೀವ್ರ ತರದಲ್ಲಿ ಗಾಯಗೊಂಡಿದ್ದ ಸೋಮಲಿಂಗರವರು ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 25-04-2023 ರಂದು ಬೆಳಗಿನ ಜಾವ 02.01 ಗಂಟೆಗೆ ಮೃತಪಟ್ಟಿರುತ್ತಾರೆ. ಅಪಘಾತಪಡಿಸಿದ ಕಾರು ಚಾಲಕ ಅಪಘಾತಪಡಿಸಿದ ವಾಹನವನ್ನು ಸ್ಥಳದಲ್ಲಿ ನಿಲ್ಲಿಸದೆ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ.   

Mangalore West Traffic PS

ದಿನಾಂಕ: 24-04-2023  ರಂದು ಪಿರ್ಯಾದಿ SAGAR SHETTY ತನ್ನ ತಂದೆಯ ಬಾಬ್ತು  KA70-3999 ನೇ ಕಾರನ್ನು ಪಿರ್ಯಾದಿದಾರರು  ತಮ್ಮ ಶಿಶಿರ್ ಶೆಟ್ಟಿ ರವರನ್ನು ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಮಣ್ಣಗುಡ್ಡ ಕಡೆಯಿಂದ ಲೇಡಿಹಿಲ್ ವೃತ್ತದ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಸಂಜೆ 6.30 ಗಂಟೆಗೆ ಲೇಡಿಹಿಲ್ ವೃತ್ತ ತಲುಪುತ್ತಿದ್ದಂತೆ  ಲಾಲ್ ಬಾಗ್  ಕಡೆಯಿಂದ ಲೇಡಿಹಿಲ್ ವೃತ್ತದ ಕಡೆಗೆ KA19-AA-8488 ನೇ ಬಸ್ಸನ್ನು ಅದರ ಚಾಲಕ ವಿನಯ್ ಕೆ ರವರು ಸಾರ್ವಜನಿಕ ರಸ್ತೆಯಲ್ಲಿ  ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಾರಿನ ಹಿಂಬದಿಯ ಎಡಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ  ಕಾರಿನ ಹಿಂಬದಿಯ ಬಂಪರ್ ಮತ್ತು ಬ್ರೇಕ್  ಲೈಟ್ ಜಖಂ ಗೊಂಡಿರುತ್ತದೆ ಎಂಬಿತ್ಯಾದಿ.

CEN Crime PS Mangaluru City

ಪಿರ್ಯಾದಿ ದಿನಾಂಕ 07-02-2023 ರಂದು ಯಾರೋ ಅಪರಿಚಿತ ವ್ಯಕ್ತಿ ವಾಟ್ಸ್ಆಪ್ ನಂಬ್ರ +447742468594 ನೇದರಿಂದ ಪಿರ್ಯಾದಿದಾರರ ವಾಟ್ಸ್ಆಪ್ ನಂಬ್ರ- ನೇ ದಕ್ಕೆ ವಾಟ್ಸ್ ಆಪ್ ಸಂದೇಶ ಕಳುಹಿಸಿ ಪಿರ್ಯಾದಿದಾರರಿಗೆ ಉಡುಗೂರೆ ಕಳುಹಿಸುವುದಾಗಿ ತಿಳಿಸಿ ಪಿರ್ಯಾದಿದಾರರ ಹೆಸರು ವಿಳಾಸ ಪಡೆದುಕೊಂಡಿರುತ್ತಾರೆ.ನಂತರ ದಿನಾಂಕ 13-02-2023 ರಂದು ಯಾರೋ ಅಪರಿಚಿತ ವ್ಯಕ್ತಿ ದೂರವಾಣಿ ಸಂಖ್ಯೆ-8798981946 ನೇದರಿಂದ ಕರೆ ಮಾಡಿ ತಾನು ಆರಾಧ್ಯ ದಾಸ್ ಎರ್ ಪೋರ್ಟ್ ಕಸ್ಟಮರ್ ಎಂದು ಪಿರ್ಯಾದಿದಾರರಿಗೆ ಪರಿಚಯಿಸಿಕೊಂಡು ನಿಮಗೆ ಉಡುಗೂರೆ ಬಂದಿದೆ ಅದಕ್ಕಾಗಿ ಪ್ರೋಸೆಸಿಂಗ್ ಶುಲ್ಕ ಪಾವತಿಸಬೇಕೆಂದು ತಿಳಿಸಿರುತ್ತಾರೆ, ಪಿರ್ಯಾದಿದಾರರು ಇದನ್ನು ನಂಬಿಕೊಂಡು ತಮ್ಮ ಬ್ಯಾಂಕ್ ಆಫ್ ಬರೋಡ ಕುಪ್ಪೆಪದವು ಶಾಖೆ ಖಾತೆ ಸಂಖ್ಯೆ- ನೇದರಿಂದ ಯುಪಿಐ ಮುಖಾಂತರ ದಿನಾಂಕ 13-02-2023 ರಂದು 41,373/- ರೂಗಳನ್ನು ವರ್ಗಾಹಿಸಿರುತ್ತಾರೆ,ನಂತರ ಸದ್ರಿ ವ್ಯಕ್ತಿಯು ಪಿರ್ಯಾದಿದಾರರಿಗೆ ಮತ್ತೊಮ್ಮೆ ಹಣ ಪಾವತಿಸುವಂತೆ ತಿಳಿಸಿದ್ದು ಪಿರ್ಯಾದಿದಾರರು ಅದೇ ರೀತಿ 41,373/- ರೂಗಳನ್ನು ತಮ್ಮ ಬ್ಯಾಂಕ್ ಆಫ್ ಬರೋಡಾ ದಿಂದ ಪಾವತಿಸಿರುತ್ತಾರೆ.ನಂತರ ಸದ್ರಿ ವ್ಯಕ್ತಿಯು ಅದೇ ರೀತಿ ಮತ್ತೊಮ್ಮೆ ಪಿರ್ಯಾದಿದಾರಿಗೆ ಹಣ ಪಾವತಿಸುವಂತೆ ಬೇಡಿಕೆ ಇಟ್ಟಿರುತ್ತಾರೆ,ಇದರಿಂದ ಪಿರ್ಯಾದಿದಾರರು ಎಚ್ಚೆತ್ತುಕೊಂಡು ಯಾವುದೇ ಹಣ ಪಾವತಿಸಿರುವುದಿಲ್ಲ,ಈ ರೀತಿಯಾಗಿ ಪಿರ್ಯಾದಿದಾರರಿಗೆ ಯಾರೋ ಅಪರಿಚಿತ ವ್ಯಕ್ತಿ ಉಡುಗೂರೆ ಕಳುಹಿಸುವುದಾಗಿ ತಿಳಿಸಿ ಮೋಸದಿಂದ ಒಟ್ಟು 82,746/- ರೂಗಳನ್ನು ಆನ್ ಲೈನ್ ಮುಖಾಂತರ ಪಾವತಿಸಿಕೊಂಡು ವಂಚಿಸಿರುತ್ತಾರೆ .ಪಿರ್ಯಾದಿದಾರರು ಇದೂವರೆಗೂ ಉಡುಗೂರೆ ಬರಬಹುದೆಂಬ ನಿರೀಕ್ಷೆಯಲ್ಲಿರುತ್ತಾರೆ ಆದರೆ ಇದೂವರೆಗೂ ಯಾವುದೇ ಉಡುಗೂರೆ ಬಾರದ ಕಾರಣ ತಡವಾಗಿ ದೂರು ನೀಡುತ್ತಿರುವುದಾಗಿದೆ.ಆದುದ್ದರಿಂದ ಸದ್ರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ಎಂಬಿತ್ಯಾದಿಯಾಗಿದೆ.

CEN Crime PS Mangaluru City

ಪಿರ್ಯಾದಿ ದಿನಾಂಕ 11-04-2023 ರಂದು ತನ್ನ ಗಂಡನ ಮನೆಯಲ್ಲಿರುವಾಗ ಆಕೆಯ ಮೊಬೈಲ್ ನಂಬ್ರ: ನೇದರ ವಾಟ್ಸಾಫ್ ಖಾತೆಗೆ ಯಾವುದೋ ಅಪರಿಚಿತ ಮೊಬೈಲ್ ನಂಬ್ರ: 7326969244 ನೇದರಿಂದ PART TIME JOB  ಬಗ್ಗೆ ಲಿಂಕ್ ಬಂದಿರುತ್ತದೆ. ಸದ್ರಿ ಸಂದೇಶವು ಗೂಗಲ್ ಗೆ ಲಿಂಕ್ ಆಗಿದ್ದು, ಸದ್ರಿ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರ ಮಗಳಿಗೆ  ಟೆಲಿಗ್ರಾಂ ಆಪ್ ನ್ನು ಡೌನ್ ಲೋಡ್ ಮಾಡಲು ತಿಳಿಸಿದಂತೆ, ಝಾಹಿದಾಳು ಟೆಲಿಗ್ರಾಂ ಆಫ್ ನ್ನು ಡೌನ್ ಲೋಡ್ ಮಾಡಿಕೊಂಡಿರುತ್ತಾಳೆ. ಸದ್ರಿ ಟೆಲಿಗ್ರಾಮ್ user name:@Jenny5988888 ನೇದನ್ನು ಹೊಂದಿರುವ ವ್ಯಕ್ತಿಯು ಟಾಸ್ಕ್ ಕಂಪ್ಲೀಟ್ ಮಾಡಿದರೆ ಹಣವನ್ನು ನೀಡುವುದಾಗಿ ತಿಳಿಸಿದಂತೆ ಪಿರ್ಯಾದಿದಾರರ ಮಗಳು ಮೊದಲಿಗೆ ಸದ್ರಿ ಅಪರಿಚಿತ ವ್ಯಕ್ತಿಯು ತಿಳಿಸಿದಂತೆ ರೂಪಾಯಿ 100/- ಹಾಕಿದಾಗ, ರೂಪಾಯಿ 200/- ಆಕೆಯ ಖಾತೆಗೆ ಜಮಾ ಆಗಿರುತ್ತದೆ. ನಂತರ ಆರೋಪಿಯ ಮಾತನ್ನು ನಂಬಿ ಆರೋಪಿ ತಿಳಿಸಿದಂತೆ ರೂಪಾಯಿ 199/- ನಂತರ ರೂಪಾಯಿ 500/- ರಂತೆ ಪೋನ್ ಪೇ ಮೂಲಕ ಮತ್ತು ಗೂಗಲ್ ಪೇ ಮೂಲಕ  ರಂತೆ ಪಾವತ್ತಿಸಿದ್ದಳು. ನಂತರ ಸದ್ರಿ ಅಪರಿಚಿತ ವ್ಯಕ್ತಿ ತಿಳಿಸಿದಂತೆ ಪಿರ್ಯಾದಿದಾರರ  ಮಗಳು ಗೂಗಲ್ ಪೇ  ಮೂಲಕ ಆರೋಪಿಯ Account No. 012852000005420 and IFSC No. yesb000128, 098663400003371, yesb0001182, 720705000064, icic0007207 ಖಾತೆಗಳಿಗೆ ಕೆನರಾ ಬ್ಯಾಂಕ್ ಖಾತೆ ನೇದರಿಂದ ದಿನಾಂಕ 11-04-2023 ರಿಂದ 12-04-2023ರ ವರೆಗೆ ಹಂತ ಹಂತವಾಗಿ ಒಟ್ಟು 4,23,000/- ಹಣವನ್ನು ವರ್ಗಾಯಿಸಿಕೊಂಡು ಮೋಸ ಹೋಗಿರುವುದಾಗಿದೆ. ಉದ್ಯೋಗದ ಆಮಿಷ ಒಡ್ಡಿ ಮೋಸದಿಂದ ಆಕೆಯ  ಖಾತೆಯಿಂದ ಹಣ ವರ್ಗಾವಣೆ ಮಾಡಿಕೊಂಡ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ. ಎಂಬಿತ್ಯಾದಿ.

 

CEN Crime PS Mangaluru City

ಪಿರ್ಯಾದಿ ದಿನಾಂಕ 17-04-2023 ರಂದು ಬೆಳಿಗ್ಗೆ 11 ಗಂಟೆಗೆ ಪಿರ್ಯಾದಿದಾರರ ವಾಸದ ಮನೆಗೆ meesho Sl No. E398966 congratulations! Your redemption code is inside ಎಂಬುದಾಗಿ ಸ್ಕ್ರಾಚ್ ಕಾರ್ಡೊಂದು ಅಂಚೆ ಮೂಲಕ ಬಂದಿದ್ದು ಪಿರ್ಯಾದಿದಾರರು ಅದನ್ನು ತೆರೆದು ನೋಡಿ ಅದರಲ್ಲಿ ನಮೂದಾಗಿದ್ದ ವಾಟ್ಸಪ್ ನಂಬ್ರ 9123826674 ನೇ ದಕ್ಕೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿದ ವ್ಯಕ್ತಿಯು ನೀವು ಮೀಶೊ ವತಿಯಿಂದ maruthi Suzuki boleno car ನ್ನು ಗೆದ್ದಿದ್ದೀರಿ ಅದರ ಸ್ಕ್ರಾಚ್ ಕಾರ್ಡನ್ನು ಸ್ಕ್ಯಾಚ್ ಮಾಡಿ ಕೋಡನ್ನು ಹೇಳುವಂತೆ ಸೂಚಿಸಿದ್ದು ಅಂತೆಯೇ ಪಿರ್ಯಾದಿದಾರರು ಸದ್ರಿ ಕೋಡನ್ನು ಆತನಿಗೆ  ನೀಡಿದ್ದು ನಂತರದಲ್ಲಿ ಸದ್ರಿ ವ್ಯಕ್ತಿಯು ವಾಟ್ಸಪ್ ನಂಬ್ರ 9123826674 ನೇದರಲ್ಲಿ ಪಿರ್ಯಾದಿದಾರರೊಂದಿಗೆ ಚಾಟ್ ಮಾಡಿಕೊಂಡಿದ್ದು  ಪೇಪರ್ ಚಾರ್ಜ್ ಬಗ್ಗೆ ರೂ.6500/- ಕಳಿಸಬೇಕಾಗಿ ಪಿರ್ಯಾದಿದಾರರಲ್ಲಿ ತಿಳಿಸಿದ್ದು ಪಿರ್ಯಾದಿದಾರರು ರೂ.6500/- ನೇ ದನ್ನು ತನ್ನ ಗೆಳೆಯ ರಶೀದ್ ರವರ ಗೂಗಲ್ ಪೇ ನಂಬ್ರ  ನೇ ದರಿಂದ ಸದ್ರಿ ವ್ಯಕ್ತಿಯು ತಿಳಿಸಿದ 7542839897ನೇದಕ್ಕೆ ಗೂಗಲ್ ಪೇ ಮಾಡಿರುತ್ತಾರೆ. ಇದಾದ ಬಳಿಕ ತೆರಿಗೆ, ಜಿ.ಎಸ್.ಟಿ ಹೀಗೆ ಹಲವಾರು ಕಾರಣಗಳನ್ನು ಹೇಳಿ ಸದ್ರಿ ವ್ಯಕ್ತಿಯು ತನ್ನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 110113068316 ( CNRB0001253) ಹಾಗೂ  ಗೂಗಲ್ ಪೇ 7542839897 ನೇ ದಕ್ಕೆ  ಪಿರ್ಯಾದಿದಾರರ ಎಸ್.ಬಿ.ಐ ಬ್ಯಾಂಕ್ ಖಾತೆ ಸಂಖ್ಯೆ ನೇದರಿಂದ ಹಂತ ಹಂತವಾಗಿ ಒಟ್ಟು ರೂ. 2,25,200/- ನ್ನು ವರ್ಗಾಯಿಸಿಕೊಂಡಿರುವುದಾಗಿದೆ.  ಹೀಗೆ ತನಗೆ maruthi Suzuki boleno car ನ್ನು ಉಡುಗೊರೆ ನೀಡುವುದಾಗಿ ಆಮಿಷವೊಡ್ಡಿ ಮೋಸದಿಂದ ತನ್ನ  ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣದ ವರ್ಗಾವಣೆಯನ್ನು ಮಾಡಿಕೊಂಡ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

Traffic South Police Station     

ಪಿರ್ಯಾದಿ ಸಾಜುದ್ದೀನ್ ರವರು  ದಿನಾಂಕ 23-04-2023 ರಂದು ಅವರ ಪರಿಚಯದವರಾದ ಅಶ್ಪಕ್ ಮಯ್ಯದಿ ರವರೊಂದಿಗೆ ಅವರ ಮೋಟಾರ್ ಸೈಕಲ್ ನಂಬ್ರ KA-19-HF-0677 ನೇದರಲ್ಲಿ ಅಶ್ಪಕ್ ಮಯ್ಯದಿ ರವರು ಸವಾರರಾಗಿ ಪಿರ್ಯಾದಿದಾರರು ಸಹ ಸವಾರರಾಗಿ ಕುಳಿತುಕೊಂಡು ಉಳಾಯಿಬೆಟ್ಟು ಕಡೆಯಿಂದ ವಳಚ್ಚಿಲ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಸಮಯ ಸುಮಾರು ರಾತ್ರಿ 08:30 ಗಂಟೆಗೆ ವಳಚ್ಚಿಲ್ ಒಂದನೇ ಕ್ರಾಸ್ ಬಳಿ ತಲುಪಿದಾಗ ಮೋಟಾರ್ ಸೈಕಲನ್ನು ಅಶ್ಪಕ್ ಮಯ್ಯದಿ ರವರು ಒಮ್ಮೆಲೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿದ ಪರಿಣಾಮ ಮೋಟಾರ್ ಸೈಕಲ್ ಸ್ಕಿಡ್ ಆಗಿ ಪಿರ್ಯಾದಿದಾರರು ರಸ್ತೆಯ ಬಲ ಬದಿಗೆ ಬಿದ್ದು ಅವರ ಎಡ ಕೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಮತ್ತು ಸವಾರ ಅಶ್ಪಕ್ ಮಯ್ಯದಿ ರವರು ಎಡ ಬದಿಗೆ ಬಿದ್ದಿದ್ದು ಅವರಿಗೆ ಯಾವುದೇ ಗಾಯವಾಗಿರುವುದಿಲ್ಲ, ಹಾಗೂ ಮೋಟಾರ್ ಸೈಕಲ್ ರಸ್ತೆಯ ಬಲ ಬದಿಗೆ ಬಿದ್ದಿರುತ್ತದೆ ನಂತರ ಅಶ್ಪಕ್ ಮಯ್ಯದಿ ರವರು ಅಲ್ಲಿ ಸೇರಿದ ಜನರೊಂದಿಗೆ ಸೇರಿ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಆಟೋ ರಿಕ್ಷಾವೊಂದರಲ್ಲಿ ಹೈ-ಲ್ಯಾಂಡ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ, ಈ ಅಪಘಾತದ ಬಗ್ಗೆ ಪಿರ್ಯಾದಿದಾರರು ಅವರ ಮನೆಯವರಲ್ಲಿ ವಿಚಾರಿಸಿ ದೂರನ್ನು ನೀಡಲು ತಡವಾಗಿರುತ್ತದೆ, ಎಂಬಿತ್ಯಾದಿ.

Konaje PS

ಪಿರ್ಯಾದಿ Divakara K ತಮ್ಮ ಹರೀಶ ಮತ್ತು ತಮ್ಮನ ಹೆಂಡತಿ ಸಾವಿತ್ರಿ ಪ್ರಾಯ 28 ವರ್ಷ ರವರೊಂದಿಗೆ ವಾಸವಾಗಿದ್ದು, ಸಾವಿತ್ರಿಯು 7 ತಿಂಗಳ ಗರ್ಭಿಣಿಯಾಗಿದ್ದು, ಈ ದಿನ ದಿನಾಂಕ 24-04-2023 ರಂದು 17-30 ಗಂಟೆಗೆ  ಪಿರ್ಯಾದಿದಾರರ ಮನೆಯ ಬಳಿ  ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ  ಬಡಕ ಬೈಲು ಎಂಬಲ್ಲಿ ಫಾರೂಕ ರೆಂಜಾಡಿ ಎಂಬವರು ಯಾವುದೇ ಮುಂಜಾಗ್ರತಾ ಕ್ರಮವನ್ನು ಅನುಸರಿಸದೇ ಮಾನವನ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಬಾವಿಯ ಬಂಡೆ ಕಲ್ಲನ್ನು ಒಡೆಯುವ ಉದ್ದೇಶದಿಂದ ಯಾವುದೇ ಪರವಾನಿಗೆ ಪಡೆಯದೆ  ಸ್ಫೋಟಕವನ್ನು ಬಳಸಿ ಸಿಡಿಸಿದ ಪರಿಣಾಮ ಉಂಟಾದ ಭಾರಿ ಸ್ಪೋಟದ ಶಬ್ದದಿಂದ ಸಾವಿತ್ರಿಯವರು ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಬಗ್ಗೆ ಸಾವಿತ್ರಿಯವರನ್ನು ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬಿತ್ಯಾದಿ.

Mangalore South PS

 ದಿನಾಂಕ 24-03-2023 ರಂದು ಪಿರ್ಯಾದಿದಾರರಾದ ಸಿಸಿಬಿ ಘಟಕದ ಪಿಎಸ್ಐ ಸುದೀಪ್.ಎಂ.ವಿ ರವರು ತಮ್ಮ ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮಧ್ಯಾಹ್ನ ಸುಮಾರು 1-30 ಗಂಟೆಗೆ ಮಂಗಳೂರು ನಗರದ ಗೂಡಶೆಡ್ಡೆ ರಸ್ತೆಯ ನಿರೇಶಾಲ್ಯ ಜಂಕ್ಷನ್ ಬಳಿ  ಓರ್ವ ವ್ಯಕ್ತಿ ಮಾಧಕ ವಸ್ತು ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದಿದ್ದು, ಅದರಂತೆ ಪಿರ್ಯಾದಿದಾರರು ಸದ್ರಿ ಸ್ಥಳಕ್ಕೆ ಹೋದಾಗ ಆರೋಪಿ ಅಬ್ದುಲ್ ಘನಿ ಪ್ರಾಯ: 47 ವರ್ಷ,ವಾಸ: ರೆಹಮತ್ ಮಂಜಿಲ್, ಕುಪ್ಪೆ ಪದವು, ಕೆಲಿಂಜಾರು ಗ್ರಾಮ, ಮಂಗಳೂರು, ಹಾಲಿ ವಾಸ: ಫ್ಲಾಟ್ ನಂಬ್ರ: 107, ಸನಾ ಅಪಾರ್ಟಮೆಂಟ್, ಗ್ರೀನ್ ಗ್ರೌಂಡ್ ಬಳಿ, ದೇರಳಕಟ್ಟೆ, ಮಂಗಳೂರು ಎಂಬಾತನು ಅಮಲು ಪದಾರ್ಥ ಸೇವನೆ ಮಾಡಿದಂತೆ ಕಂಡು ಬಂದಿದ್ದು, ಆತನನ್ನು ವಶಕ್ಕೆ ಪಡೆದು ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಡಿಸಿದಾಗ ಆರೋಪಿ ಮಾಧಕ ವಸ್ತುವನ್ನು ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ.

Mangalore South PS

ಪಿರ್ಯಾದಿ ಶ್ರೀ ಉಮೇಶ್ ದೇವಾಡಿಗ ರವರು ಮಂಗಳೂರು ಸರ್ವೀಸ್ ಬಸ್ ನಿಲ್ದಾಣದಲ್ಲಿ  ದುರ್ಗಾಂಬ ಎಂಬ ಬಸ್ ಏಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 08-04-2023 ರಂದು ಸಂಜೆ 16-30 ಗಂಟೆ ಸುಮಾರಿಗೆ  ಮಂಗಳೂರು ನಗರದ ಸರ್ವೀಸ್ ಬಸ್ ನಿಲ್ದಾಣದಲ್ಲಿರುವ ಸಮಯ ಬಳ್ಳಾರಿ ಕಡೆ್ಗೆ ಸಂಚರಿಸುವ  ಕೃಷ್ಣಾ ಬಸ್ ನ ಚಾಲಕ ನಾಗರಾಜ ಎಂಬಾತನು, ಪಿರ್ಯಾದಿದಾರರ ಬಳಿಗೆ ಬಂದು ಬಸ್ ಟೈಮಿಂಗ್ಸ್ ವಿಚಾರವಾಗಿ ಮಾತನಾಡುತ್ತಿದ್ದ ಸಮಯ ಮಾತಿಗೆ ಮಾತು ಬೆಳೆದು, ಆರೋಪಿ ನಾಗರಾಜ ರವರು ಪಿರ್ಯಾದಿದಾರರನ್ನು ಕೈಯಿಂದ ದೂಡಿದ್ದು, ಅರ್ಜಿದಾರರು ಆಯ ತಪ್ಪಿ ಕೆಳಗಡೆ ಬಿದ್ದಿರುತ್ತಾರೆ, ಎಂಬಿತ್ಯಾದಿಯಾಗಿ  ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ, 

 

 

 

 

                                 

 

Last Updated: 21-08-2023 12:41 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Mangaluru City Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080