ಅಭಿಪ್ರಾಯ / ಸಲಹೆಗಳು

Crime Reported in CEN Crime PS

ದಿನಾಂಕ 23-05-2023 ರಂದು ಯಾರೋ ಅಪರಿಚಿತ ವ್ಯಕ್ತಿ 7580188539 ನೇದರಿಂದ ವಾಟ್ಸ ಆಪ್ ನಲ್ಲಿ ಆನ್ ಲೈನ್ ಪಾರ್ಟ್ ಟೈಮ್ ಹಣ ಗಳಿಸುವ ಕೆಲಸವಿರುವುದಾಗಿ ತಿಳಿಸಿ,ನಂತರ ಲಿಂಕ್ ಒಂದನ್ನು ಕಳುಹಿಸಿರುತ್ತಾರೆ,ಪಿರ್ಯಾದಿದಾರರು ಸದ್ರಿ ಲಿಂಕ್ ಕ್ಲಿಕ್ ಮಾಡಿದಾಗ ಟೆಲೆಗ್ರಾಂ ಸಂಪರ್ಕ ಹೊಂದಿರುತ್ತದೆ.ಸದ್ರಿ ಟೆಲೆಗ್ರಾಂ ಐ ಡಿ @Anne10200 ಆಗಿರುತ್ತದೆ.ಯಾರೋ ಅಪರಿಚಿತ ವ್ತಕ್ತಿ ಸದ್ರಿ ಟೆಲೆಗ್ರಾಂ ಮೂಲಕ ಆನ್ ಲೈನ್ ಟಾಸ್ಕ್ ನ ಬಗ್ಗೆ ತಿಳಿಸಿದಂತೆ ಪಿರ್ಯಾದಿದಾರರು ಸದ್ರಿ ಟಾಸ್ಕಗಳನ್ನು ಪೂರ್ಣಗೊಳಿಸಿದಾಗ ದಿನಾಂಕ 23-05-2023 ರಂದು ಹಂತ ಹಂತವಾಗಿ 650 ರೂ ಗಳನ್ನು  ಯುಪಿಐ ಮುಖಾಂತರ ಪಿರ್ಯಾದಿದಾರರ ಖಾತೆಗೆ  ಪಾವತಿಸಿರುತ್ತಾರೆ,ನಂತರ ಪಿರ್ಯಾದಿದಾರರು ಯುಪಿಐ ಮುಖಾಂತರ ಅವರಿಗೆ 2,000/-  ಪಾವತಿಸಿದಾಗ ಸದ್ರಿಯವರು ಮರಳಿ ಪಿರ್ಯಾದಿದಾರರಿಗೆ 2,800/-ರೂ ಗಳನ್ನು ಪಾವತಿಸಿರುತ್ತಾರೆ.ದಿನಾಂಕ 24-05-02023 ರಂದು ಮತ್ತೊಮ್ಮೆ ಟಾಸ್ಕ್ ಗಳನ್ನು ನೀಡಿದಾಗ ಪಿರ್ಯಾದಿದಾರರು ಪೂರ್ಣಗೊಳಿಸಿದ ಕಾರಣ ಯುಪಿಐ ಮುಖಾಂತರ ಪಿರ್ಯಾದಿದಾರರ ಖಾತೆಗೆ  300/- ರೂ ಪಾವತಿಸಿರುತ್ತಾರೆ,ನಂತರ ಬೇರೊಂದು ಟೆಲೆಗ್ರಾಂ ಐ ಡಿ @Gaurav_working456 ನೇದರಿಂದ ಪಿರ್ಯಾದಿದಾರರಿಗೆ ಮೇಸೆಜ್ ಮಾಡಿ ಇನ್ನೂ ಟಾಸ್ಕ್ ಗಳನ್ನು ಪೂರ್ಣಗೊಳಿಸಲು 5,000/- ಪಾವತಿಸಲು ತಿಳಿಸಿದಂತೆ ಪಿರ್ಯಾದಿದಾರರು ಸದ್ರಿ ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ಯುಪಿಐ ಮುಖಾಂತರ 5,000/- ರೂ ಗಳನ್ನು ಪಿರ್ಯಾದಿದಾರರ ಆಕ್ಸಿಸ್ ಬ್ಯಾಂಕ್ ಖಾತೆಯಿಂದ ಪಾವತಿಸಿರುತ್ತಾರೆ. ಆದರೆ ಪಿರ್ಯಾದಿದಾರರಿಗೆ ಯಾವುದೇ ಹಣ ಸಿಗಲಿಲ್ಲ,ಸದ್ರಿಯವರನ್ನು ಪಿರ್ಯಾದಿದಾರರು ವಿಚಾರಿಸಿದಾಗ ಎಲ್ಲಾ ಟಾಸ್ಕ್ ಗಳನ್ನು ಪೂರ್ಣಗೊಳಿಸಿದಾಗ ಹಣ ದೊರೆಯುತ್ತದೆ ಎಂದು ತಿಳಿಸಿದರು, ಪಿರ್ಯಾದಿದಾರರು ಸದ್ರಿ ಸಂಗತಿಯನ್ನು ಸತ್ಯವೆಂದು ನಂಬಿಕೊಂಡು ನಾನು ಅದರಂತೆ ದಿನಾಂಕ 24-05-2023 ರಂದು ಪಿರ್ಯಾದಿದಾರರ ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ- ನೇದರಿಂದ ಒಟ್ಟು 65,000/- ರೂಗಳನ್ನು ಯುಪಿಐ ಮುಖಾಂತರ ಪಾವತಿಸಿರುತ್ತಾರೆ. ಮುಂದುವರೆದು ಪಿರ್ಯಾದಿದಾರರ ಆಕ್ಸಿಸ್ ಬ್ಯಾಂಕ್ ಖಾತೆ ಸಂಖ್ಯೆ- ನೇದರಿಂದ ಐ ಎಂ ಪಿ ಎಸ್ ಮೂಲಕ ಅಪರಿಚಿತ ವ್ಯಕ್ತಿಯ ICICI BANK ACCOUNT NUMBER-043405500182 ನೇದಕ್ಕೆ 45,000/- ರೂ ಪಾವತಿಸಿರುತ್ತಾರೆ.ಆದರೆ ಪಿರ್ಯಾದಿದಾರರು ಎಲ್ಲಾ ಟಾಸ್ಕ್ ಗಳನ್ನು ಪೂರ್ಣಗೊಳಿಸಿದ ನಂತರವೂ ಯಾವುದೇ ಹಣ ವಾಪಸು ನೀಡಲಿಲ್ಲ.ಈ ರೀತಿಯಾಗಿ ಪಿರ್ಯಾದಿದಾರರಿಗೆ ಯಾರೋ ಅಪರಿಚಿತ ವ್ಯಕ್ತಿಯು ಆನ್ ಲೈನ್ ಪಾರ್ಟ್ ಟೈಮ್ ಹಣ ಗಳಿಸುವ ಕೆಲಸ ನೀಡುವುದಾಗಿ ನಂಬಿಸಿ ಒಟ್ಟು 1,15,000/- ರೂಗಳನ್ನು ಮೋಸದಿಂದ ವರ್ಗಾಯಿಸಿಕೊಂಡು ಆನ್ ಲೈನ್ ವಂಚನೆ ಮಾಡಿರುತ್ತಾರೆ ಎಂಬಿತ್ಯಾದಿ.

Kankanady Town PS

ಕಂಕನಾಡಿ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕಿರಾದ ಶ್ರೀಮತಿ ಜ್ಯೋತಿ ಎನ್ ಎ ರವರು ದಿನಾಂಕ 24-05-2023 ರಂದು ರಾತ್ರಿ 23-00 ಗಂಟೆಯಿಂದ ಠಾಣಾ ವ್ಯಾಪ್ತಿಯ ಪಂಪವೆಲ್, ನಾಗುರಿ, ಕಂಕನಾಡಿ ರೈಲ್ವೆ ಜಂಕ್ಷನ್ ಕಡೆಗಳಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ದಿನಾಂಕ 25-05-2023 ರ ಬೆಳಗ್ಗಿನ ಜಾವ 03:00 ಗಂಟೆಗೆ  ಪಡೀಲ್ ಓವರ್ ಬ್ರಿಡ್ಜ್ ಬಳಿ ಇದ್ದಾಗ ಫೈಸಲ್ ನಗರ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮವಾಗಿ ಸಾಮಾನ್ಯ ಮರಳನ್ನು ನದಿಯಿಂದ ತೆಗೆದು ಜೆಸಿಬಿ ಮುಖೇನ ಯಾವುದೋ ವಾಹನಗಳಿಗೆ ಲೋಡ್ ಮಾಡುವರೇ ತಯಾರು ನಡೆಸಿರುವ ಬಗ್ಗೆ ಮಾಹಿತಿ ಬಂದಂತೆ ಪಿರ್ಯಾದುದಾರರು ಚಾಲಕರೊಂದಿಗೆ ಫೈಸಲ್ ನಗರ ನದಿ ಕಿನಾರೆ ಬಳಿ ಸಮಯ ಬೆಳಗ್ಗಿನ ಜಾವ 03:20 ಗಂಟೆಗೆ  ಬಂದಾಗ ಸುಮಾರು 2 ಯುನಿಟ್ ನ 5 ಲೋಡ್ ಮರಳನ್ನು ದಾಸ್ತಾನು ಇರಿಸಿದ್ದು, ಹಾಗೂ ಸ್ಥಳದಲ್ಲಿ KA-21-N-3545 ನೇ ಜೆಸಿಬಿ ಇರುವುದು ಕಂಡು ಬಂದಿರುತ್ತದೆ. ಪಿರ್ಯಾದುದಾರರನ್ನು ಕಂಡು ಚಾಲಕನು ಜೆಸಿಬಿಯನ್ನು ಅಲ್ಲಿಯೇ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿರುತ್ತಾನೆ ಹಾಗೂ ನದಿ ಕಿನಾರೆಯಿಂದ ಸುಮಾರು 500 ಅಡಿ ದೂರದಲ್ಲಿ ಉತ್ತರಕ್ಕೆ ಖಾಲಿ ಜಾಗೆಯಲ್ಲಿ 2 ಯುನಿಟ್ ನ 5 ಲೋಡ್ ಮರಳನ್ನು ದಾಸ್ತಾನು ಇರಿಸಿದ್ದು ಕಂಡು ಬಂದಿದ್ದು. ಫೈಸಲ್ ನಗರದ ಬಳಿಯ ನೇತ್ರಾವತಿ ನದಿಯಿಂದ ಸಾರ್ವಜನಿಕ ಖನಿಜ ವಸ್ತುವಾದ ಮರಳನ್ನು ಅಧಿಕೃತ ಪರವಾನಿಗೆಯನ್ನು ಹೊಂದದೇ ರಾಜ್ಯ ಸರಕಾರಕ್ಕೆ ರಾಜಧನ ಪಾವತಿಸದೇ ಅಕ್ರಮವಾಗಿ ಯಾವುದೋ ವಾಹನದಲ್ಲಿ ತುಂಬಿಸಿಕೊಂಡು ಹೋಗಲು ಜೆಸಿಬಿಯನ್ನು ಬಳಸುತ್ತಿರುವುದರಿಂದ KA-21-N-3545 ನೇ ಜೆಸಿಬಿ ಹಾಗೂ ದಾಸ್ತಾನು ಇರಿಸಿದ 2 ಯುನಿಟ್ ನ ಸುಮಾರು ಒಟ್ಟು 10 ಲೋಡ್ ಮರಳನ್ನು ಸರಕಾರದ ವ್ಯಾಪ್ತಿಗೆ ಒಳಪಟ್ಟ ನೇತ್ರಾವತಿ ನದಿಯಿಂದ ಕಳವು ಮಾಡಿ ಸರಕಾರಕ್ಕೆ ನಷ್ಡ ಉಂಟು ಮಾಡಿರುವುದು ಕಂಡು ಬಂದಿರುತ್ತದೆ. ಸ್ವಾಧೀನಪಡಿಸಿಕೊಂಡ ಜೆಸಿಬಿ ಯ ಅಂದಾಜು ಮೌಲ್ಯ 300000/- ಹಾಗೂ ಮರಳಿನ ಅಂದಾಜು ಮೌಲ್ಯ 70000 ಒಟ್ಟು ರೂ 370000/- ಆಗಿರುತ್ತದೆ. ಬೆಳಗ್ಗಿನ ಜಾವ 03:20 ಗಂಟೆಯಿಂದ 04.30 ಗಂಟೆಯ ತನಕ ಸ್ಥಳದಲ್ಲಿ ಪಂಚರ ಸಮಕ್ಷಮ ತಕ್ಷೀರು ಸ್ಥಳ ಹಾಗೂ ಸೊತ್ತು ಸ್ವಾಧೀನತಾ ಮಹಜರನ್ನು ಜರುಗಿಸಿ ಠಾಣೆಗೆ ಬೆಳಗ್ಗಿನ ಜಾವ 05.15 ಗಂಟೆಗೆ ಬಂದು ಠಾಣೆಯಲ್ಲಿ ವರದಿಯನ್ನು ತಯಾರಿಸಿ 05.45 ಗಂಟೆಗೆ ಠಾಣಾ ರಾತ್ರಿ SHO ರವರಿಗೆ ವರದಿ ಮತ್ತು ಸೊತ್ತು ನೊಂದಿಗೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವರದಿ ನೀಡಿರುವುದಾಗಿ ಎಂಬಿತ್ಯಾದಿ.

 

 

Mangalore East PS

ಪಿರ್ಯಾದಿ Alban Fernandes ಶಿವ ದೀಪ ರೆಸಿಡೆನ್ಸಿ ಅಪಾರ್ಟ್ ಮೆಂಡಿನಲ್ಲಿ ಸುಮಾರು 15 ವರ್ಷಗಳಿಂದ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಾಗಿದ್ದು ಸದ್ರಿ ಅಪಾರ್ಟ್ ಮೆಂಟಿನ ಪ್ರಸೆಡೆಂಟ್ ಆಗಿರುತ್ತಾರೆ ಪಿರ್ಯಾದಿದಾರರ ಪ್ಲಾಟಿನಲ್ಲಿ ನೀರಿನ ಪಂಪ್ ಸೆಟ್ ರಿಪೇರಿಗೆಂದು ಪಂಪ್ ವೆಲ್ಲಿನ ಸಾಯಿ ಇಲೆಕ್ಟ್ರಿಕಲ್ಸ್ ಶ್ರೀ ಲೋಕೆಶ್ ಪೂಜಾರಿಯವರ ಮುಖಾಂತರ ಅವರ ಇಬ್ಬರು ಕೆಲಸಗಾರರಾದ ಶ್ರೀ ಜಯಂತ್ ಮತ್ತು ವೀಕ್ಷಣ್ ಎಂಬುವರು ದಿನಾಂಕ 14-03-2023 ರಿಂದ 16-03-2023 ರವರಗೆ ರಿಪೇರಿ ಕೆಲಸ ಮಾಡಿದ್ದು ಕೆಲಸ ಮುಗಿಸಿ ಹೋಗುವಾಗ ಪ್ಲಾಟಿನ ಕಟ್ಟಡದ ಒಳಗೆ ಲಿಪ್ಟಿನ ಎದುರು ಅಳವಡಿಸಿದ್ದ ಅಂದಾಜು 50 ಅಡಿ ಉದ್ದದ ಇಂಚಿನ ಸುಮಾರು 20,000/- ರೊಪಾಯಿ ಮೌಲ್ಯದ  ವಾಹಕದ ತಾಮ್ರದ ತಂತಿಯನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

Mangalore East PS

ಫಿರ್ಯಾದಿ Jacob Thomas ಬ್ಯಾಂಕ್ ಆಫ್ ಬರೋಡ ಅಳಕೆ ಶಾಖೆ ಮಂಗಳೂರು ಎಂಬಲ್ಲಿ ದಿನಾಂಕ:19-11-2022 ರಿಂದ ಶಾಖಾ ಪ್ರಭಂದಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಬ್ಯಾಂಕಿನ ಗ್ರಾಹಕರಾದ ಅಬ್ದುಲ್ ಸಮದ್ ಎಂಬವರು ಈ ಹಿಂದೆ ದಿನಾಂಕ: 01-08-2019 ರಂದು ನಮ್ಮ ಬ್ಯಾಂಕಿನಲ್ಲಿ ಅವರ ಚಿನ್ನದ ಆಭರಣ ಒಟ್ಟು 386.50 ಗ್ರಾಂ ಚಿನ್ನವನ್ನು ಅಡವಿಟ್ಟು, ಚಿನ್ನಾಭರಣಗಳ 2 ಸಾಲ ಪಡೆದಿರುತ್ತಾರೆ. ಆ ಸಮಯದಲ್ಲಿ ನಮ್ಮ ಶಾಖೆಯಲ್ಲಿ ಆಫೀಸರಾದ ಶ್ರೀಮತಿ ಓವಿಯ ಎನ್ ರವರು ಕಾರ್ಯನಿರ್ವಹಿಸುತ್ತಿದ್ದರು.  ಸಾಲ ಪಡೆದಿದ್ದ ಅಬ್ದುಲ್ ಸಮದ್ ರವರು ಗಲ್ಫ್ ದೇಶದಲ್ಲಿ ನೆಲೆಸಿದ್ದರಿಂದ ಪಿರ್ಯಾದಿದಾರರ ಬ್ಯಾಂಕಿನಲ್ಲಿ ಎರಡು ಸಲ ಸಾಲ ಪಡೆದಿದ್ದ (14-10-2020 ಹಾಗೂ 06-05-2021) ಹಣವನ್ನು ಬ್ಯಾಂಕಿಗೆ ಮರುಪಾವತಿ ಮಾಡಿರುತ್ತಾರೆ. ಆದರೆ ಕೋವಿಡ್ ನಿರ್ಭಂದದಿಂದ ಅವರಿಗೆ ಮಂಗಳೂರಿಗೆ ಬರಲು ಸಾಧ್ಯವಾಗದ ಕಾರಣ ಇತ್ತೀಚೆಗೆ ದಿನಾಂಕ: 17-04-2023 ರಂದು ಬ್ಯಾಂಕಿಗೆ ಚಿನ್ನವನ್ನು ಬಿಡಿಸಲು ಬಂದಾಗ ಬ್ಯಾಂಕಿನ ಚಿನ್ನಾಭರಣ ಇಟ್ಟಿದ್ದ ಲಾಕರ್ ನಲ್ಲಿ ಚಿನ್ನಾಭರಣಗಳು ಇರಲಿಲ್ಲ. ಈ ಬಗ್ಗೆ ಬ್ಯಾಂಕಿನಲ್ಲಿ ದಿನಾಂಕ:01-08-2019 ರಿಂದ ಇಲ್ಲಿಯವರೆಗೆ ಕೆಲಸ ನಿರ್ವಹಿಸಿದ ಎಲ್ಲರ ಬಗ್ಗೆ ವಿಚಾರಣೆ ಮಾಡಿದ್ದು, ಈ ಮೊದಲು ಕೆಲಸ ನಿರ್ವಹಿಸಿದ ಅಧಿಕಾರಿ ಶ್ರೀಮತಿ ಓವಿಯ ಎನ್ ರವರು ತಮ್ಮ ಕುಟುಂಬದವರಾದ ಗಂಡ ಮರಿಯ ಬಿನೋತ್, ಸಹೋದರಿ ಅಕ್ಷಯ್, ತಾಯಿ ರಾಜೇಶ್ವರಿರವರೊಂದಿಗೆ ಸೇರಿಕೊಂಡು ಬ್ಯಾಂಕಿನಲ್ಲಿ ಅಡಮಾನವಿರಿಸಿದ ಅಬ್ದುಲ್ ಸಮದ್ ರವರ ಹಾಗೂ ಇರ್ಷಾದ್ ಬಿ ಎಂಬವರ ಚಿನ್ನವನ್ನು ಬ್ಯಾಂಕಿಗೆ ಮೋಸ ಮತ್ತು ವಂಚನೆ ಮಾಡಿ ಅಂದಾಜು ಮೌಲ್ಯ ಸುಮಾರು ರೂ. 29,25,403/- ವನ್ನು ಸ್ವಂತಕ್ಕಾಗಿ ಉಪಯೋಗಕ್ಕಾಗಿ ಚೆನ್ನೈನ ಬ್ಯಾಂಕ್ ಆಫ್ ಬರೋಡ, ಪುರುಷವಾಖಂ ಮತ್ತು ಚೆನ್ನೈನ ಬ್ಯಾಂಕ್ ಆಫ್ ಬರೋಡ, ತಿಂಡಿವಣಂ ಶಾಖೆಗಳಲ್ಲಿ ಅಡವಿಟ್ಟಿರುವುದರಿಂದ ಇವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

CEN Crime PS

ದಿನಾಂಕ 24-05-2023 ಸಮಯ 10:38 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ನಂಬ್ರ: ನೇದಕ್ಕೆ ಮೊಬೈಲ್ ನಂಬ್ರ: +919679425437 ನೇದರಿಂದ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ಬ್ಲಾಕ್ ಆಗಿರುವುದಾಗಿಯೂ ಕೆವೈಸಿ ಅಪ್ ಡೇಟ್ ಮಾಡಬೇಕೆಂದು ಎಂಬುದಾಗಿ ಸಂದೇಶ ಬಂದಿರುತ್ತದೆ. ನಂತರ ದಿನಾಂಕ 24-05-2023 ಪಿರ್ಯಾದಿದಾರರ ಮೊಬೈಲ್ ನಂಬ್ರಗೆ +919679425437  ನಂಬ್ರನಿಂದ ಕರೆ ಬಂದಿದ್ದು ಕರೆ ಮಾಡಿದ ವ್ಯಕ್ತಿಯು ನಾನು ಕೆನರಾ ಬ್ಯಾಂಕ ಕೆವೈಸಿ ಅಪ್ ಡೇಟ್ ಮಾಡುವ ಅಧಿಕಾರಿ ಎಂದು ತಿಳಿಸಿ ನಂತರ ಫಿರ್ಯಾದಿದಾರರ ಕೆನರಾ ಬ್ಯಾಂಕ್  ಕಸ್ಟಮರ್ ಐಡಿ ನೀಡುವಂತೆ ತಿಳಿಸಿದ್ದು ಅದರಂತೆ ಕಸ್ಟಮರ್ ಐಡಿ ಆ ವ್ಯಕ್ತಿಗೆ ತಿಳಿಸಿದ್ದು ನಂತರ ವ್ಯಕ್ತಿಯು ಫಿರ್ಯಾದಿದಾರರಿಗೆ ನಿಮ್ಮ ಕೆನರಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಂಬ್ರ ಮತ್ತು ಡೆಬಿಟ್ ಕಾರ್ಡ್ ನಂಬ್ರ ನೀಡುವಂತೆ ತಿಳಿಸಿ ನಂತರ ಆ ವ್ಯಕ್ತಿಯು ಫಿರ್ಯಾದಿದಾರರಿಗೆ ಮೊಬೈಲ್ ಗೆ ಸ್ವೀಕೃತವಾದ ಒಟಿಪಿ ಯನ್ನು ಶೇರ್ ಮಾಡುವಂತೆ ತಿಳಿಸಿದಂತೆ ಪಿರ್ಯಾದಿದಾರರು ಆ ಒಟಿಪಿ ಯನ್ನು ಆ ವ್ಯಕ್ತಿಗೆ ತಿಳಿಸಿರುತ್ತಾರೆ. ಪಿರ್ಯಾದಿದಾರರು ಒಟಿಪಿ ನೀಡಿದ ಕೂಡಲೇ ಪಿರ್ಯಾದಿದಾರರ ಕೆನರಾ ಬ್ಯಾಂಕ್ ಖಾತೆ ನಂಬ್ರ: ನೇದರಿಂದ ಹಂತ ಹಂತವಾಗಿ ಒಟ್ಟು ರೂಪಾಯಿ 310,000/- ಹಣವನ್ನು ಅನಧಿಕೃತವಾಗಿ ವರ್ಗಾವಣೆಯಾಗಿರುತ್ತದೆ. ಅಪರಿಚಿತ ವ್ಯಕ್ತಿಯ ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಒಟಿಪಿ ಯನ್ನು ಪಡೆದುಕೊಂಡು  ಪಿರ್ಯಾದಿದಾರರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.

Mangalore South PS

ಪಿರ್ಯಾದಿ RIPAN NAMA ಸುಮಾರು 02 ತಿಂಗಳ ಹಿಂದೆ ತ್ರಿಪುರ ರಾಜ್ಯದಿಂದ ಹೆಂಡತಿ ಸುಮಿತಾ ರಾಣಿ ಸರ್ಕಾರ್ ಪ್ರಾಯ 23 ವರ್ಷ ಹಾಗೂ ಮಗಳು ರಿಯಾ ನಾಮ ಪ್ರಾಯ 6 ವರ್ಷ ರವರೊಂದಿಗೆ ಮಂಗಳೂರಿಗೆ ಬಂದು ಸಂಸಾರದೊಂದಿಗೆ ವಾಸವಾಗಿದ್ದು, ಸದ್ರಿಯವರು ಸೆಂಟ್ರಿಂಗ್  ಕೆಲಸ ಮಾಡಿಕೊಂಡಿರುವುದಾಗಿದೆ. ರ್ಪಿರ್ಯಾದಿದಾರರು ನಿನ್ನೆ ದಿನಾಂಕ:23.05.2023 ರಂದು ಸೆಂಟ್ರಿಂಗ್ ಕೆಲಸಕ್ಕೆ ಹೋಗಿ ಮಧ್ಯಾಹ್ನ ಸುಮಾರು 12.00 ಗಂಟೆಗೆ ಮನೆಗೆ ಬಂದಾಗ ಮನೆಯಲ್ಲಿ ಹೆಂಡತಿ ಸುಮಿತಾ ರಾಣಿ ಸರ್ಕಾರ್ ಮತ್ತು ಮಗಳು ರಿಯಾ ನಾಮ ಇಲ್ಲದೇ ಇದ್ದು, ಪಿರ್ಯಾದಿದಾರರು ಹೆಂಡತಿ ಸುಮಿತಾ ರಾಣಿಯ ಮೊಬೈಲ್ ನಂಬ್ರ  ನೇದಕ್ಕೆ ಕರೆಮಾಡಿದಾಗ ಸ್ವಿಚ್ ಆಪ್ ಬರುತ್ತಿದ್ದು, ಆದ್ದರಿಂದ ಕಾಣೆಯಾದ ಹೆಂಡತಿ, ಮಗುವನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಎಂಬಿತ್ಯಾದಿ.

Mangalore South PS

ಪಿರ್ಯಾದಿ SHEIKH  MOHAMMED SHAMSHIR ಸುಮಾರು 01 ವರ್ಷದಿಂದ ಸಂಸಾರದೊಂದಿಗೆ ವಾಸವಾಗಿದ್ದು, ಹಂಪನಕಟ್ಟೆ ಬಾಂಬೆ ಲಕ್ಕಿ ಹೊಟೇಲ್ ನಲ್ಲಿ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರು 09 ವರ್ಷಗಳ ಹಿಂದೆ ಕಾರ್ಕಳದ ನೂರ್ ಮಹ್ಮದ್ ಎಂಬುವರ ಮಗಳು ಮರಿಯಮ್ ಸನಾ ಎಂಬುವರನ್ನು ಮದುವೆಯಾಗಿದ್ದು ಸದ್ರಿಯವರಿಗೆ 02 ಹೆಣ್ಣು ಮಕ್ಕಳು 01 ಗಂಡು ಇರುವುದಾಗಿದ್ದು ಗಂಡ ಹೆಂಡತಿ ಅನ್ಯೋನ್ಯವಾಗಿರುತ್ತಾರೆ. ದಿನಾಂಕ:19.05.2023 ರಂದು ಪಿರ್ಯಾದಿದಾರರು ಮನೆಯಲ್ಲಿ ಮಲಗಿಕೊಂಡಿದ್ದವರು ಬೆಳಿಗ್ಗೆ 09:30 ಗಂಟೆಗೆ ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ ಅವರ ಹೆಂಡತಿ ಮರಿಯಮ್ ಸನಾ(29) ಳು ಮನೆಯಲ್ಲಿ ಇಲ್ಲದೇ ಇದ್ದು, ಪಿರ್ಯಾದಿಯು ಸುತ್ತಮುತ್ತ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ, ನಂತರ ಅಪಾರ್ಟ್ ಮೆಂಟ್ ಪಕ್ಕದ ರತ್ನಾ ಜುವೇಲರಿ ಶಾಪ್ ನ ಸಿಸಿಟಿವಿ ಪೂಟೇಜ್ ನೋಡಿದಾಗ ಹೆಂಡತಿ ಮರಿಯಮ್ ಸನಾಳು ಒಬ್ಬಳೇ ಬ್ಯಾಗ್ ಹಿಡಿದುಕೊಂಡು ಮಧ್ಯ ರಾತ್ರಿ 03.12 ಕ್ಕೆ ರಸ್ತೆಯಲ್ಲಿ ನಡೆದುಕೊಂಡು ಹೋಗಿರುವುದು ಕಂಡುಬಂದಿರುತ್ತದೆ. ಮನೆಯಿಂದ ಹೋಗುವಾಗ ಸುಮಾರು 10 ಪವನ್ ಚಿನ್ನಾಭರಣಗಳನ್ನು ಹಾಗೂ ಬಟ್ಟೆಬರೆಗಳನ್ನು ತೆಗೆದುಕೊಂಡು ಹೋಗಿರುತ್ತಾಳೆ. ಬಳಿಕ ಹೆಂಡತಿಯ ತಾಯಿ ಮನೆಗೆ ಹಾಗೂ ಮಂಗಳೂರಿನಲ್ಲಿರುವ ಸಂಬಂಧಿಕರಲ್ಲಿ ವಿಚಾರಿಸಿಕೊಂಡು ಹುಡಕಾಡಲಾಗಿ ಹೆಂಡತಿ ಮರಿಯಮ್ ಸನಾಳು ಪತ್ತೆಯಾಗದೇ ಇರುವುದರಿಂದ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 01:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080