ಅಭಿಪ್ರಾಯ / ಸಲಹೆಗಳು

Crime Reported in :    Mangalore East Traffic PS                      

ದಿನಾಂಕ 23-08-2022 ರಂದು ಪ್ರಕರಣದ ಪಿರ್ಯಾದಿದಾರರಾದ ಶ್ರೀಮತಿ ಉಮಾ ಬಿ ವಿ ರವರು KA-19-EX-0631 ನೇ ನೋಂದಣಿ ನಂಬ್ರದ ಸ್ಕೂಟರನಲ್ಲಿ ಸವಾರಳಾಗಿ ತನ್ನ ಹಿಂಬದಿ ಸಹ ಸವಾರನಾಗಿ ತನ್ನ ಮಗ ಧನುಷ್ ಎಲ್ ರವರನ್ನು ಕುಳ್ಳಿರಿಸಿಕೊಂಡು ಮೇರಿಹಿಲ್ ಕಡೆಯಿಂದ ಕೆ ಪಿ ಟಿ ಕಡೆಗೆ ಹಾದು ಹೋಗಿರುವ ಸಾರ್ವಜನಿಕ ಕಾಂಕ್ರಿಟ್ ರಸ್ತೆಯಲ್ಲಿ ಸ್ಕೂಟರ್ ನ್ನು ಸವಾರಿ ಮಾಡುತ್ತಾ ಸಂಜೆ ಸಮಯ ಸುಮಾರು 4:00 ಗಂಟೆಗೆ ಯೆಯ್ಯಾಡಿ ಜಂಕ್ಷನ್ ಬಳಿ ತೆರೆದ ಡಿವೈಡರ್ ಹತ್ತಿರ ತಲಪುತ್ತಿದಂತೆ, ಒಂದು ಕಾರನ್ನು ಅದರ ಚಾಲಕ ಧೀರಜ್ ಎಂಬಾತನು ತೆರೆದ ಡಿವೈಡರ್ ಬಳಿ  ಬಲಕ್ಕೆ  ಶಕ್ತಿನಗರ ಕಡೆ ಹಾದು ಹೋಗಿರುವ ರಸ್ತೆ ಕಡೆಗೆ ಹೋಗಲು ದುಡುಕುತನದಿಂದ ಹಾಗೂ ಅಜಾಗರೂಕತೆಯಿಂದ ಅಪಾಯಕಾರಿಯಾದ ರೀತಿಯಲ್ಲಿ ಒಮ್ಮೇಲೆ ಬಲಕ್ಕೆ ತಿರುಗಿಸಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಬಲ ಮುಂಭಾಗಕ್ಕೆ ಡಿಕ್ಕಿ ಪಡಿಸಿ ಮುಂದಕ್ಕೆ ಎಳೆದುಕೊಂಡು ಹೋಗಿದ್ದು ಡಿಕ್ಕಿಯ ವೇಳೆ ಪಿರ್ಯಾದಿದಾರರ ಬಲ ಕಾಲು ಸ್ಕೂಟರ್ ಮತ್ತು ಕಾರಿನ ಮಧ್ಯದಲ್ಲಿ ಸಿಲುಕಿಕೊಂಡಿದ್ದು ಪಿರ್ಯಾದಿದಾರರು ಮತ್ತು ಹಿಂಬದಿ ಸಹ ಸವಾರ ವಾಹನ ಸಮೇತ ರಸ್ತೆ ಮೇಲೆ ಬಿದ್ದಿರುತ್ತಾರೆ. ಬಳಿಕ ಅಪಘಾತ ನಡೆದ ಸ್ಥಳದಲ್ಲಿ ನೆರೆದ ಸಾರ್ವಜನಿಕರ ಸಹಾಯದಿಂದ ತನ್ನ ಮಗ ಧನುಷ್  ಎಲ್ ನೊಂದಿಗೆ ಆಟೋ ರಿಕ್ಷಾವೋಂದರಲ್ಲಿ ಚಿಕಿತ್ಸೆ ಬಗ್ಗೆ ಎ.ಜೆ ಆಸ್ಪತ್ರೆಗೆ ಬಂದಿದ್ದು, ಪರಿಶೀಲಿಸಿದ ವೈದ್ಯರು   ಪಿರ್ಯಾದಿದಾರರಿಗೆ ಬಲ ಕಾಲಿನ ಕೋಲು ಕಾಲಿಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಮತ್ತು  ಎಡ ಭುಜಕ್ಕೆ  ಮೂಳೆ ಜೋಡಣೆ ಬಿಟ್ಟಿರುವ ಗಂಭೀರ ಸ್ವರೂಪದ ಗಾಯಗಳು ಉಂಟಾಗಿರುವುದಾಗಿ ತಿಳಿಸಿದಂತೆ, ಶಸ್ತ್ರ ಚಿಕಿತ್ಸೆಗೆ ಒಳಪಟ್ಟು ಒಳ ರೋಗಿಯಾಗಿ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ ಹಾಗೂ ಸಹ ಸವಾರ ಧನುಷ್ ಎಲ್ ರವರಿಗೆ ಸಾಮಾನ್ಯ ಸ್ವರೂಪದ ಗಾಯವಾಗಿದ್ದು  ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ ಎಂಬಿತ್ಯಾದಿ.

 

Crime Reported in : Mangalore Rural PS                                   

ಪಿರ್ಯಾದಿ Abdul Rehaman S ದಾರರು ದಿನಾಂಕ: 22-08-2022 ರಂದು ತನ್ನ ಅಕ್ಕ ಶ್ರೀಮತಿ ಅಲಿಮಾರವರ ಮಗ ಹಸೈನಾರ್ ರವರ ಮಗ ಮಿಜಾಲ್ ಅಹಮ್ಮದ್ ಎಂಬಾತನಿಗೆ ವಳಚ್ಚಿಲ್ ಪದವಿನ ಶ್ರೀನಿವಾಸ ಕಾಲೇಜಿನ ಬಳಿಯಿರುವ ಬಸ್ಸು ನಿಲ್ದಾಣದ ಮುಂಭಾಗದಲ್ಲಿ ಕೌಶಿಕ್ ನಿಹಾಲ್ ಮತ್ತು ಅಲ್ತಾಫ್ ಹುಸೇನ್ ರವರು ಹಲ್ಲೆ ನಡೆಸಿದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಘಟನಾ ಸ್ಥಳದ ಮಹಜರು ತಯಾರಿಸುವ ಬಗ್ಗೆ ದಿನಾಂಕ: 24-08-2022 ರಂದು ಪಿರ್ಯಾದಿದಾರರು ತನ್ನ ಬಾವ ಹಸೈನಾರ್ ಹಾಗೂ ಬಾವನ ಮಗ ಮಿಜಾಲ್ ಅಹಮ್ಮದ್ ಆತನ ಗೆಳೆಯರಾದ ಮೊಹಮ್ಮದ್ ನವಾಲ್, ಮೊಹಮ್ಮದ್ ಸಿನಾನ್, ಮೊಯಿದ್ದೀನ್ ಅಫ್ಜಲ್ ಹಾಗೂ ಹಝರತ್ ಹುಸೇನ್ ರವರೊಂದಿಗೆ ಪೊಲೀಸರಿಗಾಗಿ ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ವಳಚ್ಚಿಲ್ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿರುವಾಗ ಅಲ್ಲಿದ್ದ ಬಸ್ಸು ನಿಲ್ದಾಣದ ಬಳಿಯಿರುವ ಅಂಗಡಿಯೊಂದರಲ್ಲಿದ್ದ ಕೌಶಿಕ್ ನಿಹಾಲ್ ಮತ್ತು ಅಲ್ತಾಫ್ ಹುಸೇನ್ ರವರು ಬಸ್ಸು ನಿಲ್ದಾಣದಲ್ಲಿ ಕುಳಿತ್ತಿದ್ದ ಪಿರ್ಯಾದಿದಾರರು ಮತ್ತು ಅವರ ಬಾವ ಹಸೈನಾರ್ ರವರನ್ನು ನೋಡಿ ಅಲ್ಲಿಂದ ಆರೋಪಿಗಳ ಪೈಕಿ ಕೌಶಿಕ್ ನಿಹಾಲ್ ನು ಅಲ್ಲಿಯೇ ನಿಂತಿದ್ದ ಕೆಎ-19-ಎಂಎ-4667 ನಂಬ್ರದ ಕಾರಿನಲ್ಲಿದ್ದ ಸೋಡಾ ಬಾಟಲಿಯನ್ನು ತೆಗೆದುಕೊಂಡು ಬರುವಾಗ ಆತನ ಜೊತೆಗಿದ್ದ ಅಲ್ತಾಫ್ ಹುಸೇನನು ಅಲ್ಲಿದ್ದ ಅಂಗಡಿಯ ಬಳಿಯಿಟ್ಟಿದ್ದ ಸೋಡಾ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಅವರಿಬ್ಬರ ಪೈಕಿ ಕೌಶಿಕ್ ನಿಹಾಲ್ ನು ಪಿರ್ಯಾದಿದಾರರ ತಲೆಗೆ ಸೋಡಾ ಬಾಟಲಿಯಿಂದ ಬಲವಾಗಿ ಹೊಡೆದಾಗ ಒಡೆದು ಹೋದ ಸೋಡಾ ಬಾಟಲಿಯ ತುಂಡಿನಿಂದ ಪಿರ್ಯಾದಿದಾರರ ಎದೆಗೆ ಚುಚ್ಚಲು  ಬರುವಾಗ ಪಿರ್ಯಾದಿದಾರರು ಹಿಂದಕ್ಕೆ ಸರಿದು ತಪ್ಪಿಸಿಕೊಂಡಿದ್ದು, ಅದೇ ಹೊತ್ತಿಗೆ ಅಲ್ತಾಫ್ ಹುಸೇನನು ಪಿರ್ಯಾದಿದಾರರ ಬಾವ ಹಸೈನಾರ್ ರವರ ತಲೆಗೆ ತನ್ನ ಕೈಯಲ್ಲಿದ್ದ ಸೋಡಾ ಬಾಟಲಿಯಿಂದ ಹೊಡೆದಾಗ ಒಡೆದ ಸೋಡಾ ಬಾಟಲಿಯ ತುಂಡಿನಿಂದ ಹಸೈನಾರ್ ರವರ ಹೊಟ್ಟೆಗೆ ಚುಚ್ಚಲು ಮುಂದಾದಾಗ ಹಸೈನಾರ್ ರವರು ತನ್ನ ಬಲಕೈಯನ್ನು ಅಡ್ಡ ಹಿಡಿದ ಕಾರಣ ಹಸೈನಾರ್ ರವರ ತಲೆಗೆ ಮತ್ತು ಬಲಕೈಯ ರಿಸ್ಟ್ ಬಳಿ ರಕ್ತ ಗಾಯವಾಗಿದ್ದು, ಪಿರ್ಯಾದಿದಾರರ ತಲೆಗೆ ರಕ್ತಗಾಯವಾಗಿದ್ದು, ಆ ಸಮಯ ಪಿರ್ಯಾದಿದಾರರು ಮತ್ತು ಅವರ ಬಾವ ಜೋರಾಗಿ ಬೊಬ್ಬೆ ಹೊಡೆದಾಗ ಅಲ್ಲಿಗೆ ಇತರರು ಬರುವುದನ್ನು ನೋಡಿದ ಆರೋಪಿಗಳು ಅಲ್ಲಿಂದ ಓಡಿ ಹೋಗುವ ಸಮಯ ಕೌಶಿಕ್ ನಿಹಾಲ್ ಮತ್ತು ಆತನ ತಂದೆ ಅಬ್ದುಲ್ ಖಾದರ್ ರವರು ಪಿರ್ಯಾದಿದಾರರು ಮತ್ತು ಅವರ ಬಾವನನ್ನುದ್ಧೇಶಿಸಿ ಬೇವರ್ಸಿ ಸೂಳೆ ಮಕ್ಕಳೇ ನಮ್ಮ ಮೇಲೆ ಕೇಸ್ ಕೊಡಲು ಮುಂದಕ್ಕೆ ನೀವು ಜೀವಂತ ಇರುವುದಿಲ್ಲ, ನಾಯಿಗಳೇ ಎಂದು ಜೀವ ಬೆದರಿಕೆ ಒಡ್ಡಿ ಇಬ್ಬರೂ ತಾವು ಬಂದಿದ್ದ ಕೆಎ-19-ಎಂಎ-4667 ನಂಬ್ರದ ಕಾರಿನಲ್ಲಿ ಹೋಗಿದ್ದು, ಇನ್ನೋರ್ವ ಆರೋಪಿ ಅಲ್ತಾಫ್ ಹುಸೇನನು ತಾನು ಬಂದಿದ್ದ ಕೆಎ-70-ಇ-8697 ನಂಬ್ರದ ಸ್ಕೂಟರಿನಲ್ಲಿ ಘಟನಾ ಸ್ಥಳದಿಂದ ಹೋಗಿದ್ದು, ಆರೋಪಿಗಳು ಪಿರ್ಯಾದಿದಾರರನ್ನು ಮತ್ತು ಅವರ ಬಾವನನ್ನು ಕೊಲೆ ಮಾಡುವ ಏಕೈಕ ಉದ್ಧೇಶದಿಂದ ಅವರ ತಲೆಗೆ ಸೋಡಾ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಗಾಯಗೊಂಡ ಪಿರ್ಯಾದಿದಾರರು ಮತ್ತು ಅವರ ಬಾವ ಹಸೈನಾರ್ ರವರು ಬಂಟ್ವಾಳ ತಾಲೂಕಿನ ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಎಂಬಿತ್ಯಾದಿ

 

Crime Reported in : Traffic South Police Station       

ದಿನಾಂಕ   24-08-2022 ರಂದು   ಪಿರ್ಯಾದಿ PAVANRAJ ACHARYA ದಾರ ತಂದೆಯವರಾದ ಶ್ರೀನಿವಾಸ ಆಚಾರ್ಯರವರು ಕೆಲಸ ಮುಗಿಸಿಕೊಂಡು ಸಂಕೋಳಿಗೆ ಎಂಬಲ್ಲಿ ಅಂಗಡಿಯೊಂದಕ್ಕೆ ಹೋಗಿ ಸಾಮಾಗ್ರಿಗಳನ್ನು ಖರಿದಿಸಿಕೊಂಡು ವಾಪಾಸ್ಸು ಮನಗೆ ಹೋಗಲು ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹಾದು ಹೋಗಿರುವ ರಾ.ಹೆ. 66 ರ ಡಾಮಾರು ರಸ್ತೆಯನ್ನು ದಾಟುತ್ತಿರುವಾಗ ಸಮಯ ಸುಮಾರು ರಾತ್ರಿ 8.05 ಗಂಟೆಗೆ ಮಂಗಳೂರು ಕಡೆಯಿಂದ ತಲಪಾಡಿ ಕಡೆಗೆ ಹೋಗುತ್ತಿದ್ದ ಕಾರು ನಂಬ್ರ KA-19-MH-5435  ನೇದರ ಚಾಲಕ ಕಾರನ್ನು ದುಡುಕುತನ ಹಾಗೂ   ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಹೋಗಿ ರಸ್ತೆ ದಾಟುತ್ತಿದ್ದ   ಪಿರ್ಯಾದಿದಾರರ ತಂದೆಯವರಿಗೆ ಡಿಕ್ಕಿ ಪಡಿಸಿ ನಂತರ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಲಾರಿ ನಂಬ್ರ TN-45-BT-9156 ನೇದಕ್ಕೆ ಡಿಕ್ಕಿ ಪಡಿಸಿರುತ್ತಾರೆ  ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ತಂದೆಯವರು ಡಾಮಾರು ರಸ್ತಗೆ  ಎಸೆಯಲ್ಪಟ್ಟು ತಲಪಾಡಿ ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗಿರುವ ರಾ.ಹೆ. 66 ರಸ್ತೆಗೆ ಬಿದ್ದು ಅವರ ತಲೆಗೆ ಗುದ್ದಿದ್ದ ಗಂಭೀರ ಸ್ವರೂಪದ ರಕ್ತ ಗಾಯ ಹಾಗೂ ಮುಖಕ್ಕೆ  ಹಾಗೂ ಕೈಕಾಲು ಗಳಿಗೆ ಗುದ್ದಿದ್ದ ರಕ್ತಗಾಯವಾಗಿದ್ದು ಕೂಡಲೆ ಅಲ್ಲಿ ಸೇರಿದ ಸಾರ್ವಜನಿಕರು ಹಾಗೂ ಪಿರ್ಯಾದಿದಾರರು ಸೇರಿ ಆ್ಯಂಬುಲೇನ್ಸ್ ಒಂದರಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು ವೈದ್ಯರು ಪರಿಕ್ಷೀಸಿ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿರುತವುದಾಗಿ ತಿಳಿಸಿರುತ್ತಾರೆ  ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 25-08-2022 03:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080