ಅಭಿಪ್ರಾಯ / ಸಲಹೆಗಳು

Crime Report in Mangalore West Traffic PS               

ದಿನಾಂಕ: 24-08-2023 ರಂದು ಪಿರ್ಯಾದು JANET D SOUZA ದಾರರು ತನ್ನ ಮನೆಯಿಂದ ಥೈರಾಯಿಡ್ ಚಿಕಿತ್ಸೆಯ ಸಲುವಾಗಿ ಕುಂಟಿಕಾನ ಎ.ಜೆ ಆಸ್ಪತ್ರೆಗೆ ತನ್ನ ಗಂಡನವರ ಬಾಬ್ತು KA-19-EA-9110 ನೇ ನೊಂದಣೆ ಸಂಖ್ಯೆಯ ಮೋಟಾರು ಸೈಕಲ್ ನಲ್ಲಿ ಹಿಂಬದಿ ಸವಾರಳಾನ್ನಾಗಿ ಕುಳ್ಳಿರಿಸಿಕೊಂಡು ಮೋಟಾರು ಸೈಕಲ್ ನ್ನು ಚಲಾಯಿಸಿಕೊಂಡು ಭಗತ್ ಸಿಂಗ್ ರಸ್ತೆ ಅಶೋಕನಗರದ ಬಳಿ ಸಮಯ ಸುಮಾರು ಮದ್ಯಾಹ್ನ 03-15  ಗಂಟೆಗೆ ತಲುಪುತ್ತಿದ್ದಂತೆ ರಸ್ತೆಯ ಬದಿ ನಿಲ್ಲಿಸಿದ್ದ KA-19-D-8882 ನೇ ಆಟೋ ರಿಕ್ಷಾವನ್ನು ಅದರ ಚಾಲಕನು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಏಕಾಏಕಿಯಾಗಿ ಬಲ ಬದಿಗೆ ತಿರುಗಿಸಿದ ಪರಿಣಾಮ ಪಿರ್ಯಾದುದಾರರ ಗಂಡ ಚಲಾಯಿಸುತ್ತಿದ್ದ ಮೋಟಾರು ಸೈಕಲ್ ನ ನಿಯಂತ್ರಣ ತಪ್ಪಿ ಆಟೋ ರಿಕ್ಷಾದ ಎಡ ಭಾಗದ ಬಂಪರ್  ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ರಸ್ತೆ ಬದಿಯ ಚರಂಡಿಗೆ ಬಿದ್ದು ಪಿರ್ಯಾದಿದಾರರ ಎಡ ಭುಜ ತಲೆಯ ಹಿಂಭಾಗ ಎರಡು ಕಾಲಿನ ಮಣಿಗಂಟಿಗೆ ಹಾಗೂ ಅವರ ಗಂಡನ ಬಲಕೈ ತಲೆ ಹಾಗೂ ಕಾಲಿಗೆ ಗಾಯವಾಗಿರುತ್ತದೆ. ಪಿರ್ಯಾದಿದಾರರ ಗಂಡನಿಗೆ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಎಂಬಿತ್ಯಾದಿ

Traffic South Police Station      

ಪಿರ್ಯಾದಿ PRAVEEN ದಾರರು ದಿನಾಂಕ 24.08.2023 ರಂದು ಅವರ ಸಂಬಂಧಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ನಂತರ ಅಂತ್ಯಕ್ರಿಯೆಗೆ ಬಂದಿದ್ದ ಪಿರ್ಯಾದಿಯ ಮಾವ ಭೋಜರಾಜ (45 ವರ್ಷ) ಎಂಬವರನ್ನು ಪಿರ್ಯಾದಿಯ ಬಾಬ್ತು KA-19-HC-5876 ನಂಬ್ರದ ಸ್ಕೂಟರ್ ನಲ್ಲಿ ಸಹ ಸವಾರನ್ನಾಗಿ ಕುಳ್ಳಿರಿಸಿಕೊಂಡು ಮಿತ್ತಕೋಡಿಯ ಕಡೆಗೆ ಹೋಗುವ ಸಮಯ  ಚೇಳೂರಿನಿಂದ ಕಾಯರಗೋಳಿ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ  ಹೋಗುವ ಸಮಯ ರಾತ್ರಿ 10.50 ಗಂಟೆಗೆ  ಮಿತ್ತಕೋಡಿ  ಪೆಟ್ರೋಲ್ ಪಂಪ್ ನಿಂದ ಸುಮಾರು 50 ಮೀಟರ್ ಹಿಂದೆ ಹೋಗುತ್ತಿದ್ದಂತೆ ಚೇಳೂರು ಕಡೆಯಿಂದ ಬಂದ KA-01-MS-9650 ನೇ ನಂಬ್ರದ ಕಾರು ಚಾಲಕ ಸನತ್ ಕುಮಾರ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸ್ಕೂಟರ್ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಅಂದರೆ ಪಿರ್ಯಾದಿ ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದವನನ್ನು ಕಾರು ಸುಮಾರು ದೂರ ಎಳೆದುಕೊಂಡು ಹೋದ ಪರಿಣಾಮ ಪಿರ್ಯಾದಿಯ ಎಡಕಾಲಿನ ಹೆಬ್ಬೆರಳಿಗೆ ರಕ್ತಗಾಯ ಬಲಕೈ ಮುಷ್ಟಿಗೆ ಗುದ್ದಿದ ಗಾಯ ಎಡ ಕೈ ತೋಳಿಗೆ ಮುಷ್ಟಿಗೆ ಹಾಗೂ ಬೆರಳಿಗೆ ಹಾಗೂ ಬಲಕೈ ಅಂಗೈಗೆ ಹಾಗೂ ಎಡಕಾಲಿನ ಗಂಟಿಗೆ ತರಚಿದ ಗಾಯವಾಗಿರುತ್ತಾದೆ, ಹಾಗೂ ಸಹ ಸವಾರ ಭೋಜರಾಜ ಡಾಮಾರು ರಸ್ತೆಗೆ ಎಸೆಯಲ್ಪಟ್ಟು ತಲೆಯ ಹಿಂಬದಿಯ ಬಲಭಾಗಕ್ಕೆ ತೀವ್ರ ರಕ್ತ ಗಾಯ ಹಾಗೂ ಮುಖದ ಎಡಭಾಗ, ಎಡಕೈ ಬೆರಳಿಗೆ ಹಾಗೂ ಎರಡು ಕಾಲಿನ ಗಂಟಿಗೆ ತರಚಿದ ಗಾಯ ಹಾಗೂ  ಪ್ರಜ್ಙಾಹೀನ ಸ್ಥಿತಿಯಲ್ಲಿದ್ದು ಅವರನ್ನು ಸಾರ್ವಜನಿಕರು ಅಪಘಾತ ಪಡಿಸಿದ ಕಾರಿನಲ್ಲಿಯೇ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ 25.08.2023 ರಂದು ಮುಂಜಾನೆ 01.08 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದು, ಸದ್ರಿ ಕಾರಿನ ಚಾಲಕನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ,  ಎಂಬಿತ್ಯಾದಿ.

Surathkal PS

ಪಿರ್ಯಾದಿದಾರಾದ ಶ್ರೀಧರ (65) ಇವರ ಮಗನಾದ ದೀಪಕ್ ಪ್ರಾಯ ಸುಮಾರು 34 ವರ್ಷ ಈತ ಬಸ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾಗಿದೆ ದಿನಾಂಕ : 19-08-2023 ರಂದು ರಾತ್ರಿ ಸಮಯ 8.00 ಗಂಟೆಗೆ ಪಿರ್ಯಾದಿದಾರರಿಗೆ ಪೋನ್ ಕರೆ ಮಾಡಿ ಬಾಡಿಗೆಗೆ ಚಾಲಕನಾಗಿ ಹೊರಗಡೆ ಹೋಗಲು ಇದ್ದುದರಿಂದ ಬಿಳಿ ಶರ್ಟ್, ನೀಲಿ ಪ್ಯಾಂಟ್ ಮತ್ತು ಬಾತ್ ಟವಲ್ ತರಲು ತಿಳಿಸಿದಂತೆ ಪಿರ್ಯಾದಿದಾರರು ಅದೇ ದಿನ ರಾತ್ರಿ 9.30 ಗಂಟೆಗೆ ಮಂಗಳೂರು ಕಡೆಯಿಂದ ದೀಪಕ್ ರವರು ಚಲಾಯಿಸಿಕೊಂಡು ಬಂದ ಭವಾನಿ ಹೆಸರಿನ ಬಸ್ಸನ್ನು ಆತ ಚಿತ್ರಾಪುರ ದ್ವಾರದ ಬಳಿ ನಿಲ್ಲಿಸಿದಾಗ ಆತನಿಗೆ ಬಟ್ಟೆಗಳನ್ನು ನೀಡಿದ್ದಾಗಿರುತ್ತದೆ ನಂತರ ದಿನಾಂಕ 21-08-2023 ರಂದು ಬೆಳಿಗ್ಗೆ ಪಿರ್ಯಾದಿದಾರರು ದೀಪಕ್ ರವರಿಗೆ ಪೋನ್ ಕರೆ ಮಾಡಿದಾಗ ತಿರುಪತಿಯಲ್ಲಿ ಇರುವುದಾಗಿ ತಿಳಿಸಿರುತ್ತಾರೆ ನಂತರ ದಿನಾಂಕ 22-08-2023 ರಂದು ಸಂಜೆ 6.00 ಗಂಟೆಗೆ ಪಿರ್ಯಾದಿದಾರರ ಮಗಳು ದಿವ್ಯಾಳು ದೀಪಕ್ ನಿಗೆ  ಮೆಸೇಜ್ ಮಾಡಿ ತಾನು ಸುಳ್ಯದಿಂದ ಬರುತ್ತಿರುವುದಾಗಿ ಮನೆಯಲ್ಲಿ ಕುಳಿತು ಮಾತನಾಡುವ ಎಂದು ತಿಳಿಸಿದ್ದಕ್ಕೆ ಆತನಿಂದ ಯಾವುದೇ ಉತ್ತರ ಬರಲಿಲ್ಲ ನಂತರ ಪೋನ್ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತದೆ ನಂತರ ಪಿರ್ಯಾದಿದಾರರು ಆತನ ಸ್ನೇಹಿತರ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಆತ ಸಿಗದೆ ಮನೆಗೂ ಬಾರದೆ ಇದ್ದ ಕಾರಣ  ದೂರು ನೀಡಿದ್ದಾಗಿದೆ  ಎಂಬಿತ್ಯಾದಿ.

Mangalore South PS                   

ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದ ಪಿರ್ಯಾದು Sharath Kumar S ದಾರರ ಪತ್ನಿ ಶ್ರೀಮತಿ. ಪ್ರಿಯಾಂಕ (ಪ್ರಾಯ 27 ವರ್ಷ) ರವರನ್ನು ಪಿರ್ಯಾದುದಾರರು ಮತ್ತು ಅವರ ಬಾವ ದರ್ಣಪ್ಪ ಗೌಡರವರು ತಾರೀಕು 24-08-2023 ರಂದು ಬೆಳಿಗ್ಗೆ 09-30 ಗಂಟೆಗೆ ಚಿಕಿತ್ಸೆ ಸಲುವಾಗಿ ಮಂಗಳೂರಿನ ಸರಕಾರಿ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಈ ಸಮಯ ಪ್ರಿಯಾಂಕಳು ಪಿರ್ಯಾದುದಾರರೊಂದಿಗೆ ಜಗಳಕಾಯ್ದು ಚಿಕಿತ್ಸೆ ದಾಖಲಾಗಲು ನಿರಾಕರಿಸಿ ವೆನ್ ಲಾಕ್ ಆಸ್ಪತ್ರೆಯಿಂದ ಮಧ್ಯಾಹ್ನ 1-30 ಗಂಟೆಗೆ ಏಕಾ ಏಕಿ ಬ್ಯಾಗ್ ಮೊಬೈಲ್ ಪೋನ್ ಬಿಸಾಡಿ ಸೆಂಟ್ರಲ್ ರೈಲ್ವೇ ಸ್ಟೇಷನ್ ಕಡೆ ಓಡಿ ಹೋಗಿ ಕಾಣೆಯಾಗಿರುತ್ತಾರೆ ಎಂಬಿತ್ಯಾದಿಯಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 25-08-2023 05:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080