ಅಭಿಪ್ರಾಯ / ಸಲಹೆಗಳು

Crime Report in  Mangalore East Traffic PS                       

ಪಿರ್ಯಾದಿದಾರರಾದ ಸ್ವಾಮಿ  ಪ್ರಸಾದ್ ರವರು ಈ ದಿನ ದಿನಾಂಕ 25-09-2023 ರಂದು ಬೆಳಿಗ್ಗೆ ತನ್ನ ಮನೆಯಿಂದ ಮಂಗಳೂರಿನ ಪದವು ಬಳಿ ಇರುವ MRPL  ಪೆಟ್ರೋಲ್ ಬಂಕ್ ಗೆ ಹೋಗುವರೇ ತನ್ನ ಬಾಬ್ತು KA-19-MK-8062 ನೊಂದಣಿ ನಂಬ್ರದ ಕಾರನ್ನು ಚಲಾಯಿಸಿಕೊಂಡು ಹೋಗುತ್ತಾ NH-73 ನೇ ರಸ್ತೆಯಲ್ಲಿನ ಬಿಕರ್ನಕಟ್ಟೆ ಬಳಿ ಬಂದು ಅಲ್ಲಿನ ಶಾಲೆಯ ಎದುರು ತಲುಪುತ್ತಿದ್ದಂತೆ ಪಿರ್ಯಾದಿದಾರರ ಮುಂದೆ ಹೋಗುತ್ತಿದ್ದ ವಾಹನಗಳು ನಿಂತಿದ್ದರಿಂದ ಪಿರ್ಯಾದಿದಾರರು ಕೂಡ ಕಾರನ್ನು ನಿಲ್ಲಿಸಿಕೊಂಡು ನಿಂತಿರುವಾಗ ಸಮಯ ಸುಮಾರು 8.45 ಗಂಟೆಗೆ ಪಿರ್ಯಾದಿದಾರರ ಹಿಂದುಗಡೆಯಿಂದ ಬರುತ್ತಿದ್ದ KA-12-7632 ನೊಂದಣಿ ನಂಬ್ರದ ಲಾರಿಯನ್ನು ಅದರ ಚಾಲಕನು ಅಪಾಯಕಾರಿಯಾದ ರೀತಿಯಲ್ಲಿ ಅಜಾಗರೂಕತೆಯಿಂದ ಚಲಯಿಸಿಕೊಂಡು ಬಂದು ಪಿರ್ಯಾದಿದಾರರ ಎಡ ಹಿಂಭಾಗದಲ್ಲಿ ನಿಲ್ಲಿಸಿದ್ದ KA-26-N-5956 ನೊಂದಣಿ ನಂಬ್ರದ ಕಾರಿನ ಬಲ ಹಿಂಭಾಗಕ್ಕೆ ಢಿಕ್ಕಿಪಡಿಸಿ, ಅದೇ ವೇಗದಲ್ಲಿ ಮುಂದಕ್ಕೆ ನುಗ್ಗಿ ಪಿರ್ಯಾದಿದಾರರ ಕಾರಿನ ಹಿಂಭಾಗಕ್ಕೆ ಢಿಕ್ಕಿಪಡಿಸಿದ್ದು, ಈ ಢಿಕ್ಕಿಯ ರಭಸಕ್ಕೆ ಪಿರ್ಯಾದಿದಾರರ ಕಾರು ಮುಂದಕ್ಕೆ ನುಗ್ಗಿ ಮುಂಭಾಗದಲ್ಲಿ ನಿಂತಿದ್ದ  ಮೋಟಾರ್ ಸೈಕಲ್ ನೊಂದಣಿ ಸಂಖ್ಯೆ KA-19-EW-9221 ಹಾಗೂ KA-70-E-0863 ಮತ್ತು KA-19-EV-2304 ನೊಂದಣಿ ಸಂಖ್ಯೆಯ ಸ್ಕೂಟರ್ ಗಳಿಗೆ ಢಿಕ್ಕಿಯಾಗಿದ್ದು, ಈ ಢಿಕ್ಕಿಯ ರಭಸಕ್ಕೆ ಬೈಕ್ ಕಾರಿನ ಅಡಿಗೆ ಸಿಲುಕಿದ್ದು, ಸ್ಕೂಟರ್ ಗಳು ಮುಂದಕ್ಕೆ ನುಗ್ಗಿ ಮುಂಭಾಗದಲ್ಲಿ ನಿಲ್ಲಿಸಿದ್ದ KA-01-AG-3934 ನೊಂದಣಿ ನಂಬ್ರದ ಟಿಟಿ ವಾಹನಕ್ಕೆ ಢಿಕ್ಕಿಯಾಗಿದ್ದು,ಟಿಟಿ ವಾಹನವು ತನ್ನ ಮುಂಭಾಗದಲ್ಲಿ ನಿಲ್ಲಿಸಿದ್ದ ನೊಂದಣಿ ಸಂಖ್ಯೆ MH-05-DH-2562 ಕಾರಿನ ಎಡಭಾಗ ಮತ್ತು KA-19-MM-1084 ಕಾರಿನ ಬಲಭಾಗದ ನಡುವೆ ನುಗ್ಗಿದ್ದು, ಎರಡೂ ಕಾರುಗಳು ಜಖಂಗೊಂಡಿರುತ್ತವೆ. ಸದ್ರಿ ಅಪಘಾತದಲ್ಲಿ KA-19-EW-9221 ಮೋಟಾರ್ ಸೈಕಲ್ ಸವಾರ ದಿಕ್ಷೀತ್ ಎಂಬುವರಿಗೆ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತಾರೆ,  ಅಪಘಾತಪಡಿಸಿದ ಲಾರಿ ಚಾಲಕನು ಅಪಘಾತದ ಬಳಿಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುತ್ತಾನೆ. ಈ ಬಗ್ಗೆ ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬಿತ್ಯಾದಿ.

CEN Crime PS

ಪಿರ್ಯಾದಿದಾರರು ಖಾಸಗಿ ಸಂಸ್ಥೆಯಲ್ಲಿ ಟ್ಯೂಟರ್ ಆಗಿದ್ದು, ಫಿರ್ಯಾದುದಾರರ ಈಮೇಲ್ ಗೆ Byjus ನಲ್ಲಿ ಜಾಬ್ ಆಪರ್ಚುನಿಟಿ ಇರುವುದಾಗಿ ಮೆಸೇಜ್ ಬಂದಿರುವುದನ್ನು ನಂಬಿದ ಫಿರ್ಯಾದುದಾರರು ಆನ್ ಲೈನ್  ಕೆಮೆಸ್ಟ್ರಿ ಟ್ಯೂಟರ್ ಆಗಿ ಸೆಲೆಕ್ಟ್ ಆಗಿರುವುದಾಗಿ ತಿಳಿಸಿದಂತೆ ಅದಕ್ಕಾಗಿ ರಿಜಿಸ್ಟ್ರೇಶನ್ ಫೀಸ್ ಮತ್ತು ಇತರ ವೆಚ್ಚದ ಕುರಿತು ಹಣ ಕಳುಹಿಸಬೇಕೆಂದು ಸೂಚಿಸಿದಂತೆ ಫಿರ್ಯಾದುದಾರರು ತಾನು ಹೊಂದಿರುವ ಫೆಡರಲ್ ಬ್ಯಾಂಕ್ ಖಾತೆ ನಂಬ್ರ ನೇದರಿಂದ ದಿನಾಂಕ 11-07-2023 ರಿಂದ 21-07-2023 ರವರೆಗೆ ಹಂತ ಹಂತವಾಗಿ ಒಟ್ಟು ರೂ.3,38,096/- ಹಣವನ್ನು ಆನ್ ಲೈನ್ ಮೂಲಕ ವರ್ಗಾಯಿಸಿರುತ್ತಾರೆ. ಫಿರ್ಯಾದುದಾರರಿಗೆ ಯಾವುದೇ ಆನ್ ಲೈನ್ ಉದ್ಯೋಗದ ಅವಕಾಶ ಬಾರದ ಕಾರಣ  ಆರೋಪಿತರು ನೀಡಿರುವ ಮೊಬೈಲ್ ನಂಬ್ರ 8765188462 ಮತ್ತು 9919494742 ನೇದಕ್ಕೆ ಕರೆ ಮಾಡಿದಾಗ ಕರೆ ಸ್ವೀಕರಿಸಿರುವುದಿಲ್ಲ. ನಂತರ 704202068 ನೇ ನಂಬ್ರದಿಂದ ಕರೆ ಮಾಡಿದ ವ್ಯಕ್ತಿಯು ಫಿರ್ಯಾದುದಾರರಿಗೆ ಆನ್ ಲೈನ್ ಇಂಟರ್ ವ್ಯೂ ಕೊಡುವುದಾಗಿ ನಂಬಿಸಿದ್ದು ಅಲ್ಲದೇ ಕೆಲಸದ ಅವಕಾಶ ಸಿಗದೇ ಇದ್ದಲ್ಲಿ 45 ರಿಂದ 90 ದಿವಸದ ಒಳಗೆ ಹಣವನ್ನು ಹಿಂತಿರುಗಿಸುವುದಾಗಿ ತಿಳಿಸಿರುತ್ತಾನೆ. 90 ದಿವಸ ಕಳೆದರೂ ಫಿರ್ಯಾದಾರರು ವರ್ಗಾಯಿಸಿದ ಹಣ ಹಿಂತಿರುಗಿಸದೇ ಇದ್ದು ಮತ್ತು ಉದ್ಯೋಗದ ಅವಕಾಶ ಸಿಗದೇ ಇದ್ದುದರಿಂದ ತಾನು ಮೋಸಹೋಗಿರುವುದನ್ನು ಮನಗಂಡು ಈ ದಿನ ದೂರು ನೀಡಿರುವುದಾಗಿದೆ ಎಂಬಿತ್ಯಾದಿ.  

Traffic South Police Station                                               

ಫಿರ್ಯಾದಿದಾರರಾದ ಶ್ರೀಮತಿ ಹೇಮಲತಾ  ಎಂಬವರ ಸಂಬಂಧಿಯಾದ ಸುಮಾ ನಾರಾಯಣ ಗಟ್ಟಿ ( 51 ವರ್ಷ) ಎಂಬುವವರು ತನ್ನ ತಮ್ಮ ವೆಂಕಟೇಶ್ ಎಂಬವರ ಜೊತೆಯಲ್ಲಿ ದಿನಾಂಕ 24-09-2023 ರಂದು ಸಂಜೆ  ಫಿರ್ಯಾದಿದಾರರ ಮನೆಯಲ್ಲಿದ್ದ ಅಜ್ಜಿಯನ್ನು ನೋಡಿ ವಾಪಾಸು ಹೊರಟು, ಕೇರಳದಲ್ಲಿರುವ ತನ್ನ ಮನೆ ಕಡೆಗೆ ಹೋಗುವರೇ ಬಸ್ಸಿಗಾಗಿ ಕೋಟೆಕಾರು ಬೀರಿ ಕಡೆಗೆ  ತನ್ನ ತಮ್ಮ ವೆಂಕಟೇಶ್ ಎಂಬಾತನ ಜೊತೆ ಆತನ ಬಾಬ್ತು KA-19-EN-6119  ನೇ ನಂಬ್ರದ ಸ್ಕೂಟರ್ ನಲ್ಲಿ ಸಹ ಸವಾರರಾಗಿ  ಕುಳಿತುಕೊಂಡು ಹೋಗುತ್ತಾ, ಸಂಜೆ 6.25 ಗಂಟೆಯ ಸುಮಾರಿಗೆ ರಾ. ಹೆದ್ದಾರಿ 66 ರಲ್ಲಿ ತೊಕ್ಕೋಟಿನ ಯುನಿಟಿ ಹಾಲ್ ನಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ, ಸ್ಕೂಟರ್ ಚಲಾಯಿಸುತ್ತಿದ್ದ ವೆಂಕಟೇಶ್ ನು ಸ್ಕೂಟರ್ ನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಒಮ್ಮೇಲೇ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ನಲ್ಲಿ ಸಹ ಸವಾರರಾಗಿದ್ದ ಸುಮಾ ನಾರಾಯಣ ಗಟ್ಟಿಯವರು ಸ್ಕೂಟರ್ ನಿಂದ ಹಿಮ್ಮುಖವಾಗಿ ಕೆಳಗೆ ಡಾಮಾರು ರಸ್ತೆಗೆ ಬಿದ್ದು, ತಲೆಯ ಹಿಂಬದಿ ತೀವ್ರ ರಕ್ತಗಾಯವಾಗಿದ್ದು,   ಬಲಕಾಲಿನ ಗಂಟಿಗೆ, ಬಲಕೈಗೆ ತರಚಿದ ರಕ್ತ ಗಾಯ, ಹಾಗೂ ಹಣೆಯ ಎಡಭಾಗ ಹಾಗೂ ಮೂಗಿಗೆ ಹಾಗೂ ಬಲ ಕಣ್ಣಿನ  ಬಳಿ ಗುದ್ದಿದ ಗಾಯವಾಗಿ ಹಾಗೂ ಆಕೆಯ ಮೂಗಿನಲ್ಲಿ ಹಾಗೂ ಕಿವಿಯಲ್ಲಿ ರಕ್ತ ಬರುತ್ತಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಸ್ಕೂಟರ್ ಸವಾರನಾದ ವೆಂಕಟೇಶ್ ನು ಅಲ್ಲಿ ಸೇರಿದ ಜನರೊಂದಿಗೆ ಸೇರಿ ಉಪಚರಿಸಿ ಅದೇ ದಾರಿಯಲ್ಲಿ ಬರುತ್ತಿದ್ದ ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಸುಮಾ ನಾರಾಯಣ ಗಟ್ಟಿಯವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 9.25 ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಅಪಘಾತಕ್ಕೆ ವೆಂಕಟೇಶ್ ಎಂಬಾತನ ದುಡುಕುತನ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುತ್ತದೆ ಸದ್ರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ

Kankanady Town PS

ಮಂಗಳೂರು ನಗರದ  ಕಣ್ಣೂರು ಬೆಂಝ್ ಶೋ ರೂಮ್ ನ ಹಿಂಭಾಗದ ನೇತ್ರಾವತಿ ನದಿ ಕಿನಾರೆಯಿಂದ  ಅಕ್ರಮವಾಗಿ  ಮರಳು ತುಂಬಿಸಿ, ಸಾಗಾಟ ಮಾಡುತ್ತಿರುವ ಸ್ಥಳಕ್ಕೆ ಧಾಳಿ ನಡೆಸಲು ಮೇಲಾಧಿಕಾರಿಗಳು ಮಾಹಿತಿ ನೀಡಿದಂತೆ ಪ್ರಕರಣದ ಪಿರ್ಯಾದಿದಾರರು ಸಿಸಿಬಿ ಘಟಕದ ಎಎಸ್ ಐ ಮೋಹನ್ ಹಾಗೂ ಸಿಬ್ಬಂಧಿಗಳ ಜೊತೆ ದಿನಾಂಕ:25-09-2023 ರಂದು 00-15 ಗಂಟೆಗೆ ಧಾಳಿ ನಡೆಸಿದಾಗ, ಮರಳು ತುಂಬಿಸುತ್ತಿದ್ದವರು ಹಾಗೂ ಟಿಪ್ಪರ್ ವಾಹನದ ಚಾಲಕರು ಓಡಿ ಹೋಗಿರುತ್ತಾರೆ.  ಅಧಿಕೃತ ಪರವಾನಿಗೆಯನ್ನು ಹೊಂದದೇ ಸಾರ್ವಜನಿಕ ಖನಿಜ ವಸ್ತುವಾದ ಮರಳನ್ನು ಯಾವುದೇ ಪರವಾನಿಗೆ ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಧನ ಪಾವತಿಸದೇ,  ಅಕ್ರಮವಾಗಿ ಸರಕಾರದ ಸೊತ್ತಾದ ಮರಳನ್ನುನೇತ್ರಾವತಿ ನದಿಯಿಂದ ಕಳವು ಮಾಡಿ ಸಾಗಿಸಲು ಉಪಯೋಗಿಸಿದ   ಕೆಎ-19- AA-5975 ಟಿಪ್ಪರ್ ಲಾರಿ, ಕೆ ಎಲ್ -55-K-476 ಟಿಪ್ಪರ್ ಲಾರಿ, ಕೆಎಲ್ -57-E-6526 ಟಿಪ್ಪರ್ ಲಾರಿ, ಕೆಎ-20 B-0876  ಟಿಪ್ಪರ್ ಲಾರಿ, ಕೆಎ-23 A-5472 ಟಿಪ್ಪರ್ ಲಾರಿ ಹಾಗೂ ದೋಣಿಯನ್ನು ಮತ್ತು ಅದರಲ್ಲಿದ್ದ ಮರಳನ್ನು ವಶಕ್ಕೆ ಪಡೆದು ಟಿಪ್ಪರ್ ವಾಹನದ ಹಾಗೂ ಬೋಟ್ ನ ಮಾಲಿಕರ ಮತ್ತು ಚಾಲಕರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಲಾರಿಗಳ ಹಾಗೂ ಬೋಟ್ ನ ಮತ್ತು ಮರಳಿನ ಒಟ್ಟು ಮೌಲ್ಯ 25,45,000/- ಆಗಬಹುದು.   ಎಂಬಿತ್ಯಾದಿಯಾಗಿರುತ್ತದೆ.

Ullal PS

ದಿನಾಂಕ. ೨೪-೯-೨೦೨೩ ರಂದು ಆರೋಪಿ ನಾಝಿಮ್ ಎಂಬಾತನು ಉಳ್ಳಾಲ ಠಾಣಾ ಸರಹದ್ದಿನ ಕಲ್ಲಾಪು ಪಟ್ಲ ನದಿ ಕಿನಾರೆಯಿಂದ ಸಾಮಾನ್ಯ ಮರಳನ್ನು ಕಳವು ಮಾಡಿಕೊಂಡು ಕೆಎ-೧೯-ಬಿ-೩೫೪೬ ನೇ ಬಿಳಿ ಮತ್ತು ಹಳದಿ ಬಣ್ಣದ ಮಹೀಂದ್ರ ಪಿಕ್ಅಪ್ ವಾಹನದಲ್ಲಿ  ಯಾವುದೇ ಪರವಾನಿಗೆ ಯಾ ದಾಖಲಾತಿಗಳನ್ನು ಹೊಂದದೇ ವಾಹನವನ್ನು ಚಲಾಯಿಸಿಕೊಂಡು ಸಾಮಾನ್ಯ ಮರಳನ್ನು ರಾತ್ರಿ ೧೧-೦೦ ಗಂಟೆಯ ಸಮಯಕ್ಕೆ ಅಕ್ರಮ ಸಾಗಾಟ ಮಾಡಿಕೊಂಡು ಹೋಗುವಾಗ ಪರ‍್ಮನ್ನೂರು ಗ್ರಾಮದ ಕಲ್ಲಾಪು ಪೆಟ್ರೋಲ್ ಪಂಪ್ ಬಳಿ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಫರ‍್ಯಾದಿದಾರರಾದ ಉಳ್ಳಾಲ ಠಾಣೆಯ ಪಿಎಸ್ಐ ಶೀತಲ್ ಅಲಗೂರ ರವರು ತನ್ನ ಸಿಬ್ಬಂದಿಯವರ ಸಹಾಯದಿಂದ ಪತ್ತೆ ಮಾಡಿ ಆರೋಪಿಯೊಂದಿಗೆ ಠಾಣೆಗೆ ಬಂದಿರುವುದಾಗಿದೆ. ಸದ್ರಿ ಪಿಕ್ಅಪ್ ವಾಹನದ ಅಂದಾಜು ಮೌಲ್ಯ ರೂ.೨,೦೦,೦೦೦/- ಮತ್ತು ಸಾಮಾನ್ಯ ಮರಳಿನ ಅಂದಾಜು ಮೌಲ್ಯ ರೂ.೨,೦೦೦/- ಆಗಬಹುದು.

Mangalore East PS

ಪಿರ್ಯಾದಿದಾರರಿಗೆ ಅವರ ವಾಟ್ಸಪ್ ಮೊಬೈಲ್ ನಂಬರ್ ಗೆ ದಿನಾಂಕ 23-07-2023 ರಂದು ಬೆಳ್ಳಗ್ಗೆ 11 ಗಂಟೆ ಸುಮಾರಿಗೆ +91875612168 ನಂಬರ್ ದ ವಾಟ್ಸಪ್ ನಂಬರ್ ನಿಂದ ಬಂದ ವಾಟ್ಸಪ್ ಮೆಸೇಜ್ ನಲ್ಲಿ ISHA ARNDSTAD PRAIVET preivet limited ಕಂಪನಿಯವರೆಂದು ಪರಿಚಯಿಸಿಕೊಂಡು ಕಂಪನಿಯಲ್ಲಿ ಹಣ ಹೂಡಿಕೆ ಸೇರಿದಂತೆ ಪಾರ್ಟ್ ಟೈಮ್ ಟಾಸ್ಕ್ ಗಳನ್ನು ಪ್ರತಿದಿನ ಮಾಡಿದರೆ ಗರಿಷ್ಠ 30%  ಲಾಭ ಗಳಿಸಬಹುದೆಂದು ತಿಳಿಸಿ ಸದ್ರಿ ವ್ಯಕ್ತಿಯು ಟೆಲಿಗ್ರಾಮ್ APP ನಲ್ಲಿರುವ 47814 ಎಂಬ ವ್ಯಕ್ತಿಯ ಮೂಲಕ @ ಕಾಶ್ಮೀರ್ 2233 ಎಂಬ ವ್ಯಕ್ತಿಯನ್ನು ಪರಿಚಯಿಸಿ ನಂತರ SOCIAL WAVELENGTH DIGITAL MARKETING  ಎಂಬ ಗುಂಪಿನಲ್ಲಿ ಸೇರಿಸಿ ಸದ್ರಿ ಕಾರ್ಯಗಳನ್ನು ನೀಡಿ ಆಮಿಷ ಒಡ್ಡಿರುವುದಾಗಿದೆ. ನಂತರ ಸದ್ರಿ ವ್ಯಕ್ತಿಯು ಬೇರೆ ಬೇರೆ ಬ್ಯಾಂಕ್ ಖಾತೆ ನಂಬರ್ ಗಳನ್ನು ಮತ್ತು UPI  ID ಗಳನ್ನು ನೀಡಿ ಪಿರ್ಯಾದುದಾರರಿಂದ 10,52,000 ರೂಪಾಯಿ ಹಣವನ್ನು ಹಂತ ಹಂತವಾಗಿ ಜಮಾ ಮಾಡಿಸಿಕೊಂಡು ಲಾಭಾಂಶ ನೀಡುವುದಾಗಿ ಹೇಳಿದ ಹಣವನ್ನಾಗಲಿ ಅಥವಾ ಪಿರ್ಯಾದುದಾರರು ಜಮಾ ಮಾಡಿಸಿಕೊಂಡ ಹಣವನ್ನು ಹಿಂತಿರುಗಿಸದೇ +91875612168 ನಂಬರ್ ದ ವಾಟ್ಸಪ್ ಬಳಸುವ  ವ್ಯಕ್ತಿ ಮತ್ತು ಈತನು ಪರಿಚಯಿಸಿದ ವ್ಯಕ್ತಿಗಳು ಪಿರ್ಯಾದುದಾರರಿಗೆ 10,52,000 ರೂಪಾಯಿ ಮೋಸ ಮಾಡಿರುತ್ತಾರೆ.

Konaje PS         

ಪಿರ್ಯಾದಿ Vamana Poojari ದಾರರ ತಮ್ಮ ಹರಿಶ್ಚಂದ್ರ(38) ಎಂಬವರು  ದಿನಾಂಕ 23.09.2023 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು,ಪಿರ್ಯಾದಿದಾರರು ಸಂಜೆ ಕೆಲಸ ಮುಗಿಸಿ ಮನೆ Kudumbila Guri House, Naringana Village, Ullala TQ,ಗೆ ಬಂದಿದ್ದು, ತಮ್ಮ ಹರಿಶ್ಚಂದ್ರ ರವರು ಮನೆಗೆ ಬಾರದೇ ಇರುವ ಕಾರಣ ಈ ಬಗ್ಗೆ ತನ್ನ ತಾಯಿಯಲ್ಲಿ ವಿಚಾರಿಸಿದಾಗ  ಬೆಳಿಗ್ಗೆ 10.00 ಗಂಟೆ ಸುಮಾರಿಗೆ ಹರಿಶ್ಚಂದ್ರ ರವರು ಕೆಲಸದವರೊಂದಿಗೆ ಮನೆಗೆ ಚಾ ಕುಡಿಯಲು ಬಂದು, ಚಾ ಕುಡಿದು ಹೋಗಿರುತ್ತಾನೆ.  ಎಂದು ತಿಳಿಸಿದ್ದು, ನಂತರ ಪಿರ್ಯಾದಿದಾರರು ಸದ್ರಿಯವರ ಮೊಬೈಲಿಗೆ ಕರೆ ಮಾಡಿದಾಗ ಮೊಬೈಲ್ ಸ್ವೀಚ್ ಆಫ್ ಬಂದಿರುತ್ತದೆ.ನಂತರ ಈ ಬಗ್ಗೆ ಕೆಲಸದವನಲ್ಲಿ  ವಿಚಾರಿಸಿದಲ್ಲಿ ಹರಿಶ್ಚಂದ್ರ ರವರು ಬೆಳಿಗ್ಗೆ ಮನೆಯಿಂದ ಚಾಕುಡಿದು ನನ್ನನ್ನು ಕೆಲಸದ ಬಳಿ ಬಿಟ್ಟು, ಕಲ್ಕಟ್ಟ ಜಂಕ್ಷನ್ ಗೆ ಹೋಗಿ ಬರುತ್ತೇನೆ ಎಂದು ಹೇಳಿ ಸ್ಕೂಟರ್ ನಲ್ಲಿ ಹೋಗಿರುವುದಾಗಿ ತಿಳಿಸಿದನು. ನಂತರ ಪಿರ್ಯಾದಿದಾರರು  ಹರಿಶ್ಚಂದ್ರ ರವರ ಬಗ್ಗೆ  ತಮ್ಮ ಸಂಬಂಧಿಕರಲ್ಲಿ ವಿಚಾರಿಸಿದ್ದು  ಯಾವುದೇ ಮಾಹಿತಿ ಲಭ್ಯವಾಗಿರುವುದಿಲ್ಲ. ನಂತರ ಪಿರ್ಯಾದಿದಾರರು  ಹರಿಶ್ಚಂದ್ರ ರವರನ್ನು ಕಲ್ಕಟ್ಟಾ, ನಾಟೇಕಲ್, ದೇರಳ ಕಟ್ಟೆ, ತೊಕ್ಕೊಟ್ಟು ಮುಂತಾದ ಕಡೆ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದೇ ಇರುವುದರಿಂದ ದೂರು ನೀಡಿರುವುದಾಗಿದ್ದು,ಪಿರ್ಯಾದಿದಾರರ ತಮ್ಮ ಹರಿಶ್ಚಂದ್ರ ರವರು ಕಾಂಟ್ರೆಕ್ಟ ಕೆಲಸ ಬಗ್ಗೆ ಅಲ್ಲಲ್ಲಿ ಕೈ ಸಾಲ ಮಾಡಿಕೊಂಡಿದ್ದು, ಇದೇ ವಿಚಾರಕ್ಕೆ ಮನೆಬಿಟ್ಟು ಹೋಗಿರುವ ಸಾಧ್ಯತೆ ಇರುತ್ತದೆ. ಆದುದರಿಂದ ಕಾಣೆಯಾದ ನನ್ನ ತಮ್ಮ ಹರಿಶ್ಚಂದ್ರ ರವರನ್ನು ಪತ್ತೆ ಹಚ್ಚಿಕೊಡಬೇಕಾಗಿ ಎಂಬಿತ್ಯಾದಿ ದೂರಿನ ಸಾರಾಂಶವಾಗಿದೆ.

Moodabidre PS

ದಿನಾಂಕ 23-09-2023 ರಂದು ಸಂಜೆ 6 ಗಂಟೆಯಿಂದ ರಾತ್ರಿ 12.00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರಾದ ನಾರಾಯಣ ಪಿ.ಎಮ್ ರವರ ಮನೆಯಲ್ಲಿ ಯಾರೂ ಇಲ್ಲದಿರುವ ಸಮಯ ಯಾರೊ ಕಳ್ಳರು ಪಿರ್ಯಾದಿದಾರರ ಮನೆಯ ಮೇಲಂತಸ್ತಿನ ಬಾಲ್ಕನಿಯ ಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ಮನೆಯ ಒಳಗೆ ಪ್ರವೇಶಿಸಿ ಬೆಡ್ ರೂಮಿನ ವಾರ್ಡ್ ರೂಫ್ ನಲ್ಲಿ ಇಟ್ಟಂತಹ ಸುಮಾರು ಒಂದೂವರೆ ಲಕ್ಷ ನಗದು ಹಣ ಮತ್ತು ಡಿ.ವಿ.ಆರ್ ನ್ನು ಕಳ್ಳತನ ಮಾಡಿಕೊಂಡು ನಂತರ ಮನೆಯ ದಕ್ಷಿಣ ಪೂರ್ವ ದಿಕ್ಕಿನಲ್ಲಿರುವ ಬಾಗಿಲಿನ ಮುಖಾಂತರ ಹೊರ ಹೋಗಿರುತ್ತಾರೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 25-09-2023 03:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080