ಅಭಿಪ್ರಾಯ / ಸಲಹೆಗಳು

Crime Report in  Mangalore West Traffic PS                              

ಪಿರ್ಯಾದಿ MANOHAR ದಾರರು ಹೇರ್ ಕಟ್ಟಿಂಗ್ ಕೆಲಸ ಮಾಡಿಕೊಂಡಿದ್ದವರು, ದಿನಾಂಕ 22-10-2023 ರಂದು ಎಂದಿನಂತೆ ಕೆಲಸಕ್ಕೆಂದು ಸ್ಟೇಟ್ ಬ್ಯಾಂಕ್ ಬಳಿ ಬಸ್ಸಿನಿಂದ ಇಳಿದು  ದಕ್ಕೆ ಕಡೆಗೆ ಹೋಗುವ ಸಲುವಾಗಿ ಡಿಸಿ ಆಪೀಸ್ ಮುಖ್ಯ ದ್ವಾರದಲ್ಲಿ ಆಟೋ ರಿಕ್ಷಾಕ್ಕಾಗಿ ಕಾಯುತ್ತಿರುವ ಸಮಯ ಸುಮಾರು 11.50 ಗಂಟೆಗೆ ಡಿಸಿ ಆಪೀಸ್ ಗೇಟ್ ಬಳಿ ನಿಂತಿದ್ದ ಕೆಎ-19-ಎಂಜಿ-1670 ನೇ ಕಾರನ್ನು ಅದರ ಚಾಲಕ ದಿವಾಕರ್ ಶೆಣೈ ರವರು ಏಕಾಏಕಿಯಾಗಿ ನಿರ್ಲಕ್ಷ್ಯತನದಿಂದ ಹಿಂದಕ್ಕೆ ಚಲಾಯಿಸಿ ಪಿರ್ಯಾದಿದಾರರಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು  ಬಲ ಕೈಯ ಮಣಿಗಂಟಿಗೆ ಗಾಯವಾಗಿ ಚಿಕಿತ್ಸೆಯ ಬಗ್ಗೆ ಕುಂಟಿಕಾನಾ ಎಜೆ ಆಸ್ಪತ್ರೆಗೆ ಹೋದಾಗ ಅಲ್ಲಿ ಪರಿಕ್ಷೀಸಿದ ವೈಧ್ಯರು ಬಲ ಕೈಯ ಮಣಿಗಂಟಿಗೆ ಮೂಳೆ ಮುರಿತವಾಗಿರುವುದಾಗಿದೆ ಎಂಬುದಾಗಿ ತಿಳಿಸಿದ್ದು ಅದರಂತೆ ಆ ದಿನ ಪಿರ್ಯಾದಿದಾರರು ಹೋರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು. ಮನೆಗೆ ಬಂದು ಈ ಘಟನೆಯ ಬಗ್ಗೆ ಪಿರ್ಯಾದಿದಾರರು ಮನೆಯವರಲ್ಲಿ ಚರ್ಚಿಸಿ ದೂರು ನೀಡಲು ತಡವಾಗಿರುತ್ತದೆ ಎಂಬಿತ್ಯಾದಿ

CEN Crime PS

ದಿನಾಂಕ : 13-09-2023 ರಂದು ಮನೆಯಲ್ಲಿರುವಾಗ ಪಿರ್ಯಾದಿದಾರರ  ಮೊಬೈಲ್ ಗೆ ಎಸ್  ಎಮ್  ಎಸ್ ಬಂದಿದ್ದು ಸದ್ರಿ  ಸಂದೇಶವನ್ನು  ಪರಿಶೀಲಿಸಿದ್ದಲ್ಲಿ  ಪಿರ್ಯಾದಿದಾರರ  ಕೆನರಾ  ಬ್ಯಾಂಕ್  ಹಂಪನಕಟ್ಟ ಶಾಖೆ  ಖಾತೆ ಸಂಖ್ಯೆ:  ನೇದ್ದರಿಂದ ರೂ.5,000/-ಹಣ  ಕಡಿತವಾಗಿರುವ ಬಗ್ಗೆ  ತಿಳಿದು ಬಂದಿರುತ್ತದೆ.ನಂತರ ದಿನಾಂಕ: 14-09-2023 ರಂದು ಪಿರ್ಯಾದಿದಾರರು  ಸದ್ರಿ  ಕೆನರಾ ಬ್ಯಾಂಕ್ ಹಂಪನಕಟ್ಟ  ಶಾಖೆ ಗೆ  ತೆರಳಿ  ವಿಚಾರಿಸಿ ಖಾತೆಯ ಸ್ಟೇಟ್  ಮೆಂಟ್  ನ್ನು  ತೆಗೆದು  ಪರಿಶೀಲಿಸಿದ್ದಲ್ಲಿ ದಿನಾಂಕ:12-09-2023 ರಂದು ರೂ.10,000/- ಹಾಗೂ  ದಿನಾಂಕ: 13-09-2023 ರಂದು  ರೂ.5,000/- ಒಟ್ಟು  ರೂ.15,000/-ಹಣವು  ಹಂತ ಹಂತವಾಗಿ ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ವರ್ಗಾವಣೆಯಾಗಿರುವುದು  ಧೃಢಪಟ್ಟಿರುತ್ತದೆ. ಈ ಬಗ್ಗೆ  ಪಿರ್ಯಾದಿದಾರರಿಗೆ   ಯಾವುದೇ ಓಟಿಪಿ  ಸಂದೇಶವು  ಬಂದಿರುವುದಿಲ್ಲ . ಹಾಗೂ  ದಿನಾಂಕ: 27-08-2023 ರಂದು ಪಿರ್ಯಾದಿದಾರರು ಉಪನೋಂದಣಾಧಿಕಾರಿಯವರ  ಕಛೇರಿ ಮಂಗಳೂರು ಇಲ್ಲಿಗೆ ಜಾಗವನ್ನು ನೋಂದಣಿ  ಮಾಡುವ ಬಗ್ಗೆ   ಹೆಬ್ಬೆರಳಿನ ಗುರುತು ನೀಡಿ ದಾಖಲಾತಿಯನ್ನು  ಮಾಡಿಕೊಂಡ   ಬಗ್ಗೆ  ತಿಳಿಸಿದ್ದು  ಇದೇ ಕಾರಣದಿಂದಾಗಿ ಆಧಾರ್ ಲಿಂಕ್ ನ್ನು  ಉಪಯೋಗಿಸಿ ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಕೆನರಾ ಬ್ಯಾಂಕ್  ಖಾತೆ ಸಂಖ್ಯೆ:   ನೇದರಿಂದ ಹಂತ ಹಂತವಾಗಿ ಒಟ್ಟು 15,000/-ರೂ ಗಳನ್ನು ಮೋಸದಿಂದ ವರ್ಗಾಯಿಸಿಕೊಂಡಿರುತ್ತಾರೆ ಎಂಬಿತ್ಯಾದಿ.

Traffic North Police Station               

ದಿನಾಂಕ 25-10-2023 ರಂದು 00-05 ಘಂಟೆಗೆ KA-20-EY-9632 ನಂಬ್ರದ ಸ್ಕೂಟರ್ ಸವಾರನಾದ ವೆಂಕಟೇಶ್ ಎಂಬಾತನು ಕುಳಾಯಿ ಜಂಕ್ಷನ್ ಕಡೆಯಿಂದ ಬೈಕಂಪಾಡಿ ಕಡೆಗೆ NH 66 ನೇ ಡಾಬರು ರಸ್ತೆಯಲ್ಲಿ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಚಾಲಾಯಿಸಿಕೊಂಡು ಹೋಗಿ ಚಿತ್ರಾಪುರ ಬಸ್ ಸ್ಟಾಪ್ ಕಟ್ಟಡದ ಚರಂಡಿಯ ದಿಂಡಿಗೆ ಡಿಕ್ಕಿ ಪಡಿಸಿ,ಸ್ಕೂಟರ್ ಸವಾರ ವೆಂಕಟೇಶನು ಸ್ಕೂಟರ್ ನಿಂದ ಎಸೆಯಲ್ಪಟ್ಟು ಚರಂಡಿಗೆ ಬಿದ್ದು,ಹಣೆಗೆ ಮತ್ತು ಕಣ್ಣಿನ ಬದಿಯಲ್ಲಿ ರಕ್ತಗಾಯವಾಗಿ,ಮೂಗಿನಲ್ಲಿ ರಕ್ತ ಹೊರ ಬಂದು ಅಪಘಾತ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ,ಎಂಬಿತ್ಯಾದಿ.

Mangalore North PS

ಪಿರ್ಯಾದು ಅಲೆಕ್ಸಾಂಡರ್ ಎಂ, ಮೊಂತೆರೋ ದಾರರು ದಿನಾಂಕ 22/10/2023 ರಂದು  ಸಾಯಂಕಾಲ 4-00 ಗಂಟೆಯ ಸಮಯಕ್ಕೆ ಪಿರ್ಯಾದುದಾರರ ಬಾಬ್ತು  ಕೆ,ಎ-19-MM-8800 ನೇ ನಂಬ್ರದ  ಬಿ,ಎಂ,ಡಬ್ಲು ಕಾರನ್ನು   ಮಂಗಳೂರು ನಗರದ  ಬಾವುಟಗುಡ್ಡೆ  ದಿ ಅಲೆಕ್ಸಾಂಡಿರಿಯಾ  ಬಹುಮಹಡಿ ಕಟ್ಟಡದ  ಬೇಸ್  ಮೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ  ಪ್ಲಾಟಿಗೆ ಹೋಗಿದ್ದು,  ದಿನಾಂಕ 23/10/2023  ರಂದು ಸಮಯ ಸುಮಾರು ಸಂಜೆ 04-00 ಗಂಟೆಗೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಬಿ,ಎಂ,ಡಬ್ಲು ಕಾರನ್ನು ನೋಡಿದಾಗ ಅಂದಾಜು ಮೌಲ್ಯ ರೂ, 25,000/ ಬೆಲೆಬಾಳುವ ಸದ್ರಿ ಕಾರಿನ  ಮುಂಭಾಗದ ಹಾಗೂ ಹಿಂಬದಿಯ  ಮೊನೊ ಗ್ರಾಮ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಕಳವು ಮಾಡಿದ ವಾಹನದ ಸೊತ್ತಿನ ಬಗ್ಗೆ ಪಿರ್ಯಾದುದಾರರ ಪ್ಲಾಟಿನ ಸೆಕ್ಯೂರಿಟಿಯವರನ್ನು ವಿಚಾರಿಸಿಕೊಂಡು ಮತ್ತು ಪ್ಲಾಟಿನ ಸಿಸಿ ಕ್ಯಾಮರಾವನ್ನು ಪರಿಶೀಲಿಸಿ ನಂತರ ದೂರು ನೀಡಿರುವುದಾಗಿದೆ ಎಂಬಿತ್ಯಾದಿ ಸಾರಾಂಶ.

Traffic South Police Station              

ಪಿರ್ಯಾದಿದಾರರು ಉಳ್ಳಾಲದ ಬಬ್ಬುಕಟ್ಟೆ ಪ್ಲಾಟ್ ಒಂದರಲ್ಲಿ ವಾಚಮನ್ ಕೆಲಸ ಮಾಡಿಕೊಂಡಿರುತ್ತಾರೆ. ನಿನ್ನೆ ದಿನ ದಿನಾಂಕ 24-10-2023 ರಂದು ಪಿರ್ಯಾದಿದಾರರ ಹೆಂಡತಿಯಾದ ಯಲ್ಲವ್ವ ರವರು ರಾತ್ರಿ ಸುಮಾರು 9.30 ಗಂಟೆಗೆ ಮನೆಯಿಂದ ಹಾಲು ತರಲೆಂದು ಬಬ್ಬುಕಟ್ಟೆ ಅಂಗಡಿಯೊಂದಕ್ಕೆ ಹೋಗಿದ್ದರು. ಪಿರ್ಯಾದಿ BASAVARAJ ದಾರರು ಮನೆಯ ಹೊರಗೆ ಕೂತಿರುವ ಸಮಯ ಬಬ್ಬುಕಟ್ಟೆಯ ಮುಖ್ಯ ರಸ್ತೆಯಿಂದ ಜೋರಾದ ಬೊಬ್ಬೆ ಕೇಳಿದ್ದರಿಂದ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ ಪ್ಲಾಟ್ ನ ಮಾಲಕರು ರಸ್ತೆಯ ಬಳಿ ಹೋಗಿ ಅಲ್ಲಿ ಸೇರಿದ್ದ ಜನರನ್ನು ವಿಚಾರಿಸಿದಾಗ ಒಬ್ಬ ಬೈಕ್ ಸವಾರನು ಕುತ್ತಾರ ಕಡೆಯಿಂದ ಅತಿ ವೇಗ ಮತ್ತು ಅಜಾಗೂರುಕತೆಯಿಂದ ಬಂದು ಡಿಕ್ಕಿ ಹೊಡೆದ ರಬಸಕ್ಕೆ ಪಿರ್ಯಾದಿದಾರರ ಹೆಂಡತಿಯ ತೆಲೆಗೆ, ಬಲ ಭುಜಕ್ಕೆ ಮತ್ತು ಸೊಂಟಕ್ಕೆ  ತೀವ್ರ ಸ್ವರೂಪದ ರಕ್ತ ಗಾಯವಾದವಳನ್ನು ಬೈಕ್ ಸವಾರ ಮತ್ತು ಇತರರು ಸೇರಿ ದೇರಳಕಟ್ಟೆಯ ಯೇನಪೋಯಾ ಆಸ್ಪತ್ರಗೆ ಆಟೋ ರಿಕ್ಷಾವೊಂದರಲ್ಲಿ ಕರೆದುಕೊಂಡು ಹೋಗಿರುತ್ತಾರೆ ಎಂದು ತಿಳಿಸಿರುತ್ತಾರೆ. ಕೊಡಲೇ ಪಿರ್ಯಾದಿದಾರರು ತಮ್ಮ ಪ್ಲಾಟ್ ಮಾಲಕರ ಜೊತೆಯಲ್ಲಿ ಯೇನಪೋಯಾ ಆಸ್ಪತ್ರಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದ ಹೆಂಡತಿಯನ್ನು ನೋಡಿದಾಗ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಹೆಚ್ಚಿನ ಚಿಕಿತ್ಸೆಯ ಬಗ್ಗೆ ತುರ್ತು ನಿಗಾ ಘಟಕಕ್ಕೆ ಕರೆದುಕೊಂಡು ಹೋದ ನಂತರ ಸಮಯ ಸುಮಾರು 11.56 ಗಂಟೆಗೆ ಪಿರ್ಯಾದಿದಾರರ ಹೆಂಡತಿಯು ಮೃತ ಪಟ್ಟಿರುವುದಾಗಿ ಚಿಕೆತ್ಸೆ ನೀಡುತ್ತಿದ್ದ ವೈದ್ಯರು ತಿಳಿರುತ್ತಾರೆ. ಪಿರ್ಯಾದಿದಾರರ ಹೆಂಡತಿಗೆ ಅಪಘಾತ ಪಡಿಸಿದ ಬೈಕ ಸವಾರನ ಹೆಸರನ್ನು ವಿಚಾರಿಸಲಾಗಿ ಗಗನ್  ಎಂದಾಗಿದ್ದು ಬೈಕ್ ನಂಬ್ರ  KL 14 AB 2865 ನೇ ಆಗಿದ್ದು ಸದ್ರಿ ಬೈಕ್ ಸವಾರನ ಮೇಲೆ ಅತಿ ವೇಗ ಮತ್ತು ನಿರ್ಲಕ್ಷ್ಯತನದಿಂದ ಬೈಕ್ ಚಲಾಯಿಸಿಕೊಂಡು ಡಿಕ್ಕಿ ಹೊಡೆದದ್ದೆ ಕಾರಣವಾಗಿರುವದರಿಂದ ಬೈಕ್ ಸವಾರನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ.

Bajpe PS

ಪಿರ್ಯಾದಿ Noushad Hussain ದಾರರ ಮಗ ಅಬ್ದುಲ್ ರಕೀಬ್ ಹುಸೇನ್ ಪ್ರಾಯ 7 ವರ್ಷ ಎಂಬಾತನು  ದಿನಾಂಕ 23.10.2023 ರಂದು ಸಂಜೆ ಸುಮಾರು 6-10 ಗಂಟೆಗೆ ಮದರಸಾ ಮುಗಿಸಿ ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಬಜಪೆ ಗ್ರಾಮದ ಓಲ್ಡ್ ಏರ್ಪೋರ್ಟ್ ರಸ್ತೆಯ ARCO INDUSTRIES ಬಳಿಯಲ್ಲಿ ತಲುಪುವಾಗ  ಕಿನ್ನಿಪದವು ಜಂಕ್ಷನ್ ಕಡೆಯಿಂದ ಮುರಾ ಜಂಕ್ಷನ್ ಕಡೆ ಸಾರ್ವಜನಿಕ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಹೋಗುತ್ತಿದ್ದ ಕಾರ್ ನಂಬ್ರ ಜೆ.ಎ-19-ಎಮ್ಇ-6879 ನೇ ನಂಬ್ರದ ಕಾರು ಚಾಲಕ ಗುರುಪ್ರಸಾದ್ ರವರು ಡಿಕ್ಕಿ ಹೊಡೆದಿರುವುದರಿಂದ ಮಗುವಿನ ಕೈ, ಕಾಲುಗಳಿಗೆ ಗಾಯಗಳಾಗಿರುತ್ತವೆ ಎಂಬಿತ್ಯಾದಿಯಾಗಿ ಪಿರ್ಯಾದಿದಾರರು ನೀಡಿದ ದೂರಿನ ಸಾರಾಂಶ.

Mangalore South PS

ಪಿರ್ಯಾದು FIROZ SATTAR PATNI ದಾರರು ದಿನಾಂಕ 01-09-2023 ರಂದು KA20 MD 8170 ನೇ ಕಿಯಾ ಸೆಲ್ ಟೋಸ್ ಕಾರನ್ನು ಉಡುಪಿ ನಗರದ ಜೋಡುಕಟ್ಟೆ ಎಂಬಲ್ಲಿ ಉಪಯೋಗಿಸಿದ ಕಾರುಗಳನ್ನು ವ್ಯವಹಾರ ಮಾಡುವ ಸಂಸ್ಥೆಯಾಗಿರುವ UDUPI CARS ನಿಂದ 11,00,000/-ವನ್ನು ಪಾವತಿಸಿ ಕ್ರಯಕ್ಕೆ ಪಡಕೊಂಡಿರುತ್ತಾರೆ. ಆ ಸಂದರ್ಭದಲ್ಲಿ ಕಾರಿನ ಮಾಲಕತ್ವದ ನೊಂದಣಿ ಪ್ರಮಾಣ ಪತ್ರದ ಪ್ರತಿ ಮತ್ತು ಇನ್ಸುರೆನ್ಸ್ ಪಾಲಿಸಿಯ ಪ್ರತಿಯನ್ನು ಕೊಟ್ಟಿರುತ್ತಾರೆ. ಸದ್ರಿ ಕಾರಿನ ಮಾಲಕತ್ವವನ್ನು ಅವರೇ ಪಿರ್ಯಾದಿದಾರರಿಗೆ ಮಾಡಿಸಿಕೊಡುವುದಾಗಿ ಮೂಲ ಪ್ರತಿಯನ್ನು ಅವರ ವಶದಲ್ಲಿ ಇಟ್ಟುಕೊಂಡು ಪಿರ್ಯಾದಿದಾರರ ಹೆಸರಿಗೆ ವರ್ಗಾಯಿಸಲು ಬೇಕಾದ ದಾಖಲೆ ಪತ್ರಗಳಿಗೆ ಪಿರ್ಯಾದುದಾರರ ಸಹಿಯನ್ನು ಪಡೆದುಕೊಂಡಿರುತ್ತಾರೆ ಹಾಗೂ ಕಾರನ್ನು ಪಿರ್ಯಾದಿದಾರರ ವಶಕ್ಕೆ ಕೊಡುವ ಸಂದರ್ಭದಲ್ಲಿ ಕಾರಿನ ಒಂದು ಕೀ ಯನ್ನು ಪಿರ್ಯಾದುದಾರರಿಗೆ ಕೊಟ್ಟಿದ್ದು ಇನ್ನೊಂದು ಕೀ ಕೇಳಿದಲ್ಲಿ ಬ್ಯಾಂಕ್ ನಲ್ಲಿದ್ದು ಸದ್ರಿ ವಾಹನಕ್ಕೆ ತೆಗೆದಿರುವ ಲೋನನ್ನು ಪಾವತಿ ಮಾಡಿಸಿ ವಾಹನದ ಮಾಲಕತ್ವವನ್ನು ಪಿರ್ಯಾದಿದಾರರ ಹೆಸರಿಗೆ ವರ್ಗಾಹಿಸಿದ ನಂತರ ಅದನ್ನು ತೆಗೆದುಕೊಡುವುದಾಗಿ ಭರವಸೆ ನೀಡಿದ ಪ್ರಕಾರ ಪಿರ್ಯಾದಿದಾರರು ಕಾರನ್ನು ತೆಗೆದುಕೊಂಡು ಬಂದಿದ್ದು ಸದ್ರಿ ಕಾರನ್ನು ದಿನಾಂಕ 18-10-2023 ರಂದು ಪಿರ್ಯಾದಿದಾರರಿಗೆ ಕಾರಿನ ಮಾಲಕತ್ವನ್ನು ವರ್ಗಾಯಿಸಿದ ಬಗ್ಗೆ ಆರ್. ಸಿ.  ಕಾರ್ಡನ್ನು ಪಡೆಯುವರೇ ಮಂಗಳೂರಿನಗ ಆರ್.ಟಿ. ಓ. ಕಛೇರಿಗೆ ಬರುವಂತೆ ಅವರ ಏಜೆಂಟ್ ಕರೆ ಮಾಡಿದ್ದು  ಪಿರ್ಯಾದಿದಾರರು ವ್ಯಾಪಾರ ನಿಮಿತ್ತ ಗುಜರಾತಿಗೆ ಹೋಗಿದ್ದ ಕಾರಣ ಪಿರ್ಯಾದಿದಾರರ ಮಗ ಡಾನೀಷ್ ಹೋಗಿ ಪಡಕೊಂಡಿದ್ದು  ದಿನಾಂಕ 20-10-2023 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದುದಾರರ ಮಗ ವ್ಯಾಪಾರ ನಿಮಿತ್ತ ಪುತ್ತೂರಿಗೆ ಹೋಗುವರೇ ಕಾರನ್ನು ತೆಗೆಯಲು ಶೆಡ್ ಗೆ ಹೋದ ಸಂಧರ್ಭದಲ್ಲಿ ಕಾರು ಶೆಡ್ ನಲ್ಲಿ ಕಾಣದೇ ಇದ್ದ ಕಾರಣ ಪಿರ್ಯಾದುದಾರರ ಮಗ ಡಾನೀಷ್ ನು ಅವರ ಪ್ಲಾಟ್ ನ ಸಿಸಿ ಟಿವಿ ಪರೀಕ್ಷಿಸಿದ್ದು ಕಾರನ್ನು 20-10-2023 ರಂದು 07-45 ಗಂಟೆಗೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಪಿರ್ಯಾದುದಾರರಿಗೆ ತಿಳಿಸಿರುತ್ತಾರೆ. ಸದ್ರಿ ಕಾರಿನ ಒಂದು ಕೀಯನ್ನು ಪಿರ್ಯಾದುದಾರರಿಗೆ ಕೊಡದೇ ಇದ್ದು UDUPI CARS ಸಂಸ್ಥೆ ಮತ್ತು ಕಾರಿನ ಹಿಂದಿನ ಮಾಲಕರ ಮೇಲೆ ಸಂಶಯವಿರುತ್ತದೆ. ಎಂಬಿತ್ಯಾದಿಯಾಗಿರುತ್ತದೆ.

               

ಇತ್ತೀಚಿನ ನವೀಕರಣ​ : 25-10-2023 07:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080