ಅಭಿಪ್ರಾಯ / ಸಲಹೆಗಳು

Crime Report in : Mangalore East Traffic PS              

ದಿನಾಂಕ; 24/12/2023 ರಂದು ಸಾಯಂಕಾಲ  ಪಿರ್ಯಾದಿ ಮುತ್ತು ಕುಮಾರ್  ರವರು ತಮ್ಮ ಸ್ನೇಹಿತ ಜಮಾನ್ ಯಾದವ್ ನೊಂದಿಗೆ ನೊಂದಣಿ ಸಂಖ್ಯೆ: KA-51-AA-3032 ನೇ ಗೂಡ್ಸ ವಾಹನವನ್ನು ಚಲಾಯಿಸಿಕೊಂಡು  ಮಂಗಳೂರಿಗೆ  ಬಂದಿದ್ದು ಪಡೀಲ್ ನಿಂದ ಬಿಕರ್ನಕಟ್ಟೆ ಕಡೆಗೆ ಹಾದು ಹೋಗಿರುವ ರಾ ಹೆ-73 ನೇ ಡಾಮಾರು ರಸ್ತೆ ಪಕ್ಕದಲ್ಲಿ  ಆರ್ಯ ದುರ್ಗಾ ಹೊಟೇಲಗೆ   ಹೋಗಿ ಟೀ ಕುಡಿದು ವಾಪಸ್ಸು  ನಡೆದು ಕೊಂಡು ಗಾಡಿಯ ಹತ್ತಿರ  ಹೋಗುವಾಗ KA-19-MG-9810 ನೇ ನಂಬ್ರದ ಕಾರು ಚಾಲಕ  ಮುಂದೆ ಹೋಗುತ್ತಿದ್ದ ದ್ವಿ ಚಕ್ರ ವಾಹನವನ್ನು ಓವರ್ ಟೆಕ್ ಮಾಡುವ ಭರದಲ್ಲಿ ರಸ್ತೆಯನ್ನು ಬಿಟ್ಟು ಕಾರು ಚಾಲಕನ ನಿಯಂತ್ರಣ ತಪ್ಪಿ ಮಣ್ಣು ಕಾಗಕ್ಕೆ  ಬಂದಿದ್ದು ನಡೆದು ಕೊಂಡು ಹೋಗುತ್ತಿದ್ದ  ಪಿರ್ಯಾದಿದಾರರಿಗೂ ಮತ್ತು ಸ್ನೇಹಿತನಿಗೂ ಡಿಕ್ಕಿ ಹೊಡಿದಿದ್ದು ಈ ಡಿಕ್ಕಿ  ಪರಿಣಾಮ  ರಸ್ತೆಗೆ ಬಿದ್ದು  ಜಾಮ್ನ ಯಾದವರವರಿಗೆ ಎಡಕಾಲಿನ ಪಾದಕ್ಕೆ  ರಕ್ತಗಾಯ ವಾಗಿದ್ದು  ಪಿರ್ಯಾದಿದಾರರಿಗೆ ಬಲ ಮೊಣಕೈಗೆ ತರುಚಿದ ಗಾಯ ಮತ್ತು ಬಲಕಾಲಿನ ಮೊಣಗಂಟಿನ ಬಳಿ ಗುದ್ದಿ ರೀತಿಯ ಗಾಯವಾಗಿದ್ದು ಅಪಘಾತ ಪಡಿಇದ ಕಾರು ಚಾಲಕನೆ  ಚಿಕಿತ್ಸೆ ಬಗ್ಗೆ ಕೆ,ಎಮ್ .ಸಿ ಆಸ್ಪತ್ರೆ ಗೆ ಕರೆದು ಕೊಂಡು ಹೋಗಿದ್ದು .ಪರೀಕ್ಷಿಸಿದ ವೈದ್ಯರು ಜಮ್ನ  ಯಾದವ ರವರಿಗೆ ಹೋರ ರೋಗಿಯಾಗಿ  ಚಿಕಿತ್ಸೆ ನೀಡಿರುತ್ತಾರೆ.ಪಿರ್ಯಾದಿದಾರರನ್ನು ಪರೀಕ್ಷಿಸಿ ಬಲಕಾಲಿನ ಮಣಿಗಂಟಿಗೆ ಮೂಳೆ ಮೂರಿತವಾಗಿರುವುದಾಗಿ ತಿಳಿಸಿ ಹೆಚ್ಚಿನ  ಚಿಕಿತ್ಸೆ ಬಗ್ಗೆ ಅತ್ತಾವರ   ಕೆ,ಎಮ್ .ಸಿ ಆಸ್ಪತ್ರೆ ಗೆ ಕರೆದು ಕೊಂಡು ಹೋಗಿದ್ದು .ಪರೀಕ್ಷಿಸಿದ ವೈದ್ಯರು ಶಸ್ತ್ರ ಚಿಕಿತ್ಸೆ ಅವಶ್ಯವಿರುವುದಾಗಿ ತಿಳಿಸಿರುತ್ತಾರೆ. ನನಗೆ ಮಂಗಳೂರಿನಲ್ಲಿ  ಯಾರು ಪರಿಚಯದವರು ಇಲ್ಲದ ಕಾರಣ  ಶಸ್ತ್ರ ಚಿಕಿತ್ಸೆಯನ್ನು ಊರಲ್ಲಿ ಮಾಡಿಸುವುದಾಗಿ  ನಿರ್ಧರಿಸಿದ್ದು ಮನೆಯವರೊಂದಿಗೆ ಮತ್ತು ಗಾಡಿ ಮಾಲೀಕರೊಂದಿಗೆ ಮಾತನಾಡಿ ಈ ದಿನ ತಡವಾಗಿ ದೂರು ನೀಡುವುದಾಗಿದೆ. ಆದರಿಂದ KA-19-MG-9810 ನೇ ನಂಬ್ರದ ಕಾರು ಚಾಲಕ ಶ್ರೀಕೃಷ್ಣ ರವರ ಮೇಲೆಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ.

Ullal PS

ಪಿರ್ಯಾದಿ Ranjith Kumar  ದಿನಾಂಕ 25-12-2023 ರಂದು  ಬೆಳಗ್ಗೆ ಸುಮಾರು 09-45 ಗಂಟೆಯ ಸಮಯಕ್ಕೆ ಬಾತ್ಮಿದಾರರೊಬ್ಬರು ನೀಡಿದ ಖಚಿತ ಮಾಹಿತಿ ಏನೆಂದರೆ ಸೋಮೇಶ್ವರ ಗ್ರಾಮದ ಉಚ್ಚಿಲ ರೈಲ್ವೆ ಟ್ರ್ಯಾಕ್ ಹಿಂಬದಿಯ ಉಚ್ಚಿಲ ಗುಡ್ಡೆ ಎಂಬಲ್ಲಿನ ಸಾರ್ವಜನಿಕ ಖಾಲಿ ಸ್ಥಳದಲ್ಲಿ ಪ್ರಕಾಶ್, ಮುತ್ತುರಾಜ್ ,ಅಮರೀಶ್,ನಾಗರಾಜ್, ಇತರರು ಸೇರಿಕೊಂಡು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಎಲೆಗಳಿಂದ “ಉಲಾಯಿ-ಪಿದಾಯಿ” ಎಂಬ ಜುಗಾರಿ ಆಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಬಗ್ಗೆ ಖಚಿತಪಡಿಸಿಕೊಳ್ಳಲು ಬಾತ್ಮಿದಾರರು ತಿಳಿಸಿದ ಸ್ಥಳಕ್ಕೆ ಬೆಳಗ್ಗೆ 10-00 ಗಂಟೆಗೆ ಪಿರ್ಯದಿದಾರರು ಮತ್ತು ಸಿಪಿಸಿ 941 ಅಶೋಕ್ ಕುಮಾರ್  ಹಾಗೂ ಸಿ ಪಿ ಸಿ 2412 ಅಕ್ಬರ್ ಹೋಗಿ ದೂರದಿಂದ ಗುಪ್ತವಾಗಿ ಗಮನಿಸಲಾಗಿ ಬಾತ್ಮಿದಾರರು ತಿಳಿಸಿದಂತೆ ಸ್ಥಳದಲ್ಲಿ ಸುಮಾರು 7-8 ಜನರು ಸುತ್ತಲೂ ಗುಂಪಾಗಿ ಸೇರಿಕೊಂಡು “ಉಲಾಯಿ-ಪಿದಾಯಿ” ಎಂಬುದಾಗಿ ಹೇಳುತ್ತಾ ನಸೀಬಿನ ಜುಗಾರಿ ಆಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡಿದ್ದು ಈ ಬಗ್ಗೆ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕೋರಿಕೆ ಎಂಬುದಾಗಿ ನೀಡಿದ ಪಿರ್ಯಾದಿಯಂತೆ ಠಾಣಾ ಎನ್.ಸಿ.ಆರ್ ನಂಬ್ರ 1157/1059/2023 ರೀತಿಯಂತೆ ಅಸಂಜ್ಞೇಯ ಪ್ರಕರಣವನ್ನು ದಾಖಲಿಸಿಕೊಂಡು ಈ ಬಗ್ಗೆ ಸಂಜ್ಞೇಯ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುವ ಬಗ್ಗೆ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡಿರುವುದಾಗಿದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 25-12-2023 02:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080