ಅಭಿಪ್ರಾಯ / ಸಲಹೆಗಳು

Crime Report in :   Barke PS

 ಶ್ರೀಮತಿ ಮರಿಯ ಜೆನೆವಿಯ ಸಾಲ್ಡಾನಾ ರವರು ಅವರ ಮನೆ ಕೆಲಸಕ್ಕೆ ಮಹಿಳೆ ಬೇಕಾಗಿರುವುದರಿಂದ 2019 ನೇ ಇಸವಿಯಲ್ಲಿ ಅವರ ಪರಿಚಯದ ಕುಟಂಬದ ಮನೆಯಲ್ಲಿ ಕೆಲಸದಲ್ಲಿರುವ ಹಾಸನ ನಿವಾಸಿ ಪ್ರೇಮ ಎಂಬವರ ಮುಖೇನಾ ದೇವಿಕಾ ಪ್ರಾಯ 22 ವರ್ಷ ತಂದೆ ಐ.ಎನ್. ನಾಗರಾಜ್ ವಾಸ: ಬಿಕ್ಕೋಡು ಗ್ರಾಮ  ಪಂಚಾಯತ್ ಹಾಸನ ನಿವಾಸಿ ದೇವಿಕಾ ಇವರನ್ನು ಅವರ ತಂದೆ ತಾಯಿಯೊಂದಿಗೆ ಪಿರ್ಯಾದಿ ಮನೆಗೆ  ಕರೆದುಕೊಂಡು ಬಂದಿದ್ದು ಮನೆ ಕೆಲಸಕ್ಕೆ ಬಿಟ್ಟು ಹೋಗಿರುತ್ತಾರೆ. ಸದ್ರಿ ದೇವಿಕಾಳು ಫಿರ್ಯಾದಿಯ ಮನೆಯ ಕೆಲಸಕ್ಕೆ ಇದ್ದವರು  ದಿನಾಂಕ:23-01-24ರಂದು ಮಂಗಳವಾರ ಅವಳು ಊರಿಗೆ ಹೋಗುತ್ತೇನೆ ಎಂದು ತಿಳಿಸಿದಂತೆ ಫಿರ್ಯಾದಿದಾರರು ಅವರ ಪರಿಚಯದ ರೋಶನ್ ರವರ ರಿಕ್ಷಾದಲ್ಲಿ ದೇವಿಕಾಳನ್ನು ಕೆ.ಎಸ್.ಆರ್.ಟಿ ಬಸ್ ನಿಲ್ದಾಣಕ್ಕೆ ಕಳುಹಿಸಿಕೊಟ್ಟಂತೆ ರೋಶನ್ ರವರು ತನ್ನ ರಿಕ್ಷಾದಲ್ಲಿ ಬೆಳಿಗ್ಗೆ 06-55 ಗಂಟೆಗೆ ಕೆ.ಎಸ್.ಆರ್.ಟಿ ಬಸ್ ನಿಲ್ದಾಣ ಮಂಗಳೂರು ತಲುಪಿ ಸಕಲೇಶ್ ಪುರಕ್ಕೆ ಹೋಗುವ ಬಸ್ಸಿನಲ್ಲಿ ಕುಳ್ಳಿರಿಸಿ ಹೋಗಿದ್ದು, ಸದ್ರಿ ರೋಶನ್ ರವರು ಈ ಬಗ್ಗೆ ಫಿರ್ಯಾದಿದಾರರಿಗೆ ವಾಪಾಸು ಅವರಿಗೆ ಮಾಹಿತಿಯನ್ನು ನೀಡಿರುತ್ತಾರೆ. ನಂತರ ಸಂಜೆ 4-00 ಗಂಟೆಗೆ ದೇವಿಕಾಳ ತಂದೆ ನಾಗರಾಜು ರವರು ಫಿರ್ಯಾದಿಗೆ ಪೋನ್ ಮಾಡಿ ದೇವಿಕಾ ಇನ್ನೂ ಮನೆಗೆ ಬಂದಿರುವುದಿಲ್ಲವಾಗಿ ತಿಳಿಸಿರುತ್ತಾರೆ. ಸದ್ರಿ ದೇವಿಕಾಳು ಅವಳ ಮನೆಗೆ ಹೋಗದೆ, ಸಂಬಂಧಿಕರ ಮನೆಗೆ ಹೋಗದೆ ಪಿರ್ಯಾದಿಯವರಿಗೆ ಪೋನ್ ಕರೆ ಮಾಡದೆ ಕಾಣೆಯಾಗಿರುತ್ತಾಳೆ ಎಂಬಿತ್ಯಾದಿ ಸಾರಾಂಶ.

ಕಾಣೆಯಾದವರ ಚಹರೆ

ಹೆಸರು : ಐ.ಎನ್ ದೇವಿಕಾ

ಪ್ರಾಯ:22 ವರ್ಷ

ಎತ್ತರ:  ಸುಮಾರು 5 ಅಡಿ

Traffic South Police Station                                               

ಫಿರ್ಯಾದಿದಾರರಾದ ನಿತಿನ್ ಎಂಬವರು ದಿನಾಂಕ 23/01/2024 ರಂದು ಸಂಜೆ  ಕೆಲಸ ಮುಗಿದ ಬಳಿಕ ಜಿಮ್ ಗೆ ಹೋಗಿ ವಾಪಾಸು ಮನೆ ಕಡೆಗೆ ತನ್ನ ಬಾಬ್ತು KA-19MM-0034 ನೇ ನಂಬ್ರದ ಕಾರನ್ನು ಚಲಾಯಿಸಿಕೊಂಡು ಹೊರಟು ರಾತ್ರಿ ಸುಮಾರು 10.40 ಗಂಟೆಗೆ ಜಪ್ಪಿನಮೊಗರುವಿನ ನೇತ್ರಾವತಿ ಸೇತುವೆಯ  ರಾ.ಹೆದ್ದಾರಿ 66 ರಲ್ಲಿ ತೊಕ್ಕೋಟು ಕಡೆಗೆ ಹೋಗುತ್ತಿದ್ದಂತೆ. ಅವರ ಮುಂದುಗಡೆಯಿಂದ ನೇತ್ರಾವತಿ ಸೇತುವೆಯಲ್ಲಿ ಹೋಗುತ್ತಿದ್ದ KA-19-J-5406 ನೇ ನಂಬ್ರದ ಮೋಟಾರ್ ಸೈಕಲ್ ನ್ನು ಅದರ ಸವಾರನಾದ  ಸುರೇಶ್ ಯು ಎಂಬಾತನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ನೇತ್ರಾವತಿ ಸೇತುವೆಯ ಬಲ ಬದಿಯ ತಡೆ ಗೋಡೆಗೆ ಡಿಕ್ಕಿ ಹೊಡೆದು, ಮೋಟಾರ್ ಸೈಕಲ್ ತಡೆಗೋಡೆಗೆ ಒರೆಸಿಕೊಂಡು ಸವಾರನು ಮೋಟಾರ್ ಸೈಕಲ್ ಸಮೇತ ಕಾಂಕ್ರೀಟ್ ರಸ್ತೆಗೆ ಬಿದ್ದ  ಪರಿಣಾಮ ಮೋಟಾರ್ ಸೈಕಲ್ ಸವಾರನ ಬೆನ್ನಿಗೆ ಬಲಭಾಗಕ್ಕೆ ತರಚಿದ ಗಾಯವಾಗಿದ್ದು, ತಲೆಗೆ ತೀವ್ರ ರಕ್ತ ಗಾಯವಾಗಿ ಪ್ರಜ್ಞಾಹೀನನಾಗಿದ್ದವನನ್ನು ಫಿರ್ಯಾದಿದಾರರು ಅಲ್ಲಿ ಸೇರಿದ ಜನರೊಂದಿಗೆ ಉಪಚರಿಸುತ್ತಿದ್ದಂತೆ, ಅಲ್ಲಿಗೆ ಬಂದ ಪೊಲೀಸರೊಬ್ಬರು ಅಲ್ಲಿ ಸೇರಿದ ಜನರೊಂದಿಗೆ ಸೇರಿ ಗಾಯಗೊಂಡ  ಸುರೇಶ್ ನನ್ನು ಅದೇ ದಾರಿಯಲ್ಲಿ ಬರುತ್ತಿದ್ದ ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಮುಂದೆ ಹಾಜರುಪಡಿಸಿದಾಗ ಗಂಭೀರ ಗಾಯಗೊಂಡ ಸುರೇಶ್ ನನ್ನು  ಈ ದಿನ ದಿನಾಂಕ 24/01/2024 ರಂದು ಮುಂಜಾನೆ 00.15 ಗಂಟೆಗೆ ವೈದ್ಯರು ಪರೀಕ್ಷಿಸಿ, ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಅಪಘಾತಕ್ಕೆ KA-19-J-5406 ನೇ ನಂಬ್ರದ ಮೋಟಾರ್ ಸೈಕಲ್ ಸವಾರನಾದ ಸುರೇಶ್ ಯು (30) ಎಂಬಾತನ ದುಡುಕುತನ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾಗಿ ಎಂಬಿತ್ಯಾದಿ .

Mangalore West Traffic PS               

ದಿನಾಂಕ;24-01-2024 ರಂದು ಪಿರ್ಯಾಧಿ SUHANA ದಾರರು ಮಾವ ಮತ್ತು ಅತ್ತೆಯವರೊಂದಿಗೆ ಕಂಕನಾಡಿ ಯೆನಪೋಯ ಆಸ್ಪತ್ರೆಯಲ್ಲಿ ಮಾವ ಮತ್ತು ಅತ್ತೆಯ ಆರೋಗ್ಯ ತಪಾಸಣೆ ನಡೆಸಿದ ನಂತರ ಮನೆ ಕಡೆ ಹೋಗುವರೇ KA-19-MC-4965 ನೇ ನೊಂದಣಿ ನಂಬ್ರದ ಕಾರಿನಲ್ಲಿ ಪ್ರಯಾಣಿಸುತ್ತಿದ್ದು ಆ ಸಮಯ ಕಾರಿನ ಚಾಲಕರಾಗಿ ಆಯಿಷಾ ಅಸೈಫ್ ರವರು ಚಲಾಯಿಸುತ್ತಿದ್ದರು ಸೈಂಟ್  ಆಗ್ನೇಸ್ ಕಾಲೇಜಿನ ಬಳಿ ಆಯಿಷಾ ಅಸೈಪ್ ರವರ ತಂಗಿ ರಶೀದ್ ರಾಫಿಯ ರವರನ್ನು ಕಾರಿನ ಹಿಂಬಂದಿ ಸೀಟಿ ನಲ್ಲಿ ಕುಳ್ಳಿರಿಸಿಕೊಂಡು ಕೆಪಿಟಿ ಮಾರ್ಗವಾಗಿ ಸುರತ್ಕಲ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಿರುವ ಸಮಯ ಸುಮಾರು ಮದ್ಯಾಹ್ನ 01;30 ಗಂಟೆಗೆ ಕೊಟ್ಟಾರ ಚೌಕಿಯ ರಸ್ತೆಯ ಬದಿಯಲ್ಲಿರುವ ಫೋರ್ಸ್ ಶೋ ರೂಮ್ ಬಳಿ ತಲುಪುತ್ತಿದಂತೆ ಹಿಂಬದಿಯಿಂದ ಅಂದರೆ ಕೆಪಿಟಿ ಕಡೆಯಿಂದ KL-11-BD-2534 ನಂಬ್ರದ ಲಾರಿಯೊಂದನ್ನು ಅದರ ಚಾಲಕನು ನಿರ್ಲಕ್ಷತನ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾಧಿದಾರರು ಪ್ರಯಾಣಿಸುತ್ತಿದ್ದ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಹೊಡೆದು ಮೇಲಿನಿಂದ ವಿದ್ಯುತ್ ಕಂಬಕ್ಕೆ ತಾಗಿ ಪಕ್ಕದ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾಧಿದಾರರ ಮಾವ ಅಬ್ದುಲ್ ರಜಾಕ್ ರವರಿಗೆ ತಲೆಯ ಹಿಂಬದಿಗೆ ರಕ್ತ ಗಾಯ ಹಾಗೂ ಎಡಬದಿಯ ಪಕ್ಕೆಲುಬು ಮೂಳೆ ಮುರಿತದ ಗಾಯ ಹಾಗೂ ಅತ್ತೆ ಆಸೀಯಾರವರಿಗೆ ಸೊಂಟದ ಬಳಿ ಗುದ್ದಿದ ನಮೂನೆಯ ಗಾಯ ಹಾಗೂ ರಶೀದ್ ರಾಫಿಯ ರವರಿಗೆ ಎಡ ಹಣೆ ಹಾಗೂ ಸೊಂಟದ ಬಳಿ ಗುದ್ದಿದ ನಮೂನೆಯ ಗಾಯ ಮತ್ತು ಕಾರನ್ನು ಚಲಾಯಿಸುತ್ತಿದ್ದ ಆಯಿಷಾ ಅಸೈಫ್ ರವರಿಗೆ ಹೊಟ್ಟೆಯ ಬಳಿ ಗುದ್ದಿದ ಗಾಯವಾಗಿರುತ್ತದೆ ಈ ಅಪಘಾತಪಡಿಸಿದ ಲಾರಿ ಚಾಲಕನು ಅಪಘಾತಪಡಿಸಿದ ಸ್ಥಳದಿಂದ ಲಾರಿ ಸಮೇತ ಪರಾರಿಯಾಗಿರುತ್ತಾರೆ ಎಂಬಿತ್ಯಾದಿ

Panambur PS

ದಿನಾಂಕ 16.01.2024 ರಂದು ಪಿರ್ಯಾದಿದಾರರ ಬಾಬ್ತು  ನೇ ಮೊಬೈಲ್ ನಂಬ್ರಕ್ಕೆ  + 639380857608 ನೇ ನಂಬ್ರದಿಂದ ಒಂದು ಎಸ್ ಎಂ ಎಸ್ ಬಂದಿದ್ದು, ಅದನ್ನು ತೆರೆದು ನೋಡಲಾಗಿ, ಪಾರ್ಟ್ ಟೈಂ ಕೆಲಸಕ್ಕಾಗಿ ಸಂಪರ್ಕಿಸುವಂತೆ ಒಂದು ಲಿಂಕ್ ಇದ್ದು, ಅವರು ಲಿಂಕ್ ತೆರೆದು ನೋಡಲಾಗಿ, ಅದು ನೇರವಾಗಿ + 639380857608 ನಂಬ್ರದ ವಾಟ್ಸ್ ಆಪ್ ಚಾಟ್ ಗೆ ಹೋಗಿದ್ದು, ತಾನು ಬರ್ತಾ, ತಾನು ನಿಮ್ಮ ಹೆಚ್ ಆರ್ ಅಸಿಸ್ಟೆಂಟ್ ಎಂದು ಪರಿಚಯಿಸಿದವರು ಪಾರ್ಟ್ ಟೈಮ್ ಜಾಬ್ ಕೊಡುವುದಾಗಿ, ತಿಳಿಸಿ, ಪಿರ್ಯಾದಿದಾರರ ವಿವರಗಳನ್ನು ಪಡೆದು, ಅವರನ್ನು ಬುಸಿನೆಸ್ ಪಬ್ಲಿಷರ್ ಅನಾಲಿಸಿಸ್ಟ್ ಆಗಿ ನೇಮಕ ಮಾಡಿದೆ ತಿಳಿಸಿ ತಮ್ಮ ಪ್ರಾಡಕ್ಟ್ ಗಳನ್ನು ಅವರದೇ ಪೇಜ್ ನಲ್ಲಿ ಪ್ರಮೋಟ್ ಮಾಡುವಂತೆಯೂ, ಇದರಿಂದ  ದಿನಕ್ಕೆ 300 ರಿಂದ 1000 ರೂ ವರೆಗೂ ಕಮಿಷನ್ ಗಳಿಸಬಹುದು ಎಂದು ತಿಳಿಸಿ, ಅವರೇ ಕಳುಹಿಸಿದ ಲಿಂಕ್ ಮೂಲಕ  openstaff.in ಎಂಬ ವೆಬ್ ಪೇಜ್ ನಲ್ಲಿ ಅವರು ತಿಳಿಸಿದಂತೆ ಟಾಸ್ಕ್ ಗಳನ್ನು ಮಾಡಿರುತ್ತೇನೆ. ದಿನಾಂಕ 17.01.2024 ರಂದು ಪಿರ್ಯಾದಿದಾರರನ್ನು Brandemic customer service  ಎಂಬ ಟೆಲಿಗ್ರಾಮ್ ಎಂಬ ಸಾಮಾಜಿಕ ಜಾಲತಾಣ ಪ್ಲಾಟ್ ಪಾರ್ಮ್ ನ ಗ್ರೂಪ್ ಗೆ ಸೇರಿಸಿ, ಅದರಲ್ಲಿ ಅವರು ಟಾಸ್ಕ್ ನ ಕಮಿಷನ್ ಪಡೆಯಲು ಬ್ಯಾಂಕ್ ಅಕೌಂಟ್ ನಂಬ್ರ ಕೇಳಿದಂತೆ, ಹೇಳಿದಂತೆ openstaff.in ಆಪ್ ನಲ್ಲಿಯೇ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದ್ದು, ಆ ದಿನ ಖಾತೆಗೆ 1,500/- ಹಣ ಜಮಾವಣೆ ಮಾಡಿರುತ್ತಾರೆ.

            ದಿನಾಂಕ 18.01.2024 ರಂದು  Brandemic customer service  ಟೆಲಿಗ್ರಾಮ್ ನಲ್ಲಿ ಕೆಲಸ ಮಾಡಲು ಟಾಸ್ಕ್ ಗಳನ್ನು ನೀಡಿದ್ದು, ಮೊದಲ ಬಾರಿಗೆ ರೂ 100 ಹಣವನ್ನು ಅವರ ಯುಪಿಐ ಕೋಡ್ ಗೆ ವರ್ಗಾಯಿಸುವಂತೆ ತಿಳಿಸಿದಂತೆ ಪಿರ್ಯಾದಿದಾರರು ಹಣ ವರ್ಗಾಯಿಸಿದ್ದು, ನಂತರ ಟಾಸ್ಕ್ ಗಳನ್ನು ನೀಡುತ್ತಾ, ಹಣವನ್ನು ವರ್ಗಾಯಿಸುವಂತೆ ತಿಳಿಸುತ್ತಾ, ಕಮಿಷನ್ ಮತ್ತು ಹಣವನ್ನು ಒಟ್ಟಿಗೆ ಮರಳಿಸುವುದಾಗಿ ಅವರು  ನಿಜವಾಗಿ ಜಾಬ್ ಕೊಡುವವರಂತೆ ನಂಬಿಸುತ್ತಿದ್ದರಿಂದ, ದಿನಾಂಕ 18.01.2024 ರಿಂದ ದಿನಾಂಕ 22.01.2024 ರವರೆಗೆ ಅವರ ಬೇರ ಬೇರೆ ಯುಪಿಐ ಗೆ ನನ್ನ ಹೆಚ್ ಡಿ ಎಫ್ ಸಿ ಬ್ಯಾಂಕ್ ನ ನೇ ನಂಬ್ರದ ಖಾತೆಯಿಂದ, ನನ್ನ ಮೊಬೈಲ್ ನಲ್ಲಿರುವ ಫೋನ್ ಪೇ ಮತ್ತು ಪೇಟಿಎಂ ಆ್ಯಪ್ ನಿಂದ ಹಂತಹಂತವಾಗಿ ಒಟ್ಟು 1,92,251/ ಹಣವನ್ನು ಕಳುಹಿಸಿರುತ್ತಾರೆ. ತಮ್ಮ ಗುರುತು ಪರಿಚಯ ಹೇಳದೇ, ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ,  ಮತ್ತು ಕಮಿಷನ್  ನೀಡುವುದಾಗಿ ನಂಬಿಸಿ, ಮೊಬೈಲ್ ಫೋನ್ ನಲ್ಲಿರುವ ಫೋನ್ ಪೇ ಮತ್ತು ಪೇಟಿಎಂ ನಿಂದ ಒಟ್ಟು 1,92,251/ ಹಣವನ್ನು ಪಡೆದುಕೊಂಡು, ಹಣವನ್ನು ಮತ್ತು ಕಮಿಷನ್ ನ್ನು ನೀಡದೇ ವಂಚಿಸಿದ ಅಪರಿಚಿತ ವ್ಯಕ್ತಿಗಳ ವಿರುಧ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಹಣವನ್ನು ದೊರಕಿಸಿ ಕೊಡಬೇಕಾಗಿ ವಿನಂತಿ. ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 26-01-2024 10:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080