ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

Mangalore South PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಶ್ರೀಮತಿ ವಸಂತಿ (60) ಗಂಡ:ಬಿ ಆನಂದ   ಎಂಬುವರು ದಿನಾಂಕ:25-02-2024 ರಂದು ಬೆಳಗ್ಗೆ 09.30 ಗಂಟೆಗೆ ಮಂಗಳೂರು ನಗರದ  ಪೆರಾರ್ ಕಾಲೋನಿ, ವೆಲೆನ್ಸಿಯಾ 2 ನೇ ಬಲ ಅಡ್ಡ ರಸ್ತೆ ಕಂಕನಾಡಿ  ಮನೆಯಿಂದ ಸ್ಟೇಟ್ ಬ್ಯಾಂಕಿಗೆ ಹೋಗುತ್ತೆನೆಂದು ಹೋಗಿದ್ದು ಮನೆಗೆ ಬಾರದೆ ಇದ್ದ ಕಾರಣ ಪಿರ್ಯಾದಿದಾರರು ನಿನ್ನೆ ಸಾಯಂಕಾಲ 6.45 ಗಂಟೆಗೆ ಅವರ ಮೊಬೈಲ್ ನಂಬರ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿರುತ್ತದೆ. ಅವರ ಬಗ್ಗೆ ಮಂಗಳೂರಿನ ವಿವಿಧ ಕಡೆಗಳಲ್ಲಿ ಹುಡುಕಾಡಿ ಮತ್ತು ಸಂಬಂಧಿಕರು ಮತ್ತು ಸ್ನೇಹಿತರನ್ನು ವಿಚಾರಿಸಲಾಗಿ ಈವರೆಗೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ತಿಳಿಸಿರುತ್ತಾರೆ. ಸದ್ರಿ ಕಾಣೆಯಾದ ಬಿ ಆನಂದ  (68)  ವರ್ಷ ರವರು ಈ ವರೆಗೂ ಮನೆಗೆ ಬಾರದೇ ಇರುವ ಕಾರಣ ಪತ್ತೆ ಮಾಡಿ ಕ್ರಮ ಜರೂಗಿಸುವರೇ ಕೋರಿಕೆ ಎಂಬಿತ್ಯಾದಿ

ಕಾಣೆಯಾದವರ ಚಹರೇ:-ಹೆಸರು- ಬಿ ಆನಂದ (ಬದಿಯಾರ್ ಕೂಟತ್ತಜೆ) 68 ವರ್ಷ, ಎತ್ತರ-6 ಅಡಿ,  ಬಣ್ಣ-ಗೋಧಿ ಮೈ ಬಣ್ಣ, ಸಾದಾರಣ ಶರೀರ, ಕೊಲು ಮುಖ  ಇರುತ್ತದೆ. ಮಾತನಾಡುವ ಭಾಷೆ- ಕನ್ನಡ.ತುಳು ಬಟ್ಟೆ: ನೀಲಿ ,ಕಪ್ಪು ಚಕ್ಸ್ ಶರ್ಟ್ ಹಾಗೂ ಕಂದು ಬಣ್ಣದ ಪ್ಯಾಂಟ್ ನ್ನು ಧರಿಸಿರುತ್ತಾರೆ

 

Mangalore South PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೇ, ದಿನಾಂಕ 26-02-2024 ರಂದು ಮಂಗಳೂರು ನಗರದ ಶಿವನಗರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪಿ ರಾಯ್ಡನ್ ಡಿಸೋಜಾ ಪ್ರಾಯ 19 ವರ್ಷ ತಂದೆ: ರಫೆಹೆಲ್ ವಾಸ: ಉಲ್ಲೋಡಿ ಅಂಚೆ, ಕೊಲ್ಲಂಗಾನ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ,ಸದ್ರಿ  ವ್ಯಕ್ತಿಯು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ತಪಾಸಣೆಗಾಗಿ ಎ.ಜೆ. ಆಸ್ಪತ್ರೆಯ ವೈಧ್ಯಾಧಿಕಾರಿಯವರ ಮುಂದೆ ಹಾಜರುಪಡಿಸಿ ಪರೀಕ್ಷೆಗೊಳಪಡಿಸಿದಾಗ, ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆರೋಪಿಯ ವಿರುದ್ದ ಕಲಂ 27 (ಬಿ) ಎನ್ ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ

 

Mangalore South PS

ಈ ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಫಾದರ್ ಜೆಬಿ ಕ್ರಾಸ್ತಾ (69) ಎಂಬುವರು ದಿನಾಂಕ:26-02-2024 ರಂದು ಠಾಣೆಗೆ ಬಂದು ವಿಶ್ಮಿತಾ ಡಿಸೋಜಾ  ಪ್ರಾಯ 18 ವರ್ಷ ರವರು ಪದವು ಕಾಲೇಜಿನಲ್ಲಿ 1ST YEAR BCA ಕಲಿಯುತ್ತಿದ್ದು ಇವರು ಮಂಗಳೂರು ನಗರದ  ಸಂತ ಅಂತೋನಿ ಆಶ್ರಮ ನಂದಿಗುಡ್ಡೆಯಿಂದ ಕಾಲೇಜಿಗೆ ಹೋಗುತ್ತೆನೆಂದು ಹೋಗದೆ ವೆನ್ಲಾಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಪುನಹಃ ಸಂತ ಅಂತೋನಿ ಆಶ್ರಮಕ್ಕೆ ಬಂದು ಆಶ್ರಮದಿಂದ ಸಮಯ ಬೆಳಿಗ್ಗೆ  10.15 ಕ್ಕೆ ಹೋಗಿದ್ದು ಮರಳಿ ಆಶ್ರಮಕ್ಕೆ ಬಾರದೆ ಇದ್ದ ಕಾರಣ ಪಿರ್ಯಾದಿದಾರರು ಅವರ ಬಗ್ಗೆ ಮಂಗಳೂರಿನ ವಿವಿಧ ಕಡೆಗಳಲ್ಲಿ ಹುಡುಕಾಡಿ ಮತ್ತು ತಂದೆ ತಾಯಿ ಹಾಗೂ ಸಂಬಂಧಿಕರು ಮತ್ತು ಸ್ನೇಹಿತರನ್ನು ವಿಚಾರಿಸಲಾಗಿ ಈವರೆಗೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ ತಿಳಿಸಿರುತ್ತಾರೆ

ಕಾಣೆಯಾದವರ ಚಹರೇ:-ಹೆಸರು- ವಿಶ್ಮಿತಾ ಡಿಸೋಜಾ  ಪ್ರಾಯ 18 ವರ್ಷ, ಎತ್ತರ-5.2 ಅಡಿ,  ಬಣ್ಣ-ಎಣ್ಣೆಗಪ್ಪು  ಮೈ ಬಣ್ಣ, ಶರೀರ-ಸಪೋರ ಶರೀರ, ದುಂಡು ಮುಖ  ಇರುತ್ತದೆ ಮಾತನಾಡುವ ಭಾಷೆ- ಕನ್ನಡ.ಇಂಗ್ಲಿಷ.ಕೊಂಕಣಿ ಬಟ್ಟೆ: ಹಸಿರು ಬಣ್ಣದ ಟಾಪ ನೀಲಿ ಬಣ್ಣದ ಜೀನ್ಸ್ ಪ್ಯಾಂಟ  ಬಟ್ಟೆಯನ್ನು ಧರಿಸಿರುತ್ತಾರೆ

 

Ullal PS   

ದಿನಾಂಕ.26-2-2024 ರಂದು 17:30  ಗಂಟೆಯ ಸಮಯಕ್ಕೆ  ಪಿರ್ಯಾದಿದಾರರಾದ ಉಳ್ಳಾಲ ಠಾಣಾ ಪಿಎಸ್ಐ ಪ್ರಾಣೇಶ್ ಕುಮಾರ್. ರವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಪೆರ್ಮನ್ನೂರು ಗ್ರಾಮದ  ಮಂಗಳೂರು ಒನ್ ಶಾಲೆಯ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಚಂದ್ರಶೇಖರ ಎಂಬಾತನು ನಿಷೇದಿತ ಮಾದಕ ವಸ್ತುವನ್ನು ಸೇವಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವವರನ್ನು ಮುಂದಿನ ಕ್ರಮದ ಬಗ್ಗೆ ದೇರಳಕಟ್ಟೆ ಜಸ್ಟೀಸ್ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ ತಪಾಸಣೆಗೆ ಒಳಪಡಿಸಿದಾಗ ಆರೋಪಿ ಚಂದ್ರಶೇಖರನು Tetrahydrocannabinol ಸೇವನೆ ಮಾಡಿರುವುದಾಗಿ ವೈದ್ಯಾಧಿಕಾರಿಯಿಂದ ದೃಡಪಟ್ಟಿರುವುದರಿಂದ ಆರೋಪಿಯ ವಿರುದ್ದ  ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ

ಇತ್ತೀಚಿನ ನವೀಕರಣ​ : 01-03-2024 10:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080