ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Mangalore West Traffic PS                

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿ SHEIKH ABDUL SATTAR ಇವರು ದಿನಾಂಕ 25-03-2024 ರಂದು  ಲಾರಿ ನಂಬ್ರ ಕೆಎ-19-ಎಡಿ-6308 ನೇದನ್ನು ಚಾಲನೆ ಮಾಡಿಕೊಂಡು ರಾ.ಹೆ 66 ನೇದರಲ್ಲಿ  ಪಂಪ್ವೆಲ್ ಕಡೆಯಿಂದ ಗೋವಾ ಕಡೆಗೆ  ಹೋಗುತ್ತಿರುವಾಗ  ಸಮಯ ಸುಮಾರು 15:20 ಗಂಟೆಗೆ ಕುಂಟಿಕಾನಾ ಪ್ಲೈ ಓವರ್ ದಾಟಿ  ಸ್ವಲ್ಪ ಎದುರು ಅಂದರೆ ಡಿ ಮಾರ್ಟ್ ಸುಪರ್ ಮಾರ್ಕೆಟ್ ಎದುರುಗಡೆ ತಲುಪಿದಾಗ ಪಿರ್ಯಾದಿದಾರರ  ಮುಂದೆ ಚಲಾಯಿಸುತ್ತಿದ್ದ ಕಾರು ಒಮ್ಮೇಲೆ ಬ್ರೇಕ್ ಹಾಕಿ ನಿಲ್ಲಿಸಿದಾಗ ಪಿರ್ಯಾದಿದಾರರು ಅಪಘಾತವನ್ನು ತಪ್ಪಿಸುವ ಸಲುವಾಗಿ ಬ್ರೇಕ್ ಹಾಕಿದ್ದು ಅದೇ ಸಮಯದಲ್ಲಿ ಲಾರಿಯ ಹಿಂಬದಿಯಿಂದ  ಬರುತ್ತಿದ್ದ ಕೆಎ19-ಇಎಸ್-8365 ನೇ ಬೈಕ್ ನ್ನು ಅದರ ಸವಾರ ಅರುಣಾಸಲಂ ರವರು ನಿರ್ಲಕ್ಷ್ಯತನ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಲಾರಿಯ ಹಿಂಬದಿಗೆ ಡಿಕ್ಕಿ ಪಡಿಸಿದ್ದು, ಪರಿಣಾಮ ಬೈಕ್ ಸವಾರನಿಗೆ ಮೂಗಿನ ಮೇಲೆ, ಹಣೆಯ  ಕೆಳಗೆ ಹಾಗೂ ಬಲಕಾಲಿನ ಮೊಣಕಾಲಿಗೆ ಗುದ್ದಿದ ನಮೂನೆಯ ಗಾಯವಾಗಿರುತ್ತದೆ ಎಂಬಿತ್ಯಾದಿ

 

Mangalore East Traffic PS                          

ಪಿರ್ಯಾದಿದಾರರಾದ ಅಬ್ದುಲ್ ಹಕೀಂ, ಪ್ರಾಯ-24 ವರ್ಷ ಎಂಬವರು ಮಂಗಳೂರಿನ ದೇರೆಬೈಲ್ ನಲ್ಲಿರುವ ಚಿಕನ್ ಅಂಗಡಿಯಲ್ಲಿ ಡಿಲಿವರಿ ಕೆಲಸವನ್ನು ಮಾಡಿಕೊಂಡಿದ್ದು, ದಿನಾಂಕ: 26-03-2024 ರಂದು ಬೆಳಿಗ್ಗೆ ಎಂದಿನಂತೆ ಚಿಕನ್ ಅಂಗಡಿಗೆ  ಹೋಗಿ ಕೆಲಸದಲ್ಲಿದ್ದವರು,ತನ್ನ ತಂದೆಯವರ ಬಾಬ್ತು KA-19-HH-6977 ನೇ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಹಂಪನಕಟ್ಟೆ ಕಡೆಯಿಂದ ಪಂಪ್ ವೆಲ್ ಕಡೆಗೆ ಹಾದು ಹೋಗುವ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಇಂದಿರಾ ಆಸ್ಪತ್ರೆಯನ್ನು ದಾಟಿ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ಬೆಳಿಗ್ಗೆ ಸಮಯ ಸುಮಾರು 09:00 ಗಂಟೆಗೆ ಕಂಕನಾಡಿ ಕಡೆಯಿಂದ ಹಂಪನಕಟ್ಟೆ ಕಡೆಗೆ KA-70 E-5415 ನೇ ನಂಬ್ರದ ಸ್ಕೂಟರನ್ನು ಅದರ ಸವಾರನು ಬಹಳ ವೇಗವಾಗಿ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಾ ತನ್ನ ಮುಂದೆ ಇದ್ದ ಕಾರೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ತೀವೃ ನಿರ್ಲಕ್ಷತನದಿಂದ ರಸ್ತೆಯ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರ್ ಗೆ ಮುಖಾಮುಖಿಯಾಗಿ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಅಪಘಾತಪಡಿಸಿದ ಸ್ಕೂಟರ್ ಸವಾರನು ಸ್ಕೂಟರ್ ಸಮೇತ ರಸ್ತೆಗೆ ಬಿದ್ದವರನ್ನು ಸಾರ್ವಜನಿಕರು ಚಿಕಿತ್ಸೆಯ ಬಗ್ಗೆ ಇಂ ದಿರಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಪಿರ್ಯಾದಿದಾರರನ್ನು ಪರೀಕ್ಷಿಸಿ ಬಲಕೈಯ ಮಣಿಗಂಟಿನ ಬಳಿ ಮತ್ತು ಬಲ ದವಡೆಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಕಿವಿಗೆ ರಕ್ತ ಸೋರುವ ಗಾಯವಾಗಿರುತ್ತದೆ ಎಂಬುದಾಗಿ ತಿಳಿಸಿದ್ದು, ಅಪಘಾತಪಡಿಸಿದ ಸ್ಕೂಟರ್ ಸವಾರನ ಹೆಸರು ಕೇಳಲಾಗಿ ನಿಜಾಮುದ್ದೀನ್ ಎಂಬುದಾಗಿ ತಿಳಿಸಿದ್ದು, ಆತನಿಗೂ ಕೂಡಾ ಗಂಭೀರ ಸ್ವರೂಪದ ಗಾಯವಾಗಿರುತ್ತದೆ ಎಂಬಿತ್ಯಾದಿ

 

Traffic North Police Station                         

ದಿನಾಂಕ 23-03-2024 ರಂದು ಪಿರ್ಯಾದಿ Sharmila R Karkeraಇವರು ತನ್ನ ಬಾಬ್ತು KA-19-HF-5215 Honda Activa-125 ಸ್ಕೂಟರಿನಲ್ಲಿ ಸವಾರಳಾಗಿ, ಮಗಳು ಶಿವಾನಿ (19 ವರ್ಷ) ರವರನ್ನು ಹಿಂಬದಿ ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಸಂಜೆ ಸಮಯ ಸುಮಾರು 6:45 ಗಂಟೆಗೆ Green Field Madours layout ಹತ್ತಿರ NITK ಹಿಂಬದಿ ರಸ್ತೆ ತಲುಪುತ್ತಿದ್ದಂತೆ ಪಿರ್ಯಾದಿದಾರರ ಸ್ಕೂಟರಿನ ಹಿಂಬದಿಯಿಂದ KA-19-D-8079 ವಿಕ್ರಮ 3 Wheeler Goods ಟೆಂಪೂವನ್ನು ಅದರ ಚಾಲಕ ಲಿಯಾಕತ್ ಅಲಿ ಶೇಖ್ ಎಂಬುವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರನ್ನು ಓವರ್ ಟೇಕ್ ಮಾಡುವ ಬರದಲ್ಲಿ ಪಿರ್ಯಾದಿದಾರರ ಸ್ಕೂಟರಿನ ಬಲಬದಿಗೆ ಡಿಕ್ಕಿಪಡಿಸಿದ್ದು, ಪಿರ್ಯಾದಿದಾರರು ಹಾಗೂ ಮಗಳು ಶಿವಾನಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದ  ಪರಿಣಾಮ ಪಿರ್ಯಾದಿದಾರರಿಗೆ ಎಡಕೈಗೆ ಗುದ್ದಿದ ಗಾಯ, ಬಲಕೈಗೆ, ಗಲ್ಲಕ್ಕೆ ಮತ್ತು ಹಣಗೆ ತರಚಿದ ಗಾಯವಾಗಿದ್ದು, ಪಿರ್ಯಾದಿದಾರರ ಮಗಳು ಶಿವಾನಿಗೆ ಎಡಕೈ ಮಣಿಗಂಟಿನಬಳಿ ಹಾಗೂ ತುಟಿಯ ಬಳಿ ತರಚಿದ ಗಾಯವಾಗಿರುತ್ತದೆ. ಪ್ರಥಮ ಚಿಕಿತ್ಸೆಯನ್ನು ಮಿಕ್ಸಿತ್ ಆಸ್ಪತ್ರೆಯಲ್ಲಿ ಪಡೆದು ಮನೆಗೆ ತೆರಳಿರುತ್ತಾರೆ ನಂತರ ನೊವು ಕಡಿಮೆ ಆಗದೇ ಇರುವುದರಿಂದ ದಿನಾಂಕ 26-03-2024 ರಂದು ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಗೂಡ್ಸ್ ಟೆಂಪೂದ ಚಾಲಕನು ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿ, ಪಿರ್ಯಾದಿದಾರರು ಬಿದ್ದಿರುವುದನ್ನು ನೋಡಿ ಗೂಡ್ಸ್ ಟೆಂಪೂವನ್ನು ನಿಲ್ಲಿಸದೇ ಚಲಾಯಿಸಿಕೊಂಡು ಟೆಂಪೂ ವಾಹನ ಸಮೇತ ಪರಾರಿಯಾಗಿರುತ್ತಾನೆ ಎಂಬಿತ್ಯಾದಿ

 

Traffic South Police Station                

ಪಿರ್ಯಾದಿ Harshal ಇವರು ದಿನಾಂಕ:25-03-2024 ರಂದು ಸಂಜೆ ಸುಮಾರು 6:30 ಗಂಟೆಗೆ ಕೆಲಸ ಮುಗಿಸಿ ಮನೆಯಾದ ಅಡ್ಯಾರ್ ಪದವು ಮನೆ ಕಡೆಗೆ ಹೋಗಲು ಕೆಮಂಜೂರು ಬಳಿ ತಲುಪುವಾಗ ಪಿರ್ಯಾದುದಾರರು ಚಲಾಯಿಸುತ್ತಿದ್ದ ಸ್ಕೂಟರ್ ನಂಬರ್ KA-19-HE-8503 ನೇದರ ಮುಂದೆ KA-13-D-5643  ನೇ ಜೋಳದ ಹುಲ್ಲು ತುಂಬಿದ್ದ ಟಾಟಾ ಇಂಟ್ರ  ವಾಹನವು ಅದೇ ಮಾರ್ಗದಲ್ಲಿ ಅಡ್ಯಾರ್ ಪದವು ಕಡೆಗೆ ಚಲಿಸುತ್ತಿದ್ದು ಸಮಯ ಸುಮಾರು 7:30 ಗಂಟೆಗೆ ರಾತ್ರಿ ಏರು ರಸ್ತೆ ಇದ್ದುದರಿಂದ ಸದ್ರಿ ವಾಹನವು ಒಮ್ಮೆಲೆ ಚಲಿಸಿ ಹಿಂದೆ ಬಂದಿದ್ದು  ಪಿರ್ಯಾದುದಾರರು ಚಲಾಯಿಸುತ್ತದ್ದ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಪಡಿಸಿದ್ದ ಪರಿಣಾಮ ಸ್ಕೂಟರ್ ಸಮೇತ ಪಿರ್ಯಾದುದಾರರು ಕೆಳಕ್ಕೆ ಬಿದ್ದಿದ್ದು , ಅವರ ಬಲ ಮೊಣಕೈ, ಎಡ ಕೈ ಹೆಬ್ಬೆರಳಿಗೆ, ಎರಡು ಮೊಣಕಾಲುಗಳಿಗೆ ತರಚಿದ ರಕ್ತಗಾಯ, ಕೈಗೆ ಗುದ್ದಿದ ಗಾಯವಾಗಿರುತ್ತದೆ. ಉಬ್ಬು ರಸ್ತೆ ಇದ್ದುದರಿಂದ  ಪಿರ್ಯದುದಾರರ ಗಾಡಿ ಸುಮಾರು 30 ಅಡಿ ಇಳಿಜಾರಿಗೆ ಎಳೆದುಕೊಂಡು ಹೋಗಿದ್ದು ಅವರ ಸ್ಕೂಟರ್ ಜಕಮುಗೊಂಡಿರುತ್ತದೆ. ಈ ಅಪಘಾತಕ್ಕೆ KA-13-D-5643   ನೇ ವಾಹನದ ಚಾಲಕ ಏರು ರಸ್ತೆಯಲ್ಲಿ ದುಡುಕುತನ ಮತ್ತು ನಿರ್ಲಕ್ಷ ತನದಿಂದ ವಾಹನ ಚಲಾಯಿಸಿರುವುದೇ ಕಾರಣವಾಗಿರುತ್ತದೆ. ಆದ್ದರಿಂದ KA-13-D-5643   ನೇ ವಾಹನದ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬಿತ್ಯಾದಿ

 

Traffic South Police Station                        

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ:26-03-2024 ರಂದು ಪಿರ್ಯಾದಿ RAMESH NAYAKಇವರು ಮಂಗಳ ಕಾಲೇಜಿನಲ್ಲಿ ಮ್ಯಾನೇಜರ್ ಆಗಿದ್ದು ,ಸದ್ರಿ ಕಾಲೇಜಿನ ಪ್ರಥಮ ವರ್ಷದ ಡಿಪ್ಲೊಮೊ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕ್ರಿಸ್ಟೋಪರ್ ಎಂಬುವವರಿಗೆ ರಸ್ತೆ ಅಪಘಾತವಾದ ಬಗ್ಗೆ ವಿಚಾರ ತಿಳಿದು ಅವರು ದಾಖಲಾಗಿದ್ದ  ಮಂಗಳ ಆಸ್ಪತ್ರೆಗೆ ಬಂದು ಆಸ್ಪತ್ರೆಗೆ ಸೇರಿದವರಲ್ಲಿ ವಿಚಾರ ತಿಳಿಯಲಾಗಿ  ಗಾಯಾಳು ಕ್ರಿಸ್ಟೋಪರ್ ಈ ದಿನ ಕಾಲೇಜ್ ಮುಗಿಸಿ ನೀರುಮಾರ್ಗದ ಕಾಲೇಜಿನಿಂದ ಮಂಗಳೂರಿನಲ್ಲಿರುವ ತನ್ನ ರೂಮಿಗೆ ಹೋಗುವ ಬಗ್ಗೆ KA-19 D-9661 ನೇ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಕನಾಗಿ ಪ್ರಯಾಣಿಸುತಿದ್ದ ಸಮಯ ಸಂಜೆ ಸುಮಾರು 04-30 ಗಂಟೆಗೆ ಸದ್ರಿ ಬಸ್ಸು ಕುಲಶೇಖರ ಸಿಲ್ವರ್ ಗೇಟ್ ಬಳಿ ತಲುಪುತಿದ್ದಂತೆ ಬಸ್ಸಿನ ಚಾಲಕನಾದ ಸಂತೋಷ್ ರವರು ಒಮ್ಮಿಂದೊಮ್ಮೆಲೆ  ದುಡುಕುತನ ಹಾಗೂ ನಿರ್ಲಕ್ಷತನದಿಂದ ಬಸ್ಸಿನ ಬ್ರೇಕ್ ನ್ನು ಹಾಕಿದ  ಪರಿಣಾಮ ಬಸ್ಸಿನ  ಒಳಗೆ ಹಿಂಭಾಗದಲ್ಲಿ ನಿಂತಿದ್ದ ಕ್ರಿಸ್ಟೋಪರ್  ರವರು ಹಿಂದಿನ ಬಾಗಿಲಿನಿಂದ ಡಾಂಬರು ರಸ್ತೆಗೆ ಎಸೆಯಲ್ಪಟ್ಟು ಅವರ ಹಣೆಯ ಮದ್ಯಕ್ಕೆ ಗಂಭೀರ  ಸ್ವರೂಪದ ರಕ್ತ ಗಾಯ, ಮುಖಕ್ಕೆ, ಎಡಕೈ ಬೆರಳಿಗೆ, ಕೋಲು ಕೈಗೆ ತರಚಿದ ರಕ್ತ ಗಾಯ, ತಲೆಯ ಹಿಂಭಾಗ, ಸೊಂಟಕ್ಕೆ ಗುದ್ದಿದ ಗಾಯ ಉಂಟಾಗಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 28-03-2024 09:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080