ಅಭಿಪ್ರಾಯ / ಸಲಹೆಗಳು

Crime Reports: CEN Crime PS Mangaluru City

ಪಿರ್ಯಾದಿ ಅಂಕೋಲ ಬ್ರಾಂಚಿನಲ್ಲಿ ಎಸ್.ಬಿ.ಐ ಖಾತೆ ಸಂಖ್ಯೆ ನೇ ದನ್ನು ಹೊಂದಿರುತ್ತಾರೆ.  ಪಿರ್ಯಾದಿದಾರರು ದಿನಾಂಕ 03-03-2023ರಂದು ಮಂಗಳೂರಿಗೆ 4 ತಿಂಗಳ ಅವಧಿಯ IELTS ಕೋಚಿಂಗ್ ಕ್ಲಾಸ್ ಬಗ್ಗೆ ಬಂದಿರುವುದಾಗಿದೆ. ದಿನಾಂಕ 09-03-2023 ಸಂಜೆ ಸುಮಾರು 6.00 ಗಂಟೆಗೆ ಪಿರ್ಯಾದಿದಾರರು ಪಿ.ಜಿ ಯಲ್ಲಿರುವ ಸಮಯ ತನ್ನ ಮೊಬೈಲ್ ನಲ್ಲಿ ತನ್ನ ಕೋರ್ಸಿಗೆ ಸಂಬಂಧಿಸಿದಂತೆ ಯಾವುದೇ ಅವಕಾಶಗಳು ಇರುತ್ತದೆಯಾ ಎಂಬುದರ ಬಗ್ಗೆ google chrome ನಲ್ಲಿ ಹುಡುಕಾಡಿದ್ದು ಆ ಸಮಯ ಪಿರ್ಯಾದಿದಾರರಿಗೆ  cheap laptops at affordable price ಎಂಬುದಾಗಿ ಜಾಹೀರಾತೊಂದು ಕಂಡು ಬಂದಿದ್ದು ಪಿರ್ಯಾದಿದಾರರು ಸದ್ರಿ ಜಾಹೀರಾತನ್ನು ಕ್ಲಿಕ್ ಮಾಡಿದಾಗ 9982245682 ನಂಬ್ರದ ವಾಟ್ಸಪ್ ಪೇಜೊಂದು ತೆರೆದಿದ್ದು ಕಂಡು ಬಂತು. ಇದಾದ ಕೂಡಲೇ ಪಿರ್ಯಾದಿದಾರರಿಗೆ 9982245682ನೇ ನಂಬ್ರದಿಂದ ಕರೆಯೊಂದು ಬಂದಿದ್ದು ಮಾತನಾಡಿದ ವ್ಯಕ್ತಿಯು HP ಕಂಪೆನಿಯ ಲ್ಯಾಪ್ ಟಾಪ್ ನ್ನು ರೂ. 12000/- ಕ್ಕೆ ಕೊಡುತ್ತೇನೆ ಅದಕ್ಕಾಗಿ ಆರ್ಡರ್ confirm ಮಾಡಲು 400/- ನ್ನು ಪಾವತಿಸುವಂತೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು ರೂ.400/- ನ್ನು ಪಾವತಿಸಿದರು ನಂತರ ಸದರಿ ವ್ಯಕ್ತಿಯು ಪಿರ್ಯಾದಿದಾರರಿಗೆ ಲ್ಯಾಪ್ ಟಾಪ್ ನೀಡುವುದಾಗಿ ನಂಬಿಸಿ ಅನೇಕ  ಕಾರಣಗಳನ್ನು ತಿಳಿಸಿ ಪಿರ್ಯಾದಿದಾರರ ಎಸ್.ಬಿ. ಐ ಖಾತೆ ಸಂಖ್ಯೆ ನೇ ದರಿಂದ ಹಂತ ಹಂತವಾಗಿ ಒಟ್ಟು ರೂ.28400/- ನ್ನು ತನ್ನ ಖಾತೆಗೆ ವರ್ಗಾಯಿಸಿರುತ್ತಾರೆ. ಇದಾದ ಬಳಿಕ  ಸದ್ರಿ ವ್ಯಕ್ತಿಯು ಅನೇಕ ಕಾರಣವನ್ನು ಹೇಳಿ ಪಿರ್ಯಾದಿದಾರರಲ್ಲಿ  ಹಣವನ್ನು ವರ್ಗಾಯಿಸಲು ಒತ್ತಾಯಿಸುತಿದ್ದು ಇದರಿಂದ ಸಂಶಯಗೊಂಡು ಪಿರ್ಯಾದಿದಾರರು ಬ್ಯಾಂಕ್ ಗೆ ಹೋಗಿ ವಿಚಾರಿಸಿದಲ್ಲಿ ಯಾರೋ ಅಪರಿಚಿತರು ತನಗೆ ಕಡಿಮೆ ದರದಲ್ಲಿ ಲ್ಯಾಪ್ ಟಾಪ್ ನ್ನು ನೀಡುವುದಾಗಿ ಆಮಿಷವೊಡ್ಡಿ ತನ್ನನ್ನು ನಂಬಿಸಿ ತನ್ನ  ಎಸ್.ಬಿ.ಐ ಬ್ಯಾಂಕ್ ಖಾತೆಯಿಂದ ಅನಧಿಕೃತವಾಗಿ ಹಣವನ್ನು ವರ್ಗಾಯಿಸಿರುವ ಬಗ್ಗೆ ತಿಳಿದು ಬಂದಿರುತ್ತದೆ. ಆದುದರಿಂದ ಸದ್ರಿ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ.

 

CEN Crime PS Mangaluru City                                                 

 ದಿನಾಂಕ 09-02-2023 ರಂದು ಬೆಳಿಗ್ಗೆ 13-38 ಗಂಟೆಗೆ ಯಾರೋ ಅಪರಿಚಿತರ ವ್ಯಕ್ತಿಯ +9929883933 ಮೊಬೈಲ್  ನಂಬ್ರದಿಂದ ಪಿರ್ಯಾದಿದಾರರ ಮೊಬೈಲ್ ನಂಬ್ರ  ನೇದರ ವಾಟ್ಸಾಫ್ ಖಾತೆಗೆ ಪಾರ್ಟ್ ಟೈಂ ಜಾಬ್ ಬಗ್ಗೆ ಸಂದೇಶ ಬರುತ್ತದೆ. ಸದ್ರಿ ಸಂದೇಶವು ಗೂಗಲ್ ಗೆ ಲಿಂಕ್ ಆಗಿದ್ದು, ಸದ್ರಿ ಅಪರಿಚಿತ ವ್ಯಕ್ತಿಯು ಪಿರ್ಯಾದಿದಾರರಿಗೆ ಟೆಲಿಗ್ರಾಂ ಆಪ್ ನ್ನು ಡೌನ್ ಲೋಡ್ ಮಾಡಲು ತಿಳಿಸಿದಂತೆ, ಪಿರ್ಯಾದಿದಾರರು ಸದ್ರಿ ಟೆಲಿಗ್ರಾಂ ಆಫ್ ನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾರೆ. ಅದರಲ್ಲಿ ಪಿರ್ಯಾದಿದಾರರಿಗೆ ಹಣವನ್ನು ಆನ್ ಲೈನ್ ಮೂಲಕ ದ್ವಿಗುಣ ಮಾಡಲು 10 ಟಾಸ್ಕ್ ಮಾಡಲು ತಿಳಿಸಿದ್ದು, ಮೊದಲಿಗೆ ಸದ್ರಿ ವ್ಯಕ್ತಿಯು ಪಿರ್ಯಾದಿದಾರರ ಖಾತೆಗೆ ರೂಪಾಯಿ 150/- ಹಣವನ್ನು ಹಾಕಿದದು, ನಂತರ 1,500/- ಹಣವನ್ನು ಹಾಕಲು ತಿಳಿಸಿರುತ್ತಾರೆ. ನಂತರ  ಆರೋಪಿಯು ತಿಳಿಸಿದಂತೆ ಮತ್ತು ಕಳುಹಿಸಿಕೊಟ್ಟಂತಹ http://cryptoypto.com/#/ಈ ಲಿಂಕ್ ನ್ನು ಒತ್ತಿದರು. ಅದರಲ್ಲಿ ಪಿರ್ಯಾದಿದಾರರ ಹೆಸರಿನಲ್ಲಿ  ಖಾತೆ ರಚಿಸಲು  ವಿವರನ್ನು ನಮೂದಿಸುವಂತೆ ತಿಳಿಸಿದಾಗ, ಪಿರ್ಯಾದಿದಾರರು  ಆರೋಪಿಯ ಮಾತನ್ನು ನಂಬಿ ಆರೋಪಿ ತಿಳಿಸಿದಂತೆ user name:moex5880@gmail.com ಎಂದು ಕ್ರಿಯೇಟ್ ಮಾಡಿ, ಪಿರ್ಯಾದಿದಾರರ ಮೊಬೈಲ್ ಗೆ ಒಟಿಪಿ ಲಿಂಕ್ ನಮೂದಿಸಿರುತ್ತಾರೆ.  ನಂತರ ಪಿರ್ಯಾದಿದಾರರು UPI ID. ಮೂಲಕ ರೂಪಾಯಿ 1,000/- ನ್ನು ಕಳುಹಿಸಿರುತ್ತಾರೆ. ನಂತರ UPI ID.ನಂತರ ಮೂಲಕ ರೂಪಾಯಿ 500/- ನ್ನು ಕಳುಹಿಸಿರುತ್ತಾರೆ. ನಂತರ 7,000/- ವನ್ನು UPI ID ಕಳುಹಿಸಿದ್ದು,  ನಂತರ ಕ್ರಮವಾಗಿ 15,000/- 10,000/-  ಪೋನ್ ಪೇ ಮೂಲಕ ಕಳುಹಿಸಿರುತ್ತಾರೆ. ನಂತರ  ಆರೋಪಿಯ Account No. 50100576932953 and IFSC No. HDFC0002336 ನೇದಕ್ಕೆ 65,000/-, Account No10122468557 and IFSC No. IDFB0040154 ನೇದಕ್ಕೆ ರೂಪಾಯಿ 10,000/- ವನ್ನು ಹಾಕಿರುತ್ತಾರೆ.  ಹೀಗೆ ಪಿರ್ಯಾದಿದಾರರ HDFC ಬ್ಯಾಂಕ್ ಖಾತೆ ನಂಬ್ರ: ನೇದರಿಂದ ಆರೋಪಿತರ ವಿವಿಧ ಖಾತೆಗಳಿಗೆ  ದಿನಾಂಕ 10-02-2023 ರಿಂದ 10-02-2023ರ ವರೆಗೆ ಹಂತ ಹಂತವಾಗಿ ಒಟ್ಟು 1,08,500/- ಹಣವನ್ನು ವರ್ಗಾಯಿಸಿಕೊಂಡು ಮೋಸ, ವಂಚನೆ ಮಾಡಿರುವುದಾಗಿದೆ ಎಂಬಿತ್ಯಾದಿ

Kavoor PS

ಪಿರ್ಯಾದಿ GIREESH  ಆಂಟನಿ ವೇಸ್ಟ್ ಕಂಪೆನಿಯಲ್ಲಿ ಅಟೋ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರ ತಂದೆಯನ್ನು ಪಿರ್ಯಾದಿದಾರರು ಹಾಗೂ ಅವರ ತಮ್ಮ ಸುರೇಶನು ಸರತಿಯಂತೆ ಒಂದೊಂದು ತಿಂಗಳು ನೋಡಿಕೊಳ್ಳುವುದಾಗಿದ್ದು, ಈಗ ಪಿರ್ಯಾದಿದಾರ ತಂದೆಯು ತಮ್ಮ ಸುರೇಶ ನ ಬಳಿ ಇರುವುದಾಗಿದೆ. ದಿನಾಂಕ: 25.04.2023 ರಂದು ಮಧ್ಯಾಹ್ನ 01-00 ಗಂಟೆಯ ಸುಮಾರಿಗೆ ತಂದೆಯ ಹತ್ತಿರವಿರುವ ಹಣ ತೆಗೆದ ವಿಚಾರದಲ್ಲಿ ಪಿರ್ಯಾದಿದಾರ ತಮ್ಮನಿಗೂ ಹಾಗೂ ತಂದೆಗೂ ಗಲಾಟೆಯಾಗಿದ್ದು, ಆಗ ಪಿರ್ಯಾದಿದಾರ ತಮ್ಮ ಸುರೇಶ ನು ನೀನು ಇನ್ನೂ ನಮ್ಮ ಮನೆಗೆ ಊಟಕ್ಕೆ ಬರಬೇಡ ಎಂದು ಹೇಳಿದಂತೆ ರಾತ್ರಿ ಸಮಯ 08-00 ಗಂಟೆಗೆ ಪಿರ್ಯಾದಿದಾರ ಮನೆಗೆ ಬಂದು ಊಟ ಮಾಡಿಕೊಂಡು ಹೋಗಿರುತ್ತಾರೆ. ನಂತರ 08-30 ಗಂಟೆ ಸುಮಾರಿಗೆ ಪಿರ್ಯಾದಿದಾರರು ಮನೆಯಲ್ಲಿರುವ ಸಮಯ ಪಿರ್ಯಾದಿದಾರ ತಮ್ಮ ಸುರೇಶ ನು ಮನೆಯ ಹಿಂದೆ ಕಂಪೌಂಡ ಹೊರಗೆ ರಸ್ತೆಯಲ್ಲಿ ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ಬೆವರ್ಸಿ ರಂಡೆ ಮಗ, ನೀನು ತಂದೆಗೆ ಊಟ ಹಾಕಿ ಅವರ ಹಣವೆಲ್ಲ ನೀನು ಹೊಡಿತಿಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು  ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಸಿಮೇಂಟ್ ಇಟ್ಟಿಗೆಯ ತುಂಡಿನಿಂದ ತಲೆಗೆ ಹೊಡೆದು ರಕ್ತಗಾಯ ಮಾಡಿ ಹೋಗಿರುವುದಾಗಿ ಎಂಬಿತ್ಯಾದಿ.

Traffic South Police Station     

ಪಿರ್ಯಾದಿ ಸ್ಯಾಮುಯೆಲ್ ಸುಕುಮಾರ್ ಬಂಗೇರ (65) ರವರ ನಾದಿನಿಯಾದ ಸರಿತಾ ಜುಡಿತ್ ಪಿಂಟೋರವರು ದಿನಾಂಕ:26-04-2023 ರಂದು ಬೆಳ್ಳಗಿನ ಜಾವ ಎಂದಿನಂತೆ ಗುಜರಿ ಹೆಕ್ಕಲು ಗೋಣಿಚೀಲವನ್ನು ಹಿಡಿದುಕೊಂಡು ಹೋಗಿದ್ದು  ಬೆಳಿಗ್ಗೆ ಸಮಯ ಸುಮಾರು 6-00 ಗಂಟೆಗೆ ಯೆಯ್ಯಾಡಿ ಕೊಂಚಾಡಿ ಶಂಕರ ಭವನ ಹೋಟೆಲ್ ಬಳಿ ಪದವಿನಂಗಡಿ ಕಡೆಯಿಂದ ಕೆಪಿಟಿ ಕಡೆಗೆ ಹೋಗುವ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ ಪದವಿನಂಗಡಿ ಕಡೆಯಿಂದ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ: KA-19-HB-3239 ನೇದನ್ನು ಅದರ ಸವಾರ ಕೆ ಸಂದೇಶ್ ಕುಮಾರ್ ಆಚಾರ್ಯ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸರಿತಾ ಜುಡಿತ್ ಪಿಂಟೋರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಅವರ ಸೊಂಟಕ್ಕೆ ಮತ್ತು ತಲೆಗೆ ಗುದ್ದಿದ ರೀತಿಯ ಗಾಯವಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಅಲ್ಲಿ ಸೇರಿದ ಜನರು ಮತ್ತು ಪೊಲೀಸ್ ರು ಸೇರಿ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು ಅವರನ್ನು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ ಎಂಬಿತ್ಯಾದಿ.

Traffic South Police Station

ಪಿರ್ಯಾದಿ ಬಾಸ್ಕರ್ (65 ವರ್ಷ) ರವರು ನಿನ್ನೆ ದಿನ ದಿನಾಂಕ: 25-04-2023 ರಂದು ಕೆಲಸದ ನಿಮಿತ್ತ ಜಪ್ಪಿನಮೊಗೆರು ಕಡೆಗೆ  ಬಂದು ವಾಪಾಸ್ಸು ಅವರ ಮನೆ ಕಡೆಗೆ ಹೋಗಲು ಮಹಾಕಾಳಿ ಪಡ್ಪು ಜಂಕ್ಷನ್ ಹತ್ತಿರ ತಲುಪಿ ಸಮಯ ಸುಮಾರು ಸಂಜೆ 7-00 ಗಂಟೆಗೆ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಹಾದು ಹೋಗುವ ರಾ ಹೆ-66 ರ ರಸ್ತೆಯನ್ನು ಎಡಬದಿಯಿಂದ ಬಲಬದಿ ಕಡೆಗೆ ದಾಟುತ್ತಿರುವಾಗ ಅದೇ ಸಮಯ ಅದೇ ರಸ್ತೆಯಲ್ಲಿ ಅಂದರೆ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ನಂಬ್ರ: KA-19-ML-8843 ನೇದನ್ನು ಅದರ ಚಾಲಕ ಅಜರುದ್ದೀನ್ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದು ಅವರಿಗೆ ಎಡಕೈಗೆ ಮೂಳೆ ಮುರಿತದ ಗಾಯ, ಮುಂಬದಿ ತಲೆಗೆ, ಬಲಬದಿ ಹೊಟ್ಟೆಗೆ, ಮುಖದ ಬಲಬದಿಗೆ, ಬಲಕೈ ಮೊಣಕೈಗೆ ಹಾಗೂ ಎರಡುಕಾಲಿನ ಮೊಣಕಾಲಿಗೆ ತರಚಿದ ರಕ್ತ ಗಾಯವಾಗಿದ್ದ ಅವರನ್ನು ಅಪಘಾತ ಪಡಿಸಿದ ಕಾರಿನ ಚಾಲಕ ಅದೇ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಇಂಡಿಯಾನ ಆಸ್ಪತ್ರೆಗೆ ಕರೆದುಕೊಂಡು ಹೋದ ವಿಷಯ ಅವರ ಮಗ ದೀಕ್ಷಿತ್ ರವರಿಗೆ ತಿಳಿದು ಅವರು ಇಂಡಿಯಾನ ಆಸ್ಪತ್ರೆಗೆ ಬಂದು ಪಿರ್ಯಾದಿದಾರರನ್ನು ಹೆಚ್ಚಿನ  ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

Mangalore South PS

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪಿ.ಎಸ್.ಐ ಶೀತಲ್ ಅಲಗೂರ  ದಿನಾಂಕ 26-04-2023 ರಂದು ಸಿಬ್ಬಂದಿಗಳೊಂದಿಗೆ  ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ,  ಬೆಳಿಗ್ಗೆ  8-50 ಗಂಟೆ ಸುಮಾರಿಗೆ ಮಂಗಳೂರು ನಗರದ  ಗೋರಿಗುಡ್ಡೆ ಸ್ಮಾಶಾನದ ಬಳಿ ರಸ್ತೆ ಬದಿಯ ಮರದ ಮರೆಯಲ್ಲಿ  ಆರೋಪಿಗಳಾದ, (1) ರಜತ್.ವಿ, ಪ್ರಾಯ: 22 ವರ್ಷ, (2) ಮುಹಿನುದ್ದಿನ್.ಪಿ.ಎಮ್, ಪ್ರಾಯ: 22 ವರ್ಷ ಹಾಗೂ (3) ಅದ್ವೈತ್, ಪ್ರಾಯ: 20 ವರ್ಷ ಎಂಬುವರು ಮಾದಕ ವಸ್ತು ಗಾಂಜಾ ಸೇವನೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು,  ಬೆಳಿಗ್ಗೆ  9-10 ಗಂಟೆಗೆ ವಶಕ್ಕೆ ಪಡೆದುಕೊಂಡು ಮಂಗಳೂರು ನಗರದ ಎ.ಜೆ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಯವರ ಮುಂದೆ  ವೈದಕೀಯ ಪರೀಕ್ಷೆ ಬಗ್ಗೆ ಹಾಜರುಪಡಿಸಿದ್ದು, ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುತ್ತದೆ. ಈ ಬಗ್ಗೆ ಆರೋಪಿಗಳ ವಿರುದ್ದ  ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ, ಎಂಬಿತ್ಯಾದಿಯಾಗಿರುತ್ತದೆ.                                                             

Surathkal PS

ದಿನಾಂಕ 25-04-2023 ರಂದು ಕರ್ನಾಟಕ ವಿಧಾನಸಭಾ ಚುನಾವಣೆಯ ಕರ್ತವ್ಯದಡಿಯಲ್ಲಿದ್ದ ಫ್ಲೈಯಿಂಗ್ ಸ್ಕ್ವಾಡ್-8, ಮೂಡಬಿದ್ರೆ-201 ನೇ ಅಧಿಕಾರಿ ಅಶ್ವಿನಿ ಯು ಮತ್ತು ಕಾವೂರು ಠಾಣೆಯ ASI ಮುರಳೀಧರ ಬಲ್ಲಾಳ್ ಹಾಗೂ ಪಿಸಿ ಅಪ್ಪಣ್ಣ ಇವರುಗಳು ಸುರತ್ಕಲ್ ಠಾಣಾ ವ್ಯಾಪ್ತಿಯ ಶಿಬರೂರು ಭಾಗದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ ಪೆಡ್ಡಿಯಂಗಡಿ ಕೆಡೆಯಿಂದ ಬರುತ್ತಿದ್ದ KA-19-D1519 ನೇ ನೋಂದಣಿ ಸಂಖ್ಯೆಯ ಮಹೀಂದ್ರ ಬೊಲೆರೋ ಪಿಕಪ್ ವಾಹನವನ್ನು ಬೆಳಿಗ್ಗೆ 10.00 ಗಂಟೆ ಸುಮಾರಿಗೆ ನಿಲ್ಲಿಸಿದ್ದು ಈ ಬಗ್ಗೆ ಮಾಹಿತಿ ತಿಳಿದ ಪಿರ್ಯಾದಿದಾರರು ಸದ್ರಿ ಸ್ಥಳಕ್ಕೆ ತೆರಳಿ ಮೇಲ್ಕಾಣಿಸಿದ ವಾಹನದಲ್ಲಿನ ಚಾಲಕ ಸಪ್ವಾನ್ ನನ್ನು ವಿಚಾರಿಸಿದಾಗ ಯಾವುದೇ ರಹದಾರಿ ಪತ್ರಗಳು ಇರುವುದಿಲ್ಲವಾಗಿ  ಹಾಗೂ ಕಡಿದಿಟ್ಟದ್ದ ಮರದ ದಿಮ್ಮಿಗಳನ್ನು ಸುರತ್ಕಲ್ ನ ಇಡ್ಯಾ ಗ್ರಾಮದಿಂದ ತಂದೆ ಎಮ್,ಎಸ್ ಮೊಹಮ್ಮದ್ ಜೊತೆ ಲೋಡ್ ಮಾಡಿದ್ದಾಗಿ ತಿಳಿಸಿದ್ದಾಗಿರುತ್ತದೆ. ಈ ಬಗ್ಗೆ ಮಹಜರು ಮುಖೇನಾ ಮರದ ದಿಮ್ಮಿಗಳನ್ನು ಹಾಗೂ ಮೇಲ್ಕಾಣಿಸಿದ ಪಿಕಪ್ ವಾಹನವನ್ನು ಮತ್ತು ಟರ್ಪಾಲ್ ನ್ನು ಸ್ವಾಧೀನಪಡಿಸಿ ಠಾಣೆಗೆ ತಂದಿರುವುದ್ದಾಗಿಯೂ ಆರೋಪಿಗಳ ವಿರುದ್ದ ಕ್ರಮ ಜರುಗಿಸುವಂತೆ ಎಂಬಿತ್ಯಾದಿಯಾಗಿರುತ್ತದೆ.

Ullal PS

ಪಿರ್ಯಾದಿ Althaf Kumplala 204 ಮಂಗಳೂರು ವಿಧಾನಸಭಾ ಚುನಾವಣಾ ಕ್ಷೇತ್ರದಿಂದ ಜ್ಯಾತ್ಯಾತೀತ ಜನತಾದಳದ ಅಧಿಕೃತ  ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿ ಅಗತ್ಯವಿರುವ ಫಾರಂ A ಮತ್ತು ಫಾರಂ B ಸಲ್ಲಿಸಿದ್ದು ದಿನಾಂಕ 21-04-2023 ರಂದು ನಾಮಪತ್ರ ಪರಿಶೀಲನೆಯಲ್ಲಿ ಸಿಂಧೂತ್ವಗೊಂಡಿದೆ ಎಂದು ಘೋಷಣೆಯಾದ ಬಳಿಕ ಅದೇ ದಿನ  ಸಂಜೆ 3-00 ಗಂಟೆ ಸಮಯಕ್ಕೆ ಉಳ್ಳಾಲ ಸಯ್ಯದ್ ಮದನಿ ದರ್ಗಾದ ಹಿಂಬದಿಯಲ್ಲಿ ನಿಂತುಕೊಂಡಿದ್ದಾಗ 204 ಮಂಗಳೂರು ವಿಧಾನಸಭಾ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಿಗರಾದ ಮುಸ್ತಾಪ ಯಾನೆ ಕಬರು ಮುಸ್ತಾಫ, ಉಸ್ಮಾನ್ ಕಲ್ಲಾಪು, ರಿಯಾಜ್ ಮತ್ತಿತರರು ಪಿರ್ಯಾದಿದಾರರಿಗೆ ಬೆದರಿಕೆ ಹಾಕಿ ಸಿಂಧೂತ್ವ ಗೊಂಡಿರುವ ನಾಮ ಪತ್ರವನ್ನು ಹಿಂತೆಗೆದುಕೊಳ್ಳುವಂತೆ , ಬೆದರಿಕೆ ಒಡ್ಡಿ, ಉಮೇದ್ವಾರಿಕೆ ವಾಪಾಸ್ ಪಡೆಯುವ ಪತ್ರಕ್ಕೆ ಸಹಿಯನ್ನು ಪಡೆದು ಬಲವಂತವಾಗಿ ಎಳೆದು ತಂದು ಚುನಾವಣಾಧಿಕಾರಿಯವರಿಗೆ ಉಮೇದ್ವಾರಿಕೆ ವಾಪಾಸ್ಸು ತಗೆದುಕೊಳ್ಳುವ ಪತ್ರವನ್ನು ಸಲ್ಲಿಸಿ ಅಲ್ಲದೇ ತನ್ನ ವಾಸದ ಮನೆಗೆ ಬಂದು ಅಪರಾತ್ರಿಯಲ್ಲಿ ಬೆದರಿಕೆ ಒಡ್ಡಿ ಜೀವ ಭಯದ ವಾತಾವರಣವನ್ನು ಸೃಷ್ಟಿಸಿರುತ್ತಾರೆ ಹಾಗೂ ಉಮೇದ್ವಾರಿಕೆ ಹಿಂಪಡೆಯುವ ಸಂದರ್ಭದಲ್ಲಿ ಪಿರ್ಯಾದಿದಾರರ ಅನುಮೋದಕರಿಗೆ ಹಾಗೂ ಬೆಂಬಲಿಗರೊಂದಿಗೆ ಚರ್ಚಿಸಲು ಅವಕಾಶ ನೀಡಿರುವುದಿಲ್ಲ ಎಂಬಿತ್ಯಾದಿ ಪಿರ್ಯಾದಿಯು ನೀಡಿದ ದೂರಿನ ಸಾರಾಂಶ.

 

 

 

 

ಇತ್ತೀಚಿನ ನವೀಕರಣ​ : 21-08-2023 12:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080