ಅಭಿಪ್ರಾಯ / ಸಲಹೆಗಳು

Crime Reported in CEN Crime PS

ಪಿರ್ಯಾದಿ ಹೆಚ್.ಡಿ.ಎಫ್.ಸಿ ಬ್ಯಾಂಕ್ ಅಂಧೇರಿ ಪಶ್ಚಿಮ ಮುಂಬೈ,ಮಹಾರಾಷ್ಟ್ರಶಾಖೆಯಲ್ಲಿ ಖಾತೆಯನ್ನು ಹೊಂದಿದ್ದು, ಸದ್ರಿ ಖಾತೆಯ ಎಟಿಎಂ ಕಾರ್ಡನ್ನು ಪಿರ್ಯಾದಿದಾರರು ಉಪಯೋಗಿಸುತ್ತಿದ್ದು, ದಿನಾಂಕ:25-05-2023 ರಂದು ಸಮಯ 09:58  ರಿಂದ  10:00ರ ಮದ್ಯೆ  ಫಿರ್ಯಾದಿದಾರರ ಗಮನಕ್ಕೆ ಬಾರದೇ ಸದ್ರಿ ಖಾತೆಯಿಂದ ಯಾರೋ ಅಪರಿಚಿತರು  ಒಟ್ಟು ರೂ.63,537/-ಹಣವನ್ನು POS ಟ್ರಾನ್ಸಾಕ್ಷನ್ ಮೂಲಕ ವರ್ಗಾಯಿಸಿಕೊಂಡು  ಫಿರ್ಯಾದಿದಾರರಿಗೆ ಮೋಸಮಾಡಿರುವುದಾಗಿದೆ ಎಂಬಿತ್ಯಾದಿ.

Traffic South Police Station                  

ದಿನಾಂಕ: 25-05-2023 ರಂದು ಪಿರ್ಯಾದಿದಾರರಾದ ಮೋಹನದಾಸ್ (49 ವರ್ಷ) ರವರು ಹಾಗೂ ಅವರ ಅಣ್ಣ ರಾಮದಾಸ ರವರು ಬಂಟ್ವಾಳ ತಾಲ್ಲೂಕು ಬಾಳೆಪುನಿ ಗ್ರಾಮ ಮೂಳೂರು ಎಂಬಲ್ಲಿ ಕುಟುಂಬದ ದೈವಾರಧನೆ ಕಾರ್ಯಕ್ರಮಕ್ಕೆ ಬಂದಿದ್ದು ಮೂಳೂರು ಬಸ್ಸು ನಿಲ್ದಾಣದಲ್ಲಿ ರಾತ್ರಿ ಸಮಯ ಸುಮಾರು ರಾತ್ರಿ 9:00 ಗಂಟೆಗೆ ಪಿರ್ಯಾದಿದಾರರು ಹಾಗೂ ಅವರ ಅಣ್ಣ ರಾಮದಾಸ ರವರು ಮಾತನಾಡುತ್ತ ಕುಳಿತಿರುವಾಗ ಜೈಲು ರೋಡ್ ಕಡೆಯಿಂದ ಮುಡಿಪು ಕಡೆಗೆ ಲಾರಿ ನಂಬ್ರ KA-20-A-5170 ನೇದರ ಚಾಲಕ ಅಹಮ್ಮದ ಬಾವಾ ಎಂಬಾತನು ಸರಕುಗಳನ್ನು ತುಂಬಿಸಿಕೊಂಡು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ ಪರಿಣಾಮ ಸದ್ರಿ ಲಾರಿಯ ಚಾಲಕನು ಲಾರಿ ನಿಯಂತ್ರಣವನ್ನು ಕಳೆದುಕೊಂಡು ವಾಹನ ಸಮೇತ ಪಿರ್ಯಾದಿದಾರರು ಹಾಗೂ ರಾಮದಾಸರವರು ಕುಳಿತಿರುವ ಬಸ್ ನಿಲ್ದಾಣದ ಮೇಲೆ ಮಗುಚಿ ಬಿದ್ದಿರುತ್ತದೆ, ಈ ಅಪಘಾತದಿಂದ ಪಿರ್ಯಾದಿದಾರರಿಗೆ ಗಾಯಗಳು ಆಗಿರುವುದಿಲ್ಲ ಪಿರ್ಯಾದಿದಾರರ ಅಣ್ಣ ರಾಮದಾಸನಿಗೆ ಸದ್ರಿ ಬಸ್ ನಿಲ್ದಾಣದ ಮೇಲ್ಚಾವಣಿಯು ತಲೆಗೆ ಬಿದ್ದು ತಲೆಗೆ ಗಂಬೀರ ಸ್ವರೂಪದ ರಕ್ತಗಾಯವಾಗಿರುತ್ತದೆ, ಅಲ್ಲದೆ ಲಾರಿಯಲ್ಲಿದ್ದ ಪ್ರಯಾಣಿಕ ಕೃಷ್ಣಪ್ಪ ಎಂಬವರಿಗೆ ಸಣ್ಣ ಪ್ರಮಾಣದ ಗಾಯವಾಗಿರುತ್ತದೆ, ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಗಾಯಗೊಂಡವರನ್ನು ಉಪಚರಿಸಿ ಕಾರೊಂದರಲ್ಲಿ ಚಿಕಿತ್ಸೆ ಬಗ್ಗೆ ದೇರಳಕಟ್ಟೆ ಕೆ,ಎಸ್ ಹೆಗ್ಡೆ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುವುದಾಗಿದೆ,ಈ ಅಪಘಾತದಲ್ಲಿ ಲಾರಿ ಚಾಲಕನಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಎಂಬಿತ್ಯಾದಿ.

 

Traffic North Police Station

ಪಿರ್ಯಾದಿ Vajresh ದಿನಾಂಕ: 24-05-2023 ರಂದು ಅವರ ಬಾಬ್ತು KA-19-HD-7504 ನಂಬ್ರದ ಸ್ಕೂಟರ್ ನಲ್ಲಿ ಅಬೆಜಾನ್ ಡೆಲಿವರಿ ಕೆಲಸದ ನಿಮಿತ್ತ ಮಂಗಳೂರಿನ ಬಂದರಿನ ಆಫೀಸಿನಿಂದ ಹೊರಟು ಕಾವೂರು ಮಾರ್ಗವಾಗಿ ಪಂಜಿಮೊಗರು ಎಂಬಲ್ಲಿಗೆ ಹೋಗುತ್ತಾ ಬೆಳಿಗ್ಗೆ 08:45 ಗಂಟೆಗೆ ಕಾವೂರು ಶಾಂತಿನಗರ ಎಂಬಲ್ಲಿ ತಲುಪುತಿದ್ದಂತೆ KA-19-AA-5434 ನಂಬ್ರದ ಗೂಡ್ಸ್ ಟೆಂಪೋವನ್ನು ಅದರ ಚಾಲಕ ರಂಜಿತ್ ಎಂಬವರು ಯಾವುದೇ ಸೂಚನೆ ನೀಡದೇ ಒಮ್ಮೇಲೆ ನಿರ್ಲಕ್ಷ್ಯತನದಿಂದ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರ ಸ್ಕೂಟರಿನ ಎಡಬದಿಯ ಹ್ಯಾಂಟಲ್ ಗೆ ಗೂಡ್ಸ್ ಟೆಂಪೋದ ಬಲಬದಿಯ ಬಂಪರ್ ತಾಗಿ ರಸ್ತೆಗೆ ಬಿದ್ದ  ಪರಿಣಾಮ  ಅವರ ಎಡಕಾಲಿನ ಮಣಿಗಂಟಿನ ಬಳಿ ಗುದ್ದಿದ ರೀತಿಯ ಗಾಯ ಮತ್ತು ಬಲ ಕಾಲಿನ ಮೊಣಗಂಟಿನ ಬಳಿ ತರಚಿದ ಗಾಯವಾಗಿದ್ದು  ಆರೋಪಿ ರಂಜಿತನು ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಟೆಂಪೋದಲ್ಲಿ ಎ.ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲುಮಾಡಿಕೊಂಡಿರುತ್ತಾರೆ ಎಂಬಿತ್ಯಾಧಿ.

Moodabidre PS

ಪಿರ್ಯಾದಿ Sheikh Usman Basha ದಿನಾಂಕ 23-05-2023 ರಂದು ಮೊಹಮ್ಮದ್ ಅದ್ನಾನ್ ಎಂಬುವರ ಜೊತೆ KA-19-EW-7191 ನಂಬರಿನ ಸ್ಕೂಟರಿನಲ್ಲಿ ಹಿಂಬದಿ ಸವಾರರಾಗಿ ಕುಳಿತುಕೊಂಡು ತೋಡಾರಿನಿಂದ ಮೂಡಬಿದ್ರೆ ಕಡೆಗೆ ಹೊರಟಿದ್ದು, ಸ್ಕೂಟರಿನ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಸಮಯ ಸುಮಾರು 11.30 ಗಂಟೆಗೆ ತೋಡಾರಿನ ಪಡುಪೇರಳಕಟ್ಟೆ ಎಂಬಲ್ಲಿಗೆ ತಲುಪುತ್ತಿದ್ದಂತೆ ನಾಯಿಯು ರಸ್ತೆಗೆ ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಒಂದೇ ಸಲಕ್ಕೆ ಬ್ರೇಕ್ ಹಿಡಿದಿದ್ದು, ನಿಯಂತ್ರಣ ಸಿಗದೇ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದುದಾರರಿಗೆ ಬಲ ತೊಡೆಯ ಮೇಲ್ಭಾಗ ಸೊಂಟದ ಬಳಿ ಮೂಳೆ ಮುರಿತವಾಗಿ ಶಸ್ತ್ರಚಿಕಿತ್ಸೆಗಾಗಿ  ಅಲಂಗಾರಿನ ಮೌಂಟ್ ರೋಸರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 21-08-2023 01:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080