ಅಭಿಪ್ರಾಯ / ಸಲಹೆಗಳು

Crime report in Barke PS

ದಿನಾಂಕ: 25-06-2023 ರಂದು 16.30 ಗಂಟೆಗೆ ಮಂಗಳೂರು ನಗರದ ಲಾಲ್ ಭಾಗ್ ಬಸ್ಸು ನಿಲ್ದಾಣ ದಲ್ಲಿ ಅಭಿಷೇಕ್ ಶೆಟ್ಟಿ (29) ವಾಸ: ಶಾಂತಿನಗರ ಮಸೀದಿ ಬಳಿ, ಕಾವೂರು ಮಂಗಳೂರು ಎಂಬಾತನು ಮಾದಕವಸ್ತು ಗಾಂಜಾ ಸೇವನೆ ಮಾಡಿರುವವನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಬಗ್ಗೆ ಮಂಗಳೂರು ನಗರದ ಕುಂಟಿಕಾನದ ಎ.ಜೆ ಆಸ್ಪತ್ರೆಯ ವೈಧ್ಯರಿಂದ  ವೈಧ್ಯಕೀಯ ತಪಾಸಣೆಯನ್ನು ಮಾಡಿದಲ್ಲಿ  ವೈದ್ಯರು “Tetrahydracannabinoid (Marijuana) POSITIVE”  ಎಂಬುದಾಗಿ ದೃಡಪತ್ರವನ್ನು ನಿಡಿರುತ್ತಾರೆ. ಸದ್ರಿ ಆಪಾದಿತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಆಪಾದಿತನ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ 1985 ರೀತ್ಯಾ ಪ್ರಕರಣ ದಾಖಲಿಸಿಕೊಂಡಿರುತ್ತೇನೆ ಎಂಬಿತ್ಯಾದಿಯಾಗಿರುತ್ತದೆ.

Panambur PS 

ದಿನಾಂಕ : 25-06-2023 ರಂದು 10-30 ಗಂಟೆಗೆ ಕಸಬಾ ಬೇಂಗ್ರೆ ಫುಟ್ ಬಾಲ್ ಮೈದಾನದ ಸಮೀಪ  ಅಬ್ದುಲ್ ನೌಝೀದ್ (30),  ವಾಸ.  ಎಮ್.ಜೆ.ಎಮ್-237, ಕಸಾಬಾ ಬೆಂಗ್ರೆ  ಮಂಗಳೂರು  ಎಂಬಾತನು ಮಾದಕ ವಸ್ತು ಸೇವನೆ ಮಾಡಿರುವವನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಲ್ಲಿ  ವೈದ್ಯಾಧಿಕಾರಿಗಳು ಪರೀಕ್ಷಿಸಿ “The Urine Sample Tested For The Presence of 1) Amphetamine, 2) Methamphetamine, 3) Benzodiazepines,  4)Methylenedioxymethamphetamine is Positive” ಎಂದು ವರದಿ ನೀಡಿರುತ್ತಾರೆ. ಆಪಾದಿತನು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Panambur PS 

ದಿನಾಂಕ : 25-06-2023 ರಂದು 11-00 ಗಂಟೆಗೆ ತಣ್ಣೀರು ಬಾವಿ ಬೀಚ್ ಸಮೀಪ    ಮೊಹಮ್ಮದ್ ನಿಸಾರ್ (29),  ವಾಸ – ಅಡ್ಯಾರ್, ಸಹ್ಯಾದ್ರಿ ಕಾಲೇಜ್ ಹತ್ತಿರ, ಅಡ್ಯಾರ್, ಮಂಗಳೂರು ಎಂಬಾತನು ಮಾದಕ ವಸ್ತು ಸೇವನೆ ಮಾಡಿರುವವನನ್ನು  ವಶಕ್ಕೆ ಪಡೆದುಕೊಂಡಿದ್ದು ನಂತರ  ಸದ್ರಿಯವನನ್ನು ವೈದ್ಯಕೀಯ ತಪಾಸಣೆಗೆ ಗುರಿಪಡಿಸಿದಲ್ಲಿ ವೈದ್ಯಾಧಿಕಾರಿಗಳು ಪರೀಕ್ಷಿಸಿ “The Urine Sample Tested For The Presence of 1)  Methamphetamine, 2) Benzodiazepines is Positive” ಎಂದು ವರದಿ ನೀಡಿರುತ್ತಾರೆ. ಆಪಾದಿತನು ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿರುವುದರಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

Mangalore North PS

ಪಿರ್ಯಾದಿ ಆಂಟನಿ ಪಿಂಟೋ, ಮಗಳು   ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಬರುವ ಸೈಂಟ್ ಅಲೋಸಿಯೆಸ್ ಕಾಲೇಜು ಮಂಗಳೂರು (ಸ್ವಾಯತ್ತ) ಇಲ್ಲಿ 2017 ನೇ ಇಸವಿಯಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್  ಪದವಿಯನ್ನು ಪೂರೈಸಿಕೊಂಡಿದ್ದು  ಪ್ರಸ್ತುತ ವಿದೇಶದಲ್ಲಿ ಅಂದರೆ ಯು.ಎ.ಇ. ಯಲ್ಲಿ ಸುಮಾರು 5 ವರ್ಷಗಳಿಂದ ಬ್ರಿಟಿಷ್ ಶಾಲೆಯಲ್ಲಿ ಎಂ.ಎಸ್. ಆಗಿ ಕೆಲಸ ಮಾಡಿಕೊಂಡಿರುತ್ತಾರೆ. 2018 ನೇ ಇಸವಿ ಅಕ್ಟೋಬರ್ ತಿಂಗಳಲ್ಲಿ ಮಂಗಳೂರು ಕೆ.ಎಸ್. ರಾವ್ ರಸ್ತೆಯಲ್ಲಿರುವ ಯು.ಎ.ಇ. ಎಕ್ಷ್‌ಚೇಂಜ್ ಎಂಬ ಹೆಸರಿನ ಸಂಸ್ಥೆಯ ಶೈಲೇಶ್ ಶೆಟ್ಟಿ ಎಂಬವರಿಂದ ನನ್ನ ಮಗಳ  ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್  ಪದವಿಯ ಸರ್ಟಿಫಿಕೇಟನ್ನು  ಡೆಲ್ಲಿಯಲ್ಲಿರುವ ಯು.ಎ.ಇ. ಎಂಬಾಸಿಯಿಂದ Attestation   ಮಾಡಿಸಿ  ಈ Attestation  ಆದ ದಾಖಲಾತಿಯನ್ನು ನನ್ನ ಪತ್ನಿ ಮುಖೇನಾ 2018 ನೇ ಡಿಸೆಂಬರ್ ತಿಂಗಳಲ್ಲಿ ದುಬಾಯಿಗೆ ಹೋಗಿ ಮಗಳಿಗೆ ಕೊಟ್ಟು ಬಂದಿದ್ದು, ಪ್ರಸ್ತುತ ದುಬಾಯಿಯಲ್ಲಿ ಕೆಲಸದಲ್ಲಿರುವ ತನ್ನ ಮಗಳು ಅಲ್ಲಿಯ ಕಾನೂನಿನ್ವಯ ಇನ್ನೊಮ್ಮೆ ಸದರಿ ಸರ್ಟಿಫಿಕೇಟನ್ನು Attestation  ಮಾಡಲು 2023 ನೇ ಜೂನ್ ತಿಂಗಳ 16 ರಂದು ದುಬಾಯಿಯ Ministry Of Foreign Affairs ಇಲಾಖೆಗೆ ಹೋಗಿ ಕೊಟ್ಟಾಗ ಸದರಿ ಸರ್ಟಿಫಿಕೇಟ್ ನಲ್ಲಿರುವ  ಈ ಹಿಂದಿನ ದಿನಾಂಕ: 26-11-2018 ರ Attestation ನಕಲಿ ಎಂಬುದಾಗಿ ತಿಳಿಸಿ ಅವಳ ಮೂಲ ದಾಖಲಾತಿಯನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಆದುದರಿಂದ ಮಂಗಳೂರು ಕೆ.ಎಸ್. ರಾವ್ ರಸ್ತೆಯಲ್ಲಿರುವ ಯು.ಎ.ಇ. ಎಕ್ಷ್ ಚೇಂಜ್‌‌ನ ಶೈಲೇಶ್  ಶೆಟ್ಟಿ ಎಂಬವರು ಪಿರ್ಯಾಧಿದಾರರ ಮಗಳ ಮೂಲ ಸರ್ಟಿಫಿಕೇಟ್ ನಲ್ಲಿ ಇರುವ Attestation ಮೂಲ ಎಂದು ನಂಬಿಸಿ Attestation ನ್ನು ಮಾಡಿಕೊಟ್ಟು ಮೋಸ ಮಾಡಿದ್ದು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ನೀಡಿದ ದೂರು ಆಗಿರುತ್ತದೆ ಎಂಬಿತ್ಯಾದಿ ಸಾರಾಂಶ.

Traffic South Police Station

ಫಿರ್ಯಾದಿದಾರರು PRATHVIISH Y PUNJA ದಿನಾಂಕ: 21-06-2023 ರಂದು ಸಂಜೆ ವೇಳೆಗೆ ಕಾಲೇಜು ಮುಗಿಸಿ ತನ್ನ ಬಾಬ್ತು ಸ್ಕೂಟರ್ ನಂಬ್ರ KA-19-HG-2920 ರಲ್ಲಿ ನಂತೂರಿನಿಂದ ಪರಂಗಿಪೇಟೆಗೆ ಬರುತ್ತಿರುವಾಗ ಸಂಜೆ ಸುಮಾರು 03-55  ಗಂಟೆಗೆ  ಪಡೀಲ್ ಜಂಕ್ಷನ್ ತಲುಪಿದಾಗ ರಸ್ತೆ ವಿಭಾಜಕದಿಂದ ರಸ್ತೆ ಎಡಬದಿಗೆ ಪಡೀಲ್ ನಿಂದ ಶಾಂತಿನಗರಕ್ಕೆ ಹೊಗುತ್ತಿದ್ದ KA-19-ML-2307 ನೊಂದಣಿ ಸಂಖ್ಯೆಯ ಕಾರೊಂದನ್ನು ಅದರ ಚಾಲಕ ಅಶೋಕ್ ಗೌಡ ಎಂಬವರು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಫಿರ್ಯಾದಿದಾರರ ದ್ವಿಚಕ್ರ ವಾಹನದ ಬಲಬದಿ ಸೈಲೆನ್ಸರ್ ಗೆ ಡಿಕ್ಕಿ ಹೊಡೆದಿರುತ್ತಾರೆ. ನಂತರ ಫಿರ್ಯಾದಿದಾರರು ಬೈಕನ್ನು ಮುಂದಕ್ಕೆ ನಿಲ್ಲಿಸಿ ಕಾರು ಚಾಲಕನಾದ ಅಶೋಕ್ ಗೌಡರ ರವರಲ್ಲಿ ಮಾತನಾಡಿದಾಗ ಅವರು ತಪ್ಪೊಪ್ಪಿಕೊಳ್ಳದೆ ಠಾಣೆಗೆ ಬಂದು ದೂರು ನೀಡುವುದಾಗಿ ತಿಳಿಸಿ ಅಲ್ಲಿಂದ ತೆರಳಿದ್ದು, ಫಿರ್ಯಾದಿದಾರರು ಠಾಣೆಗೆ ಬಂದು ಡಿಕ್ಕಿ ಹೊಡೆದ ಕಾರಿನ ಚಾಲಕನನ್ನು ಕರೆಯಿಸಿ ವಿಚಾರಿಸಲು ತಿಳಿಸಿದ್ದು, ಈ ದಿನ ದಿನಾಂಕ: 25-06-2023 ರಂದು ಫಿರ್ಯಾದಿದಾರರು ಮತ್ತು  ಕಾರಿನ ಚಾಲಕ ಠಾಣೆಗೆ ಬಂದು ಮಾತುಕತೆ ನಡೆಸಿದಾಗ ಕಾರಿನ ಚಾಲಕ ತಪ್ಪನ್ನು ಒಪ್ಪದೇ ಇದ್ದುದರಿಂದ ಈ ದೂರನ್ನು ತಡವಾಗಿ ಫಿರ್ಯಾದಿದಾರರು ನೀಡಿರುತ್ತಾರೆ ಎಂಬಿತ್ಯಾದಿ.

 

 

Mangalore South PS                    

ದಿನಾಂಕ 24-06-2023 ರಂದು  ಬೆಳಿಗ್ಗೆ 8-45 ಗಂಟೆಯಿಂದ 9-20 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿ Ranjini Marla ರವರು ಕೆ.ಎಸ್.ಆ್.ಟಿ.ಸಿ ಬಸ್ ನಲ್ಲಿ ತುಂಬೆಯಿಂದ ಮಂಗಳೂರು ನಗರದ ಸರ್ವೀಸ್ ಬಸ್ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ  ವೇಳೆ ಅವರ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಸಣ್ಣ ಪರ್ಸನ್ನು ಕಳವು ಮಾಡಿದ್ದು, ಕಳವಾದ ಪರ್ಸ್ ನಲ್ಲಿ ಸುಮಾರು 55 ಗ್ರಾಂ ತೂಕದ ಚಿನ್ನಾಭರಣ, ಪೆನ್ ಡ್ರೈವ್-1, ನಗದು ಹಣ 5,000/- ಸೇರಿ ಅಂದಾಜು ರೂಪಾಯಿ  3,05,500/- ಮೌಲ್ಯದ ಬೆಲೆ ಬಾಳುವ ಸೊತ್ತುಗಳು ಕಳವಾಗಿದ್ದು, ಸೊತ್ತುಗಳನ್ನು ಹುಡುಕಾಡಿ ಸಿಗದೇ ಇರುವುದರಿಂದ ದಿನಾಂಕ 26-06-2023 ರಂದು ಠಾಣೆಗೆ ಬಂದು ದೂರು ನೀಡಿರುವುದಾಗಿದೆ.

Moodabidre PS

 ದಿನಾಂಕ 25-06-2023 ರಂದು ಪಿರ್ಯಾದಿ Rajesh Samagar ದಾರರು ತನ್ನ ಬಾಬ್ತು KA-19-EF-4830 ನಂಬರಿನ ಸ್ಕೂಟರಿನಲ್ಲಿ ಹೆಂಡತಿ ಅಕ್ಷತಾ ರವರನ್ನು ಹಿಂಬದಿ ಸವಾರರನ್ನಾಗಿ ಕೂರಿಸಿಕೊಂಡು ಹಾಗೂ ಮಗಳು ಆರಾಧ್ಯಳನ್ನು ಜೊತೆಯಲ್ಲಿ ಕರೆದುಕೊಂಡು ಮನೆಯಿಂದ ಮೂಡಬಿದ್ರೆ ಕಡೆ ಹೊರಟು ಸಮಯ ಮಧ್ಯಾಹ್ನ 2.30 ಗಂಟೆಗೆ ಪಂಡಿತ್ ರೆಸಾರ್ಟ್ ಬಳಿ ತಲುಪುತ್ತಿದ್ದಂತೆ ಎದುರುಗಡೆಯಿಂದ KA-19-AC-3541 ನಂಬರಿನ ಆಟೋರಿಕ್ಷಾದ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಗಳನ್ನು ನೀಡದೆ ಏಕಾಏಕಿಯಾಗಿ ಬಲಗಡೆಯಲ್ಲಿರುವ ಅಡ್ಡ ರಸ್ತೆಗೆ ತಿರುಗಿಸಿ ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿಪಡಿಸಿದ್ದು ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಹಣೆ ಮತ್ತು ತುಟಿಯ ಬಳಿ ತರಚಿದ ಗಾಯ ಹಾಗೂ ಹೆಂಡತಿಯ ಬಲಗಾಲಿಗೆ ಚರ್ಮ ಕಿತ್ತು ಹೋಗಿ ರಕ್ತ ಗಾಯವಾಗಿದ್ದು, ಮತ್ತು ಮಗಳಿಗೆ ಹಣೆಯ ಬಳಿ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರು ಮತ್ತು ಮಗಳು ಮೌಂಟ್ ರೋಸರಿಯಲ್ಲಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡಿದ್ದು, ಹೆಂಡತಿ ಅಕ್ಷತಾ ರವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ಚಿಕಿತ್ಸೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 21-08-2023 02:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080