ಅಭಿಪ್ರಾಯ / ಸಲಹೆಗಳು

 

 Crime Report in Mangalore Rural PS   

ಫಿರ್ಯಾದಿ harsharaj ದಾರರು ದಿನಾಂಕ:24-07-2023 ರಂದು ಬೆಳಿಗ್ಗೆ 8.00 ಗಂಟೆಗೆ ಅವರ ತಂದೆ ಕೇಶವ್ ಮೇಲಾಂಟ ತಾಯಿ ಜಯಂತಿ ಮೇಲಾಂಟ ರವರೊಂದಿಗೆ ಅವರ ಬಾಬ್ತು ನೀರುಮಾರ್ಗದಲ್ಲಿರುವ ಶ್ರೀದೇವಿ ಟೆಕ್ಸ್ಟೈಲ್ಸ್ ಅಂಗಡಿಗೆ ವ್ಯಾಪಾರದ ಬಗ್ಗೆ ಹೋದವರು ರಾತ್ರಿ 8.30 ಗಂಟೆಗೆ bondanthila ಮನೆಗೆ ಬಂದು ಮನೆ ಬಾಗಿಲು ತೆರೆದು ಒಳಗೆ ಹೋಗಿ ನೋಡಲಾಗಿ ಫಿರ್ಯಾದಿದಾರ ತಂದೆಯ ಬೆಡ್ ರೂಮಿನ ಒಳಗೆ ಕಿಟಕೀಯ ಸರಳುಗಳನ್ನು ಕತ್ತರಿಸಿದ್ದು ಅಲ್ಲದೆ ಬೆಡ್ ರೂಮಿನ ಒಳಗಡೆ ಇದ್ದ ಕಬ್ಬಿಣದ ಕಪಾಟನ್ನು ಕತ್ತರಿಸಿ ಕಪಾಟಿನ ಒಳಗಡೆ ಇದ್ದ ಸುಮಾರು 1.40 ಲಕ್ಷ ನಗದು ಹಣ ಮತ್ತು 32,000 ರೂಪಾಯಿ ಮೌಲ್ಯದ  8 ಗ್ರಾಂ ತೂಕದ  ಚಿನ್ನದ ಉಂಗುರವನ್ನು , ಕಳವು ಮಾಡಿರುವುದಲ್ಲದೆ ಇನ್ನೊಂದು ಬೆಡ್ ರೂಮಿನ ಒಳಗಡೆ ಇರುವ ಕಿಟಕೀಯ ಕಬ್ಬಿಣದ ರಾಡನ್ನು ಯಾರೋ ಕಳ್ಳರು ಕತ್ತರಿಸಿ ಕಳವು ಮಾಡುವರೆ ಪ್ರಯತ್ನಿಸಿ ಹೋಗಿರುವುದಾಗಿ  ಎಂಬಿತ್ಯಾದಿ

Mangalore North PS                                      

ದಿನಾಂಕ 20-07-2023 ರಂದು ಪಿರ್ಯಾದಿ ಸಂಜಯ್ ರವರು ಅವರ  ಗೆಳೆಯ ಶ್ರವಣ್  ಎಂಬವರೊಂದಿಗೆ  ಮಂಗಳೂರಿನ  ಶರವು ದೇವಸ್ಥಾನದ  ರಸ್ತೆಯ ಎಕ್ಷೆಲ್ ಮಿಸ್ ಚಿಫ್ ಮಾಲ್ ನ ಬಳಿ ಇರುವ  ಐರಿಚ್ ಎಂಬ ಕಂಪನಿಯಲ್ಲಿ ಶ್ರವಣ್ ಗೆ  ಕೆಲಸ ಕೇಳಲು  ಶ್ರವಣ್ ರವರ ತಂದೆಯಾದ ಸಂದೀಪ್ ಶೆಟ್ಟಿ ಎಂಬವರ  ಪ್ಯಾಶನ್ ಪ್ರೋ ಮೋಟಾರ್ ಸೈಕಲ್ ನಲ್ಲಿ ಹೋದವರು ಅವರ ಮೋಟಾರ್ ಸೈಕಲನ್ನು  ಶರವು ದೇವಸ್ಥಾನ ರಸ್ತೆಯಲ್ಲಿ ಎಕ್ಷೆಲ್ ಮಿಸ್ ಚಿಫ್ ಮಾಲ್ ನ ಹತ್ತಿರ ಸಂಜೆ ಸುಮಾರು 05.00 ಗಂಟೆಗೆ ಪಾರ್ಕ್ ಮಾಡಿ  ಐರಿಚ್  ಕಂಪನಿಗೆ ಹೋಗಿ  ಮಾತನಾಡಿ  ವಾಪಸ್ಸು ಬಂದು ನೋಡಿದಾಗ ಸಮಯ ಸುಮಾರು 06.00 ಗಂಟೆಯ ವೇಳೆಗೆ ಪಾರ್ಕ್ ಮಾಡಿದ ಮೋಟಾರ್ ಸೈಕಲ್ ಅಲ್ಲಿರದೇ ಕಾಣೆಯಾಗಿದ್ದು  ಎಲ್ಲಾ ಕಡೇ ಹುಡುಕಾಡಿ ಸ್ನೇಹಿತರಲ್ಲಿ ಸಂಬಂಧಿಕರಲ್ಲಿ ವಿಚಾರಿಸಿದರೂ ಕೂಡ ಪತ್ತೆಯಾಗದೇ ಇದ್ದು ಸದ್ರಿ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡುಹೋಗಿದ್ದು ಪತ್ತೆ ಮಾಡಿಕೊಡಬೇಕಾಗಿ ಕೋರಿದ ಪಿರ್ಯಾದಿ ಎಂಬಿತ್ಯಾದಿ 

Mangalore Rural PS..                                      

ಪಿರ್ಯಾದಿ Shashikala Devadiga ದಾರರು 2014 ನೇ ಇಸವಿಯಲ್ಲಿ ಮಂಗಳೂರಿನಲ್ಲಿ ಸ್ವಂತ ಮನೆಯನ್ನು ಹುಡುಕುತ್ತಿರುವಾಗ ಆರೋಪಿತೆ ಜಾಯ್ಸ್ ರೀನಾ ರಸ್ಕಿನ್ಹಾರವರು ಮಂಗಳೂರು ತಾಲೂಕು ನೀರುಮಾರ್ಗ ಗ್ರಾಮದ ಸರಿಪಳ್ಳ ಪಾಂಪೈ ನಗರದಲ್ಲಿ ರೆಡ್ ರಾಕ್  ಹೈಟ್ಸ್ ಎಂಬ ಅಪಾರ್ಟ್ಮೆಂಟ್ ನಿರ್ಮಾಣ ಮಾಡುತ್ತಿರುವುದು ತಿಳಿದು ಬಂದಾಗ ಪಿರ್ಯಾದಿದಾರರು ಸದ್ರಿ ಅಪಾರ್ಟ್ಮೆಂಟಿನ ಪ್ಲಾಟ್ ನ್ನು ಖರೀದಿ ಮಾಡುವ ಉದ್ಧೇಶದಿಂದ ದಿನಾಂಕ: 17-10-2014 ರಂದು ಆರೋಪಿತೆಯೊಂದಿಗೆ ಸೇಲ್ ಅಗ್ರಿಮೆಂಟ್ ಮಾಡಿಸಿಕೊಂಡು ದಿನಾಂಕ: 20-07-2021 ರಂದು ಸೇಲ್ ಡೀಡ್ ಮೂಲಕ ಪ್ಲಾಟ್ ನಂ: 402 ನ್ನು ಮಂಗಳೂರಿನ ಉಪ ನೋಂದಾವಣಾಧಿಕಾರಿಯವರ ಕಛೇರಿಯಲ್ಲಿ ತನ್ನ ಹೆಸರಿಗೆ ನೋಂದಾಯಿಸಿಕೊಂಡು ಸದ್ರಿ ಪ್ಲಾಟ್ನ ಮಾರುಕಟ್ಟೆ ದರ ರೂ: 15,62,000-00 ವನ್ನು ಆರೋಪಿತೆಗೆ ಪಾವತಿಸಿ ಪ್ಲಾಟನ್ನು ಆರೋಪಿತೆಯಿಂದ ಖರೀದಿಸಿ ಪಿರ್ಯಾದಿದಾರರು ಪ್ಲಾಟ್ ನಲ್ಲಿ ವಾಸ್ತವ್ಯವಿರುವಾಗ ಸ್ವಲ್ಪ ಸಮಯದ ನಂತರ ಪಿರ್ಯಾದಿದಾರರು ವಾಸ್ತವ್ಯವಿರುವ ಪ್ಲಾಟ್ ನಂ: 402 ಕ್ಕೆ 02 ನೇ ಆರೋಪಿಯಾದ ಜಿ ಮುರಳೀಧರ ಪೈಯವರು ಇತರರೊಂದಿಗೆ ಬಂದು ಪ್ಲಾಟ್ ನ್ನು ತೆರವುಗೊಳಿಸುವಂತೆ ತಿಳಿಸಿದಾಗ ಪಿರ್ಯಾದಿದಾರರು ಸದ್ರಿ ಪ್ಲಾಟನ್ನು ತಾನು ಖರೀದಿಸಿರುವುದಾಗಿ ತಿಳಿಸಿದಾಗ್ಯೂ 02 ನೇ ಆರೋಪಿಯು ಒಪ್ಪದೇ ಇದ್ದಾಗ ಪಿರ್ಯಾದಿದಾರರು ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಮಂಗಳೂರಿನಲ್ಲಿ ಓ.ಎಸ್.ನಂ: 639/2022 ರಂತೆ ಪ್ರತಿಬಂಧಕಾಜ್ಞೆಯನ್ನು ಹೊರಡಿಸಿದರೂ 02 ನೇ ಆರೋಪಿಯು ಪಿರ್ಯಾದಿದಾರರು ವಾಸ್ತವ್ಯವಿದ್ದ ಪ್ಲಾಟ್ ಗೆ ಬಂದು ನೀನು ಪ್ಲಾಟ್ ತೆರವು ಮಾಡದೇ ಇದ್ದರೆ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಒಡ್ಡಿದ್ದು, ಆ ಸಂದರ್ಭದಲ್ಲಿ ಪಿರ್ಯಾದಿದಾರರು 01 ನೇ ಆರೋಪಿತೆಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ 02 ನೇ ಆರೋಪಿತನು ಪದೇ ಪದೇ ಪಿರ್ಯಾದಿದಾರರ ಪ್ಲಾಟ್ ಗೆ ಭೇಟಿ ನೀಡುತ್ತಿರುವುದು ತಿಳಿದಿದ್ದ 01 ನೇ ಆರೋಪಿತೆಯು ಸಂಪರ್ಕಕ್ಕೆ ಸಿಗದೇ ತಪ್ಪಿಸಿಕೊಳ್ಳುತ್ತಿದ್ದು, 01 ನೇ ಆರೋಪಿತೆಯು ಪ್ಲಾಟ್ ನಂ: 402 ನ್ನು ಈ ಹಿಂದೆ 02 ನೇ ಆರೋಪಿತನಿಗೆ ಮಾರಾಟ ಮಾಡಿರುವುದನ್ನು ಪಿರ್ಯಾದಿದಾರರಿಗೆ ತಿಳಿಸದೇ ಆರೋಪಿತೆಯು ವಂಚಿಸಿ ಮೋಸ ಮಾಡುವ ಉದ್ಧೇಶದಿಂದ ಪಿರ್ಯಾದಿದಾರರಿಗೆ ಮಾರಾಟ ಮಾಡಿರುವುದು ಎಂಬಿತ್ಯಾದಿ.

 

Urva PS

ಮಂಗಳೂರು  ನಗರದ  ಕಾಪಿಕಾಡ್  4  ನೇ  ಕ್ರಾಸ್  ನಲ್ಲಿ  ವಾಸ  ಮಾಡಿಕೊಂಡಿರುವ  ಪಿರ್ಯಾದಿದಾರರ   ಮನೆಯ ಲ್ಲಿ  4 1/2 ವರ್ಷದ ಡಾಬರ್ ಮನ್  ಸಾಕು  ನಾಯಿಯನ್ನು   ಸಾಕುತ್ತಿದ್ದು, ದಿನಾಂಕ  24.07.2023  ರಂದು  ಬೆಳಿಗ್ಗೆ  10:30 ಗಂಟೆಯಿಂದ  13:00  ಗಂಟೆಯ  ಮದ್ಯೆ  ನೆರೆಮನೆಯ ಬೀಮಯ್ಯ ಎಂಬವರು ಪೂರ್ವದ್ವೇಷದ  ಹಿನ್ನಲೆಯಲ್ಲಿ  ನಾಯಿಗೆ   ಯಾವುದೋ  ವಿಷ  ಪದಾರ್ಥವನ್ನು  ಹಾಕಿದ್ದು,  ಅದರ  ಪರಿಣಾಮ  ದಿನಾಂಕ 25.07.2023  ರಂದು ಮದ್ಯಾಹ್ನ 3:00  ಗಂಟೆ  ಸಮಯಕ್ಕೆ ಪಿರ್ಯಾದಿದಾರರ  ಸಾಕು  ನಾಯಿಯು  ರಕ್ತ  ವಾಂತಿ  ಮಾಡಿಕೊಂಡು  ಮೃತಪಟ್ಟಿರುತ್ತದೆ, ಆದ್ದರಿಂದ  ನಾಯಿಯ  ಸಾವಿಗೆ  ಕಾರಣನಾದ  ಬೀಮಯ್ಯ  ಬವರ  ವಿರುದ್ದ  ಸೂಕ್ತ  ಕಾನೂನು  ಕ್ರಮ ಕೈಗೊಳ್ಳಬೇಕಾಗಿ  ಎಂಬಿತ್ಯಾದಿ.

CEN Crime PS..

ಫಿರ್ಯಾದಿ ಮೊಹಮ್ಮದ್ ಹನೀಫ್ ರವರ ಮೆಸರ್ಸ್ ಮರವೂರು ಟ್ರೇಡಿಂಗ್ ಕಂಪನಿಯಲ್ಲಿ ಆಡಳಿತ ಪಾಲುದಾರರಾಗಿರುತ್ತಾರೆ.ಪಿರ್ಯಾದಿದಾರರು ಸದ್ರಿ ಕಂಪನಿಯಲ್ಲಿ ಅಡಿಕೆ, ಕಾಳುಮೆಣಸಿನ ರಖಂ ಮತ್ತು ಚಿಲ್ಲರೆ ವ್ಯಾಪಾರವನ್ನು ನಡೆಸುತ್ತಿದ್ದು ಸದ್ರಿ ಆರೋಪಿಯಾದ ಜಿಯಾವುದ್ದೀನ್ ಅಹಮ್ಮದನು ಕಳೆದ 4-5 ವರ್ಷಗಳಿಂದ ಫಿರ್ಯಾದಿದಾರರ ಕಂಪನಿಯಲ್ಲಿ  ಚೆಕ್ ಪುಸ್ತಕ,ದಿನಚರಿ ಪುಸ್ತಕ, RTGSಗೆ ಸಂಬಧಪಟ್ಟ ಪುಸ್ತಕ, ವಾಹನದ ಬಾಬ್ತು ದಾಖಲೆಗಳು ಮತ್ತು ಸಾರಿಗೆ ಬಾಬ್ತು ವ್ಯವಹಾರವನ್ನು ಮಾಡಿಕೊಂಡಿರುವುದರಿಂದ  ಆತನಲ್ಲಿ ನಂಬಿಕೆ ಇಟ್ಟುಕೊಂಡಿದ್ದು ಇತ್ತೀಚಿಗೆ ಆರೋಪಿಯ ಚಲನ ವಲನದ ಬಗ್ಗೆ ಸಂಶಯಗೊಂಡು ದಾಖಲೆಗಳನ್ನು ಪರಿಶೀಲಿಸಿದಾಗ ರೂ.1,50,00,000/-(ರೂಪಾಯಿ ಒಂದು ಕೋಟಿ ಐವತ್ತು ಲಕ್ಷ ) ಹಣವನ್ನು ಮೋಸಮಾಡಿದ ಬಗ್ಗೆ ತಿಳಿದುಬಂದಿರುತ್ತದೆ.ಆರೋಪಿತನಲ್ಲಿ ಈ ಬಗ್ಗೆ ವಿಚಾರಿಸಿದಾಗ ತನ್ನ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ನೀಡದೆ ಫಿರ್ಯಾದಿದಾರರ ಚೆಕ್ ಬುಕ್ ಗಳಲ್ಲಿ ಫೊರ್ಜರಿ ಸಹಿಗಳು ಮತ್ತು ನಕಲಿ RTGSಗಳನ್ನು ಮಾಡಿ ನಸ್ಟವನ್ನು ಉಂಟುಮಾಡಿರುತ್ತಾರೆ.ICICI ಬ್ಯಾಕಿನ ವ್ಯವಸ್ಥಾಪಕರು ಆರೋಪಿತರೊಂದಿಗೆ ಶಾಮೀಲಾಗಿ ಫಿರ್ಯಾದಿದಾರರ ಕರೆಂಟ್ ಅಕೌಂಟಿನಿಂದಲೂ ಹಣ ವರ್ಗಾಯಿಸಿದ್ದು ಫಿರ್ಯಾದಿದಾರರು ಆರೋಪಿತರಲ್ಲಿ ಮೋಸ ವಂಚನೆ ಬಗ್ಗೆ ವಿಚಾರಿಸಿದಾ ಜೀವಬೆದರಿಕೆ ಹಾಕಿ ಫಿರ್ಯಾದಿಯನ್ನು ನಂಬಿಸಿ ವಂಚಿಸಿರುವುದಾಗಿದೆ ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Traffic South Police Station     

ಫಿರ್ಯಾದಿ JAYAPRAKASH ದಾರರು ದಿನಾಂಕ: 24-07-2023 ರಂದು  ಕೆಲಸ ಮುಗಿಸಿ ತನ್ನ ಬಾಬ್ತು KA-19-N-1935ನೇ ನಂಬ್ರದ ಮಾರುತಿ ಜೆನ್ ಕಾರಿನಲ್ಲಿ  ಪಾತೂರಿನಿಂದ ಕುರ್ನಾಡು ಕಡೆಗೆ ಹೊರಟು ರಾತ್ರಿ ಸಮಯ ಸುಮಾರು 7-55 ಗಂಟೆಗೆ ಮುಡಿಪು ಜಂಕ್ಷನ್ ಬಳಿ ಬರುತ್ತಿದ್ದಂತೆ, ಬಿ.ಸಿ.ರೋಡ್ ಕಡೆಯಿಂದ ಬಂದ KA-19-AB-6025ನೇ ನಂಬ್ರದ N.S ಹೆಸರಿನ ಸರ್ವಿಸ್ ಬಸ್ ಚಾಲಕ ನಾಗರಾಜ್ ಕೆ. ಎಂಬಾತನು ಬಸ್ಸನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮುಡಿಪು ಜಂಕ್ಷನ್ ನಲ್ಲಿ ಯು-ಟರ್ನನ್ನು ಯಾವುದೇ ಸೂಚನೆ ನೀಡದೆ ಮಂಗಳೂರು ಕಡೆಗೆ ಹೋಗುವರೆ ಒಮ್ಮೆಲೆ ಬಲಕ್ಕೆ ತಿರುಗಿಸಿ ಫಿರ್ಯಾದಿದಾರರ ಕಾರಿನ ಮುಂದಿನ ಬಲ ಬದಿಗೆ ಡಿಕ್ಕಿ ಪಡಿಸಿದ ಪರಿಣಾಮ ಫಿರ್ಯಾದಿದಾರರ ಕಾರಿನ ಮುಂಭಾಗ ಮತ್ತು ಬಲಭಾಗ ಜಖಂಗೊಂಡಿರುತ್ತದೆ. ಎಂಬಿತ್ಯಾದಿಯಾಗಿದೆ.

 

2) ಪಿರ್ಯಾದಿದಾರರಾದ ಭಗೀರತಿ (50 ವರ್ಷ) ನವರು ದಿನಾಂಕ 24/07/2023 ರಂದು ಕಟ್ಟಿದ ಬೀಡಿಯನ್ನು ಪರಾರಿಯಲ್ಲಿರುವ ಬೀಡಿ ಕಂಪನಿಗೆ ನೀಡಲು ಮನೆಯಿಂದ ನಡೆದುಕೊಂಡು ಹೋಗಿ ವಾಮಂಜೂರು ಚರ್ಚ್ ಬಳಿ ಮಂಗಳೂರು ಕಡೆಯಿಂದ ಗುರುಪುರ ಕಡೆಗೆ ಹೋಗುವ ರಾ.ಹೆ. 169 ರ ಡಾಂಬರು ರಸ್ತೆಯನ್ನು ದಾಟುತ್ತಿರುವ ಸಮಯ ಸುಮಾರು ಬೆಳಗ್ಗೆ 09:30 ಗಂಟೆಗೆ ಮಂಗಳೂರು ಕಡೆಯಿಂದ ಗುರುಪುರ ಕಡೆಗೆ ಬರುತ್ತಿದ್ದ ಗ್ಯಾಸ ಎಜೆನಸ್ಸಿಯ ಟೆಂಪೊವೊಂದು ಅದರ ಚಾಲಕನು ಒಮ್ಮೇಲೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ಅವರು ಡಾಮಾರು ರಸ್ತೆಗೆ ಬಿದ್ದು, ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಹಾಗೂ ಡಿಕ್ಕಿ ಪಡಿಸಿದ ಟೆಂಪೋ ಚಾಲಕನು ಪಿರ್ಯಾದಿದಾರರನ್ನು ಉಪಚರಿಸಿ, ಚಿಕಿತ್ಸೆ ಬಗ್ಗೆ ವಾಹನವೊಂದರಲ್ಲಿ ವಾಮಂಜೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಕಂಕನಾಡಿ ಫಾದರ್ ಮುಲ್ಲಾರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ಹಣೆಗೆ, ಬಲಗಣ್ಣಿಗೆ ಗುದ್ದಿದ ತೆರಚಿದ ಗಾಯ ಹಾಗೂ ಕೈಕಾಲುಗಳಿಗೆ ತರಚಿದ ರಕ್ತ ಗಾಯಯಾಗಿದೆ ಎಂದು ತಿಳಿಸಿ ಹೊರರೋಗಿಯಾಗಿ ಚಿಕಿತ್ಸೆ ನೀಡಿ ಕಳುಹಿಸಿರುತ್ತಾರೆ. ಪಿರ್ಯಾದಿದಾರರು ಅಪಫಾತ ಪಡಸಿದ ಸಮಯ  ಗ್ಯಾಸ ಟೆಂಪೊ ನಂಬ್ರ ನೋಡಲಾಗಿ KA 19 B 1914  ಆಗಿದ್ದು ಅದರ ಚಾಲಕನ ಹೆಸರು ಮೋನು ಕುಮಾರ್ ಎಂಬುದಾಗಿ ಅಪಘಾತ ಸ್ಥಳದಲ್ಲಿ ವಿಚಾರಿಸಿ ತಿಳಿದುಕೊಂಡಿರುತ್ತಾರೆ.  ಸದ್ರಿ ಅಪಘಾತ ಪಡಿಸಿದ ಗ್ಯಾಸ್ ಟೆಂಪೋ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

 

Konaje PS

ಪಿರ್ಯಾದಿ Kishore Shettyದಾರರ ಬಾಬ್ತು ದೇರಳಕಟ್ಟೆಯಲ್ಲಿರುವ ಶ್ರೀ ದೇವಿ ಪ್ರಸಾದ್ ಎಂಬ ಹೋಟೆಲ್ ನಲ್ಲಿ ಸುಮಾರು 08 ತಿಂಗಳಿನಿಂದ ದೇವೇಂದ್ರ ರಾಮ್ (33 ವರ್ಷ) ತಂದೆ: ದಿ|| ವಿಶಮ್ ರಾಮ್, ವಾಸ: 80ಎ, ತಲ್ಲಿ ತೋಲಿ, ಮೊಹಲ್ಲ ತಲ್ಲಿ, ಜಿಲ್ಲಾ ಅಲ್ಮೋರ್, ಪೋಸ್ಟ್ ಜಲ್ನಾ, ಉತ್ತರಾಖಂಡ ಎಂಬಾತನು ಕೆಲಸ ಮಾಡಿಕೊಂಡು, ಹೋಟೆಲ್ ಮೇಲಿರುವ ರೂಮ್ ನಲ್ಲಿ ವಾಸ ಮಾಡಿಕೊಂಡಿದ್ದು, ಆಗಾಗ ಕೆಲವು ದಿನ ದುಡಿದ ಹಣ ಪಡೆದು ಹೊರಗಡೆ ಹೋಗುತ್ತಿದ್ದು, ಬಳಿಕ ಕೆಲಸಕ್ಕೆ ಬರುತ್ತಿದ್ದನು. ಆತನಿಗೆ ದಿನನಿತ್ಯ ವಿಪರೀತ ಮಧ್ಯಪಾನ ಮಾಡುವ ಅಭ್ಯಾಸವಿದ್ದು ಜೊತೆಗೆ ಮೂರ್ಚೆರೋಗವು ಇರುತ್ತದೆ. ದೈನಂದಿನ ಕೆಲಸ ಮುಗಿದ ಬಳಿಕ, ಕೂಲಿ ಹಣವನ್ನು ಆತನು ಪಡೆದುಕೊಳ್ಳುತ್ತಿದ್ದು, ಅದರಂತೆ ದಿನಾಂಕ 16.07.2023 ರಂದು ಹೋಟೇಲ್ ನಲ್ಲಿ ಮಧ್ಯಾಹ್ನ12.00 ಗಂಟೆಗೆ ಕೆಲಸ ಮುಗಿಸಿ ಕೂಲಿ ಹಣ ಪಡೆದುಕೊಂಡು ಹೋದವನು ದಿನಾಂಕ 26.07.2023 ರವರೆಗೂ ಅಂದರೆ ಈದಿನದವರೆಗೂ ವಾಪಾಸ್ ಬಾರದೆ ಇದ್ದು, ಆತನ ಗುರುತು ಪರಿಚಯದವರಲ್ಲಿ ವಿಚಾರಿಸಿಕೊಂಡು, ಎಲ್ಲಾ ಕಡೆಗಳಲ್ಲಿ ಹುಡುಕಾಡಿ, ಆತನು ಬರಬಹುದೆಂದು ಈವರೆಗೂ ಕಾದು ತಡವಾಗಿ ದೂರು ನೀಡುತ್ತಿರುವುದಾಗಿ, ಕಾಣೆಯಾದ ದೇವೆಂದ್ರ ರಾಮ್ ರವರನ್ನು ಪತ್ತೆ ಮಾಡಿಕೊಡಬೇಕಾಗಿ ಎಂಬಿತ್ಯಾದಿ.

                             

ಇತ್ತೀಚಿನ ನವೀಕರಣ​ : 21-08-2023 02:20 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080