ಅಭಿಪ್ರಾಯ / ಸಲಹೆಗಳು

Crime Reported in : Mangalore West Traffic PS        

ಪಿರ್ಯಾದಿ SUNIL ದಾರರು ದಿನಾಂಕ 25-08-2022 ರಂದು ಸಂಜೆ ಸಮಯ ಸುಮಾರು 05.00 ಗಂಟೆಗೆ ತಮ್ಮ ಸಂಪತ್ ರವರ ಬಾಬ್ತು KA-19-EH-8778 ನೇ ದ್ವಿ ಚಕ್ರ ವಾಹನವನ್ನು ಚಿಲಿಂಬಿ ಕಡೆಯಿಂದ ಕೊಟ್ಟಾರ ಕ್ರಾಸ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಚಿಲಿಂಬಿ ಗುಡ್ಡೆ ಜಂಕ್ಷನ್ ಬಳಿ ತಲುಪುವಾಗ ಕೊಟ್ಟಾರ ಕ್ರಾಸ್ 1 ನೇ ಅಡ್ಡ ರಸ್ತೆ ಕಡೆಯಿಂದ ಚಿಲಿಂಬಿ ಗುಡ್ಡೆ ಕಡೆಗೆ  KA-19-HD-2310 ನೇ ದ್ವಿ ಚಕ್ರ ವಾಹನವನ್ನು ಅದರ ಸವಾರನು ನಿರ್ಲಕ್ಷ್ಯತನದಿಂದ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ದ್ವಿ ಚಕ್ರ ವಾಹನದ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಬಲಗಾಲಿನ ಕೋಲುಕಾಲಿಗೆ ಮೂಳೆ ಮುರಿತದ ಗಾಯವಾಗಿ ನಗರದ  ಎ ಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ

Crime Reported in : Moodabidre PS

ಪಿರ್ಯಾದಿದಾರರು ಸುಮಾರು 8/9 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂದಿಸಿದಂತೆ ವಿವಿದ ಸಂಸ್ಥೆಗಳಲ್ಲಿ ಉಪನ್ಯಾಸಕ ವೃತ್ತಿಯನ್ನು ಮಾಡಿಕೊಂಡಿದ್ದು, ಈ ವೇಳೆಯಲ್ಲಿ ಪಿರ್ಯಾದಿದಾರರನ್ನು ಕೇರಳ ಮೂಲದ ಸುನೀಲ್ ಬಿ ಎನ್ ರವರು ಏಪ್ರಿಲ್ 2021 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪನ್ಯಾಸಕ ವೃತ್ತಿಯೊಂದಿಗೆ, ಸ್ಪರ್ಧಾತ್ಮಕ ಪರೀಕ್ಷೆಯ ತರಭೇತಿಯ ಎಕ್ಸಿಕ್ಸೂಷನ್ ಮತ್ತು ಬ್ಯುಸಿನೆಸ್ ಆಭಿವೃದ್ದಿಯ ಕಾರ್ಯದ ಬಗ್ಗೆ ಕೆಲಸ ಮಾಡುವಂತೆ ತಿಳಿಸಿ ಪಿರ್ಯಾದಿದಾರರಿಗೆ ತಿಂಗಳಿಗೆ ಕನಿಷ್ಠ ರೂ 150000/- ಸಂಪಾದನೆ ಮಾಡುವಷ್ಟು ಕೆಲಸದ ಅವಕಾಶವನ್ನು ನೀಡುವದಾಗಿ ತಿಳಿಸಿ, ಅದರಂತೆ ಆಳ್ವಾಸ್ ಸಂಸ್ಥೆಯಲ್ಲಿ, ಮಿಲಾಗ್ರೇಸ್ ಡಿಗ್ರಿ ಕಾಲೇಜು ಕಲ್ಯಾಣ್‌ಪುರ್, ಸ್ಮ್ಯಾಶ್ ಅಕಾಡೆಮಿ ಮೂಡಬಿದ್ರೆ, ಸೈಂಟ್ ಮೇರಿಸ್ ಡಿಗ್ರಿ ಕಾಲೇಜು ಶಿರ್ವ, ರಾಮಕೃಷ್ಣ ಡಿಗ್ರಿ ಕಾಲೇಜು  ಮಂಗಳೂರು ಮುಂತಾದ ಕಡೆಗಳಲ್ಲಿ ಸುನೀಲ್ ಬಿ ಎನ್ ರವರು ಪಿರ್ಯಾದಿದಾರರಿಗೆ ಈ ಮೇಲೆ ಸೂಚಿಸಿದ ಕೆಲಸಕ್ಕೆ ಬಳಸಿಕೊಂಡು ಹಣ ಕೊಡದೇ ಇದ್ದು, ದಿನಾಂಕ 30-05-2022 ರಂದು ಪಿರ್ಯಾದಿದಾರಿಗೆ ಸುನೀಲ್ ಬಿ ಎನ್  ರವರು ಕರೆಮಾಡಿದಾಗ, ಪಿರ್ಯಾದಿದಾರರು ಅವರಿಗೆ ತನಗೆ ಕೊಡಬೇಕಿದ್ದ ಹಣವನ್ನು ಕೇಳಿದಾಗ ಸುನೀಲ್ ಬಿ ಎನ್ ರವರು ಪಿರ್ಯಾದಿದಾರರನ್ನು 05-06-2022  ಕೆಲಸದಿಂದ ಬಿಡುಗಡೆ ಮಾಡಿ ನಿಮ್ಮ ಪೂರ್ಣ ಹಣವನ್ನು ನೀಡುವುದಾಗಿ ತಿಳಿಸಿರುತ್ತಾರೆ ಆದರೆ ಈ ವರೆಗೂ ಪಿರ್ಯಾದಿದಾರರಿಗೆ ಹಣವನ್ನು ಕೊಡುವುದಾಗಿ ತಿಳಿಸಿ ಹಣವನ್ನು ನೀಡದೇ ಮೋಸ ಮಾಡಿರುವುದಾಗಿದೆ ಎಂಬಿತ್ಯಾದಿ.    

Crime Reported in : Bajpe PS

ಫಿರ್ಯಾದಿ Abdul Rehiman ದಾರರು  ತನ್ನ ಗೆಳೆಯ ಮಹಮ್ಮದ್ ಶರೀಫ್ ರವರೊಂದಿಗೆ   ದಿನಾಂಕ: 25-08-2022  ರಂದು   ರಾತ್ರಿ  ಮೂಡಬಿದ್ರಿ ಕಡೆಯಿಂದ   ಕೈಕಂಬ ಕಡೆಗೆ ಬರುತ್ತಾ ಸುಮಾರು 9-30 ಗಂಟೆ ಸಮಯಕ್ಕೆ ಮಂಗಳೂರು ತಾಲೂಕು   ತೆಂಕ ಎಡಪದವು ಗ್ರಾಮದ, ಎಡಪದವು ಜಂಕ್ಷನ್ ನಿಂದ ಸ್ವಲ್ಪ ಮುಂದಕ್ಕೆ  ತಲುಪುತ್ತಿದ್ದಮತೇ ಫಿರ್ಯಾದಿದಾರರ ಎದುರಿನಿಂದ ಶಿವಮೊಗ್ಗದಿಂದ  ಕಾವೂರಿಗೆ  ಹೋಗುತ್ತಿದ್ದ  ಹೋಗುತ್ತಿದ್ದ ಕೆಎ  14 ಇಎಲ್ 0546 ನಂಬ್ರದ  ಮೋಟಾರು ಸೈಕಲ್ ಗೆ ಎದುರಿನಿಂದ ಅಂದರೆ, ಕೈಕಂಬ ಕಡೆಯಿಂಧ ಮೂಡಬಿದ್ರಿ ಕಡೆಗೆ  ಟೆಂಪೋ ನಂ: ಕೆಎ 20 -3554  ನೇದ್ದನ್ನು ಅದರ  ಚಾಲಕರು ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ತನ್ವೀರ್ ಅಹಮ್ಮದ್ (36 ವರ್ಷ).ರವರ ಹಣೆಗೆ ಗಾಯವಾಗಿದ್ದಲ್ಲದೇ ಬಲಕೈ ಮುರಿತಗೊಂಡಿದ್ದು,  ಹಾಗೂ ಬಲ ಕಾಲಿನ ಮೊಣ ಗಂಟಿಗೆ ಗಾಯವಾಗಿರುತ್ತದೆ.  ಅಲ್ಲದೇ  . ಸಹ ಸವಾರರಾದ  ಶ್ರೀಮತಿ ಅಲ್ಮಾಸ್ ಅಹಮ್ಮದ್  (32 ವರ್ಷ) ರವರ ಎರಡೂ ಕೈ ಮುರಿತಗೊಂಡಿದ್ದು, ಅಲ್ಲದೇ  ಬಲಕಾಲಿಗೂ ಕೂಡಾ ತೀವ್ರ ಸ್ವರೂಪದ ಗಾಯವಾಗಿರುತ್ತದೆ.   ಗಾಯಾಳುಗಳು ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 26-08-2022 07:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080