ಅಭಿಪ್ರಾಯ / ಸಲಹೆಗಳು

Crime Report in Urva PS          

ತಾರೀಕು 25-08-2023 ರಂದು ಪಿರ್ಯಾದಿದಾರರು ಠಾಣೆಯಲಿದ್ದ ಸಮಯ ಪಿರ್ಯಾದಿದಾರರಿಗೆ ಸಮಯ ಸುಮಾರು ಬೆಳಿಗ್ಗೆ  06-30  ವೇಳೆಗೆ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರು ಇರುವ  ಕಟ್ಟಡದ ದೊಣ್ಣೆ ಬಿರಿಯಾಣಿ ಹೋಟೇಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಪ್ಲಾಸ್ಟೀಕ್ ಚೀಲ ಒಂದರಲ್ಲಿ ಮಧ್ಯ ಪ್ಯಾಕೇಟ್ ಗಳನ್ನು ಇರಿಸಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಪಿರ್ಯಾದಿದಾರರು ಸಿಬ್ಬಂದಿಯವರ ಜೊತೆ ಸೇರಿ ಸಾರಾಯಿ ಮಾರಾಟದ ದಂಧೆಗೆ ದಾಳಿ ನಡೆಸಿ ಇಬ್ಬರು ಆರೋಪಿಗಳಾದ 1) ಚಿದಾನಂದ @ ಚಿತ್ತು (35), ಮತ್ತು ಸ್ವಾಮಿಗೌಡ (56), ಎಂಬವರನ್ನು ಹಾಗೂ  ಅವರ ವಶದಲ್ಲಿದ್ದ ಸುಮಾರು 5760 ರೂ ಮೌಲ್ಯದ 90 ಎಮ್ ಎಲ್ ನ 128 ಸಾರಾಯಿ ಟೆಟ್ರಾ ಪ್ಯಾಕೇಟ್ ಗಳನ್ನು ಅಲ್ಲದೇ ಸಾರಾಯಿ ಮಾರಾಟ ಮಾಡಿ ಬಂದ 2500 ರೂ ನಗದು ಹಣವನ್ನು ಸ್ವಾಧಿನಪಡಿಸಿಕೊಂಡಿರುವುದಲ್ಲದೇ ಬಾರ್ ಮಾಲಕ ಬಾಲಕೃಷ್ಣ ಪೂಂಜಾ ಹಾಗೂ ಮೇಲ್ಕಾಣಿಸಿದ ಇಬ್ಬರು ಆರೋಪಿಗಳ ವಿರುದ್ದ ಅಬಕಾರಿ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

Mangalore East PS                  

ಫಿರ್ಯಾಧಿದಾರರಾದ ರೋನಾಲ್ಡ್.ಎಲ್, ಮೆಂಡೋನ್ಕಾ ಅವರು ಆರೋಪಿ ಕಂಪನಿಯಾದ SKYLINE CONSTRUCTIONS PVT LTD BENGALORE, ಅದರ ನಿರ್ದೇಶಕರುಗಳಾದ ದೀರಜ್ ಫ್ರಭು ಸಂತೋಷ ಕುಮಾರ ಸೋನಿ ಮತ್ತು ETERNITY DEVELOPERS PVT LTD BANGLORE ಹಾಗೂ ಅದರ ನಿರ್ದೇಶಕರು ಸಂತೋಷ ಕುಮಾರ ಸೋನಿ ಮತ್ತು ಪವನ  ಸಾಹನಿ ಇವರುಗಳಿಗೆ ಮಂಗಳೂರಿನ ಮೇರಿಹಿಲ್ ನಲ್ಲಿ ಅತ್ಯಾಧುನಿಕ ಸೌಕರ್ಯ ಮತ್ತು ವ್ಯವಸ್ಥೆಗಳನ್ನು ಒಳಗೊಂಡು ಅಂತರಾಷ್ಟ್ರೀಯ ಗುನಮಟ್ಟದ ವಿಲ್ಲಾ ಸೈಟ್ ಮತ್ತು ಅದರ ಕಟ್ಟಡ ಕಾಮಗಾರಿಯ ತರುವಾಯ ಸುಮಾರು ರೂಪಾಯಿ 62.08000/- ಗಳನ್ನು ಚೆಕ್ಕಿನ  ರೂಪದಲ್ಲಿ ಪಾವತಿಸಿರುತ್ತಾರೆ.ಮೇಲೆ ತಿಳಿಸಿದ ಮೊತ್ತಗಳು 2007 ರಲ್ಲಿ ಆರೋಪಿ ಕಂಪೆನಿಯವರ  ಖಾತೆಗೆ ಜಮಾಯಾಗಿರುತ್ತದೆ.ಕಂಪೆನಿಯಾ ಜಾಹಿರಾತಿನಂತೆ 2012 ನೇ ಸಾಲಿಗೆ ಎಲ್ಲಾ ಸೈಟ ನಲ್ಲಿ ಮನೆಯನ್ನು ನಿರ್ಮಿಸಿ ಕೊಡಬೇಕಿತ್ತು. ಆದರೆ ಆರೋಪಿ ಕಂಪೆನಿಯವರು ಹಲವು ಬಾರಿ ಬಡಾವಣೆಯ ನಕ್ಷೆ ಮತ್ತು ವಿನ್ಯಾಸವನ್ನು ಬದಲಾವಣೆ ಮಾಡಿ ಫಿರ್ಯಾಧಿದಾರರಿಗೆ ಮೋಸ ಮತ್ತು ವಂಚನೆ ಮಾಡಿರುತ್ತಾರೆ. ಫಿರ್ಯಾಧಿದಾರರು ಹಲವು ಬಾರಿ ಆರೋಪಿ ಕಂಪೆನಿಗೆ ಪೋನ್ ಇ-ಮೈಲ್ ಗಳ ಮುಖಾಂತರ ಸಂಪರ್ಕಿಸಿದ್ದು ಈವರಗೆ ಯಾವುದೇ ಪ್ರಯೋಜನಾವಾಗಲಿಲ್ಲ ಫಿರ್ಯಾಧಿದಾರರು ಕಂಪನಿಯ ಮಂಗಳೂರಿನ ಕೊಡಿಯಲ್ ಬೈಲ್ ನಲ್ಲಿರುವ ಮಾನಸ ಟವರ್ ನಲ್ಲಿ ಇರುವ ಕಛೇರಿಗೆ ಹಲವು ಭಾರಿ ಭೇಟಿ ನೀಡಿದ್ದರು, ಆದರು ಅದು ಯಾವುದೇ ಫಲ ನೀಡಲಿಲ್ಲ ಫಿರ್ಯಾದಿದಾರರು ಹಲವು ಬಾರಿ ಹೊರ ದೇಶದಿಂದ ತನ್ನ ಕೆಲಸ ಕಾರ್ಯಗಳನ್ನು ಬಿಟ್ಟು ಮಂಗಳೂರಿನ ಆರೋಪಿಯ ಕಂಪೆನಿಗೆ ಭೇಟಿ ನೀಡಿದರು ಆರೋಪಿ ಕಂಪೆನಿಯವರು ಹಣವನ್ನು ಪಡೆದ ಮೇಲೆ ಬಡಾವಣೆ ಮತ್ತು ಮನೆಯ ನಿರ್ಮಾಣವನ್ನು ಮಾಡದೇ  ಫಿರ್ಯಾಧಿದಾರರು ಮನನೊಂದು ಮೋಸ ಮತ್ತೆ ವಂಚನೆಯ ಬಗ್ಗೆ ಫಿರ್ಯಾದನ್ನು ಸೂಕ್ತ ತನಿಖೆಗಾಗಿ ದಾಖಲಿಸಿರುತ್ತಾರೆ.

 

CEN Crime PS

ಪಿರ್ಯಾದಿದಾರರಾದ ಮಂಗಳೂರು ವಾಸಿಯಾಗಿದ್ದು, ವಿಚ್ಚೇದಿತ ಮಹಿಳೆಯಾಗಿದ್ದು, ಆಕೆಯ ಅಣ್ಣಂದಿರು ಅವರಿಗೆ ಮರುಮದುವೆಯಾಗಲು ತಯಾರಿ ನಡೆಸುವ ಸಂದರ್ಭದಲ್ಲಿ ಫಿರ್ಯಾದುದಾರರು ತನ್ನ ಪ್ರೊಫೈಲ್ ಅನ್ನು ಮುಸ್ಲಿಂ ಮ್ಯಾಟ್ರಿಮೋನಿಯಲ್ ಎಂಬ ಆಪ್ ನಲ್ಲಿ 2022 ರಲ್ಲಿ ಅಪ್ಲೋಡ್ ಮಾಡಿರುತ್ತಾರೆ. ಆ ಸಮಯದಲ್ಲಿ ತಮಿಳುನಾಡಿನ ಪಳ್ಳಪಟ್ಟಿ ಮೂಲದ ಮೊಹಮ್ಮದ್ ಫರೀದ್ ಶೇಖ್  ಎಂಬಾತನ ರಿಕ್ವೆಸ್ಟ್ ಬಂದಿದ್ದು, ನಂತರ ಫಿರ್ಯಾದಿದಾರರ ನಂಬರ್ ಅನ್ನು ಆತನು ಪಡೆದು ಫಿರ್ಯಾದಿದಾರರನ್ನು ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದಾಗ ಫಿರ್ಯಾದುದಾರರು ತಮ್ಮ  ಅಣ್ಣಂದಿರ ಜೊತೆ ಬಂದು ಮಾತುಕತೆ ನಡೆಸಿ ಎಂದು ಹೇಳಿರುತ್ತಾರೆ. ಆ ಸಮಯದಲ್ಲಿ ಮೊಹಮ್ಮದ್ ಫರೀದ್ ಶೇಖ್ ತನ್ನ ಸೋದರರು ಎಂಬುವುದಾಗಿ ಪರಿಚಯಿಸಿ ಸಾದಿಕ್  ಮತ್ತು ಮುಬಾರಕ್  ಎಂಬ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಮಂಗಳೂರಿನ ಕಂಕನಾಡಿಯಲ್ಲಿರುವ BARBEQUE NATION ರೆಸ್ಟೋರೆಂಟ್ ಗೆ  ಮದುವೆ ಮಾತುಕತೆಗೆ ಬಂದಿರುತ್ತಾನೆ. ಆ ಸಮಯದಲ್ಲಿ ಆತನು ತನಗೆ ಒಂದು ಮದುವೆಯಾಗಿದ್ದರೂ ಕೂಡಾ ಯಾವುದೇ ಮದುವೆಯಾಗಿಲ್ಲ ಎಂಬುವುದಾಗಿ ಹೇಳಿ ಫಿರ್ಯಾದುದಾರರನ್ನು ಮತ್ತು ಅವರ ಅಣ್ಣಂದಿರನ್ನು ನಂಬಿಸಿ ಹೋಗಿರುತ್ತಾನೆ ಹಾಗೂ ಫಿರ್ಯಾದಿದಾರರನ್ನು ತನ್ನ ಮನೆಗೆ ಆದಷ್ಟು ಬೇಗ ಮದುವೆ ಮಾತುಕತೆಗೆ ಕರೆಸಿಕೊಳ್ಳುತ್ತೇನೆ ಎಂಬುವುದಾಗಿ ಹೇಳಿ ಹೋಗಿರುತ್ತಾನೆ. ಎರಡು ದಿನಗಳ ನಂತರ ಆತನು ತನ್ನ ವಾಟ್ಸಾಪ್ ನಂಬರಿನ ಮುಖಾಂತರ ಫಿರ್ಯಾದಿದಾರರಿಗೆ ಮೆಸೇಜ್ ಗಳನ್ನು ಮಾಡಲು ಆರಂಭಿಸಿರುತ್ತಾನೆ.ಪ್ರಾರಂಭದಲ್ಲಿ ಫಿರ್ಯಾದಿದಾರರೊಂದಿಗೆ ನಂಬಿಕೆ ಗಳಿಸುವಂತೆ ಮಾತನಾಡಿ ಆತನು ನನ್ನ ಬಳಿ “ZOOKY” ಎಂಬ ಆಪ್ ಇದೆ ಅದನ್ನು ನಾನೇ ತಯಾರಿಸಿರುತ್ತೇನೆ ಅದನ್ನು ರಿಲೈಯನ್ಸ್ ಕಂಪನಿಗೆ ಮಾರಿದರೆ ನನಗೆ 25 ಕೋಟಿ ಹಣ ನೀಡುತ್ತಾರೆ ಎಂಬುವುದಾಗಿ ತಿಳಿಸಿ ಫಿರ್ಯಾದಿದಾರರನ್ನು ನಂಬಿಸಿ ಅದನ್ನು ಮಾರಲು ನನಗೆ 4 ಲಕ್ಷ ಪ್ರೊಸೆಸ್ ಚಾರ್ಜ್ ನೀಡಬೇಕಾಗುತ್ತದೆ, ನಾನು ನಿನಗೆ 1 ತಿಂಗಳ ಒಳಗಾಗಿ ಹಿಂದಿರುಗಿಸುವುದಾಗಿ ತಿಳಿಸಿದಾಗ  ಫಿರ್ಯಾದಿದಾರರು ಆತನ ಮಾತನ್ನು ನಂಬಿ ತನ್ನ  ಬ್ಯಾಂಕ್  ನಿಂದ ಆತನ ಕರೂರು ವೈಶ್ಯ ಬ್ಯಾಂಕ್ ಖಾತೆ ನಂಬ್ರ ಮತ್ತು ಆತನ ಕೊಯಂಬತ್ತೂರಿನ ಫರೀದ್  ಫುಡ್ ಕಾರ್ಪೋರೇಶನ್ ನ ಖಾತೆಯಾದ AXIS BANK ನ ಖಾತೆ ನಂಬ್ರ 921020041627039 (IFSC CODE:UTIB0001748) ಗೆ ಹಂತ ಹಂತವಾಗಿ ರೂ-64,00,000/- ಹಣವನ್ನು  ವರ್ಗಾಯಿಸಿದ್ದು, ಬಳಿಕ ಆತನಲ್ಲಿ ಕೇಳಿದಾಗ ಈಗ ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ನಂಬಿಸಿ ನಂಬಿಕೆ ದ್ರೋಹ, ಮೋಸ ಮಾಡಿರುವುದಾಗಿದೆ. ಫಿರ್ಯಾದುದಾರರು ಹಣವನ್ನು ಹಿಂತಿರುಗಿಸಬಹುದು ಎಂದು ನಂಬಿ ಕುಳಿತಿದ್ದರಿಂದ ದೂರು ನೀಡಲು ವಿಳಂಬವಾಗಿರುವುದಾಗಿ ನೀಡಿದ ದೂರು ಆಗಿರುತ್ತದೆ.  ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 26-08-2023 01:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080