ಅಭಿಪ್ರಾಯ / ಸಲಹೆಗಳು

Crime Report in  Traffic South Police Station                             

ಫಿರ್ಯಾದಿ ABDUL MAJEED M S ದಾರರ ಮೊಬೈಲ್ ಗೆ ಅಪರಿಚಿತರೊಬ್ಬರು ಕರೆ ಮಾಡಿ ಫಿರ್ಯಾದಿದಾರರ ಮಗ ಎಂ. ಸುಲೈಮಾನ್ ಫಹಾದ್ ಎಂಬವರು ರಸ್ತೆ ಅಪಘಾತವಾಗಿ ಯೆನಪೋಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಗ್ಗೆ ತಿಳಿಸಿದಂತೆ ಫಿರ್ಯಾದಿದಾರರು ಆಸ್ಪತ್ರೆಗೆ ಬಂದು ವಿಚಾರಿಸಿದಾಗ ದಿನಾಂಕ: 25-09-2023 ರಂದು 19-00 ಗಂಟೆಗೆ ಫಿರ್ಯಾದಿದಾರರ ಮಗ ಎಂ. ಸುಲೈಮಾನ್ ಫಹಾದ್ ನು ತನ್ನ ಬಾಬ್ತು KA-19-EZ-2406 ನೇದನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ತೊಕ್ಕೊಟ್ಟು ಕಡೆಯಿಂದ ಕುತ್ತಾರು ಕಡೆಗೆ ಬರುತ್ತಿರುವಾಗ ಕುತ್ತಾರು ರಾಜರಾಜೇಶ್ವರಿ ಭಜನಾ ಮಂದಿರದ ಬಳಿ ರಸ್ತೆಯಲ್ಲಿ ದನವೊಂದು ಅಡ್ಡ ಬಂದಾಗ ಒಮ್ಮೆಲೆ ಸ್ಕೂಟರ್ ಸವಾರನು ತನ್ನ ನಿಯಂತ್ರಣ ತಪ್ಪಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದವರನ್ನು ಸಾರ್ವಜನಿಕರು ಯೆನಪೋಯ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈಧ್ಯರು ಆತನ ಕೈಗೆ, ಕಾಲಿಗೆ ತರಚಿದ ಗಾಯ ಹಾಗೂ ತಲೆಯ ಒಳಭಾಗಕ್ಕೆ ತಾಗಿರುವ ಬಗ್ಗೆ ತಿಳಿಸಿರುತ್ತಾರೆ. ಹೆಚ್ಚಿನ ಚಿಕಿತ್ಸೆ ಬಗ್ಗೆ ಫಿರ್ಯಾದಿದಾರರು ಮಗನಾದ ಎಂ. ಸುಲೈಮಾನ್ ಫಹಾದ್ ನನ್ನು ಪಸ್ಟ್ ನ್ಯೂರೋ ಆಸ್ಪತ್ರೆಗೆ ಕರೆತಂದಿದ್ದು, ವೈಧ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ.

Barke PS

ದಿನಾಂಕ:25.09.2023ರಂದು ಸಿಸಿಬಿ ಘಟಕದ ಪೊಲೀಸ್ ಉಪ ನಿರೀಕ್ಷಕರಾದ ಶರಣಪ್ಪ ಭಂಢಾರಿ ಮತ್ತು ಎ.ಎಸ್.ಐ ಶೀನಪ್ಪ ಹಾಗೂ ಸಿಬ್ಬಂದಿಗಳ ಜೊತೆಯಲ್ಲಿ ರೌಂಡ್ಸ್ ಕತ್ಯವ್ಯದಲ್ಲಿರುವ ಸಮಯ ಮಂಗಳೂರು ನಗರದ ಬಿಜೈ ಆಟೋ ಮ್ಯಾಟ್ರಿಕ್ಸ್ ಶೋ ರೂಂ ಹಿಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮೂರು ಜನ ಯುವಕರು ಅಮಲು ಪದಾರ್ಥ ಸೇವನೆ ಮಾಡಿದವರಂತೆ ಕಂಡು ಬಂದಿದ್ದು ಅವರನ್ನು ಹಿಡಿಯಲು ಹೋದಾಗ ಅವರು ಪಿರ್ಯಾದಿದಾರರನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪಿರ್ಯಾದಿ ಮತ್ತು ಸಿಬ್ಬಂದಿಗಳು ಮಧ್ಯಾಹ್ನ 3.00 ಗಂಟೆಗೆ ವಶಕ್ಕೆ ಪಡೆದು ವಿಚಾರಿಸಿದಾಗ ತಡವರಿಸುತ್ತಾ ಯುವಕರು ತಮ್ಮ ಹೆಸರು ಸಜಯ್ ಸತೀಶನ್ ಪ್ರಾಯ 19 ವರ್ಷ, ವಾಸ:ಪುದುವಲ್ ನಿಗರ್ ಮನೆ, ಚೆರುಪುಯ ಗ್ರಾಮ, ಎಡವರಂಬ್ ಅಂಚೆ, ಪಯ್ಯನ್ನೂರ್ ತಾಲೂಕು, ಕಣ್ಣೂರು ಜಿಲ್ಲೆ, ಕೇರಳ. ಹಾಲಿ ವಾಸ:ಫ್ಲಾಟ್ ನಂ:205, 2ನೇ ಮಹಡಿ, ಅನಂತ ಕೃಪಾ ಅಪಾರ್ಟ್ ಮೆಂಟ್, ಟಾಟಾ ಶೋ ರೂಮ್ ಹಿಂಭಾಗ, ಮಂಗಳೂರು. 2. ಎನೋಶ್ ನೋಬಿ ಪ್ರಾಯ 20 ವರ್ಷ ವಾಸ:ತಾನಿಪ್ಪಿಳ್ಳಿ ಮನೆ, ಪಳ್ಳಿ ಪೋರ್ಟ್ ಅಂಚೆ, ಕುಝುಪುಳ್ಳಿ ಗ್ರಾಮ, ಎರ್ನಾಕುಳಂ ಜಿಲ್ಲೆ, ಕೇರಳ. ಹಾಲಿ ವಾಸ: ಫ್ಲಾಟ್ ನಂ:205, 2ನೇ ಮಹಡಿ, ಅನಂತ ಕೃಪಾ ಅಪಾರ್ಟ್ ಮೆಂಟ್, ಟಾಟಾ ಶೋ ರೂಮ್ ಹಿಂಭಾಗ, ಮಂಗಳೂರು 3.ಸ್ಮರಣ್ ಎಸ್ ಪ್ರಾಯ 20 ವರ್ಷ ವಾಸ:ಚಂದ್ರಿಕಾ ಭವನ್, ಪಳಿಯೋಡ್, ಕೊಟ್ಟಕ್ಕಲ್ ಅಂಚೆ, ಅನಾವೂರು, ತಿರುವನಂತಪಿರಂ ಜಿಲ್ಲೆ, ಕೇರಳ. ಹಾಲಿ ವಾಸ: ಫ್ಲಾಟ್ ನಂ:205, 2ನೇ ಮಹಡಿ, ಅನಂತ ಕೃಪಾ ಅಪಾರ್ಟ್ ಮೆಂಟ್, ಟಾಟಾ ಶೋ ರೂಮ್ ಹಿಂಭಾಗ, ಮಂಗಳೂರು ಎಂಬುದಾಗಿ ತಿಳಿಸಿರುತ್ತಾರೆ. ಸದ್ರಿ ಯುವಕರಲ್ಲಿ ಮಾದಕವಸ್ತು ಗಾಂಜಾ ಸೇವನೆ ಮಾಡಲಾಗಿದೆಯೇ ಎಂದು ಕೇಳಲಾಗಿ, ಗಾಂಜಾ ಸೇವನೆ ಮಾಡಿರುವುದಾಗಿ ಅವರು ಒಪ್ಪಿಕೊಂಡಿರುತ್ತಾರೆ. ಗಾಂಜಾ ಸೇವನೆ ಮಾಡುವುದು ಅಪರಾಧವಾಗಿರುತ್ತದೆ ಎಂದು ಸದ್ರಿ ಯುವಕರಿಗೆ ಮನವರಿಕೆ ಮಾಡಿ ವೈದ್ಯಕೀಯ ತಪಾಸಣೆ ಬಗ್ಗೆ ಕಳುಹಿಸಿಕೊಟ್ಟಲ್ಲಿ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಸದ್ರಿ ಆಪಾದಿತರ ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳವಂತೆ ಎಂಬಿತ್ಯಾದಿಯಾಗಿರುತ್ತದೆ.

Mangalore East PS                           

ದಿನಾಂಕ: 24-09-2023 ರಂದು ಫಿರ್ಯಾದಿ Sharath Kumar HC ದಾರರು ರಾತ್ರಿ ಮಂಗಳೂರು ಪೂರ್ವ ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಸಮಯ ಸುಮಾರು ರಾತ್ರಿ 2.10 ಗಂಟೆಗೆ ವ್ಯಾಸನಗರ ವಿಶ್ವಾಸ್ ಅನ್ಮೋಲ್ ಅಪಾರ್ಟ್ ಮೆಂಟ್ ನ 5ನೇ ಮಹಡಿಯ ಫ್ಲಾಟ್ ರ ನಿವಾಸಿ **** ಗಂಡ: ಮಹೇಶ್ ಎಂಬುವರು ಠಾಣೆಗೆ ಬಂದು ಮನೆಯಲ್ಲಿ ತನ್ನ ಗಂಡ ಜಗಳ ಮಾಡುತ್ತಿರುವುದಾಗಿ ಹಾಗೂ ತನ್ನ ಇಬ್ಬರು ಮಕ್ಕಳನ್ನು ಮತ್ತು ತನ್ನನ್ನು ಕೊಲ್ಲುತ್ತೇನೆಂದು ಹಾಗೂ ಬೆಂಕಿ ಹಚ್ಚಿ ಸುಟ್ಟು ಹಾಕುತ್ತೇನೆಂದು ಬೆದರಿಸಿ ತನಗೆ ಹೊಡೆಯಲು ಬಂದಿದ್ದು ಆತನಿಂದ ತಪ್ಪಿಸಿಕೊಂಡು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಬಂದಿರುವುದಾಗಿ ತಿಳಿಸಿ ಕೂಡಲೇ " ತಾನು ವಾಸವಾಗಿರುವ ಅಪಾರ್ಟ್ ಮೆಂಟ್ ಗೆ ಪೊಲೀಸರನ್ನು ಕಳುಹಿಸಿ ತನ್ನ ಮಕ್ಕಳನ್ನು ತನ್ನ ಗಂಡನಿಂದ ರಕ್ಷಿಸಿ " ಎಂದು ಹೇಳಿದ್ದು  ಆಗ ಫಿರ್ಯಾದಿದಾರರು 112 ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ರನ್ನು ಘಟನ ಸ್ಥಳಕ್ಕೆ ಹೋಗುವಂತೆ ತಿಳಿಸಿದ್ದು, ಆ ಸಮಯದಲ್ಲಿ ಪೂಜಾರವರ ಗಂಡ ಮಹೇಶನು ತನ್ನ 6 ವರ್ಷದ ಗಂಡು ಮಗು ಹಾಗೂ ಒಂದುವರೆ ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಠಾಣೆಗೆ ಬಂದಿದ್ದು ಆ ಸಮಯ ಫಿರ್ಯಾದಿದಾರರು ಮಹೇಶನಲ್ಲಿ  ವಿಚಾರಿಸಿದಾಗ ಆತನು ತನ್ನ ಹೆಂಡತಿ ತನಗೆ ಹೊಡೆದಿರುವುದಾಗಿ ಹೇಳಿದ್ದು, ಕಂಪ್ಲೇಟ್ ಕೊಡಲು ತಿಳಿಸಿದಾಗ ಅವನು ಕೂಗಾಡಿ ಕಿರುಚಾಡಿಕೊಂಡು "ನಾನು ಯಾರನ್ನೂ ಬಿಡುವುದಿಲ್ಲ" ಎಂದು ತನ್ನ ಇಬ್ಬರು ಮಕ್ಕಳನ್ನು ಎಳೆದುಕೊಂಡು ಠಾಣೆಯಿಂದ ಹೊರಗೆ ಹೋಗುವ ಸಮಯ ಫಿರ್ಯಾದಿದಾರರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪಿ.ಎಸ್.ಐ ಪ್ರತಿಭಾ ರವರಿಗೆ ಮಾಹಿತಿ ತಿಳಿಸಿ ಠಾಣೆಗೆ ಬರುವಂತೆ ತಿಳಿಸಿ, ಆ ಸಮಯದಲ್ಲಿ ಮಹೇಶ್ ನ ಹೆಂಡತಿರವರು ಠಾಣೆಯ ಒಳಗಿಂದ ಠಾಣೆಯ ವರಾಂಡದ ಬಳಿ ಬಂದಾಗ ಅವರನ್ನು ನೋಡಿ ಮಹೇಶನು ಜೋರಾಗಿ ಕಿರುಚಾಡಿಕೊಂಡು ತನ್ನ ಕೈಯಲ್ಲಿದ್ದ ತನ್ನ ಸಣ್ಣ ಮಗಳನ್ನು ಗೋಡೆಗೆ ಬಿಸಾಡುತ್ತೇನೆಂದು ಹೇಳಿ ಮಗುವನ್ನ ಕೊಲ್ಲುವಂತೆ ಹಾವಭಾವದಿಂದ ವರ್ತಿಸಿದಾಗ ಫಿರ್ಯಾದಿದಾರರು ಮಗುವನ್ನ ಬಿಡು ಎಂದು ಹೇಳಿದರೂ ಜೋರು ಧ್ವನಿಯಲ್ಲಿ  "ನನ್ನ ಮಗು ನಾನು ನನ್ನ ಮಗುವಿಗೆ ಏನು ಬೇಕಾದರೂ ಮಾಡಬಹುದು ಅದನ್ನು ಕೇಳಲು ನೀವು ಯಾರು" ಎಂದು ಹೇಳಿ ಮಗುವಿನ ಕುತ್ತಿಗೆಯನ್ನು ತಿರುಗಿಸಿ ಕೈಯನ್ನು ಹಿಡಿದು ಎಳೆದಾಡಿ ಮಗುವನ್ನು ಎತ್ತಿ ನೆಲಕ್ಕೆ ಬಿಸಾಡಿ ಕೊಲ್ಲಲು ಪ್ರಯತ್ನಿಸಿದ್ದು ಇದರಿಂದ ಮಗುವಿನ ಕುತ್ತಿಗೆಗೆ ಗಾಯ ಹಾಗೂ ತಲೆಗೆ ಗುದ್ದಿದ ಗಾಯವಾಗಿ ಮಗು ಜೋರಾಗಿ ಕಿರುಚಾಡುತ್ತಿದ್ದು ಅದೇ ಸಮಯಕ್ಕೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಠಾಣಾ ಪಿ.ಎಸ್.ಐ ಪ್ರತಿಭಾ ರವರು ಠಾಣೆಗೆ ಬಂದಿದ್ದು ಕೂಡಲೇ ಮಗುವನ್ನು ಎತ್ತಿಕೊಂಡು ಮಗುವಿನ ತಾಯಿ ಹಾಗು ದೊಡ್ಡ ಮಗುವನ್ನು ಕರೆದುಕೊಂಡು ಇಲಾಖಾ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಫಿರ್ಯಾದಿದಾರರು ಹಸುಗೂಸಿನ ಜೀವ ರಕ್ಷಣೆ ಬಗ್ಗೆ ಪ್ರಯತ್ನಿಸಿದಾಗ ಫಿರ್ಯಾದಿದಾರರಿಗೆ ತನ್ನ ಕರ್ತವ್ಯ ಪಾಲಿಸಲು ಬಿಡದೆ ಠಾಣೆಯಲ್ಲಿ ಸರಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿ ಹಸುಗೂಸನ್ನು ಕೊಲ್ಲಲು ಪ್ರಯತ್ನಿಸಿದ್ದು ಆತನ ವಿರುದ್ದ ಸೂಕ್ತ ಕ್ರಮಕ್ಕಾಗಿ ಕೋರಿದ ಪಿರ್ಯಾದಿ ಎಂಬಿತ್ಯಾದಿ.

Kankanady Town PS                                         

ಪಿರ್ಯಾದು Smt Ashwitha ದಾರರು ಮಂಗಳೂರು ನಗರದ ಪಂಪವೆಲ್ ನಲ್ಲಿರುವ ಇಂಡಿಯಾನ ಆಸ್ಪತ್ರೆಯಲ್ಲಿ ಕಸ್ಟಮರ್ ಕೇರ್ ಎಗ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 25-09-2023 ರಂದು ಪಿರ್ಯಾದಿದಾರರು ಆಸ್ಪತ್ರೆಯ ಎಡ್ಮಿಷನ್ ಡೆಸ್ಕ್ ನಲ್ಲಿ ಕರ್ತವ್ಯದಲ್ಲಿದ್ದ ಸಮಯ ಮದ್ಯಾಹ್ನ 2:45 ಗಂಟೆ ಸುಮಾರಿಗೆ, ಆರೋಪಿ ಆಶಿಕ್ ಎಂಬವರು, ಅವರ ತಾಯಿ ಶ್ರೀಮತಿ ಶಕೀಲಾ ಎಂಬವರನ್ನು ಒಳ-ರೋಗಿಯಾಗಿ ಚಿಕಿತ್ಸೆಗೆ ಕರೆದುಕೊಂಡು ಬಂದಿದ್ದು, ಆ ಸಮಯ ಪಿರ್ಯಾದಿದಾರರು ರೋಗಿಯ ದಾಖಲಾತಿ ಬಗ್ಗೆ ವೈಯಕ್ತಿಕ ಮಾಹಿತಿಯಾದ ಹೆಸರು ಪ್ರಾಯ, ವಿಳಾಸ  ಇತ್ಯಾದಿ ಕೇಳಿದಾಗ, ರೋಗಿಯ ಜೊತೆಯಲ್ಲಿದ್ದ ಆರೋಪಿತ  ಆಶೀಕ್ ನು ಕೋಪಗೊಂಡು ಪಿರ್ಯಾದಿದಾರರನ್ನು ತೀರಾ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಎಡ್ಮಿಷನ್ ಡೆಸ್ಕ್ ನಲ್ಲಿದ್ದ ಆಸ್ಪತ್ರೆಯ ಬಾಬ್ತು ಸೊತ್ತುಗಳನ್ನು ಹಾನಿಗೊಳಿಸಿದಲ್ಲದೇ, ಪಿರ್ಯಾದಿದಾರರನ್ನು ಮಾನಭಂಗ ಮಾಡುವ ಉದ್ದೇಶದಿಂದ, ಪಿರ್ಯಾದಿದಾರರ ಎದೆಗೆ ಹಾಗೂ ಭುಜಕ್ಕೆ ಕೈಯಿಂದ ಹಲ್ಲೆ ನಡೆಸಿರುವುದಾಗಿದೆ ಎಂಬಿತ್ಯಾದಿ. 

Ullal PS

ದಿನಾಂಕ.25-09-2023 ರಂದು ಕೋಟೆಕಾರು ಗ್ರಾಮದ ದೇರಳಕಟ್ಟೆ ಶಾಗಿಲ್ ಪ್ರಿಸಿಸನ್ ಆಫ್ ಇಂಡಿಯ ಕಂಪೆನಿಗೆ ಸಂಬಂಧಪಟ್ಟ ಕಟ್ಟಡದ ಬಳಿ ರಸ್ತೆಯ ಬದಿಯಲ್ಲಿ ಆರೋಪಿ ಉಮ್ಮರ್ ಶರೀಫ್ ಎಂಬಾತನು ಯಾವುದೇ ಪರವಾನಿಗೆ ಯಾ ದಾಖಲಾತಿಯನ್ನು ಹೊಂದದೇ ನಿಷೇದಿತ ಮಾದಕ ವಸ್ತು ಆಗಿರುವ ಸುಮಾರು 21 ಗ್ರಾಂ ಮತ್ತು 25 ಗ್ರಾಂ ತೂಕದ (ಒಟ್ಟು ತೂಕ 46 ಗ್ರಾಂ ತೂಕ – ಒಟ್ಟು ಅಂದಾಜು ಮೌಲ್ಯ ರೂ.2,30,000-00) ಎಂ.ಡಿ.ಎಂ.ಎ. ನ್ನು ಎರಡು ಪ್ಲಾಸ್ಟಿಕ್ ಪ್ಯಾಕೇಟ್ನಲ್ಲಿ ತುಂಬಿಸಿ ಅದನ್ನು ಹಣಕ್ಕಾಗಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಠಾಣಾ ಸರಹದ್ದಿನಲ್ಲಿ ಹಗಲೊತ್ತಿಗೆ ಸಿಬ್ಬಂದಿಯವರ ಜೊತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದ ಫಿರ್ಯಾದಿದಾರರಾದ ಕೃಷ್ಣ.ಕೆ.ಹೆಚ್. ಪಿಎಸ್ಐ ಉಳ್ಳಾಲ ರವರಿಗೆ ದೊರೆತ ಮಾಹಿತಿಯಂತೆ  ಸಂಜೆ 6:20 ಗಂಟೆಗೆ ಸ್ಥಳಕ್ಕೆ ಧಾಳಿ ನಡೆಸಿ ಆರೋಪಿಯನ್ನು ಆತನ ವಶದಲ್ಲಿದ್ದ ಸೊತ್ತಿನೊಂದಿಗೆ ಪತ್ತೆ ಮಾಡಿ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.

ಇತ್ತೀಚಿನ ನವೀಕರಣ​ : 26-09-2023 04:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080