ಅಭಿಪ್ರಾಯ / ಸಲಹೆಗಳು

Crime Report in  Mangalore West Traffic PS                                              

ದಿನಾಂಕ 20-10-2023 ರಂದು ಪಿರ್ಯಾದಿದಾರರ ಮಗ ಅಲೋಕ್ ಬಂಜನ್(31 ವರ್ಷ) ರವರು ಕೆಲಸವನ್ನು ಮುಗಿಸಿ ತನ್ನ ಬಾಬ್ತು ಕೆಎ-19-ಇವಿ-6714 ನೇ ನಂಬ್ರದ ದ್ವಿ ಚಕ್ರ ವಾಹನದಲ್ಲಿ ಲೇಡಿಹಿಲ್ ನಿಂದ ಉರ್ವ ಮಾರ್ಕೆಟ್ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ಸಮಯ ಸಂಜೆ 06:00 ಗಂಟೆಗೆ ಕೆಎ19-ಎಂಸಿ-6238 ಕಾರಿನ   ಚಾಲಕ ಅಜಿತ್ ಕುಮಾರ್ ರವರು ಮ್ಯಾಜಿಕ್ ವಾಶ್ ಸರ್ವೀಶ್ ಸ್ಟೇಷನ್  ಒಳಗಿನಿಂದ  ಏಕಾಏಕಿ ಯಾವುದೇ ಸೂಚನೆಯನ್ನು ನೀಡದೇ ನಿರ್ಲಕ್ಷ್ಯತನದಿಂದ ಹಿಮ್ಮಖವಾಗಿ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ಮಗ ಮುಖ್ಯ ರಸ್ತೆಯಲ್ಲಿ ಚಲಾಯಿಸುತ್ತಿದ್ದ ಮೋಟಾರು ಸೈಕಲ್ ಗೆ   ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಮಗ ಬೈಕ್ ಸಮೇತ ರಸ್ತೆಗೆ ಬಿದ್ದು  ಎಡಗಾಲಿನ ಹಿಮ್ಮಡಿಯ ಗಂಟಿಗೆ ಮೂಳೆ ಮುರಿತವಾದವರನ್ನು  ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಅಪಘಾತ ಪಡಿಸಿದ ಕಾರಿನಲ್ಲಿ ಚಿಕಿತ್ಸೆಯ ಬಗ್ಗೆ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಎಂಬಿತ್ಯಾದಿ.

CEN Crime PS

ಪಿರ್ಯಾದಿದಾರರು ದಿನಾಂಕ: 09-09-2023 ರಂದು ಮನೆಯಲ್ಲಿರುವಾಗ ಮೊಬೈಲ್ ಸಂಖ್ಯೆ: ನೇದಕ್ಕೆ ಎಸ್ ಎಮ್ ಎಸ್ ಬಂದಿದ್ದು, ಸದ್ರಿ ಸಂದೇಶವನ್ನು ಪರಿಶೀಲಿಸಿದ್ದಲ್ಲಿ  ಪಿರ್ಯಾದಿದಾರರ  ಎಸ್ ಬಿ ಐ  ಬ್ಯಾಂಕ್  ಖಾತೆ  ಸಂಖ್ಯೆ:  ನೇದ್ದರಿಂದ ದಿನಾಂಕ 23-08-2023 ರಂದು 4,990/, ದಿನಾಂಕ 24-08-2023 ರಂದು 8500/-, ಮತ್ತು ದಿನಾಂಕ 06-09-2023 ರಿಂದ 09-09-2023 ರವರೆಗೆ 10,000/-, 10,000/- ಹಾಗೂ 3,400/- ಒಟ್ಟು ರೂ.36,890/-ಹಣ  ಕಡಿತವಾಗಿರುವ ಬಗ್ಗೆ  ತಿಳಿದು ಬಂದಿರುತ್ತದೆ. ನಂತರ ಪಿರ್ಯಾದಿದಾರರು ಎಸ್ ಬಿ ಐ ಬ್ಯಾಂಕ್ ಖಾತೆ ಪೋರ್ಟ್ ರೋಡ್ ಮಂಗಳೂರು ಶಾಖೆಗೆ ತೆರಳಿ ವಿಚಾರಿಸಿ ಖಾತೆಯ ಸ್ಟೇಟ್  ಮೆಂಟ್ ನ್ನು ತೆಗೆದು  ಪರಿಶೀಲಿಸಿದ್ದಲ್ಲಿ, ಈ ಮೇಲಿನ ದಿನಾಂಕಗಳಂದು ಒಟ್ಟು 36,890/- ರೂ ಹಣವು ಹಂತ ಹಂತವಾಗಿ ಪಿರ್ಯಾದಿದಾರರ ಬ್ಯಾಂಕ್ ಖಾತೆಯಿಂದ ಕಡಿತವಾಗಿರುವುದು ಧೃಢಪಟ್ಟಿರುತ್ತದೆ. ಈ ರೀತಿ ಪಿರ್ಯಾದಿದಾರರ  ಖಾತೆಯಿಂದ ರೂ 36,890/-ಹಣವನ್ನು ಯಾರೋ ಅಪರಿಚಿತ ವ್ಯಕ್ತಿಗಳು ಪಿರ್ಯಾದಿದಾರರ ಅಧಾರ್ ಕಾರ್ಡ್ ಮಾಹಿತಿ ಉಪಯೋಗಿಸಿ( AEPS) ಅನಧೀಕೃತವಾಗಿ ತೆಗೆದಿರುವ ಬಗ್ಗೆ ತಿಳಿದುಬಂದಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರಿಗೆ ಯಾವುದೇ ಓಟಿಪಿ ಸಂದೇಶವು ಬಂದಿರುವುದಿಲ್ಲ. ದಿನಾಂಕ: 02-08-2023 ರಂದು ಪಿರ್ಯಾದಿದಾರರು ಉಪನೋಂದಣಾಧಿಕಾರಿಯವರ ಕಛೇರಿ ಮಂಗಳೂರು ಇಲ್ಲಿಗೆ ಜಾಗ ಮಾರಾಟದ  ಬಗ್ಗೆ ಹೆಬ್ಬೆರಳಿನ ಗುರುತು ಹಾಗೂ ಆಧಾರ್ ಕಾರ್ಡ್ ಪ್ರತಿ ನೀಡಿದ್ದು, ಯಾರೋ ಅಪರಿಚಿತ ವ್ಯಕ್ತಿಗಳು ತಂತ್ರಾಂಶ ಬಳಸಿ  ಪಿರ್ಯಾದಿದಾರರ  ಆಧಾರ್ ಕಾರ್ಡ್ ನ ಮಾಹಿತಿಯನ್ನು  ಉಪಯೋಗಿಸಿ ಹಂತ ಹಂತವಾಗಿ ರೂ.36,890/-ಹಣವನ್ನು  ಮೋಸದಿಂದ ವರ್ಗಾಯಿಸಿಕೊಂಡು ನಷ್ಟವನ್ನುಂಟು ಮಾಡಿದ್ದು, ಸದ್ರಿ ಅಪರಿಚಿತ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬಿತ್ಯಾದಿ ದೂರಿನ ಸಾರಾಂಶ.

Moodabidre PS

 ಪಿರ್ಯಾದಿ Geetha ದಾರರ ಗಂಡ ರತ್ನಾಕರ, ಪ್ರಾಯ: 40 ವರ್ಷ, ಎಂಬಾತನು ಕೂಲಿ ಕೆಲಸ ಮಾಡಿಕೊಂಡಿರುವುದಾಗಿದ್ದು ದಿನಾಂಕ 24-10-2023 ರಂದು ಬೆಳಿಗ್ಗೆ 09.00 ಗಂಟೆಗೆ ಶಿರ್ತಾಡಿಯ ಕಜೆ ಎಂಬಲ್ಲಿಗೆ ಕೆಲಸಕ್ಕೆಂದು ಹೋದವರು ಸಂಜೆ 5 ಗಂಟೆಗೆ ಕೆಲಸ ಮುಗಿಸಿ ಅಲ್ಲಿಂದ ಹೊರಟವರು ಈವರಗೆ ಮನೆಗೆ ಬಂದಿರುವುದಿಲ್ಲ. ಆತನ ಬಳಿ ಮೊಬೈಲ್ ಇರುವುದಿಲ್ಲ. ನಂತರ ಅವರ ಮನೆಯ ನೆರೆಕೆರೆಯವರಲ್ಲಿ, ಆತನ ಸ್ನೇಹಿತರಲ್ಲಿ ಹಾಗೂ ಸಂಬಂಧಿಕರಲ್ಲಿ ವಿಚಾರಿಸಿ ಹುಡುಕಾಡಲಾಗಿ ಪತ್ತೆಯಾಗದೇ ಇದ್ದು ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡುತ್ತಿರುವುದಾಗಿದೆ ಎಂಬಿತ್ಯಾದಿ.

ಎಂಬಿತ್ಯಾದಿ.

ಕಾಣೆಯಾದವರ ಚಹರೆ ಗುರುತು

ಹೆಸರು: ರತ್ನಾಕರ ಪ್ರಾಯ 40 ವರ್ಷ

ಎತ್ತರ: 5 ಅಡಿ 

ಮುಖ: ಎಣ್ಣೆಕಪ್ಪು ಮೈಬಣ್ಣ,

ಶರೀರ: ಸಾಮಾನ್ಯ ಶರೀರ

ಧರಿಸಿದ್ದ ಬಟ್ಟೆ: ಕೆಲಸದ ಸಮಯ ಧರಿಸಿದ ಹಳದಿ ಬಣ್ಣದ ಹೂವುಗಳಿರುವ ಬರ್ಮುಡಾ ಚಡ್ಡಿ

ಇತ್ತೀಚಿನ ನವೀಕರಣ​ : 26-10-2023 05:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080