ಅಭಿಪ್ರಾಯ / ಸಲಹೆಗಳು

Crime Report in : Mangalore West Traffic PS

ಪ್ರಕರಣದ ಸಾರಾಂಶವೇನೆಂದರೆ, ದಿನಾಂಕ: 26-12-2023  ರಂದು ಪಿರ್ಯಾದಿದಾರರು  ತನ್ನ ಬಾಬ್ತು ದ್ವಿ ಚಕ್ರ ವಾಹನ ನಂಬ್ರ KA-19-EF-9747 ನೇದರಲ್ಲಿ ಮನೆಯಿಂದ ಹೊರಟು ಅಶೋಕ ನಗರ ಮಾರ್ಗವಾಗಿ ಮಂಗಳೂರು ರೈಲ್ವೆ ಸ್ಟೇಷನ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ಚಲಾಯಿಸಿಕೊಂಡು ಹೊಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 06-40 ಗಂಟೆಗೆ ಕಲ್ಗುರ್ಟಿ ದೇವಸ್ಥಾನ ತಲುಪುತ್ತಿದ್ದಂತೆ KA-03-NB-1077 ನೇದರ ಕಾರು ಚಾಲಕ ವಿಷ್ಣು ಪ್ರಭು ಎಂಬುವವರು ಉರ್ವ ಮಾರ್ಕೇಟ್ ಕಡೆಯಿಂದ ಕಾರನ್ನು ನಿರ್ಲಕ್ಷತನ ಮತ್ತು ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬಲ ಬದಿಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಬಲಕಾಲಿಗೆ ರಕ್ತ ಗಾಯವಾಗಿ ಚರ್ಮ ಕಿತ್ತು ಹೋಗಿ ಎಲುಬು ಕಾಣುತ್ತಿದ್ದು ಅಲ್ಲದೆ ತಲೆಗೆ ತರಚಿದ ಗಾಯವಾಗಿರುತ್ತದೆ  ಎಂಬಿತ್ಯಾದಿ.

 

Crime Report in :  Mangalore East Traffic PS

ಪಿರ್ಯಾದಿದಾರರಾದ ಸುನೀಲ್ ಕೃಪಾಕರ್, ಪ್ರಾಯ-56 ವರ್ಷ ಎಂಬವರು ದಿನಾಂಕ: 24/12/2023 ರಂದು ಮನೆಯಿಂದ ಕೈಕಂಬ ಮಾರ್ಕೆಟ್ ಕಡೆಗೆ ನಡೆದುಕೊಂಡು ಹೋಗುತ್ತಾ ಸಂಜೆ ಸಮಯ ಸುಮಾರು 07:00 ಗಂಟೆಗೆ ಕೈಕಂಬ ಪ್ಲೈ ಓವರ್ ಬಳಿಯಿರುವ ಸೋಜಾ ಚಿಕನ್ ಬಳಿ ತಲುಪುತ್ತಿದ್ದಂತೆ ಮರೋಳಿ ಕಡೆಯಿಂದ ನಂತೂರು ಕಡೆಗೆ ಹೋಗುವ ರಾ.ಹೆ 73 ನೇ ಸಾರ್ವಜನಿಕ ರಸ್ತೆಯಲ್ಲಿ KA-19-HN-0401 ನೇ ಮೋಟಾರು ಸೈಕಲ್ ಸವಾರ ಜೋಸ್ ಡಿ ಸೋಜಾ ಎಂಬಾತನು ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಲಬದಿಯಲ್ಲಿ ಹೋಗುತ್ತಿದ್ದ ವಾಹನಗಳನ್ನು ಎಡಗಡೆಯಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ತೀರಾ ಎಡಗಡೆಗೆ ನುಗ್ಗಿಸಿಕೊಂಡು ಬಂದ ಪರಿಣಾಮ ಮೋಟಾರು ಸೈಕಲ್ ಡಿಕ್ಕಿಯಾಗಿ  ಪಿರ್ಯಾದಿದಾರರು ರಸ್ತೆಗೆ ಬಿದ್ದವರನ್ನು ಸಾರ್ವಜನಿಕರು ಎಬ್ಬಿಸಿ ಉಪಚರಿಸಿ  ನೋಡಿದಾಗ ಪಿರ್ಯಾದಿದಾರರ ಬಲಕೋಲು ಕಾಲಿಗೆ ಆಳವಾದ ಚರ್ಮ ಹರಿದ ರಕ್ತಗಾಯವಾಗಿ ಮೂಳೆ ಮುರಿದು ಹೊರ ಚಾಚಿದ್ದು, ಎಡಕೋಲು ಕಾಲು ಪಾದಕ್ಕೆ ತರಚಿದ ಗಾಯ, ತಲೆಗೆ ಚರ್ಮ ಹರಿದ ಗಾಯ, ಭುಜಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು, ಪಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆಯನ್ನು ಪಡೆದುಕೊಂಡು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸರಕಾರಿ ವೆನ್ ಲಾಕ್  ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿರುವುದಾಗಿದೆ ಎಂಬಿತ್ಯಾದಿ

 

Crime Report in  Mangalore East Traffic PS

ಪಿರ್ಯಾದಿದಾರರಾದ ರಂಜಿತ್ ಪ್ರಾಯ-32 ವರ್ಷ ಎಂಬವರು ದಿನಾಂಕ: 26/12/2023 ರಂದು ಬಿಜೈಯಲ್ಲಿರುವ ಮಹೇಶ್ವರಿ ಕೇಬಲ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿರುವ ಅವರ ಸಂಬಂಧಿ ಶ್ರಾವ್ಯ ರವರನ್ನು ಅವರ ಮನೆಯಾದ ಶಕ್ತಿನಗರಕ್ಕೆ ಬಿಡಲೆಂದು ಶ್ರಾವ್ಯ ರವರ ಮಾಲಿಕತ್ವದ KA-19-HP-5681 ನೇ ನಂಬ್ರದ ಎಲೆಕ್ಟ್ರಿಕಲ್ ಸ್ಕೂಟರ್ ನಲ್ಲಿ ಬಿಜೈಯಿಂದ ಹೋರಟು 7 ನೇ ಕ್ರಾಸು ಸಂಕಯ್ಯಾ ಗುಡ್ಡೆ ರಸ್ತೆಯ ಮಾರ್ಗವಾಗಿ ಬರುತ್ತ ಸಂಜೆ ಸಮಯ ಸುಮಾರು 6:20 ಗಂಟೆಗೆ ರಾ.ಹೆ-66 ರ ಎಸ್ ಕೆ ಎಸ್ ಜಂಕ್ಷನ್ ಬಂದು ತಲುಪಿ  ಅಲ್ಲಿರುವ ತೆರೆದ ಡಿವೈಡರ್ ನಿಂದ ಕೆ ಪಿ ಟಿ ಜಂಕ್ಷನ್ ಕಡೆಗೆ ಹೋಗುವರೆ ಬಲಕ್ಕೆ ತಿರುಗಿಸುವಾಗ, ಕೆ ಪಿ ಟಿ ಜಂಕ್ಷನ್ ಕಡೆಯಿಂದ KA-21-Z-2129 ನೇ ನಂಬ್ರದ ಕಾರನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಸ್ಕೂಟರಿನ ಬಲ ಹಿಂಬದಿಗೆ ಡಿಕ್ಕಿ ಪಡಿಸಿದ್ದು, ಡಿಕ್ಕಿಯ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರೆ ಶ್ರಾವ್ಯರವರು ರಸ್ತೆಗೆ ಎಸೆಯಲ್ಪಟ್ಟು ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡವರನ್ನು ಅದೆ ರಸ್ತೆಯಲ್ಲಿ ಹೋಗುತ್ತಿದ್ದ ಸಾರ್ಜನಿಕರೋಬ್ಬರು ತಮ್ಮ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ಸಹ ಸವಾರೆ ಶ್ರಾವ್ಯ ರವರಿಗೆ ಚರ್ಮ ಹರಿದ ಗಂಭೀರ ಸ್ವರೂಪದ ರಕ್ತ ಗಾಯವಾಗಿರುವುದರಿಂದ ಒಳ ರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಎಂಬಿತ್ಯಾದಿ

 

 

Crime Report in  Traffic North PS

 ಈ ಪ್ರಕರಣದ ಸಾರಾಂಶವೇನಂದರೆ, ದಿನಾಂಕ 20.12.2023 ರಂದು ಪಿರ್ಯಾದಿದಾರರ ಮಾವ ಸೋಮನಾಥ ಪೂಜಾರಿಯವರು ತಾವು ವಾಸವಿರುವ ಕಾವೂರಿನಲ್ಲಿರುವ ಫ್ಲಾಟ್ ನಿಂದ ಕಾವೂರಿಗೆ ಹೋಗಿದ್ದು, ಸಂಜೆ ಸಮಯ ಸುಮಾರು 7:00 ಗಂಟೆಗೆ ಮಂಗಳೂರು ತಾಲೂಕು, ಕಾವೂರಿನ ಕೋಳಿ ಅಂಗಡಿಯ ಬಳಿ ಕಾವೂರು ಕಡೆಯಿಂದ ಕೂಳೂರು ಕಡೆಗೆ ಹಾದು ಹೋಗುವ ರಸ್ತೆಯನ್ನು ದಾಟುತ್ತಿರುವಾಗ ಕೂಳುರು ಕಡೆಯಿಂದ ಕಾವೂರು ಕಡೆಗೆ ದ್ವಿಚಕ್ರ ವಾಹನವೊಂದನ್ನು ಅದರ ಸವಾರನು ದುಡುಕುತನ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಮಾವನವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಲಕಾಲಿನ ಕೋಲು ಕಾಲಿಗೆ ಮತ್ತು ತಲೆಯ ಹಿಂಭಾಗಕ್ಕೆ ಗುದ್ದಿದ ರೀತಿಯ ಗಾಯವಾಗಿದ್ದು, ದ್ವಿ ಚಕ್ರ ವಾಹನ ಸವಾರನು ಚಿಕಿತ್ಸೆಯ ಬಗ್ಗೆ ಕಾವೂರು ಡಾ|ರಾಮಚಂದ್ರರವರ ಕ್ಲಿನಿಕಿಗೆ ಕರೆದುಕೊಂಡು ಬಂದು ಬಳಿಕ ಅಲ್ಲಿಂದ ಪರಾರಿಯಾಗಿರುತ್ತಾನೆ. ಬಳಿಕ ಪಿರ್ಯಾದಿದಾರರು ಸೋಮನಾಥ ಪೂಜಾರಿಯವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ ಎಂಬಿತ್ಯಾದಿ.

 

Crime Report in  : Moodabidre PS

 ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ನಿಲೇಶ್ ಶೆಟ್ಟಿ ಪ್ರಾಯ 27 ವರ್ಷ ಎಂಬುವರು ಜೈನ್ ಟ್ರಾವೆಲ್ ಬಸ್ಸಿನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 23-12-2023 ರಂದು KA-19-AB-1339 ನೇ ಬಸ್ಸನ್ನು ಕಾರ್ಕಳ ಕಡೆಯಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೊರಟು ಮಧ್ಯಾಹ್ನ ಸುಮಾರು 2.15 ಗಂಟೆಗೆ ಬೆಳುವಾಯಿ ಫ್ಲೈಓವರ್ ದಾಟಿ ಹೋಗುತ್ತಿರುವಾಗ ಎದುರು ಎಡಬದಿಯಿಂದ MP-39-H-1962 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕನು ಒಮ್ಮಲೇ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ಸಿನ ಎಡಬದಿಯಲ್ಲಿ ಜಖಂ ಆಗಿರುತ್ತದೆ ಎಂಬಿತ್ಯಾದಿ.

ಇತ್ತೀಚಿನ ನವೀಕರಣ​ : 27-12-2023 09:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080