ಅಭಿಪ್ರಾಯ / ಸಲಹೆಗಳು

Crime Reported in : Panambur PS

ಪಿರ್ಯಾದಿ Mohankumar ಬೈಕಂಪಾಡಿ ಕೈಗಾರಿಕಾ ಪ್ರದೇದಲ್ಲಿರುವ  ದುರ್ಗಾಮೋಟಾರ್ಸ್ ವರ್ಕ್ ಶಾಪ್ ನಲ್ಲಿ ಕಳೆದ 7 ವರ್ಷಗಳಿಂದ ಮ್ಯಾಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಅದು ಅಶೋಕ್ ಲೈಲ್ಯಾಂಡ್ ವಾಹನ ರಿಪೇರಿಯ ವರ್ಕ್‌ಶಾಪ್ ಆಗಿರುತ್ತದೆ.   ವರ್ಕ್‌ಶಾಪ್ ನಲ್ಲಿ ಸುಮಾರು 60 ಜನ ಕೆಲಸಗಾರರು ಇದ್ದಾರೆ. ಈ ವರ್ಕ್‌ಶಾಪ್ ನ ಮೇಲ್ಛಾವಣಿಯ ಶೀಟ್ ಮೇಲೆ ಸೋಲಾರ್ ಪ್ಯಾನಲ್ ಗೆ ವಯರಿಂಗ್ ಮತ್ತು ಪ್ಲಂಬಿಂಗ್ ಕೆಲಸವನ್ನು ಶಿವಸಾಗರ ಇಲೆಕ್ಟ್ರಿಕಲ್ಸ್, ಬೈಕಂಪಾಡಿಯ ಕಾಂಟ್ರಾಕ್ಟರ್ ರವಿರವರು ದಿನಾಂಕ 26-01-2023 ರಂದು ಬೆಳಿಗ್ಗೆ 11-00 ಗಂಟೆಯಿಂದ ಇಬ್ಬರು ಕೆಲಸಗಾರರ ಮೂಲಕ ಮಾಡಿಸುತ್ತಿದ್ದರು. ಸಂಜೆ 05-00 ಗಂಟೆ ಸಮಯ ಸುಮಾರಿಗೆ  ವರ್ಕ್‌ಶಾಪ್ ನ ಮೇಲ್ಛಾವಣಿಯ ಶೀಟ್ ಮೇಲೆ ಸೋಲಾರ್ ಪ್ಯಾನಲ್ ಗೆ ವಯರಿಂಗ್ ಮತ್ತು ಪ್ಲಂಬಿಂಗ್ ಕೆಲಸವನ್ನು ಮಾಡುತ್ತಿದ್ದ ಕೆಲಸಗಾರ ವರುಣ್, ಪ್ರಾಯ ೨೪ ವರ್ಷ, ಎಂಬಾತನು ಕೆಲಸ ಮಾಡುತ್ತಿದ್ದ ಸಮಯ ಮೇಲ್ಚಾವಣಿಯ ಶೀಟ್ ಕಟ್ ಆಗಿ ಮೇಲಿನಿಂದ ಕೆಳಗೆ ಬಿದ್ದು ಗಾಯಗೊಂಡನು. ಆಗ ಕೆಳಗಡೆ ಕೆಲಸಮಾಡುತ್ತಿದ್ದ ಪಿರ್ಯಾದಿದಾರರು ಹಾಗೂ ಸುಧೀರ್, ಜಾಪರ್, ರವೀಂದ್ರ ಎಂಬವರು ನೋಡಿ ಕೂಡಲೇ ಅವನ ಹತ್ತಿರಕ್ಕೆ ಹೋಗಿ ನೋಡಿದಾಗ ಅವನ ತಲೆಗೆ ಗಂಭೀರವಾದ ಗಾಯವಾಗಿ ರಕ್ತಸ್ರಾವ ಆಗುತ್ತಿತ್ತು. ಪಿರ್ಯಾದಿದಾರರು ಮತ್ತು ಸುಧೀರ್ ವರ್ಕ್‌ಶಾಪ್ ನ ಜೀಪಿನಲ್ಲಿ ಪಾದರ್ ಮುಲ್ಲರ್ಸ ಆಸ್ಪತ್ರೆ, ಮಂಗಳೂರಿಗೆ ಕರೆದುಕೊಂಡು ಹೋದರು. ಅಲ್ಲಿ ವೈದ್ಯರು ನೋಡಿ ವರುಣ್ ಮೃತಪಟ್ಟಿರುವುದಾಗಿ ಹೇಳಿದರು.  ಮೃತನ ಹೆಸರು ವರುಣ್ ಕುಮಾರ್, ಪ್ರಾಯ 25 ವರ್ಷ, ತಂದೆ. ಭಗವಾನ್ ದಾಸ್, ಎಕ್ಕೂರುಗುಡ್ಡೆ, ಮಂಗಳೂರು ಆಗಿರುತ್ತದೆ. ಈ ಘಟನೆಯು ಕಾಂಟ್ರಾಕ್ಟರ್ ರವಿ  ಮೇಲ್ಚಾವಣಿಯ ಶೀಟ್ ನಲ್ಲಿ ನಿಲ್ಲಿಸಿ ಸುರಕ್ಷತೆ ನೀಡದೆ ಕೆಲಸಕ್ಕೆ ನೇಮಿಸಿದರೆ ಕೆಲಸಗಾರ ಕೆಲಸ ಮಾಡುವ ಸಮಯ ಮೇಲ್ಚಾವಣಿಯ ಶೀಟ್ ಕಟ್ ಆಗಿ ಎತ್ತರದಿಂದ ಕೆಳಗೆ ಬಿದ್ದು ಅದರಿಂದ ಸಾವು ಸಂಭವಿಸಬಹುದೆಂದು ತಿಳಿದೂ  ಅಪಾಯದ ಕೆಲಸ ಮಾಡಿಸಿದ್ದರಿಂದ ಈ ಘಟನೆ ಸಂಭವಿಸಿದೆ ಎಂಬಿತ್ಯಾದಿ

 

Crime Reported in : Traffic South Police Station       

ಪಿರ್ಯಾದಿ ಡಾ.ಮಹಾಲಿಂಗೇಶ್ವರ ಭಟ್  ಕೆ. ಪಿ ರವರು ದಿನಾಂಕ 26-01-2023 ರಂದು ಕಾರು ನೊಂದಣಿ ನಂಬ್ರ KA-19-MK-0198 ನೇದರಲ್ಲಿ ಉಪ್ಪಿನಂಗಡಿಯಿಂದ ಮೇಲ್ಕಾರ್ ಮಾರ್ಗವಾಗಿ ದೇರಳಕಟ್ಟೆಗೆ ಬರುತ್ತಿರುವಾಗ ಸಮಯ ಸುಮಾರು ರಾತ್ರಿ 08.15 ಗಂಟೆಗೆ ಅರ್ಕಾನ ಸರ್ಕಾರಿ ಪ್ರಾಥಮಿಕ ಶಾಲೆ ಬಳಿ ತಲಪುತ್ತಿದಂತೆ ಅದೇ ಮಾರ್ಗವಾಗಿ ಬರುತ್ತಿದ್ದ KA-19-MD-3763 ನೇದರ ಕಾರು ಚಾಲಕ ಚೇತನ ಕುಮಾರ ಎಂಬಾತನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಪಡಿಸಿ ನಿಲ್ಲಿಸದೆ ಪರಾರಿಯಾಗಿ ನಂತರ ಅದೇ ರಸ್ತೆಯಲ್ಲಿ ಮುಂದೆ ಹೋಗಿ ಪಲ್ಟಿಯಾಗಿರುತ್ತದೆ.ಅಪಘಾತದ ಸಮಯ ಕಾರು ಚಾಲಕ ಚೇತನ ಕುಮಾರ ರವರು ಅಮಲು ಪದಾರ್ಥ ಸೇವಿಸಿದವನಂತೆ ಕಾಣುತ್ತಾನೆ ಎಂದು ಪಿರ್ಯಾದಿದಾರರು ತಿಳಿಸಿರುತ್ತಾರೆ. ಎಂಬಿತ್ಯಾದಿ

           

ಇತ್ತೀಚಿನ ನವೀಕರಣ​ : 27-01-2023 03:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080