ಅಭಿಪ್ರಾಯ / ಸಲಹೆಗಳು

Crime Report in :   Mangalore East PS

ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗ ವತಿಯಿಂದ ರಚಿಸಲಾಗಿರುವ Anti Drug Team ತಂಡದ ಅಧಿಕಾರಿ ಸಿಬ್ಬಂದಿಯವರು  ದಿನಾಂಕ: 26-01-2024 ರಂದು  17:00 ಗಂಟೆಗೆ ಮಂಗಳೂರು ನಗರದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ  ಬಲ್ಮಠ  ಬಳಿ ತಲುಪಿದಾಗ ಒಬ್ಬ ವ್ಯಕ್ತಿ ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು, ಅವನನ್ನು ಕಂಡು ಅವರುಗಳು ವಿಚಾರಿಸಲಾಗಿ ಬಾಯಿಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದು, ಅವನನ್ನು ವಶಕ್ಕೆ ಪಡೆದುಕೊಂಡು ಅವನ ಹೆಸರು ವಿಳಾಸ ಕೇಳಲಾಗಿ ಹೆಸರು ಎಲ್ವಿನ್ ಶಿಜು ಪ್ರಾಯ;19 ವರ್ಷ  ವಾಸ: ಅಸ್ಸಾರಿ ಪರಂಬೊಲ್, ಚೆರಕಟ್ಟುಪರ, ಮನೂದ ಪೋಸ್ಟ್, ಮನೀದ್ ಗ್ರಾಮ, ಎರ್ನಾಕುಲಮ್, ಕೇರಳ. ಹಾಗೂ ಹಾಲಿವಾಸ: ಅಭಿಶೇಕ್ ಎಂಬವವರಿಗೆ ಸೇರಿದ ಬಾಡಿಗೆ ಮನೆ ಸಾಯಿಬಾಬಾ ಮಂದಿರದ ಬಳಿ ಲೇಡಿಹಿಲ್ ಮಂಗಳೂರು ಎಂಬುದಾಗಿ ತಿಳಿಸಿದ್ದು, ಅವನನ್ನು ಕೂಲಂಕುಷವಾಗಿ ವಿಚಾರಿಸಲಾಗಿ ಅವನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾರೆ, ಇವನನ್ನು ವಶಕ್ಕೆ ಪಡೆದು ಠಾಣೆಗೆ ಬಂದು ಇವನನ್ನು ಕುಂಟಿಕಾನ ಎ ಜೆ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ  ವೈದ್ಯರು ಪರಿಕ್ಷೀಸಿ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ TETRAHYDARCANNABINOID(MARIJUANA) 50ng per ml POSITIVE ಸೇವನೆ ಮಾಡಿರುವುದಾಗಿ ವರದಿ ನೀಡಿರುತ್ತಾರೆ. ಅದುದರಿಂದ ಈತನ ವಿರುದ್ದ NARCOTIC DRUGS AND PSYCHOTROPIC SUBSTANCES ACT 1985 ರಂತೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ

Moodabidre PS

ಪಿರ್ಯಾದಿದಾರರಾದ ಜಾನ್ ಸಂತೋಷ್ ರವರು ದಿನಾಂಕ: 26-01-2024 ರಂದು ಕಾರ್ಕಳದ ಅತ್ತೂರು ಚರ್ಚ್ ನಲ್ಲಿ ನಡೆಯುತ್ತಿದ್ದ ಹಬ್ಬಕ್ಕೆ ತನ್ನ ಮೋಟರ್ ಬೈಕ್ ಕೆ.ಎ-21-ಜೆ-6155 ನೇದರಲ್ಲಿ ತನ್ನ ತಂಗಿ ಶ್ವೇತಾ ಮರಿಯಾ ಎಂಬುವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಮನೆಯಿಂದ ಬೆಳಗ್ಗೆ 9.00 ಗಂಟೆಗೆ ಹೊರಟಿದ್ದು ಮೂಡಬಿದರೆಯ ಪುಚ್ಚಮೊಗರು ಗ್ರಾಮದ ಅಲಂಗಾರು ಎಂಬಲ್ಲಿ ತಲುಪುತ್ತಿದ್ದಂತೆ ಸಮಯ ಸುಮಾರು 11.15 ಗಂಟೆಗೆ ಎದುರಿನಿಂದ ಅಂದರೆ ಮೂಡಬಿದ್ರೆ ಕಡೆಯಿಂದ ರವಿ ಎಂಬಾತನು ನಂಬರ್ ಪ್ಲೇಟ್ ಇಲ್ಲದ ಟಿ.ವಿ.ಎಸ್ ಕಂಪೆನಿಯ ಹೊಸ  ಸ್ಕೂಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರ ಬಲಬದಿಗೆ ಬಂದು ಪಿರ್ಯಾದಿದಾರರ ಮೋಟರ್ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರ ತಂಗಿ ಶ್ವೇತಾ ಮರಿಯಾ ರವರ ಬಲಗಾಲಿನ ಪಾದಕ್ಕೆ ರಕ್ತಗಾಯವಾಗಿದ್ದು, ಕೂಡಲೇ ಅಲ್ಲಿ ಸೇರಿದ ಸಾರ್ವಜನಿಕರು ಅವರನ್ನು ಉಪಚರಿಸಿ ಆಟೋದಲ್ಲಿ ಮೂಡಬಿದರೆಯ ಮೌಂಟ್ ರೋಸರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿದೆ ಎಂಬಿತ್ಯಾದಿ

 

Bajpe PS

ಪಿರ್ಯಾದಿ Mohammed Awaiz ದಾರರು ದಿನಾಕ 25.01.2024 ರಂದು 21.15 ಗಂಟೆಗೆ ಅಶ್ರಫ್ ಎಂಬವರೊಂದಿಗೆ KA19 HG 2578 ನೇ ನಂಬ್ರ ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ಸಮಯ ಬಡಗುಳಿಪಾಡಿ ಕಡೆಯಿಂದ ಕೈಕಂಬ ಕಡೆಗೆ ಬರುವಾಗ  ಮರ್ಕಜ್ ನಗರದಿಂದ ಸ್ವಲ್ಪ ಮುಂದಕ್ಕೆ ಬರುತ್ತಿದ್ದಂತೆ ಸ್ಕೂಟರ್ ಸವಾರ ಅಶ್ರಫ್ ರವರು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ಸ್ಕಿಡ್ ಆಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದು, ಇದರಿಂದ ಪಿರ್ಯಾದಿದಾರರಿಗೆ ಎರಡು ಕಾಲುಗಳಿಗೆ ಗಾಯವಾಗಿರುತ್ತದೆ ಹಾಗೂ ಅಶ್ರಫ್ ರವರಿಗೂ ಕೂಡ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ನಂತರ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದು ಎಂಬಿತ್ಯಾದಿ.

Mangalore North PS

ದಿನಾಂಕ: 26-01-2024 ರಂದು  ಸಮಯ ಬೆಳ್ಳಿಗ್ಗೆ 11:00 ಗಂಟೆಗೆ ಮಾದಕ ದ್ರವ್ಯ ವ್ಯಸನ ಮತ್ತು ಮಾರಾಟವನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ನಗರ ಪೊಲೀಸ್ ಕೇಂದ್ರ ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಸಿಬ್ಬಂದಿಗಳು ರೌಂಡ್ಸ ಕರ್ತವ್ಯ ದಲ್ಲಿರುವ ಸಮಯ 12:00 ಗಂಟೆಗೆ ಮಂಗಳೂರು ನಗರದ  ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ  ಸೆಂಟ್ರಲ್ ಮಾರ್ಕೆಟ್  ಬಳಿ ತಲುಪಿದಾಗ ಒಬ್ಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ಕಂಡು ನಾವು ವಿಚಾರಿಸಲಾಗಿ ಬಾಯಿಂದ ಗಾಂಜಾ ಸೇವನೆ ಮಾಡಿದ ವಾಸನೆ ಬರುತ್ತಿದ್ದು, ನಾಲಿಗೆ ತೊದಲುತ್ತಾ ತನ್ನ ಹೆಸರು: ಆಡ್ಸನ್ ಜಾರ್ಜ್ ಪ್ರಾಯ: 19 ವರ್ಷ, ವಾಸ: ಕೊಚುಮಲಯಿಲ್ ಹೌಸ್ ತಿರುವೈನಿಯೂರ್ ಪೋಸ್ಟ್ ಕುನ್ನತಾನಾಡ್  ಎರ್ನಾಕುಲಂ, ಕೇರಳ ಎಂಬುದಾಗಿ ತಿಳಿಸಿದ್ದು ಅನುಮಾನಗೊಂಡು ಆತನಲ್ಲಿ ಮುಂದುವರೆದು ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕೂಲಂಕುಷವಾಗಿ ವಿಚಾರಿಸಲಾಗಿ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿರುತ್ತಾನೆ. ಸದ್ರಿ ಆಡ್ಸನ್ ಜಾರ್ಜ್ ನನ್ನು ಮಂಗಳೂರು ಕುಂಟಿಕಾನದ ಎ ಜೆ ಆಸ್ಪತ್ರೆಗೆ ಹಾಜರುಪಡಿಸಿದ್ದು, ಎ ಜೆ ಆಸ್ಪತ್ರೆಯ ವೈದ್ಯರು ಆತನನ್ನುಪರೀಕ್ಷಿಸಿದಲ್ಲಿ, Tetrahydracannabinoid, (Marijuana) ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿರುವುದಾಗಿ ದೃಢ ಪತ್ರವನ್ನು ನೀಡಿರುತ್ತಾರೆ ಈ ಬಗ್ಗೆ ಆತನ  ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದು  ಎಂಬಿತ್ಯಾದಿ.

 

ಇತ್ತೀಚಿನ ನವೀಕರಣ​ : 27-01-2024 03:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080