ಅಭಿಪ್ರಾಯ / ಸಲಹೆಗಳು

Mangalore East Traffic PS    

ಪಿರ್ಯಾದಿ ಶ್ರೀ ವಿದ್ಯಾ ಸಾಗರ (32 ವರ್ಷ)  ದಿನಾಂಕ 26/02/2023 ರಂದು ಮದ್ಯಾಹ್ನ ವೇಳೆ ಮುಡಿಪು ಕಡೆಗೆ ಹೋಗಿದ್ದವರು ತನ್ನ ಚಿಕ್ಕಮ್ಮನ ಮಗನ ಬಾಬ್ತು ತಾನು ಉಪಯೋಗಿಸಿ ಕೊಂಡಿರುವ KA19EX5835 ನಂಬ್ರದ ಮೋಟರ್ ಸೈಕಲ್ ನ್ನು ಸವಾರಿ   ಮಾಡಿಕೊಂಡು ಮನೆಗೆ ಬರುತ್ತಾ ಪಂಪವೆಲ್ ಕಡೆಯಿಂದ ಪದುವಾ ಕಡೆಗೆ ಹಾದು ಹೋಗಿರುವ ರಾಷ್ಡೀಯ ಹೆದ್ದಾರಿ ಸಂಖ್ಯೆ:66 ನೇ ಡಾಮಾರು ರಸ್ತೆಯಲ್ಲಿ ಮದ್ಯಾಹ್ನ ಸಮಯ ಸುಮಾರು 02.30 ಗಂಟೆಗೆ ನಂತೂರ್ ಜಂಕ್ಷನ್ ತಲುಪಿದ ವೇಳೆ KA-19 Z-1890  ನಂಬ್ರದ ಕಾರನ್ನು ಅದರ  ಚಾಲಕ ಸಂತೋಷ ಸೋನ್ಸ್ ಎಂಬವರು ಶಿವಭಾಗ್ ಕಡೆಯಿಂದ ಬಿಕರ್ನಕಟ್ಟೆ ಕಡೆ ಹೋಗಲು  ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಬಾಬ್ತು ಮೋಟರ್ ಸೈಕಲ್ ನ  ಮುಂಬಾಗದ ಚಕ್ರಕ್ಕೆಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ವಾಹನ ಸಮೇತ ರಸ್ತೆಗೆ ಬಿದ್ದು ಎಡ ಕೈಯ ಮಣಿ ಗಂಟಿನ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ ಉಂಟಾದವರನ್ನು ಅಪಘಾತ ಪಡಿಸಿದ  ಕಾರು ಚಾಲಕನೇ  ಚಿಕಿತ್ಸೆ ಬಗ್ಗೆ ಹತ್ತಿರದ ಮಂಗಳಾ ಆಸ್ಪತ್ರೆಗೆ ಕರೆದು ಕೊಂಡು ಹೊಗಿದ್ದು  ಅಲ್ಲಿಯ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ನೀಡಿರುತ್ತಾರೆ  ಪಿರ್ಯಾದಿದಾರರಿಗೆ  ಶಸ್ತ್ರ ಚಿಕಿತ್ಸೆಗೆ  ಒಳಗಾಗಲು ಇದ್ದುದರಿಂದ ದೂರು ನೀಡಲು ವಿಳಂಬವಾಗಿದ್ದು ಈ ಬಗ್ಗೆ  ಕಾರು ಚಾಲಕ ಸಂತೋಷ್ ಸೋನ್ಸ್ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಎಂಬಿತ್ಯಾದಿ.

Mangalore East PS

ಪಿರ್ಯಾದಿ Vinora A C  ಮಂಗಳೂರಿನ ಸೆಂಟ್ ಆಗ್ನೆಸ್ ಹಾಸ್ಟಲ್ ನಲ್ಲಿ ವಾರ್ಡನ ಆಗಿ ಕೆಲಸ ಮಾಡಿಕೊಂಡಿದ್ದು, ಜೂನ್ 2022 ರಂದು ಮಧ್ಯ ಪ್ರದೇಶ ಮೂಲದ ವಂದನಾ ರವರು ಹಾಸ್ಟಲ್ ನಲ್ಲಿ ಕೆಲಸಕ್ಕೆ ಸೇರಿದ್ದು, ಆ ಹುಡುಗಿಯು ದಿನಾಂಕ 00-00-2023 ಸಂಜೆ 06.00 ಗಂಟೆಗೆ   ಹಾಸ್ಟಲ್ ನಿಂದ ಯಾರಿಗೋ ಹೇಳದೆ ಕೇಳದೇ ಕಾಣೆಯಾಗಿರುತ್ತಾರೆ. ಅವಳು ಹೋಗುವಾಗ ಆಧಾರ ಕಾರ್ಡ್ ಪಾಸ್ ಬುಕ್ ಮತ್ತು ಇತರೆ ದಾಖಲಾತಿಗಳನ್ನು ತಗೆದುಕೊಂಡು ಹೋದವಳು ಈ ತನಕ ಮರಳಿ ಹಾಸ್ಟೇಲ್ ಗೆ ವಾಪಸ್ಸು ಬಾರಧೇ ಕಾಣೆಯಾಗಿರುತ್ತಾರೆ. ಆದ್ದರಿಂದ ಕಾಣೆಯಾದ ವಂದನಾ ರವರನ್ನು ಪತ್ತೆ ಮಾಡಿ ಕೊಡಬೇಕಾಗಿ ಎಂಬಿತ್ಯಾದಿ.

ಕಾಣೆಯಾದ ಮಹಿಳೆಯ ಚಹರೆ: ಹೆಸರು: ವಂದನಾ, ಪ್ರಾಯ 20 ವರ್ಷ ತಂದೆ: ದೆವೇಂದ್ರ ಕುಮಾರ್, ದಪ್ಪ ಶರೀರ, ಎಣ್ಣೆ ಕಪ್ಪು ಮೈಬಣ್ಣ, ಗುಂಡು ಮುಖ, ಎತ್ತರ 4’5”, ಬಿಳಿ ಬಣ್ಣದ ಶರ್ಟ್, ಬ್ಲಾಕ್ ಪ್ಯಾಚೆಸ್ ಇರುವ ಆಕಾಶ ನೀಲಿ ಜೀನ್ಸ್ ಧರಿಸಿರುತ್ತಾರೆ. ಮಾತನಾಡುವ ಭಾಷೆ: ಕೊಂಕಣಿ, ಇಂಗ್ಲೀಷ್, ಹಿಂದಿ.

Traffic South Police Station  

ದಿನಾಂಕ: 26-02-2023 ರಂದು ಪಿರ್ಯಾದಿ ಇಬ್ರಾಹೀಂ ಸಹಿಮ್ (21 ವರ್ಷ) ಮೋಟಾರ್ ಸೈಕಲ್ ನಂಬ್ರ: KA-02-HT-4317 ನೇದನ್ನು ಸವಾರಿ ಮಾಡಿಕೊಂಡು ಕಣ್ಣೂರು ಊರುಸ್ ಕಡೆ ಹೋಗಿದ್ದು ಊರುಸ್ ಮುಗಿಸಿ ವಾಪಾಸ್ಸು ಮನೆಯಾದ ಕಂಯಂಗಳ ಕಡೆಗೆ ಸವಾರಿ ಮಾಡಿಕೊಂಡು ವಾಮಂಜೂರು ಮಾರ್ಗವಾಗಿ ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 11-30 ಗಂಟೆಗೆ ಪರಾರಿ ಬಳಿ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಪಿಕ್ ಆಫ್ ವಾಹನ ನಂಬ್ರ: KA-19-AB-1186 ನೇದನ್ನು ಅದರ ಚಾಲಕ ಸುಶೀಲ್ ಎಂಬಾತನು ಅಮಲು ಪದಾರ್ಥ ಸೇವಿಸಿದ ರೀತಿಯಿಂದ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್ ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಬಲಕಾಲು ಕೋಲುಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ಸೊಂಟದ ಬಲಬದಿ,ಬಲಭುಜಕ್ಕೆ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ ಜನರು ಚಿಕಿತ್ಸೆ ಬಗ್ಗೆ ವಾಹನವೊಂದರಲ್ಲಿ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿರುತ್ತಾರೆ ಎಂಬಿತ್ಯಾದಿ.

Moodabidre PS

ದಿನಾಂಕ: 25/02/2023 ರಂದು ಪಿರ್ಯಾದಿ ಪ್ರಶಾಂತ್ ಕುಮಾರ್ ಬೆಕಲ್ ರವರು ಕೆಲಸ ಮುಗಿಸಿಕೊಂಡು ಎಕ್ಸಲೆಂಟ್ ಕಾಲೇಜಿನಿಂದ ಮೂಡಬಿದ್ರೆ ಕಡೆಗೆ ಕೆ.ಎ-03-ಹೆಚ್.ಬಿ-8210 ನೇ ಸ್ಕೂಟರ್ ನ್ನು ಸವಾರಿ ಮಾಡಿಕೊಂಡು ಬರುತ್ತಿದ್ದ ಸಮಯ ಸುಮಾರು ರಾತ್ರಿ 9.40 ಗಂಟೆಗೆ ಮಹಾವೀರ ಕಾಲೇಜು ಬಳಿ ತಲುಪುತ್ತಿದ್ದಂತೆ ಮೂಡಬಿದ್ರೆ ಕಡೆಯಿಂದ ವೇಣೂರು ಕಡೆಗೆ ತೆರಳುತ್ತಿದ್ದ ಕೆ.ಎ-19-ಎ.ಸಿ-3572 ನೇ ರಿಕ್ಷಾ ಟೆಂಪೋ ಚಾಲಕ ಪ್ರವೀಣ್ ಎಂಬಾತನು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಅವರ ಎಡಗಾಲಿಗೆ, ಎಡಗೈಗೆ, ತಲೆಗೆ ಮತ್ತು ಮುಖಕ್ಕೆ ತರಚಿದ ಹಾಗೂ ಗುದ್ದಿದ ನಮೂನೆಯ ಗಾಯಗಳಾಗಿರುತ್ತದೆ. ನಂತರ ಅಲ್ಲಿ ಸೇರಿದ ಸಾರ್ವಜನಿಕರು ಪಿರ್ಯಾದಿದಾರರನ್ನು ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದ ವೈದ್ಯರು ಎಡಗಾಲಿನ ಪಾದದ ಬಳಿ ಮೂಳೆ ಮುರಿತವಾಗಿರುವುದಾಗಿ ತಿಳಿಸಿರುತ್ತಾರೆ ಎಂಬಿತ್ಯಾದಿ.                   

Traffic North Police Station   

ಪಿರ್ಯದಿ ಫಾತೀಮಾ ಶಾಹೀದಾ (40) ರವರ ಮಗ ಕೈಸ್ ಮಹಮ್ಮದ್ ರವರು ಈ ದಿನ ದಿನಾಂಕ: 25-02-2023 ರಂದು ಪಿರ್ಯಾದಿದಾರರ ತಾಯಿ ಮನೆಯಾದ ಕಾಟಿಪಳ್ಳ ದಲ್ಲಿ ಟ್ಯೂಶನ್ ಬಗ್ಗೆ ವಾಸಮಾಡಿಕೊಂಡಿದ್ದು ಈ ದಿನ ಪಿರ್ಯಾದಿದಾರರ ಮಗ ಕೃಷ್ಣಾಪುರ 6 ನೇ ಬ್ಲಾಕ್ ನಲ್ಲಿ ಟ್ಯೂಶನ್ ಮುಗಿಸಿಕೊಂಡು ಆತನ ಸ್ನೇಹಿತನ ಬೈಕಿನಲ್ಲಿ ಹಿಂಬದಿ ಸವಾರನಾಗಿ ಕುಳಿತುಕೊಂಡು ಪಿರ್ಯಾದಿದಾರರ ತಾಯಿ ಮನೆಗೆ ಬರುತ್ತಿರುವಾಗ ಮೋಟರ್ ಸೈಕಲ್ ಸವಾರ ಕೃಷ್ಣಾಪುರ ಇನ್ ಫ್ರಂಟ್ ಮೇರಿ ಶಾಲೆ ಹತ್ತಿರ ಹಂಪ್ಸ್ ಬಳಿ ರಾತ್ರಿ ಸಮಯ ಸುಮಾರು 8:50 ಗಂಟೆಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಚರಂಡಿಗೆ ಮೋಟಾರ್ ಸೈಕಲ್ ಸಮೇತ ಬಿದ್ದಿದ್ದು ಪರಿಣಾಮ ಪಿರ್ಯಾದಿದಾರರ ಮಗನಾದ ಕೈಸ್ ಮಹಮ್ಮದ್ ರವರಿಗೆ ಗಲ್ಲದ ಹತ್ತಿರ ತರಚಿದ ಗಾಯ, ಕುತ್ತಿಗೆ ಹತ್ತಿರ ಸೀಳಿದ ರಕ್ತ ಗಾಯ, ಹಾಗೂ ಎಡಕೈ ಅಂಗೈ ಬೆರಳಿನ ಹತ್ತಿರ ರಕ್ತ ಗಾಯ ಮತ್ತು ಬಲಕಾಲಿನ ಕೋಲುಕಾಲಿನ ಹತ್ತಿರ ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಸದ್ರಿ ಅಪಘಾತಕ್ಕೆ ಕಾರಣನಾದ ಮೋಟಾರ್ ಸೈಕಲ್ ನೋಂದಣಿ ನಂಬ್ರ ಮತ್ತು ಮೋಟಾರ್ ಸೈಕಲ್ ಸವಾರನ ಹೆಸರು  ತಿಳಿದು ಬಂದಿರುವುದಿಲ್ಲ ಎಂಬಿತ್ಯಾದಿ ಸಾರಾಂಶ.

Traffic North Police Station               

ಪಿರ್ಯದಿ Smt Sangamma Thatti ಮತ್ತು ಆವರ ತಾಯಿ ಭೀಮವ್ವ ಎಂಬವರು ಚಿಕಿತ್ಸೆಯ  ಬಗ್ಗೆ ಸುರತ್ಕಲ್ ಅಥರ್ವ ಆಸ್ಪತ್ರೆಗೆ ಬಂದವರು ನಂತರ ಮನೆಗೆ ಹೋಗಲು ಹರ್ಷ ಎಲೆಟ್ರಾನಿಕ್ಸ್ ಎದುರು ಮಂಗಳೂರು – ಉಡುಪಿ ರಾಹೆ 66 ನೇ ಸಾರ್ವಜನಿಕ ರಸ್ತೆಯನ್ನು ದಾಟಿ ಉಡುಪಿ ಮಂಗಳೂರು ರಸ್ತೆಯನ್ನು ದಾಟುತ್ತಾ ರಸ್ತೆಯ ಅಂಚಿಗೆ ತಲುಪಿದ ಸಮಯ ಸಂಜೆ 3:30 ಗಂಟೆಗೆ ಉಡುಪಿ ಕಡೆಯಿಂದ ಸುರತ್ಕಲ್ ಕಡೆಗೆ KA-19-EG-1555 ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಹೇಮಚಂದ್ರ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಡಿಕ್ಕಿ ಪಡಿಸಿ ನಂತರ ಪಿರ್ಯಾದಿದಾರರ ಪಕ್ಕದಲ್ಲಿ ನಡೆದುಕೊಂಡು ರಸ್ತೆ ದಾಟುತ್ತಿದ್ದ ಭೀಮವ್ವ (54 ವರ್ಷ) ಎಂಬವರು ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು, ಪಿರ್ಯಾದಿದಾರರ ತಾಯಿ ಭೀಮವ್ವ ಮತ್ತು ಮೋಟಾರ್ ಸೈಕಲ್ ಸವಾರ ರಸ್ತೆಗೆ ಬಿದ್ದು ಪಿರ್ಯಾದಿದಾರರ ಸೊಂಟದ ಬಳಿ ಗುದ್ದಿದ ರೀತಿಯ ಗಾಯ, ಮತ್ತು ಭೀಮವ್ವ ರವರಿಗೆ ಎಡ ಕಾಲಿನ ಕೋಲು ಕಾಲಿನ ಮೂಳೆ ಮುರಿತ ಮತ್ತು ಬಲ ಕೈ ಮುಂಗೈಯಲ್ಲಿ ಮೂಳೆ ಮುರಿತದ ಗಂಬೀರ ಸ್ವರೂಪದ ಹಾಗೂ ಸೊಂಟಕ್ಕೆ ಗುದ್ದಿದ ರೀತಿಯ ಗಾಯವಾಗಿ ಅಥರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Traffic North Police Station       

ಪಿರ್ಯಾದಿ K Siraj ತಂದೆಯಾದ K A ಖಾದರ್  (67) ರವರು ಈ ದಿನ ದಿನಾಂಕ: 26-02-2023 ರಂದು ಸಂಬಂಧಿಕರೊಬ್ಬರ ಮದುವೆಯ ಬಗ್ಗೆ ಗೋವಿಂದ ದಾಸ ಕಡೆಗೆ ಹೋಗಿದ್ದವರು  ಅಲ್ಲಿಂದ ಮಧ್ಯಾಹ್ನ ಊಟ ಮುಗಿಸಿಕೊಂಡು ವಾಪಾಸು ಮನೆ ಕಡೆಗೆ ಬರುವ ಸಲುವಾಗಿ ಗೋವಿಂದ ದಾಸ ಜಂಕ್ಷನ್ ಕಡೆಯಿಂದ ಸುರತ್ಕಲ್ ಜಂಕ್ಷನ್ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಾ ಮಧ್ಯಾಹ್ನ ಸುಮಾರು 3:30 ಗಂಟೆಗೆ ಶಿಶಿರಾ ಮೆಡಿಕಲ್ ಸಮೀಪ ರಸ್ತೆ ದಾಟುತ್ತಿದ್ದಂತೆ KA-19-MF-2305 ನಂಬ್ರದ MARUTHI OMINI ಕಾರನ್ನು ಅದರ ಚಾಲಕ VIKAS PANDE ಎಂಬಾತನು  ಗೋವಿಂದ ದಾಸ ಜಂಕ್ಷನ್ ಕಡೆಯಿಂದ ಸುರತ್ಕಲ್ ಜಂಕ್ಷನ್ ಕಡೆಗೆ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ K A ಖಾದರ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಖಾದರ್ ರವರ ಎಡಕಾಲಿನ ಕೋಲು ಕಾಲಿನ ಭಾಗದಲ್ಲಿ ಮೂಳೆ ಮುರಿತಗೊಂಡು ಮೂಳೆಯು ಹೊರ ಭಾಗಕ್ಕೆ ಬಂದಿದ್ದು, ಎಡಕಾಲಿನ ಹಿಮ್ಮಡಿಯಲ್ಲಿ ಕತ್ತರಿಸಿದ ರೀತಿಯ ರಕ್ತ ಗಾಯ, ಬಲಕೈ ರಿಸ್ಟ್ ನಲ್ಲಿ ಮೂಳೆ ಮುರಿತಗೊಂಡಿದ್ದು, ಎರಡೂ ಕಣ್ಣುಗಳ ಹುಬ್ಬಿನ ಬಳಿ, ಕುತ್ತಿಗೆಯಲ್ಲಿ, ಬಲಕೈ ಬೆರಳುಗಳ ಬುಡದಲ್ಲಿ ಮತ್ತು ಬಲಕಾಲಿನ ಮಣಿ ಗಂಟಿನ ಬಳಿ ಅಲ್ಲಲ್ಲಿ ಚರ್ಮ ತರಚಿದ ರೀತಿಯ ಗಾಯವಾಗಿ ಚಿಕಿತ್ಸೆ ಬಗ್ಗೆ ಸುರತ್ಕಲಿನ ಪದ್ಮಾವತಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ದೇರಳಕಟ್ಟೆಯ ಯೆನಪೋಯಾ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ ಸಾರಾಂಶ.

Traffic South Police Station

ದಿನಾಂಕ:25-02-2023 ರಂದು ಪಿರ್ಯಾದಿ SUNIL A ಹೋಟೆಲ್ ನಲ್ಲಿ ಹೆಲ್ಪರ್ ಕೆಲಸ ಮಾಡಿಕೊಂಡಿರುವ ಗಿರೀಶ್ (29) ರವರು ಪಿರ್ಯಾದಿದಾರರ ಭಾವನಾದ ಜಗದೀಶರವರ ಬಾಬ್ತು ಸ್ಕೂಟರ್ ನಂಬ್ರ KA-19-EQ-7177 ನೇದನ್ನು ಪಿರ್ಯಾದಿದಾರರ ಮನೆಯಾದ ಮೇಗಿನಕರೆಯಲ್ಲಿ ದೈವದ ಕಾರ್ಯಕ್ರಮ ಮುಗಿಸಿಕೊಂಡು ಹೋಟೆಲ್ ಈಶಾನ್ಯ ನಾಗೂರಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ರಾತ್ರಿ 11:45 ಗಂಟೆಗೆ ರಾ.ಹೆ-73 ಸಯ್ಯಾದ್ರಿ ಕಾಲೇಜು ಎದರು ರಸ್ತೆ ಬದಿಯಲ್ಲಿ ಇದ್ದ ಬ್ಯಾರಿಕೇಡ್ ಒಂದಕ್ಕೆ ಡಿಕ್ಕಿ ಪಡಿಸಿದ ಪಡಿಸಿದ ಪರಿಣಾಮ ಗಿರೀಶ್ ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ತಲೆಗೆ ಗುದ್ದಿದ ರೀತಿಯ ತೀವ್ರಗಾಯ ಮತ್ತು ಮುಖಕ್ಕೆ ಹಾಗೂ ಕೈಕಾಲುಗಳಿಗೆ ತರಚಿದ ಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ್ದ ಜನರು ಗಿರೀಶ್ ರವರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಮಂಗಳೂರು ಕಡೆಗೆ ಬರುತ್ತಿದ್ದ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಅಲ್ಲಿನ ವೈದ್ಯರು ಗಿರೀಶ್ ರನ್ನು ಪರೀಕ್ಷಿಸಿ ಪ್ರಜ್ಞಾಹೀನರಾಗಿದ್ದ  ಅವರನ್ನು ಒಳರೋಗಿಯಾಗಿ ದಾಖಲಿಸಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿರುವುದಾಗಿದೆ, ಎಂಬಿತ್ಯಾದಿ

Moodabidre PS

ದಿನಾಂಕ: 24-02-2023 ರಂದು  ಮದ್ಯಾಹ್ನ 03-30 ಗಂಟೆಗೆ ಮೂಡಬಿದ್ರೆ ತಾಲೂಕು ಶಿರ್ತಾಡಿ ಗ್ರಾಮದ ಕಲ್ಲಡ್ಕ ಎಂಬಲ್ಲಿನ ಪಿರ್ಯಾದಿ Mrs Nalini ಮನೆಯ ಬಳಿ ಅವರು ಅವರ ಮನೆಯ ಬಳಿ ಇರುವ ತೋಟದಲ್ಲಿ ದನವನ್ನು ಕಟ್ಟಿ ವಾಪಾಸು ಬರುತ್ತಿರುವ ಸಮಯ ಆರೋಪಿ ದಿನೇಶನು ಅವರ ಹಿಂದಿನಿಂದ ಬಂದು “ಬೇವರ್ಸಿ , ಇದು ನಿನ್ನ ಅಪ್ಪನ ಜಾಗವಾ, ನಿನ್ನ ಅಪ್ಪನ ತೋಟವಾ? ಎಂದು ಹೇಳಿ ಪಿರ್ಯಾದುದಾರರಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಬಲಕೈಯನ್ನು ತಿರುಚಿದ್ದಲ್ಲದೇ ಪಿರ್ಯಾದುದಾರರು ಧರಿಸಿದ್ದ ನೈಟಿಯನ್ನು ಎಳೆದು  ಮಾನಭಂಗ ಉಂಟು ಮಾಡಿರುತ್ತಾರೆ. ಈ ಸಮಯ ಅಲ್ಲಿಗೆ ಬಂದ ಆರೋಪಿಗಳಾದ ಪಿರ್ಯಾದುದಾರರ ಅತ್ತೆ ಲಕ್ಷ್ಮೀ, ಮೈದುನ ಗಣೇಶ್ ರವರು ಕೂಡಾ ಪಿರ್ಯಾದುದಾರರನ್ನು ಉದ್ದೇಶಿಸಿ “ ಬೇವರ್ಸಿ ರಂಡೆ, ಇವಳು ಇಲ್ಲಿ ಇರಬಾರದು, ಇವಳನ್ನು ಇಲ್ಲಿಂದ ಹೊಡೆದು ಓಡಿಸು” ಎಂಬುದಾಗಿ ದಿನೇಶನಿಗೆ ಹೇಳಿದ್ದಲ್ಲದೇ, ಅವರೆಲ್ಲರೂ ಸೇರಿ ಪಿರ್ಯಾದುದಾರರನ್ನು ಉದ್ದೇಶಿಸಿ ನಿನ್ನನ್ನು ಮುಂದಕ್ಕೆ ನೋಡಿಕೊಳ್ಳುತ್ತೇನೆ” ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.  ಹಲ್ಲೆಯಿಂದಾಗಿ ಪಿರ್ಯಾದುದಾರರ ಬಲಕೈಗೆ ತೀವ್ರ ಸ್ವರೂಪದ ನೋವು ಉಂಟಾಗಿರುತ್ತದೆ   ಪಿರ್ಯಾದುದಾರರಿಗೆ ಮತ್ತು ಆರೋಪಿತರುಗಳಿಗೆ ಜಾಗದ ತಕರಾರು ಹಾಗೂ ಕೌಟುಂಬಿಕ ದ್ವೇಷವಿದ್ದು ಇದೇ ವಿಚಾರಕ್ಕೆ ಹಲ್ಲೆ ನಡೆಸಿರುವುದಾಗಿದೆ ಎಂಬಿತ್ಯಾದಿ

Surathkal PS  

ದಿನಾಂಕ:26-02-2023 ರಂದು ಬೆಳಗ್ಗೆ ಪಣಂಬೂರು ಕುಳಾಯಿ ಮೊಗವೀರ ಸಂಘದ ಮಹಾಸಭೆ ನಡೆದಿದ್ದು ಈ ಸಭೆಯಲ್ಲಿ ಪರ ಊರಿನ ಯುವಕರ ಜೊತೆ ನಮ್ಮ ಊರಿನ ಯುವಕರು ರಾತ್ರಿ ವೇಳೆಯಲ್ಲಿ ಅನಗತ್ಯವಾಗಿ ತಿರುಗಾಡುವುದು, ಸಿಗರೇಟ್ ಸೇದುವುದು, ಪರಿಸರವನ್ನು ಹಾಳು ಮಾಡುತ್ತಿರುವ ಕಾರಣ ಇನ್ನು ಮುಂದಕ್ಕೆ ಈ ಹುಡುಗರಿಗೆ ಊರನ್ನು ಹಾಳು ಮಾಡದಂತೆ ಸೂಚಿಸಲು ನಿರ್ಧರಿಸಿ ಊರಿನ ಯುವಕರಾದ ನಿಶಾಂತ್ ಮತ್ತು ಧನುಷ್ ರವರಿಗೆ ಪರಿಸರವನ್ನು ಹಾಳು ಮಾಡಬೇಡಿ ಎಂದು ಪಿರ್ಯಾದಿ Sunil Kumar ಹಾಗೂ ಇತರರು ತಿಳಿಸಿದ್ದು ಈ ದಿನ ದಿನಾಂಕ:26-02-2023 ರಂದು ಸಂಜೆ 04:30 ಗಂಟೆಗೆ ಪಿರ್ಯಾದಿ ತನ್ನ ಕೆಎ19-ಎಡಿ-2090 ನೇ ರಿಕ್ಷಾವನ್ನು ಚಲಾಯಿಸಿಕೊಂಡು ಬರುತ್ತಾ ಮೈದಾನ ತಲುಪುತ್ತಿದ್ದಂತೆ ಅಮಲ್ ಮತ್ತು ಪ್ರತೀಕ್ ರವರು ಅಲ್ಲಿಯೇ ಇದ್ದ ಧನುಷ್ ಮತ್ತು ನಿಶಾಂತ್ ರವರುಗಳ ಜೊತೆಯಲ್ಲಿ ರಿಕ್ಷಾದ ಮುಂದೆ ನಿಂತು ಪಿರ್ಯಾದಿ ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಅಮಲ್ ಎಂಬಾತನು ಕೈಯಲ್ಲಿದ್ದ ಉದ್ದನೆಯ ತಲ್ವಾರ್ ತೋರಿಸಿ ನಿನ್ನನ್ನು ಮೊದಲು ಇಲ್ಲಿಂದ ಮೇಲಕ್ಕೆ ಕಳುಹಿಸುತ್ತೇವೆ ನೀನು ಸತ್ತ ಮೇಲೆ ನಿನ್ನ ಊರಿನವರಿಗೆ ಬುದ್ದಿ ಬರುತ್ತದೆ ಎಂದು ಬೈಯುತ್ತಾ ಪಿರ್ಯಾದಿಯನ್ನು ಕೊಲೆ ಮಾಡುವ ಉದ್ದೇಶದಿಂದ ತಲ್ವಾರನ್ನು ಬೀಸಿದ್ದು ಪಿರ್ಯಾದಿದಾರರು ತಪ್ಪಿಸಿಕೊಂಡಿದ್ದರಿಂದ ಅದು ರಿಕ್ಷಾದ ಮುಂಭಾಗದ ಗಾಜಿನ ಮೇಲೆ ಬಿದ್ದಿದ್ದು ಆತ ಮತ್ತೊಂದು ಸಲ ತಲ್ವಾರ್ ಬೀಸಿದಾಗ ಪಿರ್ಯಾದಿ ತನ್ನ ಬಲಗೈಯಿಂದ ಹಿಡಿದುಕೊಂಡಿದ್ದು ಅದೇ ವೇಳೆಯಲ್ಲಿ ಪ್ರತೀಕ್ ನು ಸೊಂಟದಿಂದ ಡ್ರ್ಯಾಗನ್ ಚೂರಿಯನ್ನು ತೆಗೆದು ಪಿರ್ಯಾದಿಯನ್ನು ಚುಚ್ಚಲು ಬಂದಾಗ ಅಭಿಜಿತ್ ಹಾಗೂ ಇತರರು ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಿದಾಗ ಪ್ರತೀಕ್ ನು ಕಾಲು ಜಾರಿ ಬಿದ್ದು ತಲೆಗೆ ಗಾಯಗೊಂಡಿದ್ದು ಅಮಲ್, ನಿಶಾಂತ್ ಮತ್ತು ಧನುಷ್ ರವರುಗಳು ಕೆಎ19-ಹೆಚ್.ಜೆ-5503 ನೇ ಸ್ಕೂಟರ್ ನ್ನು ಅಲ್ಲಿಯೇ ಬಿಟ್ಟು ತಲ್ವಾರ್ ಮತ್ತು ಚೂರಿಯನ್ನು ಬಿಸಾಡಿ ಓಡಿ ಹೋಗಿದ್ದು ಈ ಹಲ್ಲೆಯಿಂದ ಪಿರ್ಯಾದಿಯ ಬಲ ಅಂಗೈಗೆ ರಕ್ತಗಾಯವಾಗಿ ರಿಕ್ಷಾದ ಮುಂಭಾಗ ಗಾಜು ಹುಡಿಯಾಗಿ 5000/- ರೂ ನಷ್ಠವುಂಟಾಗಿರುವುದಾಗಿದೆ ಎಂಬಿತ್ಯಾದಿ.

 

 

ಇತ್ತೀಚಿನ ನವೀಕರಣ​ : 27-02-2023 08:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080