ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ

CEN Crime PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 27-02-2024 ರಂದು ಸೆನ್ ಕ್ರೈಂ ಪೊಲೀಸ್ ಉಪ-ನಿರೀಕ್ಷಕರಾದ ಶ್ರೀ.ಮಾರುತಿ ಇವರು ಮಂಗಳೂರು ನಗರದ ಕಾವೂರು ಕೆರೆ ಬಳಿ ಅನುಷ್ ಕುಮಾರ್ (25)ವರ್ಷ ತಂದೆ: ಕೆ.ಮುರುಳಿಧರ್ ಕಾಮತ್ ವಾಸ: ಶ್ರೀ ಕೃಷ್ಣ ಧಾಮ,ಸೌಂದರ್ಯ ಕಾಪೌಂಡ್,ಕಾವೂರು ಪೊಲೀಸ್ ಠಾಣೆಯ ಬಳಿ,ಮಂಗಳೂರು-575013 ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಮಂಗಳೂರು ನಗರದ ಕಾವೂರು ಕೆರೆ ಬಳಿ ನಡೆದಾಡುವಂತಹ ಸಾರ್ವಜನಿಕರಿಗೆ  ತೊಂದರೆ ಆಗುವ ರೀತಿಯಲ್ಲಿ ವರ್ತಿಸುತ್ತಿರುವವನನ್ನು  ಮುಂದಿನ ಕ್ರಮದ ಬಗ್ಗೆ ಮಂಗಳೂರು ನಗರದ ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ನೀಡಿದ ವೈದ್ಯಕೀಯ ಧೃಢಪತ್ರ ನೀಡಿದ್ದು ಆತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ

 

CEN Crime PS

ಈ ಪ್ರಕರಣದ ಸಾರಾಂಶವೇನೆಂದರೆ ಈ ದಿನ ದಿನಾಂಕ 27-02-2024 ರಂದು ಸೆನ್ ಕ್ರೈಂ ಪೊಲೀಸ್ ಉಪ-ನಿರೀಕ್ಷಕರಾದ ಶ್ರೀ.ಮಾರುತಿ ಇವರು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಖಾಸಗಿ ಬಸ್ ನಿಲ್ದಾಣದ ಬಳಿ ಪರಮೇಶ್ವರನ್ (23) ವರ್ಷ ತಂದೆ: ಮುರುಗನ್ ವಾಸ: ಸಿಕ್ಕಳೂರ್ ಕುಡಿಯನವರ್, ಧರ್ಮಪುರಿ, ತಮಿಳುನಾಡು ಆಗಿದ್ದು ಹಾಲಿವಿಳಾಸ : ರೂಂ ನಂ 101 ಗ್ಲೋಬಲ್ ರೆಸಿಡೆನ್ಸಿ ಸ್ಟೇಟ್ ಬ್ಯಾಂಕ್  ಎಂಬಾತನು , ಯಾವುದೋ ಅಮಲು ವಸ್ತುವನ್ನು ಸೇವಿಸಿ ನಶೆ ಹೊಂದಿ ಅಮಲು ವಸ್ತುವನ್ನು ಸೇವನೆ ಮಾಡಿದಂತೆ ಕಂಡುಬಂದಿದ್ದು ಮುಂದಿನ ಕ್ರಮದ ಬಗ್ಗೆ ಆತನನ್ನು  ಕುಂಟಿಕಾನದಲ್ಲಿರುವ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಾಧಿಕಾರಿಯವರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆಪಾದಿತನು  ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ನೀಡಿದ ವೈದ್ಯಕೀಯ ಧೃಢಪತ್ರ ನೀಡಿದ್ದು ಆತನ ಮೇಲೆ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ

Mangalore East Traffic PS                 

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿದಾರರಾದ ಬಸವರಾಜ ಪ್ರಾಯ: 39 ವರ್ಷ ರವರು ಈ ದಿನಾಂಕ: 27/02/2024 ರಂದು ಬೆಳಗಿನ ಜಾವ ತಮ್ಮ ಸ್ಕೂಟರ್ ನೊಂದಣಿ ಸಂಖ್ಯೆ: KA-19-EQ-3535 ನೇಯದನ್ನು ಚಲಾಯಿಸಿಕೊಂಡು ತಮ್ಮ ಮನೆಯಿಂದ ಮರೋಳಿ, ನಂತೂರು ಮಾರ್ಗವಾಗಿ ಪದುವಾ ಕಡೆಗೆ ಬರುತ್ತಿರುವಾಗ ಸಮಯ ಸುಮಾರು 5-30 ಗಂಟೆಗೆ ರಾ.ಹೆ 66 ನೇ ಪದುವಾ ಜಂಕ್ಷನ್ ಬಳಿ ಇರುವ ಹಂಪ್ಸ್ ಬಳಿ ತಲುಪುತ್ತಿದ್ದಂತೆ ಸ್ಕೂಟರನ್ನು ನಿಧಾನಗೊಳಿಸುತ್ತಾ ಹಂಪ್ಸಗಳಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಅವರ ಹಿಂಭಾಗದಿಂದ ಅಂದರೆ ನಂತೂರು ಕಡೆಯಿಂದ ಬರುತ್ತಿದ್ದ ಪಿಕ್ ಅಪ್ ಗೂಡ್ಸ್ ವಾಹನ ನೊಂದಣಿ ಸಂಖ್ಯೆ: KA-03-AC-8177 ನೇಯದನ್ನು ಅದರ ಚಾಲಕ ಅಮೀರ್ ಎಂಬಾತನು ಹಂಪ್ಸಗಳನ್ನು ಗಮನಿಸದೇ ತಾನು ಬರುತ್ತಿದ್ದ ವೇಗದಲ್ಲಿಯೇ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕೂಟರಿನ ಹಿಂಭಾಗಕ್ಕೆ ಢಿಕ್ಕಿ ಪಡಿಸಿದ್ದು ಈ ಢಿಕ್ಕಿ ರಭಸಕ್ಕೆ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಢಿಕ್ಕಿ ಪಡಿಸಿದ ವಾಹನದ ಮುಂಭಾಗದಬಂಪರ್ ನ ಅಡಿಗೆ ಸಿಲುಕಿಕೊಂಡು ರಸ್ತೆಯಲ್ಲಿ ಎಳೆಯಲ್ಪಟ್ಟ ಪರಿಣಾಮ ಹೊಟ್ಟೆಗೆ, ಕೈಕಾಲುಗಳಿಗೆ ತರಚಿದ ಗುದ್ದಿದ ರೀತಿಯ ಗಾಯಗೊಂಡಿರುತ್ತಾರೆ,  ಈ ಅಪಘಾತದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಎಂಬಿತ್ಯಾದಿ

Urva PS

ಈ ಪ್ರಕರಣದ ಸಾರಾಂಶವೇನೆಂದರೆ ದಿನಾಂಕ 23-02-2024 ರಂದು ಸಂಜೆ ಪಿರ್ಯಾದಿದಾರರಾದ ಅನಂತ ಸುಬ್ರಮಣ್ಯ ಶರ್ಮ ರವರ ಮೊಬೈಲ್ ನಂಬರಿಗೆ ,  +918762029113 ನಂಬರಿಂದ ಟೆಕ್ಸ್ಟ್ ಮೇಸೆಜ್ ಗೆ ಬಂದ ಲಿಂಕ್ ಮೇಲೆ ಸಂಜೆ ಸಮಯ 4-10 ಗಂಟೆಗೆ ಕ್ಲಿಕ್ ಮಾಡಿದಾಗ ಅದು ಎಸ್ ಬಿ ಐ ಯೋನೋ ಆ್ಯಪ್ ಓಪನ್ ಆಗಿದ್ದು, ಅದರಲ್ಲಿ ಪಿರ್ಯಾಧಿದಾರರ ಇಂಟರ್ ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್ ಮತ್ತು ಓಟಿಪಿ  ಹಾಕಿ ನಂತರದಲ್ಲಿ  ಪ್ರೋಪೈಲ್ ಪಾಸ್ ವರ್ಡ್, ಓಟಿಪಿ ಹಾಕಿರುತ್ತಾರೆ. ನಂತರ ಅದರಲ್ಲಿ ಕೆವೈಸಿ ವೇರಿಫೀಕೆಷನ್ ಮಾಡಿ ಓಟಿಪಿ ಹಾಕಿರುತ್ತಾರೆ. ನಂತರ ಸಂಜೆ ಸಮಯ 4-37 ಗಂಟೆಗೆ ಪಿರ್ಯಾದಿದಾರರ ಮೊಬೈಲ್ ನಂಬ್ರಕ್ಕೆ +918983259979 ನೇದರಿಂದ ಬಂದ ಕರೆಯನ್ನು ಸ್ವೀಕರಿಸಿದಾಗ ಕರೆ ಮಾಡಿದ ವ್ಯಕ್ತಿ ಆ ಕಡೆಯಿಂದ “ನಾನು ಜಯಕುಮಾರ್ ವರ್ಮಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂಬಯಿಯಿಂದ ಮಾತನಾಡುತ್ತಿದ್ದೇನೆ.  ನೀವು ರಿವಾರ್ಡ್ ಪಾಯಿಂಟ್ಸ್  ರೀಡಿಮ್ ಮಾಡುತ್ತಿದ್ದಿರಲ್ಲಾ, ಎಸ್ ಬಿ ಐ ಸರ್ವರ್ ನಲ್ಲಿ ಪ್ರಾಬ್ಲೇಮ್ ಇದೆ ನಾನು ಒಂದು ಮೇಸೆಜ್ ಕಳುಹಿಸುತ್ತೆನೆ ನೀವು ಹಾಗೆ ಮಾಡಿ, ನಂತರ ನನಗೆ ಕರೆ ಮಾಡಿ, ಆಗ ರೀಡಿಮ್ ಗೆ ರಿಜಿಸ್ಟ್ರೇಷನ್ ಕಂಪ್ಲಿಟ್ ಆಗುತ್ತದೆ. ಮತ್ತೆ ಒಂದು ಗಂಟೆಯ ಒಳಗೆ ರಿವಾರ್ಡ್ ನ್ನು  ನಿಮ್ಮ ಅಕೌಂಟ್ ಗೆ ಜಮೆ ಆಗುತ್ತದೆ”  ಎಂದು ಹೇಳಿ ಕರೆಯನ್ನು ನಿಲ್ಲಿಸಿದ ಕೂಡಲೇ ಈ ಮೊಬೈಲ್ ನಂಬ್ರದಿಂದ ಟೆಕ್ಸ್ಟ್ ಮೆಸೆಜ್ ಬಂದಿದ್ದನ್ನು ತೆರೆದು ಓದಿದಾಗ “ Dial**21**7601898746# and press call button”  ಎಂಬುದಾಗಿತ್ತು, ಪಿರ್ಯಾಧಿದಾರರು ಈ ಸಂದೇಶವನ್ನು ಮೊಬೈಲ್  ಟೈಪ್ ಮಾಡಿ ಡಯಲ್ ಮಾಡಿದಾಗ  “ Registration successfully  completed for SBI Rewards  ಎಂಬುದಾಗಿ ಮೊಬೈಲ್ ನಲ್ಲಿ ಡಿಸ್ ಪ್ಲೆ ಆದಂತೆ ಈ ಪ್ರಕ್ರೀಯೆಯನ್ನು ಪಿರ್ಯಾದಿದಾರರು ಅವರಿಗೆ ಕರೆ ಮಾಡಿ ತಿಳಿಸಿದಾಗ ಆ ಕಡೆಯಿಂದ ಇನ್ನು ಒಂದು ಗಂಟೆಯ ಒಳಗೆ ರಿವರ್ಡ್ ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆ ಎಂದು ತಿಳಿಸಿದ ನಂತರದಲ್ಲಿ ಪಿರ್ಯಾದಿದಾರರಿಗೆ ಟೆಕ್ಟ್ಟ್ ಮೆಸೇಜ್ ಬಂದಂತೆ ಪಿರ್ಯಾದಿಧಾರರು ಅವರ ಎಸ್ ಬಿ ಐ ಉಳಿತಾಯ ಖಾತೆಯನ್ನು ಹ್ಯಾಕ್ ಆದ ಬಗ್ಗೆ ಅನುಮಾನಗೊಂಡು ಅದೇ ದಿನ ಸಂಜೆ ಸಮಯ ಸುಮಾರು 6-45 ಗಂಟೆಗೆ ಬಿಜೈ ಎಸ್ ಬಿ ಐ ಎಟಿಎಮ್ ನಲ್ಲಿಗೆ  ಬಂದು ಬ್ಯಾಂಕ್ ಖಾತೆಯ Balance  ಪರಿಶೀಲಿಸಿದಾಗ ಪಿರ್ಯಾದಿದಾರರ ಮಂಗಳೂರು ಪಿಬಿಬಿ ಬ್ರಾಂಚ್ ನ  ಎಸ್ ಬಿ ಐ ಖಾತೆ ನಂಬ್ರ 20296420201 (IFSC SBIN0004164)  ನೇದನ್ನು ಯಾರೋ ವ್ಯಕ್ತಿಗಳು ಹ್ಯಾಕ್ ಮಾಡಿದಲ್ಲದೇ ರೂ 5,00,000 ದವರೆಗಿನ ಹಣವನ್ನು  ಮೋಸ ಮಾಡಿ ಅವರ ಖಾತೆಗೆ ವರ್ಗಾವಣೆ ಮಾಡಿದ್ದು. ಇವರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಎಂಬಿತ್ಯಾದಿ.

 

Urva PS           

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾಧಿದಾರರು ಮಂಗಳೂರು ನಗರದ ಬಂದರು ಠಾಣಾ ಪೊಲೀಸ್ ಉಪ ನಿರೀಕ್ಷಕರಾಗಿದ್ದು, ಮೇಲಾಧಿಕಾರಿಯವರ ಆದೇಶದಂತೆ ಮಾದಕ ವಸ್ತು ಸೇವನೆ ಮಾಡುವವರ ಪತ್ತೆ ಬಗ್ಗೆ ವಿಶೇಷ ತಂಡದಲ್ಲಿ ಮಂಗಳೂರು ನಗರ ಕೇಂದ್ರ ಉಪ-ವಿಭಾಗದ ವ್ಯಾಪ್ತಿಯಲ್ಲಿ ಸಿಬ್ಬಂದಿಗಳೊಂದಿಗೆ ದಿನಾಂಕ: 27-02-2024 ರಂದು ಸಮಯ 16-30 ಗಂಟೆಯಿಂದ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಮಯ ಕಾಪಿಕಾಡ್ ಬಳಿ ತಲುಪಿದಾಗ ಹರ್ಷಿತ್, ಪ್ರಾಯ 23 ವರ್ಷ, ತಂದೆ: ಶ್ರೀನಿವಾಸ, ವಾಸ: 1-40, ಕೊರಗಜ್ಜ ಗುಡಿ ಹತ್ತಿರ, ಪದವಿನಂಗಡಿ, ಬೋಂದೆಲ್, ಮಂಗಳೂರು, ದಕ್ಷಿಣಕನ್ನಡ  ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು,  ಮುಂದಿನ ಕ್ರಮದ ಬಗ್ಗೆ   ಆತನನ್ನು ವೈಧ್ಯಕೀಯ ತಪಾಸಣೆಗೆ ಒಳಪಡಿಸಿದ್ದಲ್ಲಿ ಆತನು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳವಂತೆ ಎಂಬಿತ್ಯಾದಿಯಾಗಿರುತ್ತದೆ.

 

Traffic South Police Station                

ದಿನಾಂಕ 27-02-2024 ರಂದು ಜಪ್ಪಿನಮೊಗರು ಎಂಬಲ್ಲಿರುವ ಪಿರ್ಯಾದಿ Sunil Kumar ಇವರ ಗ್ಯಾರೇಜ್  ಎದುರಿನ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ  ಹಾದು ಹೊಗುವ ರಾಹೆ ರಸ್ತೆಯ ಬದಿಯಲ್ಲಿ KA 19-AD-0836 ನೇ ಟಿಪ್ಪರ್ ನಿಲ್ಲಿಸಿದ್ದು, ರಾ.ಹೆ.ತೊಕ್ಕೊಟ್ಟು ಕಡೆಯಿಂದ ಬೆಳಿಗ್ಗೆ ಸಮಯ ಸುಮಾರು 11.45 ಗಂಟೆಗೆ KA 19 HK 5712 ನೇ ಸ್ಕೂಟರ್ ಸವಾರ ಶೈನ್ ಪೆರ್ನಾಂಡಿಸ್ ರವರು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು  ಟಿಪ್ಪರ್ ಲಾರಿಯ ಹಿಂಬಂದಿಗೆ ಡಿಕ್ಕಿ ಪಡಿಸಿದ ಪರಿಣಾಮ ಸವಾರ ರಸ್ತೆಯ  ಎಡಭಾಗಕ್ಕೆ ಕಚ್ಚಾ ಮಣ್ಣು ರಸ್ತೆಗೆ ಬಿದ್ದು ಸದರಿಯವರ ಮೂಗಿಗೆ ಎಡಕಾಲಿಗೆ ಎಡ ಕೈಗೆ ಬೆರಳುಗಳಿಗೆ ರಕ್ತ ಗಾಯವಾಗಿದ್ದು ಎದೆಗೆ ಗಾಯವಾಗಿದ್ದು ಇಂಡಿಯಾನ ಅಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಿರುತ್ತಾರೆ ಎಂಬಿತ್ಯಾದಿ

 

Traffic North Police Station                                 

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ, ಪಿರ್ಯಾದಿದಾರರ ಅಣ್ಣ ಕೆ. ಮಾಧವ ಪ್ರಭು (70 ವರ್ಷ) ಎಂಬವರು ದಿನಾಂಕ 26.02.2024 ರಂದು ರಾತ್ರಿ ಸ್ಕೂಟರ್ ನಂಬ್ರ KA-20-V-8729 ನೇಯದನ್ನು ಹಳೆಯಂಗಡಿ ಒಳಪೇಟೆ ಒಳರಸ್ತೆಯಿಂದ ಸವಾರಿ ಮಾಡಿಕೊಂಡು ಬಂದು ಹಳೆಯಂಗಡಿ ಜಂಕ್ಷನ್ ನಲ್ಲಿ ರಾತ್ರಿ ಸಮಯ ಸುಮಾರು 10:00 ಗಂಟೆಗೆ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ತೆರೆದ ಡಿವೈಡರ್ ನಲ್ಲಿ ದಾಟುತ್ತಿದ್ದ ಸಮಯ ಮಂಗಳೂರು ಕಡೆಯಿಂದ ಕಾರು ನಂಬ್ರ  KL-79-A-1017 ನೇಯದನ್ನು ಅದರ ಚಾಲಕ ಬಶೀರ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಮಾಧವ ಪ್ರಭುರವರ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಾಧವ ಪ್ರಭುರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ತಲೆಗೆ ಗುದ್ದಿದಂತಹ ಗಂಭೀರ ಸ್ವರೂಪದ ಒಳಗಾಯ, ಬಲಕಾಲಿನ ತೊಡೆಯ ಬಳಿ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯ, ಎಡಕಾಲಿನ ಮೊಣಗಂಟು ಮತ್ತು ಪಾದದ ಬಳಿ ಹಾಗೂ ಎಡಕಣ್ಣಿಗೆ ಗುದ್ದಿದ ರಕ್ತ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ.

 

Traffic South Police Station                        

ಈ ಪ್ರಕರಣದ ಸಾರಾಂಶವೆನೇಂದರೆ ದಿನಾಂದ 27-02-2024 ರಂದು ಪಿರ್ಯಾದಿ ಇವರು Mohammed Udaif T  ಉಡುಪಿ ಕಡೆಯಿಂದ ಮಲಪುರಂ ಕಡೆಗೆ ಮೊಹಮ್ಮದ ಇಜಾಜ್ ಚಲಾಯಿಸುತ್ತಿದ್ದ KL 53 S 5765 ಪಿಕಪ್ ವಾಹನದಲ್ಲಿ ಸಹ ಪ್ರಯಾಣಿಕನಾಗಿ ಹೋಗುತ್ತಿರುವಾಗ  ಸಮಯ ಸುಮಾರು ರಾತ್ರಿ 9.30 ಗಂಟೆಗೆ ತಲಪಾಡಿ ಸೇತುವೆ( ರಾ. ಹೆ 66) ದಾಟುತ್ತಾ ಡಿವೈಡರ್ ಕೊನೆಗೆ ತಲಪುವಷ್ಟರಲ್ಲಿ ಎದುರುಗಡೆಯಿಂದ ಅಂದರೆ ಕೇರಳಾ ಕಡೆಯಿಂದ KA 19 MN 3325 ನಂಬರಿನ ಕಾರನ್ನು ಏಕಮುಖ ರಸ್ತೆಗೆ ವಿರುಧ್ದವಾಗಿ ನಿರ್ಲಕ್ಷ್ಯತನ ಮತ್ತು ದುಡುಕುತನದಿಂದ ಅದರ ಚಾಲಕ ರಾಜೇಶ್ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೋಡೆದು ಎರಡೂ ವಾಹನಗಳ ಮುಂಭಾಗದ ಎಡಭಾಗ  ಜಖಂಗೊಂಡಿರುತ್ತದೆ. ಕಾರು ಚಾಲಕ ರಾಜೇಶ್ ಗೆ ಎಡಕೈಗೆ ಗುದ್ದಿದ ಗಾಯ, ಕಾರಿನ ಮುಂಭಾಗದಲ್ಲಿ ಎಡಕ್ಕೆ ಕುಳಿತು ಪ್ರಯಾಣಿಸುತ್ತಿದ್ದ ವಿಶ್ವನಾಥ ಅವರಿಗೆ ತೆಲೆಗೆ ಗುದ್ದಿದ ನೋವು ಉಂಟಾಗಿರುತ್ತದೆ. ಹಿಂಭಾಗದ ಎಡಭಾಗದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಶ್ರೀಕಾಂತ ಅವರಿಗೆ ಮೂಗಿಗೆ ಗುದ್ದಿದ ಗಾಯಎಡಕೈಗೆ ಮೂಳೆ ಮೂರಿತದ ಗಾಯವಾಗಿದ್ದು, ಕಾರಿನ ಬಲ ಹಿಂಬಾಗದಲ್ಲಿ ಕುಳಿತ್ತಿದ್ದ ಗೀರಿಶ್ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಪಿರ್ಯಾದಿದಾರರಿಗೆ ಎದೆಗೆ ಸ್ವಲ್ಪ ಪ್ರಮಾಣದ ಗುದ್ದಿದ ಗಾಯವಾಗಿರುತ್ತದೆ. ಗಾಯಗೊಂದವರನ್ನು ಸಾರ್ವಜನಿಕರು ಉಪಚರಿಸಿ ಬಳಿಕ ಅಂಬುಲೇನ್ಸ್ ನಲ್ಲಿ ಇಂಡಿಯಾನಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ವ್ಯಧೈರು ಚಿಕಿತ್ಸೆ ನೀಡುತ್ತಿರುವುದಾಗಿದೆ ಎಂಬಿತ್ಯಾದಿ

 

Mangalore East PS

ಈ ಪ್ರಕರಣದ ಸಾರಂಶವೇನೆಂದರೆ, ದಿನಾಂಕ:27-02-2024ರಂದು 12:15 ಗಂಟೆಯ ವೇಳೆಗೆ ಮಂಗಳೂರು ನಗರದ ನಂತೂರು ಜಂಕ್ಷನ್ ಬಳಿ ದೀಕ್ಷಿತನು ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿರುವುದರಿಂದ ಈತನನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಗೊಳಪಡಿಸಿದಲ್ಲಿ ವೈದ್ಯರು ಪರೀಕ್ಷಿಸಿ Tetrahydracannabinoid (Marijuana) 50 ng per ml POSITIVE ಎಂದು ವರದಿ ನೀಡಿದಂತೆ ಈತನ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಾಗಿದೆ ಎಂಬಿತ್ಯಾದಿ.

 

Surathkal PS

ಈ ಪ್ರಕರಣದ ಸಾರಾಂಶವೇನೆಂದರೆ ಪಿರ್ಯಾದಿದಾರರಾದ ವಸಂತ ರವರ ಮಗನಾದ ರಾಘವೇಂದ್ರ, ಪ್ರಾಯ: 15 ವರ್ಷ, ವಾಸ: ಹಳೆಯಂಗಡಿ ಹಾಗೂ ಸಹಪಾಠಿಗಳಾದ ಅನ್ವಿತ್, ಪ್ರಾಯ; 15 ವರ್ಷ, ತಂದೆ: ದೇವದಾಸ, ವಾಸ: ಚಿತ್ರಾಪುರ, ಕುಳಾಯಿ, ನಿರೂಪ್, ಪ್ರಾಯ: 15 ವರ್ಷ, ತಂದೆ: ವಿಶ್ವನಾಥ, ವಾಸ; ಗುಡ್ಡೆಕೊಪ್ಲ, ಸುರತ್ಕಲ್, ಯಶ್ವಿತ್, ಪ್ರಾಯ: 15 ವರ್ಷ, ತಂದೆ: ಚಂದ್ರಕಾಂತ್, ವಾಸ: ಅಗರಮೇಲು, ಸುರತ್ಕಲ್ ಎಂಬ ಹುಡುಗರು ವಿದ್ಯಾದಾಯೀನಿ ಶಾಲೆ, ಸುರತ್ಕಲ್, 10ನೇ ತರಗತಿ B ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿರುತ್ತಾರೆ ಈ ದಿನಾಂಕ 27-02-2024 ರಂದು ಎಂದಿನಂತೆ ಮನೆಯಿಂದ ಬೆಳಿಗ್ಗೆ 08:30 ಗಂಟೆ ಸುಮಾರಿಗೆ ಶಾಲೆಗೆ ತೆರಳಿರುತ್ತಾರೆ ಇವರಿಗೆ ತರಗತಿ ಮುಗಿದ ಬಳಿಕ ಪ್ರತೀ ದಿನ ಶಾಲೆಯಲ್ಲಿ ಸಂಜೆಯ ತನಕ ವಿಶೇಷ ತರಗತಿ ಇರುತ್ತಿದ್ದು ಸಂಜೆ 18.00 ಗಂಟೆಯ ವೇಳೆಗೆ ತರಗತಿ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು ಆದರೆ ಈ ದಿನ 18.30 ಗಂಟೆ ಕಳೆದರೂ ಮಕ್ಕಳು ಮನೆಗೆ ಬಾರದೇ ಇದ್ದಾಗ ಅವರುಗಳ ಪೈಕಿ ಪಿರ್ಯಾದಿದಾರರು ವಿದ್ಯಾದಾಯಿನಿ ಶಾಲೆಯ ಸುಜಾತ ಎಂಬ ಶಿಕ್ಷಕಿಗೆ ಪೋನ್ ಕರೆ ಮಾಡಿ ಮಗ ಇದುವರೆಗೂ ಮನೆಗೆ ಬಾರದೇ ಇದ್ದ ಬಗ್ಗೆ ವಿಚಾರಿಸಿದಾಗ ಸುಜಾತ ರವರು ನಿರೂಪ್ ಎಂಬ ಹುಡುಗನ ತಾಯಿಗೆ ಹಾಗೂ ಅನ್ವಿತ್ ತಾಯಿ ಮತ್ತು ಯಶ್ವಿತ್ ಎಂಬವನ ತಾಯಿಗೆ ಪೋನ್ ಕರೆ ಮಾಡಿ ವಿಚಾರಿಸಿದಾಗ ಅವರುಗಳು ಕೂಡಾ ಮನೆಗೆ ಬಂದಿರುವುದಿಲ್ಲ ಎಂಬ ವಿಚಾರವನ್ನು ತಿಳಿಸಿರುತ್ತಾರೆ ಆ ವಿಚಾರವನ್ನು ಟೀಚರ್ ಸುಜಾತರವರು ಪಿರ್ಯಾದಿದಾರರಿಗೆ ತಿಳಿಸಿರುತ್ತಾರೆ ಈ ವಿಚಾರವನ್ನು ತಿಳಿದ ಪಿರ್ಯಾದಿದಾರರು ಕೂಡಲೇ ನಿರೂಪ್, ಅನ್ವಿತ್, ಯಶ್ವಿತ್ ಎಂಬ ಹುಡುಗರ ಮನೆಯವರನ್ನು ಸಂಪರ್ಕಿಸಿ ಅವರೊಂದಿಗೆ ವಿದ್ಯಾಯಿನಿ ಶಾಲೆ ಸುಮಾರು ರಾತ್ರಿ 20.30 ಗಂಟೆಗೆ ಮುಖ್ಯೋಪಾಧ್ಯಾಯರು ಬಾಲಚಂದ್ರ ರವರಿಗೆ ಕರೆಮಾಡಿ ಮಕ್ಕಳು ಮನೆಗೆ ಬಾರದಿರುವ ಬಗ್ಗೆ ವಿಚಾರ ತಿಳಿಸಿದಂತೆ ನಾಲ್ಕು ಜನ ಮಕ್ಕಳ ಮನೆಯವರೂ ಸೇರಿ ಮುಖ್ಯೋಪಾಧ್ಯಾಯರ ಜೊತೆ ಹುಡುಕಾಡಿ ಸ್ನೇಹಿತರಿಗೆ ಸಂಬಂಧಿದಕರಿಗೆ ಕರೆಮಾಡಿ ವಿಚಾರಿಸಿದಲ್ಲಿ ಎಲ್ಲಿಯೂ ಬಂದಿಲ್ಲವಾಗಿ ತಿಳಿದು ಬಂದಿರುತ್ತದೆ ನಂತರ ಸುರತ್ಕಲ್ ಪರಿಸರದಲ್ಲಿರುವ ಸಿಸಿ ಕ್ಯಾಮರಾ ವನ್ನು ಪರಿಶೀಲಿಸಿದಾಗ  ಮೇಲೆ ತಿಳಿಸಿದ ಪಿರ್ಯಾದಿದಾರರ ಮಗ ರಾಘವೇಂದ್ರ ಹಾಗೂ ಅವನ ಸಹಪಾಠಿಗಳಾದ ಅನ್ವಿತ್, ನಿರೂಪ್, ಯಶ್ವಿತ್ ರವರುಗಳು ಸುರತ್ಕಲ್ ಮಾರ್ಕೇಟ್ ನಿಂದ ಸುರತ್ಕಲ್ ಜಂಕ್ಚನ್ ಗೆ ಬಂದು ಅಲ್ಲಿಂದ ಸುರತ್ಕಲ್ ಬಸ್ ನಿಲ್ದಾಣದಲ್ಲಿ ಹಳೆಯಂಗಡಿ ಕಡೆಗೆ ಬಸ್ ಹತ್ತಿರುವುದು ಕಂಡು ಬಂತು ಇವರುಗಳನ್ನು ಯಾರೋ ಅಪರಿಚಿತರು ಮನವೊಲಿಸಿ ಪುಸಲಾಯಿಸಿ ಬಲತ್ಕಾರವಾಗಿ ಕರೆದುಕೊಂಡು ಹೋಗಿರುವುದಾಗಿರುತ್ತದೆ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 01-03-2024 11:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080