ಅಭಿಪ್ರಾಯ / ಸಲಹೆಗಳು

ದೈನಂದಿನ ಅಪರಾಧ ವರದಿ 

Traffic North Police

ದಿನಾಂಕ 27-03-2024 ರಂದು ಪಿರ್ಯಾದಿ Mohan ಇವರು  ಅವರ ಹೆಂಡತಿ ಮಲ್ಲಿಕ (40) ರವರೊಂದಿಗೆ ಪರಿಚಯದ ಟಿ.ಟಿ ವಾಹನದಲ್ಲಿ ಮುಲ್ಕಿ ಜಂಕ್ಷನಿಂದ ಕಾಪು ಮಾರಿಗುಡಿ ದೇವಸ್ಥಾನದ ಜಾತ್ರೆಗೆ ತೆರಳಲು ಇಬ್ಬರೂ ನಡೆದುಕೊಂಡು ಬಂದು ಮುಲ್ಕಿ ಜಂಕ್ಷನ್ ಹತ್ತಿರ ಓಪನ್ ಡಿವೈಡರಿನಲ್ಲಿ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರಾ.ಹೆ-66 ರಸ್ತೆಯನ್ನು ದಾಟಿ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ರಸ್ತೆಯನ್ನು ದಾಟುತ್ತಿರುವಾಗ ಮಧ್ಯರಾತ್ರಿ ಸಮಯ ಸುಮಾರು 00:50  ಗಂಟೆಗೆ ಮಂಗಳೂರು ಕಡೆಯಿಂದ KL-13-AF-4280 ನಂಬರಿನ FZ Yamaha ಬೈಕಿನ ಸವಾರ Muhammed Fazal ಎಂಬುವರು  ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರ ಹೆಂಡತಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ಹೆಂಡತಿ ಮತ್ತು ಬೈಕ್ ಸವಾರ ಇಬ್ಬರೂ ಡಾಮಾರು ರಸ್ತೆಗೆ ಬಿದ್ದು, ಪಿರ್ಯಾದಿದಾರರ ಹೆಂಡತಿ ಮಲ್ಲಿಕ ರವರಿಗೆ ಎಡಕಾಲಿನ ಮಣಿಗಂಟಿನ ಬಳಿ ಗುದ್ದಿದ ರಕ್ತಗಾಯವಾಗಿದ್ದು, ಮುಖಕ್ಕೆ ಮತ್ತು ಬಲಕಾಲಿಗೆ ಅಲ್ಲಲ್ಲಿ ತರಚಿದ ರೀತಿಯ ಗಾಯವಾಗಿರುತ್ತದೆ.ಅಲ್ಲದೇ ಬೈಕ್ ಸವಾರನಿಗೂ ಕೂಡಾ ಅಲ್ಲಿಲ್ಲಿ ತರಚಿದ ಗಾಯವಾಗಿದ್ದು, ನಂತರ ಪಿರ್ಯಾದಿದಾರರ ಹೆಂಡತಿ ಮಲ್ಲಿಕ ರವರು ಹಾಗೂ Muhammed Fazal ರವರು ಚಿಕಿತ್ಸೆಯ ಮುಕ್ಕಾದ ಶ್ರೀನಿವಾಸ ಆಸ್ಪತ್ರೆಯಯಲ್ಲಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

 

 

Barke PS

 

ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ದಿನಾಂಕ:27-03-2024 ರಂದು ಮಂಗಳೂರು ನಗರ ಪೊಲೀಸ್ ಕೇಂದ್ರ  ಉಪ ವಿಭಾಗದ ವತಿಯಿಂದ ರಚಿತವಾಗಿರುವ Anti Drug Team ತಂಡದ ಅಧಿಕಾರಿ ಪ್ರದೀಪ್ ಟಿ ಆರ್ ಪಿಎಸ್ ಐ ಮಂಗಳೂರು ಉತ್ತರ ಪೊಲೀಸ್ ಠಾಣೆ  ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ ಭಾಗ್ ಬಳಿ ತಲುಪಿದಾಗ ಮುಹಮ್ಮದ್ ಸಮ್ಮಸ್ ಎನ್.ಪಿ (18) ವರ್ಷ ತಂದೆ: ಶಿಹಾಬುದ್ದೀನ್ ಕೆ.ಪಿ ವಾಸ: ಫಾತಿಮಾ ಮಂಜಿಲ್ ಅತಿರಕಮ್, ಮುಂಡಾಯದ್ ಅಂಚೆ, ವರಮ್, ಕಣ್ಣೂರು ಕೇರಳ ರಾಜ್ಯ ಎಂಬಾತನು ಅಮಲು ಪದಾರ್ಥ ಸೇವಿಸಿದ ಹಾಗೆ ತೂರಾಡುತ್ತಿದ್ದು ಆತನನ್ನು ವೈದ್ಯಕೀಯ ಪರೀಕ್ಷೆ ಬಗ್ಗೆ ಮಂಗಳೂರು ಏ,ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಲ್ಲಿ  “Tetrahydracannabinoid (Marijuana) POSITIVE ಎಂಬ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿರುವುದರಿಂದ ಆಪಾದಿತನನ್ನು ವಿರುದ್ದ ಮಾದಕ ದ್ರವ್ಯ ಕಾಯಿದೆ ಅಡಿ ಕಾನೂನು ಕ್ರಮ ಕೈಗೊಳ್ಳಲು ದೂರು ನೀಡಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ.

 

Traffic South Police Station                

ಈ ಪ್ರಕರಣದ ಸಾರಾಂಶವೇನೆಂದರೆ  ದಿನಾಂಕ 27-03-2024ರಂದು ಸಮಯ ಸುಮಾರು 14-45 ಘಂಟೆಗೆ ಫಿರ್ಯಾದಿ Mohammad Ali ಇವರ ತಂದೆ ಮುಸ್ತಪರವರು ಫಿರ್ಯಾದಿದಾರರ ಚಿಕ್ಕಮ್ಮನ ಮಗ ಮಹಮ್ಮದ್ ಅನ್ಸಾನ್ ಸವಾರಿ ಮಾಡುತ್ತಿದ್ದ KA-19 ER-5383 ಮೋಟರ್ ಸೈಕಲ್ ನಲ್ಲಿ  ಕಲ್ಲಾಪುನಿಂದ ತೊಕ್ಕೊಟ್ಟು ಕಡೆ ಹಾದು ಹೋಗುವ ಸರ್ವಿಸ್ ರಸ್ತೆಯಲ್ಲಿ  ಹೋಗುತ್ತಿದ್ದಾಗ ಸಹಾರ ಆಸ್ಪತ್ರೆ ಬಳಿ ತಲುಪುತಿದ್ದಂತೆ ಸದ್ರಿ ಬೈಕಿನ ಹಿಂಬಂದಿಯಿಂದ ಬರುತಿದ್ದ KA-19 ER-1443ನೇ ಬೈಕ್ ಸವಾರ ಮೊಹಮ್ಮದ್ ಶಾಹಿಲ್ ಎಂಬಾತನು ಬಸ್ ನ್ನು ಒವರ್ ಟೆಕ್ ಮಾಡುವ ಸಮಯ ನಿರ್ಲಕ್ಷತನ ಹಾಗು ದುಡುಕುತದಿಂದ ಬೈಕ್ ಚಲಾಯಿಸಿ ಫಿರ್ಯಾದಿದಾರರ ತಂದೆ ಮತ್ತು ಚಿಕ್ಕಮ್ಮನ ಮಗ ಸವಾರಿ ಮಾಡುತ್ತಿದ್ದ ಮೋಟರ್ ಬೈಕ್ ಗೆ ಹಿಂಬದಿಗೆ ಅಪಘಾತ ಪಡಿಸಿದ ಪರಿಣಾಮ ಫಿರ್ಯಾದಿದಾರರ ತಂದೆ ಮುಸ್ತಪ ರವರ ಎಡ ಕಾಲಿಗೆ ಮೂಳೆ ಮುರಿತದ ಗಾಯ ಮತ್ತು ಕೈಗೆ ತರಚಿದ ಗಾಯ ಅಲ್ಲದೆ ಫಿರ್ಯಾದಿದಾರರ ಚಿಕ್ಕಮ್ಮನ ಮಗ ಬೈಕ್ ಸವಾರನಿಗೆ ಕೈಗೆ ತರಚಿದ ಗಾಯವಾಗಿದ್ದು ತೊಕ್ಕೊಟ್ಟು ಸಹಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿರುವುದಾಗಿದೆ ಎಂಬಿತ್ಯಾದಿ

 

Mulki PS

ಫಿರ್ಯಾಧಿ Gaibu Sab Nadaf ಇವರ ಪತ್ನಿ ಶ್ರೀಮತಿ ಮಮ್ತಾಜ್ ಪ್ರಾಯ: 30 ವರ್ಷ, ಮತ್ತು ಮಗ ಮಹಮ್ಮದ್ ಪ್ರಾಯ: 6 ವರ್ಷ ರವರು ಮುಲ್ಕಿ ಪಂಚಮಹಲ್ ಬಳಿ ಗಿರಿಜಮ್ಮರವರ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದವರು ದಿನಾಂಕ: 26-03-2024 ರಂದು ಮದ್ಯಾಹ್ನ 11-30 ಗಂಟೆಯಿಂದ ಯಾರಿಗೂ ಹೇಳದೇ ಕೇಳದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೇ  ಈ ವರೆಗೆ ಮನೆಗೆ ಬಾರದೇ  ಕಾಣೆಯಾಗಿರುತ್ತಾರೆ ಎಂಬಿತ್ಯಾದಿ.

ಕಾಣೆಯಾದವರ ವಿವರ

1.ಮಮ್ತಾಜ್, 40 ವರ್ಷ, ಗಂಡ: ಗೈಬು ಸಾಬ್ ನದಾಫ, ಚಹರೆ ಗುರುತು: ದುಂಡು ಮುಖ, ಗೋಧಿ ಮೈಬಣ್ಣ ಸಾಧಾರಣ ಮೈಕಟ್ಟು, ಕಪ್ಪು ತಲೆ ಕೂದಲು ಮಾತನಾಡುವ ಭಾಷೆ ಕನ್ನಡ, ವಿದ್ಯಾಭ್ಯಾಸ : 5ನೇ ತರಗತಿ ಎತ್ತರ: 5 ಫೀಟು. ಧರಿಸಿದ ಬಟ್ಟೆ ಬರೆಗಳು. ಹಳದಿ ಬಣ್ಣದ ಸೀರೆ

2.ಮಹಮ್ಮದ್  6 ವರ್ಷ,  ತಂದೆ: ಗೈಬು ಸಾಬ್ ನದಾಫ, ವಿದ್ಯಾಭ್ಯಾಸ ಪ್ರಸ್ತುತ 1ನೇ ತರಗತಿ ಬೋರ್ಡ್ ಶಾಲೆ ಮುಲ್ಕಿ. ಚಹರೆ ಗುರುತು: ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕಪ್ಪು ತಲೆ ಕೂದಲು, ಮಾತನಾಡುವ ಭಾಷೆ: ಕನ್ನಡ, ಎತ್ತರ 3 ಫೀಟು, ಧರಿಸಿದ ಬಟ್ಟೆ ಬರೆಗಳು: ಬಿಳಿ ಅಂಗಿ ಮತ್ತು ಕಪ್ಪು ಬಣ್ಣದ ಚಡ್ಡಿ,

Mangalore East PS

ಈ ಪ್ರಕರಣದ ಸಾರಂಶವೇನೆಂದರೆ ಫಿರ್ಯಾದಿದಾರರು ವಿದೇಶದಲ್ಲಿ ಉದ್ಯೋಗದಲ್ಲಿದ್ದು ರಜೆ ನಿಮಿತ್ತ ಊರಿಗೆ ಬಂದಿದ್ದು ದಿನಾಂಕ 27-03-2024 ರಂದು ಸಮಯ ಸುಮಾರು ಬೆಳಿಗ್ಗೆ 11:17 ಗಂಟೆಗೆ ಮಂಗಳೂರಿನ ಲಿಲಿತಾ ಜ್ಯುವೆಲರ್ಸ್ ಬಳಿಯ ನಿರ್ಮಲ್ ಟ್ರಾವೆಲ್ಸ್ ನಲ್ಲಿ ಟಿಕೆಟ್ ಬುಕ್ ಮಾಡಲು KA 03 MQ 9013 ನೇ ಮಾರುತಿ ಗ್ರಾಂಡ್ ವಿಟಾರ ಕಾರನಲ್ಲಿ ಬಂದಿದ್ದು ಸದ್ರಿ ಕಾರನ್ನು ಲಿಲಿತಾ ಜ್ಯುವೆಲರ್ಸ್ ಬಳಿಯ ಪಾರ್ಕ್ ಮಾಡಿ ಹೋಗಿದ್ದು ಸಮಯ ಸುಮಾರು 12:30 ಗಂಟೆಗೆ ವಾಪಾಸ್ಸು ಬಂದು ನೋಡಿದಾಗ ಕಾರಿನ ಹಿಂದಿನ ಭಾಗದ ಎಡಗಡೆ ಬಾಗಿಲಿನ ಗ್ಲಾಸ್ ಒಡೆದು ಕಾರಿನ ಒಳಗಿದ್ದ ಲ್ಯಾಪ್ ಟಾಪ್ ಬ್ಯಾಗ್, ಅದರಲ್ಲಿ ಇದ್ದ ಡೆಲ್ ಕಂಪನಿಯ ಲ್ಯಾಪ್ ಟಾಪ್ (ನಂ 273770153 MFC: ಜನವರಿ 2022), ದಿನಾಂಕ 03-03-2029 ರವರೆಗೆ ಉರ್ಜಿತದಲ್ಲಿರುವ ಪಾಸ್ ಪೋರ್ಟ್ ನಂ T2480449 , MI ಮೊಬೈಲ್ ಪೋನ್ ಅದರಲ್ಲಿದ್ದ Oman Mobile no +96871557740 ಮತ್ತು 40 ಓಮನ್ ರಿಯಾಲ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವು ಮಾಡಿದ ವಸ್ತುವಿನ ಒಟ್ಟು ಅಂದಾಜು  ಮೌಲ್ಯ ಸುಮಾರು 60,000 ರೂ ಆಗಿರುತ್ತದೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳವರೆ ಕೋರಿಕೆ

 

Bajpe PS.

ಈ ಪ್ರಕರಣದ ಸಾರಾಂಶವೆನೆಂದರೆ ಪಿರ್ಯಾದಿ Ajith ಇವರು ತನ್ನ ಬಾಬ್ತು KA19 HF 3272  ನೇ ನಂಬ್ರದ ಮೋಟಾರ್ ಸೈಕಲ್ ನಲ್ಲಿ ನಿನ್ನೆ ದಿನ ದಿನಾಂಕ 26.03.2024 ರಂದು ಸಂಜೆ ಮನೆಗೆ ಹೋಗುತ್ತಿರುವ ಸಮಯ ಸುಮಾರು 16.45 ಗಂಟೆಗೆ ಬೆಳ್ಳಿ ಬೆಟ್ಟು ಬಸ್ಸು ನಿಲ್ದಾಣ ತಲುಪಿದಾಗ ಎದುರುಗಡೆಯಿಂದ ಗುರುಪುರ ಕಡೆಯಿಂದ ಕೈಕಂಬ ಕಡೆಗೆ KA19 MG 1311 ನೇ ನಂಬ್ರದ ಕಾರು ಚಾಲಕನಾದ ನೌಪಾಲ್ ಎಂಬುವನು ತನ್ನ ಕಾರನ್ನು ಅತೀವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದು  ಪಿರ್ಯಾದಿದಾರರ  ತೆಲೆಗೆ ಎಡಕಿವಿಗೆ ,ಬಲಕೈಗೆ ತಟ್ಟಿಗೆ ತರಚಿದ ಗಾಯ ,ಬೆನ್ನಿಗೆ ಮತ್ತು ಎರೆಡು ಕಾಲಿಗೆ ಗುದ್ದಿದ ನೋವುಂಟಾಗಿರುತ್ತದೆ ಗಾಯಗೊಂಡವರನ್ನು ಚಿಕಿತ್ಸೆ ಬಗ್ಗೆ ಮಂಗಳೂರು ಜ್ಯೋತಿಯಲ್ಲಿರುವ KMC ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುತ್ತಾರೆ ಎಂಬಿತ್ಯಾದಿ

 

Moodabidre PS

ಈ ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿದಾರರಾದ ಶ್ರೀಮತಿ ಶಾಲಿನಿರವರ ಮಗ ಪ್ರತೀಶ್(17) ಎಂಬಾತನು ಪಂಚರತ್ನ ಹೊಟೇಲ್ ನಲ್ಲಿ ರೂಂ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರು ತಮ್ಮ ಮಗನೊಂದಿಗೆ ದಿನಾಂಕ 18.03.2024 ರಂದು ತನ್ನ ತವರು ಮನೆಯಾದ ಕಾರ್ಕಳ ತಾಲೂಕು ಶಿರ್ಲಾಲು ಗ್ರಾಮಕ್ಕೆ ದೈವದ ಕೆಲಸದ ನಿಮಿತ್ತ ತೆರಳಿದ್ದು ನಂತರ ಪ್ರತೀಶ್ ನು ದಿನಾಂಕ 20.03.2024 ರಂದು ವಾಪಾಸ್ಸು ಮನೆಗೆ ಬಂದಿರುತ್ತಾನೆ. ನಂತರ ದಿನಾಂಕ 22.03.2024 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿದಾರರಿಗೆ ಫೋನ್ ಕರೆ ಮಾಡಿ ಮಾತನಾಡಿದ್ದು, ನಂತರ ಪಿರ್ಯಾದಿದಾರರು ಅದೇ ದಿನ ರಾತ್ರಿ 07.00 ಗಂಟೆಗೆ ಮನೆಗೆ ಬಂದು ನೋಡಿದಾಗ ಪ್ರತೀಶ್‌ನು ಮನೆಯಲ್ಲಿ ಇಲ್ಲದೇ ಇದ್ದು, ಪಿರ್ಯಾದಿದಾರರು ಕರೆ ಮಾಡಿದಾಗ ಮೊಬೈಲ್ ಸ್ವೀಚ್ ಆಫ್ ಆಗಿರುತ್ತದೆ. ಈ ಬಗ್ಗೆ ಪ್ರತೀಶ್ ನು ಕೆಲಸ ಮಾಡುತ್ತಿದ್ದ ಪಂಚರತ್ನ ಹೊಟೇಲ್‌ನಲ್ಲಿ, ನೆರೆಕರೆಯವರಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ಹಾಗೂ ಪಿರ್ಯಾದಿದಾರರು ತಾವು ಈ ಹಿಂದೆ ಇದ್ದ ಮುಂಬೈನ ನ್ಯೂ ಪನ್ವೇಲ್‌ನ ಸಂಬಂಧಿಕರಲ್ಲಿ ವಿಚಾರಿಸಿದರೂ ಈ ತನಕ ಪತ್ತೆಯಾಗದಿರುವ ಕಾರಣ ಈ ದಿನ ಠಾಣೆಗೆ ಬಂದು ತಡವಾಗಿ ದೂರು ನೀಡಿರುವುದಾಗಿದೆ ಎಂಬಿತ್ಯಾದಿ

ಕಾಣೆಯಾದವರ ಚಹರೆ:-

ಹೆಸರು: ಪ್ರತೀಶ್ (17 ವರ್ಷ)

ಎತ್ತರ:5.7

ಶರೀರ: ದಪ್ಪ ಶರೀರ

ಮೈಬಣ್ಣ: ಬಿಳಿ ಮೈಬಣ್ಣ

ಧರಿಸಿದ್ದ ಬಟ್ಟೆ: ಬಿಳಿ ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ

ಭಾಷೆ: ಕನ್ನಡ, ತುಳು, ಹಿಂದಿ, ಮರಾಠಿ, ಇಂಗ್ಲಿಷ್

ವಿದ್ಯಾಭ್ಯಾಸ: ಪಿಯುಸಿ

 

Kankanady Town PS

ಪಿರ್ಯಾದಿ Santhappa Uಇವರು  ಬಾಬುಗುಡ್ಡೆ 3ನೇ ಅಡ್ಡ ರಸ್ತೆ, ಮಂಗಳೂರು ಎಂಬಲ್ಲಿ ವಾಸಮಾಡಿಕೊಂಡು Ape Xtra LDXPU Golden Yellow KA-19-AD-3058  ಮೂರು ಚಕ್ರದ ವಾಹನದ ಮಾಲಿಕರಾಗಿದ್ದು. ಪಿರ್ಯಾದುದಾರರ KA-19-AD-3058 ನೇ ಮೂರು ಚಕ್ರದ ವಾಹನದ ಡ್ರೈವರ್ ಸಿರಾಜ್ ಎಂಬವರು ಹಲವಾರು ವರ್ಷಗಳಿಂದ ಕಟ್ಟಡ ಕಾರ್ಮಿಕ ಮತ್ತು ಚಾಲಕನಾಗಿ ಪಿರ್ಯಾದುದಾರನೊಂದಿಗೆ ಕೆಲಸ ಮಾಡಿಕೊಂಡಿರುತ್ತಾನೆ. ದಿನಾಂಕ:26-03-2024 ರಂದು ಸಂಜೆ 5-00 ಗಂಟೆಗೆ ಎಂದಿನಂತೆ ಕೆಲಸ ಮುಗಿಸಿ, ಪಡೀಲ್ ಕರ್ಮಾರ್ ಬಳಿಯಲ್ಲಿರುವ “FORMS INDIA CORPORATION” Plan Groceris Padil, ಮಂಗಳೂರು ಎಂಬ ಸೀಲಿಂಗ್ ಚಾನೆಲ್ ತಯಾರಿಸುವ ಘಟಕದೆದುರು ಪಾರ್ಕ್ ಮಾಡಿ ದಿನಾಂಕ:27-03-2024 ರಂದು ಬೆಳಿಗ್ಗೆ ವಾಹನ ಪಾರ್ಕ್ ಮಾಡಿದ ಜಾಗಕ್ಕೆ ಬಂದಾಗ ಸದ್ರಿ ವಾಹನವು ಕಳ್ಳತನವಾಗಿರುವುದರ ಬಗ್ಗೆ ಸಿರಾಜ್ ರವರು ಪಿರ್ಯಾದುದಾರರ ಗಮನಕ್ಕೆ ತಂದಿರುತ್ತಾರೆ. ಡ್ರೈವರ್ ಸಿರಾಜ್ ಹಾಗೂ ಪಿರ್ಯಾದುದಾರರು ಸುಮಾರು 5-6 ಕಿ.ಮೀ. ವ್ಯಾಪ್ತಿಯಲ್ಲಿ ವಾಹನ ಹುಡುಕಾಡಿದರೂ ಎಲ್ಲಿಯೂ ಸಿಕ್ಕಿರುವುದಿಲ್ಲ. ವಾಹನದ ಚಾಸೀಸ್ ನಂಬ್ರ MBX0006EBYM074977, ಇಂಜಿನ್ ನಂಬ್ರ SOM9139412 , ಬಣ್ಣ: ಹಳದಿ ಮತ್ತು ಕಪ್ಪು ಬಣ್ಣದಾಗಿರುತ್ತದೆ. ಇದರ ವಿಮಾ ಮೌಲ್ಯ1,88, 160/- ರೂ ಆಗಿರುವುದಾಗಿ ಎಂಬಿತ್ಯಾದಿ

ಇತ್ತೀಚಿನ ನವೀಕರಣ​ : 30-03-2024 08:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080