ಅಭಿಪ್ರಾಯ / ಸಲಹೆಗಳು

 

Crime Reports: CEN Crime PS Mangaluru City

ಪಿರ್ಯಾದಿ  ಹೆಸರಿನ ಪೇಸ್ ಬುಕ್ ಖಾತೆಯನ್ನು ಹೊಂದಿದ್ದು ದಿನಾಂಕ:26/04/2023 ರಂದು ಅದನ್ನು ವೀಕ್ಷಿಸುತ್ತಿರುವ  ಸಂಧರ್ಭ Iphone 11 128 gb  ಮೊಬೈಲ್ ಮಾರಾಟಕ್ಕಿರುವ ಜಾಹೀರಾತು ಬಂದಿದ್ದು ಅದನ್ನು  ಕೊಂಡುಕೊಳ್ಳುವ  ಬಗ್ಗೆ ಪಿರ್ಯಾದಿದಾರರು ಅದರಲ್ಲಿದ್ದ  ಮೊಬೈಲ್ ಸಂಖ್ಯೆ.7548931374 ನೇದ್ದಕ್ಕೆ ಕರೆಮಾಡಿ  ವಿಚಾರಿಸಲಾಗಿ ಕರೆ ಸ್ವೀಕರಿಸಿದ ವ್ಯಕ್ತಿಯು ಸದ್ರಿ ಮೊಬೈಲ್ ನ್ನು  ರೂ 13,500/- ಗೆ   ಮಾರಾಟ ಮಾಡುವುದಾಗಿಯು  ಹಾಗೂ  ಕೆಲವೊಂದು  ಆಫರ್ ನೀಡುವುದಾಗಿ ತಿಳಿಸಿ  ರೂ.13,500/-ಹಣವನ್ನು ತಾನು ನೀಡುವ    ಗೂಗಲ್ ಪೇ ನಂ. 8486270301 ನೇದ್ದಕ್ಕೆ  ಹಣ ಹಾಕುವಂತೆ ತಿಳಿಸಿದ್ದು ಅದನ್ನು ನಂಬಿದ ಪಿರ್ಯಾದಿದಾರರು ಅವನು ನೀಡಿದ ಗೂಗಲ್ ಪೇ ನಂಬ್ರಕ್ಕೆ  ತಮ್ಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಬ್ಯಾಂಕ್  ಖಾತೆ ನಂಬ್ರ. ನೇದ್ದರಿಂದ  ರೂ.5,150 ಹಣವನ್ನು  ಗೂಗಲ್  ಪೇ ಮುಖೇನ ವರ್ಗಾವಣೆ ಮಾಡಿದ್ದು  ನಂತರ  ಮೊಬೈಲ್ ನಂ.9034104229 ನೇದ್ದರಿಂದ ಸದ್ರಿ ವ್ಯಕ್ತಿಯು  ಕರೆಮಾಡಿ  ನೀವು ವರ್ಗಾವಣೆ ಮಾಡಿದ ಹಣವು ತನ್ನ ಖಾತೆಗೆ ಬಂದಿರುವುದಿಲ್ಲವೆಂದು  ಪುನಃ ಹಣ ಹಾಕುವಂತೆ ತಿಳಿಸಿದ್ದು  ಅದರಂತೆ  ಪಿರ್ಯಾದಿದಾರರು ಹಂತ ಹಂತವಾಗಿ  ಒಟ್ಟು 44,800/- ಹಣವನ್ನು ಸದ್ರಿ ಗೂಗಲ್ ಪೇ ನಂಬ್ರಕ್ಕೆ  ವರ್ಗಾಯಿಸಿದ್ದು ತದನಂತರ ಅವ್ಯಕ್ತಿಯು ಕರೆ ಮಾಡಿ  ಸದ್ರಿ ಮೊಬೈಲ್ ನ್ನು  ಕಳುಹಿಸುವುದಾಗಿಯೂ ಅದರ ಡೆಲಿವರಿ ಚಾರ್ಜಸ್ಸ್ನ ಹಣವನ್ನು  ಪುನಃ  ಹಾಕುವಂತೆ ತಿಳಿಸಿರುತ್ತೇನೆ, ಇದರಿಂದ  ಪಿರ್ಯಾದಿದಾರಿಗೆ  ಇದು  ವಂಚನೆಯ ಜಾಲವೆಂದು ತಿಳಿಬಂದಿರುತ್ತದೆ. ಈ ರೀತಿ ಪಿರ್ಯಾದಿದಾರರಿಂದ   ಹಣ ಪಡೆದು   ಈವರೆಗೂ     ಮೊಬೈಲ್ ನ್ನು ನೀಡದೆ ಹಣವನ್ನು ವಾಪಸ್ಸು ನೀಡದೆ ಮೋಸ ಮಾಡಿದ ಅಪರಿಚಿತ ವ್ಯಕ್ತಿಗಳ  ವಿರುದ್ದ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ಲಿಖಿತ ಪಿರ್ಯಾದಿ ಎಂಬಿತ್ಯಾದಿ

Traffic North Police Station

ಪಿರ್ಯಾದಿ Mohammed Arif  ತಂದೆ ಯಾಕುಬ್ (56) ರವರು ನಿನ್ನೆ ದಿನ ದಿನಾಂಕ 26-04-2023 ರಂದು KA-19-HB-9910 ನಂಬ್ರದ ಸ್ಕೂಟರನ್ನು ಸವಾರಿ ಮಾಡಿಕೊಂಡು ಮೂಡುಶೆಡ್ಡೆ ಕಡೆಯಿಂದ ಎದುರುಪದವು ತನ್ನ ಮನೆ ಕಡೆಗೆ ರಸ್ತೆಯ ತೀರಾ ಎಡಬದಿಯಲ್ಲಿ ಬರುತ್ತಾ ಮಾರಪ್ಪ ಕಾಂಪೌಂಡ್ ಬಳಿ ತಲುಪಿದಾಗ ಸಮಯ ರಾತ್ರಿ ಸುಮಾರು 7:50 ಗಂಟೆಗೆ  ಎದುರುಗಡೆಯಿಂದ ಅಂದರೆ ಎದುರುಪದವಿನಿಂದ ಮೂಡುಶೆಡ್ಡೆ ಕಡೆಗೆ KA-19-HD-7061 ನಂಬ್ರದ ಸ್ಕೂಟರನ್ನು ಅದರ ಸವಾರ ಮೋಹನ ಎಂಬಾತನು ನಿರ್ಲಕ್ಷ್ಯತನದಿಂದ ವೇಗವಾಗಿ ಚಲಾಯಿಸಿಕೊಂಡು ಬಂದು ಮುಖಾಮುಖಿ ಡಿಕ್ಕಿ ಪಡಿಸಿದ ಪರಿಣಾಮ ಯಾಕುಬ್ (56) ರವರು ಸ್ಕೂಟರ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಯಾಕುಬ್ ರವರ ತಲೆಯ ಬಲಭಾಗದಲ್ಲಿ ಗಂಭೀರ ಸ್ವರೂಪದ ರಕ್ತಗಾಯ,ಎಡತುಟಿಯ ಮೇಲ್ಭಾಗದಲ್ಲಿ ರಕ್ತ ಗಾಯ, ಬಲಗೈಯ ಅಂಗೈಯಲ್ಲಿ ತರಚಿದ ಗಾಯ,ಎಡಗೈಯ ಮುಂಗೈಯಲ್ಲಿ ತರಚಿದ ಗಾಯ, ಬಲಕಾಲು ಮೊಣಗಂಟಿಗೆ ತರಚಿದ ಗಾಯ, ಬಲಕಾಲಿನ ಮಣಿಗಂಟಿನ ಬಳಿ ತರಚಿದ ಗಾಯ,ಎಡಕಾಲಿನ ಮೊಣಗಂಟಿನ ಕೆಳಭಾಗದಲ್ಲಿ ತರಚಿದ ಗಾಯ ಮತ್ತು ಎಡಕಿವಿಯ ಬಳಿ ತರಚಿದ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ A.J ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Moodabidre PS

ಪಿರ್ಯಾದಿ ಮನೋಹರ್ ರವರು ಈ ದಿನ ದಿನಾಂಕ 27-04-2023 ರಂದು ಬೆಳಿಗ್ಗೆ ತನ್ನ ಬಾಬ್ತು ಕೆಎ-19-ಇ.ಎಸ್-9036 ನಂಬ್ರದ ಮೋಟಾರ್ ಸೈಕಲ್ ನಲ್ಲಿ ತನ್ನ ಮನೆಯಿಂದ ಮಂಗಳೂರಿಗೆ ಹೊರಟಿದ್ದು, ಸಮಯ ಸುಮಾರು 07.40 ಗಂಟೆಗೆ ಕಲ್ಲಬೆಟ್ಟು ಗ್ರಾಮದ ಬಂಗೆಲ ಪದವು ಎಂಬ ಕ್ರಾಸ್ ಬಳಿ ತಲುಪುತ್ತಿದ್ದಂತೆ ಅಡ್ಡರಸ್ತೆಯಿಂದ ಕೆ.ಎ-19-ಇ.ಆರ್-3948 ನೇ ಸ್ಕೂಟರ್ ಸವಾರರಾದ ಲಕ್ಷ್ಮಿ ಎಂಬುವರು ಯಾವುದೇ ಸೂಚನೆ ನೀಡದೆ ಮುಖ್ಯ ರಸ್ತೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಡಿಕ್ಕಿಪಡಿಸಿ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಅವರ ಬಲಗೈ ತೋಳಿನ ಮೂಳೆ ಮುರಿತವಾಗಿ, ಬಲಗಾಲಿನ ಪಾದದ ಬಳಿ ತರಚಿದ ಗಾಯಗಳಾಗಿದ್ದು ಅಲ್ಲಿ ಸೇರಿದ್ದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ಮೂಡಬಿದ್ರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ ಎಂಬಿತ್ಯಾದಿ        

Crime Reports: CEN Crime PS Mangaluru City                                           

ಪಿರ್ಯಾದಿರವರು ಫೆಡರಲ್  ಬ್ಯಾಂಕ್ ಖಾತೆ ದನ್ನು ಹೊಂದಿರುತ್ತಾರೆ. ದಿನಾಂಕ 30-07-2021 ರಂದು ಸಂಜೆ 4.00 ಗಂಟೆ ಸುಮಾರಿಗೆ ಪಿರ್ಯಾದಿದಾರರಿಗೆ  8861711527ನೇ ಮೊಬೈಲ್ ನಂಬ್ರದಿಂದ ಕರೆಯೊಂದು ಬಂದಿದ್ದು ಕರೆಯಲ್ಲಿ ಮಾತನಾಡಿದ ವ್ಯಕ್ತಿಯು ತಾನು POST GRADUATE ACADEMY OF MEDICAL SCIENCE ನಿಂದ ಮಾತನಾಡುತ್ತಿದ್ದು ಪಿರ್ಯಾದಿದಾರರಿಗೆ  fellow of royal college of surgeons (membership) ನಲ್ಲಿ ಮೆಂಬರ್ ಶಿಪ್ ಮಾಡಿಕೊಡುವುದಾಗಿ ನಂಬಿಸಿ ದಿನಾಂಕ 05-08-2023 ರಂದು  ಬೆಳಿಗ್ಗೆ 7.40 ಗಂಟೆಗೆ ಪಿರ್ಯಾದಿದಾರರಿಗೆ ಕರೆ ಮಾಡಿ ಪಿರ್ಯಾದಿದಾರರಿಂದ  1st installment ಬಗ್ಗೆ  150000/- ವನ್ನು ಪಾವತಿಸಲು ತಿಳಿಸಿದ್ದು ಅದರಂತೆ ಪಿರ್ಯಾದಿದಾರರು ರೂ.150000/- ನ್ನು ಬ್ಯಾಂಕ್ ಟ್ರಾನ್ಸ್ ಫರ್ ಮೂಲಕ ವರ್ಗಾಯಿಸಿರುತ್ತಾರೆ. ನಂತರದ ದಿನಗಳಲ್ಲಿ ಸದ್ರಿ ವ್ಯಕ್ತಿಯು ಮೆಂಬರ್ ಶಿಪ್ ಮಾಡಿಕೊಡುವುದಾಗಿ ಪಿರ್ಯಾದಿದಾರರನ್ನು ನಂಬಿಸಿ 29-11-2021ರ ವರೆಗೆ ಪಿರ್ಯಾದಿದಾರರ ಫೆಡರಲ್  ಬ್ಯಾಂಕ್ ಖಾತೆ ದರಿಂದ ಹಂತ ಹಂತವಾಗಿ ಒಟ್ಟು ರೂ. 5,00,000/- ತನ್ನ ಖಾತೆಗೆ ಅನಧಿಕೃತವಾಗಿ ವರ್ಗಾಯಿಸಿರುತ್ತಾನೆ. ಆದುದರಿಂದ ತನಗೆ  POST GRADUATE ACADEMY OF MEDICAL SCIENCE ನಲ್ಲಿ ಮೆಂಬರ್ ಶಿಪ್ ಮಾಡಿಕೊಡುವುದಾಗಿ ಆಮಿಷವೊಡ್ಡಿ   ತನ್ನ ಬ್ಯಾಂಕ್ ಖಾತೆಗಳಿಂದ ಅನಧಿಕೃತವಾಗಿ ಹಣವನ್ನು ವರ್ಗಾಯಿಸಕೊಂಡ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವರೇ ಕೋರಿಕೆ.

Traffic North Police Station                                             

ಪಿರ್ಯಾದಿ Hariprasad ದಿನಾಂಕ 26-04-2023 ರಂದು ಪದವಿನಂಗಡಿ ಪೆರ್ಲಗುರಿ ಕ್ರಾಸ್ ಬಳಿ ಇರುವ  ತನ್ನ ಪ್ರಸಾದ್ ಸೆಲೂನ್ ನ ಹೊರಗೆ ನಿಂತಿರುವಾಗ ಸಮಯ ಸಂಜೆ ಸುಮಾರು 5:00 ಗಂಟೆಗೆ ಕೆ.ಪಿ.ಟಿ-ಪದವಿನಂಗಡಿ ಮುಖ್ಯ ರಸ್ತೆ ಕಡೆಯಿಂದ ಪೆರ್ಲಗುರಿ ಕಡೆಗೆ KA-21-N-8305 ನಂಬ್ರದ ಕಾರನ್ನು ಅದರ ಚಾಲಕನಾದ ಸುಮಂತ್ ಎಂಬಾತನು ವೇಗವಾಗಿ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಡಾಲ್ಫ್ ರೋಡ್ರಿಗಸ್ (69 ವರ್ಷ) ಎಂಬವರಿಗೆ ಡಿಕ್ಕಿ ಪಡಿಸಿದ ಪರಿಣಾಮ, ಅವರು ಡಾಮಾರು ರಸ್ತೆಗೆ ಬಿದ್ದಿದ್ದು, ಈ ಅಪಘಾತದಿಂದ ಅಡಾಲ್ಫ್ ರೋಡ್ರಿಗಸ್ ರವರ ಕಾಲಿನ ಮೇಲೆ ಕಾರಿನ ಎಡಬದಿಯ ಚಕ್ರವು ಹರಿದಿದ್ದು,ಅವರ ಎಡಕಾಲಿನ ತೊಡೆಯ ಮೂಳೆ ಮುರಿತವಾದಂತೆ ಕಂಡು ಬಂದಿದ್ದು ಅಲ್ಲದೇ ಬಲಕಾಲಿನ ಮೊಣಗಂಟಿನಲ್ಲಿ ರಕ್ತಗಾಯ,ಬಲಕಿಬ್ಬೊಟ್ಟೆಯಲ್ಲಿ ರಕ್ತಗಾಯ,ಬಲಮೊಣಕೈಯಲ್ಲಿ ರಕ್ತಗಾಯ ಹಾಗೂ ಬಲಭುಜದಲ್ಲಿ ತರಚಿದ ಗಾಯವಾಗಿದ್ದು, ನಂತರ ಗಾಯಾಳು ಅಡಾಲ್ಫ್ ರೋಡ್ರಿಗಸ್ ರವರನ್ನು ಅಪಘಾತ ಪಡಿಸಿದ ಕಾರಿನಲ್ಲಿಯೇ AJ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದವರು ಚಿಕಿತ್ಸೆ ಫಲಕಾರಿಯಾಗದೇ ಸಂಜೆ ಸಮಯ ಸುಮಾರು 6:40 ಗಂಟೆಗೆ ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ತಿಳಿಸಿರುತ್ತಾರೆ ಎಂಬಿತ್ಯಾದಿ.

Mangalore North PS                                      

ಪಿರ್ಯಾದಿ PAVAN KUMAR  ತಂದೆ ತಾಯಿಯೊಂದಿಗೆ ವಾಸವಿದ್ದು,ಮಂಗಳೂರಿನ ಪಳ್ನೀರ್ ನಲ್ಲಿರುವ  ಕೊಟಕ್ ಮಹೀಂದ್ರಾ ಲೈಪ್ ಇನ್ಸುರೆನ್ಸ್ ಕಂಪನಿಯಲ್ಲಿ ಸುಮಾರು 3 ವರ್ಷಗಳಿಂದ ಕೆಲಸ  ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು  ಕೆಲಸಕ್ಕೆ ಬರಲು ಅವರ ತಂದೆಯ ಹೆಸರಿನಲ್ಲಿರುವ ಹೀರೋ ಹೋಂಡಾ ಮೋಟಾರ್ ಸೈಕಲ್ ನ್ನು ಉಪಯೋಗಿಸುತ್ತಿದ್ದು, ದಿನಾಂಕ  12-04-2023 ರಂದು ಪಿರ್ಯಾದಿದಾರರು ಎಂದಿನಂತೆ ಕೆಲಸದ ನಿಮಿತ್ತ ಬಂದವರು ಮಂಗಳೂರಿನ ಪಳ್ನೀರ್ ನಲ್ಲಿರುವ ಕೊಟಕ್ ಮಹೀಂದ್ರಾ ಲೈಪ್ ಇನ್ಸುರೆನ್ಸ್ ಕಂಪನಿಯ ಬಳಿ ಪಾರ್ಕಿಂಗ್ ಜಾಗವಿಲ್ಲದೇ ಇದ್ದುದರಿಂದ  ಪಿರ್ಯಾದಿದಾರರು ಪಳ್ನೀರ್ ರಸ್ತೆಯಲ್ಲಿರುವ  ಯಶ್ ರಾಜ್  ಬಾರ್ ನ ಎದುರಗಡೆ   ಮೋಟಾರ್ ಸೈಕಲ್ ನಂಬ್ರ KA -21Q- 8502 ನೊಂದಣಿ ನಂಬ್ರದ ಹೀರೋಹೋಂಡಾ ಕಂಪನಿಯ ಪ್ಯಾಶನ್ ಪ್ರೊ ಮೋಟಾರ್ ಸೈಕಲನ್ನುಬೆಳಿಗ್ಗೆ 09.15 ಗಂಟೆಗೆ  ಪಾರ್ಕ್ ಮಾಡಿ ಕೆಲಸಕ್ಕೆ ಹೋಗಿದ್ದು ,ರಾತ್ರಿ ಸುಮಾರು 8.00 ಗಂಟೆಗೆ ಮೋಟಾರ್ ಸೈಕಲ್ ನ್ನು ಪಾರ್ಕ್ ಮಾಡಿದ ಸ್ಥಳಕ್ಕೆ ಬಂದಾಗ  ಸದ್ರಿ ಸ್ಥಳದಲ್ಲಿ ಮೋಟಾರ್ ಸೈಕಲ್  ಅಲ್ಲಿರದೇ ಇದ್ದು ನಂತರ ಎಲ್ಲಾ ಕಡೆ ಹುಡುಕಾಡಿದರೂ ಸಿಗದೇ ಇದ್ದು, ಪಿರ್ಯಾದಿದಾರರು ಇಷ್ಟರವರೆಗೆ ಹುಡುಕಾಡಿದರೂ ಮೋಟಾರ್  ಸೈಕಲ್  ಸಿಗದೇ ಇದ್ದುದರಿಂದ  ಪಿರ್ಯಾದಿದಾರರ ತಂದೆಯವರ  ಬಾಬ್ತು KA -21Q- 8502 ನೊಂದಣಿ ನಂಬ್ರದ ಹೀರೋಹೋಂಡಾ ಕಂಪನಿಯ ಪ್ಯಾಶನ್ ಪ್ರೊ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ದೃಡಪಟ್ಟಿರುವುದರಿಂದ ಪಿರ್ಯಾದಿದಾರರು ಈ ದೂರನ್ನು ನೀಡುತ್ತಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಳವಾದ   ಮೋಟಾರ್ ಸೈಕಲ್ ನ್ನು  ಪತ್ತೆ ಮಾಡಿಕೊಡಬೇಕೆಂಬಿತ್ಯಾದಿ ಪಿರ್ಯಾದಿ ಸಾರಾಂಶವಾಗಿದೆ.

Moodabidre PS

ಪಿರ್ಯಾದಿ  ಹೆಚ್.ಸಿ  ಮೊಹಮ್ಮದ್ ಇಕ್ಬಾಲ್ ರವರು ಪುಚ್ಚಮೊಗರು ಗ್ರಾಮದ ಬೀಟ್ ಪೊಲೀಸ್ ಅಧಿಕಾರಿಯಾಗಿದ್ದು ಪೊಲೀಸ್ ನಿರೀಕ್ಷಕರ ಆದೇಶದಂತೆ ಬೀಟ್ ಕರ್ತವ್ಯಕ್ಕೆ ನೇಮಿಸಿದಂತೆ ದಿನಾಂಕ: 26-04-2023 ರಂದು ಬೆಳಿಗ್ಗೆ 06.00 ಗಂಟೆಗೆ ಬೀಟ್ ಕರ್ತವ್ಯದ ಬಗ್ಗೆ ಠಾಣೆಯಿಂದ ಪುಚ್ಚಮೊಗರು ಗ್ರಾಮಕ್ಕೆ ತೆರಳಿದ್ದು 06.20 ಗಂಟೆಗೆ ಪುಚ್ಚಮೊಗರು ಗ್ರಾಮವನ್ನು ತಲುಪಿ ಅಲ್ಲಿ ಸಂಚರಿಸುತ್ತಾ ಪುಚ್ಚಮೊಗರು ಗ್ರಾಮದಲ್ಲಿರುವ ಡ್ಯಾಂ ಬಳಿ 06.30 ಗಂಟೆಗೆ ತೆರಳಿದಾಗ ಆ ಪ್ರದೇಶದಲ್ಲಿ ಯಾರೋ 3-4 ಜನ ಅಲ್ಲಿದ್ದ ಮರಳನ್ನು ಯಾವುದೇ ಅನುಮತಿಯಿಲ್ಲದೇ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಕೆ.ಎ-21-ಎ-9262 ನೇ ಪಿಕಪ್ ವಾಹನಕ್ಕೆ ತುಂಬುತ್ತಿದ್ದು ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರನ್ನು ನೋಡಿ ಪಿಕಪ್ ವಾಹನದ ಚಾಲಕನು ಪಿಕಪ್ ವಾಹನವನ್ನು ಅಲ್ಲಿಯೇ ಬಿಟ್ಟು ಹಾಗೂ ಮರಳು ತುಂಬುತ್ತಿದ್ದವರು ಸಲಕರಣೆಗಳ ಸಮೇತ ಅಲ್ಲಿಂದ ಓಡಿ ಹೋಗಿರುತ್ತಾರೆ ಎಂಬಿತ್ಯಾದಿ.

 

 

 

ಇತ್ತೀಚಿನ ನವೀಕರಣ​ : 21-08-2023 12:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080