ಅಭಿಪ್ರಾಯ / ಸಲಹೆಗಳು

Crime Reported in Mangalore North PS

ಪಿರ್ಯಾದುದಾರರಾದ ಝೈನುಲ್ ಅಭಿದಿನ್ ಎಂಬವರು  ಮಂಗಳೂರು ನಗರದ ಕೆ ಎಸ್ ರಾವ್ ರೋಡ್ ನಲ್ಲಿರುವ ಸಿಂಗಾಪೂರ ಸಿಟಿ ಎಂಬ ಕಟ್ಟಡದಲ್ಲಿ ಶುಕ್ರಿಯಾ ಟ್ರಾವೆಲ್ಸ್ ಎಂಬ ಎಜೆನ್ಸಿಯನ್ನು ನಡೆಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪಿರ್ಯಾದಿದಾರರಿಗೆ ದಿಲ್ಲಿಯ ಕರಿಯರ್ ಎಸ್ಸಿಯಾ ಟ್ರಾವೆಲ್ ಎಜೆನ್ಸಿಯ  ಮಾಲಕರಾದ   ಅಬು ಹಿಲಾಲ್ ಅಜ್ಮಿ ರವರ ಪರಿಚಯವಾಗಿತ್ತು. ನಂತರ ಅವರು ಕಸ್ಟ್ ಮರ್ ಗಳಿಗಾಗಿ ವಿಮಾನ ಪ್ರಯಾಣದ ಟಿಕೇಟ್ ನ್ನು ಬುಕ್ ಮಾಡಿಸುತ್ತಾ ಇದ್ದರು. ಈ ರೀತಿ ದಿನಾಂಕ:19-11-2022 ಮತ್ತು 20-11-2022 ರಂದು ಸದ್ರಿ ಟ್ರಾವೆಲ್ಸ್ ಎಜೆನ್ಸಿ ಎಷ್ಯಾ ಇದರ ಮೂಲಕ ಅಬು ಹಿಲಾಲ್ ಅಜ್ಮಿಯು ಪಿರ್ಯಾದಿದಾರರಿಂದ  ಸುಮಾರು 1,31,600/- ರೂಪಾಯಿ ಹಣವನ್ನು ಟಿಕೇಟ್ ಆಗಿ ಬುಕ್ ಮಾಡಿಸಲು ಹೇಳಿ ಅವರ ಮಾತನ್ನು ನಂಬಿ ಪಿರ್ಯಾದಿದಾರರು ಸದ್ರಿ ಮೊತ್ತದ ಟಿಕೇಟ್ ನ್ನು ಬುಕ್ ಮಾಡಿ ಅವರಿಗೆ ಕಳುಹಿಸಿರುತ್ತಾರೆ. ನಂತರ ಅಬು  ಹಿಲಾಲ್ ಅಜ್ಮಿ ರವರು ಟಿಕೇಟ್ ನ ಮೊತ್ತ 1,31,600/- ರೂ ಗಳನ್ನು 1 ವಾರದ ಬಳಿಕ ಕೊಡುತ್ತೇನೆಂದು ಹೇಳಿದ್ದರು. ಅಬು ಹಿಲಾಲ್ ಅಜ್ಮಿ ರವರು  ಹಣ ನೀಡದ ಕಾರಣ ಪಿರ್ಯಾದಿದಾರರು  ಪದೇ ಪದೇ ಕರೆ ಮಾಡಿ  ಟಿಕೇಟ್ ಹಣ ನೀಡಬೇಕೆಂದು ಕೇಳಿದಾಗ ಅಬು ಹಿಲಾಲ್ ಅಜ್ಮಿ ರವರು ಪಿರ್ಯಾದುದಾರರಿಗೆ ನನ್ನ ಖಾತೆಯ ಹಣ ಕಳುಹಿಸಿದ್ದೇನೆ ಎಂದು ಹೇಳಿ ಕೊಟಕ್ ಮಹೇಂದ್ರ ಬ್ಯಾಂಕಿನ ಹಣಕಾಸು ವ್ಯವಹಾರದ ಮೊಬೈಲ್ ಸ್ಕ್ರೀನ್ ಶಾಟ್ ನ್ನು ಕಳುಹಿಸಿರುತ್ತಾರೆ. ಪಿರ್ಯಾದಿದಾರರು ನಂತರ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಯಾವುದೇ ಹಣ ಜಮೆಯಾಗಿರುವುದಿಲ್ಲ. ಸದ್ರಿ ಕರಿಯರ್ ಎಸ್ಸಿಯಾ ಟ್ರಾವೆಲ್ ಎಜೆನ್ಸಿಯ ಮಾಲಕರಾದ ಅಬು ಹಿಲಾಲ್ ಅಜ್ಮಿ ರವರು ಹಣಕಾಸು ಜಮಾವಣೆಯ ದಾಖಲೆಗಳನ್ನು ತೋರಿಸಿ ಸದ್ರಿ ದಾಖಲೆಗಳನ್ನು ನಂಬುವಂತೆ ಮಾಡಿ ಪಿರ್ಯಾದಿದಾರರಿಗೆ  ಮೋಸ ಮಾಡಿರುತ್ತಾರೆ ಎಂಬಿತ್ಯಾದಿ ದೂರಿನ ಸಾರಾಂಶ.

 

Mangalore East PS

ಪಿರ್ಯಾದಿ Jyothi Bai K ಮಗಳು ಕುಮಾರಿ ಬಿಂದುಶ್ರೀ ಎಮ್  ಪ್ರಾಯ ಸುಮಾರು 18 ವರ್ಷ 09 ತಿಂಗಳು ಎಂಬುವವರು ಮಂಗಳೂರು ನಗರದ ಬಿಜೈ ದೀನದಯಾಳು ಹಾಸ್ಟೆಲಿನಲ್ಲಿ ವಾಸವಿದ್ದು ಹೆಚ್.ಪಿ.ಆರ್ ಸಂಸ್ಥೆಯಲ್ಲಿ ಡಿ.ಎಂ.ಎಲ್.ಟಿ. ಪ್ರಥಮ ವರ್ಷದ ಕೋರ್ಸಿನಲ್ಲಿ ವ್ಯಾಸಂಗ ಮಾಡಿಕೊಂಡಿದ್ದವರು ದಿನಾಂಕ 21-05-2023 ರಂದು ಮಧ್ಯಾಹ್ನ 12:35 ಕ್ಕೆ ದಿನದಯಾಳು ಹಾಸ್ಟೆಲಿನಿಂದ ರಜೆ ಅರ್ಜಿಯನ್ನು ಬರೆದುಕೊಟ್ಟು ಸದ್ರಿಯವರ ಊರಾದ ಮುರುಂಡಿ ಬಿ ತಾಂಡ್ಯ ಕ್ಕೆ ಹೋಗುವುದಾಗಿ ಹೇಳಿ  ಹೋದವರು  ಮನೆಗೂ ಬಾರದೆ ಹಾಸ್ಟೆಲಿಗೂ ಮರಳಿ ಬಾರದೆ ಕಾಣೆಯಾಗಿದ್ದು ಈ ಬಗ್ಗೆ ಕಾಣೆಯಾದ ಮಹಿಳೆಯ ತಾಯಿಯಾದ ಜ್ಯೋತಿ ಬಾಯಿ ಕೆ ಎಂಬುವವರು ನೀಡಿದ ದೂರಿನಂತೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಕಾಣೆಯಾದವರ ಚಹರೆ

ಹೆಸರು; ಬಿಂದುಶ್ರೀ ಎಂ

ತಂದೆ;ಮಂಜ ನಾಯ್ಕ

ಎತ್ತರ;5.5 ಅಡಿ

ಆಕಾರ; ಕೋಲು ಮುಖ, ಕೆಂಪು ಮೈ ಬಣ್ಣ, ಸಾಧರಣ ಮೈಕಟ್ಟು.

ಭಾಷೆ; ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾರೆ

ಗುರುತು;ತುಟಿಯ ಎಡ ಭಾಗದಲ್ಲಿ ಕಪ್ಪು ಮಚ್ಚೆ ಇರುತ್ತದೆ

ಬಟ್ಟೆಗಳು; ಕಪ್ಪು ಬಣ್ಣದ ಪ್ಯಾಂಟು, ಕೆಂಪು ಬಣ್ಣದ ಚೂಡಿದಾರ್ ಟಾಪ್ ಧರಿಸಿರುತ್ತಾರೆ

Mangalore East Traffic PS

ದಿನಾಂಕ 26-05-2023 ರಂದು ಬೆಳಿಗ್ಗೆ ಸುಮಾರು 08-40 ಗಂಟೆಗೆ ಪಿರ್ಯಾದಿ ಆರ್ಯ ವಿನೋದ.ಟಿ ರವರು ತಮ್ಮ ಸಹಪಾಠಿ ಮತ್ತು ಗೆಳತಿ ಜಾಯಿಶಾ ಶೇರಿನ ಪಿ ಇವರೊಂದಿಗೆ  ನಂತೂರು ಕಡೆಯಿಂದ ಪಂಪವೆಲ್ ಪ್ಲೇಒವರ್ ಕಡೆಗೆ ಸಾಗುವ  ರಸ್ತೆಯಲ್ಲಿ ಪಂಪವೆಲ್ಲ್ ಕಡೆಗೆ ಸಾಗುವ ಸರ್ವಿಸ್ ರಸ್ತೆ ಆರಂಭವಾಗುವ ಜಾಗದಿಂದ ರಾಷ್ಟೀಯ ಹೆದ್ದಾರಿ -66 ರಸ್ತೆಯಿಂದ ಪಂಪವೆಲ್ ರಸ್ತೆ ಕಡೆಗೆ  KA-19-EU-7720 ನೊಂದಣಿ ನಂಬ್ರದ ಸ್ಕೂಟರ್ ಸವಾರ ಜೋಶನ್ ಎಂಬಾತನ  ಅನ್ ಮೇರಿ ಎಂಬಾಕೆಯನ್ನು ಹಿಂಬದಿ ಸವಾರಿನಿಯಾಗಿ ಕುಳ್ಳಿರಿಸಿ ಕೊಂಡು ನಿರ್ಲಕ್ಷತನದಿಂದ ಹಾಗೂ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿ ಕೊಂಡು ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರು ರಸ್ತೆಗೆ ಬಿದ್ದು ತಲೆಯ ಬಲಭಾಗಕ್ಕೆ  ಆಳರಕ್ತಗಾಯ,ಬಲಕೈ ಮತ್ತು ಬೆನ್ನಿನ ಭಾಗಕ್ಕೆ ತರೆಚು ಗಾಯ ಉಂಟಾಗಿದ್ದು, ಜೆಯಿಶಾ ಶರನಾರವರಿಗೆ ಎರಡು ಕೈನ ಮುಂಗೈಗೆ ತೆರೆಚು ಗಾಯವಾಗಿರುವ ಜೊತೆಗೆ  ಬಲಗಿವಿಗೆ ರಕ್ತಗಾಯವಾಗಿರುತ್ತದೆ. ಸ್ಕೂಟರ್ ಸವಾರರಿಬ್ಬರು ಸಹ ವಾಹನ ಸಮೇತ ರಸ್ತೆಗೆ ಬಿದ್ದಿದ್ದು ಸಾಮಾನ್ಯ ಗಾಯಗೊಂಡಿರುತ್ತಾರೆ. ಅಪಘಾತವನ್ನು ಕಂಡು ಸ್ಥಳದಲ್ಲಿನ ಸಾರ್ವಜನಿಕರು ಗಾಯಾಳುಗಳನ್ನು ಹತ್ತಿರದ ಇಂಡಿಯಾನ್ ಆಸ್ಪತ್ರೆಗೆ ಕರೆದುಕೊಂಡು ಹೊಗಿದ್ದು ಅಲ್ಲಿಯ ವೈದ್ಯರು ನಾಲ್ವರನ್ನು ಪರೀಕ್ಷಿಸಿ ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ ಎಂಬಿತ್ಯಾದಿ.

Ullal PS

ದಿನಾಂಕ.26-5-2023 ರಂದು ಫಿರ್ಯಾದಿ ಉಳ್ಳಾಲ ಬಸ್ತಿಪಡ್ಪು ಕಡೆಯಿಂದ ಉಳ್ಳಾಲ ಭಗವತಿ ದೇವಸ್ಥಾನದ ಬಳಿ ಇರುವ ಒಳ ರಸ್ತೆಯಿಂದ ನಡೆದುಕೊಂಡು ಬರುತ್ತಿದ್ದ ಸಮಯ ಉಳ್ಳಾಲ ಭಗವತಿ ದೇವಸ್ಥಾನದ ಬಳಿಯ ಕಬ್ಬಿಣದ ಕಪಾಟು ತಯಾರಿ ಮಾಡುವ ಅಂಗಡಿಯ ಬಳಿ ನಿಂತುಕೊಳ್ಳುತ್ತಿದ್ದ ನೋಡಿ ಪರಿಚಯ ವ್ಯಕ್ತಿಯು ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಹಿಂಬಾಲಿಸಿಕೊಂಡು ಬಂದವನು ಸಂಜೆ 7-30 ಗಂಟೆಯ ಸಮಯಕ್ಕೆ ಫಿರ್ಯಾದಿದಾರರು ಉಳ್ಳಾಲ ವಿದ್ಯಾರಣ್ಯ ನಗರದ ಡಾಕ್ಟರ್ ಡಿ.ಕೆ.ನಾಯಕ್ ರವರ ಮನೆಯ ಬಳಿಗೆ ತಲುಪುತ್ತಿದ್ದಂತೆ ಆರೋಪಿತನು ದ್ವಿಚಕ್ರ ವಾಹನದಲ್ಲಿ ಬಂದವನು ಫಿರ್ಯಾದಿದಾರರ ಬಳಿಗೆ ಬಂದು ಮೈಮೇಲೆ ಕೈಹಾಕಿ ಮಾನ ಹಾನಿ ಮಾಡಿದಾಗ ಫಿರ್ಯಾದಿದಾರರು ಜೋರಾಗಿ ಬೊಬ್ಬೆ ಹಾಕಿದಾಗ ಆರೋಪಿತನು ಫಿರ್ಯಾದಿದಾರರ ಹಿಂಬದಿಗೆ ಜೋರಾಗಿ ಒಂದು ಏಟು ಹೊಡೆದು ಆತನು ಬಂದಿರುವ ದ್ವಿಚಕ್ರ ವಾಹನದೊಂದಿಗೆ ಪರಾರಿಯಾಗಿರುತ್ತಾನೆ. ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣ ಸಾರಾಂಶ.

Ullal PS

ಫಿರ್ಯಾದಿ Johara  ದಿನಾಂಕ.26-5-2023 ರಂದು ಸಂಜೆ ತನ್ನ ಮನೆಯ ಕಸವನ್ನು ಎಲ್ಲರು ಬಿಸಾಡುವ ಗುಡ್ಡ ಜಾಗಕ್ಕೆ ಬಿಸಾಡಿ ವಾಪಾಸು ಮನೆಗೆ ಹೊರಟವರು ಮನೆಯ ಬಳಿಗೆ ತಲುಪಿದಂತೆ 16 -30 ಗಂಟೆಯ ಸಮಯಕ್ಕೆ  ಫಿರ್ಯಾದಿದಾರರ ನೆರೆಕೆರೆ ವಾಸಿ ಹೈದರ ಎಂಬಾತನು ಕಸ ಬಿಸಾಡಿದ ವಿಚಾರದಲ್ಲಿ ಫಿರ್ಯಾದಿದಾರರನ್ನು ಉದೇಶಿಸಿ ಅವಾಚ್ಯಶಬ್ದಗಳಿಂದ ಬೈದು ಎಕಾಎಕಿ ಕೈಯಿಂದ ಫಿರ್ಯಾದಿದಾರರ ಕೆನ್ನೆಗೆ ಮತ್ತು ಎಡ ಕಣ್ಣಿನ ಭಾಗಕ್ಕೆ ಹಲ್ಲೆ ನಡೆಸಿ ಫಿರ್ಯಾದಿದಾರರ ಮೈಮೆಲೆ ಕೈಹಾಕಿ ನೆಲಕ್ಕೆ ಬಿಳಿಸಿ ಫಿರ್ಯಾದಿದಾರರ ಹೊಟ್ಟೆಯ ಭಾಗಕ್ಕೆ ಕಾಲಿನಿಂದ ತುಳಿದಾಗ ಫಿರ್ಯಾದಿದಾರರು ಜೋರಾಗಿ ಭೊಬ್ಬೆ ಹಾಕಿದಾಗ ಮನೆಯಲ್ಲಿದ್ದ ಫಿರ್ಯಾದಿದಾರರ ಮಕ್ಕಳು ರಕ್ಷಣೆಗೆ ಬಂದಾಗ ಹೈದರನು ಕೈಯಲ್ಲಿ ಚೂರಿಯನ್ನು ಹಿಡಿದುಕೊಂದು ಬಂದವನು ನನ್ನ ವಿಚಾರಕ್ಕೆ ಬಂದರೆ ಈ ಚೂರಿಯಿಂದ ಚುಚ್ಚಿ ಕೊಲ್ಲುತ್ತೆನೆಂದು ಬೆದರಿಕೆ ಹಾಕಿರುತ್ತಾನೆ. ಫಿರ್ಯಾದಿದಾರರು ತನಗಾದ ನೋವಿನ ಬಗ್ಗೆ ಚಿಕಿತ್ಸೆ ಪಡೆದುಕೊಂಡು ಠಾಣೆಗೆ ಬಂದು ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣ ಸಾರಾಂಶ.

 

 

                                      

 

ಇತ್ತೀಚಿನ ನವೀಕರಣ​ : 21-08-2023 01:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಂಗಳೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080